Friday, June 14, 2013

VACHANA IN KANNADA

ಈ ಲೋಕದಲ್ಲಿ ಸತ್ಕ್ರೀಯನೆ ಪ್ರತಿಷ್ಠೆ ಮಾಡುತ್ತಿಪ್ಪರು
ಗೋವಿನ ದೇಹದಲ್ಲಿ ಘೃತವಿಪ್ಪುದು
ಆ ಗೋವಿಂಗೆ ಪುಷ್ಟಿಯಾಗಲರಿಯದು
ಆ ಗೋವಬೋಧಿಸಿ, ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು
ಆ ನವನೀತದೆ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನ ದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ
ಈ ಪ್ರಕಾರದಲ್ಲಿ ಲಿಂಗೋಪಚಾರಮಾಡಲಾಗಿ ಜ್ಞಾನವಹುದು
ಜ್ಞಾನವಾಗಲಿಕೆ ಸಮ್ಯಜ್ಞಾನವಹುದು
ಸಮ್ಯಜ್ಞಾನವಾಗಲಾಗಿ  ಪ್ರಾಣವೇ ಲಿಂಗವಪ್ಪುದು ತಪ್ಪದು, ಸಂದೇಹವಿಲ್ಲವಯ್ಯ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ

TRANSLITERATION

I lOkadalli satkreeyane prtiShThe maaDuttipparu
gOvina dEhadalli ghRutavippudu,
aa gOviMge puShTiyaagalariyadu
aa gOva bOdhisi, haala karedu kaasi hepppanikki
aadadhiya mathanava maaDi beNNeya tegedu
aa navanItade tuppava kaasi aa gOviMge kuDisalaagi
dina dinakke puShTiyappudu tappadayya
I prakaaradalli liMgOpacaaramaaDalaagi j~jaanavahudu
j~aanavaagalike samyaj~aanahudu
samyaj~aanavaagalaagi praaNavE liMgavappudu tappudu, saMdEhavillavayya
mahaaliMgaguru shiva siddhEshvara prabhuve

CLICK HERE FOR A RECITATION

TRANSLATION (WORDS)

I lOkadalli  (in this world) satkreeyane  (just good deeds)  prtiShThe (prestige)  maaDuttipparu (people are making in to a)
gOvina (of the cow) dEhadall (in the body)  ghRutavippudu  (there is ghee, clarified butter),
aa gOviMge (to that very cow)  puShTiyaagalariyadu (it does not have the intelligence of being nurishment)
aa gOva (that very cow)  bOdhisi (by teaching, making it understand)
haala karedu  (milking) kaasi  (heating) hepppanikki ( making curds)
aa  (that) dadhiya (curds)  mathanava maaDi  (churning) beNNeya tegedu (extracting butter)
aa navanItade (from that butter)  tuppava kaasi (making ghee by heating it)  aa gOviMge (to that cow) kuDisalaagi (by feeding it)
dina dinakke (day by day) puShTiyappudu  (becoming well nourished)  tappadayya (cannot be avoided)
I prakaaradalli (in this way)  liMgOpacaaramaaDalaagi (if one serves God)  j~jaanavahudu (gain knowledge)
j~aanavaagalike (after gaining knowledge) samyaj~aanahudu (that will become complete knowledge)
samyaj~aanavaagalaagi  (complete knowledge) praaNavE liMgavappudu (turns  the breath, or life itself in to God)   tappudu (this cannot be avoided)
saMdEhavillavayya (no doubt)
mahaaliMgaguru shiva siddhEshvara prabhuve (Mahalingaguru Shivasiddheshvara Prabhuve) 

VACHANA IN ENGLISH

In this world people are making just good deeds into a prestige!
There is ghee (clarified butter) in the body of the cow!
That very cow does not know how to nourish with it!
Convincing (petting) the cow, extracting milk, heating it and making curds,
Churning the curds to extract the butter,
From that butter making ghee by heating it and feeding it to the cow,
Day by day, the cow can only be well nourished, it cannot be avoided, Sir!
Along the same lines, one gains knowledge by serving God.
The knowledge gained will become complete knowledge,
The complete knowledge turns the breath (life itself) into God, this cannot be avoided without a doubt, Sir!
Mahalingaguru Shivasiddheshvara Prabhuve! 

COMMENTARY
 
In this Vachana Siddalinga Yathigalu laments on how we fail to recognize what we have and are capable of while being drowned in the activities of mundane life. He says all it takes is for us to surrender to God, which brings knowledge to us, and the knowledge develops into complete knowledge and the complete knowledge merges us with God! 

The Vachana uses an interesting simile to drive home its point. The cow has within it the major ingredient to make Ghee; (clarified butter), it does not know how to utilize it to be nourished. If we pet the cow, extract milk from it, heat the milk to make it into curds, churn the curds to extract butter and finally heat the butter to make the ghee, and feed it to the cow, there is no doubt that the cow will be well nourished. The cow had the basic element within it. This element had to go through a long refinement process to make it suitable to nourish the cow.

Along the same lines, we have what it takes to reach the God within us. We just have to find it, refine it and use it to reach Him. That basic element is simply the act of surrendering to Him and serving Him. This surrender and service will impart us the knowledge, the knowledge turns complete as we progress in our surrendered service. With the complete knowledge of Him we enter His kingdom and become one with Him.

The Vachana says that people of the world are simply not recognizing this inherent component within them. They are busy performing the so called ‘good deeds’; the good deeds as prescribed by the society to bring them prestige. These good deeds make them feel that they are serving the society and are contributing to it. But, they do not realize that all these deeds are simply boosting their ego.

The Vachana urges us to go beyond just performing good deeds and being within this mundane world. It urges us to recognize our inherent potential to be of service to mankind and eventually become one with God!

 Let us push ourselves to gain that ultimate knowledge!

KANNADA COMMENTARY

ಅರ್ಥ:

ಈ ಲೋಕದಲ್ಲಿ ಸತ್ಕ್ರೀಯನೆ (ಒಳ್ಳೆಯ ಕೆಲಸ)  ಪ್ರತಿಷ್ಠೆ  (ಉನ್ನತ ಸ್ಥಾನ) ಮಾಡುತ್ತಿಪ್ಪರು
ಗೋವಿನ ದೇಹದಲ್ಲಿ ಘೃತವಿಪ್ಪುದು (ಆಕಳ ಶರೀರದಲ್ಲಿ ತುಪ್ಪವಿರುವುದು)
ಆ ಗೋವಿಂಗೆ ಪುಷ್ಟಿಯಾಗಲರಿಯದು (ಆದರೆ ಅದು ಆ ದೇಹಕ್ಕೆ ಪೋಷಣೆ ಕೊಡುವುದಿಲ್ಲ)
ಆ ಗೋವಬೋಧಿಸಿ ( ಆ ಆಕಲಿಗೆ ತಿಳಿಹೇಳಿ)
ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ (ಮೊಸರನ್ನು ಕಡೆದು) ಮಾಡಿ ಬೆಣ್ಣೆಯ ತೆಗೆದು
ಆ ನವನೀತದೆ ( ಆ ಬೆಣ್ಣೆಯಿಂದ)  ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನ ದಿನಕ್ಕೆ ಪುಷ್ಟಿಯಪ್ಪುದು (ಅದು ಪೋಷಣೆಗೊಳ್ಳುವುದು)  ತಪ್ಪದಯ್ಯ
ಈ ಪ್ರಕಾರದಲ್ಲಿ ಲಿಂಗೋಪಚಾರಮಾಡಲಾಗಿ ಜ್ಞಾನವಹುದು (ಈ ರೀತಿಯಾಗಿ ಲಿಂಗಕ್ಕಾಗಿ ಮಾಡುವುದರಿಂದ ಜ್ಞಾನ ಉಂಟಾಗುವುದು)
ಜ್ಞಾನವಾಗಲಿಕೆ ಸಮ್ಯಜ್ಞಾನವಹುದು ( ಆ ಜ್ಞಾನವು ಪೂರ್ಣಜ್ಞಾನವಾಗುವುದು)
ಸಮ್ಯಜ್ಞಾನವಾಗಲಾಗಿ  ಪ್ರಾಣವೇ ಲಿಂಗವಪ್ಪುದು ತಪ್ಪದು (ಆ ಪೂರ್ಣಜ್ಞಾನದಿಂದ ಪ್ರಾಣವೇ ಲಿಂಗವಾಗುವುದು)
ಸಂದೇಹವಿಲ್ಲವಯ್ಯ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ 

ತಾತ್ಪರ್ಯ: 

ಈ ವಚನದಲ್ಲಿ ತೋಂಟದ ಸಿದ್ಧಲಿಂಗ  ಯತಿಗಳು  ಸಾಮಾನ್ಯ ಜನರ ನಡತೆ ಹೇಗಿರುತ್ತದೆ,ಮತ್ತು ಅದನ್ನು ಹೇಗೆ  ಔನ್ನತ್ಯಕ್ಕೆ  ಕೊಂಡೊಯ್ಯುವುದು ಎಂಬುದನ್ನು ಅರ್ಥವತ್ತಾದ ಮತ್ತು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಹೇಳುತ್ತಿದ್ದಾರೆ. 

ಈ ಲೋಕದಲ್ಲಿ ಅನೇಕರು ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂದರೆ ಸಮಾಜ ಕಲ್ಯಾಣ, ಬಡವರಿಗೆ ಸಹಾಯ ಮಾಡುವುದು, ಹೆಚ್ಚಿನ ಹಣಕ್ಕೆ ಆಸೆಪಡದೆಯಿರುವುದು,  ಅಲ್ಪ ಸ್ವಲ್ಪ ದಾನ ಮಾಡುವುದು ಇತ್ಯಾದಿಗಳನ್ನು ಮಾಡುವುದು.  ಸಮಾಜವು ಯಾವುದನ್ನು “ಒಳ್ಳೆಯದು” ಎಂದು ಕರೆಯುತ್ತದೆಯೋ ಅಂತಹುದನ್ನು ಮಾಡಿ ಸ್ವಪ್ರತಿಷ್ಠೆ  ಗಳಿಸಿಕೊಳ್ಳುವುದು  ಕಂಡು ಬರುತ್ತದೆ.  “ನಾನು ಸತ್ಕಾರ್ಯ್ಗಳಲ್ಲಿ ತೊಡಗಿದ್ದೇನೆ ಇನ್ನು ನಾನು ಮಾಡುವುದು ಏನೂ ಉಳಿದಿಲ್ಲ” ಎಂದು ಬೀಗುತ್ತದೆ ಮನಸ್ಸು. ಅಲ್ಲಿಗೆ  ಆ ವ್ಯಕ್ತಿಯ ಮನಸ್ಸು ತೃಪ್ತವಾಗಿ ಹೆಚ್ಚಿನದರ ಕಡೆಗೆ ಗಮನ ಹೋಗುವುದಿಲ್ಲ.

ಆದರೆ ಅದು ಕೊನೆಯಲ್ಲ. ಅದು ಕೇವಲಪ್ರತಿಷ್ಠೆಗೆ ದಾರಿಮಾಡಿಕೊಟ್ಟು ಅಹಂಕಾರಕ್ಕೆಡೆಮಾಡಿಕೊಡುತ್ತದೆ. ಇಂತಹ ಒಳ್ಳೆಯ ಕೆಲಸಗಳಿಂದ ಯಾವ ಪ್ರಯೋಜನವೂ ಇಲ್ಲ. ಇದು ಹೇಗೆ ನಿಷ್ಪ್ರಯೋಜಕವೆಂಬುದನ್ನು ಒಂದು ಉದಾಹರಣೆಯಿಂದ ತೋರಿಸಿಕೊಡುತ್ತಾರೆ. ಆಕಳ ದೇಹದಲ್ಲಿಯೇ ತುಪ್ಪವಿರುತ್ತದೆ. ಆದರೆ ಆ ತುಪ್ಪದಿಂದ ಆಕಳ ದೇಹಕ್ಕೆ  ಪುಷ್ಟಿ ದೊರೆಯುವುದಿಲ್ಲ. ಅದಕ್ಕಾಗಿ ನಡೆಯಬೇಕಾದ ದೀರ್ಘ ಪ್ರಕ್ರಿಯೆಯೊಂದಿದೆ.  

ಅದೇ ರೀತಿಯಾಗಿ ಕೇವಲ ಒಳ್ಳೆಯ ಕೆಲಸಗಳು ಆತ್ಮಕ್ಕೆ  ಔನ್ನತ್ಯವನ್ನು ತಂದುಕೊಡುವುದಿಲ್ಲ, ಲಿಂಗ ತತ್ವವನ್ನು ಅರಿವಿಗೆ ತಂದುಕೊಡುವುದಿಲ್ಲ. ಅದಕ್ಕಾಗಿ ನಡೆಯಬೇಕಾದ ದೀರ್ಘ ಪ್ರಕ್ರಿಯೆಯಿದೆ. 

ಆಕಳಿಗೆ ಪ್ರೀತಿಯಿಂದ ಮೈದಡವಿ ತಿಳಿಯಹೇಳಿ ಹಾಲು ಕರೆಯಬೇಕು. ಆ ಹಾಲನ್ನು ಚೆನ್ನಾಗಿ ಕಾಯಿಸಬೇಕು. ಕಾಯಿಸಿದ ಹಾಲಿಗೆ ಹೆಪ್ಪು ಹಾಕಬೇಕು. ಹೆಪ್ಪಾದ ಹಾಲನ್ನು ಮಥಿಸಬೇಕು, ಬೆಣ್ಣೆಯನ್ನು ತೆಗೆಯಬೇಕು,  ಆ ಬೆಣ್ಣೆಯನ್ನು ಕಾಯಿಸಬೇಕು, ಕಾಯಿಸಿದ ತುಪ್ಪವನ್ನು ಹಸುವಿಗೆ ಕೊಟ್ಟಾಗ ಆ ಆಕಳು ಪುಷ್ಟಿಗೊಳ್ಳುವುದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ. ಇದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನುತ್ತಾರೆ ಸಿದ್ಧಲಿಂಗರು. 

ಇದೇ ಪ್ರಕ್ರಿಯೆ ಮಾನವ ಮನಸ್ಸಿಗೂ ಅನ್ವಯಿಸುತ್ತದೆ.  ಒಳ್ಳೆಯ ಕ್ರಿಯೆಗಳು ನಮ್ಮಲ್ಲಿವೆ. ಆದರೆ ಅವುಗಳಿಂದ ಅಪ್ರಯೋಜನವಿಲ್ಲ. ಏಕೆಂದರೆ ಅಲ್ಲಿ ಲಿಂಗಭಾವವಿಲ್ಲ. ಲಿಂಗ ಭಾವ ಅಳವಡಲು ನಡೆಯಬೇಕಾದದ್ದು ಬಹಳವಿದೆ. ನಾವು ಮನಸ್ಸಿಗೆ ಬೊಧಿಸಿ  ಎಲ್ಲರಿಗೂ ಒಳ್ಳೆಯದಾಗುವಂತಹ ಕೆಲಸ ಮಾಡುವಂತೆ ಮಾಡಬೇಕು. ಅಂದರೆ ಒಂದುಕಡೆ ಒಳ್ಳೆಯದು ಮಾಡುತ್ತ ಇನ್ನೊಂದು ಕಡೆ ಯಾರಿಗೋ ಹಾನಿಯಾಗುವಂತೆ ಮಾಡಬಾರದು. ನಾವು ಮಾಡುವ ಕಾರ್ಯ ಹೆಚ್ಚು ಪರಿಪಾಕಗೊಳ್ಳ ಬೇಕು. ಅದರಲ್ಲಿ ಶಿವಭಾವವೆಂಬ ಹೆಪ್ಪು ಹಾಕಬೇಕು. ಅ ಶಿವ ಭಾವವನ್ನು ಮಥಿಸಿ  ಆ ಶಿವ ಭಾವದ ನವನೀತವನ್ನು ತೆಗೆಯಬೇಕು. ಅಂದರೆ ಆ ಮೊಸರಿನಲ್ಲಿರುವ ಚಟ್ಟ ಮತ್ತು ನೀರು ಎಂಬ ಅಹಂಕಾರ ಮತ್ತು ಇತರ ಕಲ್ಮಶಗಳನ್ನು ಬಿಟ್ಟು ಕೇವಲ ಶಿವಭಾವ ಉಳಿಯುವಂತೆ ಮಾಡಬೇಕು.  ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕು. ಅಂದರೆ ಆ ಬೆಣ್ಣೆಯಲ್ಲಿಯೂ ಇರುವ ಅಲ್ಪ ಸ್ವಲ್ಪ ನೀರಿನ ಅಂಶವನ್ನು ಹೋಗುವಂತೆ ಮಾಡಬೇಕು. ಅಂದರೆ  ಅಜ್ಞಾನ ಪೂರ್ತಿಯಾಗಿ ಅಳಿಯಬೇಕು.  ಆಗ ಪೂರ್ಣ ಜ್ಞಾನ ಉಂಟಾಗುತ್ತದೆ. ಆಗ ಮನಸ್ಸು ಲಿಂಗಭಾವದಲ್ಲಿ ಒಂದಾಗಿಯೇ ಆಗುತ್ತದೆ. ಆಗ ಪ್ರಾಣವೇ ಲಿಂಗವಾಗುತ್ತದೆ. ಅದರಲ್ಲಿ ಸಂದೇಹವೇ ಇಲ್ಲ.

ಹಾಲು ತಿಳಿದುಪ್ಪವಾಗುವವರೆಗೆ ಅದು ಅನೇಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದೇ ರೀತಿ ನಮ್ಮ ಮನಸ್ಸು ಕೂಡ ಇಂತಹ ಪರಿಪಾಕಗೊಳಿಸುವ ಪ್ರಕ್ರಿಯೆಗೆ ಒಳಗಾಗಬೇಕು ಎಂಬುದು ಈ ವಚನದ ಭಾವ, ಕೇವಲ ಒಳ್ಳೆಯ ಕೆಲಸಗಳನ್ನು ಮಾಡುತ್ತ ಅಲ್ಲಿಯೆ ನಿಂತುಬಿಡುವುದಲ್ಲ ಎಂದು ಹೇಳುತ್ತಾರೆ ಸಿದ್ಧಲಿಂಗರು.

 

 

 

 

 

 

 

 

 

1 comment:

  1. Hmmm...seems to me, we have to remember nothing is real, it's illusionary and these good works to satisfy your ego are not a pathway to God unless you remember it's not about you but keeping in mind that he is within you. We get caught up in "I did it" forgetting that it's not about you but it's with him.
    Meera

    ReplyDelete