Friday, January 4, 2013

Vachana 123: Kanduda Hidiyalollade – Seeing the Unseen



ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದಡೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದನೆ ಕಂಡು ಗುರು ಪಾದವ ಹಿಡಿದಲ್ಲಿ
ಕಾಣದುದ  ಕಾಣಬಹುದು ಗುಹೇಶ್ವರಾ!
TRANSLITERATION
kaMDuda hiDiyalollade kaaNadudanarasi hiDidaheneMdaDe
sikkadeMba baLalike nODaa!
kaMDudane kaMDu gurupaadava hiDidalli
kaaNaduda kaaNabahudu guhEshvaraa!

CLICK HERE TO READ-ALONG:

TRANSLATION (WORDS)
kaMDuda ( that which is visible) hiDiyalollade (without grasping)  kaaNadudanarasi (seeking invisible) hiDidaheneMdaDe (and if one  tries to grasp it)
sikkadeMba (of not finding it) baLalike (tiredness)  nODaa! (you see)
kaMDudane (the visible) kaMDu (seeing)  gurupaadava (the path shown by the Teacher) hiDidalli (if followed)
kaaNaduda (invisible)  kaaNabahudu (can be seen)  guhEshvaraa! (Guheshvara)

TRANSLATION
Without grasping that which is visible, and seeking and trying to grasp the invisible,
results in tiredness (frustration), you see!
Seeing that which is visible and following the path shown by the Guru (teacher),
the invisible can be seen, Lord Guhesvara! 

COMMENTARY
We can always see a visible entity and grasp all its visible characteristics. We can never see an invisible entity. All efforts to see such an entity would be fruitless and result in frustration. We should see the visible and if the invisible is perceivable, we should develop the keen perception to perceive and experience it. Allama Prabhu provides a path for such perception of the invisible, yet omnipresent, omnipotent and omniscient God. He says that the guidance of the Guru (teacher) is the way to develop that perception. Guru is the visible form of the invisible God. Sharanas provided Ishtalinga as the visible icon of the Universal (super) soul. When the individual develops an intense desire to perceive God, he finds a Guru to help him set him in the spiritual path. The individual follows Guru’s guidance and crosses the ocean of senses in the journey of self-realization and finds Him in his own Self (Atman, or soul). One cannot see God; he is beyond the scope of our senses; one has to experience Him.
A popular simile to describe God is that we can see the brightness spread by an electric bulb, but we cannot see the electrical current that made the bulb glow. The current is the God and His effect that we can see is the brightness. Some of us bright ones argue that we can feel the electricity by stripping the cover over the wire and touching it!  We must have received the knowledge that we can strip the wire and touch it to feel the electricity from someone (the Guru).
 The message of this Vachana is that we should learn to distinguish between that which is visible versus that which is only perceivable. We should not tire ourselves in trying to see the invisible. We should cultivate ourselves to perceive the invisible through pertinent knowledge provided by the knowledgeable (Guru).

Let us learn to distinguish between the visible and the invisible!
KANNADA COMMENTARY
ಅರ್ಥ:
ಕಂಡುದ (ಕಾಣುವಬಹುದಾದುದನ್ನು)  ಹಿಡಿಯಲೊಲ್ಲದೆ (ಗ್ರಹಿಸದೆ, ಕಾಣಲು ಇಷ್ಟಪಡದೆ)   ಕಾಣದುದನರಸಿ (ದೃಶ್ಯವಲ್ಲದ್ದನ್ನು ಅರಸಿ, ಹುಡುಕಿ) ಹಿಡಿದಹೆನೆಂದಡೆ (ಹಿಡಿಯುತ್ತೇನೆ ಎಂದರೆ)
ಸಿಕ್ಕದೆಂಬ ಬಳಲಿಕೆಯ ನೋಡಾ! (ಅದು ಸಿಗದೆ ಬಳಲಿಕೆಯಾಗುತ್ತದೆ, ಆಯಾಸವಾಗುತ್ತದೆ)
ಕಂಡುದನೆ (ಕಾಣುವಂತಹ ವಸ್ತುವನ್ನು) ಕಂಡು (ನೋಡಿ. ಗ್ರಹಿಸಿ)  ಗುರು ಪಾದವ ಹಿಡಿದಲ್ಲಿ  (ಗುರುವು ತೋರಿದ ಮಾರ್ಗದಲ್ಲಿ ನಡೆದರೆ)
ಕಾಣದುದ  (ಕಾಣದೆ ಇರುವುದನ್ನು) ಕಾಣಬಹುದು ಗುಹೇಶ್ವರಾ! (ಕಾಣಬಹುದು ಗುಹೇಶ್ವರ)

ತಾತ್ಪರ್ಯ:

ಸಾಧ್ಯವಾದುದನ್ನು ಕಡೆಗಣಿಸಿ ಅಸಾಧ್ಯವಾದುದನ್ನು ಸಾಧಿಸಲು ಹೊರಟರೆ ಆಯಾಸವೆ ಹೊರತು ಸಫಲತೆಯಿಲ್ಲ. ಕಣ್ಣಿಗೆ ಕಾಣಬಹುದಾದನ್ನು ನೋಡಲು ಸಾಧ್ಯ. ಕಣ್ಣಿಗೆ ಕಾಣದೇ ಇರುವುದನ್ನು  ನೋಡುತ್ತೇನೆ ಎಂದು ಪ್ರಯತ್ನಿಸಿದರೆ ಬಳಲಿಕೆಯಾಗುತ್ತದೆ. ಅದು ಎಂದಿಗೂ ಕಾಣುವುದಿಲ್ಲ. ಯಾವುದು ದೃಶ್ಯ ಯಾವುದು ಅದೃಶ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ದೃಶ್ಯವಾದುದನ್ನು ಮಾತ್ರ ಕಣ್ಣಿನಿಂದ ಕಾಣಲು ಸಾಧ್ಯ. ಆದರೆ ಅದೃಶ್ಯವಾದುದನ್ನೂ ನಾನು ಕಣ್ಣಿನಿಂದ ಕಾಣುತ್ತೇನೆ ಎಂದು ಅರಸುತ್ತ ಹೋದರೆ ಅದು ಆಕಾಶ ಕುಸುಮವಾಗುತ್ತದೆ.  
 
ಅನುಭವಕ್ಕೆ ಸಿಕ್ಕುವುದನ್ನು ಗುರುವಿನ ಮುಖಾಂತರ ಅನುಭವಿಸಬೇಕು. ಅದಕ್ಕೆ ದಾರಿ ತೋರುವವನು ಗುರು. ಅನುಭಾವಕ್ಕೆ ಸಿಗುವುದರ ಕುರುಹನ್ನು ಆತನು ನಮಗೆ ತೋರುತ್ತಾನೆ. ಕುರುಹು ಮಾತ್ರ ನಮ್ಮ ಕಣ್ಣಿಗೆ ಕಾಣುವಂತಹುದು. ಅದನ್ನು ಮೀರಿದ,  ಕೇವಲ ಅನುಭವ ವೇದ್ಯವಾದ ಆ ಪರವಸ್ತುವನ್ನು  ಗುರುವು ತೋರುವ ಮಾರ್ಗವನ್ನು ಹಿಡಿದರೆ ಕಾಣಬಹುದು ಎನ್ನುತ್ತಾರೆ ಅಲ್ಲಮಪ್ರಭುಗಳು. ಗುರುವಿನ ಪಾದ ಹಿಡಿಯುವುದು ಎಂದರೆ ಆತನು ತೋರಿದ ಮಾರ್ಗದಲ್ಲಿ ನಡೆಯುವುದು. 

ಪರವಸ್ತುವಿನ ಕುರುಹು ಲಿಂಗ ಮತ್ತು  ಅದರ ಮಾರ್ಗವನ್ನು ತೋರಿಸುವಂತಹ ಗುರು ದೃಶ್ಯಕ್ಕೆ ಸಿಗುವಂತಹವರು. ಲಿಂಗ ಮತ್ತು ಗುರುವನ್ನು ನಾವು ಕಾಣಬಹುದು. ಆದರೆ ಆ ಪರವಸ್ತು ದೃಶ್ಯಕ್ಕೆ ಸಿಗುವಂತಹುದಲ್ಲ. ಆದ್ದರಿಂದ ವ್ಯಕ್ತಿಯ ರೂದಲ್ಲಿ ಬರುವ ಗುರುವಿನ ಮತ್ತು ಕುರುಹಿನ ರೂಪದಲ್ಲಿರುವ ಲಿಂಗದ ಮಿತಿಯನ್ನು ಅರಿತು ಅದನ್ನು ಮೀರಿದ ಪರವಸ್ತುವನ್ನು ಅನುಭವದಿಂದ  ಕಾಣುವುದರೆಡೆಗೆ ಸಾಗಬೇಕು ಎನ್ನುತ್ತಾರೆ ಅಲ್ಲಮಪ್ರಭುಗಳು.

 

2 comments:

  1. Dear Sir, This vachana was very inspiring with the characteristic stamp of Allamaprabhu. This vachana embedded his iconic opposition of the prime impetus to the organization of the religion, both individually or collectively. Through anything that is accessible as provisioned by the circumstantial day-to-day living, the other, cosmic-consciousness, could be reached. Since that is all pervasive it must be present and accessible through everything including what ever was circumstantially accessible to every individual. Expression of that realization would differ as per the individual's circumstances. Thus the suggestion here is the search for a different visible icon or key or paradigm is not an advisable effort, but the progression to discern the "cosmic-consciousness" through what ever available is. ಬದುಕು ಹುಟ್ಟಿನಿಂದ ಸಾವಿನ ತನಕದ ಆಗುಹೋಗುಗಳು. ಬದುಕಿನಿಂದ ಧರ್ಮ ಅರ್ಥ ಕಾಮ ಮೋಕ್ಷಗಳ ಅನುಭವಗಳ ಹೆಕ್ಕಿಕೊಳ್ಳುವ ಪರಿ ಜೀವನ. ಇಲ್ಲಿ ಜೀವನ ಪದಕ್ಕೆ ಮೂಲ ಪದ "ಜೀವ " ಆಗಿದ್ದು "ಜೀವಿ" ಅಲ್ಲ. ಹಸುವಿಗೆ ಸೊಂಪಾದ ಹುಲ್ಲು ಮೇಯ್ದು ಕೇಲಧರ್ಮಕ್ಕನುಸಾರವಾಗಿ ಎಲ್ಲ ವಿಧಿಗಳು ಆದರೆ, Amoeba ಸುಮ್ಮನೆ ಕಸ ಹೀರಿ ಬೆಳೆದು ಒಡೆದೆರಡಾದರೆ, ಆ ದೈಹಿಕ ಪರಿಯಲ್ಲಿ ವ್ಯಕ್ತ ಜೀವಕ್ಕೆ ಅನುಗುಣವಾದ ಸಮಾಧಾನ, ತೃಪ್ತಿ. ಮನುಷ್ಯನಿಗೆ ಸಮೃದ್ದ ಜೀವನ (ಧರ್ಮ ಅರ್ಥ ಕಾಮ ಮೋಕ್ಷಗಳ ಸಮ-ವೃದ್ದಿ ) ಸಮಾಧಾನಕ್ಕೆ ಕಾರಣ. ಇದಕ್ಕೆ ಕಾರಣವಾದ ಬದುಕು ತರುವ ಸಂಗ ಮತ್ತು ಪ್ರಸಂಗಗಳಿಗೆ ಅನುಗುಣವಾಗಿ ಕರ್ಮಮಾಡುವುದು ಕೇವಲ (ಪರಾಪರ = ಪರ + ಅಪರ ) ಬ್ರಹ್ಮ-ಪ್ರಜ್ಞೆಯೋಮ್ದಿಗೆ ಅನನ್ಯವಾಗುವುದರಿಮ್ದಲೇ ಮಾತ್ರ ಸಾಧ್ಯ. ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ ತುಡಿಯುವುದೇ ಜೀವನ-ಅಲ್ಲ (ನವ್ಯದ ಅಡಿಗರೊಂದಿಗೆ ಅಸಮ್ಮತಿ ಅನಿವಾರ್ಯ). ಇರುವುದರಿಂದಲೇ ಎಲ್ಲವಾಗಿರುವುದರಲ್ಲಿ ಒಮ್ದಾಗುವುದೇ ಜೀವನ. DVG ಯವರ "ಎಲ್ಲರೋಳಗೊಮ್ದಾಗು"ವನ್ನು ದಾಟಿ "ಎಲ್ಲದರೋಳಗೊಮ್ದಾಗು" ವಿಕೆಯತ್ತ ನಮಗೆ ಈ ಪದ್ಯ ಸಮ್ದೇಶಿಸುತ್ತದೆ. A cross, a star & crescent, a menorah and a star, a worn thread and a swastika, a rosary or a stone wouldn't make much of a difference from the other. Searching for one more or organizing one more and adapting one more would not bring any better state. Any of them would be enough to be used as a tool to transcend beyond it to wisdom. Eventually each of them is to be done with. And that happens with the grace and help of a teacher. For me it showed that even if it is hard to grow up, with the guidance of the teacher it is doable. It brings hope.
    Vivek Shandilya

    ReplyDelete
  2. ಗುರು ಪಾದವ ಹಿಡಿದಲ್ಲಿ is sharanagati...= Bhakti

    ReplyDelete