Friday, March 2, 2012

Vachana 79: Ghanagambhira Mahavarudhiyalli – All in Him and Him in All


ಘನಗಂಭೀರ ಮಹಾವಾರುಧಿಯಲ್ಲಿ
ನೊರೆ ತೆರೆ ಬುದ್ಬುದ ಫೇನ ತರಂಗಗಳು ತೋರಿತ್ತಲ್ಲಾ ಎಂದಡೆ
ಅವು ಬೇರೆಯಾಗಬಲ್ಲವೆ?
ಪರ ಶಿವನೆಂಬ ಅಂಬುಧಿಯಲ್ಲಿ
ಸಕಲ ಬ್ರಹ್ಮಾಂಡಗಳಾದವಲ್ಲದೆ ಬೇರಾಗಬಲ್ಲವೆ?
ಇದ ಬೇರೆಂಬ ಅರೆಮರುಳರ ನಾನೇನೆಂಬೆ?
ವಿಶ್ವವ ತಿಳಿದು ನೋಡಲು ಚೀಮಲಿಂಗೆಯ ಚೆನ್ನರಾಮನೆಂಬ ಲಿಂಗವು ತಾನೆ!

TRANSLITERATION

Ghana gaMbhIra mahaavaarudhiyalli
Nore tere budbuda phEna taraMgagaLu tOrittallaa eMdaDe
avu bEreyaagaballave?
parashivaneMba aMbudhiyalli
sakala brahmaaMDagaLaadavallade bEraagaballave?
Ida bEreMba aremaruLara naanEneMbe?
Vishvava tiLidu nODalu cImaliMgeya cennaraamaneMba liMgavu taane!

CLICK HERE TO READ-ALONG:

http://www.youtube.com/watch?v=JK9r3HOkCMI&feature=youtu.be

TRANSLATION (WORDS)

Ghana (profound) gaMbhIra (sublime) mahaavaarudhiyalli ( in the enormous ocean) Nore (froth) tere (ripple) budbuda( bubble) phEna ( foam) taraMgagaLu (waves) tOrittallaa (seen) eMdaDe(if said) avu (they) bEre (separate, diferent) aagaballuve?( can they be?) parashivanu (the Supreme Lord) eMba( said) aMbudhiyalli (in the ocean) sakala( all, entire) brahmaaMDagaLu (cosmos) aaduvallade (have not taken birth?) bEraagaballave? (will they be different, separate?)
Ida (this) bEreMba( saying, considering different) aremaruLara( half-witted individuals) naanEneMbe?(what can I call?)
Vishvava(the Universe) tiLidu(understanding) nODalu (seen) cImaliMgeya cennaraamaneMba liMgavu (it is cimalingeya cennaraama Linga) taane (alone).


TRANSLATION


How can the froth, ripple, bubbles, foam and waves seen in the profound, sublime and enormous ocean, be separate from it (the ocean)?
How can the entire Cosmos having taken its birth in the ocean known as the Lord Supreme, be separate from Him?
What shall I call the half-witted individuals who call them separate?
To observe and understand the Universe in full, all one needs is cimalingeya cennaraama Linga!


COMMENTARY

In this Vachana, Sharana Chandimarasa is emphasizing that despite multiple forms, there is only one Supreme Lord. The froth, ripples, bubbles and waves all appear in the ocean as distinct entities. But, they all belong to the ocean, with their basic constituent of water. Along the same lines, the entire Cosmos has taken its birth from the Supreme Lord. The Cosmos consisting of Universe, the planets, the stars, etc. are infinite forms of Him and are not separate from Him. Chandimarasa calls those trying to separate the two as half-witted and proclaims that all one needs to understand the Universe, is just concentrating on the Lord. He uses the Cennaraama Linga of Cimalinge as his signature.
Allama Prabhu said that the basic truth (the Lord) is one, but takes infinite forms. Chandimarasa is supporting that notion. We have said that every being in the Universe (Jeevaatma) has a spark of the Supreme soul (Paramaatma). Thus the Lord exists in each of us and each of us exists in Him. Krishna in Bhagavad Gita said that “He is in all and all are in Him”.

Although the froth, ripples and waves are distinct forms, it is very easy to realize that their prime constituent is the water in the ocean. These forms do not have separate existence from water. All the entities around us (planets, plants, animals, etc.) are so different in their form, it is difficult for us to realize that the basic constituent of each is the Lord. Such realization requires a subtle awareness. Development of such awareness requires a calm and settled mind.


Let us realize, that one Lord in all we see !

KANNADA COMMENTARY


ಇದು ಶರಣ ಚಂದಿಮರಸರ ವಚನ. ಇಲ್ಲಿ ದೇವರ ರೂಪಗಳು ಬೇರೆಬೇರೆಯಾದರೂ ಆ ಪರಶಿವನು ಒಬ್ಬನೇ ಎಂಬುದನ್ನು ಅವರು ಉದಾಹರಣೆ ಸಹಿತ ತಿಳಿಸುತ್ತಿದ್ದಾರೆ. ಮಹಾಸಾಗರದಲ್ಲಿ ಕಂಡು ಬರುವ ಗುಳ್ಳೆ, ನೊರೆ, ತೆರೆಗಳನ್ನು ಸಾಗರವಲ್ಲದೆ ಬೇರೆ ಎನ್ನಬಹುದೆ? ಅವು ಸಾಗರದ ಮೇಲ್ಭಾಗದಲ್ಲ್ಲಿ ಮಾತ್ರ ಕಂಡು ಬರುತ್ತವೆ. ಅಂದಮಾತ್ರಕ್ಕೆ ಅವು ಸಾಗರದಿಂದ ಬೇರೆಯಾಗಬಲ್ಲುವೆ? ಇಲ್ಲ. ಅದೇ ರೀತಿಯಾಗಿ ಪರಶಿವನೆಂಬ ಸಾಗರದಲ್ಲಿ ಸಕಲ ಬ್ರಹ್ಮಾಂಡಗಳಿವೆ. ಇಡೀ ವಿಶ್ವ, ಸೂರ್ಯ ಚಂದ್ರ ಇತರ ಗ್ರಹಗಳು, ಆಕಾಶಗಂಗೆಗಳು, ಉಳಿದೆಲ್ಲವೂಗಳು ಆತನಲ್ಲಿಯೇ ಜನ್ಮತಾಳಿವೆ. ಅಂದಮೇಲೆ ಅವು ಆತನಿಂದ ಹೇಗೆ ಬೇರೆಯಾಗಬಲ್ಲವು? ಇದನ್ನು ಅರ್ಥಮಾಡಿಕೊಳ್ಳದೆ ಅವುಗಳನ್ನು ಬೇರೆ ಎನ್ನುವ ಅರೆಮರುಳರನ್ನು ಏನೆನ್ನಬೇಕು ಎಂದು ಕೇಳುತ್ತಾರೆ. ಹಿಂದೆ ಅಲ್ಲಮರು ಹೇಳಿದಂತೆ ಇರುವ ಆ ಒಂದು ತತ್ವವೇ ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಅಂದಮಾತ್ರಕ್ಕೆ ಅದನ್ನು ಬೇರೆ ಬೇರೆ ಎನ್ನಲಾಗುವುದಿಲ್ಲ.

ನೀರಿನಲ್ಲಿ ಕಂಡು ಬರುವ ಅಲೆ,ಫೇನ, ಗುಳ್ಳೆಗಳು ಕೂಡ ನೀರೇ ಎಂದು ಅರ್ಥಮಾಡಿಕೊಳ್ಳುವುದು ಸುಲಭ. ಏಕೆಂದರೆ ಅವು ಇನ್ನೂ ನೀರಿನಲ್ಲಿಯೇ ಕಂಡುಬರುತ್ತವೆ.ಅವುಗಳಿಗೆ ನೀರಿನಿಂದ ದೂರವಾದ ಮೇಲೆ ಬೇರೆ ಅಸ್ತಿತ್ವವಿಲ್ಲ. ಆದರೆ ಪ್ರಕೃತಿಯಲ್ಲಿ ಇತರ ರೂಪಗಳು ಬಹು ಭಿನ್ನ ಭಿನ್ನವಾಗಿ ಕಂಡುಬರುತ್ತವೆ. ಅದು ಕೇವಲ ತೋರಿಕೆ. ಆದರೆ ಅವುಗಳ ರೂಪ ಸಂಪೂರ್ಣ ಭಿನ್ನವಾಗಿ ಕಾಣುತ್ತದೆ. ಆ ವಿಭಿನ್ನ ವಾದ ರೂಪಗಳ ಹಿಂದೆಯೂ ಕೂಡ ಅದೇ ತತ್ತ್ವ ಅಡಕವಾಗಿದೆ, ಆ ಎಲ್ಲವೂ ಕೂಡ ಒಂದೇ ಎಂದು ಕಂಡುಕೊಳ್ಳಲು ಸೂಕ್ಷ್ಮವಾದ ದೃಷ್ಟಿಯ ಅವಶ್ಯಕತೆ ಇದೆ. ಆ ಸೂಕ್ಷ್ಮ ದೃಷ್ಟಿ ಅಳವಡಬೇಕಾದರೆ ಮನಸ್ಸು ಶಾಂತವಾಗಬೇಕು. ಈ ರೀತಿಯಾಗಿ ಚೀಮಲಿಂಗೆಯ ಚೆನ್ನರಾಮನನ್ನು ಅರ್ಥಮಾಡಿಕೊಳ್ಳದ ಜನರು ಅರೆಮರುಳು ಎನ್ನುವರು ಚಂದಿಮರಸರು.


1 comment: