Friday, November 23, 2012

Vachana 117: Aarike Bittida Giduvina Huva Koyidu – Who should get the credit?


ಆರಿಕೆ ಬಿತ್ತಿದ  ಗಿಡುವಿನ ಹೂವ ಕೊಯಿದು
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ
ಪೂಜಿಸಿದ ಪುಣ್ಯ  ಹೂವಿಗೋ? ನೀರಿಗೋ?
ನಾಡೆಲ್ಲಕ್ಕೋ? ಪೂಜಿಸಿದಾತಗೋ?
ಇದ ನಾನರಿಯೆ ನೀ ಹೇಳೆಂದ ನಂಬಿಗ ಚೌಡಯ್ಯ

TRANSLITERATION

aarike bittida giDuvina hUva koyidu
UrellarU kaTTisida kereya nIra taMdu
naaDellarU nODiyeMdu poojisutta
poojisida puNya hUvigO? nIrigO?
naaDellakkO? poojisidaatagO?
ida naanariye nI hELeMda naMbiga couDayya

CLICK HERE TO READ-ALONG:


TRANSLATION (WORDS)

aarike (by some body) bittida (sowed)  giDuvina (of a plant) hUva (flowers) koyidu (plucking)
UrellarU (all the people in the town)  kaTTisida (built by) kereya  (of the lake) nIra (water)  taMdu (bringing)
naaDellarU (all people of the town) nODiyeMdu (showing it to) poojisutta (worshipping)
poojisida (worship)  puNya (good deed of, credit)  hUvigO (is it for the flower)? nIrigO (is it for the water)?
naaDellakkO (to the people of the town)? poojisidaatagO (is it to the person who worships)?
ida (this) naanariye (I don’t understand) nI (you) hELeMdanaMbiga couDayya (say it, says Anbiga Choudayy

TRANSLATION

Plucking flowers from the plant sowed by others,
Bringing water from the lake built by all the people in the town,
Worshipping, showing off to all the people in the town,
Does the merit of such worship go to the flower? To the water?
To the people in the town? To the person who worships?
I don’t understand this, please tell me! says Ambigara Choudayya!

COMMENTARY

In this Vachana, Sharana Ambigara Chaudayya tries to drive home how we insert ‘I and mine’ into everything we do and do not realize that everything we have really belongs to someone else, in particular to that ultimate truth, called God. He uses the rituals used in worshipping as examples.
We pluck flowers from the plants sowed by others for our worship. Granted that we use our physical capability to go to the plant, pluck the flowers. It might very well be we will have paid for those flowers. We earned the money we paid. But, from where does the earning power comes to us? As we continue this line of thinking, it becomes obvious that whatever the merit we receive due to the worship with those flowers, really belongs to a whole host of entities, ultimately to the creator of them, the super soul.
We can extend the above logic to the water we use in the worship. The water comes from the lakes built by others. We invite the whole town to come and witness our worshipping. The merit we aspire to receive from this worship truly must be shared among all the individuals and entities contributing to the worship. Yet, we say that ‘we did it’ and ‘it is mine’.
Ambigara Chaudayya is essentially advocating getting rid of the ‘I’ in what we do and developing the humility to realize that everything we have belongs to Him. The worship conducted with such selfless, humble ways is the true worship. Gaining such humility and defeating the ‘ego’ is the true worship and its merit.
Chaudayya is not commenting whether the ritualistic worship is good or bad. It is OK if one is comfortable in going through the rituals and they provide the environment and mindset to be with Him. It is important though to realize what we are doing and what we are using and appreciate to whom the credit should belong!

Let us develop the utmost humility and conquer the ‘I-ness’!

KANNADA COMMENTARY

ಲೋಕದ ಜನರು ನಡೆದುಕೊಳ್ಳುವ ರೀತಿಯನ್ನು ಕಂಡು  ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ ಅಂಬಿಗರ ಚೌಡಯ್ಯನವರು.
ಯಾರೋ ಬಿತ್ತಿದ ಗಿಡದ ಹೂವನ್ನು ಕೊಯ್ದು ತರುವರು ಜನರು ಪೂಜೆಗಾಗಿ. ಊರವರೆಲ್ಲ ಸೇರಿ ಕಟ್ಟಿಸಿದ ಕೆರೆಯ ನೀರನ್ನು ತರುವರು ದೇವರ ಮಜ್ಜನಕ್ಕಾಗಿ. ಮತ್ತು ನಾಡಿನವರೆಲ್ಲ ನೋಡಲೆಂದು ಆಡಂಬರದಿಂದ ಪೂಜಿಸುವರು, ಈ ರೀತಿಯಾಗಿ ಮಾಡಿದ ಪೂಜೆಯಿಂದ ಲಭ್ಯವಾಗುವ ಪುಣ್ಯದ ಫಲ ಹೂವಿನ ಗಿಡಕ್ಕೋ? ಕೆರೆಯ ನೀರಿಗೋ? ಊರಿನ ಜನರಿಗೋ? ಅಥವಾ ಪೂಜಿಸಿದಾತನಿಗೋ? ಎಂದು ಕೇಳುತ್ತಾರೆ ಚೌಡಯ್ಯನವರು.

ಶ್ರಮಪಟ್ಟವರಿಗೆ ಪ್ರತಿಫಲ ಸಿಗಬೇಕಾದದ್ದು ನ್ಯಾಯ. ಶ್ರಮಪಡುವವರು ಒಬ್ಬರು,  ಫಲ ಪಡೆಯುವವರು ಇನ್ನೊಬ್ಬರು ಆದರೆ ಹೇಗೆ? ಅದು ನ್ಯಾಯವೂ ಅಲ್ಲ.  ಶ್ರಮಪಟ್ಟು ಹೂವಿನ ಗಿಡದ ಬೀಜವನ್ನು ಬಿತ್ತಿ ಬೆಳಸಿದವರಾರೋ ತಿಳಿಯದು. ಆ ಗಿಡದ ಹೂವನ್ನು ತನ್ನದೇ ಎನ್ನುವಂತೆ ದೇವರಿಗೆ ಅರ್ಪಿಸುವುದು ಸರಿಯೆ? ಇಲ್ಲಿ ತನ್ನದೇನು?  ಎಂಬ ಪ್ರಶ್ನೆ ಕೇಳಿಕೊಳ್ಳುವಂತೆ ಪ್ರೆರೇಪಿಸುತ್ತಾರೆ ಚೌಡಯ್ಯನವರು. ಊರವರೆಲ್ಲರೂ ಕಟ್ಟಿಸಿದ ಕೆರೆಯ ನೀರನ್ನು ತಂದು ಪೂಜಿಸಿವುದರಲ್ಲಿಯೂ ತನ್ನದೆನ್ನುವುದು ಏನೂ ಇಲ್ಲ ಎಂಬ ಸೂಕ್ಷ್ಮವನ್ನು ಮನಕ್ಕೆ ತಂದುಕೊಡುತ್ತಾರೆ. ಇಷ್ಟೇ ಅಲ್ಲದೆ ಇದೆಲ್ಲವೂ ಕೇವಲ ಬಾಹ್ಯ ಪೂಜೆಗೆ ಬರುವಂತಹುದು. ಇದಕ್ಕೆ ಯಾವ ಮಹತ್ವವೂ ಇಲ್ಲ. ಈ ಬಾಹ್ಯ ಪೂಜೆ ನೋಡುವವರ ಕಣ್ಣಿಗೆ ಹಬ್ಬ ಮಾಡುತ್ತದೆ ಮತ್ತು ತಾನು ಪೂಜೆ ಮಾಡಿದುದು ಎನ್ನುವ ಅಹಂಕಾರದ ಭಾವ ಬೆಳೆಸುತ್ತದೆ ಅಷ್ಟೆ.

ಇಂತಹ ಆಡಂಬರದ ಪೂಜೆಯಿಂದ ಪುಣ್ಯವೇನಾದರು ಪ್ರಾಪ್ತಿಯಾಗುವುದಿದ್ದರೆ ಅದು ಹೂವಿನ ಗಿಡ ಬೆಳೆಸಿದವರಿಗೋ? ಇಲ್ಲವೆ, ಕೆರೆಯನ್ನು ಕಟ್ಟಿಸಿದವರಿಗೋ? ಅಥವಾ, ಪೂಜಿಸಿದವನಿಗೋ? ಯಾರಿಗೆ? ಎಂದು ಕೇಳುತ್ತಾರೆ ಚೌಡಯ್ಯನವರು. ಈ ಪ್ರಶ್ನೆಗಳ ಉತ್ತರ ತನಗೆ  ತಿಳಿದಿಲ್ಲ, ತಿಳದವನಾದ “ನೀನು” (ಪೂಜಿಸುವವನು)   ಹೇಳು ಎನ್ನುತ್ತಾರೆ.

ಈ ಪ್ರಶ್ನೆಗಳನ್ನು ಕೇಳುವುದರ ಮೂಲಕ ಭಕ್ತನು ತಾನು ಸ್ವತಃ ಶ್ರಮ ಪಡಬೇಕು, ದೇವರಿಗೆ “ತನ್ನ”ದೇನಾದರೂ ಅರ್ಪಿಸಬೇಕು, ಎನ್ನುವುದರ ಕಡೆ, ಹಾಗೂ, ಹಾಗೆ ಮಾಡುವಾಗ ಭಕ್ತನಿಗೆ ತನ್ನದೆನ್ನುವುದು ಯಾವುದೂ ಇಲ್ಲ ಎನ್ನುವುದರ ಕಡೆ ಗಮನ ಹರಿಸುವಂತೆ ಮಾಡುವ ಜಾಣ್ಮೆ ಅವರದ್ದು. 

ಪ್ರತಿಯೊಬ್ಬನೂ ಈ ಸೃಷ್ಟಿಯಲ್ಲಿ ತನ್ನದೆನ್ನುವುದು ಯಾವುದೂ ಇಲ್ಲ, ಎನ್ನುವುದನ್ನು ಕಂಡುಕೊಳ್ಳಬೇಕು. ಆಗ ನಾನು ಪೂಜೆ ಮಾಡುತ್ತೇನೆ, ನಾನು ಹೂಗಳನ್ನು ಅರ್ಪಿಸುತ್ತೇನೆ ಎನ್ನುವಂತಹ ಅಹಂಕಾರದ ಭಾವನೆ ತಾನಾಗಿಯೇ ಅಳಿದು ಹೋಗುತ್ತದೆ.



No comments:

Post a Comment