Friday, May 24, 2013

Vachana 143: Kattarasillada Raajyakke Kallara Bhaya – Kingdom without a strict king

VACHANA IN KANNADA

ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ,
ಒಕ್ಕಲಿಲ್ಲದ ಊರು ಹಾಳು,
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ
ಲೋಕದ ದೃಷ್ಟಾಂತದಂತೆ
ಮುಕ್ಕಣ್ಣನರುಹಿಲ್ಲದ ಹೃದಯ
ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
TRANSLITERATION
kaTTarasillada rajyakke kaLLara bhaya
okkalillada Uru haaLu,
makkaLillada mane masaNavaTTigeyeMba
lOkada dRuShTaaMtadaMte
mukkaNNanaruhillada hRudaya
karksada vIdhi rakkasara hoLalu nODaa
mahaaliMgaguru shivasiddhEshvara prabhuve

CLICK HERE FOR A RECITATION

http://youtu.be/6jTJ8PDRXgY
TRANSLATION (WORDS)
kaTTarasillada   (without a strict king)  rajyakke (a  state) kaLLara  (of  thieves) bhaya ( there will be in  the fear)
okkalillada (without people)  Uru   (town, place) haaLu (will be in ruins),
makkaLillada (without children)  mane (a house)  masaNavaTTigeyeMba  (is said to be a graveyard)lOkada dRuShTaaMtadaMte (like the exemplification of the world)
mukkaNNanaruhillada  (without the knowledge of the God)  hRudaya (the heart, inward, mind)karksada vIdhi  (is a way of saw, a way to death)  rakkasara  (demon, ogre) hoLalu nODaa (city , you see)
mahaaliMgaguru shivasiddhEshvara prabhuve  (Mhalimgaguru shivasiddhEshvara Prabhuve)
VACHANA IN ENGLISH
The kingdom without a strict king will be in fear of thieves,
The town without people will be in ruins,
The house without children is said to be a graveyard,
Like the exemplification of the world,
The heart without the awareness of God,
Is a way to death, a city of demons, you see!
MahaaliMga guru shivasiddhEshvara prabhuve. 
COMMENTARY

In this Vachana TontadaSiddalinga Yathigalu (Swamigalu) emphasizes the importance of God awareness in one’s life and says that an individual without such awareness (in the heart, mind) is following the path of destruction. He uses common life scenarios to make his point.
The safety and progress of a kingdom depends on how strong the king is and how strict a policy he has adopted to instill discipline among the citizens. The safe environment provided by the king enables happy and productive lives for the citizens. Thieves would naturally be afraid of exploring their ways in such a kingdom. Along the same lines, the kingdom of our heart is ruled by our mind, the king. The mind has to exert a strict discipline. Without it, the thieves known as Arishadvargas  (six passions of the mind – Kama/lust, krodha/anger, lobha/greed, moha/emotional attachment, mada/pride, and maatsarya/jealousy) rob the kingdom of heart. The heart becomes the house of demons.

The liveliness of the town depends on the people living in it. A deserted town is not attractive for anyone to visit. The ruins become the homes for wild beings. Along the same lines, the heart of an individual will be alive and full of life with the awareness of God. The tendency (Guna) of such an individual will be of balance, order and   purity (Saathvik), rather than inert, negative and lethargic (Taamasik). His heart will shine just as a beautiful town with lively people.
Children in the house enhance the lives of people around them. Their innocence, unpolluted laughter, their unending ‘why?’ keeps us on our toes of happiness. Without their welcome distraction, the house will have lost its life. The heart of an individual with the awareness of God would be that of an innocent child, unpolluted by the ups and downs of the mundane world.

As illustrated by the scenarios above, the Vachana projects the heart without God awareness to walking on the path of a saw, a saw that is constantly cutting everyone touching it. That is, every step in life becomes a major problem, the environment becomes the house of demons. With the oil of God awareness sprinkled on the saw, the ups and downs of life do not throw us out of balance. We stay equanimous; we become stithapragnas.

Let us open up our hearts to Him.

KANNADA COMMENTARY
ಕಟ್ಟರಸಿಲ್ಲದ (ಕಠಿಣ ಶಿಸ್ತಿನ ರಾಜನಿಲ್ಲದ)  ರಾಜ್ಯಕ್ಕೆ ಕಳ್ಳರ ಭಯ,
ಒಕ್ಕಲಿಲ್ಲದ (ಜನರಿಲ್ಲದ) ಊರು ಹಾಳು,
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ (ಮಕ್ಕಳಿಲ್ಲದ ಮನೆಯು ಸ್ಮಶಾನ ಎಂಬ)
ಲೋಕದ ದೃಷ್ಟಾಂತದಂತೆ (ಲೋಕದ ಜನರು ಕೊಡುವ ಉದಾಹರಣೆಯಂತೆ
ಮುಕ್ಕಣ್ಣನರುಹಿಲ್ಲದ ಹೃದಯ (ಶಿವನ, ಆ ಪರತತ್ವದ ಜ್ಞಾನವಿಲ್ಲದ ಹೃದಯ)
ಕರ್ಕಸದ ವೀಧಿ (ಗರಗಸದ ದಾರಿ, ಮೃತ್ಯುವಿನ ಮಾರ್ಗ), ರಕ್ಕಸರ ಹೊಳಲು (ರಾಕ್ಷಸರ ಪಟ್ಟಣ) ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

ತೋಂಟದ ಸಿದ್ಧಲಿಂಗ ಯತಿಗಳು. (ಯತಿ ಎಂದರೆ ಯೋಗಿ ಎಂದರ್ಥ. ಸಿದ್ಧಲಿಂಗರು ಯತಿ ಎಂತಲೂ ಸ್ವಾಮಿ ಎಂತಲೂ ಕರೆಸಿಕೊಂಡಿದ್ದಾರೆ)  ಆ ಮುಕ್ಕಣ್ಣನ ಅರಿವು ಇಲ್ಲದ ವ್ಯಕ್ತಿಯ ಹೃದಯ ವಿನಾಶದ ಹಾದಿ ಎಂದು ಹೇಳುತ್ತಿದ್ದಾರೆ. ಅದು ಹೇಗೆ ಎಂಬುದನ್ನು ದೃಷ್ಟಾಂತ ಸಹಿತ ಸ್ಪಷ್ಟ ಮಾಡುತ್ತಾರೆ.
ಅವರು ಹೇಳುತ್ತಾರೆ “ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ” ಎಂದು. ಬಲಶಾಲಿಯಾದ ರಾಜನ ಕಟ್ಟುನಿಟ್ಟಾದ ಆಡಳಿತವಿಲ್ಲದಿದ್ದರೆ ಅ ರಾಜ್ಯಕ್ಕೆ ಕಳ್ಳಕಾಕರ ಭಯವಿರುತ್ತದೆ ಎಂದು. ಪ್ರಜೆಗಳು ಸುಖವಾಗಿರಬೇಕಾದರೆ ಅಲ್ಲಿಯ ರಾಜ ಶಿಸ್ತನ್ನು ಪಾಲಿಸಬೇಕು. ಆ ಶಿಸ್ತು ಒಳ್ಳೆಯ ಆಡಳಿತದ ಲಕ್ಷಣ. ಅಲ್ಲಿ ಕಳ್ಳರ ಭಯವಿರುವುದಿಲ್ಲ. ಕಳ್ಳರೇ ಆ ರಾಜನ  ಶಿಸ್ತಿನ ಕರ್ತವ್ಯಕ್ಕೆ ಹೆದರಿಕೊಳ್ಳುತ್ತಾರೆ. ಅಲ್ಲಿ ಪ್ರಜೆಗಳು ನಿರಾತಂಕವಾಗಿ ಬಾಳಬಹುದು. ಇದೇ ಮಾತು ನಮ್ಮ ಹೃದಯಕ್ಕೂ ಅನ್ವಯವಾಗುತ್ತದೆ. ಹೃದಯವೆನ್ನುವ ರಾಜ್ಯವನ್ನು ಮನವೆಂಬ ರಾಜ ಆಳುತ್ತಾನೆ. ಆ ರಾಜನು ಕಠಿಣ ಶಿಸ್ತನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ಅಲ್ಲಿ ಅರಿಷಡ್ವರ್ಗಗಳೆಂಬ ಕಳ್ಳರು ಬಂದು ನೆಲೆಸಿ ಅದನ್ನು ತಮ್ಮ ಮನೆಯನ್ನಾಗಿಸಿಕೊಳ್ಳುತ್ತಾರೆ. ಅಲ್ಲಿ ಅವರದೇ ರಾಜ್ಯವಾಗಿಬಿಡುತ್ತದೆ. ಹೃದಯ ರಕ್ಕಸರ ಮನೆಯಾಗುತ್ತದೆ.

“ಒಕ್ಕಲಿಲ್ಲದ ಊರು ಹಾಳು” ಎಂಬುದು ಯತಿಗಳ ಮುಂದಿನ ಮಾತು. ಊರಿಗೆ ಕಳೆ ಬರುವುದು ಅಲ್ಲಿ ವಾಸಮಾಡುವ ಜನರಿಂದ. ಊರಲ್ಲಿ ಜನರೇ ಇಲ್ಲದ ಮೇಲೆ ಆ ಊರಿಗೆ ಏನು ಬೆಲೆ? ಜನರು ಊರನ್ನು ಜೀವಂತವಾಗಿಡುತ್ತಾರೆ. ಅದು ನಾನಾ ಕೆಲಸ ಕಾರ್ಯಗಳಿಗೆ ಆಗರವಾಗಿರುತ್ತದೆ. ಇಲ್ಲದಿದ್ದರೆ ಅಲ್ಲಿಯ ಮನೆ ಮಾರುಗಳು ಹಾಳು ಸುರಿದು ಬಿಕೋ ಎನ್ನುತ್ತವೆ. ಹಾವು ಹಲ್ಲಿಗಳ, ಇಲಿ ಹೆಗ್ಗಣಗಳ ಬೀಡಾಗುತ್ತದೆ. ಯಾರೂ ಅಲ್ಲಿ ಕಾಲಿರಿಸಲು ಇಷ್ಟಪಡುವುದಿಲ್ಲ. ಅದೇ ರೀತಿ, ಮನುಷ್ಯನ ಹೃದಯವು ಮುಕ್ಕಣ್ಣನ ಅರಿವಿನಿಂದ ಜೀವಂತವಾಗಿರುತ್ತದೆ.ಅಲ್ಲಿ ತಾಮಸ ಗುಣಗಳ ನಾಮಾವಶೇಷವೂ ಇರುವುದಿಲ್ಲ. ಅದಕ್ಕೆ ಬದಲಾಗಿ ಅಲ್ಲಿ ಸಾತ್ವಿಕ ಗುಣಗಳು ಉತ್ತಮ ಪ್ರಜೆಗಳಂತೆ ವಾಸ ಮಾಡುತ್ತವೆ. ಅವುಗಳಿಂದ ಆಕರ್ಷಿತರಾಗಿ ನಾನಾ ಜನರು ಅವನಲ್ಲಿಗೆ ನಡೆತಂದು ಫಲ ಪಡೆಯುತ್ತಾರೆ. ಹೀಗಾಗಿ ಆತನ ಹೃದಯ ಸುಂದರವಾದ ಊರಿನಂತೆ ನಳನಳಿಸುತ್ತದೆ.
ಮುಂದೆ ಅವರು ಹೇಳುತ್ತಾರೆ “ಮಕ್ಕಳಿಲ್ಲದ  ಮನೆ ಮಸಣವಟ್ಟಿಗೆ” ಎಂದು. ಮನೆಗೆ ಮಕ್ಕಳೇ ಶೊಭೆ. ಅವರ ಕಿಲ ಕಿಲದಿಂದ , ಅವರ ತೊದಲುನುಡಿಗಳಿಂದ, ಅವರ ಕುಣಿದಾಟಗಳಿಂದ,  ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ಮುಗ್ಧತೆಯಿಂದ ಮನೆ ಆನಂದ ಸಾಗರವಾಗುತ್ತದೆ. ಅವರಿಲ್ಲದಿದ್ದರೆ ಮನೆಯಲ್ಲಿಯ ಜನರು ತಮ್ಮ ಮನೋವ್ಯಾಪಾರದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಮೌನ ತುಂಬಿಕೊಂಡು ಸ್ಮಶಾನದ ಕಳೆಯಿರುತ್ತದೆ. ಆದರೆ ಮುಕ್ಕಣ್ಣನ ಅರಿವಿರುವ ಹೃದಯದಲ್ಲಿ ಮಗುವಿನಂತಹ ಮನಸ್ಸಿರುತ್ತದೆ. ಸಂಸಾರದ ಕೋಟಲೆಗಳ ಕಾಟವಿಲ್ಲದೆ ಸದಾ ಆನಂದವಿರುತ್ತದೆ.
ಮೇಲೆ ಹೇಳಿದವೆಲ್ಲ ಲೋಕದ ದೃಷ್ಟಾಂತಗಳು. ಆ ದೃಷ್ಟಾಂತಗಳಂತೆಯೆ  “ಮುಕ್ಕಣ್ಣನರುಹಿಲ್ಲದ ಹೃದಯ ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ” ಎಂದೂ ಹೇಳುತ್ತಾರೆ ಸಿದ್ಧಲಿಂಗ ಯತಿಗಳು.

ಶಿವನ ಅರಿವಿಲ್ಲದ ಹೃದಯ ಗರಗಸದ ಮಾರ್ಗ, ಮತ್ತು ರಾಕ್ಷಸರ ಮನೆ ಎನ್ನುತ್ತಾರೆ. ಈ ಮಾತು ಬಹಳ ಅರ್ಥಪೂರ್ಣವಾದದ್ದು. ಬಾಳು ಗರಗಸದ ಮಾರ್ಗ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಶಿವನ ಅರಿವು ಇಲ್ಲದಾಗ ಬದುಕಿನಲ್ಲಿ ಎಲ್ಲವೂ ಒಂದು ಸಮಸ್ಯೆಯಾಗಿ ತೋರುತ್ತದೆ. ಆ ಸಮಸ್ಯೆಗಳನ್ನು ದಾಟುವಾಗ ಗರಗಸದ ಮೇಲೆ ನಡೆದಷ್ಟೇ  ನೋವಾಗುತ್ತದೆ. ಆ ನೋವನ್ನನುಭವಿಸಿ ಮುಂದೆ ಹೋದಾಗ ಆನಂದದ ಬದಲಿಗೆ ದುಃಖ, ನೋವು, ನಿರಾಸೆ ಮುಂತಾದವುಗಳು ರಾಕ್ಷಸರಂತೆ ಕಾಡುತ್ತವೆ.  ಆದರೆ ಶಿವನ ಅರಿವಿದ್ದಾಗ ಸಮಸ್ಯೆಗಳು ಸಮಸ್ಯೆಗಳಾಗಿ ತೋರುವುದೇ ಇಲ್ಲ. ಎಲ್ಲವೂ ಅರಿವಿನ ಅಗ್ನಿಯಲ್ಲಿ ಸುಟ್ಟು ಹೋಗುತ್ತವೆ.

 

No comments:

Post a Comment