Friday, June 28, 2013

Vachana 148: Enagondu Linga, Ninagondu Linga - An icon for each!

VACHANA IN KANNADA

ಎನಗೊಂದು ಲಿಂಗ ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು.
ಹೋಯಿತ್ತಲ್ಲ ಭಕ್ತಿ ಜಲವ ಕೂಡಿ!
ಮನ ಮುಟ್ಟದ ಲಿಂಗ ಉಳಿ ಮುಟ್ಟಬಲ್ಲುದೆ ಗುಹೇಶ್ವರಾ?

TRANSLITERATION

enagoMdu liMga ninagoMdu liMga
manegoMdu liMgavaayittu.
hOyittalla bhakti jalava kUDi!
man amuTTada liMga uLi muTTaballude guhEshvaraa?

CLICK HERE FOR A RECITATION:

TRANSLATION (WORDS)

enagoMdu liMga ( a Linga for me)  ninagoMdu liMga (a Linga for you)
manegoMdu liMgavaayittu. (there is a Linga for a every house)
hOyittalla bhakti jalava kUDi! (devotion  got washed away in the water)
mana muTTada liMga (the Linga which cannot be touched by the subtle mind)  uLi muTTaballude guhEshvaraa? (can that be touched by the chisel?)

VACHANA IN ENGLISH

A Linga (icon) for me, a Linga for you,
There is a Linga for each house.
Alas! The devotion got washed away in the water!
The Linga which cannot be touched by the subtle mind, can that be touched by the chisel, Lord Guhesvara?

COMMENTARY

In this simple yet powerful Vachana Allama Prabhu wonders how we have forgotten the true utility of the Linga (icon) and immersed in our rituals. He questions as to how the Linga can be touched (i.e. God can be realized) by an instrument like chisel (that makes the icon) while He is beyond the reach of even the subtle mind?

Sharanas offered Ishtalinga as a dynamic icon that be worn on the body and is available for worship and meditation by the devotee when and where he/she is. Thus, there is one Linga for me, one for you and one for everyone who wishes to have one.  Devotees started installing Lingas in their houses and temples. These static (Sthavara) Lingas appeared all over – homes and temples.  We started washing these Lingas in water, milk and honey; started offering them flowers and food; we started enjoying these rituals with the company of friends and relatives. It seemed as though the larger the crowd the deeper our devotion.  Being consumed in this ritualistic activity, we forgot that the icon was simply to get us started in the spiritual path. We need to go past the icon, develop the calm and clean mind to become aware of the divine and the subtle Self.  Allama Prabhu reminds us that the divine is beyond the reach of our minds and logic. He questions how an icon built out of a chisel be that divine. The gist of this Vachana then is that we cannot reach Him through this external, ritualistic worship. What is needed is the journey inwards, with an intense desire, awareness and discipline to reach Him within! 

Let us go past the icon worship!

KANNADA COMMENTARY

ಅರ್ಥ:

ಎನಗೊಂದು ಲಿಂಗ ನಿನಗೊಂದು ಲಿಂಗ (ವ್ಯಕ್ತಿ ವ್ಯಕ್ತಿಗೊಂದು ಲಿಂಗ)
ಮನೆಗೊಂದು ಲಿಂಗವಾಯಿತ್ತು. (ಪ್ರತಿ ಮನೆಗೊಂದು ಲಿಂಗವಾಯಿತು)
ಹೋಯಿತ್ತಲ್ಲ ಭಕ್ತಿ ಜಲವ ಕೂಡಿ! (ಭಕ್ತಿಯು ನೀರಿನಲ್ಲಿ ಕೊಚ್ಚಿಹೋಯಿತು)
ಮನಮುಟ್ಟದ ಲಿಂಗ ಉಳಿ ಮುಟ್ಟಬಲ್ಲುದೆ ಗುಹೇಶ್ವರಾ? (ಸುಕ್ಷ್ಮವಾದ ಮನಸ್ಸೇ ಮುಟ್ಟದ ಲಿಂಗವನ್ನು ಅದನ್ನು ಕೆತ್ತುವ ಉಳಿ ಮುಟ್ಟ ಬಹುದೆ?)

ತಾತ್ಪರ್ಯ;

ಸ್ಥೂಲಲಿಂಗಗಳು ಹುಟ್ಟಿಕೊಂಡು ಹೇಗೆ ಮಾನವನ ಮನಸ್ಸನ್ನು ಇನ್ನೂ ಹೆಚ್ಚಿನ ಭಿನ್ನಭಾವಕ್ಕೆ ಎಡೆ ಮಾಡಿಕೊಟ್ಟಿವೆ ಎಂಬುದನ್ನು ಅಲ್ಲಮರು ಇಲ್ಲಿ ಹೇಳುತ್ತಾರೆ.
 
ಆ ಪರವಸ್ತುವು ಅತ್ಯಂತ ಸೂಕ್ಷ್ಮ. ಅದನ್ನು ಹೊಂದುವುದು, ಭಾವಿಸುವುದು ಯಾವುದೂ  ಸುಲಭವಲ್ಲ.  ಆ ಪರವಸ್ತು ಬಹು ಬೇಗ ಮನದಿಂದ ಜಾರಿ ಹೋಗುತ್ತದೆ.  ಆದ್ದರಿಂದ, ಅದರ ನೆನೆಹು ಸುಲಭವಾಗಲಿ ಎಂಬ ಉದ್ದೇಶದಿಂದ ಸ್ಥಾವರ ಲಿಂಗಗಳು ಹುಟ್ಟಿಕೊಂಡವು. ಕಣ್ಣಮುಂದೆ ಆ ಪರವಸ್ತುವಿನ ರೂಪ, ಕುರುಹು ಒoದು ಇದ್ದರೆ ಅದನ್ನು ನೆನೆಯುವುದು ಸ್ವಲ್ಪ ಸುಲಭವಾಗುವುದು ಎಂದು ಭಾವಿಸಿ ಲಿಂಗಗಳು ಸೃಷ್ಟಿಯಾದವು. ಹೀಗಾಗಿ ನನಗೊಂದು ನಿನಗೊಂದು ಎನ್ನುತ್ತ ಮನೆಗೊಂದೊಂದು ದೇವರುಗಳು ಹುಟ್ಟಿಕೊಂಡವು. ಆ ದೇವರುಗಳನ್ನು ಜನರು ತಮ್ಮ ತಮ್ಮ ಭಕ್ತಿಯನ್ನು ತೋರುತ್ತ ಅನೇಕ ರೀತಿಯಲ್ಲಿ ಉಪಚರಿಸುತ್ತ ಪೂಜಿಸತೊಡಗಿದರು.  ಆದರೆ ಈ ಬಾಹ್ಯ ಭಕ್ತಿಯ ಹೊನಲಿನಲ್ಲಿ ನಿಜವಾದ ಭಕ್ತಿ ಕೊಚ್ಚಿಕೊಂಡು ಹೋಯಿತ್ತು ಎನ್ನುತ್ತಾರೆ ಅಲ್ಲಮರು. ಏಕೆಂದರೆ ಆ ಪರವಸ್ತು ಅತ್ಯಂತ ಸೂಕ್ಷ್ಮ. ಅದನ್ನು ನೆನೆಯಲು ಮನಸ್ಸು ಪರಮ ಶಾಂತವಾಗಬೇಕು.  ಬಾಹ್ಯ ಪೂಜೆಯ ಅಬ್ಬರ ಆ ಶಾಂತಿಯನ್ನು ನಾಶಗೊಳಿಸುತ್ತದೆ. ನನ್ನದು ನಿನ್ನದು ಎಂಬಂತಹ ಭಿನ್ನ ಭಾವಗಳನ್ನು ಹುಟ್ಟಿಸುತ್ತದೆ. ಅಲ್ಲದೆ ಅಲ್ಲಿಂದ ಮುಂದೆ ಹೋಗದಂತೆ ತಡೆಯುತ್ತದೆ. ಪತ್ರೆ, ಫಲ ಪುಷ್ಪ, ದೀಪ ಧೂಪ, ಮಂತ್ರ, ಅಕ್ಷತೆ, ಎಡೆ ಮುಂತಾದವುಗಳಲ್ಲಿ ಮನಸ್ಸು ಪೂರ್ತಿಯಾಗಿ ಮುಳುಗಿ ಹೋಗುವಂತೆ ಮಾಡುತ್ತದೆ. ಮನಸ್ಸು ಆ ಪರವಸ್ತುವನ್ನು ಮುಟ್ಟುವುದಿಲ್ಲ. ಈ ರೀತಿಯಾಗಿ ಸೂಕ್ಷ್ಮವಾದ ಮನಸ್ಸು ಮುಟ್ಟದ ಲಿಂಗವನ್ನು ಆ  ಸ್ಥೂಲವಾದ ಮತ್ತು ನಿರ್ಜೀವ ವಸ್ತುವಾದ ಉಳಿ ಮುಟ್ಟಬಲ್ಲುದೆ? ಮುಟ್ಟಲಾರದು ಎಂದ ಮೇಲೆ ಲಿಂಗಗಳನ್ನು ಸ್ಥಾಪಿಸುವ ಉದ್ದೇಶವೇನು? ಎಂದು ಕೇಳುತ್ತಾರೆ ಅಲ್ಲಮ ಪ್ರಭುಗಳು. ಒಟ್ಟಿನಲ್ಲಿ ಬಾಹ್ಯ ಪೂಜೆಯಿಂದ ಲಿಂಗವನ್ನು ಕಾಣಲಾಗುವುದಿಲ್ಲ ಎಂಬ ಭಾವ ಇಲ್ಲಿದೆ.

 

No comments:

Post a Comment