VACHANA IN KANNADA
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ,
ಅಂಗಸಂಗಿಗಳೆಲ್ಲಾ ಮಹಾಘನವನರಿಯದೆ ಹೋದಿರೋ
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ.
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ,
ಅಂಗಸಂಗಿಗಳೆಲ್ಲಾ ಮಹಾಘನವನರಿಯದೆ ಹೋದಿರೋ
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ.
TRANSLITERATION
oDaluviDidu paaShaaNakke haMgigaraadirallaa,
aMgasaMgigaLellaa mahaaghanavanariyade hOdirO!husiyane koydu husiyane poojisi
gasaNigoLagaadaru guhEshvaraa.
CLICK HERE FOR A RECITATION OF THE VACHANA:
http://youtu.be/_N-p47QjwJ0
TRANSLATION (WORDS)

oDaluviDidu (obsessed by the body) paaShaaNakke (to the stone god) haMgigaraadirallaa (obligated),
aMgasaMgigaLellaa (all those who live for the body) mahaaghanavanariyade hOdirO (wasted life not knowing the profound)!
husiyane koydu (those who collect flowers with false devotion) husiyane poojisi (worship icon with false devotion)
gasaNigoLagaadaru (will succumb to worldly troubles) guhEshvaraa (Guheshvara).
VACHANA IN ENGLISH
Alas, obsessed by the body, you got obligated to the stone (God),
All those who live for the body, wasted life not knowing the profound!
Collecting flowers with false devotion, worshipping the icon with false devotion,
Succumbed to worldly troubles, Oh Guhesvara!
COMMENTARY
In previous posting we said that the body composing of the sense organs should be used as a ladder to reach the profound knowledge. In this Vachana, Allama Prabhu advocates not to be obsessed with the body (i.e. worldly mundane activities, roles and pleasures) and devote life to know the profound. Only when the profound is realized, the worldly ups and downs, pleasures and pains would be of no consequence.

Allama Prabhu says that you offer water and food to the stone icon believing it to be the profound. You consume that water and food as ‘prasaada’ from God. Essentially, you have made the God to be in your form and use Him to quench your thirst and hunger. You collect flowers and worship the stone icon believing completely that it is the God. Collecting flowers with false devotion you are worshipping the icon with false devotion. Being immersed in these mundane activities you are wasting your life not devoting it to realize the Profound, the Self within.
If we are completely immersed in our mundane worldly activities, we will be subjected to the ups and downs and will be affected by them. When we reach the profound knowledge, we achieve the equanimity that makes us not sway from the worldly ups and downs. Routine and ritualistic worshipping of icons without realizing the meaning behind them is a waste of life according to Allama Prabhu.
Let us go beyond materialistic world!
Let us go beyond materialistic world!
KANNADA COMMENTARY
ಒಡಲುವಿಡಿದು (ಹೊಟ್ಟೆಗಾಗಿ, ದೇಹದಲ್ಲಿ ಆಸಕ್ತಿ ತಾಳಿ) ಪಾಷಾಣಕ್ಕೆ (ಕಲ್ಲಿಗೆ, ಕಲ್ಲ ಲಿಂಗಕ್ಕೆ) ಹಂಗಿಗರಾದಿರಲ್ಲಾ ( ಹಂಗಿಗೆ ಒಳಗಾಗಿದ್ದೀರಿ),
ಅರ್ಥ:
ಅಂಗಸಂಗಿಗಳೆಲ್ಲಾ (ಹೊಟ್ಟೆಗಾಗಿ ಬದುಕುವವರು, ದೇಹಸುಖದಲ್ಲಿ ಮಗ್ನರಾದವರು) ಮಹಾಘನವನರಿಯದೆ ಹೋದಿರೋ (ಈ ವಿಶ್ವದ ಹಿಂದೆ ಅಡಗಿರುವ ಮಾಹಾತತ್ವವನ್ನು ಅರಿಯದೆ ಹೋದಿರಿ)!
ಹುಸಿಯನೆ ಕೊಯ್ದು (ಹುಸಿಯಾದ ಭಕ್ತಿಯಿಂದ ಹೂವುಗಳನ್ನು ಕೊಯ್ದುತಂದು) ಹುಸಿಯನೆ ಪೂಜಿಸಿ (ಅರ್ಹವನ್ನು ತಿಲಿಯದೆ ಕೇವಲ ಕುರುಹನ್ನು ಪೂಜಿಸಿ)
ಗಸಣಿಗೊಳಗಾದರು ( ಸಂಸಾರದ ಕೋಟಲೆಗೆ ಒಳಗಾದರು) ಗುಹೇಶ್ವರಾ.
ಕಲ್ಲಿನ ದೇವರನ್ನು ನಾನೇಕೆ ಪೂಜಿಸುತ್ತೇನೆ? ಇದಕ್ಕೆ ಬೇರೇನಾದರೂ ಅರ್ಥವಿದೆಯೆ? ಈ ವಿಶ್ವದ ಹಿಂದೆ ಯಾವ ತತ್ವವಿದೆ? ಈ ಜೀವ ಯಾರು? ಎಂದೆಲ್ಲ ಏನೇನೂ ಯೋಚಿಸುವುದಿಲ್ಲ. ಹಾಗಾಗಿ ವಿಶ್ವದ ಹಿಂದೆ ಅಡಗಿರುವ ಮಹಾಘನ ತತ್ವದ ಅರಿವು ಅವರಿಗಾಗುವುದಿಲ್ಲ. ಕೇವಲ ಕಣ್ಣ ಮುಂದಿರುವುದಷ್ಟೇ ನಿಜವೆಂಬ ಅಜ್ಞಾನದಲ್ಲಿ ಮುಳುಗಿರುತ್ತಾರೆ. ಈ ಅಜ್ಞಾನದ ಕಾರಣದಿಂದ ಬಾಹ್ಯ ಪೂಜೆಯೆ ನಿಜವಾದ ಭಕ್ತಿಯೆಂದು ಭಾವಿಸಿ ಹುಸಿಯಾದ ಭಕ್ತಿಯಿಂದ ಹೂ ಪತ್ರೆಗಳನ್ನು ಕೊಯ್ದುತಂದು ಕಲ್ಲಿನ ದೇವರನ್ನು ಪೂಜಿಸುತ್ತಾರೆ. ಈ ಅಜ್ಞಾನದ ಕಾರಣದಿಂದಲೇ ಸಂಸಾರದ ಕೋಟಲೆಗೊಳಗಾಗುತ್ತಾರೆ.
ಸಂಸಾರದ ಕೋಟಲೆ ಎಂದರೇನು? ಸಂಸಾರದಲ್ಲಿ ಇದ್ದ ಬಳಿಕ ಅನೇಕ ಕಷ್ಟಗಳು, ಸಾವು ನೋವುಗಳು, ಚಿಂತೆಗಳು ಮನುಷ್ಯನನ್ನು ಕಾಡುತ್ತವೆ. ಇವುಗಳಿಂದ ಆತನು ಘಾಸಿಗೊಂಡು ಖಿನ್ನನಾಗುತ್ತಾನೆ. ಆದರೆ ವಿಶ್ವದ ಹಿಂದೆ ಅಡಗಿರುವ ತತ್ವವನ್ನು ಅರಿತವನು ಈ ಕೋಟಲೆಗಳನ್ನು ನೋಡುವ ದೃಷ್ಟಿಯೇ ಬೇರೆಯಾಗುತ್ತದೆ. ಅವುಗಳು ಆತನ ಬದುಕಿನಲ್ಲಿ ಬಂದರೂ ಆತನು ಅವುಗಳಿಂದ ನೋವಿಗೆ ಒಳಗಾಗುವುದಿಲ್ಲ. ಏಕೆಂದರೆ ಆ ಕಷ್ಟಗಳ ಮೂಲಕಾರಣ ಆತನಿಗೆ ವಿದಿತವಾಗುತ್ತದೆ. ಅದು ತಾನೇ ಮಾಡಿಕೊಂಡದ್ದೆಂದು ಆತನು ಅರಿಯುತ್ತಾನೆ.
ಆದ್ದರಿಂದ ಕೇವಲ ದೇಹದ ಚಿಂತೆಯಲ್ಲಿಯೇ ಮಗ್ನನಾಗದೆ ಆತ್ಮನನ್ನು ಅರಿಯುವುದರಲ್ಲಿ ತೊಡಗಬೇಕು ಎನ್ನುತ್ತಾರೆ ಅಲ್ಲಮರು.
No comments:
Post a Comment