Friday, May 31, 2013

Vachana 144: Surataruva Bittu – Leaving aside the tree of Heaven


VACHANA IN KANNADA
 
ಸುರತರುವ ಬಿಟ್ಟು ಎಲವದ ಮರಕ್ಕೆ ನೀರೆರೆವಂತೆ                    
ನೊರೆವಾಲ ಚೆಲ್ಲಿ ಕಾಟೆಯ ಬಯಸಿ ಬಾಯಾರುವಂತೆ
ತಾಯ ಮಾರಿ ತೊತ್ತ ಕೊಂಬವರಂತೆ
ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ
ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ
ಮಾಯಾಪ್ರಪಂಚವ ಮೆಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿಸಿ(ಸುವ)
ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
TRANSLITERATION
surataruva biTTu elavada  marakke nIrerevaMte
norevaala celli kaaTeya bayasi baayaaruvaMte
taaya maari totta koMbavaraMte
raMbheya biTTu siMbeya bayasuva shikhaMDigaLaMte
nityvallada nirutvallada sattuhOha
maayaa prapaMcava meccida manujaru
muktyaMganeyanappi bhaktymRutava sEvisi
nityapadada sukhava vyarthakaayarivaretta ballaru hELa,
mahaaliMgaguru shivasiddhEshvara prabhuve.
CLICK THE LINK FOR A RECITATION:
TRANSLATION (WORDS)
surataruva (tree of heaven which grants all wishes) biTTu  (leaving a side) elavada (white silk cotton tree)  marakkenIrerevaMte  (watering the tree)
norevaala (creamy/ frothy milk) celli (throwing, spilling)  kaaTeya ( for watery white sauce, ganji) bayasi (longing) baayaaruvaMte (as being thirsty)
taaya (the mother) maari  (selling) totta (a servant)  koMbavaraMte (like buying)
raMbheya (celestial nymph) biTTu (leaving)  siMbeya  (a head gear) bayasuva (liking, longing) shikhaMDigaLaMte (like the eunuch)
nityvallada  (not eternal)  nirutvallada (not true)  sattuhOha (which dies)
maayaa prapaMcava (illusory world) meccida ( who like, adore) manujaru (the people)muktyaMganeyanappi (embracing the damsel called the freedom, mukti) bhaktymRutava sEvisi  (drinking the nectar of bhakti)
nityapadada (eternal state)  sukhava (joy, bliss) vyarthakaayarivaretta (how do these  unworthy bodied people) ballaru (know)  hELa,(tell me)
mahaaliMgaguru shivasiddhEshvara prabhuve. (Mahalingaguru Shiva Siddheshvara Prabhuve)
VACHANA IN ENGLISH
Like leaving aside the tree of Heaven and watering the cotton tree!
Like throwing out the frothy milk and being thirsty longing for the watery sauce, ganji!
Like selling the mother and buying a servant!
Like the eunuch casting aside the celestial nymph longing for a head gear!
People adore this not eternal, not true, illusory world which dies!
How do these unworthy bodied people know the eternal state of bliss,
Embracing the damsel of liberation and drinking the nectar of devotion, pray tell?
Mahalingaguru Shiva Siddheshvara Prabhuve.
COMMENTARY
In this Vachana Tontada Siddalinga yathigalu continues to stress on how important it is to develop the awareness of the profound and cultivate a devotional life style. He uses some strong but real-life similes to drive his point home.
The mythical tree of heaven (Kalpa vruksha) is said to offer whatever the devotee seeks. Instead of cultivating it, the human is busy watering the cotton silk (doodi)tree. This tree does not even provide any fruits fit for consumption. Yet, we are busy running around this tree while ignoring the divine. We certainly have to cultivate the cotton silk tree of mundane life, since we do not have the option of discarding it. But, we must keep our eyes on the tree of heaven, the devotional attitude and the awareness of the profound. Only then, we will not be disappointed by what the cotton silk tree has to offer us!
The frothy, creamy milk is always good for our health. Instead, we are longing for the watery sauce made with flour (ganji), when we are completely muddled in the mundane. We have strong bodies and powerful minds to enable us to see the divine if we care to. It is up to us to make the right choice of the milk or the sauce!
We are all bestowed with the unconditional love of the mother. We discard the soothing love of the mother and embrace the servant for all her help in getting across the mundane ocean. The servant is needed, but why sacrifice the mother? Let us offer the appropriate status for each in our lives!
A celestial nymph has no use for a eunuch, who is more interested in what he wears. He is fond of the colorful turban over the celestial company of the nymph. What a choice? How easily we forget what leads us to the liberation and ultimate bliss?
The Vachana questions as to how the unworthy bodies people who adore this non eternal, temporary, illusory world realize the embrace of the damsel of liberation and the taste of the nectar of devotion?
Indeed, we all have the capability to seek the divine. We are equipped to gain the awareness of the profound. But, we go after the low hanging fruit of the mundane world and forget the ultimate aim of life, which is to be one with Him!
Let us embrace the damsel of liberation with the cup of nectar of devotion in hand!
KANNADA COMMENTARY  

ಅರ್ಥ:
ಸುರತರುವ ( ದೇವಲೋಕದ ಮರ, ಕಲ್ಪವೃಕ್ಷ)  ಬಿಟ್ಟು ಎಲವದ ಮರಕ್ಕೆ (ಬೂರುಗದ ಮರಕ್ಕೆ )  ನೀರೆರೆವಂತೆ                      ಎಲವ ನಾಮಪದ
(ದೇ) ಬೂರುಗದ ಮರ, ದೂದಿಮರ
ನೊರೆವಾಲ ಚೆಲ್ಲಿ ಕಾಟೆಯ (ಗಂಜಿ)  ಬಯಸಿ ಬಾಯಾರುವಂತೆ (ಬಾಯಾರಿ ಆಸೆ ಪಡುವಂತೆ) ಕಾಟಿ ನಾಮಪದ
(ದೇ) ೧ ಕಾಡೆಮ್ಮೆ ಅಥವಾ ಕಾಡುಕೋಣ ೨ ರಾಗಿ ಯಾ ಜೋಳದ ಗಂಜಿ, ಸಂಗಟಿ ೨ ಒಂದು ನಾಣ್ಯ
ತಾಯ ಮಾರಿ ತೊತ್ತ (ದಾಸಿ) ಕೊಂಬವರಂತ
ರಂಭೆಯ ಬಿಟ್ಟು ಸಿಂಬೆಯ (ರುಮಾಲು) ಬಯಸುವ ಶಿಖಂಡಿಗಳಂತೆ (ನಪುಂಸಕರಂತೆ)
ನಿತ್ಯವಲ್ಲದ (ಶಾಶ್ವತವಲ್ಲದ)  ನಿರುತವಲ್ಲದ (ಸತ್ಯವಲ್ಲದ) ಸತ್ತು ಹೋಹ (ನಾಶವಾಗುವ)
ಮಾಯಾಪ್ರಪಂಚವ (ಭ್ರಮೆಯ ಜಗತ್ತು) ಮೆಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ (ಮುಕ್ತಿ ಎಂಬ ಸ್ತ್ರೀಯನ್ನು ಅಪ್ಪಿ, ಪಡೆದು) ಭಕ್ತ್ಯಮೃತವ ಸೇವಿಸಿ(ಸುವ) (ಭಕ್ತಿಯೆಂಬ ಅಮೃತವನ್ನು ಸೇವಿಸುವ )
ನಿತ್ಯಪದದ (ಸತ್ಯವಾದ) ಸುಖವ (ಸುಖವನ್ನು) ವ್ಯರ್ಥಕಾಯರಿವರೆತ್ತಬಲ್ಲರು ಹೇಳ, (ದೇಹವನ್ನು ವ್ಯರ್ಥಗೊಳಿಸಿತ್ತಿರುವ ಇವರು ಹೇಗೆ ತಿಳಿಯ ಬಲ್ಲರು?)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. 
ತಾತ್ಪರ್ಯ:
ಯಾವುದು ಸುಲಭ, ಸುಖದಾಯಕ, ಲಾಭದಾಯಕ, ಶ್ರೇಯಸ್ಕರ ಎಂಬುದನ್ನು ತಿಳಿಯದೆ , ಅಂತಹವುಗಳು ತನ್ನ ಎಟುಕಿನಲ್ಲಿಯೇ ಇದ್ದರೂ ಗುರುತಿಸದೆ ವ್ಯರ್ಥವಾದವುಗಳನ್ನು ಬಯಸಿ ಕಷ್ಟಪಡುವವರು ತಮ್ಮ ಬದುಕನ್ನೇ ವ್ಯರ್ಥವಾಗಿಸುತ್ತಾರೆ ಎನ್ನುತ್ತಾರೆ ತೋಂಟದ ಸಿದ್ಧಲಿಂಗ ಯತಿಗಳು.
ಸುರತರು ದೇವಲೋಕದ ವೃಕ್ಷ. ಅದು ಕೇಳಿದುದನ್ನು ಕೊಡುತ್ತದೆ. ಅದನ್ನು ಪೋಷಿಸಿದರೆ ಸಾಕು ತನ್ನ ಇಷ್ಟಾರ್ಥಗಳು ನೆರವೇರುತ್ತವೆ. ಅಂತಹ ವೃಕ್ಷಕೆ ನೀರೆರೆಯುವುದನ್ನು ಬಿಟ್ಟು ಎಲವದ ಮರಕ್ಕೆ ನೀರೆರೆಯುತ್ತಾರೆ ಜನರು. ಈ ಲೋಕದ ಜನರು ಬಹಳ ದಡ್ಡರು. ಬೇಡಿದ್ದನೆಲ್ಲ ಕೊಡುವ ಮರ ತಮ್ಮ ಬಳಿಯಿರುವಾಗ ಅದಕ್ಕೆ ನೀರೆರೆದು ಪೋಷಿಸುವುದನ್ನು ಬಿಟ್ಟು ಬೂರುಗದ ಮರಕ್ಕೆ ನೀರೆರೆಯುತ್ತಾರೆ.  ಬೂರುಗದ ಮರ ತಿನ್ನುವಂತಹ ಹಣ್ಣನ್ನೂ ಕೊಡುವುದಿಲ್ಲ. ಅದೇ ರೀತಿ  ಶಿವನ ಭಕ್ತಿ ಮಾಡಿದರೆ ಎಲ್ಲ ಇಚ್ಛೆಗಳು ಪೂರ್ತಿಯಾಗುತ್ತವೆ. ಅಂತಹ ಭಕ್ತಿಯನ್ನು ಪೋಷಿಸ ಬೇಕು. ಆದರೆ ಅದನ್ನು ಬಿಟ್ಟು ಸಂಸಾರದಲ್ಲಿ ಮುಳುಗಿ ಬೇರೇನೇನೋ ಬಯಸುತ್ತ ಅದನ್ನು ಪಡೆಯಲು ನೂರಾರು ಕಷ್ಟಗಳನ್ನು ಅನುಭವಿಸುತ್ತಾರೆ. ಸಾಮಾನ್ಯರು.
ನೊರೆನೊರೆಯಾದ ಒಳ್ಳೆಯ ಹಾಲನ್ನು ಚೆಲ್ಲಿ  ಗಂಜಿಯನ್ನು ಬಯಸುವಂತೆ ಎನ್ನುತ್ತಾರೆ ಸಿದ್ಧಲಿಂಗರು. ನೊರೆಹಾಲು ಬಳಿಯಲ್ಲಿರುವಾಗ, ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳದೆ ಅದನ್ನು ಚೆಲ್ಲಿ ಗಂಜಿಯನ್ನು ಬಯಸುತ್ತಾರೆ ಜನರು. ಹಾಲಿನ ಗುಣ ಗಂಜಿಗೆಲ್ಲಿರುತ್ತದೆ. ಹಾಲು ಪೌಷ್ಟಿಕವಾದ ಪೂರ್ಣ ಆಹಾರ. ಅದು ಸುಲಭಾವಾಗಿಯೂ ಸಿಗುತ್ತದೆ. ಅದರ ಗುಣ ಗಂಜಿಗೆ ಇಲ್ಲ. ಆದರೂ ಹಾಲಿನ ಗುಣವನ್ನರಿಯದೆ ಗಂಜಿಗಾಗಿ ಹಪಹಪಿಸುವುದು ಬಹು ದೊಡ್ಡ ಮೂರ್ಖತನ. ಆದರೆ ಬಹುಪಾಲು ಜನರು ಅದನ್ನೇ ಮಾಡುತ್ತಾರೆ.
ತನ್ನ ಸಾಕಿ ಸಲಹಿ ಪ್ರೀತಿಯನ್ನು ತೋರುವ ತಾಯಿಯನ್ನು ಮಾರಿಕೊಂಡು ಒಬ್ಬ ದಾಸಿಯನ್ನು ಕೊಂಡುಕೊಳ್ಳುವಂತಾಗುತ್ತದೆ ಭಕ್ತಿಯನ್ನು ತ್ಯಜಿಸಿ ಸಂಸಾರದಲ್ಲಿ ಮುಳುಗುವುದು.  ತಾಯಿಯ ಮಮತೆ ತೊತ್ತಿನ ಕೆಲಸದ ರೀತಿಗೆ ಸರಿಸಮಾನವೆ? ತಾಯಿಯ ಗುಣ ತೊತ್ತಿಗೆ ಬರಲು ಸಾದ್ಯವೆ? ತಾಯಿಯದು ನಿರ್ವ್ಯಾಜ್ಯ ಪ್ರೇಮ. ತೊತ್ತು ದುಡ್ಡಿಗಾಗಿ ದುಡಿಯುವವಳು.
ದೇವಲೋಕದ ಚೆಲುವೆಯಾದ ರಂಭೆಯನ್ನು ಬಿಟ್ಟು ನಿರ್ಜೀವವಾದ ಸಿಂಬೆ ಅಥವಾ ರುಮಾಲಿಗೆ ಆಸೆ ಪಡುವ ಶಿಖಂಡಿಯಂತೆ ಎಂದು ಹೇಳುತ್ತಾರೆ. ಶಿಖಂಡಿಯಲ್ಲಿ, ರಂಭೆಯನ್ನು ಪಡೆದು ಆಕೆಯ ಚೆಲುವನ್ನು ಮೆಚ್ಚುವ ಚೈತನ್ಯವೇ ಇಲ್ಲ. ಹೇಡಿಯಾದ ಆತನು ರುಮಾಲಿಗೆ ಮಾತ್ರ ಆಸೆಪಡುತ್ತಾನೆ.
ಶಾಶ್ವತ ವಲ್ಲದ, ಸತ್ಯವಲ್ಲದ, ನಾಶವಾಗಿ ಹೋಗುವಂತಹ ಭ್ರಮೆಯ ಈ ಪ್ರಪಂಚವನ್ನು ಮೆಚ್ಚುವ ಜನರು ಮುಕ್ತಿಯೆಂಬ ಸ್ತ್ರೀಯನ್ನು ಅಪ್ಪಿಕೊಂಡು ಭಕ್ತಿಯೆಂಬ ಅಮೃತವನ್ನು ಸೇವಿಸುವ ಸುಖವನ್ನು ಹೇಗೆ ಅನುಭವಿಸಲು ಸಾಧ್ಯ? ಇಂತಹ ಜನರು ವ್ಯರ್ಥಕಾಯರು. ತಮಗೆ ಸಿಕ್ಕ ದೇಹವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಈ ದೇಹ ಮುಕ್ತಿ ಪಡೆಯುವುದಕ್ಕೆ ಒಂದು ಸಾಧನ. ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥಗೊಳಿಸಿವುದು ಸಲ್ಲ. ಆದರೆ ಈ ಪ್ರಪಂಚದ ಜನರು ಅದನ್ನೇ ಮಾಡುತ್ತಿದ್ದಾರೆ.  ತಮ್ಮ ಕಣ್ಣಿಗೆ ಕಾಣುವ ಮಾಯಾಪ್ರಪಂಚವನ್ನೇ ನಿಜವೆಂದು ನಂಬಿ ತಮ್ಮ ಬದುಕನ್ನೇ ಹಾಳು ಮಾಡಕೊಳ್ಳುತ್ತಿದ್ದಾರೆ.
ಒಟ್ಟನಲ್ಲಿ ಅನೇಕ ಉದಾಹರಣೆಗಳನ್ನು ಕೊಟ್ಟು ಈ ಮಾಯಾ ಪ್ರಪಂಚದ ಸ್ಥಾನವನ್ನು ವಿಶದಗೊಳಿಸಿದ್ದಾರೆ. ಭಕ್ತಿಯೊಂದಿದ್ದರೆ ಸಾಕು ಆ ಶಾಶ್ವತವಾದ ಸುಖ ಪಡೆಯಲು, ಈ ಮಾಯಾಪ್ರಪಂಚದ ಕೋಟಲೆಗಳಿಂದ ದೂರವಿರಲು. ಆದರೆ ಅದರ ಕಡೆಗೆ ಜನರಿಗೆ ಗಮನವೇ ಇಲ್ಲ. ಹಾಗಾದರೆ ಈ ಜಗತ್ತು ಮಿಥ್ಯೆಯಾದುದೆ? ಅಲ್ಲ. ಹಾಗಲ್ಲ. ಈ ಪ್ರಾಪಂಚದಲ್ಲಿಯ ಎಲ್ಲವನ್ನೂ ಸ್ವೀಕರಿಸಿದರೂ ಅದಕ್ಕೆ ಅಂಟಿಕೊಳ್ಳದೆ ಆ ಪರದ ಬಗ್ಗೆ ಆಸ್ಥೆ ಇರಬೇಕು. ಏಕೆಂದರೆ ಅದು ಸುರತರು ಇದ್ದಹಾಗೆ. ಅದು ಶಾಶ್ವತ ಸುಖ ಕೊಡವ ವಿಷಯ. ಶಾಶ್ವತವಾದ ಸುಖಕ್ಕೆ ಮನ ಕೊಡಬೇಕೆ ಹೊರತು ನಶ್ವರವಾದ ಸುಖಕ್ಕೆ  ಅಲ್ಲ. ಏಕೆಂದರೆ ನಶ್ವರವಾದ ಸುಖ ಹೆಚ್ಚು ದಿನ ಉಳಿಯುವುದಿಲ್ಲ ಮತ್ತು ಇನ್ನೂ ಇನ್ನೂ ಸುಖ ಪಡೆಯುವ ಆಸೆಯನ್ನು ಹುಟ್ಟಿಸಿ ಕೋಟಲೆಗೆ ಒಳಗಾಗಿಸುತ್ತದೆ. ಅದಕ್ಕೆ ಕೊನೆಯೇ ಇಲ್ಲ.
ಇಲ್ಲಿ ಇಷ್ಟೊಂದು ಒಂದೇ ರೀತಿಯ ಉದಾಹರಣೆಗಳನ್ನು ಕೊಡುವ ಅವಶ್ಯಕತೆ ಇದೆಯೆ ಎನ್ನುವ ಪ್ರಶ್ನೆ ಹುಟ್ಟಬಹುದು. ಅದಕ್ಕೆ ಹೌದು ಎಂಬುದೇ ಉತ್ತರ. ಏಕೆಂದರೆ  ಭಕ್ತಿ ಅಥವಾ ಆ ಅರಿವಿನ ಬಗ್ಗೆ ಅಪಾರ ಪ್ರೀತಿ ಮತ್ತು ಆಳವಾದ ಹಂಬಲ   ಉಂಟಾಗಬೇಕಾದರೆ ಈ ಪ್ರಪಂಚದ ನಶ್ವರತೆ ಅರ್ಥವಾಗಬೇಕು. ಆ ಅರಿವಿನ ಬಗ್ಗೆ ಪ್ರೀತಿಯುಂಟಾಗುವುದು ಸುಲಭವಲ್ಲ. ಏಕೆಂದರೆ ಅದು ಅಮೂರ್ತವಾದದ್ದು. ಅದು ಮನಸ್ಸು ಸೂಕ್ಷ್ಮವಾದಾಗ ಅರಿವಿಗೆ ಬರುತ್ತದೆಯೇ ಹೊರತು ಕಣ್ಣಿಗೆ ಕಾಣುವುದಿಲ್ಲ. ಅದನ್ನು ಗುರುತಿಸುವುದು ಸುಲಭ ಸಾಧ್ಯವಲ್ಲ. ಆದ್ದರಿಂದ ಮೇಲೆ ಹೇಳಿದ ಅನೇಕ ರೀತಿಯ ಉದಾಹರಣೆಗಳನ್ನು ಕೊಡಬೇಕಾಗುತ್ತದೆ. ಅರಿವಿನ ಹಂಬಲವಿಲ್ಲದವರಿಗೆ ಈ ಉದಾಹರಣೆಗಳು ಪುನರಾವರ್ತನೆಗಳಂತೆ ತೋರುತ್ತವೆ. ನಮ್ಮ ಬದುಕಿನ ಪ್ರತಿಯೊಂದನ್ನೂ ಆಳವಾಗಿ ವಿಶ್ಲೇಸಿ ನೋಡಿದಾಗ ಇದು ಅರಿವಿಗೆ ಬರುತ್ತದೆ.

 

 

 

Friday, May 24, 2013

Vachana 143: Kattarasillada Raajyakke Kallara Bhaya – Kingdom without a strict king

VACHANA IN KANNADA

ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ,
ಒಕ್ಕಲಿಲ್ಲದ ಊರು ಹಾಳು,
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ
ಲೋಕದ ದೃಷ್ಟಾಂತದಂತೆ
ಮುಕ್ಕಣ್ಣನರುಹಿಲ್ಲದ ಹೃದಯ
ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.
TRANSLITERATION
kaTTarasillada rajyakke kaLLara bhaya
okkalillada Uru haaLu,
makkaLillada mane masaNavaTTigeyeMba
lOkada dRuShTaaMtadaMte
mukkaNNanaruhillada hRudaya
karksada vIdhi rakkasara hoLalu nODaa
mahaaliMgaguru shivasiddhEshvara prabhuve

CLICK HERE FOR A RECITATION

http://youtu.be/6jTJ8PDRXgY
TRANSLATION (WORDS)
kaTTarasillada   (without a strict king)  rajyakke (a  state) kaLLara  (of  thieves) bhaya ( there will be in  the fear)
okkalillada (without people)  Uru   (town, place) haaLu (will be in ruins),
makkaLillada (without children)  mane (a house)  masaNavaTTigeyeMba  (is said to be a graveyard)lOkada dRuShTaaMtadaMte (like the exemplification of the world)
mukkaNNanaruhillada  (without the knowledge of the God)  hRudaya (the heart, inward, mind)karksada vIdhi  (is a way of saw, a way to death)  rakkasara  (demon, ogre) hoLalu nODaa (city , you see)
mahaaliMgaguru shivasiddhEshvara prabhuve  (Mhalimgaguru shivasiddhEshvara Prabhuve)
VACHANA IN ENGLISH
The kingdom without a strict king will be in fear of thieves,
The town without people will be in ruins,
The house without children is said to be a graveyard,
Like the exemplification of the world,
The heart without the awareness of God,
Is a way to death, a city of demons, you see!
MahaaliMga guru shivasiddhEshvara prabhuve. 
COMMENTARY

In this Vachana TontadaSiddalinga Yathigalu (Swamigalu) emphasizes the importance of God awareness in one’s life and says that an individual without such awareness (in the heart, mind) is following the path of destruction. He uses common life scenarios to make his point.
The safety and progress of a kingdom depends on how strong the king is and how strict a policy he has adopted to instill discipline among the citizens. The safe environment provided by the king enables happy and productive lives for the citizens. Thieves would naturally be afraid of exploring their ways in such a kingdom. Along the same lines, the kingdom of our heart is ruled by our mind, the king. The mind has to exert a strict discipline. Without it, the thieves known as Arishadvargas  (six passions of the mind – Kama/lust, krodha/anger, lobha/greed, moha/emotional attachment, mada/pride, and maatsarya/jealousy) rob the kingdom of heart. The heart becomes the house of demons.

The liveliness of the town depends on the people living in it. A deserted town is not attractive for anyone to visit. The ruins become the homes for wild beings. Along the same lines, the heart of an individual will be alive and full of life with the awareness of God. The tendency (Guna) of such an individual will be of balance, order and   purity (Saathvik), rather than inert, negative and lethargic (Taamasik). His heart will shine just as a beautiful town with lively people.
Children in the house enhance the lives of people around them. Their innocence, unpolluted laughter, their unending ‘why?’ keeps us on our toes of happiness. Without their welcome distraction, the house will have lost its life. The heart of an individual with the awareness of God would be that of an innocent child, unpolluted by the ups and downs of the mundane world.

As illustrated by the scenarios above, the Vachana projects the heart without God awareness to walking on the path of a saw, a saw that is constantly cutting everyone touching it. That is, every step in life becomes a major problem, the environment becomes the house of demons. With the oil of God awareness sprinkled on the saw, the ups and downs of life do not throw us out of balance. We stay equanimous; we become stithapragnas.

Let us open up our hearts to Him.

KANNADA COMMENTARY
ಕಟ್ಟರಸಿಲ್ಲದ (ಕಠಿಣ ಶಿಸ್ತಿನ ರಾಜನಿಲ್ಲದ)  ರಾಜ್ಯಕ್ಕೆ ಕಳ್ಳರ ಭಯ,
ಒಕ್ಕಲಿಲ್ಲದ (ಜನರಿಲ್ಲದ) ಊರು ಹಾಳು,
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ (ಮಕ್ಕಳಿಲ್ಲದ ಮನೆಯು ಸ್ಮಶಾನ ಎಂಬ)
ಲೋಕದ ದೃಷ್ಟಾಂತದಂತೆ (ಲೋಕದ ಜನರು ಕೊಡುವ ಉದಾಹರಣೆಯಂತೆ
ಮುಕ್ಕಣ್ಣನರುಹಿಲ್ಲದ ಹೃದಯ (ಶಿವನ, ಆ ಪರತತ್ವದ ಜ್ಞಾನವಿಲ್ಲದ ಹೃದಯ)
ಕರ್ಕಸದ ವೀಧಿ (ಗರಗಸದ ದಾರಿ, ಮೃತ್ಯುವಿನ ಮಾರ್ಗ), ರಕ್ಕಸರ ಹೊಳಲು (ರಾಕ್ಷಸರ ಪಟ್ಟಣ) ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

ತೋಂಟದ ಸಿದ್ಧಲಿಂಗ ಯತಿಗಳು. (ಯತಿ ಎಂದರೆ ಯೋಗಿ ಎಂದರ್ಥ. ಸಿದ್ಧಲಿಂಗರು ಯತಿ ಎಂತಲೂ ಸ್ವಾಮಿ ಎಂತಲೂ ಕರೆಸಿಕೊಂಡಿದ್ದಾರೆ)  ಆ ಮುಕ್ಕಣ್ಣನ ಅರಿವು ಇಲ್ಲದ ವ್ಯಕ್ತಿಯ ಹೃದಯ ವಿನಾಶದ ಹಾದಿ ಎಂದು ಹೇಳುತ್ತಿದ್ದಾರೆ. ಅದು ಹೇಗೆ ಎಂಬುದನ್ನು ದೃಷ್ಟಾಂತ ಸಹಿತ ಸ್ಪಷ್ಟ ಮಾಡುತ್ತಾರೆ.
ಅವರು ಹೇಳುತ್ತಾರೆ “ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ” ಎಂದು. ಬಲಶಾಲಿಯಾದ ರಾಜನ ಕಟ್ಟುನಿಟ್ಟಾದ ಆಡಳಿತವಿಲ್ಲದಿದ್ದರೆ ಅ ರಾಜ್ಯಕ್ಕೆ ಕಳ್ಳಕಾಕರ ಭಯವಿರುತ್ತದೆ ಎಂದು. ಪ್ರಜೆಗಳು ಸುಖವಾಗಿರಬೇಕಾದರೆ ಅಲ್ಲಿಯ ರಾಜ ಶಿಸ್ತನ್ನು ಪಾಲಿಸಬೇಕು. ಆ ಶಿಸ್ತು ಒಳ್ಳೆಯ ಆಡಳಿತದ ಲಕ್ಷಣ. ಅಲ್ಲಿ ಕಳ್ಳರ ಭಯವಿರುವುದಿಲ್ಲ. ಕಳ್ಳರೇ ಆ ರಾಜನ  ಶಿಸ್ತಿನ ಕರ್ತವ್ಯಕ್ಕೆ ಹೆದರಿಕೊಳ್ಳುತ್ತಾರೆ. ಅಲ್ಲಿ ಪ್ರಜೆಗಳು ನಿರಾತಂಕವಾಗಿ ಬಾಳಬಹುದು. ಇದೇ ಮಾತು ನಮ್ಮ ಹೃದಯಕ್ಕೂ ಅನ್ವಯವಾಗುತ್ತದೆ. ಹೃದಯವೆನ್ನುವ ರಾಜ್ಯವನ್ನು ಮನವೆಂಬ ರಾಜ ಆಳುತ್ತಾನೆ. ಆ ರಾಜನು ಕಠಿಣ ಶಿಸ್ತನ್ನು ಪಾಲಿಸಬೇಕು. ಇಲ್ಲದಿದ್ದಲ್ಲಿ ಅಲ್ಲಿ ಅರಿಷಡ್ವರ್ಗಗಳೆಂಬ ಕಳ್ಳರು ಬಂದು ನೆಲೆಸಿ ಅದನ್ನು ತಮ್ಮ ಮನೆಯನ್ನಾಗಿಸಿಕೊಳ್ಳುತ್ತಾರೆ. ಅಲ್ಲಿ ಅವರದೇ ರಾಜ್ಯವಾಗಿಬಿಡುತ್ತದೆ. ಹೃದಯ ರಕ್ಕಸರ ಮನೆಯಾಗುತ್ತದೆ.

“ಒಕ್ಕಲಿಲ್ಲದ ಊರು ಹಾಳು” ಎಂಬುದು ಯತಿಗಳ ಮುಂದಿನ ಮಾತು. ಊರಿಗೆ ಕಳೆ ಬರುವುದು ಅಲ್ಲಿ ವಾಸಮಾಡುವ ಜನರಿಂದ. ಊರಲ್ಲಿ ಜನರೇ ಇಲ್ಲದ ಮೇಲೆ ಆ ಊರಿಗೆ ಏನು ಬೆಲೆ? ಜನರು ಊರನ್ನು ಜೀವಂತವಾಗಿಡುತ್ತಾರೆ. ಅದು ನಾನಾ ಕೆಲಸ ಕಾರ್ಯಗಳಿಗೆ ಆಗರವಾಗಿರುತ್ತದೆ. ಇಲ್ಲದಿದ್ದರೆ ಅಲ್ಲಿಯ ಮನೆ ಮಾರುಗಳು ಹಾಳು ಸುರಿದು ಬಿಕೋ ಎನ್ನುತ್ತವೆ. ಹಾವು ಹಲ್ಲಿಗಳ, ಇಲಿ ಹೆಗ್ಗಣಗಳ ಬೀಡಾಗುತ್ತದೆ. ಯಾರೂ ಅಲ್ಲಿ ಕಾಲಿರಿಸಲು ಇಷ್ಟಪಡುವುದಿಲ್ಲ. ಅದೇ ರೀತಿ, ಮನುಷ್ಯನ ಹೃದಯವು ಮುಕ್ಕಣ್ಣನ ಅರಿವಿನಿಂದ ಜೀವಂತವಾಗಿರುತ್ತದೆ.ಅಲ್ಲಿ ತಾಮಸ ಗುಣಗಳ ನಾಮಾವಶೇಷವೂ ಇರುವುದಿಲ್ಲ. ಅದಕ್ಕೆ ಬದಲಾಗಿ ಅಲ್ಲಿ ಸಾತ್ವಿಕ ಗುಣಗಳು ಉತ್ತಮ ಪ್ರಜೆಗಳಂತೆ ವಾಸ ಮಾಡುತ್ತವೆ. ಅವುಗಳಿಂದ ಆಕರ್ಷಿತರಾಗಿ ನಾನಾ ಜನರು ಅವನಲ್ಲಿಗೆ ನಡೆತಂದು ಫಲ ಪಡೆಯುತ್ತಾರೆ. ಹೀಗಾಗಿ ಆತನ ಹೃದಯ ಸುಂದರವಾದ ಊರಿನಂತೆ ನಳನಳಿಸುತ್ತದೆ.
ಮುಂದೆ ಅವರು ಹೇಳುತ್ತಾರೆ “ಮಕ್ಕಳಿಲ್ಲದ  ಮನೆ ಮಸಣವಟ್ಟಿಗೆ” ಎಂದು. ಮನೆಗೆ ಮಕ್ಕಳೇ ಶೊಭೆ. ಅವರ ಕಿಲ ಕಿಲದಿಂದ , ಅವರ ತೊದಲುನುಡಿಗಳಿಂದ, ಅವರ ಕುಣಿದಾಟಗಳಿಂದ,  ಎಲ್ಲಕ್ಕಿಂತಲೂ ಹೆಚ್ಚಾಗಿ ಅವರ ಮುಗ್ಧತೆಯಿಂದ ಮನೆ ಆನಂದ ಸಾಗರವಾಗುತ್ತದೆ. ಅವರಿಲ್ಲದಿದ್ದರೆ ಮನೆಯಲ್ಲಿಯ ಜನರು ತಮ್ಮ ಮನೋವ್ಯಾಪಾರದಲ್ಲಿ ಮುಳುಗಿರುತ್ತಾರೆ. ಮನೆಯಲ್ಲಿ ಮೌನ ತುಂಬಿಕೊಂಡು ಸ್ಮಶಾನದ ಕಳೆಯಿರುತ್ತದೆ. ಆದರೆ ಮುಕ್ಕಣ್ಣನ ಅರಿವಿರುವ ಹೃದಯದಲ್ಲಿ ಮಗುವಿನಂತಹ ಮನಸ್ಸಿರುತ್ತದೆ. ಸಂಸಾರದ ಕೋಟಲೆಗಳ ಕಾಟವಿಲ್ಲದೆ ಸದಾ ಆನಂದವಿರುತ್ತದೆ.
ಮೇಲೆ ಹೇಳಿದವೆಲ್ಲ ಲೋಕದ ದೃಷ್ಟಾಂತಗಳು. ಆ ದೃಷ್ಟಾಂತಗಳಂತೆಯೆ  “ಮುಕ್ಕಣ್ಣನರುಹಿಲ್ಲದ ಹೃದಯ ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ” ಎಂದೂ ಹೇಳುತ್ತಾರೆ ಸಿದ್ಧಲಿಂಗ ಯತಿಗಳು.

ಶಿವನ ಅರಿವಿಲ್ಲದ ಹೃದಯ ಗರಗಸದ ಮಾರ್ಗ, ಮತ್ತು ರಾಕ್ಷಸರ ಮನೆ ಎನ್ನುತ್ತಾರೆ. ಈ ಮಾತು ಬಹಳ ಅರ್ಥಪೂರ್ಣವಾದದ್ದು. ಬಾಳು ಗರಗಸದ ಮಾರ್ಗ ಹೇಗೆ ಎಂಬ ಪ್ರಶ್ನೆ ಹುಟ್ಟುತ್ತದೆ. ಶಿವನ ಅರಿವು ಇಲ್ಲದಾಗ ಬದುಕಿನಲ್ಲಿ ಎಲ್ಲವೂ ಒಂದು ಸಮಸ್ಯೆಯಾಗಿ ತೋರುತ್ತದೆ. ಆ ಸಮಸ್ಯೆಗಳನ್ನು ದಾಟುವಾಗ ಗರಗಸದ ಮೇಲೆ ನಡೆದಷ್ಟೇ  ನೋವಾಗುತ್ತದೆ. ಆ ನೋವನ್ನನುಭವಿಸಿ ಮುಂದೆ ಹೋದಾಗ ಆನಂದದ ಬದಲಿಗೆ ದುಃಖ, ನೋವು, ನಿರಾಸೆ ಮುಂತಾದವುಗಳು ರಾಕ್ಷಸರಂತೆ ಕಾಡುತ್ತವೆ.  ಆದರೆ ಶಿವನ ಅರಿವಿದ್ದಾಗ ಸಮಸ್ಯೆಗಳು ಸಮಸ್ಯೆಗಳಾಗಿ ತೋರುವುದೇ ಇಲ್ಲ. ಎಲ್ಲವೂ ಅರಿವಿನ ಅಗ್ನಿಯಲ್ಲಿ ಸುಟ್ಟು ಹೋಗುತ್ತವೆ.

 

Saturday, May 18, 2013

Vachana 142: Kanasina Kaaminiyara Roopu – The beauty of the ladies in the dream


VACHANA IN KANNADA

ಕನಸಿನ ಕಾಮಿನಿಯರ ರೂಪು
ಮನಸಿಗೆ ರಮ್ಯವಾಗಿ ಕಾಣುವುದು,
ಅದು ಮನಸಿನ ಮಾಯ ಕಾಣಿಭೋ,
ಮನಸಿನ ಮಾಯವಳಿಯಲು
ಕನಸಿನ ಕಾಮಿನಿಯರ ರೂಪು ಮನಸಿನಲಿಲ್ಲ ನೋಡಾ,
ಆ ಭ್ರಾಂತು ಭ್ರಮೆಗಳನಳಿದಾತನಲ್ಲದೆ
ಪ್ರಾಣಲಿಂಗ ಸಂಬಂಧಿಯಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

TRANSLITERATION
 
kanasina kaaminiyara roopu
manassige ramyavaagi kaaNuvudu
adu manasina maaya kaaNibhO,
manasina maayavaLiyalu
kanasina kaaminiyara roopu manasinallilla nODaa,
aa bhraaMtu bhramegaLanaLidaatanallade
praaNaliMga saMbaMdhiyalla kaaNaa
mahaaliMgaguru shivasiddhEshvara prabhuve. 

CLICK HERE FOR A RECITATION

TRANSLATION (WORDS)

kanasina (of dreams)  kaaminiyara (ladies’) roopu ( the beauty of)
manassige (to the mind)  ramyavaagi  (pleasing)  kaaNuvudu  (seems)
adu ( that is)  manasina (mind’s)  maaya (illusion) kaaNibhO, (you see)
manasina (of mind)  maayavaLiyalu (at the ending of illusion)
kanasina (of dreams)  kaaminiyara roopu (beauty of ladies) manasinallilla nODaa, (is not in the mind you see)
aa (that) bhraaMtu bhramegaLanaLidaatanallade (no other than one who has ended the illlusions)
praaNaliMga ( the inner God)  saMbaMdhiyalla kaaNaa (doesn’t have any relationship  with, you see)
mahaaliMgaguru shivasiddhEshvara prabhuve. (Mahalingaguru Shivasiddheshvara Prabhuve) 

VACHANA IN ENGLISH
 
The beauty of the ladies in the dream,
seems pleasing to the mind.
That is mind’s illusion, you see!
On ending of the illusion of the mind,
the beauty of the ladies in the dream is not in the mind, you see!
Without ending those illusions,
there is no relationship with the God within, you see!
Mahalingaguru Shivasiddheshvara Prabhuve

COMMENTARY

This Vachana from Tontada Siddalinga Swamigalu specifies the prerequisites for achieving the bond with Praanalinga, the God within.
 Reality is far from the dream. The mind visualizes all sorts of things and scenarios. It makes one day dream. It creates the illusion that the dream is the reality. Whatever seen in the dream always appears to be beautiful and pleasing. But, it is all fabrication of the mind. The Vachana refers to the beauty of the ladies in the dreams. But, the dream and the subsequent illusion could be due to almost all the things one desires. One might desire a fast car, delicious foods, clothes and jewelry, strong and beautiful people, etc. Such desires become dreams. Dreams create the illusion of possessing what one dreams. When one possesses them or fails to possess them, the reality strikes and the illusion fades away. The desire to possess them goes away. Thus, to get the mind out of all the illusions, understanding what is real and tempering ones desires is a must. It is important to realize that the attraction of the objects desired is not really in those objects, but it is in one’s mind.  The Vachana emphasizes that the prerequisite to establishing relationship with the praanalinga, the God within is understanding the vagaries of the mind and being present with the reality. Only those who have cultivated the calmness of the mind and stay in the present achieve the so called linga-anga saamarasya or merger with Him.

Let us be in the ‘present’!
KANNADA COMMENTARY

ಅರ್ಥ:

ಕನಸಿನ ಕಾಮಿನಿಯರ (ಚೆಲುವೆಯರ) ರೂಪು
ಮನಸಿಗೆ ರಮ್ಯವಾಗಿ  (ಸುಂದರ) ಕಾಣುವುದು,
ಅದು ಮನಸಿನ ಮಾಯ (ಭ್ರಮೆ) ಕಾಣಿಭೋ,
ಮನಸಿನ ಮಾಯವಳಿಯಲು (ಆ ಭ್ರಮೆಯನ್ನಳಿಯಲು)
ಕನಸಿನ ಕಾಮಿನಿಯರ ರೂಪು ಮನಸಿನಲಿಲ್ಲ ನೋಡಾ,
ಆ ಭ್ರಾಂತು ಭ್ರಮೆಗಳನಳಿದಾತನಲ್ಲದೆ (ಭ್ರಾಂತಿ ಮತ್ತು ಭ್ರಮೆಗಳನ್ನು ನಾಶ ಮಾಡಿದಾತನಲ್ಲದೆ)
ಪ್ರಾಣಲಿಂಗ ಸಂಬಂಧಿಯಲ್ಲ ಕಾಣಾ (ಪ್ರಾಣಲಿಂಗದ ಸಂಬಂಧಿಯಾಗನು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ. 

ತಾತ್ಪರ್ಯ:

ಪ್ರಾಣಲಿಂಗದ ಸಂಬಂಧ ಯಾವಾಗ ಸಾಧ್ಯವಾಗುತ್ತದೆ ಎಂಬುದನ್ನು ಇಲ್ಲಿ ಹೇಳುತ್ತಿದ್ದಾರೆ ತೋಂಟದ ಸಿದ್ಧಲಿಂಗಸ್ವಾಮಿಗಳು.

ಸತ್ಯವು ಕನಸಿನಿಂದ ದೂರವಾದದ್ದು. ಮನಸ್ಸು ಏನೇನೋ ನೆನೆಯುತ್ತದೆ, ಏನೇನೋ ಹಗಲುಗನಸು ಕಾಣುತ್ತದೆ. ಮತ್ತು  ಆ ಕನಸನ್ನೇ ನಿಜವೆಂಬ ಭ್ರಾಂತಿಗೊಳಗಾಗುತ್ತದೆ. ಮತ್ತು ಅದಕ್ಕೆ ಕನಸಿನಲ್ಲಿ, ಕಂಡದ್ದೆಲ್ಲವೂ ಬಹು ಸುಂದರವಾಗಿ ಕಾಣುತ್ತದೆ. ಆದರೆ, ಅದೆಲ್ಲವೂ ಮನಸ್ಸಿನ ಸೃಷ್ಟಿ. ಇಲ್ಲಿ ಕಾಮಿನಿಯರ ಚೆಲುವಿನ ಬಗ್ಗೆ ಹೇಳಿದ್ದಾರೆ. ಆದರೆ ಇದು ಎಲ್ಲದಕ್ಕೂ ಅನ್ವಯವಾಗುತ್ತದೆ. ಉದಾಹರಣೆಗೆ ಇಂತಿಂತಿಹ ಕಾರು ಚೆನ್ನಾಗಿದೆ, ಇಂತಿಂತಹ ತಿಂಡಿ ತಿನಿಸುಗಳು ರುಚಿಯಾಗಿವೆ, ಇಂತಿಂತಹ ವಡವೆ ವಸ್ತ್ರಗಳು ಸುಂದರವಾಗಿವೆ, ಇಂತಿಂತಹ ವ್ಯಕ್ತಿ ಅನನ್ಯನಾಗಿದ್ದಾನೆ, ಇತ್ಯಾದಿಯಾಗಿ  ನಂಬುವುದು, ಮತ್ತು ಅವುಗಳನ್ನು ಬಯಸಿ ಅವುಗಳ ಬಗ್ಗೆ ಕನಸು ಕಾಣುವುದು. ನಮ್ಮ ಮನಸ್ಸಿನ ಆಸೆಯೇ ಮಾಯೆಯಾಗಿ ಅವುಗಳು ಸುಂದರವಾಗಿವೆ ಎಂಬ ಭ್ರಮೆ ಹುಟ್ಟಿಸುತ್ತದೆ. ಅವುಗಳ ವಾಸ್ತವತೆ ನಮಗೆ ತಿಳಿದಿರುವುದಿಲ್ಲ. ಆದ್ದರಿಂದ ಅವೆಲ್ಲ ಬಹು ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತವೆ. ಅವುಗಳನ್ನು ಹೊಂದಿದ ಮೇಲೆ, ಅಥವಾ ಕೆಲವೊಮ್ಮೆ ಅವುಗಳನ್ನು ಹೊಂದದೆಯಿದ್ದಾಗ, ಅವುಗಳ ವಾಸ್ತವತೆ ನಮಗೆ ತಿಳಿಯುತ್ತದೆ. ಮನಸ್ಸಿನ ಭ್ರಾಂತಿ ಅಳಿಯುತ್ತದೆ. ಆಗ ಆ ಆಕರ್ಷಣೆ ದೂರವಾಗುತ್ತದೆ. ಆಸೆ ಅಳಿಯುತ್ತದೆ. ಆದರೆ ಆಸೆ ಅಳಿಯಲು ಅವುಗಳ ವಾಸ್ತವತೆ ಮತ್ತು ನಮ್ಮ ಮನಸ್ಸಿನ ಆಸೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ನಮ್ಮ ಮನಸ್ಸೇ ಈ ಆಸೆಗಳಿಗೆ ಮೂಲ ಕಾರಣ. ಮನಸ್ಸು “ಇದು ಸುಖಮಯ, ಇದನ್ನು ಹೊಂದಬೇಕು, ಇದು ಸುಂದರ, ಇದನ್ನು ತಾನು ಹೊಂದಬೇಕು” ಎಂದೆಲ್ಲ ಯೋಚಿಸುತ್ತದೆ, ಆದ್ದರಿಂದ ಯಾವುದೇ ಆಕರ್ಷಣೆ ಆಯಾ ವಸ್ತುವಿನಲ್ಲಿ ಇಲ್ಲ, ಅದು ನಮ್ಮ ನಮ್ಮ ಮನದಲ್ಲಿಯೇ ಇದೆ. ಆ ಆಸೆಯೇ ನಮ್ಮ ಹಗಲುಕನಸುಗಳಿಗೆ ಕಾರಣ ಎಂಬುದು ಅರ್ಥವಾಗಬೇಕು. ಮನಸ್ಸು ಏಕೆ ಹೀಗೆ ಯೋಚಿಸುತ್ತದೆ? ಎಂಬುದನ್ನು ಶಾಂತ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು.  ಆಗಮಾತ್ರ. ಆ ಆಸೆಗಳು ಅಳಿಯಲು ಸಾಧ್ಯ. ಆ ಭ್ರಮೆಗಳು ಅಳಿದಾಗ ಮನಸ್ಸು ಶಾಂತವಾಗುತ್ತದೆ ಮತ್ತು ಲಿಂಗದ ಸಂಬಂಧ ಸಾಧ್ಯವಾಗುತ್ತದೆ ಎನ್ನುತ್ತಾರೆ ಸಿದ್ಧಲಿಂಗ ಸ್ವಾಮಿಗಳು.

 

Friday, May 10, 2013

Vachana 141: Sattuga Saviyaballude – Beyond the Icon.

 VACHANA IN KANNADA

ಸಟ್ಟುಗ ಸವಿಯಬಲ್ಲುದೇ?
ಅಟ್ಟ ಮಡಕೆ ಉಣಬಲ್ಲುದೇ ಅಯ್ಯ?
ಬಟ್ಟ ಬಯಲು ಕಟ್ಟುಕುಟ್ಟಿಗೊಳಗಾಗಬಲ್ಲುದೇ?
ನಿಷ್ಟಹೀನರಿಗೆ ಲಿಂಗ ಕಟ್ಟಳೆಗೆ ಬರಬಲ್ಲುದೇ?
ಕರ ಕಷ್ಟರಿರಾ ಸುಮ್ಮನಿರಿ ಭೋ!
ಕಟ್ಟಳೆಗೆಯ್ದದ ಮಹಾ ಘನದಲ್ಲಿ
ಮನಮುಟ್ಟಿ ಹಿಮ್ಮೆಟ್ಟದೆ ಅಡಗಿದಾತನೇ
ಅಚಲಿತ ಮಾಹೇಶ್ವರನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

TRANSLITERATION

saTTuga saviyaballudE?
aTTa maDake uNaballudE ayya?
baTTa bayalu  kaTTu kuTTigoLagaagaballudE?
niShThe hInarige liMga kaTTaLege baraballudE?
kara kaShTariraa summaniri bhO!
kaTTaLEgeydada mahaa ghanadalli
manamuTTi  himmeTTade aDagidaatanE
acalita maahEshvaranu nODaa,
mahaaliMgaguru shivasiddhEshvara prabhuvE.

CLICK HERE FOR A RECITATION:
TRANSLATION (WORDS)
saTTuga  (ladle) saviyaballudE (can it taste)?
aTTa  ( cooked) maDake (the vessel in which it is) uNaballudE (can it eat) ayya (Sir)?
baTTa  baayalu (the open field)   kaTTu kuTTigoLage (boundaries) aagaballudE (can it be confined)?
niShThe (faith, devotion, trust) hInarige  (without)  liMga (God) kaTTaLege baraballudE (can it be confined)?
kara kaShTariraa (it is very difficult) summaniri bhO (Oh! keep quiet)!
kaTTaLEgeydada (that which cannot be confined)  mahaa ghanadalli (in that profound)
manamuTTi  (with all mind)  himmeTTade  (without stepping back) aDagidaatanE (one who becomes one with)
acalita (stable)  maahEshvaranu nODaa (is a Maheshvara you see),
mahaaliMgaguru shivasiddhEshvara prabhuvE. (MahaliMgaguru Shivasiddheshvara Prabhu)

 VACHANA IN ENGLISH
Can the ladle taste the food?
Can the pot in which it is cooked eat it, Sir?
Can an open field be confined to boundaries?
Can God come into the confines of those without faith?
It is very difficult, Oh! be silent!
Only one with an intense mind and becomes one with that unconfined profound, without stepping back,
Is immovable Mahesvara  (the Supreme), you see!
MahaliMga Guru Shivasiddheshvara Prabhu.
COMMENTARY
This Vachana from Sharana Thontada Siddalinga Swamigalu continues the theme of true worship from our previous two postings. It is urging us to go beyond the Icon worship and to internalize what the Icon represents, i.e. the Self and the profound principle within.
Sharanas offered Ishtalinga as an icon representing the divine principle, the Atmalinga or the God within. The Guru initiates the devotee by offering the Ishtalinga as the Icon to set him in the spiritual path. It is up to the devotee to realize the meaning of this icon and its utility in progressing on the spiritual path. The Ishtalinga will not be of much use once the faith sets in and the intense desire and devotion take over.
Stopping at the worship of Ishtalinga (or any other icon or idol) is not being one with Him. The ladle is always in touch with the food it is used to serve. But, it can never taste the food. It is separate from the food! The pot in which the food is cooked, cannot eat the food either! It is never one with the food. An open and vast field cannot be marked with boundary lines – it cannot be confined. Along the same lines, the Vachana says that the divine principle cannot come into the confines of those without faith. It is very difficult to achieve the state of true merger with Him. It cannot be just talked about. What is needed is an intense desire to follow the spiritual path, a solid determination never to step back or stray from the path and an immovable faith in reaching Him. Only those with such intense faith and perseverance can become one with Him.

Let us go beyond the idol worship!
KANNADA COMMENTARY
ಅರ್ಥ:
ಸಟ್ಟುಗ  (ಸೌಟು) ಸವಿಯಬಲ್ಲುದೇ? (ರುಚಿಕಾಣ ಬಲ್ಲುದೆ?)
ಅಟ್ಟ ಮಡಕೆ  (ಅಡುಗೆ ಮಾಡಿದ ಮಡಕೆ, ಗಡಿಗೆ) ಉಣಬಲ್ಲುದೇ ಅಯ್ಯ? (ತಾನು ಸ್ವತಃ ಉಣಬಲ್ಲುದೆ?)
ಬಟ್ಟ ಬಯಲು ಕಟ್ಟುಕುಟ್ಟಿಗೊಳಗಾಗಬಲ್ಲುದೇ? (ಬಯಲು ಹಿಡಿತಕ್ಕೆ ಬರಬಹುದೆ?)
ನಿಷ್ಟಹೀನರಿಗೆ ಲಿಂಗ ಕಟ್ಟಳೆಗೆ ಬರಬಲ್ಲುದೇ? (ಲಿಂಗ ನಿಷ್ಠೆ ಇಲ್ಲದವರ ಕೈಗೆ ಬರಬಹುದೆ?)
ಕರ ಕಷ್ಟರಿರಾ (ಹಾಗಾಗುವುದು ಬಲು ಕಷ್ಟ) ಸುಮ್ಮನಿರಿ ಭೋ! (ಸುಮ್ಮನೆ ಮಾತಾಡಬೇಡಿರಿ)
ಕಟ್ಟಳೆಗೆಯ್ದದ (ಯಾವ ಕಟ್ಟಳೆಗೂ ಒಳಗಾಗದ)  ಮಹಾ ಘನದಲ್ಲಿ ( ಮಹಾತತ್ವದಲ್ಲಿ)
ಮನಮುಟ್ಟಿ (ಮನಸ್ಸನ್ನಿಟ್ಟು) ಹಿಮ್ಮೆಟ್ಟದೆ (ಎಂದೂ ಹಿಂದೆ ಸರಿಯದೆ)  ಅಡಗಿದಾತನೇ (ಅದರಲ್ಲಿ ಅಡಗಿದವನೇ)
ಅಚಲಿತ (ಅಲ್ಲಾಡದ, ಸ್ಥಿರವಾದ)  ಮಾಹೇಶ್ವರನು ನೋಡಾ,(ಮಾಹೇಶ್ವರನು. ದೇವರಲ್ಲಿ ನಿಷ್ಠೆಯುಳ್ಳವನು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ತಾತ್ಪರ್ಯ:
ಕೇವಲ ಲಿಂಗಧಾರಣೆಯಿಂದ ಯಾವ ಪ್ರಯೋಜನವೂ ಇಲ್ಲ. ಲಿಂಗದಲ್ಲಿ ನಿಷ್ಠೆ ಇರಬೇಕಾದದ್ದು ಬಹು ಮುಖ್ಯವೆಂಬುದನ್ನು ಹೇಳುತ್ತಾರೆ.
ಸಟ್ಟುಗವು ಸದಾ ಮಾಡಿದ ಅಡುಗೆ ಪದಾರ್ಥದಲ್ಲಿದ್ದರೂ ಅದು ಆ ಅಡುಗೆಯನ್ನು ಸವಿಯಲಾರದು. ಮಡಕೆಯಲ್ಲಿಯೇ ಅಡುಗೆಯನ್ನು ಮಾಡಲಾಗುತ್ತದೆ. ಆದರೆ ಆ ಮಡಕೆ ತನ್ನಲ್ಲಿಯೇ ಇರುವ ಅಡುಗೆಯನ್ನು ಉಣಲಾರದು. ಅವೆರಡೂ ಒಂದಕ್ಕೊಂದು ಸಂಬಂಧವಿಲ್ಲದಂತೆ ಬೇರೆ ಬೇರೆಯಾಗಿಯೇ ಉಳಿಯುತ್ತವೆ.  ಬಟ್ಟ  ಬಯಲು ಯಾವ ಹಿಡಿತಕ್ಕೂ ಬರಲಾರದು. ಅದನ್ನು ಕಟ್ಟಳೆಗೆ ಒಳಪಡಿಸಲಾಗದು. ಅದೇ ರೀತಿ  ಲಿಂಗವೂ ನಿಷ್ಠೆಯಿಲ್ಲದವರಿಗೆ ಅಳವಡುವುದಿಲ್ಲ. ಅದು ಅಸಾಧ್ಯವಾದುದು. ಅದು ಮಡಕೆ ಮತ್ತು ಅದರಲ್ಲಿ ಮಾಡಿದ ಅಡುಗೆಯ ಸಂಬಂಧದಂತೆ. ಅಥವಾ ಆ ಅಡುಗೆಯಲ್ಲಿ ಆಡುವ ಸಟ್ಟುಗದ ಸಂಬಂಧದಂತೆ. ಲಿಂಗವು ಬಯಲಿನಂತೆ, ಯಾವ ಕಟ್ಟಳೆಗೂ ನಿಲುಕುವಂತಹುದಲ್ಲ. ಅಂದರೆ ನಾನು ಪೂಜೆ ಮಾಡುವ ವೇಳೇಯಲ್ಲಿ ಅದು ನನ್ನ ಮನದಲ್ಲಿ ನಿಲ್ಲಬೇಕು ಎಂದರೆ ಅದು ಸಾಧ್ಯವಿಲ್ಲ. ಅಥವಾ ಅದು ಕುರುಹಾದ ಬಾಹ್ಯ ಲಿಂಗದಲ್ಲಿ ಇರುತ್ತದೆ ಎಂದು ತಿಳಿದರೆ ಅದು ಮೂರ್ಖತನ. ಏಕೆಂದರೆ ಲಿಂಗವು ಘನ ತತ್ವ, ಅದು “ಜಗದಗಲ ಮುಗಿಲಗಲ ಮಿಗೆಯಗಲ,ಪಾತಾಳದಿದತ್ತತ್ತ..........”.  ಅಂತಹುದರ ಕೇವಲ ಕುರುಹಾದ ಲಿಂಗವನ್ನು ಕಟ್ಟಿಕೊಂಡು ಲಿಂಗವನ್ನು ತಿಳಿದವನೆಂಬುದು ಬರಿ ಮಾತು. ಸದಾ  ಎದೆಯಮೇಲೆ ಲಿಂಗವನ್ನು ಕಟ್ಟಿಕೊಂಡರೂ ಅದನ್ನು ಅರಿತಿದ್ದೇನೆ, ಎನ್ನುವುದು ಒಣ ಮಾತು. ಆದ್ದರಿಂದ ಸುಮ್ಮನೆ, ಲಿಂಗ ಧಾರಿಗಳೆಲ್ಲ ನಿಷ್ಠಾವಂತರೆಂಬ ಮಾತಾಡಬೇಡಿರಿ, ಎನ್ನುತ್ತಾರೆ ತೋಂಟದ ಸಿದ್ಧಲಿಂಗ ಸ್ವಾಮಿಗಳು. ಬಯಲು ತತ್ವವನ್ನು ಅರಿಯುವುದು ಬಲು ಕಷ್ಟ. ಏಕೆಂದರೆ ಅದು ಕಣ್ಣಿಗೆ ಕಾಣುವುದಿಲ್ಲ. ಇಂದ್ರಿಯಗಳಿಗೆ ನಿಲುಕುವಂತಹುದಲ್ಲ.  ಅದನ್ನು ನಿಷ್ಠೆಯಿಂದ ಸಾಧಿಸಬೇಕಾಗುತ್ತದೆ. ಅದು ಬಹಳ ಸೂಕ್ಷ್ಮವಾದದ್ದು. ಈಗ ಕಂಡೆ, ಇದೋ ಅರ್ಥವಾಯಿತು ಎನ್ನುವುದರಲ್ಲಿ ಜಾರಿಹೋಗುವಂತಹದು. ಅದನ್ನು ನಾನು ಕಟ್ಟಿಕೊಳ್ಳುತ್ತೇನೆ ಎಂಬುದು ಅರ್ಥವಿಲ್ಲದ ಮಾತು. ಅಂತಹ ಯಾವ ಕಟ್ಟಳೆಗೂ ಸಿಗದಂತಹ ಘನತತ್ವದಲ್ಲಿ ನಿಷ್ಠೆಯಿರಿಸಿ, ಅದರಲ್ಲಿಯೇ ಮನವನ್ನು ನಿಲ್ಲಿಸಿ ಏನೇ ಆದರೂ ಅಲ್ಲಿಂದ ಹಿಮ್ಮೆಟ್ಟದೆ ಅದರಲ್ಲಿಯೇ ಅಡಗಿ ಹೋಗುವವನೇ ನಿಜವಾದ ಮಾಹೇಶ್ವರನು ಎನ್ನುತ್ತಾರೆ.

 

Friday, May 3, 2013

Vachana 140: Udayada pooje utpattige Bija - True worship

VACHANA IN KANNADA

ಉದಯದ ಪೂಜೆ ಉತ್ಪತ್ತಿಗೆ ಬೀಜ
ಮಧ್ಯಾಹ್ನದ  ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ
ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜ
ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು
ಸದಾ ಸನ್ನಿಹಿತವಾಗಿ ಮಾಡುವ ಪೂಜೆ
ಉತ್ಪತ್ತಿ ಸ್ಥಿತಿ ಲಯಂಗಳ ಮೀರಿದ ನಿತ್ಯ  ನಿರ್ಮಲ ಪೂಜೆ ಕಾಣಾ
ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ

TRANSLITERATION

udayada pooje utpattige bIja
madhyaahnada pooje sthigatiya saMsaarakke bIja
astamayada pooje praLayakke  bIja
I udaya madhyaahna astamayada pooje kaLedu 
sadaa sannihitavaagi maaDuva pooje
utapatti sthiti layaMgaLa mIrida  nitya nirmala pooje kaaNaa
aa pooje nimmalli aDagittu kaaNaa
 mahaaliMgaguru shiva siddhEshvara prabhuve

CLICK HERE FOR A RECITATION:
http://youtu.be/tSBtAWDjk9Y
TRANSLATION (WORDS)

udayada   (morning)  pooje  (worship)  utpattige (for the birth,origin) bIja (is the  seed)
madhyaahnada (midday)  pooje (worship)  sthigatiya  (for the  condition of, existence of, state of ) saMsaarakke (worldly affairs)  bIja (is the seed)
astamayada (evening) pooje (worship)  praLayakke (for destruction)   bIja (is the seed)
I (this) udaya  (morning) madhyaahna (midday)  astamay (evening)  pooje (worship) kaLedu (leaving aside)
sadaa (always)  sannihitavaagi (being near)  maaDuva pooje (worshipping)
utapatti (birth)  sthiti  (condition,  existence, state ) layaMgaLa (of destruction) mIrida  (beyond) nitya ( always, eternal)  nirmala (pure)  pooje kaaNaa (is worship you see)
aa (that)  pooje (worship)  nimmalli (in you)  aDagittu  (is hidden) kaaNaa (you see)
mahaaliMgaguru shiva siddhEshvara prabhuve (Mahalinga guru siddheshvara Prabhuve)

VACHANA IN ENGLISH

The morning worship is the seed for the birth.
The midday worship is the seed for the state of worldly affairs.
The evening worship is the seed for destruction.
Leaving aside these morning, midday and evening worships,
Worshipping always being near Him,
Is the pure and eternal worship that is beyond the birth, existence and destruction, you see!
That worship is hidden in yourself, you see!
Mahalinga guru siddheshvara Prabhuve!

COMMENTARY

This Vachana from Sharana Siddalinga yathigalu further emphasizes the concept of true worship portrayed by Allama Prabhu in the previous posting.
The morning worship is the seed of birth. It is in the morning that we plan our day. All the important tasks to be done and problems to be solved start jamming our mind. Our mind starts wandering towards these and wonders what we should do, instead of staying set on Him. Thus, morning worship is the seed for the birth of problems of the day.

By midday, we will have solved some problems and will have created more. We would rather devote our minds and thoughts towards the analysis of the state of these problems (determining the state of worldly affairs).  Thus the midday worship is the seed for analyzing the state of worldly affairs.
The evening presents us the opportunity to analyze what happened all day, rejoice on the issues resolved satisfactorily and brood on the issues that did not go our way. While this session can be considered as the one for destruction of our concentration on worldly affairs, it is still a routine and a ritual. It does not allow us to be close to Him.
While forcing ourselves to worship one, two, three or several times a day and at fixed times gives us the discipline to worship, it can just become a ritual.  Siddalinga yathigalu is suggesting leaving aside the ritualistic morning, midday, evening worship constraints and practice a mode of worship wherein we are thinking of Him constantly and all day.
Thinking of Him constantly is the process of gaining awareness of the divine principle. Such awareness once gained makes the ups and downs of the worldly affairs of no consequence. It brings us the equanimity to take ups and downs with appropriate stride.
Such worship is the true worship and it destroys all the birth, existence and destruction influences. Such worship is hidden in Him. Further, such worship is completely within us. It is up to us to develop such worshipping mode. No one else can teach it to us or force it on us.

Let us invite Him to be with us all day long!

KANNADA COMMENTARY

ಅರ್ಥ:

ಉದಯದ ಪೂಜೆ (ಬೆಳಗಿನ ಪೂಜೆ)  ಉತ್ಪತ್ತಿಗೆ ಬೀಜ (ಹುಟ್ಟಿಗೆ ಬೀಜ. ಮೂಲ)
ಮಧ್ಯಾಹ್ನದ  ಪೂಜೆ (ಮಧ್ಯಾಹ್ನದ ಪೂಜೆ)  ಸ್ಥಿತಿಗತಿಯ (ನಡೆಯುತ್ತಿರುವ ರೀತಿ)  ಸಂಸಾರಕ್ಕೆ (ದಿನ ನಿತ್ಯದ ಬದುಕು) ಬೀಜ (ಮೂಲ)ಅಸ್ತಮಯದ (ಸಾಯಂಕಾಲದ )  ಪೂಜೆ ಪ್ರಳಯಕ್ಕೆ ಬೀಜ (ಪೂಜೆ ಸರ್ವನಾಶಕ್ಕೆ ಬೀಜ)
ಈ ಉದಯ ಮಧ್ಯಾಹ್ನ ಅಸ್ತಮಯದ ಪೂಜೆ ಕಳೆದು (ಈ ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲದ ಪೂಒಜೆಯನ್ನು ಬಿಟ್ಟು)ಸದಾ (ಯಾವಗಲೂ) ಸನ್ನಿಹಿತವಾಗಿ (ಹತ್ತಿರದಲ್ಲಿದ್ದು) ಮಾಡುವ ಪೂಜೆ (ಕೈಗೊಳ್ಳುವ ಪೂಜೆ)
ಉತ್ಪತ್ತಿ ಸ್ಥಿತಿ ಲಯಂಗಳ  (ಹುಟ್ಟು, ಸ್ಥಿತಿ, ನಾಶಗಳನ್ನು) ಮೀರಿದ  (ಮೀರಿದ, ದಾಟಿದ) ನಿತ್ಯ (ಸದಾ ಇರುವಂತಹುದು) ನಿರ್ಮಲ (ಶುದ್ಧವಾದ) ಪೂಜೆ ಕಾಣಾ (ಪೂಜೆ ನೋಡು)
ಆ ಪೂಜೆ ನಿಮ್ಮಲ್ಲಿ ಅಡಗಿತ್ತು ಕಾಣಾ (ಅಂತಹ ಪೂಜೆ ನಿಮ್ಮಲಿಯೇ ಅಡಗಿರುತ್ತದೆ)
ಮಹಾಲಿಂಗಗುರು ಶಿವ ಸಿದ್ಧೇಶ್ವರ ಪ್ರಭುವೆ. 

ತಾತ್ಪರ್ಯ:

ಇದು ಸಿದ್ಧಲಿಂಗ ಯತಿಗಳ ವಚನ. ಅಲ್ಲಮರ ಹಿಂದಿನ ವಚನದಲ್ಲಿ ಹೇಳಿದ ವಿಷಯವನ್ನೆ ಇಲ್ಲಿ ವಿಶದವಾಗಿ ಹಾಗೂ ಸ್ವಾರಸ್ಯಪೂರ್ಣವಾಗಿ  ಹೇಳುತ್ತಿದ್ದಾರೆ.
ಅವರು, ಉದಯದ ಪೂಜೆ ಉತ್ಪತ್ತಿಗೆ ಬೀಜವೆನ್ನುತ್ತಾರೆ.  ಅದು ಯಾವುದರ ಉತ್ಪತ್ತಿಗೆ ಬೀಜ? ಉದಯದಲ್ಲಿ ಎದ್ದು ಶುಚಿರ್ಭೂತರಾಗಿ ಪೂಜೆ ಮಾಡುವುದು ಒಂದು ಅಭ್ಯಾಸವಾಗುತ್ತದೆ. ರಾತ್ರಿಯೆಲ್ಲ ವಿಶ್ರಾಂತಿ ಪಡೆದು ಮನಸ್ಸು ಬೆಳಗ್ಗೆ ದಿನ ನಿತ್ಯದ ಬದುಕಿಗೆ ಹೊಂದಿಕೊಳ್ಳಲು ತೊಡಗುತ್ತದೆ. ಅಂದರೆ ಪೂಜೆ ಮಾಡುವಾಗಲೆ ದಿನನಿತ್ಯದ ಬದುಕಿನ ಬಗ್ಗೆ ಯೋಚಿಸಲು ತೊಡಗುತ್ತದೆ.  ಅಂದರೆ ಸಂಸಾರದ ಚಿಂತೆಗಳ ಉತ್ಪತ್ತಿ ಯಾಗುತ್ತದೆ. ಬೆಳಗಿನ ಪೂಜೆಯ ಕಾಲದಲ್ಲಿಯೇ ಇಡೀ ದಿನದ ಚಿಂತೆ ಹುಟ್ಟುತ್ತದೆ. ಆದ್ದರಿಂದ ಉದಯದ ಪೂಜೆ ಉತ್ಪತ್ತಿಗೆ ಬೀಜವಾಗುತ್ತದೆ ಎನ್ನುತ್ತಾರೆ.  

ಇನ್ನು ಮಧ್ಯಾಹ್ನದ ಪೂಜೆ ಸ್ಥಿತಿಗತಿಯ ಸಂಸಾರಕ್ಕೆ ಬೀಜ ಎನ್ನುತ್ತಾರೆ. ಈ ಮಧ್ಯಾಹ್ನದ ಪೂಜೆ ಯಾಂತ್ರಿಕವಾಗುತ್ತದೆ. ಅದೇ ಸಮಯದಲ್ಲಿ ಮನವೆಲ್ಲ ಉದಯದಲ್ಲಿ ಹುಟ್ಟಿದ್ದ ಸಂಸಾರದ ಚಿಂತೆಗಳ ಸ್ಥಿತಿಗತಿಯೇ ತುಂಬಿರುತ್ತದೆ. ಸಂಸಾರದಲ್ಲಿ ಉಂಟಾದ ಸಮಸ್ಯೆಗಳ ಪ್ರಸಂಗಗಳನ್ನು ಹೇಗೆ ನಿಭಾಯಿಸುವುದು? ಯಾವುದು ಸುಖಕರ? ಸುಖಕರವಾದುದನ್ನು ಹೇಗೆ ಉಳಿಸಿಕೊಳ್ಳುವುದು? ಯಾವುದು ಕಷ್ಟದಾಯಕ? ಕಷ್ಟಕರವಾದುದನ್ನು ಹೇಗೆ ನಿವಾರಿಸಿಕೊಳ್ಳುವುದು? ಇತ್ಯಾದಿ ಚಿಂತೆಗಳು ಮನವೆಲ್ಲ ಆಕ್ರಮಿಸಿಕೊಂಡಿರುತ್ತವೆ.  

ಅಸ್ತಮಯದ ಪೂಜೆ ಪ್ರಳಯಕ್ಕೆ ಬೀಜವೆನ್ನುತ್ತಾರೆ. ಸಾಯಂಕಾಲದ ವರೆಗೆ ಈ ಸಂಸಾರದ ಕೋಟಲೆಗಳು ವ್ಯಕ್ತಿಯನ್ನು ಘಾಸಿಮಾಡಿ ಆತನ ಪಾಲಿಗೆ ಪ್ರಳಯವೇ ಆಗಿಬಿಡುತ್ತವೆ. ಇದೆಲ್ಲ ಆಗುವುದೇ ಆತ ಮನಮುಟ್ಟಿ ಪೂಜಿಸದೆ ಇರುವುದರಿಂದ. ಕೇವಲ ಸಮಯದ ಕಟ್ಟಳೆಗೆ ಕಟ್ಟು ಬಿದ್ದು ಮಾಡುವ ಪೂಜೆಯಲ್ಲಿ ಭಕ್ತಿಯ ಲವಲೇಶವೂ ಇರುವುದಿಲ್ಲ. ಆದ್ದರಿಂದ ಹೀಗೆ ಸಮಯ ಸಮಯಕ್ಕೆ ಮಾತ್ರ ಪೂಜೆಯನ್ನು ಮಾಡದೆ ಸಮಯದ ಮಿತಿಯನ್ನು ಮೀರಿ ಪೂಜೆ ಮಾಡಿದರೆ,  ಮನಸ್ಸು  ಸದಾ ದೇವರ ಸನ್ನಿಧಿಯಲ್ಲಿದ್ದರೆ ಅಂತಹ ಪೂಜೆ ಉತ್ಪತ್ತಿ ಸ್ಥಿತಿ ಲಯಗಳನ್ನು ಮೀರಿದ ಪೂಜೆಯಾಗಿ ದೇವರಲ್ಲಿಯೇ ಅಡಗಿರುತ್ತದೆ. ಅಂತಹ ಪೂಜೆ ನಿತ್ಯವಾದದ್ದು ಮತ್ತು ನಿರ್ಮಲವಾದದ್ದು ಎನ್ನುತಾರೆ.  

ಸದಾ ದೇವರ ಸನ್ನಿಧಿಯಲ್ಲಿರುವುದು ಎಂದರೇನು? ಕಣ್ಣಿಗೆ ತೋರಿಬರುವ ಈ ವಿಶ್ವದ ಹಿಂದೆ ಇರುವ ತತ್ವವನ್ನು ಅರಯುವುದು. ಅದನ್ನು ಅರಿತಾಗ ಸಂಸಾರದ ಕೋಟಲೆಗಳು ಕೋಟಲೆಗಳೆಂದು ಅನ್ನಿಸುವುದೇ ಇಲ್ಲ. ನಿಜವಾದ ಪೂಜೆ ಅದು. ಅದನ್ನು ಮಾಡದೆ ವೇಳೆ ವೇಳೆಗ ಸರಿಯಾಗಿ ಯಾಂತ್ರಿಕವಾಗಿ ಆಡಂಬರದ ಬಾಹ್ಯ ಪೂಜೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ ಅಲ್ಲದೆ ಸಂಸಾರವು ಆತನನ್ನು ಇಡಿಯಾಗಿ ಆವರಿಸಿಕೊಳ್ಳುತ್ತದೆ ಎನ್ನುತ್ತಾರೆ ಸಿದ್ಧಲಿಂಗ ಯತಿಗಳು.