Saturday, April 13, 2013

Vachana 137: Neevu Hottippa Veshada Tatvava Tilidu – The Body as the Ladder


VACHANA IN KANNADA
ನೀವು ಹೊತ್ತಿಪ್ಪ ವೇಷದ ತತ್ವವ ತಿಳಿದು ನೋಡಿರಣ್ಣಾ
ಜ್ಞಾನ ಬಿತ್ತಿಗೆಯ ಮೇಲೆ ನಿಂದು ಅಂಗದ ನಿಚ್ಚಣಿಕೆಯನಿಕ್ಕಿ
ಒತ್ತಿನಿಂದರೆ ಉತ್ತರ ಜ್ಞಾನವೆಂಬುದು ನಿಮ್ಮ ಒತ್ತಿನಲ್ಲಿಪ್ಪುದು,
ಇದ ನೋಡಿದರೆ ನಿಶ್ಚಯ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ

TRANSLITERATION
nIvu hottipppa vEShadalli  tatvava tiLidu nODiraNNaa
j~jaana bittigeya mEle niMdu aMgada niccaNikeyanikki
otti niMdare uttaraj~jaanaveMbudu nimma ottinallippudu,
ida nODidare niScaya, basavapriya kUDalacennabasavaNNa

CLICK HERE FOR RECITATION:
http://youtu.be/TW9IeOPwMm8

TRANSLATION (WORDS)
nIvu hottipppa vEShadalli  ( in the guise that you have put on)  tatvava (principle) tiLidu nODiraNNaa (please understand oh! brothers)
j~jaana (knowledge) bittigeya  (the wall of)  mEle niMdu  (standing on) aMgada  ( body) niccaNikeyanikki keeping the ladder of)
otti  (pressing)  niMdare (standing)  uttaraj~jaanaveMbudu  (the higher knowledge) nimma ottinallippudu (will be next to you),
ida nODidare (if you see this)  niScaya (for sure), bsavapriya kUDalacennabasavaNNa (Basavapriya Kudalachennabasavanna)

VACHANA IN ENGLISH
Please understand the principle behind the guise you have put on oh! brothers.
Standing on the wall of knowledge and setting up the body as ladder,
If held firmly, the profound knowledge will be close to you!
This is for sure, if you see this! Basavapriya Kudalachennabasavanna!

COMMENTARY
In this Vachana, Sharana Hadapada Appanna stresses that we have everything we need to achieve the profound knowledge; we should only realize how to use what we have.
We play various roles in our lives – father, son, mother, daughter, executive, worker, etc. It is important to realize the principle behind each of the roles we play. We should develop the attitude of a keen inspection and probing into what we have and how to use it to achieve the knowledge of the profound.
Appanna asks us to stand on the wall of the knowledge (inherently in us) and use the body as the ladder and scale up firmly. We will then be close to the profound knowledge.
 It is important to understand the concept of firmly holding the body or pressing it as the Vachana says. The body corresponds to the sense organs. If these sense organs are left to themselves, they take over and push one into mundane materialistic activities. If they are suppressed, they become twice strong and drag the individuals further into mundane. They need to be kept in their place. They need to be used for the purpose they are for; neither suppressed, nor over indulged in them! When we hold firm in this manner, the profound knowledge will be within our reach.   
The profound knowledge is that higher knowledge, the realization of the Self. It is inherently in us. We need to use the instrument given to us (our body) to reach it.  If pressed properly, this knowledge is reachable! It should be our goal!

Let us press forward to realize the self!

KANNADA COMMENTARY

ಅರ್ಥ:
ನೀವು ಹೊತ್ತಿಪ್ಪ (ನೀವು ಹಾಕಿಕೊಂಡ , ನೀವು ಧರಿಸಿರುವ)  ವೇಷದಲ್ಲಿ  (ವೇಷದಲ್ಲಿರುವ) ತತ್ವವ (ಅರ್ಥವನ್ನು) ತಿಳಿದು ನೋಡಿರಣ್ಣಾ (ತಿಳಿದು ನೋಡಿರಿ)
ಜ್ಞಾನ ಬಿತ್ತಿಗೆಯ (ಜ್ಞಾನವೆಂಬ ಗೋಡೆಯ)  ಮೇಲೆ ನಿಂದು  (ಮೇಲೆ ನಿಂತು)  ಅಂಗದ ನಿಚ್ಚಣಿಕೆಯನಿಕ್ಕಿ (ದೇಹವೆಂಬ ಏಣಿಯನ್ನು ಇಟ್ಟು)
ಒತ್ತಿನಿಂದರೆ  (ಅದನ್ನು ಒತ್ತಿ ನಿಂತರೆ, ಅದರ ಸ್ಥಾನದಲ್ಲಿ ಅದನ್ನು ಒತ್ತಿ ನಿಲ್ಲಿಸಿದರೆ) ಉತ್ತರ ಜ್ಞಾನ (ಅದನ್ನು ಮೀರಿದ ಜ್ಞಾನ ) ವೆಂಬುದು ನಿಮ್ಮ ಒತ್ತಿನಲ್ಲಿಪ್ಪುದು,(ನಿಮ್ಮ ಬಳಿಯಲ್ಲಿಯೇ ಇರುವುದು)
ಇದ ನೋಡಿದರೆ ನಿಶ್ಚಯ,( ಇದನ್ನು ನೋಡಿದರೆ, ತಿಳಿದುಕೊಂಡರೆ  ನಿಶ್ಚಯವಾಗಿ ಸಿಗುತ್ತದೆ) ಬಸವಪ್ರಿಯ ಕೂಡಲಚೆನ್ನಬಸವಣ್ಣ

ತಾತ್ಪರ್ಯ:


ಇದು ಹಡಪದ ಅಪ್ಪಣ್ಣನವರ ವಚನ. ಇಲ್ಲಿ ಅವರು ಜ್ಞಾನ ಪಡೆಯಲು ಏನು ಮಾಡಬೇಕು ಎಂಬುದನ್ನು ಹೇಳುತ್ತಿರುವರು.
ತಾವು ಹೊತ್ತ ವೇಷದ ತತ್ವವನ್ನು ತಿಳಿಯಬೇಕು. ಎಂದರೆ, ಜನರು ಈ ಜಗದಲ್ಲಿ ಬೇರೆ ಬೇರೆ ಪಾತ್ರಧಾರಿಗಳಾಗಿದ್ದಾರೆ. ಆ ಪಾತ್ರಗಳ ಹಿಂದೆ ಇರುವ ನಿಜವನ್ನು ಅರಿಯಬೇಕು. ಆ ಸತ್ಯದ ಅರಿವೇ ಜ್ಞಾನ. ಆ ಜ್ಞಾನವೆಂಬ ಭಿತ್ತಿಯಮೇಲೆ ಹೋಗಲು ನಿಚ್ಚಣಿಕೆಯ ಅಗತ್ಯವಿದೆ. ಆ ನಿಚ್ಚಣಿಕೆಯೇ ಅಂಗ. ಅಂಗವಿಲ್ಲದೆ ಏನೂ ಸಾಧಿಸಲು ಬಾರದು. ಅಂಗವನ್ನು ಆಧರಿಸಿಯೇ ಜ್ಞಾನ ಲಭ್ಯವಾಗುತ್ತದೆ. ಆದರೆ ಆ ಅಂಗದ ಸ್ಥಾನವೇನು ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು. ಅಂಗವೆಂದಮೇಲೆ ಇಂದ್ರಿಯಗಳು ಅಲ್ಲಿವೆ. ಇಂದ್ರಿಯಗಳನ್ನು ಬೇಕಾಬಿಟ್ಟಿಯಾಗಿ ಹರಿಯಲು ಬಿಟ್ಟರೆ ಜ್ಞಾನ ದೂರವೇ ಉಳಿಯುತ್ತದೆ. ಮಾನವನು ಅವುಗಳ ದಾಸನಾಗುತ್ತಾನೆ. ಆತನ ಅಧಃಪತನವಾಗುತ್ತದೆ.  ಆದರೆ ಇಂದ್ರಿಯಗಳನ್ನು ತುಳಿದಿಟ್ಟರೆ ಅವು ಒಂದಕ್ಕೆ ಎರಡಾಗಿ ಎದ್ದು ನಿಲ್ಲುತ್ತವೆ. ಆದ್ದರಿಂದ ಅಂಗದ, ಇಂದ್ರಿಯಗಳ ಸ್ಥಾನವನ್ನು ಅರಿತುಕೊಂಡು ನಡೆಯಬೇಕು. ಅವುಗಳನ್ನು ಅವುಗಳ ಸ್ಥಾನದಲ್ಲಿ ಒತ್ತಿಡಬೇಕು.
ಇಲ್ಲಿ ಒತ್ತಿಡಬೇಕು ಎಂಬುದರ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಶರಣರು ಇಂದ್ರಿಯಗಳನ್ನು ತುಳಿದಿಡಬೇಕೆಂದು ಹೇಳುವುದಿಲ್ಲ. ಅವುಗಳ ಬೇಕು ಬೇಡಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳಿಗೆ ಸಲ್ಲ ಬೇಕಾದ ಸ್ಥಾನವನ್ನು ಅವುಗಳಿಗೆ ಕೊಡಬೇಕು ಎನ್ನುತ್ತಾರೆ. ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಅವುಗಳಿಗೆ ಕೊಡುವುದು ತಪ್ಪಾಗುತ್ತದೆ. ಅದು ಜ್ಞಾನದ ಹಾದಿಯಲ್ಲಿ ತೊಡಕುಂಟಾಗುತ್ತದೆ. ಅಂಗವನ್ನು ಅದರ ಸ್ಥಾನದಲ್ಲಿ ನಿಲ್ಲಿಸಬೇಕು ಎನ್ನುತ್ತಾರೆ. ಹಾಗೆ ಮಾಡಿದಾಗ ಉತ್ತರ ಜ್ಞಾನ ಬಳಿಯಲ್ಲಿಯೇ ಇರುತ್ತದೆ ಎನ್ನುತ್ತಾರೆ.
ಉತ್ತರಜ್ಞಾನ ಎಂದರೆ ಮುಂದಿನ ಜ್ಞಾನ. ಅಂದರೆ ನಮಗೆಲ್ಲ ಕಣ್ಣಿಗೆ ಕಾಣುವದರ ಜ್ಞಾನವಿದೆ. ಆದರೆ ಅದನ್ನು ಮೀರಿದ ಜ್ಞಾನವೊಂದಿದೆ. ಅದು ಸೂಕ್ಷ್ಮವಾದದ್ದು. ಅದನ್ನು ಬೇರೆಲ್ಲೋ ಹುಡುಕಿಕೊಂಡು ಹೋಗುವುದು ವ್ಯರ್ಥ. ಏಕೆಂದರೆ ಅದು ನಮ್ಮಲ್ಲೇ ಇದೆ. ಅಂಗವೆಂಬ ಏಣಿಯನ್ನು ಹತ್ತಿ ಅದನ್ನು ಅದರ ಸ್ಥಾನದಲ್ಲಿ ಒತ್ತಿ ನಿಂದು ನೋಡಿದರೆ ನಿಶ್ಚಯವಾಗಿ ಆ ಉತ್ತರ ಜ್ಞಾನ ನಮ್ಮ ಪಕ್ಕದಲ್ಲಿಯೇ  ಇದೆ ಎನ್ನುತ್ತಾರೆ ಅಪ್ಪಣ್ಣನವರು,

No comments:

Post a Comment