ಕುಡಿಯುವ
ನೀರೆನ್ನಬಹುದೆ ಹುಡುಕುನೀರಲ್ಲದ್ದುವಾಗ?
ಆಡುವ
ಕಿಚ್ಚೆನ್ನಬಹುದೆ ಮನೆಯ ಸುಡುವಾಗ?
ಒಡಲು
ತನ್ನದೆನ್ನಬಹುದೆ ಪುಣ್ಯ ಪಾಪವನುಂಬಾಗ?
ಒಡಲಜೀವ
ತನ್ನದೆನ್ನಬಹುದೆ ಇಕ್ಕಿ ಹೋಹಾಗ?
ಇವನೊಡನೆ
ಬಡಿದು ಕಳೆ ಎಂದಾತ ಅಂಬಿಗರ ಚೌಡಯ್ಯ,
TRANSLITERATION
kuDiyuva nIrennabahude
huDukunIralladduvaaga?
aaDuva kiccennabahude
maneya suDuvaaga?
oDalu
tannadennabahude puNya paapavanuMbaaga?
oDala jIva
tannadennabahude ikki hOhaaga?
ivanoDane baDidu kale
eMdaata aMbigara couDayya.
CLICK HERE TO
READ-ALONG:
TRANSLATION (WORDS)
kuDiyuva
(drinking) nIrennabahude (can one say it
is just water?) huDuku (hot water)nIralladduvaaga (while drowning)?
aaDuva (negligible,
harmless) kiccennabahude (can one say it fire?) maneya suDuvaaga (while it is
burning the house)?
oDalu (stomach)
tannadennabahude (can one say it is my?) puNya paapavanuMbaaga (while eating good and
bad, doing good and bad deeds)?
oDala jIva (my life) tannadennabahude (can one call one’s own ?)
ikki hOhaaga (while going leaving the body behind)?
Ivanu (these) oDane (immediately)
baDidu kale (shake them away, get rid of) eMdaata (said) aMbigara
couDayya (Ambigara Choudayya).
TRANSLATION
Can one say ‘it is just drinking water’
while drowning in hot water?
Can one say ‘it is just a harmless fire’
while it is burning the house?
Can one say ‘it is just my stomach’ while
eating good and bad (i.e. performing good and bad deeds)?
Can one say ‘it is my own life’ while it is abandoning
the body and going away?
Get rid of these (attachments) immediately
said Ambigara
Choudayya.
COMMENTARY
In this Vachana, Sharana Ambigara Choudayya
examines our ways of life to impress on how we go wrong. He uses four examples
to show how we forego the true happiness when consumed by trivial aspects in
life.
Water is an important
part of our lives. We cannot live without water. It has become fashionable to
hold a bottle of water all through the day. It is a must for our lives. But,
can we ignore its destructive power when we are drowning in hot water saying
that it is ‘just drinking water’? In small (appropriate) volume water saves our
lives; as a flood it kills us. Realization of these extremes of its power is a
must!
Fire can bring us a lot
of enjoyment when it is small and utilitarian. It keeps us warm, cooks our food,
lights our nights and is indispensable. But, can we ignore its power saying
that ‘it is just a fire’ while it is burning the house? It is important to take
precautions to make sure that we are not burnt by it.
We stomach sour and
sweet dishes. We enjoy both types in appropriate quantities. A heavy Indulgent
in either kind brings us pain. So are the good and bad deeds we perform in our
lives.
Can we hold on to our
‘life’ when the body is taking its last breath? It is certainly beyond our
control. If so, why make an all-out effort to stop it?
Ambigara Choudayya
urges us to be mindful of what we do and what we have. Use them at the level
appropriate to their utility and make sure we are not consumed by them.
Let us be ‘appropriate’, not ‘over indulgent’!
KANNADA COMMENTARY
ಇಂದಿನ ನಮ್ಮ ಬದುಕಿನ ರೀತಿಗೆ ಕನ್ನಡಿ ಹಿಡಿದು ನಮ್ಮ ತಪ್ಪಿನರಿವನ್ನುಂಟು
ಮಾಡಿಕೊಡುವ ವಚನವಿದು. ಸೂಕ್ತವಾದ ಉದಾಹರಣೆಗಳನ್ನು ಕೊಟ್ಟು ನಾವು ಸಣ್ಣ ವಿಷಯಗಳೆಂದುಕೊಂಡವುಗಳು
ಹೇಗೆ ನಮ್ಮನ್ನು ಆವರಿಸಿಕೊಂಡು ನಮ್ಮ ನಿಜವಾದ ಸುಖವನ್ನೇ ಹಾಳು ಮಾಡುತ್ತವೆ ಎಂಬುದನ್ನು
ತೋರಿಸುತ್ತಿದ್ದಾರೆ ಅಂಬಿಗರ ಚೌಡಯ್ಯನವರು.
“ಕುಡಿಯುವ ನೀರೆನ್ನಬಹುದೆ ಹುಡುಕುನೀರಲ್ಲದ್ದುವಾಗ?” ಎನ್ನುತ್ತಾರೆ. ನೀರು
ಜೀವಿಗೆ ಅತಿ ಮುಖ್ಯವಾದದ್ದು. ಕುಡಿಯಲು ನೀರಿಲ್ಲದೆ ಬದುಕೇ ಅಸಾಧ್ಯ. ಹಾಗಾಗಿ ನೀರನ್ನು ಪ್ರೀತಿಸುವುದು ಸಹಜ. ಆದರೆ ಆ ನೀರು ಬಿಸಿಯಾಗಿ
ನಮ್ಮನ್ನು ಮುಳುಗಿಸುತ್ತಿರುವಾಗ “ಅದು ಕುಡಿಯುವ ನೀರು” ಎಂದು ಸುಮ್ಮನೆ ಇರಲು ಸಾಧ್ಯವೆ? ಹಾಗೆ
ಸುಮ್ಮನೆ ಇದ್ದರೆ ಅದು ನಮ್ಮನ್ನು ಪೂರ್ತಿಯಾಗಿ ಮುಳುಗಿಸಿಬಿಡುತ್ತದೆ.
“ಆಡುವ ಕಿಚ್ಚೆನ್ನಬಹುದೆ ಮನೆಯ ಸುಡುವಾಗ?” ಆಟ ಆಡುವ ಮಕ್ಕಳು ಯಾರಿಗೆ
ತೊಂದರೆಯುಂಟುಮಾಡಲು ಸಾಧ್ಯ? ಅದೇ ರೀತಿ ಸಣ್ಣದಾಗಿ ಉರಿಯುವ ಕಿಚ್ಚಿನಿಂದ ಯಾರಿಗೂ
ಅಪಾಯವಾಗುವುದಿಲ್ಲ. ಸ್ವಲ್ಪ ಸಮಯದನಂತರ ಅದು ತಾನಾಗಿಯೇ ಆರಿಹೋಗುತ್ತದೆ. ಆದರೆ ಮನೆಯನ್ನೇ
ಸುಡುತ್ತಿರುವಾಗ ಅದನ್ನು ಆಡುವ ಕಿಚ್ಚು ಎಂದು ಸುಮ್ಮನಿರುವುದು ಸರಿಯೆ? ಹಾಗೆಂದು ಸುಮ್ಮನಿದ್ದರೆ
ಅದು ನಮ್ಮ ಮನೆಯನ್ನೇ ಸುಟ್ಟುಬಿಟ್ಟು ನಮಗೇ ನೆಲೆಯಿಲ್ಲದಂತೆ ಮಾಡುತ್ತದೆ.
“ಒಡಲು ತನ್ನದೆನ್ನಬಹುದೆ ಪುಣ್ಯಪಾಪವನುಂಬಾಗ?” ಹೊಟ್ಟೆ ನನ್ನದು ನಾನು ಏನು
ಬೇಕಾದರೂ ತಿನ್ನುತ್ತೇನೆ ಎಂದು ಕೆಟ್ಟದ್ದನ್ನೂ
ಒಳ್ಳೆಯದನ್ನೂ ಬೇಕಾದಹಾಗೆ ತಿನ್ನಲು ಸಾಧ್ಯವೆ? ಒಳ್ಳೆಯದಾದರೂ ಆಗಲಿ
ಕೆಟ್ಟದ್ದಾದರೂ ಆಗಲಿ ನನ್ನಿಷ್ಟಬಂದಂತೆ ನಾನು ನಡೆದುಕೊಳ್ಳುತ್ತೇನೆ ಎನ್ನಬಹುದೆ? ಹಾಗೇನಾದರೂ
ಮಾಡಿದರೆ ಅದರ ಪರಿಣಾಮದಿಂದ ಕಷ್ಟಕ್ಕೊಳಗಾಗಬೇಕಾಗುತ್ತದೆ.
“ಒಡಲ ಜೀವ ತನ್ನದೆನ್ನಬಹುದೆ ಬಿಟ್ಟು ಹೋಹಾಗ?” ಜೀವವು ದೇಹವನ್ನು ಬಿಟ್ಟು
ಹೋಗುತ್ತಿರುವಾಗ “ಈ ಜೀವ ನನ್ನದು ನಾನು ಬಿಡಲಾರೆ” ಎನ್ನಲು ಸಾಧ್ಯವೆ? ಅದು ಹೇಗಾದರೂ ಹೋಗಿಯೇ
ಹೋಗುತ್ತದೆ. ಆದ್ದರಿಂದ ಅದಕ್ಕೆ ಅಂಟಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ.
ತಮಗೆ ಪ್ರಿಯವಾದವುಗಳು, ಅನಿವಾರ್ಯವಾದವುಗಳು, ತನ್ನದೇ ಆಗಿರುವವಂತಹವುಗಳು
ಎಲ್ಲವುಗಳನ್ನು ನಾವು ಅವುಗಳ ಮಿತಿಯನ್ನು ಅರಿತು ಅನುಭವಿಸಬೇಕು. ಅವುಗಳನ್ನು ಆಯಾ ಸ್ಥಾನಗಳಲ್ಲಿ
ಇರಿಸಬೇಕು. ಅಲ್ಲದಿರೆ ಅವು ನಮ್ಮನ್ನೇ ನುಂಗಿಬಿಡುತ್ತವೆ. ಅವುಗಳು ಅತಿಯಾಗಿ ಹೆಚ್ಚಿ ನಮ್ಮನ್ನು
ನುಂಗಲು ಬಂದಾಗ “ಬಡಿದು ಕಳೆ” ಎನ್ನುತ್ತ್ತಾರೆ ಅಂಬಿಗರ ಚೌಡಯ್ಯನವರು.
ನಮ್ಮ ಬದುಕಿನಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಮಗೆ ಬದುಕಿನಲ್ಲಿ
ಅನಿವಾರ್ಯವಾದವುಗಳು, ಪ್ರಿಯವಾದವುಗಳು, ಆಕರ್ಷಕವಾದವುಗಳು, ನಮ್ಮವು ಎಂದು
ಭ್ರಮೆಹುಟ್ಟಿಸುವಂತಹವು ಅನೇಕ ವಿಷಯಗಳಿರುವವು. ಉದಾಹರಣೆಗೆ; ನಮ್ಮ ವೃತ್ತಿ, ಹವ್ಯಾಸ,
ಮನೋರಂಜನೆಯ ಉಪಾಯಗಳು, ನಾನಾ ಅಭ್ಯಾಸಗಳು, ಪರಂಪರಾಗತ ರೀತಿ ನೀತಿಗಳು ಇತ್ಯಾದಿ. ಇವುಗಳು
ನಮ್ಮನ್ನು ಆವರಿಸಿರುತ್ತವೆ. ಮೇಲುನೋಟಕ್ಕೆ ಇವೆಲ್ಲ ಅಡ್ಡಿಗಳಂತೆ ತೋರುವುದೇ ಇಲ್ಲ. ನಾವು
ಅವುಗಳನ್ನು “ಕೇವಲ” ಎನ್ನುವ ದೃಷ್ಟಿಯಿಂದಲೇ ಕಾಣುತ್ತೇವೆ. ಅವು ಯಾವಾಗ ನಮ್ಮನ್ನು ಮುಳುಗಿಸಿ
ಬಿಡುತ್ತವೆ ಎನ್ನುವುದು ತಿಳಿಯುವುದೇ ಇಲ್ಲ.
ಅವು ನಮ್ಮನ್ನು ಮುಳುಗಿಸಿದರೆ ಏನಾಗುತ್ತದೆ? ಎಂಬ ಪ್ರಶ್ನೆ ಹುಟ್ಟುತ್ತದೆ.
ಅವು ನಿತ್ಯ ಸುಖಕೊಡುವವಲ್ಲ. ಅವು ಕೊಡುವ ಸುಖಕ್ಕೆ ಕೊನೆ ಎಂಬುದು ಇದೆ. ಮೊದ
ಮೊದಲು ಅವೆಲ್ಲ ಬಲು ಸುಖಕರವೆನಿಸುತ್ತವೆ. ಆದರೆ ನಿಧಾನವಾಗಿ ಅವು ತಮ್ಮ ಆಕರ್ಷಣೆ
ಕಳೆದುಕೊಳ್ಳುತ್ತವೆ. ಮನಸ್ಸು ಅವುಗಳಿಂದ ವಿಮುಖವಾಗುತ್ತದೆ. ಶಾಂತಿ ಇಲ್ಲದಾಗುತ್ತದೆ. ಆದ್ದರಿಂದ
ಅವುಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುವಾಗಲೇ ಅರಿತುಕೊಂಡು ಅವುಗಳನ್ನು ಸರಿಯಾದ
ಸ್ಥಾನದಲ್ಲಿರಿಸಬೇಕು ಎನ್ನುತ್ತಾರೆ ಅಂಬಿಗರ ಚೌಡಯ್ಯನವರು.
No comments:
Post a Comment