ಔತಣ ಕಂಡು ದ್ವಿಜರಾಶ್ರಯಿಸುವರು,
ಯುದ್ಧವ ಕಂಡು ಶೂರರಾಶ್ರಯಿಸುವರು,
ಸಭೆಯ ಕಂಡು ವಿದ್ವಾಂಸರಾಶ್ರಯಿಸುವರು,
ಇವರೆಲ್ಲ ಮಾಯಾ ಮೂಕರಲ್ಲದೆ ಮಾಯಾರಹಿತರಲ್ಲಯ್ಯಾ,
ಕಂಡು ಕಂಡು ಕಣ್ದೆರೆದು ನೋಡದ
ಮಹಾಮಹಿಮ ಜಂಗಮನ ಪಾದಕ್ಕೆ
ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
TRANSLITERATION
karikeya kaMDu pashugaLaashrayisuvsvu,
outaNa kaMDu dvijaraashrayisuvaru,
yuddhava kaMDu shooraraashrayisuvaru,
sabheya aMDu vidvaaMsaraashrayisuvaru,
ivarella maayaamUkarallade maayaarahitarallayyaa,
kaMDu kaMDu kaNderedu nODada
mahaamahima jaMgamana paadakke
namO namO eMbenayyaa kapilasiddhamallikaarjunaa
CLICK HERE TO READ-ALONG:
http://youtu.be/XFcm4eAR2eg
outaNa kaMDu dvijaraashrayisuvaru,
yuddhava kaMDu shooraraashrayisuvaru,
sabheya aMDu vidvaaMsaraashrayisuvaru,
ivarella maayaamUkarallade maayaarahitarallayyaa,
kaMDu kaMDu kaNderedu nODada
mahaamahima jaMgamana paadakke
namO namO eMbenayyaa kapilasiddhamallikaarjunaa
CLICK HERE TO READ-ALONG:
http://youtu.be/XFcm4eAR2eg
TRANSLATION (WORDS)
karikeya (grass) kaMDu (seeing) pashugaLaashrayisuvsvu (animals go, fall for),
outaNa (feast) kaMDu (seeing) dvijaraashrayisuvaru (Brahmins go, fall for),
yuddhava (war) kaMDu (seeing) shooraraashrayisuvaru (brave, valiant go. fall for)
sabheya (Congregation, assembly) kaMDu (seeing) vidvaaMsaraashrayisuvaru (scholars go, fall for)
ivarella (all these are) maayaamUkarallade (dumbstruck by illusion but) maayaarahitarallayyaa (are not free of illusion)kaMDu (seeing ) kaMDu (seeing again and again) kaNderedu nODada (not looking,being uninterested)
ahaamahima (great) jaMgamana (the jangama) paadakke (to the feet of )
namO namO (salutations) eMbenayyaa (I offer)
kapilasiddhamallikaarjunaa ( Oh, Kapilasiddhamallikarjuna)
TRANSLATIONkarikeya (grass) kaMDu (seeing) pashugaLaashrayisuvsvu (animals go, fall for),
outaNa (feast) kaMDu (seeing) dvijaraashrayisuvaru (Brahmins go, fall for),
yuddhava (war) kaMDu (seeing) shooraraashrayisuvaru (brave, valiant go. fall for)
sabheya (Congregation, assembly) kaMDu (seeing) vidvaaMsaraashrayisuvaru (scholars go, fall for)
ivarella (all these are) maayaamUkarallade (dumbstruck by illusion but) maayaarahitarallayyaa (are not free of illusion)kaMDu (seeing ) kaMDu (seeing again and again) kaNderedu nODada (not looking,being uninterested)
ahaamahima (great) jaMgamana (the jangama) paadakke (to the feet of )
namO namO (salutations) eMbenayyaa (I offer)
kapilasiddhamallikaarjunaa ( Oh, Kapilasiddhamallikarjuna)
Animals fall for the green grass,
Brahmins fall for the feast,
The valiant fall for the war,
The scholars fall for the assembly,
All these are dumbstruck by illusion; they are not free of it.
I offer my salutations to the feet of that great Jangama, who stays uninterested, even after multiple exposures to these! Oh, kapilasiddhamallikaarjunaa!
COMMENTARY
Sharana Siddarameswara has illustrated the roles of the Guru (teacher), the disciple, the Linga (icon) and Jangama (the roaming ascetic) through the Vachanas in our previous postings. We have called Jangama a roaming ascetic, an illumined individual dedicating himself to spreading the awareness and knowledge to the community, a dynamic individual in the sense that his knowledge is not static, but keeps deepening and sharpening all the time. Thus, the immediate association of the tag of Jangama to an individual who happens to dress in saffron robes, chants the Lord’s names continuously and visits his disciples, is not accurate. Siddarameswara qualifies Jangama with four scenarios of common occurrence, in this Vachana.
Animals are attracted by the green grass. It is their staple food. They quit all other activities when they see the green grass and start consuming it. That is the nature of the animal.
The role of Brahmin sect in the four-sect society was to be in charge of knowledge and impart it to others. As a compensation for this activity, the society would offer them food and other items. As the times progressed, the Brahmin forgets his role in the society, but concentrates on food and feasts. This is not to ridicule all Brahmins as a sect. This is just an illustration of how great ideas turn into rituals. In turn this ritualistic living becomes the norm and accepted behavior.
The soldier is eager to get in the midst of war; he is more interested in exhibiting his bravery and might even create wars to satisfy himself that his bravery is noticed.
The scholar is fond of participating in assemblies and congregations to show off his knowledge. He never thinks in terms of using the knowledge he has to contain his ego , rather he enhances his ego in trying to exhibit his accomplishments.
Siddarameswara says that all the above instances indicate the participants consumed by illusion, rather than overcoming it. He offers salute to those individuals who do not get attracted by opportunities to just show off , rather they utilize their knowledge and awareness for containing the ego, realizing the ultimate truth and spreading it appropriately. He calls such individuals, the great Jangamas. These are the individuals who do not accept everything they come across freely. They examine and analyze every aspect of what they see very carefully, before accepting it. They are always awake and dynamic!
Let us grasp the real purpose of what we see and what we have!
KANNADA COMMENTARY
ಇಲ್ಲಿ ಸಿದ್ಧರಾಮರು ಸಾಧಾರಣ ಮನುಷ್ಯರ ಮತ್ತು ಜಂಗಮರ ನಡುವಿನ ಅಂತರವನ್ನು ವಿವರಿಸುತ್ತಿದ್ದಾರೆ. ಸಾಧಾರಣ ಮಾನವರು ಬಹು ಬೇಗ ಆಸೆಗಳಿಗೆ ಬಲಿಯಾಗುತ್ತಾರೆ. ಅವರು ತನುಗುಣಗಳಿಗೆ ಪಕ್ಕಾಗುತ್ತಾರೆ, ಆದರೆ ಜಂಗಮರು ಅವುಗಳ ಕಡೆಗೆ ಕಣ್ಣೆತ್ತಿಯೂ ನೋಡರು ಎಂದು ಹೇಳುತ್ತಾರೆ. ಇಲ್ಲಿ ಕೆಲವು ಉದಾಹರಣೆಗಳನ್ನೂ ಕೊಡುತ್ತಾರೆ. ಪಶುಗಳು ಹಸುರು ಗರಿಕೆ ಹುಲ್ಲನ್ನು ನೋಡಿ ಆಕರ್ಷಿತಗೊಂಡು ಅದನ್ನು ಆಶ್ರಯಿಸುತ್ತವೆ. ಇದು ಪಶುಗಳ ಗುಣ. ಆದರೆ ಅದೇ ರೀತಿಯಾದ ನಡತೆ ಮಾನವರಲ್ಲಿಯೂ ಕಂಡು ಬರುತ್ತದೆ ಎಂಬುದನ್ನುಹೇಳುತ್ತಿದ್ದಾರೆ. ಬ್ರಾಹ್ಮಣರು ಔತಣವನ್ನು ಕಂಡರೆ ಅಲ್ಲಿಗೆ ಹೋಗುವರು ಎನ್ನುತ್ತಿದ್ದಾರೆ. ಇದನ್ನು ಬ್ರಾಹ್ಮಣರ ಲೇವಡಿ ಎಂದು ಅರ್ಥಮಾಡಿಕೊಳ್ಳುವುದು ತರವಲ್ಲ. ಬ್ರಾಹ್ಮಣರು ಬ್ರಹ್ಮ ವಿದ್ಯೆಯನ್ನು ಪಡೆಯುವುದರಲ್ಲಿ ಮತ್ತು ಅದನ್ನು ಸಮಾಜಕ್ಕೆ ದಾನ ಮಾಡುದರಲ್ಲಿ ನಿರತರಾಗಿರುತ್ತಾರೆ.ಆದ್ದರಿಂದ ಅವರ ದೈಹಿಕವಾದ ಬೇಕುಗಳನ್ನು ನೋಡಿಕೊಳ್ಳುವುದು ಸಮಾಜದ ಕರ್ತವ್ಯ. ಇದು ನಡೆದುಕೊಂಡು ಬಂದ ಪದ್ಧತಿ. ಆದರೆ ಕಾಲಾಂತರದಲ್ಲಿ ಅದು ಕೇವಲ ಪದ್ಧತಿಯಾಗಿ ಉಳಿದು ಬ್ರಾಹ್ಮಣನು ಬ್ರಹ್ಮ ವಿದ್ಯೆಯನ್ನು ಪಡೆಯುವುದನ್ನು ಬಿಟ್ಟು ಕೇವಲ ಪೌರೋಹಿತ್ಯವನ್ನು ಮಾಡುತ್ತ ಹೊಟ್ಟೆಗಾಗಿ ಪರದಾಡುವ ಪರಿಸ್ಥಿತಿಯುಂಟಾಯಿತು. ಬ್ರಾಹ್ಮಣ ಕೇವಲ ಕೆಲ ಅನುಷ್ಠಾನಗಳನ್ನು ಮಾಡುತ್ತ ಬ್ರಹ್ಮವಿದ್ಯ್ರೆಯನ್ನು ಗಳಿಸುವುದನ್ನು ಮರತೇ ಬಿಟ್ಟನು. ಆದ್ದರಿಂದ ಆತನೂ ಕೂಡ ಸಾಮಾನ್ಯನಂತೆ ಆಸೆಗಳಿಗೆ ಬಲಿಯಾಗುತ್ತಾನೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದಾರೆ. ಈ ಮಾತು, ಕೇವಲ ವೇಷದಲ್ಲಿ ಜಂಗಮನಾಗಿರುವವನಿಗೂ ಅನ್ವಯಿಸುತ್ತದೆ. ಇನ್ನು ಶೂರನು ಯುದ್ಧವನ್ನು ಕಂಡರೆ ಸಾಕು ತನ್ನ ಶೌರ್ಯವನ್ನು ಮೆರೆಯಲು ಹಾತೊರೆದು ಹೋಗುತ್ತಾನೆ. ತನ್ನ ಶೌರ್ಯದ ಪ್ರದರ್ಶನವೇ ಆತನಿಗೆ ಮುಖ್ಯವಾಗುತ್ತದೆ. ವಿದ್ವಾಂಸನು ಗೋಷ್ಠಿ ನಡೆಯುತ್ತಿರುವುದನ್ನು ಕಂಡರೆ ಅಲ್ಲಿ ತನ್ನ ವಿದ್ವತ್ತನ್ನು ಪ್ರದರ್ಶಿಸಲು ಹೋಗುತ್ತಾನೆ. ಅವರಿಗೆ ತಮ್ಮ ವಿದ್ವತ್ತಿನ ಪ್ರದರ್ಶನ ಮುಖ್ಯವಾಗುತ್ತದೆ. ಇಲ್ಲಿ ಮೊದಲ ಎರಡು ಉದಾಹರಣೆಗಳಲ್ಲಿ ದೈಹಿಕ ಆಸೆ ತಣಿಸುವುದು ಮುಖ್ಯವಾಗುತ್ತದೆ. ಆಮೇಲಿನ ಎರಡು ಉದಾಹರಣೆಗಳಲ್ಲಿ ತಮ್ಮ ಅಹಂಕಾರವನ್ನು ತಣಿಸುವುದೇ ಮುಖ್ಯವಾಗುತ್ತದೆ. ಒಟ್ಟಿನಲ್ಲಿ “ತಾನು” ಎನ್ನುವುದು ಮುಖ್ಯವಾಗುತ್ತದೆ. ಅವರೆಲ್ಲರು ಮಾಯೆಗೊಳಗಾಗುತ್ತಾರೆ. ಆದರೆ (ನಿಜವಾದ) ಜಂಗಮರು ಈ ಆಕರ್ಷಣೆಗಳತ್ತ ಕಣ್ದೆರುದು ಕೂಡ ನೋಡುವುದಿಲ್ಲ ಎನ್ನುತ್ತಾರೆ. ಅಂತಹ ಜಂಗಮನಿಗೆ ನಾನು ನಮೋ ಎನ್ನುತ್ತೇನೆ ಎನ್ನುತ್ತಾರೆ ಸಿದ್ಧರಾಮರು. ಅಂದರೆ ತಮ್ಮ ಆಸೆಗಳಿಗೆ, ಅಹಂಕಾರಕ್ಕೆ ಬಲಿಯಾಗುವವರು ಸಾಮಾನ್ಯರು. ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ ಆ ಆಕರ್ಷಣೆಗಳ ಕಡೆಗೆ ಕಣ್ಣೆತ್ತಿಯೂ ನೋಡದವನು ಶ್ರೇಷ್ಠ ಎಂಬುದನ್ನು ಇಲ್ಲಿ ಸಾರುತ್ತಿದ್ದಾರೆ. ಇಲ್ಲಿ “ಕಂಡು ಕಂಡು” ಎನ್ನುವ ಪದ ಬಹು ಮುಖ್ಯವಾದದ್ದು. ಇತರರು ಆಸೆಗಳಿಗೆ, ಅಹಂಕಾರಕ್ಕೆ ಬಲಿಯಾದವರು ಪಡುವ ಪಾಡನ್ನು ಕಂಡು, ಅದರಿಂದ ಯಾವ ಸುಖವೂ ಇಲ್ಲ ಎಂಬುದನ್ನು ಅರಿತು ಅದನ್ನು ಬಯಸದಿರುವುದು, ಆಸೆ ಅಹಂಕಾರಗಳು ಆತ್ಮ ಜ್ಞಾನವನ್ನು ಪಡೆಯುವ ದಾರಿಯಲ್ಲಿ ಅಡ್ಡಿಯಾಗುತ್ತವೆ ಎಂದು ಅರಿತುಕೊಳ್ಳುವುದು. ಇದು ಕೇವಲ ಜಂಗಮರಿಗೆ ಮಾತ್ರ ಸಾಧ್ಯ. ಏಕೆಂದರೆ ಅವರು ಯಾವದನ್ನೂ ಸುಲಭವಾಗಿ ಒಪ್ಪಿಕೊಂಡು ಅಂಗೀಕರಿಸುವುದಿಲ್ಲ. ಯಾವುದನ್ನೂ ಯಾಂತ್ರಿಕವಾಗಿ ಮಾಡುವವರಲ್ಲ. ಎಲ್ಲವನ್ನೂ ತಳಮಟ್ಟದವರೆಗೆ ಪರೀಕ್ಷಿಸುವವರು. ಪ್ರತಿಯೊಂದನ್ನು ಒರೆಗೆ ಹಚ್ಚಿ ಸತ್ಯವನ್ನು ಕಂಡುಕೊಳ್ಳುವವರು. ಅವರು ಸದಾ ಎಚ್ಚರದಿಂದಿರುವರು. ಇಂತಹವರಿಗೆ ನಾನು ನಮೋ ನಮೋ ಎನ್ನುತ್ತೇನೆ ಎನ್ನುತ್ತಾರೆ ಸಿದ್ಧರಾಮರು.
No comments:
Post a Comment