VACHANA IN KANNADA
ಹಿಡಿವ ಕೈಗಳ ಮೇಲೆ ಕತ್ತಲೆಯಯ್ಯಾ
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ
ನೆನೆವ ಮನದ ಮೇಲೆ ಕತ್ತಲೆಯಯ್ಯಾ
ಕತ್ತಲೆ ಎಂಬುದು ಇತ್ತಲೆಯಯ್ಯಾ
ಗುಹೇಶ್ವರನೆಂಬುದು ಅತ್ತಲೆಯಯ್ಯಾ
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ
ನೆನೆವ ಮನದ ಮೇಲೆ ಕತ್ತಲೆಯಯ್ಯಾ
ಕತ್ತಲೆ ಎಂಬುದು ಇತ್ತಲೆಯಯ್ಯಾ
ಗುಹೇಶ್ವರನೆಂಬುದು ಅತ್ತಲೆಯಯ್ಯಾ
hiDiva kaigaLa mEle kattaleyayyaa
nODuva kamgaLa mEle
kattaleyayyaa
neneva manada mEle kattaleyayyaa
kattale eMbudu ittaleyayyaa
guhEshvaranaeMbudu attaleyayyaa.
CLICK HERE FOR A RECITATION
TRANSLATION
(WORDS)
hiDiva ( that are holding) kaigaLa (the hands) mEle (on)
kattaleyayyaa (there is darkness)nODuva (that are seeing)
kamgaLa (the eyes) mEle (on)
kattaleyayyaa (there is darkness)neneva (that is thinking) manada (the mind) mEle (on) kattaleyayyaa (there is darkness)kattale (darkness) eMbudu (so called) ittaleyayyaa (is here, on this side)guhEshvaranaeMbudu (the God Guheshvara) attaleyayyaa (Is there, on the other side)
VACHANA IN
ENGLISH
There is darkness on the hand that is holding, Sir!
There is darkness on the eyes that are seeing, Sir!
There is darkness on the mind that is thinking, Sir!
The so called darkness is near, on this side, Sir!
Lord Guhesvara is far, on the other side, Sir!
COMMENTARY
Sharanas provided Ishtalinga or Linga as an icon representing
Pranalinga or Atmalinga, the God within.
It was said that one should hold the Linga on the palm of the hand, raise
it to the level of the eyes, set the sight on it and meditate upon Him. This icon
was just to initiate the spiritual path.
Sharanas insisted that the devotee has to go past the icon to develop an
awareness of the God within and to realize the Self. Allama Prabhu, in this Vachana stresses that
just these ritualistic and mechanical means will not bring us to the
realization of God. We need to go beyond the icon worship and become aware of
the true nature of the divine, who is beyond the limits of our senses and mind.
The Vachana says that the hand holding Linga, the eyes that have
set the sight on the Linga, and the mind that is thinking about Him are all in
darkness, meaning that one is ignorant if he or she thinks that God can be
realized through our senses and mind. He
is way beyond these. He is far away from this darkness. The true awareness of
the divine and the spiritual inward journey is what is needed to reach Him.
Let us journey towards the light within!
KANNADA
COMMENTARY
ಅರ್ಥ:
ಹಿಡಿವ ಕೈಗಳ ಮೇಲೆ ಕತ್ತಲೆಯಯ್ಯಾ (ಲಿಂಗವನ್ನು ಹಿಡಿಯುವ ಕೈಗಳ ಮೇಲೆ ಕತ್ತಲೆ
ಆವರಿಸಿದೆ)
ನೋಡುವ ಕಂಗಳ ಮೇಲೆ ಕತ್ತಲೆಯಯ್ಯಾ (ಲಿಂಗವನ್ನು ನೋಡುವ ಕಣ್ಣುಗಳ ಮೇಲೆ ಕತ್ತಲೆ
ಆವರಿಸಿದೆ)
ನೆನೆವ ಮನದ ಮೇಲೆ ಕತ್ತಲೆಯಯ್ಯಾ (ದೇವರನ್ನು ನೆನೆಯುವ ಮನಸ್ಸಿನ ಮೇಲೆಯೂ ಕತ್ತಲೆ
ಆವರಿಸಿದೆ)
ಕತ್ತಲೆ ಎಂಬುದು ಇತ್ತಲೆಯಯ್ಯಾ (ಈ ಕಡೆ ಇರುವುದೆಲ್ಲ ಬರಿ ಕತ್ತಲೆ)
ಗುಹೇಶ್ವರನೆಂಬುದು
ಅತ್ತಲೆಯಯ್ಯಾ (ಗುಹೇಶ್ವರನು ಇರುವುದು ಕತ್ತಲೆಯಿಂದ ಆ ಕಡೆಗೆ, ಬಹು ದೂರ)
ತಾತ್ಪರ್ಯ:
ಕೈಗಳಲ್ಲಿ ಲಿಂಗವನ್ನು ಹಿಡಿದು ಅದರಲ್ಲಿ ದೃಷ್ಟಿಯನ್ನು ನೆಟ್ಟು ಮನಸ್ಸನ್ನು ಲಿಂಗದ ನೆನೆಹಿನಲ್ಲಿ ತೊಡಗಿಸುತ್ತೇನೆ ಎನ್ನುವವರು
ಅಜ್ಞಾನದಲ್ಲಿ ಮುಳುಗಿದ್ದಾರೆ ಎನ್ನುತ್ತಾರೆ ಅಲ್ಲಮ
ಪ್ರಭುಗಳು.
ಆ ಪರವಸ್ತುವಿನ ಕುರುಹಾದ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು, ದೃಷ್ಟಿಯನ್ನು
ಅದರಲ್ಲಿ ಏಕಾಗ್ರಗೊಳಿಸಿ, ಮನದಲ್ಲಿ ಆ ದೇವನನ್ನು
ನೆನೆಯುತ್ತೇನೆ ಎನ್ನುವುದು ಮರವೆ. ಮತ್ತು ಆ
ಮರವೆಯೆ ಕತ್ತಲೆ. ಆದ್ದರಿಂದ ಅಲ್ಲಮರು
ಹೇಳುತ್ತಾರೆ- ಹಿಡಿವ ಕೈಗಳ ಮೇಲೆ ಕತ್ತಲೆಯೆಂದು. ಅಜ್ಞಾನದಿಂದ ಪೂಜಿಸುವುದು
ಕತ್ತಲೆಯಲ್ಲಿರುವುದರ ಸಮಾನ. ದೃಷ್ಟಿಯನ್ನು ಲಿಂಗದಲ್ಲಿ ನೆಟ್ಟು ಲಿಂಗವನ್ನು
ಕಾಣುತ್ತೇನೆ ಎಂಬುದು ಸಹ ಅಜ್ಞಾನದ ಮಾತು.
ಮನಸ್ಸಿನಲ್ಲಿ ಆ ದೇವರನ್ನು ನೆನೆದು
ಆತನನ್ನು ಪಡೆಯುತ್ತೇನೆ ಎಂಬುದು ಮೂರ್ಖತನ. ಆದ್ದರಿಂದ
ಅದೂ ಕತ್ತಲೆಯೆ. ಏಕೆಂದರೆ ಆ ಲಿಂಗ ಅಥವಾ ಆ ಪರವಸ್ತು
ಇಂದ್ರಿಯಗಳಿಗೆ ನಿಲುಕುವಂತಹುದಲ್ಲ. ಅದು
ಇಂದ್ರಿಯಾತೀತವಾದದ್ದು. ಅಂತಹದ್ದನ್ನ್ನು ನಾನು
ಕೈಯಲ್ಲಿ ಹಿಡಿದು ಪೂಜಿಸುತ್ತೇನೆ, ನನ್ನ ದೃಷ್ಟಿಯಿಂದ ನೋಡುತ್ತೇನೆ ಮತ್ತು ಮನದಲ್ಲಿ
ನೆನೆಯುತ್ತೇನೆ ಎನ್ನುವುದು ಅಜ್ಞಾನ, ಆ ಪರವಸ್ತು
ಕೈಗೆ ಸಿಗುವಂತಹದ್ದಲ್ಲ, ದೃಷ್ಟಿಗೆ ನಿಲುಕುವಂತಹದ್ದಲ್ಲ, ಮನಸ್ಸಿಗೆ
ವೇದ್ಯವಾಗುವಂತಹದ್ದಲ್ಲ. ಆ ಪರವಸ್ತುವಿನ
ಕುರುಹಾದ ಲಿಂಗವನ್ನೇ ಆ ಪರವಸ್ತು ಎಂದು ಭಾವಿಸುವವರು ಅಜ್ಞಾನಿಗಳು, ಕತ್ತಲೆಯಲ್ಲಿ ಮುಳುಗಿದವರು.
ಇಂತಹ ಕತ್ತಲೆಯಲ್ಲಿ ಮುಳುಗಿರುವವರ ಹತ್ತಿರ
ಬೆಳಕು ಅಥವಾ ಅರಿವು ಬರುವುದಿಲ್ಲ. ಅದು ಅವರಿಂದ ಬಲು ದೂರ. ಆದ್ದರಿಂದಲೇ ಅಲ್ಲಮರು
“ಗುಹೇಶ್ವರನು ಅತ್ತಲೆಯಯ್ಯಾ”ಎಂದು ಹೇಳುತ್ತಾರೆ.
Indeed, somewhere along the path of Hinduism, people lost God within and got absorbed in the rituals and forgot the veda teaching---Pragnanam brahman. The gyan part is lost somewhere and we along with it.
ReplyDeleteMeera