ಮನಸ್ಸು
ತೊಳೆದು ನಿರ್ಮಲವ ಮಾಡಿಪ್ಪೆನೆಂಬ ಯೋಗವೆಂತುಟೊ?
ಮನವ
ಹಿಡಿದು ತಡೆದಿಹೆನೆಂಬವರ
ಮರುಳುಮಾಡಿ
ಕಾಡಿತ್ತು ನೋಡಾ ಮನವು!
ಮನ
ವಿಕಲ್ಪ ಜ್ಞಾನದಿಂದರಿದು,
ಅದ ಶುದ್ಧ
ಮಾಡಿಹೆನೆಂಬುದು ತಾನೆ ಮನ ನೋಡಾ,
ನಮ್ಮ
ಗುಹೇಶ್ವರ ಲಿಂಗದ ಅನುವನರಿದಿಹೆನೆಂಬುವರು
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
TRANSLITERATION
manassu toLedu nirmalava
maaDippeneMba yOgaveMtiTo?
manava hiDidu tadediheneMbavara
maruLu maaDi kaaDittu nODaa manavu!
mana vikalpa j~jaanadiMdaridu,
ada shuddha maaDiheneMbudu taane mana nODaa,
namma guhEshvara liMgada anuvanaridiheneMbavaru
manavilladirabEku nODaa siddharaamayyaa.
manava hiDidu tadediheneMbavara
maruLu maaDi kaaDittu nODaa manavu!
mana vikalpa j~jaanadiMdaridu,
ada shuddha maaDiheneMbudu taane mana nODaa,
namma guhEshvara liMgada anuvanaridiheneMbavaru
manavilladirabEku nODaa siddharaamayyaa.
CLICK HERE TO READ-ALONG:
TRANSLATION (WORDS)
manassu ( the mind)
toLedu ( by washing) nirmalava maaDippe
( I have cleansed) neMba (so called) yOgaveMtiTo (what method is it?)
manava (the mind) hiDidu ( by control,) tadediheneMbavara (those who say I have stopped it from wandering )
maruLumaaDi (by fooling) kaaDittu (harasses , troubles) nODaa (you see) manavu (the mind)!mana vikalpa j~jaanadiMdaridu,(understanding by the doubtful mind)
ada (that) shuddha maaDihe (I have celansed) neMbudu (saying) taane (that itself is also) mana nODaa,(is the same mind you see)
namma guhEshvara liMgada (of our Lord Guheshavara) anuvanaridiheneMbavaru (those who say we know the beauty)
manavilladirabEku (should be of without mind) nODaa (you see) siddharaamayyaa (Siddharaamaa)
manava (the mind) hiDidu ( by control,) tadediheneMbavara (those who say I have stopped it from wandering )
maruLumaaDi (by fooling) kaaDittu (harasses , troubles) nODaa (you see) manavu (the mind)!mana vikalpa j~jaanadiMdaridu,(understanding by the doubtful mind)
ada (that) shuddha maaDihe (I have celansed) neMbudu (saying) taane (that itself is also) mana nODaa,(is the same mind you see)
namma guhEshvara liMgada (of our Lord Guheshavara) anuvanaridiheneMbavaru (those who say we know the beauty)
manavilladirabEku (should be of without mind) nODaa (you see) siddharaamayyaa (Siddharaamaa)
TRANSLATION
How can I say
that I have washed and cleansed my mind?
The mind
fools and harasses even those who say they have controlled it and stopped it
from wandering!
Understanding
through the doubtful mind,
that which
says I have cleansed it is that same mind, you see!
Those who
say we know the beauty of our Lord Guhesvara, should be without the mind, you
see Siddharaamayya!
COMMENTARY
In this
Vachana addressed to Sharana Siddharaamayya, Allama Prabhu comments on the ways
of the mind. He stresses on the importance of cleansing the mind to see the
Lord, while saying that the process of cleansing the mind does not come easy.
We have said
that the inherent nature of the mind is to wander. Mind is a monkey on steroid
in general. It is a must to control the
mind although controlling it is not easy and requires appropriate knowledge,
constant awareness and effort.
Allama
Prabhu wonders how one can say he/she has washed and cleansed the mind. The
mind is so dynamic that it fools and harasses even those who say they have
controlled it. Indeed, in our daily lives we are subjected to all the six
passions of mind (kama – desire, kroda – anger, lobha – greed, moha- delusory
emotional attachment, madha – pride, maatsarya – jealousy) on a constant basis.
We notice that we are being subjected to one or more of these and make every
effort to get out of their influence. This freedom from passions lasts a little
while and the mind reverts to the same as soon as we start feeling that we have
conquered the passion and controlled or cleansed the mind.
In general,
we use the polluted mind through which we try to come up with mechanisms to
cleanse the mind. How can a polluted mind cleanse itself?
Allama Prabhu
declares those who say that they know the beauty of the Lord, should have to be
without a mind! He is not implying that these individuals are mindless. He is
stressing that to see the Lord one must have a pure and unpolluted mind, meaning
that they should have conquered all the passions of the mind. Indeed, seeing
the beauty of the Lord and becoming one with the Lord are synonymous to one
being the Lord. When one sheds the six passions, he/she achieves the cleanse
mind and becomes the Lord. He sees the Lord in everyone and everything around
him/her.
Let us Mind
the Mind!
KANNADA
COMMENTARY
ಅರ್ಥ:
ಮನಸ್ಸು
ತೊಳೆದು (ಮನಸ್ಸನ್ನು ಚೊಕ್ಕಟಗೊಳಿಸಿ) ನಿರ್ಮಲವ (ಶುದ್ಧ) ಮಾಡಿಪ್ಪೆನೆಂಬ ( ಮಾಡಿರುವೆನು ಎಂಬ)
ಯೋಗವೆಂತುಟೊ? (ರೀತಿ ಎಂತಹದು)
ಮನವ ಹಿಡಿದು (ಮನಸ್ಸನ್ನು ಕಟ್ಟಿಹಾಕಿ, ಅಧೀನದಲ್ಲಿಟ್ಟು) ತಡೆದಿಹೆನೆಂಬವರ ( ನಿಲ್ಲಿಸಿದ್ದೇನೆ ಎನ್ನುವವರನ್ನು)
ಮರುಳುಮಾಡಿ (ಭ್ರಮೆ ಹುಟ್ಟಿಸಿ) ಕಾಡಿತ್ತು ನೋಡಾ ಮನವು!(ಕಾಡಿಸಿದೆ ಮನಸ್ಸು)
ಮನ ವಿಕಲ್ಪ ಜ್ಞಾನದಿಂದರಿದು, (ಮನಸ್ಸು ಸಂದೇಹಪೂರಿತ, ದೋಷಪೂರಿತ ಜ್ಞಾನದಿಂದ ತಿಳಿದುಕೊಂಡು)
ಅದ ಶುದ್ಧ ಮಾಡಿಹೆನೆಂಬುದು (ಅದನ್ನು ಶುದ್ಧ ಮಾಡಿರುವೆನು ಎಂದು ಹೇಳುವುದು) ತಾನೆ ಮನ ನೋಡಾ,(ಕೂಡ ಮನಸ್ಸೇ ನೋಡು)
ನಮ್ಮ ಗುಹೇಶ್ವರ ಲಿಂಗದ ಅನುವನರಿದಿಹೆನೆಂಬುವರು (ಗುಹೇಶ್ವರ ಲಿಂಗದ ರೀತಿಯನ್ನು, ಸೌಂದರ್ಯವನ್ನು ಅರಿತಿರುವೆನು ಎನ್ನುವವರು)
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.(ಮನಸ್ಸು ಇಲ್ಲದವರಾಗಿರಬೇಕು ನೋಡು ಸಿದ್ಧರಾಮ)
ತಾತ್ಪರ್ಯ:ಮನವ ಹಿಡಿದು (ಮನಸ್ಸನ್ನು ಕಟ್ಟಿಹಾಕಿ, ಅಧೀನದಲ್ಲಿಟ್ಟು) ತಡೆದಿಹೆನೆಂಬವರ ( ನಿಲ್ಲಿಸಿದ್ದೇನೆ ಎನ್ನುವವರನ್ನು)
ಮರುಳುಮಾಡಿ (ಭ್ರಮೆ ಹುಟ್ಟಿಸಿ) ಕಾಡಿತ್ತು ನೋಡಾ ಮನವು!(ಕಾಡಿಸಿದೆ ಮನಸ್ಸು)
ಮನ ವಿಕಲ್ಪ ಜ್ಞಾನದಿಂದರಿದು, (ಮನಸ್ಸು ಸಂದೇಹಪೂರಿತ, ದೋಷಪೂರಿತ ಜ್ಞಾನದಿಂದ ತಿಳಿದುಕೊಂಡು)
ಅದ ಶುದ್ಧ ಮಾಡಿಹೆನೆಂಬುದು (ಅದನ್ನು ಶುದ್ಧ ಮಾಡಿರುವೆನು ಎಂದು ಹೇಳುವುದು) ತಾನೆ ಮನ ನೋಡಾ,(ಕೂಡ ಮನಸ್ಸೇ ನೋಡು)
ನಮ್ಮ ಗುಹೇಶ್ವರ ಲಿಂಗದ ಅನುವನರಿದಿಹೆನೆಂಬುವರು (ಗುಹೇಶ್ವರ ಲಿಂಗದ ರೀತಿಯನ್ನು, ಸೌಂದರ್ಯವನ್ನು ಅರಿತಿರುವೆನು ಎನ್ನುವವರು)
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.(ಮನಸ್ಸು ಇಲ್ಲದವರಾಗಿರಬೇಕು ನೋಡು ಸಿದ್ಧರಾಮ)
ಈ ವಚನ ಸಿದ್ಧರಾಮಯ್ಯನವರನ್ನು ಕುರಿತು ಹೇಳಿದುದಾಗಿದೆ. ಆದರೂ ಇದು ಎಲ್ಲರಿಗೂ ಅನ್ವಯಿಸುವಂತಹದು. ಇಲ್ಲಿ ಮನಸ್ಸಿನ ರೀತಿಯನ್ನು ಹೇಳುತ್ತಿದ್ದಾರೆ ಅಲ್ಲಮಪ್ರಭುಗಳು.
ಮನಸ್ಸನ್ನು ತೊಳೆದು ನಿರ್ಮಲ ಮಾಡುತ್ತೇನೆ ಎಂಬುವವರನ್ನು ಕುರಿತು ಅದನ್ನು ಹೇಗೆ
ಮಾಡುತ್ತೀರಿ ಎಂದು ಕೇಳುತ್ತಲೇ ಅದನ್ನು ಶುದ್ಧಗೊಳಿಸುವಾಗ ಏನೇನು ನಡೆಯುತ್ತದೆ ಎನ್ನುವುದನ್ನು
ಹೇಳುತ್ತಾರೆ.
ನಮ್ಮ ಮನಸ್ಸು ಶುದ್ಧವಾಗಿಲ್ಲ ಎಂಬುದು ಅದನ್ನು ಸ್ವಲ್ಪ ಗಮನಿಸಿದರೂ ನಮಗೆ
ತಿಳಿಯುತ್ತದೆ. ಅದನ್ನು ತೊಳೆದು ಸ್ವಚ್ಛಗೊಳಿಸುತ್ತೇನೆ ಎಂದುಕೊಳ್ಳುತ್ತೇವೆ. ಅಂದರೆ ನಮ್ಮ
ಮನದಲ್ಲಿ ಆಸೆ, ಸಿಟ್ಟು, ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಮನೆ ಮಾಡಿವೆ ಎಂಬುದು
ತಿಳಿದು ಬರುತ್ತದೆ. ಅವುಗಳಿಂದ ಕಷ್ಟಪಡುತ್ತಿರುವಾಗ
ಅವುಗಳಿಂದ ಬಿಡುಗಡೆ ಪಡೆಯಬೇಕೆಂಬುದು ತಿಳಿಯುತ್ತದೆ. ಆದರೆ ಬಿಡುಗಡೆ ಪಡೆಯುವುದು ಹೇಗೆ?
“ನಾನು ಇನ್ನು ಮೇಲೆ ಸಿಟ್ಟು ಮಾಡಿಕೊಳ್ಳುವುದಿಲ್ಲ, ಮನದಲ್ಲಿ ಆಸೆ, ಸಿಟ್ಟು,
ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಮೂಡದಂತೆ ನನ್ನ ಮನಸ್ಸನ್ನು ತಡೆಯುತ್ತೇನೆ”
ಎಂದು ಮನಸ್ಸು ನಿರ್ಧರಿಸುತ್ತದೆ. ನೋವು ಉಂಟುಮಾಡುವ ಈ ಭಾವಗಳು ಮೂಡಿದಾಗ ಅವುಗಳನ್ನು ಅದುಮಿಡುತ್ತದೆ
ಮನಸ್ಸು. ಮತ್ತು ಸಂತಸಗೊಳ್ಳುತ್ತದೆ. ಮನಸ್ಸನ್ನು ಶುದ್ಧಮಾಡುವುದು ಎಷ್ಟು ಸುಲಭವಾಯಿತು ಎಂದು
ಬೀಗುತ್ತದೆ, ಮರುಳುಗೊಳ್ಳುತ್ತದೆ. ಆದರೆ ಹಾಗೆ ಅದುಮಿಟ್ಟಾಗ ಆ ಕ್ಷಣಕ್ಕೆ ಸುಖವಾದರೂ ಆಮೇಲೆ, ಮನದಲ್ಲಿ
ಆಸೆ, ಸಿಟ್ಟು, ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಇನ್ನೂ ಹೆಚ್ಚು
ಪ್ರಬಲವಾಗುತ್ತವೆ. ಹೀಗೆ ಮೊದಲು ಮನಸ್ಸು ಅವು ವಶದಲ್ಲಿವೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ,
ಆಮೇಲೆ ಅವುಗಳ ಪ್ರಾಬಲ್ಯಕ್ಕೆ ಒಳಗಾಗಿ ವ್ಯಕ್ತಿಯನ್ನು ಕಾಡುತ್ತದೆ.
ಮನಸ್ಸನ್ನು ನೋಡುವ ನಮ್ಮ ಜ್ಞಾನವೇ ಮೊದಲು ವಿಕಲ್ಪಕ್ಕೊಳಗಾಗಿದೆ. ನಮ್ಮ
ಮನದಲ್ಲಿಯೇ ಸ್ಪಷ್ಟತೆ ಇಲ್ಲ. ಶುದ್ಧವಿಲ್ಲದ ಮನಸ್ಸನ್ನು ನೋಡುವವರು ಯಾರು. ಅದು ಕೂಡ ಮನಸ್ಸೇ
ಅಲ್ಲವೆ? ಸ್ವತಃ ಅಸ್ಪಷ್ಟವಾಗಿರುವ ಮನಸ್ಸು ಏನನ್ನು ತಾನೆ ಸ್ಪಷ್ಟವಾಗಿ ಕಾಣಲು ಸಾಧ್ಯ? ಯಾವುದು
ಶುದ್ಧ ಯಾವುದು ಅಶುದ್ಧ ಎಂಬುದು ಅದಕ್ಕೆ ಹೇಗೆ ತಿಳಿಯುತ್ತದೆ?
ಮನಸ್ಸು ಸಂದಿಗ್ಧದಲ್ಲಿದೆ. ಯಾವುದು ಸರಿ ಯಾವುದು ತಪ್ಪು ಮತ್ತು ಏಕೆ ಎಂಬುದು
ಅದಕ್ಕೆ ತಿಳಿದಿಲ್ಲ. ಅಥವಾ ಅ ತಿಳುವಳಿಕೆ ಯಾವುದೋ ವಿಷಯದಿಂದ ಪ್ರಭಾವಿತಗೊಂಡಿದೆ. ಯಾವುದೋ ಪ್ರಭಾವಕ್ಕೆ ಒಳಗಾಗಿರುವ ಮನಸ್ಸನ್ನು
ಶುದ್ಧಿಗೊಳಿಸುವುದು ಯಾವುದು? ಅದು ಕೂಡ ಮನಸ್ಸೇ ಅಲ್ಲವೆ. ಮತ್ತು ಅದು ಕೂಡ ಯಾವುದೋ ಪ್ರಭಾವಕ್ಕೆ
ಒಳಗಾಗಿರುತ್ತದೆ ಅಲ್ಲವೆ? ಅಂದ ಮೇಲೆ ಅದರಿಂದ ಏನು ಉಪಯೋಗ. ಅದರಿಂದ ಶುದ್ಧಿ ಸಾಧ್ಯವಿಲ್ಲ
ಎಂದಂತಾಯಿತು. ಅದಕ್ಕೇ ಅಲ್ಲಮಪ್ರಭುಗಳು ಹೇಳುತ್ತಾರೆ
ಗುಹೇಶ್ವರನ ಸೌಂದರ್ಯವನ್ನು ಅರಿಯಲು ಮನಸ್ಸು ಇಲ್ಲದವರಾಗಿರಬೇಕು ಎಂದು.
ಏಕೆಂದರೆ ಮನಸ್ಸು ಅನೇಕ ವಿಚಾರಗಳಿಂದ ಉಂಟಾಗಿರುವಂತಹುದು. ಈ ವಿಚಾರಗಳು ಒಂದಲ್ಲ
ಒಂದು ಪ್ರಭಾವಕ್ಕೆ ಒಳಗಾಗಿರುತ್ತವೆ. ಮನಸ್ಸಿಲ್ಲದಿರುವಿಕೆ ಎಂದರೆ ಯಾವುದೇ ರೀತಿಯ ಪ್ರಭಾವ
ಇಲ್ಲದಿರುವಿಕೆ. ಅಂದರೆ ಅದು ಶುದ್ಧವಾದದ್ದು. ಶುದ್ಧವಾದ ಮನಸ್ಸಿದ್ದಲ್ಲಿ ಗುಹೇಶ್ವರನು
ಕಂಡುಬರುತ್ತಾನೆ ಎನ್ನುತ್ತಾರೆ ಅಲ್ಲಮರು.
No comments:
Post a Comment