Friday, January 11, 2013

Vachana 124: Jagadagala Maayajaalava Hididu – Overcoming Illusion

VACHANA IN KANNADA
 
ಜಗದಗಲ ಮಾಯಾಜಾಲವ ಹಿಡಿದು,
ಕಾಲನೆಂಬ ಜಾಲಗಾರ ಮಾಯಾಜಾಲವ ಬೀಸಿದ ನೋಡಯ್ಯ,
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ,
ಬಲ್ಲ ಬಲ್ಲಿದವರೆಂಬವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ,
ಆ ಕಾಲದ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು.

TRANSLITERATION

jagadagala maayaajaalava hiDidu,
kaalaneMba jaalagaara maayaajaalava bIsida nODayya,
aa jaalakke horagaadavaranobbaranU kaaNe,
balla ballidareMbuvarellara baleya kalliyoLage tuMbida kaala,
aa kaalada baleyoLage sikki bILuvegoLutide jagavella,
nijaguru svataMtra siddhaliMgEshvaranu tannavarige taa mElaaraikeyaagihanu. 

CLICK HERE TO READ-ALONG: 



TRANSLATION (WORDS)

jagadagala  (as wide as the Universe) maayaajaalava ( the net of illusion) hiDidu, (holding)
kaalaneMba (called  the death)  jaalagaara ( the fisherman) maayaajaalava (net of illusion) bIsida (has spread) nODayya,(you see)
aa ( to that) jaalakke (net) horagaadavaranoobbaranU ( a single person who is out of it) kaaNe,(I cannot see)
balla (those who Know)  ballidareMbuvarllara (those who are called knowledgeable) baleya ( the net) kalliyoLage (in the bag of) tuMbida kaala,(the death has filled)
aa (that)  kaalada baleyoLage  (in the bag of death)  sikki (trapped) bILuvegoLutide (is dying) jagavella,(the whole universe)
nijaguru svataMtra siddhaliMgEshvaranu (Nijaguru Svatantra Siddhalingeshavara) tannavarige (the people who are aware of him) taa (he) mElaaraikeyaagihanu.( protects) 

VACHANA IN ENGLISH 

Holding the net of illusion as wide as the Universe,
The fisherman called death has spread the net of illusion, you see Sir!
I cannot see a single person who is out of that net.
The death has filled those who know and those who are called knowledgeable in the bag of this net.
Being trapped in that bag of net, the whole Universe is dying.
Lord Nijaguru Svatantra Siddhalingeshavara protects those who are aware of Him!
 

COMMENTARY

In this Vachana Sharana Svatantra Siddhalingeshavara comments on the concepts of death and illusion. He calls the death a "fisherman" who has cast his net of illusion (Maya) wide enough to capture everyone in the whole Universe. Both those who are knowledgeable and those who are known to be knowledgeable are trapped in the bag made of the net of illusion. All of them are dying having stuck in this net. The salvation from this net is only to those who are aware of the Lord!

Death is inevitable; but life has to go on. We are fully alive and are going through the ups and downs of life. The ups make us feel happy and proud, although beneath we are worried that the factors bringing us the ups (health, wealth, friendships, etc.) may go away. We are saddened by the downs; we never console ourselves that the downs could be temporary also. The emotional tides we go through are because of our ignorance of the temporariness of   the happiness and the sadness. This is the net of illusion we are trapped in. The solution is to attain the equanimity of mind wherein we stay unperturbed by the ups and downs of life and take them as they come. This state is called ‘stitha prajnatha’’, the state of steady wisdom. Sthitha Prajna is the concept of a free being that lives in this world and appears to be like anybody else. He is one whose mind has become absolutely still, quietened, and tranquil. When all desires of the heart have rested and the heart finds joyous satisfaction in itself because it has found that all joy exists within, independent of external factors, then one is spoken of as a person of steady wisdom, a Sthitha Prajna. A Sthitha Prajna, does what is necessary for the betterment of humanity with a completely tranquil mind, unperturbed. A person whose mind is tranquil will not react to situation in a way that causes harm to others because he sees everybody as his own self. This is the individual who is aware of Him that the Lord protects!
 

Let us pierce the net of illusion!
 

KANNADA COMMENTARY 

ಅರ್ಥ:

ಜಗದಗಲ (ಜಗತ್ತಿನ ಅಗಲದ)  ಮಾಯಾಜಾಲವ ಹಿಡಿದು, (ಮಾಯೆ ಎಂಬ ಜಾಲವನ್ನು ಹಿಡಿದು)  
ಕಾಲನೆಂಬ (ಮೃತ್ಯುವೆಂಬ)  ಜಾಲಗಾರ (ಜಾಲ ಬೀಸುವವನು) ಮಾಯಾಜಾಲವ (ಮಾಯೆ ಎಂಬ ಜಾಲವ) ಬೀಸಿದ ನೋಡಯ್ಯ,(ಬೀಸಿದ್ದಾನೆ ನೋಡು)
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ, (ಆ ಜಾಲದಲ್ಲಿ ಬೀಳದೆ ಇರುವ ಒಬ್ಬನೂ ಕಾಣುವುದಿಲ್ಲ)
ಬಲ್ಲ (ತಿಳಿದವ)  ಬಲ್ಲಿದವರೆಂಬುವರೆಲ್ಲರ  (ತಿಳಿದವರು ಎಂಬುವವರೆಲ್ಲರನು)  ಬಲೆಯ ಕಲ್ಲಿಯೊಳಗೆ (ಬಲೆಯ ಚೀಲದೊಳಗೆ) ತುಂಬಿದ ಕಾಲ, (ಕಾಲವು ತುಂಬಿದೆ)
ಆ ಕಾಲದ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ  ಜಗವೆಲ್ಲ,( ಆ ಕಾಲದ ಬಲೆಯೊಳಗೆ ಸಿಕ್ಕಿಕೊಂಡು ಜಗತ್ತು ಸಾಯುತ್ತಿದೆ)
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು.(ಆದರೆ ಸಿದ್ಧಲಿಂಗೇಶ್ವರನು ತನ್ನನ್ನು ಅರಿದವರಿಗೆ ರಕ್ಷೆಯಾಗಿರುವನು)

ತಾತ್ಪರ್ಯ:

ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗರು ಈ ವಚನದಲ್ಲಿ ಈ ಜಗತ್ತಿನ ಜನರು ಹೇಗೆ ಸಾವಿಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಹೇಳುತ್ತಿರುವರು. 

ಮೃತ್ಯುವೆಂಬ ಜಾಲಗಾರನು ಜಗತ್ತಿನ ಅಗಲದ ಮಾಯೆ ಎಂಬ ಜಾಲವನ್ನು ಬೀಸಿದ್ದಾನೆ. ಆ ಜಾಲ ಇಡೀ ಜಗತ್ತಿನಷ್ಟು ಅಗಲವಾಗಿರುವುದರಿಂದ ಅದಕ್ಕೆ ಒಳಗಾಗದವರು ಯಾರೂ ಇಲ್ಲ. ಎಲ್ಲರೂ ಅದರೊಳಗೆ ಸಿಕ್ಕಿಕೊಂಡಿದ್ದಾರೆ. ತಿಳಿದುಕೊಂಡವರು ತಿಳಿದುಕೊಂಡಿದ್ದೇವೆ ಎನ್ನುವವರು ಎಲ್ಲರನ್ನೂ ಆ ಮೃತ್ಯು ಎಂಬ ಜಾಲಗಾರನು ತನ್ನ ಮಾಯೆ ಎಂಬ  ಬಲೆಯ ಚೀಲದೊಳಗೆ ತುಂಬಿಕೊಂಡಿದ್ದಾನೆ. ಆ ಮೃತ್ಯುವಿನ ಬಲೆಯೊಳಗೆ ಸಿಕ್ಕು ಜಗತ್ತು ಸಾಯುತ್ತಿದೆ. ಎಲ್ಲರೂ ಸಾಯುತ್ತಿದ್ದಾರೆ. ಆದರೆ ಸಿದ್ಧಲಿಂಗೇಶ್ವರನು ತನ್ನನ್ನು ಅರಿತವರಿಗೆ ರಕ್ಷೆಯಾಗಿರುವನು ಎಂದು ಹೇಳುತ್ತಾರೆ  ಸ್ವತಂತ್ರ ಸಿದ್ಧಲಿಂಗರು. 

ಈ ಲೋಕದಲ್ಲಿ ಕಾಣುವುದಷ್ಟೇ ನಿತ್ಯ ಸತ್ಯವಲ್ಲ. ಅದರಾಚೆಗೂ ನಿತ್ಯವಾದ ಸತ್ಯವಿದೆ.  ಅಜ್ಞಾನದ ಕತ್ತಲೆಯಲ್ಲಿರುವವರಿಗೆ ಇಲ್ಲಿ ತೋರುವುದು ಮಾತ್ರ ನಿಜವೆಂದು ತೋರುತ್ತದೆ. ಬದುಕಿನಲ್ಲಿ ಬರುವ ಸುಖ ದುಃಖಗಳು, ಸಂತೋಷ ನೋವುಗಳು ಕ್ಷಣಿಕವಾದವುಗಳು. ಅವು ಮೇಲ್ನೋಟಕ್ಕೆ ನಿಜವೆಂದು ತೋರಿದರೂ ಅವುಗಳನ್ನು ಆಳವಾಗಿ ನೋಡಿದಾಗ  ಅವುಗಳ ಅಸ್ತಿತ್ವ ಅಜ್ಞಾನದಿಂದ ಉಂಟಾದುದೆಂದು ತೋರಿಬರುತ್ತದೆ. ಆದರೆ ಅದೇ ನಿಜವೆಂದು ಗ್ರಹಿಸಿ ಜೀವ ಸುಖ ದುಃಖಗಳ ಸಾಗರದಲ್ಲಿ ಮುಳುಗೇಳುತ್ತದೆ.  ಇದೇ ಮಾಯೆ. ಈ ಮಾಯೆಗೆ ಎಲ್ಲರೂ ಒಳಗಾಗಿದ್ದಾರೆ.   

ಜೀವಕ್ಕೆ ಸುಖವೂ ನಿಜವಾದ ಸುಖ ಕೊಡುವುದಿಲ್ಲ. ಏಕೆಂದರೆ ಆ ಸುಖದ ಹಿಂದೆ ಸದಾ “ಅದು ಎಲ್ಲಿ ಮಾಯವಾಗುವುದೋ” ಎಂಬ ಭಯವಿದ್ದೇ ಇರುತ್ತದೆ. ಆ ಭಯ ಸುಖವನ್ನು ಪೂರ್ತಿಯಾಗಿ ಅನುಭವಿಸಲು ಅನುವು ಮಾಡಿಕೊಡುವುದಿಲ್ಲ. ಇನ್ನು ದುಃಖವಂತೂ ಜೀವನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ರೀತಿಯಾಗಿ ಸುಖ ದುಃಖಗಳೆಂಬ ಮಾಯಾಜಾಲದಲ್ಲಿ ಸಿಲುಕಿ ಜೀವನು ಪ್ರತಿನಿತ್ಯ ಸಾಯುತ್ತಲೇ ಇರುತ್ತಾನೆ. ತಿಳಿದುಕೊಂಡವನು ಅಥವಾ ತಿಳಿದುಕೊಂಡವನೆಂದೆನಿಸಿಕೊಂಡವನು ಇಬ್ಬರೂ ಕೂಡ ಇಂತಹ ಸಾವಿಗೀಡಾಗುತ್ತಾರೆ. ಈ ಜಾಲದಲ್ಲಿ ಬಲ್ಲವರು, ಎಂದರೆ ಓದಿಯೋ ಇಲ್ಲವೆ ಕೇಳಿಯೋ ತಿಳಿದುಕೊಂಡಿರುವವರು, ಮತ್ತು  ನಾವು ತಿಳಿದುಕೊಂಡಿರುವವರು ಎನ್ನುವ ಭ್ರಮೆಯೊಳಗಿರುವವರು ಎಲ್ಲರೂ ಯಾವ ತಾರತಮ್ಯವೂ ಇಲ್ಲದೆ ಸಿಕ್ಕಿಕೊಳ್ಳುತ್ತಾರೆ. ಎಂದರೆ ಜ್ಞಾನಿಗಳೆಂದು ಅನಿಸಿಕೊಂಡವರೆಲ್ಲರೂ ಇದರಲ್ಲಿ ಬಿದ್ದುಹೋಗುತ್ತಾರೆ.  ಅಂದರೆ ಇನ್ನೊಬ್ಬರಿಂದ ಅಥವಾ ಇನ್ನೆಲ್ಲಿಂದಲೋ ಪಡೆದ ಜ್ಞಾನ ನಿಜವಾದ ಜ್ಞಾನವಲ್ಲ. ತನ್ನನ್ನು ತಾನರಿಯುವುದೇ ನಿಜವಾದ ಜ್ಞಾನ. ಅಂತಹ ಜ್ಞಾನವನ್ನು ಪಡೆದವನನ್ನು ಸಿದ್ಧಲಿಂಗೇಶ್ವರನು ಕಾಪಾಡುತ್ತಾನೆ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗರು. 

“ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು´  ಎನ್ನುತ್ತಾರೆ. ಏನು ಹಾಗೆಂದರೆ? ಅಂದರೆ ತನ್ನವರನ್ನು ಸಿದ್ಧಲಿಂಗೇಶ್ವರರು  ಸಾವಿನಿಂದ ರಕ್ಷಿಸುತ್ತಾನೆಯೆ?  ಅಂದರೆ ಅವರು ಸಾಯುವುದಿಲ್ಲವೆ?

ದೈಹಿಕವಾದ ಸಾವು ಎಲ್ಲರಿಗೂ ಬರುವುದು. ಆದರೆ ತನ್ನತಾನರಿದವನು, ಸುಖದುಃಖಗಳ ನಿಜರೂಪವನ್ನು, ಅವು ಏಕೆ ಉಂಟಾಗುತ್ತವೆ, ಎನ್ನುವುದನ್ನು ಆಳವಾಗಿ ಅರಿಯುವುದರಿಂದ ಅವುಗಳು ಆತನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅವುಗಳನ್ನು ಸ್ಥಿತಪ್ರಜ್ಞನಾಗಿ ನೋಡುವಂತಹನಾಗುತ್ತಾನೆ ಆತನು. ಆದ್ದರಿಂದ ಆತನು ಸಾವನ್ನು ಗೆದ್ದವನೇ ಆಗುತ್ತಾನೆ.

 

 

No comments:

Post a Comment