ತರುಗಳ ಮುರಿದು ಗಗನಕ್ಕೀಡಾಡುವ
ಅನಿಲ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ ಮುರಿದೊತ್ತಿ ಕೆಡಹುತಿಪ್ಪ
ವ್ಯಾಧಿ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತಿರ್ಪ
ನಿದ್ರೆ ರೂಪೋ ನಿರೂಪೋ ನೀವು ಹೇಳಿ ಭೋ!
ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು.
ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ?
ರೂಪೆಂದಡೆ ಶಬ್ದ ನಿರೂಪೆಂದಡೆ ಶೂನ್ಯ;
ಈ ಎರಡರ ಆದಿಯಿಂದತ್ತತ್ತ ಕಾಣಾ
ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.
TRANSLITERATION
tarugaLa muridu gaganakkIDaaDuva
anila roopO niroopO ? ballaDe nIvu hELi bhO!
Gaja siMha shaardUlaveMba adhika mRugaMgaLa
muridotti keDahutippa
Vyaadhi roopO niroopO? ballaDe nIvu hELibhO!
kaaNalIyade kELalIyade avadhaanaMgaLA
keDisutirpa
nidre roopO niroopO? nIvu hELi bhO!
iMtu aaLinaaLina aMtaMsthavanaarigU ariyabaaradu.
anaadimUladoDeyana balleneMba pari eMtO?
roopeMdaDe shabda nirooopeMdaDe shoonya,
I eraDara aadiyiMdattatta kaaNaa
Enna taMde kapilasiddhamallikaarjunaliMgavu
gurukaaruNyavuLLavarigallade ariyabaaradu.
CLICK HERE TO READ-ALONG:
TRANSLATION (WORDS)
tarugaLa
(trees) muridu (breaking) gaganakkIDaaDuva ( that which throws in the sky)
anila (wind)
roopO (does it have a form) niroopO (or is it formless)? ballaDe nIvu (if you know)
hELi bhO! (please say sirs!)
Gaja
(elephant) siMha (lion) shaardUla (tiger) veMba (called)
adhika (great) mRugaMgaL (animals) muridotti (breaking and pushing them to
death) keDahutippa (striking down)
Vyaadhi (ailment,
disease) roopO (does it have a form) niroopO (or is it formless)? ballaDe nIvu (if you know)
hELi bhO! (please say sirs!)
kaaNalIyade (without letting to be seen)
kELalIyade (without letting to be heard) avadhaanaMgaLA (consciousness, intelligence) keDisutirpa
(destroying)
nidre (sleep)
roopO (does it have a form) niroopO (or is it formless)? ballaDe nIvu (if you know)
hELi bhO! (please say sirs!)
iMtu (in this way) aaLinaaLina (servant of a servant) aMtaMsthavan (inward) aarigU
(no one) ariyabaaradu (will be able to
comprehend).
anaadimUladoDeyana (the lord of that which is
without beginning) balleneMba pari (saying“ I know” ) eMtO
(how is it possible)?
roopeMdaDe (to give it a form) shabda (it is a
word) nirooopeMdaDe (if considered formless) shoonya (it is nothing),
I (these) eraDara (of two) aadiyiMdattatta ( it is far away from the
origin) kaaNaa (you see)
Enna (my) taMde (father, Lord) kapilasiddhamallikaarjunaliMgavu (the God Chennamallikarjuna)
gurukaaruNya ( the benevolence of the Teacher,
Guru)vuLLavarigallade (other than those who have) ariyabaaradu (will not be aware, will not comprehend).
TRANSLATION
The wind that breaks the trees and throws them
to the sky, does it have a form or is it formless? Please tell me Sir, if you
know!
The disease that strikes and kills strong
animals such as Elephant, Lion and Tiger, does it have a form or is it
formless? Please tell me Sir, if you know!
The sleep that destroys the consciousness,
without being seen or heard, does it have a form or is it formless? Please tell
me Sir, if you know!
Thus, no one can comprehend the nature (secret)
of the servant of the servant!
How is it possible to say that ‘I know the
nature of that which is without beginning’?
If given a form, it is a word; if considered
formless, it is nothing!
He is far away from the scope of both of these,
you see!
Without the benevolence of the teacher one
cannot comprehend my Lord KapilasiddhamallikaarjunaliMga
COMMENTARY
In this Vachana, Sharana Siddarameswara describes
the formless God, through three examples.
The wind (hurricane) breaks the plants and
trees and throws them towards the sky. Does the wind has a form or is it formless?
The wind cannot be seen. But, we cannot say that it is not there, since we can
see its effect. The disease pushes strong animals like Lion, Tiger and Elephant
to their death. Does the disease has a form or is it formless? We cannot say
that the disease is not there, since we can see its effect. Along the same
lines, the sleep destroys the consciousness without being seen or heard. Does
it have a form or is it formless? We cannot say that it is not there, since we
feel its effect.
Siddarameswara seems to be referring to
Basavanna in the next line of the Vachana. Basavanna always called himself the
servant of the (servants) devotees of Lord Shiva. Siddarameswara wonders how
one can comprehend the formless God, when one cannot even comprehend the
realized soul Basavanna who is right in front of (not formless) them.
When we cannot comprehend the one with a form
and in front of us, how can we comprehend that ultimate truth and that which is
without a beginning? If we try to give Him a form, it just becomes a set of words.
If we say He is formless, it implies ‘nothing’. Siddarameswara says that He is
beyond the scope of both of these. The only way to comprehend Him is through
the benevolence of a Guru, the teacher. Benevolence of the Guru is the light
that emanates from within; it is the intense desire to realize the ultimate
truth.
We addressed the concept of Guru in Vachana 87. It
is said that the Guru looks out for disciple ready to receive the knowledge. It
is also said that when an intense desire and thirst for knowledge and awareness
appear in the disciple, the Guru appears. These concepts imply that the Guru is
an individual. It is important to realize that the concept of Guru is a formless
principal that comes to light, when one develops the intense desire to realize
the ultimate. When that happens, the disciple starts examining everything with
a new, subtle sight. He begins to admire the influence (effect) of some
formless entity on and in everything. Obtaining that subtle sight is the benevolence
of the Guru.
Let us develop the subtle sight to see the
ultimate truth!
ಈ ವಚನದಲ್ಲಿ ಸಿದ್ಧರಾಮೇಶ್ವರರು ನಿರಾಕಾರನಾದ ಕಪಿಲಸಿದ್ಧಮಲ್ಲಿಕಾರ್ಜುನನ ಬಗ್ಗೆ
ಹೇಳುತ್ತಿದ್ದಾರೆ.
ತರುಗಳನ್ನು(ಮರಗಿಡಗಳನ್ನು) ಮುರಿದು, ಕಿತ್ತು ಆಕಾಶದಲ್ಲಿ ಎಸೆಯುತ್ತದೆ ಬಿರುಗಾಳಿ. ಆ ಗಾಳಿಗೆ ರೂಪವಿದೆಯೆ? ಅಥವಾ ಅದು
ನಿರಾಕಾರವೆ? ಗಾಳಿ ಕಣ್ಣಿಗೆ ಕಾಣುವುದಿಲ್ಲ ಎಂದು, ಅದು ಇಲ್ಲವೆಂದು ಹೇಳಲು ಬರುವುದಿಲ್ಲ. ಏಕೆಂದರೆ
ಅದರ ಪರಿಣಾಮವು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ.
ಆನೆ, ಸಿಂಹ, ಹುಲಿ ಮುಂತಾದ ಬಲಶಾಲಿಗಳಾದ ಪ್ರಾಣಿಗಳನ್ನು ಬಾಧಿಸಿ ಸಾವಿಗೆ ನೂಕುವ
ವ್ಯಾಧಿಗೆ ರೂಪವಿದೆಯೆ? ಅಥವಾ ಅದು ನಿರೂಪವೆ? ವ್ಯಾಧಿ ಕಣ್ಣಿಗೆ ಕಾಣುವುದಿಲ್ಲ ಎಂದು ಅದು
ಇಲ್ಲವೆಂದು ಹೇಳಲು ಬರುವುದಿಲ್ಲ. ಏಕೆಂದರೆ ಅದರ ಪರಿಣಾಮವು ಬಹಳ ಸ್ಪಷ್ಟವಾಗಿ
ಕಂಡುಬರುತ್ತದೆ.
ಕಣ್ಣಿಗೆ ಕಂಡೂ ಬರುವುದಿಲ್ಲ ಮತ್ತು ಕಿವಿಗೆ ಕೇಳಿಸುವುದೂ ಇಲ್ಲ. ಆದರೆ ಎಲ್ಲರಿಗೂ
ಎಚ್ಚರ ತಪ್ಪಿಸುತ್ತದೆ ನಿದ್ರೆ. ಅದಕ್ಕೆ
ರೂಪವಿದೆ ಎನ್ನಬಹುದೆ ಅಥವಾ ರೂಪವಿಲ್ಲ ಎನ್ನಬಹುದೆ?
ಈ ಎಲ್ಲವುಗಳನ್ನು ಪೂರ್ತಿಯಾಗಿ ರೂಪವಿಲ್ಲದವು ಅಥವಾ ರೂಪವುಳ್ಳವವು ಎನ್ನಲು
ಬರುವುದಿಲ್ಲ. ಅವುಗಳು ತೋರಿಬರುವ ವಿಧವು ಬೇರೆಯದು. ಅವು ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿ,
ಒಂದೊಂದು ಸಮಯದಲ್ಲಿ ಒಂದೊಂದು ಬಗೆಯಾಗಿ ತೋರಿಬರುತ್ತವೆ. ಅವುಗಳ ರೂಪ ಅರಿಯುವುದು ಬಹು ಕಷ್ಟ.
ಅವುಗಳ ಪರಿಣಾಮ ನಮ್ಮ ಮುಂದೆಯೇ ಇದ್ದರೂ “ಅವು ಹೀಗೆಯೇ” ಎಂದು ಹೇಳಲು ಬರುವುದಿಲ್ಲ.
“ಇಂತು
ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು” ಬಹುಶಃ ಈ ಮಾತನ್ನು ಅವರು ಬಸವಣ್ಣನವರನ್ನು ಕುರಿತು
ಹೇಳುತ್ತಿದ್ದಾರೆ. ಬಸವಣ್ಣನವರು ತಮ್ಮನ್ನು “ಕೂಡಲಸಂಗಮದೇವನ ಕಿಂಕರರನ ಕಿಂಕರ ಅಥವಾ ತೊತ್ತಿನ
ತೊತ್ತು” ಎಂದು
ಹೇಳಿಕೊಳ್ಳುತ್ತಾರೆ. ಅದನ್ನೆ ಇಲ್ಲಿ ಸಿದ್ಧರಾಮರು, ಅಂತಹ ಬಸವಣ್ಣನವರು ಎದುರಿಗೇ
ಇದ್ದರೂ ಅವರನ್ನು ನಾವು ಪೂರ್ತಿಯಾಗಿ ತಿಳಿದುಕೊಳ್ಳಲಾಗುವುದಿಲ್ಲ ಎಂಬರ್ಥದಲ್ಲಿ ಹೇಳುತ್ತಿದ್ದಾರೆ.
ಕಣ್ಣ ಮುಂದಿರುವವರನ್ನೇ ಪೂರ್ತಿಯಾಗಿ ಅರಿಯಲು ಸಾಧ್ಯವಿಲ್ಲದಾಗ ಆ ಅನಾದಿಮೂಲನನ್ನು
ಬಲ್ಲೆವು ಎಂದು ಹೇಳಲು ಸಾಧ್ಯವೆ? ಆ ದೇವರು ಹಾಗೆ ಹೀಗೆ ಎಂದು ಹೇಳುವುದು ಸರಿಯೆ? ಆತನನ್ನು
ರೂಪಹೊಂದಿರುವವನು ಎಂದು ಪದಗಳಲ್ಲಿ
ಹೇಳಲು ಹೋದರೆ ಅದು ಕೇವಲ ಪದವಾಗಿ, ಶಬ್ದವಾಗಿ ಉಳಿಯುತ್ತದೆ. ಆತನು ನಿರೂಪನು ಎಂದರೆ ಅದು ಶೂನ್ಯವಾಗುತ್ತದೆ.
ಸಿದ್ಧರಾಮರು,
ತಮ್ಮ ಕಪಿಲಸಿದ್ಧಮಲ್ಲಿಕಾರ್ಜುನನು ಈ ಎರಡರಿಂದಲೂ ಬೇರೆ ಎಂದು ಹೇಳುತ್ತಾರೆ. ಆತನು, ರೂಪ ಅಥವಾ
ಹೇಳಲು ಹೋದರೆ ಅದು ಕೇವಲ ಪದವಾಗಿ, ಶಬ್ದವಾಗಿ ಉಳಿಯುತ್ತದೆ. ಆತನು ನಿರೂಪನು ಎಂದರೆ ಅದು ಶೂನ್ಯವಾಗುತ್ತದೆ.
ನಿರೂಪದ ವ್ಯಾಪ್ತಿಯಿಂದ ಅತ್ತತ್ತ ಎಂದು ಹೇಳುತ್ತಾರೆ. ಆತನನ್ನು ಕಾಣಲು ಗುರುಕಾರುಣ್ಯವೇ ಮುಖ್ಯ ಎನ್ನುತ್ತಾರೆ. “ಗುರು
ಕಾರುಣ್ಯ” ವ್ಯಕ್ತಿಯ ಅಂತರಂಗದಲ್ಲಿ ಉದಿಸುವ ಬೆಳಕು, ಅದು ಸತ್ಯವನ್ನು ಕಾಣಬೇಕೆಂಬ ತೀವ್ರ ಜಿಜ್ಞಾಸೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.
ಇಲ್ಲಿ ಹಿಂದೆ ೮೭ ನೆ ವಚನದ ವ್ಯಾಖ್ಯಾನದಲ್ಲಿ ಹೇಳಿದುದನ್ನು ನೆನಪಿಗೆ
ತಂದುಕೊಳ್ಳುವುದು ಸೂಕ್ತವೆನಿಸುತ್ತದೆ: “ಗುರು ಕಾರುಣ್ಯವೆಂದರೇನು? ಅದು ಹೇಗೆ ಉಂಟಾಗುತ್ತದೆ? ಸಾಮಾನ್ಯವಾಗಿ ನಾವು
ಗುರುಕಾರುಣ್ಯವೆಂದರೆ ಗುರು ವ್ಯಕ್ತಿಯ ರೂಪದಲ್ಲಿ ಬಂದು ಶಿಷ್ಯನಿಗೆ ಉಪದೇಶಿಸುತ್ತಾನೆ
ಎಂದುಕೊಳ್ಳುತ್ತೇವೆ. ಗುರುವು ಶಿಷ್ಯನನ್ನು ಹುಡುಕಿಕೊಂಡು ಬರುತ್ತಾನೆ, ಶಿಷ್ಯನು ಹಂಬಲಿಸಿದರೆ ಸಾಕು
ಗುರು ತಾನೇ ಸ್ವತಃ ಹುಡುಕಿಕೊಂಡು ಬಂದು ಕರುಣಿಸುತ್ತಾನೆ ಎಂಬಂತಹ ಮಾತುಗಳನ್ನು ಎಲ್ಲರೂ
ಕೇಳಿರುತ್ತಾರೆ. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿಂದೆಯೇ ನಾವು ಗುರುವು ಕೇವಲ
ವ್ಯಕ್ತಿಯಲ್ಲ, ಅಮೂರ್ತವಾದ ಬೆಳಕಾಗಿ ಬರುವ ತತ್ವ ಎಂಬುದನ್ನು ಕಂಡುಕೊಂಡಿದ್ದೇವೆ. ಯಾರಿಗೆ
ಮನಸ್ಸಿನಲ್ಲಿ ಆ ತತ್ವವನ್ನು ಹೊಂದಬೇಕೆನ್ನುವ ಆಳವಾದ ಹಂಬಲವಿರುತ್ತದೆಯೋ ಆತನಿಗೆ
ದೈವಕೃಪೆಯಾಗುತ್ತದೆ. ಅಂದರೆ ಆತನ ಮನಸ್ಸು ಸೂಕ್ಷ್ಮವಾಗಿ ಎಲ್ಲವನ್ನೂ ಹೊಸ ದೃಷ್ಟಿಯಿಂದ
ನೋಡಲುಪಕ್ರಮಿಸುತ್ತದೆ. ಆತನಿಗೆ ಜಗತ್ತಿನ ಪ್ರತಿಯೊಂದರಲ್ಲಿ ಬೇರೆ ಯಾವುದೋ
ತತ್ವದ ಆಟ ಕಾಣುತ್ತದೆ. ಮೇಲು ನೋಟಕ್ಕೆ ಕಾಣುವುಷ್ಟೇ ಪೂರ್ಣ ಸತ್ಯವಲ್ಲ, ಅದನ್ನು ಮೀರಿದುದದೇನೋ
ಕಾಣಿಸುತ್ತದೆ. ಈ ಸೂಕ್ಶ್ಮ ದೃಷ್ಟಿಯ ಲಾಭವೇ ಒಂದು ರೀತಿಯಿಂದ ಗುರು ಕಾರುಣ್ಯವೆಂದು ಹೇಳಬಹುದು.”
No comments:
Post a Comment