Friday, March 23, 2012

Vachana 82: kangala mundana belaga kanade - See the Light!

ಕಂಗಳ ಮುಂದಣ ಬೆಳಗ ಕಾಣದೆ ಕಂಡಕಂಡವರ ಹಿಂದೆ ಹರಿದು,
ಇನ್ನು ಬೇರೆ ಕಂಡೆನೆಂಬ ಭಂಗಿತರ ನೋಡಾ!
ತನ್ನಲ್ಲಿ ತಾ ಸುಯಿದಾನಿಯಾಗಿ ನೋಡಲರಿಯದೆ,
ಭಿನ್ನಗಣ್ಣಲಿ ನೋಡಿಹೆನೆಂದು ತಮ್ಮ ಮರೆದು
ಇನ್ನುಂಟೆಂದು ಅರಸುವ ಅಣ್ಣಗಳಿರಾ, ನೀವು ಕೇಳಿರೆ.
ಮನವು ಮಹದಲ್ಲಿ ನಿಂದುದೆ ಲಿಂಗ;
ಕರಣಂಗಳರತುದೆ  ಕಂಗಳ ಮುಂದಣ ಬೆಳಗು,
ಇದನರಿಯದೆ, ಮುಂದೆ ಘನವುಂಟೆಂದು ತೊಳಲಿ ಬಳಲಿ, ಅರಸಿಹೆನೆಂದು
ಅರೆಮರುಳಾಗಿ ಹೋದರಯ್ಯಾ ನಿಮ್ಮ ನೆಲೆಯನರಿಯದೆ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ 

TRANSLITERATION

kaMgala muMdaNa beLaga kaaNade kaMDakaMDavara hiMde haridu
innu bEre kaMDeneMba bhaMgitara nODaa!
Tannalli taa suyidaaniyaagi nODalariyade
bhinnagaNNali nODiheneMdu tamma maredu
innuMTeMdu arasuva aNNagaLiraa, nIvu kELire.
Manavu mahadalli niMdude liMga;
karaNaMgaratude kaMgaLa muMdaNa beLagu.
Idanariyade muMde ghanavuMTeMdu toLali baLali arasiheneMdu
aremaruLaagi hodarayyaa nimma neleyanariyade
appaNNapriya cennabasavaNNa

CLICK HERE TO READ-ALONG:

http://www.youtube.com/watch?v=Rust-qMad2c&feature=youtu.be

TRANSLATION (WORDS)

kaMgala( of eyes) muMdaNa (in front,)  beLaga (light) kaaNade( without seeing) kaMDakaMDavara (every Tom, Dick and Harry, all kinds of people) hiMde (behind) haridu (going)
innu ( now) bEre (other, different)  kaMDeneMba (I saw) bhaMgitara(disappointed people) nODaa!(you see)
Tannalli (in oneself) taa (one) suyidaaniyaagi (being awake) nODalariyade (not knowing to see)
bhinnagaNNali (through different eye, other than being awake) nODiheneMdu (say that I have seen) tamma( themselves) maredu(forget)
innuMTeMdu (thinking that there is more) arasuva (seeking) aNNagaLiraa,(Oh! Brothers) nIvu kELire.(you listen)
Manavu (mind) mahadalli (in the profound) niMdude(If established) liMga;(that is linga)
karaNaMgaratude( that which is understood by the senses) kaMgaLa  (the eyes) muMdaNa (before) beLagu.(is light)
Idanariyade (without understanding this) muMde (somewhere far off) ghanavuMTeMdu( is profound) toLali (being suffered) baLali (being exausted) arasiheneMdu (saying that I have found)
aremaruLaagi ( Half mad) hodarayyaa (are gone)  nimma (your) neleyanariyade (not knowing dwelling, abode)
appaNNapriya cennabasavaNNa (Appannapriya chennabasavanna)

TRANSLATION

Pray see, these disappointed people running behind everyone else to find the light, without seeing the light right before their eyes!
Pray listen, Oh brothers! Without knowing how to awaken the within to see the divine, you are seeking the eyes of someone else to see the divine!
Establishing the mind in the profound is finding Him!
That which is understood by the senses is the light before the eyes!
Not realizing this, looking for the divine all over, they have suffered, exhausted and have become half-witted, while not finding Your Abode, Oh  AppaNNapriya CennabasavaNNa!

COMMENTARY

This Vachana is from Sharane Lingamma, wife of Sharana Hadapada Appanna. She uses the signature  AppaNNapriya (Appanna’s beloved)  CennabasavaNNa! She is lamenting on how we simply do not recognize the divine right before our eyes, but look for all the wrong places with all the wrong aids to see Him. To see the Light (the profound, the divine) all that is needed is awakening the within or developing a keen awareness. It has to come from within. It cannot be transferred by one to other. Lingamma says that establishing the mind in the Profound is the right light to be seen. We do not recognize this simple fact. We are always distracted by our senses and hence we are told that we need to control them. Lingamma on the other hand says that what we perceive from our senses leads to the divine light! We have all we need. It is just a matter of utilizing what our senses offer (i.e. understanding the senses) to see the divine. She is asking us to open our keen, observative eye and set the mind on the divine, rather than going around finding all sorts of devices, rituals and individuals to follow. While she calls us half-witted, tired and exhausted because of these unnecessary means, her compassion pours out when she uses  ‘Oh! Elder brothers!’ to alert us!


Let us open our inner eyes to understand the senses  and see the Light! 


KANNADA COMMENTARY

ಇದು ಹಡಪದ ಅಪ್ಪಣ್ಣನವರ ಪತ್ನಿಯಾದ ಲಿಂಗಮ್ಮನ ವಚನ. ಇಲ್ಲಿ ಆಕೆ ಸಾಮಾನ್ಯರ ಅರೆಮರುಳುತನವನ್ನು ಚೆನ್ನಾಗಿ ತಿಳಿಸುತ್ತಿದ್ದಾಳೆ. ಆ ಮಹಾಬೆಳಗು ಕಣ್ಣಮುಂದೆಯೇ ಇದೆ. ಆದರೆ ಅದನ್ನು ನೋಡುವುದರಲ್ಲಿ ಜನರಿಗೆ ಆಸಕ್ತಿ ಇಲ್ಲ. ಕಂಡಕಂಡವರು ಹೇಳುತ್ತಿರುವುದರ ಹಿಂದೆ ಹೋಗುವುದರಲ್ಲಿ ಅವರಿಗೆ ಆಸಕ್ತಿ ಇದೆ. ಅವರ ಹಿಂದೆ ಹೋಗಿ ಏನೋ ಬೇರೆ ಕಾಣುತ್ತೇನೆ ಎಂದು ನಿರಾಶೆಗೊಳ್ಳುತ್ತಾರೆ. ತನ್ನನ್ನು ತಾನು ಶಾಂತಿಯಿಂದ, ಎಚ್ಚರಿಕೆಯ ಕಣ್ಣಿನಿಂದ ನೋಡಲು ಅರಿಯದೆ ಬೇರೆ ಕಣ್ಣಿನಿಂದ ನೋಡುತ್ತೇನೆ ಎಂದು ತನ್ನನ್ನೇ ಮರೆತು ಬೇರೆ ಏನನ್ನೋ ಹುಡುಕುವವರನ್ನು ಪ್ರೀತಿಂದ ಅಣ್ಣಗಳಿರಾ ಎಂದು ಸಂಬೊಧಿಸುತ್ತ ಕಳಕಳಿಯಿಂದ ನೀವು ನೋಡಿರಿ, ಕೇಳಿರಿ ಎಂದು ಹೇಳುತ್ತಿದ್ದಾಳೆ. ಬೆಳಗನ್ನು ಕಾಣಲು ಸಾಧ್ಯವಾಗುವುದು ಕೇವಲ ಎಚ್ಚರವೆಂಬ ಕಣ್ಣಿನಿಂದ. ಅದನ್ನು ಬಿಟ್ಟು ಅಂದರೆ ಎಚ್ಚರವಾಗಿರಲು ಸೋಮಾರಿತನದಿಂದ ಬೇರೆ ಕಣ್ಣಲಿ ನೋಡುತ್ತೇನೆ ಎಂಬುದು ಹುಚ್ಚುತನ. ಅಂತಹವರಿಗೆ ಯಾವುದು ಬೆಳಗು, ಯಾವುದು ಲಿಂಗ ಎಂಬುದನ್ನು ಅತ್ಯಂತ ಸರಳವಾಗಿ ತಿಳಿಸುತ್ತಿದ್ದಾಳೆ. ಮನಸ್ಸು ಆ ಮಹತ್ತಿನಲ್ಲಿ ನೆಲೆಗೊಳ್ಳುವುದೇ ಲಿಂಗವೆನ್ನುತ್ತಾಳೆ. ಎಲ್ಲರಿಗೂ ಆ ಮಹತ್ತಿನ ಅನುಭವ ಯಾವಾಗಲಾದರೊಮ್ಮೆಯಾದರೂ ಆಗಿಯೇ ಆಗುತ್ತದೆ. ಆದರೆ ಎಲ್ಲರೂ ಅದನ್ನು ಗುರುತಿಸುವುದಿಲ್ಲ. ತಮ್ಮ ತಮ್ಮ ಲೋಕದಲ್ಲಿ, ಇಂದ್ರಿಯಗಳ ಎಳೆದಾಟದಲ್ಲಿ ಸಿಲುಕಿಕೊಂಡಿರುವುದರಿಂದ ಅದು ಗಮನಕ್ಕೆ ಬರುವುದಿಲ್ಲ. ಅಪ್ಪಿ ತಪ್ಪಿ ಅದು ಅನುಭವಕ್ಕೆ ಬಂದರೂ ಮನಸ್ಸನ್ನು ಅದರಲ್ಲಿ ನಿಲ್ಲಿಸುವುದು ಕಷ್ಟ ಸಾಧ್ಯ. ಆದರೆ ಮನಸ್ಸನ್ನು ಅದರಲ್ಲಿ ನಿಲ್ಲಿಸುವುದೇ ಲಿಂಗವೆನ್ನುತ್ತಾಳೆ ಹಡಪದ ಲಿಂಗಮ್ಮ. ಅಷ್ಟೇ ಅಲ್ಲ ಮುಂದೆ, ಎಚ್ಚರವಾಗಿದ್ದು ಇಂದ್ರಿಯಗಳನ್ನು ಗಮನಿಸಿ ಅರಿತುಕೊಳ್ಳುವುದೇ ಬೆಳಗು ಎನ್ನುತ್ತಾಳೆ. ಇಲ್ಲಿ ಗಮನಿಸಬೇಕಾದದ್ದೇನೆಂದರೆ ಇಂದ್ರಿಯಗಳನ್ನು ತುಳಿಯಬೇಕು ಅಥವಾ ನಿಗ್ರಹಿಸಬೇಕೆಂದು ಅವಳು ಹೇಳುತ್ತಿಲ್ಲ. ಅವುಗಳನ್ನು ಅರಿತುಕೊಳ್ಳಬೇಕೆಂದು ಹೇಳುತ್ತಿರುವುದು ವಿಶೇಷ. ಏಕೆಂದರೆ ಇಂದ್ರಿಯಗಳನ್ನು ನಿಗ್ರಹಿಸುವುದಾಗಲಿ ಅಥವಾ ತುಳಿದಿಡುವುದಾಗಲಿ ಎರಡೂ ಅಪಾಯಕಾರಿ. ಏಕೆಂದರೆ   ನಿಗ್ರಹ, ತುಳಿತ ಸ್ವಲ್ಪ ಸಡಿಲವಾದರೂ ಸಾಕು ಇಂದ್ರಿಯಗಳು ಇಮ್ಮಡಿ ಶಕ್ತಿಯಿಂದ ತಲೆ ಎತ್ತಿ ದಾರಿತಪ್ಪಿಸುತ್ತವೆ. ಇದರ ಪೂರ್ಣವಾದ ಅರಿವಿದ್ದುದರಿಂದಲೇ ಲಿಂಗಮ್ಮ ಇಂದ್ರಿಯಗಳ ಅರಿವು ದೂರ ಹೋಗಬೇಕಾಗಿಲ್ಲ. ಎಚ್ಚರವಾಗಿರುವ ಕಣ್ಣುಗಳ ಮುಂದೆಯೇ ಅದು ಇರುತ್ತದೆ. ಅವುಗಳ ಅರಿವೇ ಕಣ್ಣ  ಮುಂದಿರುವ ಬೆಳಗು ಅಥವಾ ಜ್ಞಾನ ಎನ್ನುತ್ತಾಳೆ. ಆ ಬೆಳಗನ್ನು ಕಾಣಲು ಎಲ್ಲಿಯೂ ಹೋಗಬೇಕಾಗಿಲ್ಲ, ಇತರ ಜ್ಞಾನಿಗಳನ್ನು ಹಿಂಬಾಲಿಸಬೇಕಾಗಿಲ್ಲ. ಇದನ್ನು ಅರಿಯದೆ ಎಲ್ಲೋ ದೂರದಲ್ಲಿ ಘನವಾದದ್ದೇನೋ ಇದೆ ಎಂದು ಭಾವಿಸಿ ಅದನ್ನು ಪಡೆಯಲು ತೊಳಲುವುದು, ಬಳಲುವುದು ಜನರ ರೀತಿಯಾಗಿದೆ. ಇಲ್ಲಿ ಆಕೆ ಬಳಸಿದ  ತೊಳಲುವುದು, ಬಳಲುವುದು ಎಂಬ ಪದಗಳನ್ನು ಗಮನಿಸ ಬೇಕು. ತನ್ನಲ್ಲಿ ಇರುವುದನ್ನು ಕಡೆಗಣಿಸಿ, ಇಲ್ಲದ್ದನ್ನು ಬೇರೆ ಎಲ್ಲಿಯೋ ಹುಡುಕಿದರೆ ತೊಳಲಿಕೆ ಬಳಲಿಕೆಯಲ್ಲದೆ ಏನೂ ದೊರಕದು. ಇಂತಹ ಕೆಲಸ ಮಾಡುವವರು ದೇವರ ನೆಲೆಯನ್ನರಿಯದೆ ಅರೆಮರುಳಾಗಿ ಹೋಗುತ್ತಾರೆ. ಅವರು ಆ ಮರುಳುತನದಿಂದ  ಹೊರಬರುವುದು ಸಾಧ್ಯವೇ ಇಲ್ಲವೆನ್ನುವ ಧ್ವನಿ  ವಚನದಲ್ಲಿದೆ. 

1 comment:

 1. My two take home points of this vachana are,
  1. We are too lazy to open our eyes to see the greatness/supreme that is available to us.
  2. We can conquer our desires/sense organs not thru deprivation or force but thru understanding their nature.

  Once again, the sophistication and maturity of thought is amazing.
  thanks
  Bharti

  ReplyDelete