VACHANA IN KANNADA
VACHANA IN ENGLISH
ಸಟ್ಟುಗ
ಸವಿಯಬಲ್ಲುದೇ?
ಅಟ್ಟ
ಮಡಕೆ ಉಣಬಲ್ಲುದೇ ಅಯ್ಯ?
ಬಟ್ಟ
ಬಯಲು ಕಟ್ಟುಕುಟ್ಟಿಗೊಳಗಾಗಬಲ್ಲುದೇ?
ನಿಷ್ಟಹೀನರಿಗೆ
ಲಿಂಗ ಕಟ್ಟಳೆಗೆ ಬರಬಲ್ಲುದೇ?
ಕರ
ಕಷ್ಟರಿರಾ ಸುಮ್ಮನಿರಿ ಭೋ!
ಕಟ್ಟಳೆಗೆಯ್ದದ
ಮಹಾ ಘನದಲ್ಲಿ
ಮನಮುಟ್ಟಿ
ಹಿಮ್ಮೆಟ್ಟದೆ ಅಡಗಿದಾತನೇ
ಅಚಲಿತ
ಮಾಹೇಶ್ವರನು ನೋಡಾ,
ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೇ.
TRANSLITERATION
saTTuga
saviyaballudE?
aTTa maDake
uNaballudE ayya?
baTTa bayalu kaTTu kuTTigoLagaagaballudE?
niShThe
hInarige liMga kaTTaLege baraballudE?
kara
kaShTariraa summaniri bhO!
kaTTaLEgeydada
mahaa ghanadalli
manamuTTi himmeTTade aDagidaatanE
acalita
maahEshvaranu nODaa,
mahaaliMgaguru
shivasiddhEshvara prabhuvE.
CLICK HERE FOR A RECITATION:
TRANSLATION (WORDS)
saTTuga (ladle) saviyaballudE (can it taste)?
aTTa ( cooked) maDake (the vessel in which it is) uNaballudE (can it eat) ayya
(Sir)?
baTTa baayalu (the open field) kaTTu kuTTigoLage (boundaries) aagaballudE
(can it be confined)?
niShThe
(faith, devotion, trust) hInarige
(without) liMga (God) kaTTaLege
baraballudE (can it be confined)?
kara
kaShTariraa (it is very difficult) summaniri bhO (Oh! keep quiet)!
kaTTaLEgeydada
(that which cannot be confined) mahaa
ghanadalli (in that profound)
manamuTTi (with all mind) himmeTTade (without stepping back) aDagidaatanE (one who
becomes one with)
acalita
(stable) maahEshvaranu nODaa (is a
Maheshvara you see),
mahaaliMgaguru
shivasiddhEshvara prabhuvE. (MahaliMgaguru Shivasiddheshvara Prabhu)
Can the ladle taste the food?
Can the pot in which it is cooked eat it, Sir?
Can an open field be confined to boundaries?
Can God come into the confines of those without faith?
It is very difficult, Oh! be silent!
Only one with an intense mind and becomes one with that unconfined profound, without stepping back,
Is immovable Mahesvara (the Supreme), you see!
MahaliMga Guru Shivasiddheshvara Prabhu.
Can the pot in which it is cooked eat it, Sir?
Can an open field be confined to boundaries?
Can God come into the confines of those without faith?
It is very difficult, Oh! be silent!
Only one with an intense mind and becomes one with that unconfined profound, without stepping back,
Is immovable Mahesvara (the Supreme), you see!
MahaliMga Guru Shivasiddheshvara Prabhu.
COMMENTARY
This Vachana from Sharana Thontada Siddalinga Swamigalu
continues the theme of true worship from our previous two postings. It is
urging us to go beyond the Icon worship and to internalize what the Icon
represents, i.e. the Self and the profound principle within.
Sharanas offered Ishtalinga as an icon representing the
divine principle, the Atmalinga or the God within. The Guru initiates the
devotee by offering the Ishtalinga as the Icon to set him in the spiritual
path. It is up to the devotee to realize the meaning of this icon and its
utility in progressing on the spiritual path. The Ishtalinga will not be of
much use once the faith sets in and the intense desire and devotion take over.
Stopping at the worship of Ishtalinga (or any other icon or
idol) is not being one with Him. The ladle is always in touch with the food it
is used to serve. But, it can never taste the food. It is separate from the
food! The pot in which the food is cooked, cannot eat the food either! It is
never one with the food. An open and vast field cannot be marked with boundary
lines – it cannot be confined. Along the same lines, the Vachana says that the
divine principle cannot come into the confines of those without faith. It is
very difficult to achieve the state of true merger with Him. It cannot be just
talked about. What is needed is an intense desire to follow the spiritual path,
a solid determination never to step back or stray from the path and an
immovable faith in reaching Him. Only those with such intense faith and
perseverance can become one with Him.
Let us go beyond the idol worship!
KANNADA COMMENTARY
ಅರ್ಥ:
ಸಟ್ಟುಗ
(ಸೌಟು) ಸವಿಯಬಲ್ಲುದೇ? (ರುಚಿಕಾಣ ಬಲ್ಲುದೆ?)
ಅಟ್ಟ ಮಡಕೆ (ಅಡುಗೆ ಮಾಡಿದ ಮಡಕೆ, ಗಡಿಗೆ) ಉಣಬಲ್ಲುದೇ ಅಯ್ಯ? (ತಾನು ಸ್ವತಃ ಉಣಬಲ್ಲುದೆ?)
ಬಟ್ಟ ಬಯಲು ಕಟ್ಟುಕುಟ್ಟಿಗೊಳಗಾಗಬಲ್ಲುದೇ? (ಬಯಲು ಹಿಡಿತಕ್ಕೆ ಬರಬಹುದೆ?)
ನಿಷ್ಟಹೀನರಿಗೆ ಲಿಂಗ ಕಟ್ಟಳೆಗೆ ಬರಬಲ್ಲುದೇ? (ಲಿಂಗ ನಿಷ್ಠೆ ಇಲ್ಲದವರ ಕೈಗೆ ಬರಬಹುದೆ?)
ಕರ ಕಷ್ಟರಿರಾ (ಹಾಗಾಗುವುದು ಬಲು ಕಷ್ಟ) ಸುಮ್ಮನಿರಿ ಭೋ! (ಸುಮ್ಮನೆ ಮಾತಾಡಬೇಡಿರಿ)
ಕಟ್ಟಳೆಗೆಯ್ದದ (ಯಾವ ಕಟ್ಟಳೆಗೂ ಒಳಗಾಗದ) ಮಹಾ ಘನದಲ್ಲಿ ( ಮಹಾತತ್ವದಲ್ಲಿ)
ಮನಮುಟ್ಟಿ (ಮನಸ್ಸನ್ನಿಟ್ಟು) ಹಿಮ್ಮೆಟ್ಟದೆ (ಎಂದೂ ಹಿಂದೆ ಸರಿಯದೆ) ಅಡಗಿದಾತನೇ (ಅದರಲ್ಲಿ ಅಡಗಿದವನೇ)
ಅಚಲಿತ (ಅಲ್ಲಾಡದ, ಸ್ಥಿರವಾದ) ಮಾಹೇಶ್ವರನು ನೋಡಾ,(ಮಾಹೇಶ್ವರನು. ದೇವರಲ್ಲಿ ನಿಷ್ಠೆಯುಳ್ಳವನು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಅಟ್ಟ ಮಡಕೆ (ಅಡುಗೆ ಮಾಡಿದ ಮಡಕೆ, ಗಡಿಗೆ) ಉಣಬಲ್ಲುದೇ ಅಯ್ಯ? (ತಾನು ಸ್ವತಃ ಉಣಬಲ್ಲುದೆ?)
ಬಟ್ಟ ಬಯಲು ಕಟ್ಟುಕುಟ್ಟಿಗೊಳಗಾಗಬಲ್ಲುದೇ? (ಬಯಲು ಹಿಡಿತಕ್ಕೆ ಬರಬಹುದೆ?)
ನಿಷ್ಟಹೀನರಿಗೆ ಲಿಂಗ ಕಟ್ಟಳೆಗೆ ಬರಬಲ್ಲುದೇ? (ಲಿಂಗ ನಿಷ್ಠೆ ಇಲ್ಲದವರ ಕೈಗೆ ಬರಬಹುದೆ?)
ಕರ ಕಷ್ಟರಿರಾ (ಹಾಗಾಗುವುದು ಬಲು ಕಷ್ಟ) ಸುಮ್ಮನಿರಿ ಭೋ! (ಸುಮ್ಮನೆ ಮಾತಾಡಬೇಡಿರಿ)
ಕಟ್ಟಳೆಗೆಯ್ದದ (ಯಾವ ಕಟ್ಟಳೆಗೂ ಒಳಗಾಗದ) ಮಹಾ ಘನದಲ್ಲಿ ( ಮಹಾತತ್ವದಲ್ಲಿ)
ಮನಮುಟ್ಟಿ (ಮನಸ್ಸನ್ನಿಟ್ಟು) ಹಿಮ್ಮೆಟ್ಟದೆ (ಎಂದೂ ಹಿಂದೆ ಸರಿಯದೆ) ಅಡಗಿದಾತನೇ (ಅದರಲ್ಲಿ ಅಡಗಿದವನೇ)
ಅಚಲಿತ (ಅಲ್ಲಾಡದ, ಸ್ಥಿರವಾದ) ಮಾಹೇಶ್ವರನು ನೋಡಾ,(ಮಾಹೇಶ್ವರನು. ದೇವರಲ್ಲಿ ನಿಷ್ಠೆಯುಳ್ಳವನು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ತಾತ್ಪರ್ಯ:
ಕೇವಲ ಲಿಂಗಧಾರಣೆಯಿಂದ ಯಾವ ಪ್ರಯೋಜನವೂ ಇಲ್ಲ. ಲಿಂಗದಲ್ಲಿ ನಿಷ್ಠೆ ಇರಬೇಕಾದದ್ದು
ಬಹು ಮುಖ್ಯವೆಂಬುದನ್ನು ಹೇಳುತ್ತಾರೆ.
ಸಟ್ಟುಗವು ಸದಾ ಮಾಡಿದ ಅಡುಗೆ ಪದಾರ್ಥದಲ್ಲಿದ್ದರೂ
ಅದು ಆ ಅಡುಗೆಯನ್ನು ಸವಿಯಲಾರದು. ಮಡಕೆಯಲ್ಲಿಯೇ ಅಡುಗೆಯನ್ನು ಮಾಡಲಾಗುತ್ತದೆ. ಆದರೆ ಆ ಮಡಕೆ
ತನ್ನಲ್ಲಿಯೇ ಇರುವ ಅಡುಗೆಯನ್ನು ಉಣಲಾರದು. ಅವೆರಡೂ ಒಂದಕ್ಕೊಂದು ಸಂಬಂಧವಿಲ್ಲದಂತೆ ಬೇರೆ
ಬೇರೆಯಾಗಿಯೇ ಉಳಿಯುತ್ತವೆ. ಬಟ್ಟ ಬಯಲು ಯಾವ ಹಿಡಿತಕ್ಕೂ ಬರಲಾರದು. ಅದನ್ನು ಕಟ್ಟಳೆಗೆ
ಒಳಪಡಿಸಲಾಗದು. ಅದೇ ರೀತಿ ಲಿಂಗವೂ
ನಿಷ್ಠೆಯಿಲ್ಲದವರಿಗೆ ಅಳವಡುವುದಿಲ್ಲ. ಅದು ಅಸಾಧ್ಯವಾದುದು. ಅದು ಮಡಕೆ ಮತ್ತು ಅದರಲ್ಲಿ ಮಾಡಿದ
ಅಡುಗೆಯ ಸಂಬಂಧದಂತೆ. ಅಥವಾ ಆ ಅಡುಗೆಯಲ್ಲಿ ಆಡುವ ಸಟ್ಟುಗದ ಸಂಬಂಧದಂತೆ. ಲಿಂಗವು ಬಯಲಿನಂತೆ,
ಯಾವ ಕಟ್ಟಳೆಗೂ ನಿಲುಕುವಂತಹುದಲ್ಲ. ಅಂದರೆ ನಾನು ಪೂಜೆ ಮಾಡುವ ವೇಳೇಯಲ್ಲಿ ಅದು ನನ್ನ ಮನದಲ್ಲಿ
ನಿಲ್ಲಬೇಕು ಎಂದರೆ ಅದು ಸಾಧ್ಯವಿಲ್ಲ. ಅಥವಾ ಅದು ಕುರುಹಾದ ಬಾಹ್ಯ ಲಿಂಗದಲ್ಲಿ ಇರುತ್ತದೆ ಎಂದು
ತಿಳಿದರೆ ಅದು ಮೂರ್ಖತನ. ಏಕೆಂದರೆ ಲಿಂಗವು ಘನ ತತ್ವ, ಅದು “ಜಗದಗಲ ಮುಗಿಲಗಲ
ಮಿಗೆಯಗಲ,ಪಾತಾಳದಿದತ್ತತ್ತ..........”. ಅಂತಹುದರ ಕೇವಲ ಕುರುಹಾದ ಲಿಂಗವನ್ನು ಕಟ್ಟಿಕೊಂಡು
ಲಿಂಗವನ್ನು ತಿಳಿದವನೆಂಬುದು ಬರಿ ಮಾತು. ಸದಾ
ಎದೆಯಮೇಲೆ ಲಿಂಗವನ್ನು ಕಟ್ಟಿಕೊಂಡರೂ ಅದನ್ನು ಅರಿತಿದ್ದೇನೆ, ಎನ್ನುವುದು ಒಣ ಮಾತು. ಆದ್ದರಿಂದ
ಸುಮ್ಮನೆ, ಲಿಂಗ ಧಾರಿಗಳೆಲ್ಲ ನಿಷ್ಠಾವಂತರೆಂಬ ಮಾತಾಡಬೇಡಿರಿ, ಎನ್ನುತ್ತಾರೆ ತೋಂಟದ ಸಿದ್ಧಲಿಂಗ
ಸ್ವಾಮಿಗಳು. ಬಯಲು ತತ್ವವನ್ನು ಅರಿಯುವುದು ಬಲು ಕಷ್ಟ. ಏಕೆಂದರೆ ಅದು ಕಣ್ಣಿಗೆ ಕಾಣುವುದಿಲ್ಲ.
ಇಂದ್ರಿಯಗಳಿಗೆ ನಿಲುಕುವಂತಹುದಲ್ಲ. ಅದನ್ನು
ನಿಷ್ಠೆಯಿಂದ ಸಾಧಿಸಬೇಕಾಗುತ್ತದೆ. ಅದು ಬಹಳ ಸೂಕ್ಷ್ಮವಾದದ್ದು. ಈಗ ಕಂಡೆ, ಇದೋ ಅರ್ಥವಾಯಿತು
ಎನ್ನುವುದರಲ್ಲಿ ಜಾರಿಹೋಗುವಂತಹದು. ಅದನ್ನು ನಾನು ಕಟ್ಟಿಕೊಳ್ಳುತ್ತೇನೆ ಎಂಬುದು ಅರ್ಥವಿಲ್ಲದ
ಮಾತು. ಅಂತಹ ಯಾವ ಕಟ್ಟಳೆಗೂ ಸಿಗದಂತಹ ಘನತತ್ವದಲ್ಲಿ ನಿಷ್ಠೆಯಿರಿಸಿ, ಅದರಲ್ಲಿಯೇ ಮನವನ್ನು
ನಿಲ್ಲಿಸಿ ಏನೇ ಆದರೂ ಅಲ್ಲಿಂದ ಹಿಮ್ಮೆಟ್ಟದೆ ಅದರಲ್ಲಿಯೇ ಅಡಗಿ ಹೋಗುವವನೇ ನಿಜವಾದ ಮಾಹೇಶ್ವರನು
ಎನ್ನುತ್ತಾರೆ.
Dear Leela,
ReplyDeleteThis vachana mentions the word "bayalu"; you touch on it briefly. I have come across the "bayalu" concept before. Could you elaborate it further?
Thank you
ಉತ್ತರಿಸಲು ತಡವಾದುದಕ್ಕೆ ವಿಷಾದಿಸುತ್ತೇನೆ. ಶರಣರು ಹೇಳಿದ "ಬಯಲು" ಅನುಭಾವದ ವಿಷಯ. ಬೌದ್ಧಿಕವಾಗಿ ನಾನು ಅರ್ಥ ಮಾಡಿಕೊಂಡದ್ದನ್ನು ಮಾತ್ರ ನಾನು ಹೇಳಬಹುದು. ’ಬಯಲು’ ಎಂದರೆ space ಎನ್ನಬಹುದು. ಅಂದರೆ ಅದು ಕಣ್ಣಿಗೆ ಕಾಣುವುದಿಲ್ಲ, ಕೈಗೆ ಸಿಗುವುದಿಲ್ಲ. ಅದನ್ನು ಕಟ್ಟಿಹಾಕಲು ಬರುವುದಿಲ್ಲ. ಅದು ಎಲ್ಲೆಡೆಗೂ ಇರುವಂತಹುದು. ಅದು ಯಾವ ಕಟ್ಟಳೆಗೂ ನಿಲುಕುವಂತಹದಲ್ಲ. ಬಯಲು ಸ್ಥಿತಿಯಲ್ಲಿ ನನ್ನದು, ಇತರರದು, , ನಾನು ಅವನು, ಸುಖ ದುಃಖ, ಕೋಪ ಶಾಂತಿ ಮುಂತಾದ ಭಾವನೆಗಳು ಇಲ್ಲವಾಗುತ್ತವೆ. ತಾನು ಇತರರಿಂದ ಬೇರೆ ಎನ್ನುವ ಭಾವವಿರುವುದಿಲ್ಲ. ಇಂತಹ ಭಾವನೆಗಳು ಬಾಧಿಸುವುದಿಲ್ಲ. ಅಲ್ಲಿ ಎಲ್ಲವೂ ಬಯಲು. ಅಲ್ಲಿರುವ ಯಾವುದನ್ನೂ ಹೆಸರಿಸಲು ಬಾರದು. ಅನುಭಾವಿಗಳು ಅದನ್ನು ನಿರುಪಾಧಿಕ ವಸ್ತು ಎನ್ನುತ್ತಾರೆ.
Delete