VACHANA IN KANNADA
ಮಾಡುವಂತಿರಬೇಕು ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
TRANSLITERATION
maaDuvaMtirabEku maaDadaMtirabEku
maaDuva maaTadoLage taanilladirabEku
nODuvaMtirabEku nODadaMtirabEku
nODuva nOTadoLage taanilladirabEku
namma kUDala samGamadEvara
TRANSLATION (WORDS)
maaDuvaMtirabEkuu (should look like doing) maaDadaMtirabEku (should look like not
doing)
maaDuva (doing)
maaTadoLage (in the action of) taanilladirabEku (“I” should not be
there)
nODuvaMtirabEku ( should look like seeing)
nODadaMtirabEku (should look like not seeing)
nODuva (seeing)
nOTadoLage (in the action of ) taanilladirabEku (“I” should not be
there)
namma kUDala samGamadEvara (of our Kudala
Sangamadeva)
nenevutt ( while thinking ) nenevutta (while
thinking ) neneyadaMtirabEku (should not be thinking)
VACHANA IN ENGLISH
Should look like doing, while not looking like doing!
In the act of doing, ‘I’ should not be there!
Should look like seeing, while not looking like
seeing!
In the act of seeing, ‘I’ should not be there!
Thinking and thinking of our Lord Kudala
Sangamadeva, should not be like thinking!
COMMENTARY
In this simple yet profound Vachana, Basavanna gives
the fundamental principle of ego containment. He says that action is not
optional. We must act. But, when we act it should not appear that we are
acting. We should not feel that ‘we’ are doing it. The I-ness should not be part
of action. The moment we bring in ‘I’ into what we are doing, we start
comparing our action with that of others. We start feeling that we are superior
in what we are doing and no one else could have done it better. Our ego goes up
and comes in the way of action and possibly spoiling the results of action. Indeed,
the left hand should not know what the right hand is doing.
We should observe everything that is going on around
us, yet appear as though we are not observing.
The ‘I’ should not be part of the action of observing. When we develop
this attitude, we will not tinge our observations with the I-ness. We will see
things as they are without judging them.
Thinking of God should be a natural part of our
life. It should not be an effort that is visible or felt otherwise. It should be
as though we are not making any effort to remember and think of Him. In
summary, ‘I’ should not be a part of anything we do, see, hear, etc.
Let us remove the ‘I’ from our daily lives!
KANNADA COMMENTARY
ಅರ್ಥ:
ಮಾಡುವಂತಿರಬೇಕು (ಮಾಡುತ್ತಿರುವಂತೆ ಇರಬೇಕು) ಮಾಡದಂತಿರಬೇಕು!(ಮಾಡುತ್ತಿರದಂತೆ ಇರಬೇಕು)
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!(ಮಾಡುವ ಕೆಲಸದೊಳಗೆ “ತಾನು” ಇರಬಾರದು)
ನೋಡುವಂತಿರಬೇಕು(ನೋಡುತ್ತಿರುವಂತಿರಬೇಕು), ನೋಡದಂತಿರಬೇಕು!(ನೋಡದಂತೆ ಇರಬೇಕು)
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!! (ನೋಡುತ್ತಿರುವುದರಲ್ಲಿ ತಾನು ಇರಬಾರದು)
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು! (ಕೂದಲ ಸಂಗಮನನ್ನು ನೆನೆಯುತ್ತಿರಬೇಕು ಆದರೆ ನೆನೆಯದಂತೆ ಇರಬೇಕು)
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!(ಮಾಡುವ ಕೆಲಸದೊಳಗೆ “ತಾನು” ಇರಬಾರದು)
ನೋಡುವಂತಿರಬೇಕು(ನೋಡುತ್ತಿರುವಂತಿರಬೇಕು), ನೋಡದಂತಿರಬೇಕು!(ನೋಡದಂತೆ ಇರಬೇಕು)
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!! (ನೋಡುತ್ತಿರುವುದರಲ್ಲಿ ತಾನು ಇರಬಾರದು)
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು! (ಕೂದಲ ಸಂಗಮನನ್ನು ನೆನೆಯುತ್ತಿರಬೇಕು ಆದರೆ ನೆನೆಯದಂತೆ ಇರಬೇಕು)
ತಾತ್ಪರ್ಯ:
ಇದು ಬಸವಣ್ಣನವರ ಬಹಳ
ಸೊಗಸಾದ
ವಚನ.
ಇಲ್ಲಿ
ಅವರು
ವ್ಯಕ್ತಿ
ಈ
ಸಂಸಾರದಲ್ಲಿ
ಹೇಗಿರಬೇಕು
ಎಂಬುದನ್ನು
ಹೇಳುತ್ತಿದ್ದಾರೆ.
ಇಲ್ಲಿಯ
ಕ್ರಿಯೆಗಳಲ್ಲಿ
ವ್ಯಕ್ತಿಯು
ತೊಡಗಿರಬೇಕು.
ಆದರೆ
ತೊಡಗಿರಲೂಬಾರದು.
ಹೇಗೆಂದರೆ
ತಾನು
ಮಾಡುವ
ಕ್ರಿಯಗಳಲ್ಲಿ
“ತಾನು”
ಇರಬಾರದು.
ಎಂದರೆ
“ತಾನು”ಈ
ಕ್ರಿಯೆ
ಮಾಡುತ್ತಿದ್ದೇನೆ ಎಂಬ ಭಾವ ಇರಬಾರದು.
ಆ
“ತಾನು
ಮಾಡುತ್ತಿದ್ದೇನೆ”
ಎಂಬ
ಭಾವನೆ
ಇದ್ದಾಗ
ಅದರೊಂದಿಗೆ “ತಾನು ಮಾಡುತ್ತಿರುವುದ್ದರಿಂದಲೇ
ಈ
ಕೆಲಸ
ಶ್ರೇಷ್ಠವಾಗಿದೆ,
ಇಲ್ಲದಿದ್ದರೆ
ಅದು
ಕೆಟ್ಟು
ಹೋಗುತ್ತಿತ್ತು,
ಇನ್ನಾರಿಗೂ
ಇದನ್ನು
ಮಾಡಲು
ಬರುವುದಿಲ್ಲ”
ಇತ್ಯಾದಿ
ಅಹಂಕಾರದ
ಭಾವ
ತುಂಬಿರುತ್ತದೆ.
ಇದರಿಂದ
ಮನಸ್ಸು
ಮತ್ತು
ಕ್ರಿಯೆ
ಎರಡೂ
ಕಲ್ಮಶಗೊಳ್ಳುತ್ತವೆ. ಯಾವಾಗ “ತಾನು” ಇದನ್ನು ಮಾಡುತ್ತಿದ್ದೇನೆ
ಎಂಬ
ಭಾವ
ಇರುವುದಿಲ್ಲವೋ
ಆಗ
ಆ
ಕ್ರಿಯೆ
ಆತನು
ಮಾಡುವುದಾಗಿರುವುದಿಲ್ಲ.
ಆ
ಕ್ರಿಯೆ
ಕೇವಲ
ಕ್ರಿಯೆ
ಯಾಗಿರುತ್ತದೆಯೇ
ಹೊರತು
ಅದು
“ತಾನು”
ಮಾಡುವ
ಕ್ರಿಯೆಯಾಗಿರುವುದಿಲ್ಲ.
ಆಗ ಅದು
ಯಾವುದೇ
ವ್ಯಕ್ತಿಯ ಅಹಂಕಾರದ ಸೋಂಕಿಗೆ
ಒಳಗಾಗದೆ
ಪವಿತ್ರವಾದ
ಕೆಲಸವಾಗಿರುತ್ತದೆ.
ಇದನ್ನೇ
ಅವರು
“ಮಾಡುವ
ಮಾಟದೊಳಗೆ
ತಾನಿಲ್ಲದಿರಬೇಕು”
ಎಂದು
ಹೇಳುವುದು.
ಅದೇ ರೀತಿಯಾಗಿ
ಯಾವುದನ್ನೇ
ನೋಡಿದರೂ
“ತಾನು”
ಅದನ್ನು
ನೋಡುತ್ತಿರುವಂತಿರಬಾರದು.
ಎಂದರೆ
’ತಾನು’
ನೋಡುತ್ತಿದ್ದೇನೆ
ಎಂಬ
ಭಾವ
ಇರಬಾರದು. ಅದು ಒಂದು
ಸಹಜ
ಪ್ರಕ್ರಿಯೆಯಾಗಿರಬೇಕೇ
ಹೊರತು
ಅದರಲ್ಲಿ
”ತಾನು”
ನೋಡುತ್ತಿರಬಾರದು.
ಯಾವಾಗ
ಆ
ನೋಡುವ
ಕ್ರಿಯೆಯಲ್ಲಿ
’ತಾನು’
ಸೇರಿರುರುತ್ತದೆಯೋ
ಆವಾಗ
ಅಲ್ಲಿ ’ನನಗೆ ಇದು ಇಷ್ಟ,
ನನಗೆ
ಇದು
ಇಷ್ಟವಿಲ್ಲ,
ಇದು
ಚೆನ್ನಾಗಿದೆ,
ಇದು
ಚೆನ್ನಾಗಿಲ್ಲ,
ಇದು
ಹೀಗಿರಬೇಕಾಗಿತ್ತು,
ಹೀಗಿರಬಾರದಿತ್ತು’
ಎಂಬಂತಹ
ತನ್ನ
ಇಷ್ಟ,
ನಷ್ಟದ
ಭಾವಗಳು
ಹೆಡೆಯಾಡುತ್ತವೆ.
ಪ್ರತಿಯೊಂದನ್ನೂ
ಇನ್ನೊಂದರ
ಜೊತೆಗೆ
ಹೋಲಿಸಿ
ನೋಡುವ
ರೀತಿ
ಬೇಳೆಯುತ್ತದೆ.
ತನ್ನದೇ
ಶ್ರೇಷ್ಠ
ಎನ್ನುವ
ಅಹಂ
ಬೆಳೆಯುತ್ತದೆ.
ಆದರೆ
ಅದನ್ನು
ನಾವು
ಯಾವುದರ
ಆಧಾರದ
ಮೇಲೆ
ಹಾಗೆ
ಮಾಡುತ್ತೇವೆ?
ಅದನ್ನು
ಕೂಡ
ನಾವೇ
ನಮ್ಮ
ನಮ್ಮ
ದೃಷ್ಟಿಯಿಂದ
ನಿರ್ಧರಿಸುತ್ತೇವೆ. ಪ್ರಕೃತಿಯಲ್ಲಿ ಯಾವುದೂ
ನಮ್ಮಿಷ್ಟದಂತೆ
ನಡೆಯುವುದಿಲ್ಲ.
ಅಲ್ಲಿ
ಯಾವುದೂ
ಒಳ್ಳೆಯದು
ಅಥವಾ
ಕೆಟ್ಟದ್ದು
ಇಲ್ಲ.
ಅದನ್ನು
ನಾವು
ಅದು
ಇರುವಂತೆಯೇ
ನೋಡಬೇಕೇ
ಹೊರತು
ನಮ್ಮ
ದೃಷ್ಟಿಯಿಂದ
ನೋಡಿ
ಬೆಲೆಕಟ್ಟುವುದಲ್ಲ.
ಈ
“ನಾನು,ತಾನು” ಎಂಬುದು ಸ್ವಾರ್ಥ
ಭಾವದಿಂದ
ಕಲುಷಿತಗೊಂಡದ್ದು. ಆ ಕಲ್ಮಶವನ್ನು
ಕಳೆದು
ನಿರ್ಮಲ
ದೃಷ್ಟಿಯಿಂದ
ನೋಡುವುದು
ಸರಿಯಾದ
ಮಾರ್ಗ.
ನಿರ್ಮಲ
ದೃಷ್ಟಿಯಿಂದ
ನೋಡಿದಾಗ
ಅದು
ನೋಡುವವರ
ಕಣ್ಣಿಗೆ
ನಾವು
ನೋಡುತ್ತಿರುವಂತೆ
ಕಾಣುತ್ತದೆ
ಆದರೆ
ನಾವು
“ನಮ್ಮ”
ದೃಷ್ಟಿಯಿಂದ
ನೋಡುತ್ತಿರುವುದಿಲ್ಲ.
ಹಾಗಾಗಿ
ಅದು
ಕೇವಲ
ನೋಡುವುದಾಗಿರುತ್ತದೆ.
ಅದೇ ರೀತಿಯಾಗಿ
ಕೂಡಲಸಂಗಮನನ್ನು
ನೆನೆಯುತ್ತಿರಬೇಕು.
ಆದರೆ
“ನಾನು”
ನೆನೆಯಬಾರದು.
ಅದು
ಕೂಡ
ಸಹಜ
ಪ್ರಕ್ರಿಯೆಯಾಗಿರಬೇಕು
ಎನ್ನುತ್ತಾರೆ
ಬಸವಣ್ಣನವರು.
ಎಂದರೆ
ನಾನು
ನೆನೆಯಬೇಕು ಎಂದು ಸಂಕಲ್ಪ
ಮಾಡಿಕೊಂಡು
ಕೂಡಲ
ಸಂಗಮನನ್ನು
ನೆನೆಯುತ್ತಿದ್ದರೆ
ಅದರಲ್ಲಿ
ನಿಜವಾದ
ನೆನೆಯುವಿಕೆ
ಇರುವುದಿಲ್ಲ.
ಆ
ನೆನೆಹು
“ನಾನು”ವಿನಿಂದ
ಸೋಂಕುಗೊಂಡು
ಅಪವಿತ್ರವಾಗಿರುತ್ತದೆ. ಆ ನೆನೆಯುವಿಕೆ
ಕೂಡ
ಸಹಜವಾಗಿ
ನಡೆಯಬೇಕು
ಎನ್ನುತ್ತಾರೆ
ಬಸವಣ್ಣನವರು.
ಈ
ಮಾತು
ನಾವು
ಮಾಡುವ
ಎಲ್ಲ
ಇಂದ್ರಿಯಗಳ
ಕೆಲಸಗಳಿಗೂ
ಅನ್ವಯವಾಗುತ್ತದೆ.
Thanks for the explanation, couldnt understand the vachana until I read the commentary.
ReplyDeleteNandini