Friday, March 21, 2014

Vachana 186: Udaka Nindalli Prathibimba Nishchayavayittu – Stillness


 VACHANA IN KANNADA

ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು,
ಜಲ ಸಂಚಾರದಿಂದ ಕದಲೆ ಮತ್ತೆ ಪ್ರತಿರೂಪಂಗೆ  ಎಡೆಯುಂಟೆ?
ಚಿತ್ತ ಸಂಚಾರಿಸುವಲ್ಲಿ ಕುರುಹಿನ ಗೊತ್ತಿಗೆ ಒಡೆತನವುಂಟೆ?
ಇಂತೀ ಉಭಯದ ಸಕೀಲ ನಿಂದು, ಕಳೆ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ.

TRANSLITERATION

udaka niMdalli pratibiMba niScayavaayittu,
aa jala saMcaaradiMda kadale matte
pratiroopaMge eDeyuMTe?
citta saMcaarisuvalli kuruhina gottige oDetanavuMTe?
iMtI ubhayada sakeela niMdu kale beLaguttade
sadaashivamUrtilimgadalli

CLICK HERE FOR A RECITATION

TRANSLATION (WORDS)

udaka (water) niMdalli (if still) pratibiMba (the reflection)  niScayavaayittu (stays put),
aa (that) jala (water) saMcaaradiMda (movement of) kadale (disturbed) matte (then)
pratiroopaMge (for the reflection) eDeyuMTe (will there be a place, a chance)?
Citta (mind) saMcaarisuvalli (moving, wavering) kuruhina gottige (for awareness of the icon) oDetanavuMTe (will there be a place, a chance)?
iMtI (these) ubhayada sakeela (both) niMdu (when stopped) kale beLaguttade (the awareness  shines)
sadaashivamUrtilimgadalli (in the icon of Sadashiva)

VACHANA IN ENGLISH

When the water is still, the reflection stays put.
If the water is disturbed due to its movement, will there be a chance for the reflection to stay put?
Will there be a chance for the wavering mind to gain the awareness of the icon?
Thus, when both of these are stationary, the awareness in the icon of Sadashiva shines!

COMMENTARY

This Vachana from Arivina Marithande impresses on the stillness of the mind required to gain the awareness of the Supreme Principle, the Self.  It uses a simple simile of the image (reflection) in water. As long as the water is still, the reflection stays stationery and appears to be there forever. One the water is disturbed, the reflection starts getting distorted and eventually disappears as the water flows. Along the same lines, the mind must be still for one to gain the awareness of the icon (God). A wavering, disturbed mind cannot see the Supreme.
We know that the prime characteristic of the mind is to wander. It is always a monkey on the steroid. How can we bind it to make it still? Can we really make it still? The solution seems to be to recognize that the mind is wavering and become just an observer of the moving thoughts and let them go, rather than putting them into action. When such maturity is gained, the mind is still and is ready to be aware of the God.

Let His reflection appear in our still Minds!

KANNADA COMMENTARY

ಅರ್ಥ:

ಉದಕ (ನೀರು) ನಿಂದಲ್ಲಿ (ನಿಶ್ಚಲವಾಗಿದ್ದಾಗಪ್ರತಿಬಿಂಬ ನಿಶ್ಚಯವಾಯಿತ್ತು( ಚೆನ್ನಾಗಿ ಕಾಣುತ್ತದೆ),
ಜಲ ಸಂಚಾರದಿಂದ ಕದಲೆ (ನೀರು ಚಲಿಸಿದರೆ, ಕದಲಿದರೆಮತ್ತೆ
ಪ್ರತಿರೂಪಂಗೆ  ಎಡೆಯುಂಟೆ (ಅಲ್ಲಿ ಪ್ರತಿಬಿಂಬ ಕಾಣುವುದೆ)?
ಚಿತ್ತ ಸಂಚಾರಿಸುವಲ್ಲಿ (ಮನಸ್ಸು ಸ್ಥಿರವಾಗಿರದೆ ಸಂಚರಿಸುತ್ತಿದ್ದರೆಕುರುಹಿನ ಗೊತ್ತಿಗೆ ( ಪರವಸ್ತುವಿಗೆ) ಒಡೆತನವುಂಟೆ?
ಇಂತೀ ಉಭಯದ ಸಕೀಲ ನಿಂದು ( ಈರೀತಿಯಾಗಿ ಎರಡೂ ರೀತಿಯ ಸಂಚಾರಗಳು ನಿಂತು), ಕಳೆ ಬೆಳಗುತ್ತದೆ (ಪರವಸ್ತು ಬೆಳಗುತ್ತದೆ)  ಸದಾಶಿವಮೂರ್ತಿಲಿಂಗದಲ್ಲಿ

ತಾತ್ಪರ್ಯ:

ಇದು ಅರಿವಿನ ಮಾರಿ ತಂದೆಯವರ ವಚನ. ಒಳ್ಳೆಯ ದೃಷ್ಟಾಂತದಿಂದ  ಮನಸ್ಸು ನಿಶ್ಚಲಗೊಳ್ಳದೆ  ಅರಿವು ಕೈಗೂಡದು ಎಂಬುದನ್ನು ಹೇಳುತ್ತಿದ್ದಾರೆ.
ನೀರಿನಲ್ಲಿ ಪ್ರತಿಬಿಂಬ ಕಾಣುವ ವಿಷಯ ಎಲ್ಲರಿಗೂ ತಿಳಿದದ್ದೆ. ಆದರೆ ಅದಕ್ಕೆ ನೀರು ನಿಶ್ಚಲವಾಗಿರಬೇಕು. ನೀರು ನಿಶ್ಚಲವಾದಾಗ ಪ್ರತಿಬಿಂಬ  ಸ್ಪಷ್ಟವಾಗಿರುತ್ತದೆ. ಆದರೆ ನೀರು  ಸಂಚರಿಸಿದರೆ, ಚಲಿಸಿದರೆ ಅಲ್ಲಿ ಪ್ರತಿರೂಪ ಕಾಣುವುದಿಲ್ಲ. ಜಲ ಕದಲಿದರೆ ಪ್ರತಿರೂಪಕ್ಕೆ ಧಕ್ಕೆಯುಂಟಾಗುತ್ತದೆ. ಅದೇ ರೀತಿಯಾಗಿ  ಚಿತ್ತ ಸದಾ ಸಂಚರಿಸುತ್ತಿದ್ದರೆ  ಕುರುಹಿನ ಹಿಂದಿರುವ ಅರಿವಿಗೆ ಅವಕಾಶವೆಲ್ಲಿರುತ್ತದೆ ಎನ್ನುತ್ತಾರೆ ಅರಿವಿನ ಮಾರಿತಂದೆಯವರು.  ಮನಸ್ಸು ಮತ್ತು ನೀರು ಎರಡೂ ಒಂದೆ ಗುಣವುಳ್ಳವು. ಅವು ಬಹಳ ಚಂಚಲ ಸ್ವಭಾವದವು. ಅವು ಯಾವಗಲೂ ಚಲಿಸುತ್ತಲೇ ಇರುತ್ತವೆನೀರು ತಗ್ಗಿಗೆ ಹರಿಯುತ್ತಿರುತ್ತದೆ ಮತ್ತು ಮನಸ್ಸು ವಿಷಯಗಳೆಡೆಗೆ ಚಲಿಸುತ್ತಿರುತ್ತದೆ. ಇಂತಹ ಚಲನೆಯಿದ್ದಾಗ ಅದರಲ್ಲಿ ಪ್ರತಿಬಿಂಬ ಮೂಡಲು ಸಾಧ್ಯವಿಲ್ಲ. ಏಕೆಂದರೆ ಮನಸ್ಸು ತನ್ನಿಷ್ಟದದೆಡೆಗೆ ಹರಿಯುವುದರಲ್ಲಿ ಪೂರ್ತಿಯಾಗಿ ತೊಡಗಿರುತ್ತದೆ. ಅದರ ಆತುರತೆಯಲ್ಲಿ ಕೇವಲ ಹರಿದಾಡುವಿಕೆ ಇರುತ್ತದೆ ನಿಶ್ಚಲತೆಯಲ್ಲ. ನೀರು ಮತ್ತು ಮನಸ್ಸು ಸ್ಥಿರವಾಗಿದ್ದಲ್ಲಿ ಮಾತ್ರ ಪರವಸ್ತುವಿನ ಪ್ರತಿರೂಪ ಅಲ್ಲಿ ಮೂಡಲು ಸಾಧ್ಯ. ಇಲ್ಲದಿದ್ದಲ್ಲಿ ಅಲ್ಲಿ ಕೇವಲ ಸಂಚಲನೆ ಇರುತ್ತದೆ. ಮತ್ತು ಸಂಚಲನೆಯಿದ್ದಾಗ  ಕುರುಹಿನ ಅರಿವು ಉಂಟಾಗುವುದಿಲ್ಲಆದ್ದರಿಂದ ಮನಸ್ಸು ನಿಶ್ಚಲವಾಗಿರುವುದು ಬಲು ಮುಖ್ಯ.
ಆದರೆ ಮನಸ್ಸನ್ನು ಎಲ್ಲಿಯೂ ಹರಿದಾಡದಂತೆ ಇಟ್ಟುಕೊಳ್ಳಲು ಸಾಧ್ಯವೆ? ಹರಿದಾಟ ಅದರ ಮೂಲ ಸ್ವಭಾವ. ಅದನ್ನು ಮನಸ್ಸು ಬಿಡದು. ಅದನ್ನು ಕಟ್ಟಿಹಾಕಲು ಬರುವುದಿಲ್ಲ. ಹಾಗಾದರೆ ಮನಸ್ಸನ್ನು ನಿಶ್ಚಲಗೊಳಿಸುವುದು ಹೇಗೆ? ಇದು ಒಂದು ತಪ್ಪು ಪ್ರಶ್ನೆ ಎಂದು ತೋರುತ್ತದೆಏಕೆಂದರೆ ಅದು ಅಸಾದ್ಯವಾದದ್ದು. ಮನಸ್ಸಿನ ಪ್ರತಿ ಹರಿದಾಟವನ್ನು ಸೂಕ್ಷ್ಮವಾಗಿ ಗಮನಿಸುತ್ತ  ಇರುವುದು ಮಾತ್ರ ಸಾಧ್ಯ. ಸೂಕ್ಷ್ಮವಾದ ಗಮನಿಸುವಿಕೆಯಿಂದ ಮನಸ್ಸು ಎಚ್ಚರಿಕೆಯತ್ತ ಹೊರಳುತ್ತದೆ.

ಅರಿವಿನ ಮಾರಿತಂದೆ:
ಮಾರಿತಂದೆ ಎಂಬ ಹೆಸರಿನ ಶಿವಶರಣರು ಅನೇಕರಿದ್ದಾರೆ. ಸಾಮಾನ್ಯವಾಗಿ ಶರಣ ಹೆಸರಿನ ಹಿಂದಿರುವ ಪದ ಶರಣರ ಕಾಯಕವನ್ನು ಸೂಚಿಸುತ್ತದೆ. ’ಅರಿವಿನ ಮಾರಿತಂದೆಎಂಬ ಇವರ ಹೆಸರು ಇವರು ಅರಿವಿನ ಕಾಯಕ ಮಾಡುತ್ತಿದ್ದರೆಂಬುದನ್ನು ಸೂಚಿಸುತ್ತದೆ, ಅರಿವಿನ ಕಾಯಕವೆಂದರೇನು? ಅರಿವಿನ ಎಂದರೆ ಶರಣ ಸಂಸ್ಕಾರ, ಧರ್ಮಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಮನೆ ಮನೆಗೆ ಹೋಗಿಯೋ, ಶರಣರ ವಚನಗಳನ್ನು ಹಾಡಿ ಹೊಗಳಿಯೋ ಹೇಳುತ್ತಿರಬೇಕು, ಎಂದು ಹೇಳುತ್ತಾರೆ ಪ್ರೊ|| ಬಿ. ವಿರೂಪಾಕ್ಷಪ್ಪನವರು.ಇವರ ವಚನಗಳು ತಾತ್ವಿಕತೆಯನ್ನು ನಿರೂಪಿಸುತ್ತವೆ.ಇವು ಬಹಳ ಆಳವಾದ ಮತ್ತು ಗಂಭೀರವಾದ ಅರ್ಥವನ್ನು ಗರ್ಭೀಕರಿಸಿಕೊಂಡಿವೆ. ಬಯಲು ಮತ್ತು ಅರಿವಿನ  ಬಗ್ಗೆ ಇವರ ಅನೇಕವಚನಗಳು ಕಂಡುಬರುತ್ತವೆ. ಬಹುಶಃ ಇದೇ ಕಾರಣಕ್ಕಾಗಿ ಇವರನ್ನು ಅರಿವಿನ ಮಾರಿತಂದೆ ಎಂದು ಕರೆದಿರಬೇಕು. ಇವರ ೩೦೯ ವಚನಗಳು ಲಭ್ಯವಾಗಿವೆಸದಾಶಿವಲಿಂಗಮೂರ್ತಿ ಎಂಬುದು ಇವರ ವಚನಾಂಕಿತ.

There are several Sharanas of the name Marithande. The prefix ‘arivina’ (awareness) implies that these Sharanas were engaged in spreading the Sharana principles and knowledge to the community, according to Prof. Virupakshappa. Their Vachanas are impregnated with principles and practices of spirituality. They address the concepts of ‘Bayalu’ (Null, the Ultimate state) and ‘awareness’. So far, 309 Vachanas have been found, with the signature ‘SadashivaLingamurthy’. 

No comments:

Post a Comment