Friday, December 21, 2012

Vachana 121: Aatadali Kela Hottugaledu – Think of Him Soon!


ಆಟದಲಿ ಕೆಲ ಹೊತ್ತುಗಳೆದು
ಕೂಟದಲಿ ಕೆಲ ಹೊತ್ತುಗಳೆದು
ನೋಟದಲಿ ಕೆಲ ಹೊತ್ತುಗಳೆದು
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ
ಊಟ ಮಾಟ ಕೂಟದಲಿ ಕೋಟಲೆಗೊಳುತ್ತಿದ್ದೆನೆಂಬವನೊಬ್ಬ ಪೋಟ
ಇವರಿಬ್ಬರ ಬೇಟಕ್ಕೆ ಸಿಕ್ಕದೆ ದಾಂಟಿ ಹೋದನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ 

TRANSLITERATION

aaTadali kelahottugaLedu
kUTadali kela hottugaLedu
nOTadali kelahottugaLedu
UTadahottige liMgava kUDiheneMbuvanobba
UTa maaTa kUTadali kOTalegoLuttiddeneMbuvanobba pOTa
ivaribbara bETakke sikkade daaMTi hOdanu namma basavapriya kUDalacennabasavaNNa

CLICK HERE TO READ-ALONG:

TRANSLATION (WORDS)

aaTadali  (in playing) kelahottugaLedu (spent some time)
kUTadali (in mingling with friends,socialize) kela hottugaLedu (spent some time)
nOTadali (indulging in looking,seeing) kelahottugaLedu (spent some time)
UTadahottige ( by eating time) liMgava ( the God) kUDiheneMbuvanobba (one says, I want to be one with)
UTa ( in eating food) maaTa (in doings)  kUTadali  (in mingling) kOTalegoLuttiddeneMbuvanobba ( I am suffering says another) pOTa (coward)
ivaribbara (of these two)  bETakke ( fancy ,wish)  sikkade (not being available)  daaMTi (beyond) hOdanu (went) namma (our) basavapriya kUDalacennabasavaNNa (Basavapriya KuDala Chennabasvanna)

TRANSLATION

Having spent some time playing,
Having spent some time mingling,
Having spent some time indulging in sights,
One says I want to be one with the God, by dinner time!
The other coward says I am suffering eating, working and mingling!
Our Basavapriya KuDala Chennabasvanna went away without heeding to the wishes of these two! 

COMMENTARY

In this Vachana Sharana Hadapada Appanna comments on how commoners spend all their lives in mundane activities, eventually get dissatisfied with them and try to reach God at the last stages of life. He says that the God will not be available for them.
We spend lot of time playing the games we like and get unlimited fun out of it. We seldom think of anything else, we seldom like anything else. We are immersed in these games.
We spend all our resources in acquiring friends and enjoying their company. Nothing else occurs to us. Our minds would not entertain any other thought!
We enjoy going places and seeing sights. We never consider it a waste of time. Nothing else makes sense to us. We are on top of the world with our mundane lives!
Eventually, all these mundane activities seem boring to us. Appanna equates this boredom to the ‘dinner time’ when we are hungry and long for becoming one with God. Some even start complaining that they are actually suffering all these activities of playing, socializing and working. Appanna calls them cowards and says that they will not be able to reach God with these last minute wishes! 
Appanna is advocating introducing Godliness to our lives early and stay with it through the life with all the respect and attention it deserves. We must make Him an important part of our life journey, and not just the eventual destination! 
It is very easy to say and very apt to feel that ‘I did it all’, ‘it is all mine’ when success comes to us. It is very easy to be immersed in our own games, social circles, sights and sounds. It takes lot of discipline to recognize that there is a super power which guides it all. The faster we get such realization in life, the easier it is to reach Him.  
  

Let us make God our companion in life’s journey!

KANNADA COMMENTARY

ಅರ್ಥ:

ಆಟದಲಿ ಕೆಲ ಹೊತ್ತುಗಳೆದು (ಆಟವಾಡುತ್ತ, ನಿಶ್ಚಿಂತೆಯಿಂದ ವಿನೋದದಲ್ಲಿ, ಸಮಯವನ್ನು ಕಳೆದು)
ಕೂಟದಲಿ (ಬೆರೆಯುತ್ತ) ಕೆಲ ಹೊತ್ತುಗಳೆದು (ಗೆಳೆಯರೊಂದಿಗೆ, ಒಡನಾಡಿಗಳೊಂದಿಗೆ ಬೆರೆಯುವದರಲ್ಲಿ ಕೆಲ ಸಮಯ ಕಳೆದು)
ನೋಟದಲಿ ಕೆಲ ಹೊತ್ತುಗಳೆದು (ಕಣ್ಣಿಗೆ ಪ್ರಿಯವಾದುದನ್ನು ನೋಡುವುದರಲ್ಲಿ ಕೆಲ ಸಮಯ ಕಳೆದು)
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ (ಊಟದ ಹೊತ್ತಿಗೆ ಎಂದರೆ  ಆಟ ಕೂಟ ಮತ್ತು ನೋಟ ಗಳೆಲ್ಲ ಸಾಕಾಗಿ ಊಟದ ನೆನಪಾಗುವಂತೆ ಲಿಂಗವನ್ನು ಕೂಡುತ್ತೇನೆ ಎನ್ನುವ ಒಬ್ಬ)
ಊಟ ಮಾಟ ಕೂಟದಲಿ ಕೋಟಲೆಗೊಳುತ್ತಿದ್ದೆನೆಂಬವನೊಬ್ಬ (ಊಟಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ, ಮತ್ತು ಬೆರೆಯುವುದರಲ್ಲಿ ತೊಂದರೆಪಡುತ್ತಿದ್ದೇನೆ ಎನ್ನುವವನು ಒಬ್ಬ) ಪೋಟ (ಭೀರು, ಹೇಡಿ)
ವರಿಬ್ಬರ ಬೇಟಕ್ಕೆ (ಇವರಿಬ್ಬರ ಇಷ್ಟಕ್ಕೆ) ಸಿಕ್ಕದೆ ದಾಂಟಿ  (ಸಿಗದೆ ದೂರ) ಹೋದನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ (ಹೋದನು ಬಸವಪ್ರಿಯ ಕೂಡಲಚೆನ್ನಬಸವಣ್ಣ) 

ತಾತ್ಪರ್ಯ:

ಇಲ್ಲಿ ಹಡಪದ ಅಪ್ಪಣ್ಣನವರು, ಸಾಮಾನ್ಯವಾಗಿ ವ್ಯಕ್ತಿಯು ತನ್ನ ಬದುಕಿನ ಸಮಯವನ್ನು ಹೇಗೆ ಕಳೆಯುತ್ತಾನೆ, ಮತ್ತು ವ್ಯರ್ಥವಾಗಿ ಸಮಯ ಕಳೆದ ರೀತಿಯಿಂದ  ಬೇಸರಗೊಂಡು ಬಾಳಿನ ಕೊನೆ ಸಮಯದಲ್ಲಿ ದೇವರನ್ನು ನೆನೆಯುತ್ತಾನೆ ಎಂಬುದನ್ನು ಹೇಳುತ್ತ ಅಂತಹವರಿಗೆ ದೇವರು ದೊರೆಯುವುದಿಲ್ಲ ಎಂದು ಹೇಳುತ್ತಾರೆ.  


ವ್ಯಕ್ತಿಯು ಬದುಕಿನ ಕೆಲ ಸಮಯ ನಿಶ್ಚಿಂತೆಯಿಂದ ಆಟ ಆಡುತ್ತ, ವಿನೋದದಲ್ಲಿ ಕಳೆಯುತ್ತಾನೆ. ಆಗ ಆತನಿಗೆ ಆಟವನ್ನುಳಿದು ಬೇರೇನೂ ತೋಚುವುದೂ ಇಲ್ಲ, ಬೇರೇನೂ ಇಷ್ಟವಾಗುವುದೂ ಇಲ್ಲ.


ಆಮೇಲೆ ಕೆಲ ಸಮಯ ತನ್ನ ಒಡನಾಡಿಗಳೊಡನೆ, ಪ್ರಿಯರೊಂದಿಗೆ ಕಳೆಯುತ್ತಾನೆ. ಆ ಸಮಯದಲ್ಲಿ ಆತನ ಒಡನಾಡಿಗಳೇ ಆತನ ಸರ್ವಸ್ವವಾಗಿರುತ್ತಾರೆ. ಮನಸ್ಸಿಗೆ ಬೇರೇನೂ ಬೇಕಾಗುವುದಿಲ್ಲ. ಬೇರೆ ಏನೂ ನೆನಪಿಗೆ ಬರುವುದೂ ಇಲ್ಲ. ಇನ್ನು ಕೆಲ ಸಮಯ ಕಣ್ಣಿಗೆ ಪ್ರಿಯವಾದುದನ್ನು ನೋಡುತ್ತ ಕಳೆದುಬಿಡುತ್ತಾನೆ. 


ಇಷ್ಟೆಲ್ಲ ಆದ ಮೇಲೆ ಊಟದ ಹೊತ್ತಿಗೆ ಆತನಿಗೆ ದೇವರ ನೆನಪಾಗುತ್ತದೆ. ಹಸಿವೆ ದೇಹದ  ಸಹಜ ಸ್ವಭಾವ. ಬೇರೆ ಏನೇ ಮಾಡಿದರೂ ಊಟವನ್ನು ತಪ್ಪಿಸುವಂತಿಲ್ಲ. ಕೊನೆಗೆ ಊಟ ಮಾಡಲೇ ಬೇಕು. ಅದೇ ರೀತಿ ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿದ್ದರೂ ಕೊನೆಗೆ ಮನಸ್ಸು ಸತ್ಯವಾದ ನಿತ್ಯ ಸುಖವನ್ನು ಬಯಸುತ್ತದೆ.  ಕೆಲವರಿಗೆ ಬದುಕಿನ ಕೊನೆಗಳಿಗೆಯಲ್ಲಿ ಆ ಪರವಸ್ತುವಿನ ಕೊರತೆಯ ಅರಿವಾಗುತ್ತದೆ.


ಇನ್ನು ಕೆಲವರು ಊಟ, ಮಾಟ (ಏನೇನೋ ಮಾಡುವುದು) ಮತ್ತು ಕೂಟದಲ್ಲಿ (ಬೇಕೆನಿಸಿದವರೊಡನೆ ಬೆರೆಯುವುದು)  ಮುಳುಗಿಹೋಗಿ ಅದರಿಂದ ಕಷ್ಟಕ್ಕೊಳಗಾಗಿದ್ದೇನೆ ಎನ್ನುತ್ತಾರೆಯೆ ಹೊರತು ಅದರಿಂದ ಹೊರಬರುವುದಿಲ್ಲ. ನಾಲಿಗೆಗೆ ಇಷ್ಟವಾದುದನ್ನು ತಿನ್ನುವುದು, ಅದು ತನ್ನ ಮನಸ್ಸಿಗೆ , ತನ್ನ ದೇಹಕ್ಕೆ ಏನು ಮಾಡುತ್ತದೆ ಎನ್ನುವುದನ್ನು ವಿವೇಚಿಸದೆ ಇರುವುದು. ಏನೇನೋ ಕೆಲಸಗಳನ್ನು ಮಾಡುವುದು. ತನ್ನ ಕೆಲಸಗಳಿಂದ ತನಗಾಗಲಿ ಅಥವಾ ಸಮಾಜಕ್ಕಾಗಲಿ ಏನು ಲಾಭವಾಗುತ್ತಿದೆ. ಅಥವಾ ಏನು ಹಾನಿಯಾಗುತ್ತಿದೆ ಎಂದು ಯೋಚಿಸುವುದಿಲ್ಲ. ಕೂಟದಲ್ಲಿಯೂ ಅದೇ ದೃಷ್ಟಿ. ಮನಸ್ಸಿನ ಯಾವುದೋ ಒಂದು ಭಾಗಕ್ಕೆ ತಾತ್ಕಾಲಿಕ ಸುಖ ಸಿಗುತ್ತದೆ ಎಂದು ಅದರಲ್ಲಿಯೇ ಮುಳುಗುವುದು. ಮತ್ತು ಇವುಗಳಿಂದ ನಿಜವಾಗಿಯೂ ಸುಖವಿಲ್ಲವೆಂಬುದು ಅರಿವಿಗೆ ಬರುವುದು. ಆದರೆ ಈ ಎಲ್ಲ ಆಕರ್ಷಣೆಗಳಿಂದ ಬಿಡಿಸಿಕೊಳ್ಳಲು ಆತ್ಮ ಬಲ ಸಾಲದೆ ಒದ್ದಾಡುವುದು. ಇಂತಹವರನ್ನು ಹೇಡಿಗಳೆನ್ನುತ್ತಾರೆ ಹಡಪದ ಅಪ್ಪಣ್ಣನವರು.


ಇವರಿಬ್ಬರ ಇಷ್ಟಕ್ಕೆ ಆ ಪರವಸ್ತು ಸಿಗುವುದಿಲ್ಲ. ಇವರ ಮತಿಗಳನ್ನು ಮೀರಿದುದು ಅದು. ಇಂತಹವರಿಂದ  ಕೂಡಲಚೆನ್ನಬಸವಣ್ಣ ಬಲುದೂರವಿರುತ್ತಾನೆ ಎನ್ನುತ್ತಾರೆ ಅಪ್ಪಣ್ಣನವರು.

1 comment:

  1. This is an amazing vachana. Such deep meaning is conveyed in such simple words. True, we do get wrapped up in the distractions of the world, occasionally, if at all, we realize or get a glimpse of our true self (the divine) and only at the end do we realize our true nature that gives us peace. Great selection, Thanks for sharing.

    ReplyDelete