Friday, March 30, 2012

Vachana 83: Kangaleke Nodabedavendade Maanavu? - Overcoming Senses


ಕಂಗಳೇಕೆ ನೋಡಬೇಡವೆಂದಡೆ ಮಾಣವು?
ಶ್ರೋತೃಂಗಳೇಕೆ ಆಲಿಸಬೇಡವೆಂದಡೆ ಮಾಣವು?
ಜಿಹ್ವೆಯೇಕೆ ರುಚಿಸಬೇಡವೆಂದಡೆ ಮಾಣವು?
ನಾಸಿಕವೇಕೆ ವಾಸಿಸಬೇಡವೆಂದಡೆ ಮಾಣವು?
ತ್ವಕ್ಕೇಕೆ ಸೋಂಕಿಸಬೇಡವೆಂದಡೆ ಮಾಣವು?
ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು
ಗುಹೇಶ್ವರಲಿಂಗಕ್ಕೆ ಒಲಿದ ಕಾರಣ 
ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು

TRANSLITERATION

kaMgaLEke nODabEdaveMdaDe maaNavu?
shrOtRuMgaLEke aalisabEdaveMdaDe maaNavu?
jihveyEke  rucisabEdaveMdaDe maaNavu?
naasikavEke vaasisabEdaveMdaDe maaNavu? 
tvakkEke sOMkisabEdaveMdaDe maaNavu?
I bhEdavanaridu nuDiyalu samadhaatuvaayittu
guhEshvaraliMgakke olida kaaraNa 
abhimaana lajje bEsattu hOyittu

CLICK HERE TO READ-ALONG:

http://www.youtube.com/watch?v=wEi1fpHD_Yg&feature=youtu.be



TRANSLATION (WORDS)

kaMgaLEke (why do the eyes) nODabEdaveMdaDe( if asked not to see) maaNavu? (don’t let go/ quit)
shrOtRuMgaLEke (why do the ears) aalisabEdaveMdaDe(if asked not to listen/ hear) maaNavu?( don’t let go/ quit)
jihveyEke(why do the tongue)  bEdaveMdaDe (if asked not to taste) maaNavu?( don’t let go/ quit)
naasikavEke( why do the nose) vaasisabEdaveMdaDe(if asked not to smell) maaNavu? (don’t let go/ quit)
tvakkEke(why do the skin) sOMkisabEdaveMdaDe (if asked not to touch) maaNavu?( don’t let go/ quit)
I(this) bhEdavanaridu(by knowing this secret) nuDiyalu(if said, revealed) sama(equal, one with)dhaatuvaayittu (the original, the god)
guhEshvaraliMgakke(for Guheshvara) olida (surrender, love) kaaraNa(for the reason of) 
abhimaana(pride) lajje (shame,shyness) bEsattu(bored, tired) hOyittu(disappeared)

TRANSLATION

Why do the eyes, when asked not to see, don’t quit seeing?
Why do the ears, when asked not to hear, don’t quit hearing? 
Why does the tongue, when asked not to taste, doesn’t quit tasting?
Why does the nose, when asked not to smell, doesn’t quit smelling? 
Why does the skin, when asked not to touch, doesn’t quit touching? 
On knowing the secret and revealing, they merge in Him!
On surrendering to Guhesvara Linga, pride and shyness get tired and dissappear!

COMMENTARY

The key phrase in this Vachana by Allama Prabhu is ‘sama (equal, one with)dhaatuvaayittu (the original, the god)’ meaning merging or one with Him. This is linga-anga saamarasya! What is holding us from achieving this state is our dependence on the five sense organs. We do not know how to be free from them. We can command these organs not to see, not to hear, not to taste, not to smell, and not to touch. But, they do not heed. Their very nature is always to sense the external. They are not designed to perceive the internal. Since we lack this knowledge, we get immersed in materialistic endeavors. When we experience good, we get intoxicated with joy and our ego goes further up. When we experience bad, our sorrow takes us down to depths. We can never have the strength to escape from the influence of the five sense organs. It is interesting that Allama Prabhu chooses to ask five questions one for each organ, instead of asking one common question for all. His repeated questioning must have come from his deep inspection of  how to escape from the influence of these organs, or his intent to stress how important it is for us to look deep into the nature of these organs.

How does one gain the knowledge of becoming free from the influence of these organs? It has to come from a knowledgeable Guru who has conquered them. Once knowing this secret, the disciple follows it and overcomes the influence of sense organs and merges with God. Having merged with God and surrendered to Him, his ego, shyness and other negative attributes vanish. The lesson then is not attempting to control the sense organs, but to become free from their influence. The teacher can transfer the required knowledge, but the disciple is the one who has to follow it.


Let us not be swayed by the sensory pleasures and displeasures!
  
KANNADA COMMENTARY

“ಸಮಧಾತು” ಪದದ ಅರ್ಥವನ್ನು ನೋಡೋಣ. ಸಮ=ಸಮಾನ, ಒಂದೇ ರೀತಿಯ,   ಧಾತು=ಮೂಲ ವಸ್ತು, ದೇವರು. ಜೀವವು ಮೂಲವಸ್ತುವಾದ ಆ ದೇವರೊಂದಿಗೆ ಒಂದಾಗುವುದು ಎಂದರ್ಥ. ಈ ದಿಸೆಯಲ್ಲಿ ಅಡ್ಡಿಯುಂಟಾಗುವುದು ಇಂದ್ರಿಯಗಳು ವಿಷಯಗಳಲ್ಲಿ ತೊಡಗುವುದರಿಂದ. ಲಿಂಗದೊಂದಿಗೆ ಒಂದಾಗದೆ ಇರುವುದಕ್ಕೆ ನಾವುಗಳು ಇಂದ್ರಿಯಗಳಿಗೆ ವಶವಾಗಿರುವುದೇ ಕಾರಣ. ಮತ್ತು ಅವುಗಳಿಂದ ಬಿಡುಗಡೆ ಪಡೆಯುವ ರೀತಿ ನಮಗೆ ತಿಳಿದಿಲ್ಲ. ನಾವು ಅವುಗಳಿಗೆ “ನೀನು ನೋಡಬೇಡ, ಆಲಿಸಬೇಡ, ವಾಸನೆ ನೋಡಬೇಡ, ಸ್ಪರ್ಶಿಸಬೇಡ, ರುಚಿಸಬೇಡ “ ಎಂದೆಲ್ಲ ಹೇಳುತ್ತೇವೆ. ಆದರೆ ಇಂದ್ರಿಯಗಳು ಯಾವುದನ್ನೂ ಕೇಳುವುದಿಲ್ಲ. ಏಕೆಂದರೆ ಅವುಗಳ ರೀತಿಯೇ ಹೊರಗೆ ಹೋಗುವುದು. ಅಂದರೆ ಹೊರಗೆ  ಇರುವುದಕ್ಕೇ ಮಹತ್ವ ಕೊಡುವುದು, ಒಳಗನ್ನು ನೋಡುವುದರ ಕಡೆಗೆ ಗಮನವಿರುವುದಿಲ್ಲ. ಆದರೆ  ಇದು ನಮಗೆ ತಿಳಿಯುವುದಿಲ್ಲ. ಈ ಅಜ್ಞಾನದ ಕಾರಣದಿಂದಲೇ ಹೊರಗಣ ಬದುಕಿನಲ್ಲಿ ತನ್ನನ್ನು ತಾನು ಸಿಲುಕಿಸಿಕೊಂಡು ನಾನಾ ಕೋಟಲೆಗೊಳಗಾಗುತ್ತದೆ ಜೀವ. ಒಳ್ಳೆಯದನ್ನು ಅನುಭವಿಸಿದಾಗ ಸಂತೋಷ ತಲೆಗೇರಿ ಅಹಂಕಾರ ಉಂಟಾಗುತ್ತದೆ, ಕೆಟ್ಟದ್ದನ್ನು ಅನುಭವಿಸಿದಾಗ ದುಃಖದಿಂದ ಪಾತಾಳಕ್ಕಿಳಿಯುತ್ತದೆ ಜೀವ. ಆಗ  ಅದು ಈ ತೊಳಲಿಕೆಯಿಂದ ದೂರವಿರಲು ಪ್ರತಿಯೊಂದು ಇಂದ್ರಿಯಕ್ಕೂ ಬುದ್ಧಿ ಹೇಳುವ ಪ್ರಯತ್ನ ಮಾಡುತ್ತದೆ.  ಅಲ್ಲಮ ಪ್ರಭುಗಳು, ಏಕೆ ಇಂದ್ರಿಯಗಳು ಬೇಡವೆಂದರೂ ವಿಷಯಗಳಲ್ಲಿ ತೊಡಗುತ್ತವೆ ಎಂದು ಕೇಳುತ್ತಾರೆ. ಈ ವಚನದ ಧಾಟಿಯ ಕಡೆಗೆ ಗಮನಕೊಡುವುದು ಮುಖ್ಯ. ಅಲ್ಲಮರು, ಕಣ್ಣುಗಳೇಕೆ ನೋಡಬೇಡವೆಂದರೂ ನೋಡುವುದನ್ನು ಬಿಡುವುದಿಲ್ಲ? ಕಿವಿಗಳೇಕೆ ಕೇಳಬೇಡವೆಂದರೂ ಕೇಳುವುದನ್ನು ಬಿಡುವುದಿಲ್ಲ? ಮೂಗೇಕೆ ಆಘ್ರಾಣಿಣಸಬೇಡವೆಂದರೂ ಆಘ್ರಾಣಿಸುವುದನ್ನು ಬಿಡುವುದಿಲ್ಲ? ನಾಲಿಗೆ ಏಕೆ ರುಚಿಸಬೇಡ ಎಂದರೂ ರುಚಿಸುವುದನ್ನು ಬಿಡುವುದಿಲ್ಲ? ತ್ವಚೆಯು ಸ್ಪರ್ಶಿಸಬೇಡವೆಂದರೂ ಸ್ಪರ್ಶಿಸುವುದನ್ನು ಬಿಡುವುದಿಲ್ಲ?” ಎಂದು ಪ್ರತಿಯೊಂದು ಇಂದ್ರಿಯವನ್ನು ಕುರಿತು ಪ್ರಶ್ನೆ ಕೇಳುತ್ತಿದ್ದಾರೆ. ಎಲ್ಲ ಇಂದ್ರಿಯಗಳನ್ನು ಕುರಿತು ಒಂದೇ ಸಲ ಪ್ರಶ್ನೆ ಕೇಳಿದ್ದರಾಗುತ್ತಿತ್ತು. ಅವರು ಮತ್ತೆ ಮತ್ತೆ ಈ ಪ್ರಶ್ನೆ ಕೇಳುವುದರ ಅರ್ಥ, ಇಂದ್ರಿಯಗಳಿಂದ ಘಾಸಿಗೊಂಡಿರುವುದಾಗಿದೆ, ಇಂದ್ರಿಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಾಗಿದೆ. ಅವುಗಳ ಸ್ವಭಾವವನ್ನು ಅರಿತುಕೊಳ್ಳುವುದರ ಕಡೆಗೆ ಗಮನವೀಯುವುದರ ಸೂಚನೆಯಾಗಿದೆ. ಪದೇ ಪದೇ ಅದನ್ನು ಕೇಳುವುದು, ಅವುಗಳು ಜೀವನನ್ನು ಅಪಾರವಾಗಿ ಕಾಡುವುದನ್ನು ಬಿಂಬಿಸುತ್ತದೆ.  ಇಂದ್ರಿಯಗಳು  ಯಾವುದಕ್ಕೂ ಜಗ್ಗುವುದಿಲ್ಲ. ಅವು ತಮ್ಮ ಆಟ ಆಡುತ್ತಲೇ ಇರುತ್ತವೆ. ಅಂದರೆ ಹೊರಗಿನ ಅಂಶಗಳಲ್ಲಿ ತೊಡಗಿಕೊಂಡು ಘಾಸಿಗೊಳ್ಳುತ್ತವೆ, ದುಃಖಕ್ಕೆ ಈಡಾಗುತ್ತವೆ. ಇವುಗಳಿಂದ ಬಿಡುಗಡೆ ಹೇಗೆ? ಅಲ್ಲಮ ಪ್ರಭುಗಳು ಹೇಳುತ್ತಾರೆ  “ ಇದರ ರಹಸ್ಯವನ್ನು ಅರಿತು ಹೇಳಿದಾಗ ಜೀವ ಲಿಂಗದೊಂದಿಗೆ ಒಂದಾಗುತ್ತದೆ” ಎಂದು. ಆದರೆ ಇಂದ್ರಿಯಗಳ ರಹಸ್ಯವನ್ನು ಹೇಳುವವರು ಯಾರು? ಅದನ್ನು ಹೇಳುವವನು ಗುರು. ಗುರುವು ಇಂದ್ರಿಯಗಳು ಹೇಗೆ ವರ್ತಿಸುತ್ತವೆ, ಅವುಗಳ ಸ್ವಭಾವ ಎಂತಹುದು, ಅವುಗಳಿಂದ ಬಿಡುಗಡೆ ಹೇಗೆ ಪಡೆಯಬಹುದು, ಎಂಬುದರ ರಹಸ್ಯವನ್ನು ಬಲ್ಲವನಾಗಿದ್ದು ತಿಳಿಸಿ ಹೇಳುತ್ತಾನೆ. ಆಗ ಸಾಧಕನು ಆ ದಾರಿಯಲ್ಲಿ ನಡೆಯುತ್ತಾನೆ ಮತ್ತು ಆತನಿಗೆ ಅರಿವುಂಟಾಗುತ್ತದೆ. ಆಗ ಗುಹೇಶ್ವರನ ಬಗ್ಗೆ ಒಲವು ಮೂಡುತ್ತದೆ. ಆ ಒಲವಿನ ಕಾರಣದಿಂದ ಮಾನಸಿಕ ದೌರ್ಬಲ್ಯಗಳಾದ ಅಭಿಮಾನ ಮತ್ತು ಲಜ್ಜೆಗಳು ಹೇಳ ಹೆಸರಿಲ್ಲದೆ ಅಡಗಿ ಹೋಗುತ್ತವೆ ಎನ್ನುತ್ತಾರೆ ಅಲ್ಲಮರು. ಒಟ್ಟಿನಲ್ಲಿ  ಇಂದ್ರಿಯಗಳನ್ನು ತುಳಿಯುವುದು ಅಥವಾ ಅವುಗಳಿಗೆ ತಿಳಿ ಹೇಳುವುದು ಮುಂತಾದ ದಾರಿಗಳಿಂದ ಯಾವ ಪ್ರಯೋಜನವೂ ಇಲ್ಲ.  ಅವುಗಳ ಪ್ರಭಾವದಿಂದ ಬಿಡುಗಡೆಗೆ ಬೇರೆ ದಾರಿಯನ್ನೇ ಕೈಗೊಳ್ಳಬೇಕು. ಆ ದಾರಿಯನ್ನು ಅರಿತವನೊಬ್ಬನು ತೋರಬಹುದು ಆದರೆ ದಾರಿ ತುಳಿಯಬೇಕಾದವನು ಜೀವನು. 

No comments:

Post a Comment