VACHANA IN
KANNADA
ಅಂತರಂಗದಲ್ಲಿ ಜ್ಞಾನ
ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ
ಏಕಭಾವವೆನಿಸಕೊಂಬುದಯ್ಯ
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ
ಕುಂಭದಲ್ಲಿ ಉದಕವಿಪ್ಪುದು
ಅಗ್ನಿಯ ಜ್ವಾಲೆಯ ಸಾಮರ್ಥ್ಯದಿಂದ
ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ
ಜ್ಞಾನ ಸತ್ಕ್ರಿಯೋಪಚಾರವ ಮಾಡಲಾಗಿ
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
bahiraMgadalli satkriyOpacaarayiruttiralikkaagi
EkabhaavavenisikoMbudayya
adu hEgeMdaDe
horage agni urivuttippudayya
kuMbhadalli udakavippudu
agniya jvaaleya saamarthyadiMda
kuMbhadoLagina udakavu hEMge uShNavappudu haaMge
j~aana satkriyPpacaarava maaDalaagi
praaNavE liMgasvarUpavappudu tappadayya
mahaaliMgaguru shivasiddhEshvara prabhuve
CLICK HERE
FOR A RECITATION
TRANSLATION
(WORDS)
aMtaraMgadalli (inwardly, in the heart) j~naana (knowledge)
bahiraMgadalli (outwardly) satkriyOpacaarayiruttiralikkaagi (engaged in good deeds, leading a pious life)
EkabhaavavenisikoMbudayya (that is said to be the unity, Sir; that is called oneness)
adu hEgeMdaDe (if asked how)
horage (outside) agni (fire) urivuttippudayya (is burning, Sir)
kuMbhadalli (in the pot) udakavippudu (there is water)
agniya jvaaleya (flame of fire) saamarthyadiMda (with the potential of)
kuMbhadoLagina (in the pot) udakavu (the water) hEMge (the way) uShNavappudu (becomes hot) haaMge (in the same way)
j~aana (the knowledge) satkriyOpacaarava (good deeds) maaDalaagi (if done, practiced)
praaNavE (the breath, life itself) liMgasvarUpavappudu (becoming God) tappadayya (will not be avoided, stopped)
mahaaliMgaguru shivasiddhEshvara prabhuve (mahaalingaguru Shivasiddheshvara Prabhuve)
VACHANA IN ENGLISH
The inwardly knowledge,
If combined with outwardly good deeds and pious living,
that is said to be unity, Sir!
If asked how?
The fire is burning outside, Sir!
There is water in the pot,
With the potential of the flame of the fire,
The way the water in the pot becomes hot,
In the same way,
If good deeds are practiced with the inward knowledge,
The life (breath) itself becoming God will not be stopped (is certain)!
Mahaalingaguru Shivasiddheshvara Prabhuve!
COMMENTARY
In our
previous postings we have said that the goal of life is to merge with God, to
achieve linga-anga saamarasya and to realize the Self. We have said that what
we need to achieve this is an intense desire to gain the knowledge and develop
the awareness of the God within. We have also said that a prerequisite for this
spiritual journey is minimizing our desires, not over indulging in our sense, and be aware of the illusory nature of the mundane life. With
all this, one could infer that once the knowledge is gained and the awareness
sets in, we can get away from the mundane world and concentrate on God and enjoy
the awareness within. Siddalinga Yathigalu wakes us up through this Vachana urging
us to complement our inward knowledge with outward good deeds and pious living.
He says that it is not good enough to acquire the knowledge and get away from
the world we live in; we must contribute to this world through our good deeds.
Only then we can become Him! The Vachana goes a bit further and says that when knowledge
is combined with good deeds, no one can stop the human from becoming the God!
Let us be
aware, pious and active!
KANNADA
COMMENTARY
ಅರ್ಥ:
ಅಂತರಂಗದಲ್ಲಿ (ಹೃದಯದಲ್ಲಿ) ಜ್ಞಾನ (ಅರಿವು)
ಬಹಿರಂಗದಲ್ಲಿ (ಹೊರಗೆ) ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ ಇರಲು)
ಏಕಭಾವವೆನಿಸಕೊಂಬುದಯ್ಯ (ಒಂದೇ ಭಾವ ವೆನಿಸಿಕೊಳ್ಳುತ್ತದೆ)
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ (ಹೊರಗೆ ಬೆಂಕಿ ಉರಿಯುತ್ತಿದೆ)
ಕುಂಭದಲ್ಲಿ (ಮಡ್ಕೆಯಲ್ಲಿ) ಉದಕವಿಪ್ಪುದು (ನೀರು ಇರುವುದು)
ಅಗ್ನಿಯ (ಬೆಂಕಿಯ) ಜ್ವಾಲೆಯ (ಉರಿಯ) ಸಾಮರ್ಥ್ಯದಿಂದ (ಶಕ್ತಿಯಿಂದ)
ಕುಂಭದೊಳಗಿನ (ಮಡಲೆಯೊಳಗಿನ) ಉದಕವು (ನೀರು) ಹೇಂಗೆ ಉಷ್ಣವಪ್ಪುದು ಹಾಂಗೆ (ಹೇಗೆ ಬಿಸಿಯಾಗುವುದು ಹಾಗೆ)
ಜ್ಞಾನ (ಅರಿವು) ಸತ್ಕ್ರಿಯೋಪಚಾರವ ಮಾಡಲಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ ಮಾಡಿದರೆ)
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ (ಪ್ರಾನವು ಲಿಂಗಸ್ವರೂಪವಾಗುವುದು ತಪ್ಪದು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
ತಾತ್ಪರ್ಯ:
ವ್ಯಕ್ತಿ ಲಿಂಗಸ್ವರೂಪಿ ಆಗುವುದು ಹೇಗೆ ಎಂಬುದನ್ನು ಈ ವಚನದಲ್ಲಿ ದೃಷ್ಟಾಂತದ ಮೂಲಕ ಹೇಳುತ್ತಾರೆ ಸಿದ್ಧಲಿಂಗ ಯತಿಗಳು.
“ಅಂತರಂಗದಲ್ಲಿ ಜ್ಞಾನ ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವವೆನಿಸಕೊಂಬುದಯ್ಯ” ಎನ್ನುತ್ತಾರೆ ಅವರು. ಅಂತರಂಗದಲ್ಲಿ ಜ್ಞಾನವಿರಬೇಕು. ಆ ಜ್ಞಾನ ಆತನ ಬಹಿರಂಗ ಕ್ರಿಯೆಗಳಲ್ಲಿ ಕಾಣಬೇಕು. ಕ್ರಿಯೆಯ ರೂಪದಲ್ಲಿ ಅರಳದೆ ಕೇವಲ ಅಂತರಂಗದಲ್ಲಿ ಮಾತ್ರ ಜ್ಞಾನವಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ವ್ಯಕ್ತಿಯು ತನ್ನ ಅಂತರಂಗದ ಜ್ಞಾನಕ್ಕೆ ಅನುಗುಣವಾಗಿ ಸತ್ಕ್ರಿಯೆಗಳಲ್ಲಿ ತೊಡಗಬೇಕು. ಆಗ ಆತನ ಅಂತರಂಗ ಹಾಗೂ ಬಹಿರಂಗ ಎರಡೂ ಒಂದಾಗುತ್ತವೆ.
ಅಷ್ಟೇ ಅಲ್ಲ ಅವರು ಹೇಳುತ್ತಾರೆ, ಜ್ಞಾನ ಮತ್ತು ಸತ್ಕ್ರಿಯೆಗಳು ಒಂದಾದಾಗ ಪ್ರಾಣವು ಲಿಂಗಸ್ವರೂಪಿಯಾಗುವುದನ್ನು ಯಾರೂ ತಪ್ಪಿಸಲಾರರು. ಅದು ಶತಃ ಸದ್ಧ. ಅಂದರೆ ಅಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲ.
ಅಂತರಂಗದಲ್ಲಿ ಜ್ಞಾನ
ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ
ಏಕಭಾವವೆನಿಸಕೊಂಬುದಯ್ಯ
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ
ಕುಂಭದಲ್ಲಿ ಉದಕವಿಪ್ಪುದು
ಅಗ್ನಿಯ ಜ್ವಾಲೆಯ ಸಾಮರ್ಥ್ಯದಿಂದ
ಕುಂಭದೊಳಗಿನ ಉದಕವು ಹೇಂಗೆ ಉಷ್ಣವಪ್ಪುದು ಹಾಂಗೆ
ಜ್ಞಾನ ಸತ್ಕ್ರಿಯೋಪಚಾರವ ಮಾಡಲಾಗಿ
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
TRANSLITERATION
aMtaraMgadalli
j~naanabahiraMgadalli satkriyOpacaarayiruttiralikkaagi
EkabhaavavenisikoMbudayya
adu hEgeMdaDe
horage agni urivuttippudayya
kuMbhadalli udakavippudu
agniya jvaaleya saamarthyadiMda
kuMbhadoLagina udakavu hEMge uShNavappudu haaMge
j~aana satkriyPpacaarava maaDalaagi
praaNavE liMgasvarUpavappudu tappadayya
mahaaliMgaguru shivasiddhEshvara prabhuve
aMtaraMgadalli (inwardly, in the heart) j~naana (knowledge)
bahiraMgadalli (outwardly) satkriyOpacaarayiruttiralikkaagi (engaged in good deeds, leading a pious life)
EkabhaavavenisikoMbudayya (that is said to be the unity, Sir; that is called oneness)
adu hEgeMdaDe (if asked how)
horage (outside) agni (fire) urivuttippudayya (is burning, Sir)
kuMbhadalli (in the pot) udakavippudu (there is water)
agniya jvaaleya (flame of fire) saamarthyadiMda (with the potential of)
kuMbhadoLagina (in the pot) udakavu (the water) hEMge (the way) uShNavappudu (becomes hot) haaMge (in the same way)
j~aana (the knowledge) satkriyOpacaarava (good deeds) maaDalaagi (if done, practiced)
praaNavE (the breath, life itself) liMgasvarUpavappudu (becoming God) tappadayya (will not be avoided, stopped)
mahaaliMgaguru shivasiddhEshvara prabhuve (mahaalingaguru Shivasiddheshvara Prabhuve)
VACHANA IN ENGLISH
The inwardly knowledge,
If combined with outwardly good deeds and pious living,
that is said to be unity, Sir!
If asked how?
The fire is burning outside, Sir!
There is water in the pot,
With the potential of the flame of the fire,
The way the water in the pot becomes hot,
In the same way,
If good deeds are practiced with the inward knowledge,
The life (breath) itself becoming God will not be stopped (is certain)!
Mahaalingaguru Shivasiddheshvara Prabhuve!
The Vachana uses
a simple but interesting simile to drive home this point. The knowledge is
compared to the fire and the outward world is compared to water within a pot.
The water can only be boiled when the fire is brought in contact with the pot.
In the absence of the two aspects not coming together, the water does not boil!
ಅಂತರಂಗದಲ್ಲಿ (ಹೃದಯದಲ್ಲಿ) ಜ್ಞಾನ (ಅರಿವು)
ಬಹಿರಂಗದಲ್ಲಿ (ಹೊರಗೆ) ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ ಇರಲು)
ಏಕಭಾವವೆನಿಸಕೊಂಬುದಯ್ಯ (ಒಂದೇ ಭಾವ ವೆನಿಸಿಕೊಳ್ಳುತ್ತದೆ)
ಅದು ಹೇಗೆಂದಡೆ:
ಹೊರಗೆ ಅಗ್ನಿ ಉರಿವುತ್ತಿಪ್ಪುದಯ್ಯ (ಹೊರಗೆ ಬೆಂಕಿ ಉರಿಯುತ್ತಿದೆ)
ಕುಂಭದಲ್ಲಿ (ಮಡ್ಕೆಯಲ್ಲಿ) ಉದಕವಿಪ್ಪುದು (ನೀರು ಇರುವುದು)
ಅಗ್ನಿಯ (ಬೆಂಕಿಯ) ಜ್ವಾಲೆಯ (ಉರಿಯ) ಸಾಮರ್ಥ್ಯದಿಂದ (ಶಕ್ತಿಯಿಂದ)
ಕುಂಭದೊಳಗಿನ (ಮಡಲೆಯೊಳಗಿನ) ಉದಕವು (ನೀರು) ಹೇಂಗೆ ಉಷ್ಣವಪ್ಪುದು ಹಾಂಗೆ (ಹೇಗೆ ಬಿಸಿಯಾಗುವುದು ಹಾಗೆ)
ಜ್ಞಾನ (ಅರಿವು) ಸತ್ಕ್ರಿಯೋಪಚಾರವ ಮಾಡಲಾಗಿ (ಒಳ್ಳೆಯ ಕ್ರಿಯೆ ಮತ್ತು ಸತ್ಕಾರ ಮಾಡಿದರೆ)
ಪ್ರಾಣವೇ ಲಿಂಗಸ್ವರೂಪವಪ್ಪುದು ತಪ್ಪದಯ್ಯ (ಪ್ರಾನವು ಲಿಂಗಸ್ವರೂಪವಾಗುವುದು ತಪ್ಪದು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
ವ್ಯಕ್ತಿ ಲಿಂಗಸ್ವರೂಪಿ ಆಗುವುದು ಹೇಗೆ ಎಂಬುದನ್ನು ಈ ವಚನದಲ್ಲಿ ದೃಷ್ಟಾಂತದ ಮೂಲಕ ಹೇಳುತ್ತಾರೆ ಸಿದ್ಧಲಿಂಗ ಯತಿಗಳು.
“ಅಂತರಂಗದಲ್ಲಿ ಜ್ಞಾನ ಬಹಿರಂಗದಲ್ಲಿ ಸತ್ಕ್ರಿಯೋಪಚಾರಯಿರುತ್ತಿರಲಿಕ್ಕಾಗಿ ಏಕಭಾವವೆನಿಸಕೊಂಬುದಯ್ಯ” ಎನ್ನುತ್ತಾರೆ ಅವರು. ಅಂತರಂಗದಲ್ಲಿ ಜ್ಞಾನವಿರಬೇಕು. ಆ ಜ್ಞಾನ ಆತನ ಬಹಿರಂಗ ಕ್ರಿಯೆಗಳಲ್ಲಿ ಕಾಣಬೇಕು. ಕ್ರಿಯೆಯ ರೂಪದಲ್ಲಿ ಅರಳದೆ ಕೇವಲ ಅಂತರಂಗದಲ್ಲಿ ಮಾತ್ರ ಜ್ಞಾನವಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ವ್ಯಕ್ತಿಯು ತನ್ನ ಅಂತರಂಗದ ಜ್ಞಾನಕ್ಕೆ ಅನುಗುಣವಾಗಿ ಸತ್ಕ್ರಿಯೆಗಳಲ್ಲಿ ತೊಡಗಬೇಕು. ಆಗ ಆತನ ಅಂತರಂಗ ಹಾಗೂ ಬಹಿರಂಗ ಎರಡೂ ಒಂದಾಗುತ್ತವೆ.
ಇದಕ್ಕೆ
ಒಂದು ಉದಾಹರಣೆ ಕೊಡುತ್ತಾರೆ. ಒಂದು ಕುಂಭವಿದೆ. ಅದರಲ್ಲಿ ಜಲವಿದೆ. ಈ ಕುಂಭ ಉರಿಯಮೇಲಿಡಲಾಗಿದೆ.
ಮಡಕೆ ಮತ್ತು ಬೆಂಕಿ ಎರಡೂ ಬೇರೆ ಬೇರೆಯಾಗಿವೆ. ಆದರೆ ಬೆಂಕಿಯ ಸಾಮರ್ಥ್ಯದಿಂದ ಅದರ
ಉಷ್ಣತೆಯೆಲ್ಲ ಕುಂಭದ ನೀರಿಗೆ ಬರುತ್ತದೆ. ಅದೇ
ರೀತಿಯಾಗಿ ಸತ್ಕ್ರಿಯೆಗಳಲ್ಲಿ ತೊಡಗಿಕೊಂಡರೆ
ಪ್ರಾಣವು ಲಿಂಗಸ್ವರೂಪವಾಗುವುದು ಎನ್ನುತ್ತಾರೆ.
ಕುಂಭ
ಉರಿಯಮೇಲಿದ್ದರೆ ಮಾತ್ರ ಇದು ಸಾಧ್ಯ. ಜ್ವಾಲೆ ಕುಂಭಕ್ಕೆ ಮುಟ್ಟಬೇಕು. ಆಗಮಾತ್ರ ಜ್ವಾಲೆಯ
ಉಷ್ಣತೆ ಉದಕಕ್ಕೆ, ನೀರಿಗೆ ಬರುತ್ತದೆ.
ಕುಂಭವನ್ನು ಉರಿಯ ಮೇಲಿಡದೆ, ಬೇರೆ ಎಲ್ಲಿಯೋ ಇಟ್ಟು ಜ್ವಾಲೆಯು ಬೇರೆ ಎಲ್ಲಿಯೋ
ಉರಿಯುತ್ತಿದ್ದರೆ ಜ್ವಾಲೆಯ ಉಷ್ಣತೆ ನೀರಿಗೆ
ಬರಲು ಸಾಧ್ಯವಿಲ್ಲ. ಅದೇ ರೀತಿ ಜ್ಞಾನವು ಕೇವಲ ಅಂತರಂಗದಲ್ಲಿ ಇದ್ದರೆ ಸಾಲದು. ಅದು
ಕ್ರಿಯೆಯೊಂದಿಗೆ ಒಂದಾಗಬೇಕು. ಜ್ಞಾನ
ಕ್ರಿಯೆ ಎರಡೂ ಒಂದಾಗುವುದು ಎಂದರೆ ಪ್ರಾಣವು ಲಿಂಗಸ್ವರೂಪಿಯಾಗುವುದು.ಅಷ್ಟೇ ಅಲ್ಲ ಅವರು ಹೇಳುತ್ತಾರೆ, ಜ್ಞಾನ ಮತ್ತು ಸತ್ಕ್ರಿಯೆಗಳು ಒಂದಾದಾಗ ಪ್ರಾಣವು ಲಿಂಗಸ್ವರೂಪಿಯಾಗುವುದನ್ನು ಯಾರೂ ತಪ್ಪಿಸಲಾರರು. ಅದು ಶತಃ ಸದ್ಧ. ಅಂದರೆ ಅಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲ.
No comments:
Post a Comment