Friday, April 26, 2013

Vachana 139: Hottaare Poojisalu Beda – True worship

VACHANA IN KANNADA

ಹೊತ್ತಾರೆ ಪೂಜಿಸಲು ಬೇಡ ಕಂಡಾ
ಬೈಗೆ ಪೂಜಿಸಲು ಬೇಡ ಕಂಡಾ
ಇರುಳುವನು ಹಗಲುವನು ಕಳೆದು ಪೂಜಿಸಲು ಬೇಕು ಕಂಡಾ
ಇಂತಪ್ಪ ಪೂಜಿಯ ಪೂಜಿಸುವರ
ಎನಗೆ ತೋರಯ್ಯಾ ಗುಹೇಶ್ವರಾ


TRANSLITERATION
hottaare poojisalu bEDa kaMDaa
baige poojisalu bEDa kaMDaa
iruLuvanu  hagaluvanu kaLedu poojisalu bEku kaMDaa
iMtappa poojeya poojisuvavara
enage tOrayyaa guhEshvaraa

CLICK HERE FOR A RECITATION: 

http://youtu.be/Q9WFj_r7zSc

TRANSLATION (WORDS)
hottaare (in the  morning ) poojisalu  (worship)  bEDa (don’t)  kaMDaa( you see)
baige (in the evening)  poojisalu (worship)  bEDa (don’t) kaMDaa (you see)
iruLuvanu  (the night) hagaluvanu (the morning)  kaLedu ( leaving, ignoring)  poojisalu (worshiping)  bEku  (is needed) kaMDaa(you see)
iMtappa  (of this kind) poojeya  (worship)  poojisuvavara   (people  worshipping)
enage (to me) tOrayyaa  (show) guhEshvaraa (Guheshvara)

VACHANA IN  ENGLISH
Don’t worship in the morning, you see!
Don’t worship in the evening, you see!
You need to worship ignoring night and day, you see!
Please show me the ones who worship this way, Oh Guhesvara!

 COMMENTARY
In this Vachana, Allama Prabhu is urging us to make our daily life a ‘worship’.  Some are not interested in worshipping at all. Some worship at special occasions such as a festival, buying a new car, moving into a new house, just before the examination begins, etc. Some make it a part of their life in the sense that they follow a specific schedule for worshipping, devoting a time in the morning, afternoon or evening. This schedule is a routine they follow. They get into the worshipping mode at the specified time. It is a routine, a ritual whether they are in the mood to worship or not. Allama Prabhu is indicating that such worship is not what is needed, because this is a ritual than a true worship. What is needed is a worship that spans every moment of one’s life; every activity is devoted to Him and every breath remembers Him.

In this rat race of our daily lives, it is hard to get a free moment to think of God, let alone taking time to worship Him. Being successful in this materialistic life we hardly feel the need for God mindedness. We justify that the hard work we do and become proud of our achievements. Yet, when a disaster strikes, we involuntarily think of God and even pray for a solution. We start following routine and ritualistic worship.
Allama Prabhu is advocating worshipping, not as a ritual, but as a part of every moment of our life. This means, seeing Him in everyone around us, realizing everything we have is His and dedicated to His service.
Couple of popular bhajans convey this thought very well.  One of the works of Dasa philosophers says “ Sadaa enna hrudayadalli vaasa maado Srihari….  Oh, Lord please dwell in my heart every moment”.  Another popular Bhajan  goes “ har pal pal aur chin chin rahe naam tumara mere man me … let Your name be in my mind every breath and moment”. 

Let us lead a life of worship
 
KANNADA COMMENTARY

ಅರ್ಥ:
ಹೊತ್ತಾರೆ (ಬೆಳಗ್ಗೆ) ಪೂಜಿಸಲು (ಪೂಜೆಮಾಡುವುದು) ಬೇಡ ಕಂಡಾ (ಬೇಡ ನೋಡು)
ಬೈಗೆ (ಸಾಂಕಾಲ) ಪೂಜಿಸಲು (ಪೂಜಿಸುವುದು)  ಬೇಡ ಕಂಡಾ (ಬೇಡ ನೋಡು)
ಇರುಳುವನು (ರಾತ್ರಿಯನ್ನು ) ಹಗಲುವನು (ಹಗಲನ್ನು. ದಿನವನ್ನು)  ಕಳೆದು   (ಬಿಟ್ಟು) ಪೂಜಿಸಲು ಬೇಕು ಕಂಡಾ (ಪೂಜಿಸುವುದು ಬೇಕು ನೋಡಾ)
ಇಂತಪ್ಪ (ಈ ರೀತಿಯಾಗಿ) ಪೂಜಿಯ ಪೂಜಿಸುವರ (ಪೂಜೆಯ ಮಾಡುವವರನ್ನು)
ಎನಗೆ ತೋರಯ್ಯಾ ಗುಹೇಶ್ವರಾ (ನನಗೆ ತೋರಿಸಯ್ಯ ಗುಹೇಶ್ವರ) 
ತಾತ್ಪರ್ಯ:

ಇಲ್ಲಿ ಪೂಜೆ ಎಂಬುದು ಸಮಯದ ಕಟ್ಟಳೆಗೆ ಒಳಗಾಗಬಾರದು ಎಂಬುದನ್ನು ಹೇಳುತ್ತಾರೆ ಅಲ್ಲಮರು. ಹಲವರು,  ಈಗ ಬೆಳಗಾಯಿತು.  ಇದು ಬೆಳಗಿನ ಪೂಜೆಯ ಸಮಯ ಎಂದು ಭಾವಿಸಿ  ಪೂಜೆ ಮಾಡುತ್ತಾರೆ. ಈಗ ಸಾಯಂಕಾಲ. ಈಗ ಸಾಯಂಕಾಲದ  ಪೂಜೆಯ ವೇಳೆಯಾಯಿತು ಎಂದು ಪೂಜೆ ಮಾಡುತ್ತಾರೆ. ಇದು ಈಗ ಪೂಜೆ ಮಾಡುವ ವೇಳೆಯಾಯಿತು ಎಂದು ಕಾಟಾಚಾರಕ್ಕೆ ಮಾಡುವ ಪೂಜೆ ಅಷ್ಟೆ, ಈ ರೀತಿಯ ಪೂಜೆಗೆ ಯಾವ ಅರ್ಥವೂ  ಇಲ್ಲ ಎನ್ನುತ್ತಾರೆ ಅಲ್ಲಮರು. ಸಮಯದ ಕಟ್ಟಳೆಗೆ ಸಿಕ್ಕಿಕೊಂಡು ಮಾಡುವ ಬಾಹ್ಯ ಪೂಜೆ ವ್ಯರ್ಥ. ಏಕೆಂದರೆ ಅಲ್ಲಿ ನಿಜವಾದ ಭಕ್ತಿ ಇಲ್ಲ. ಅದು ಯಾಂತ್ರಿಕವಾದದ್ದು. ಆದ್ದರಿಂದ ಅಲ್ಲಮರು, ಇರುಳು ಹಗಲುಗಳನ್ನು ಬಿಟ್ಟು ಅಂದರೆ ಕಾಲದ ಕಟ್ಟಳೆಯನ್ನು ಮೀರಿ ಪೂಜಿಸುವವರನ್ನು ನನಗೆ ತೋರಿಸು ಎಂದು ಹೇಳುತ್ತಾರೆ. ಈ ಮೂಲಕ ಅವರು ಬಾಹ್ಯ ಪೂಜೆಗೆ ಯಾವ ಬೆಲೆಯೂ ಇಲ್ಲ, ಮಾನಸಿಕವಾಗಿ ಸದಾ ಲಿಂಗವನ್ನು ನೆನೆಯುವದು ಮುಖ್ಯ ಎಂದು ಹೇಳುತ್ತಾರೆ. ಸದಾ ಆ ಲಿಂಗದ ಧ್ಯಾನದಲ್ಲಿರುವುದು ನಿಜವಾದ ಭಕ್ತಿ. ಆ ನಿರಂತರ ಭಕ್ತಿಗೆ ತಕ್ಕಂತೆ ಸದಾ ಬಾಹ್ಯ ಪೂಜೆಯಲ್ಲಿಯೇ ನಿರತವಾಗಿರುವುದು ಅಸಾಧ್ಯ. ಆದರೆ ಬದುಕಿನ ಎಲ್ಲ ಕ್ರಿಯೆಗಳು ಪೂಜೆಯಂತೆಯೇ ನಡೆಯಬೇಕು. ಈ ಬದುಕಿನೊಂದಿಗೆ ಆ ಲಿಂಗದ ಮಾನಸ ಪೂಜೆಯೂ ನಡೆಯುತ್ತಿರಬೇಕು. ಅದು ಕಾಲದ ಕಟ್ಟಳೆಗೆ ಸಿಲುಕದ ಪೂಜೆಯಾಗುತ್ತದೆ. ಅಂತಹ ಪೂಜೆ ಮಾಡುವವರನ್ನು ತೋರಿಸು ಎನ್ನುತ್ತಾರೆ ಅಲ್ಲಮರು.



http://youtu.be/Q9WFj_r7zSc

1 comment:

  1. If only we could live with that awareness and see the divine in all, every moment of our life, there would be no conflict, internal or external. I see why Allama Prabhu was such a great vachana kaara; his vachanas are simple, direct and filled with wisdom.

    ReplyDelete