Friday, March 16, 2012

Vachana 81: nambaru Neccharu – Belief and Trust


ನಂಬರು ನೆಚ್ಚರು ಬರಿದೆ ಕರೆವರು ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದಡೆ ಓ ಎನ್ನನೆ ಶಿವನು?
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ

TRANSLITERATION

naMbaru neccaru baride karevaru
naMbalariyarI jagada manujaru
naMbi karedaDe O ennane shivanu?
namBade neccade baride karevara
koMba meTTi kUgeMda kUDalasaMgamadEva

CLICK HERE TO READ-ALONG:

http://www.youtube.com/watch?v=A3Oror0h0OI&feature=youtu.be

TRANSLATION (WORDS)

naMbaru (they don’t believe) neccaru (they don’t trust) baride (simply, just) karevaru( they call, plea)
naMbalariyaru ( don’t know to believe) I (this) jagada (world’s) manujaru (people)
naMbi (with belief) karedaDe (if one calls) O ennane (will he not respond?) shivanu (Shiva)?
namBade (without believing) neccade (without trusting) baride (simply) karevara ( of people who call)
koMba (horn- symbol of ego) meTTi (stamp, trample) kUgeMda ( announce, let others know it) kUDalasaMgamadEva (Kudalsamgamadeva)


TRANSLATION

They neither believe nor trust, but just call Him.
These people of the world, who don’t know how to believe!
If they call with belief and faith, would He not respond?
To those who call Him without belief or trust,
"Blow the horn and shout” says Kudala Sangama Deva.


COMMENTARY

In this popular Vachana, Basavanna identifies trust and belief as required prerequisites for true devotion. He says that people simply call on God when needed without true belief and trust (faith) and assume that He will respond with the requested favors. The Vachana advocates that people in this category must be shouted at with the highest vigor to cultivate belief and trust first.

We become devotees the moment a hardship arises and request God to favor us with all His powers. We go through ritualistic worship and chanting without even understanding the meaning behind them. We tend to show off that we are true devotees. All these are activities in vain, without the required faith and belief. Requisite for the development of faith and belief is the true knowledge and awareness of God.

Consider the mundane activity of using a car as our transportation. It is essential that we understand the essential features, capabilities and requirements for using it. We should know how to fill its tank with the fuel, occasionally wash it and clean it, get the maintenance done, so on. Further, we cannot expect the car to let us fly in it or transport us over the ocean. Once we understand its capabilities and develop faith in its fitness to be a safe transport, we can be sure that it serves the purpose well.

God cannot be seen or touched. He can only be experienced. Understanding Him requires a subtle and calm mind and a keen awareness. We need to gain such understanding and call Him with true faith and belief, for Him to respond. This process of learning the true nature of everything around us, not tinging them with our biases, realizing the true and natural relationships between entities seem to be the optimum living!


Let us become true believers and devotees!


KANNADA COMMENTARY


ಬಸವಣ್ಣವರು ಈ ವಚನದಲ್ಲಿ ತಮ್ಮನ್ನು ತಾವು ಭಕ್ತರೆಂದುಕೊಳ್ಳುವವರು ನಡೆದುಕೊಳ್ಳುವ ರೀತಿಯನ್ನು ಹೇಳುತ್ತಿರುವರು. ತಮ್ಮನ್ನು ತಾವು ಭಕ್ತರೆಂದು ಹೇಳಿಕೊಳ್ಳುವ ಸಾಮಾನ್ಯರು ದೇವರನ್ನು ನಿಜವಾಗಿ ನಂಬುವುದಿಲ್ಲ, ನಂಬಿದ್ದೇವೆ ಎಂದುಕೊಳ್ಳುತ್ತಾರೆ ಅಷ್ಟೆ. ಈ ಲೊಕದ ಜನರು ಶಿವನನ್ನು ನಂಬುವುದು ಏನೆಂದು ಅರಿಯರು. ಆದರೆ ಕಷ್ಟ ಬಂದಾಗ ಮಾತ್ರ ಕಷ್ಟದಿಂದ ಮುಕ್ತಿ ಪಡೆಯಲು ಆತನನ್ನು ಕರೆಯುವರು. ಅಂತಹವರ ಕರೆಗೆ ಶಿವನು ಓಗೊಡುವನೆ? ಇಂತಹವರನ್ನು “ನಂಬರು ನೆಚ್ಚರು ಬರಿದೆ ಕರೆವರು”ಎನ್ನುತ್ತಿದ್ದಾರೆ. ನಿಜವಾಗಿಯೂ ನಂಬಿ ಕರೆದರೆ ಶಿವನು ಖಂಡಿತವಾಗಿಯೂ ಕರೆಗೆ ಓಗೊಡುವನು ಎನ್ನುತ್ತಾರೆ.

ನಿಜವಾಗಿಯೂ ನಂಬುವುದು ಎಂದರೆ ಏನು?
ನಾವು ಯಾವುದನ್ನು ನಂಬುತ್ತೇವೆಯೋ ಅದರ ಬಗ್ಗೆ ನಮಗೆ ಸರಿಯಾದ ಜ್ಞಾನವಿರಬೇಕು. ಇಲ್ಲಿ ಒಂದು ಸಾಮಾನ್ಯವಾದ ಉದಾಹರಣೆಯನ್ನು ನೋಡ ಬಹುದು. ನಾವು ಸಂಚಾರಕ್ಕಾಗಿ ಕಾರನ್ನು ನಂಬುತ್ತೇವೆ ಎಂದಿಟ್ಟುಕೊಳ್ಳೋಣ. ಬರಿದೆ ಅದನ್ನು ನಂಬುವುದರಿಂದ ನಮ್ಮ ಸಂಚಾರದ ಎಲ್ಲ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ಕಾರಿನ ಸಾಮರ್ಥ್ಯ, ಶಕ್ತಿ ಮತ್ತು ಅದರ ಅವಶ್ಯಕತೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ಅದನ್ನು ಆಗಾಗ ಕಾಳಜಿ ವಹಿಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಅದರ ಭಾಗಗಳು ಸರಿಯಾಗಿ ಕೆಲಸ ಮಾಡುವ ಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ. ಅವು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಇಂಧನವನ್ನು ತುಂಬಿಸಬೇಕಾಗುತ್ತದೆ. ಇಷ್ಟೆಲ್ಲ ಮಾಡಿದಾಗ ಮಾತ್ರ ಅದನ್ನು ಒಂದು ಸೀಮಿತವಾದ ಮಟ್ಟಕ್ಕೆ ನಂಬಬಹುದು. ಇದಾವುದನ್ನೂ ಮಾಡದೆ, ಕಾರಿನ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದೆ, ಕಾರು ತನ್ನನ್ನು ನೀರಿನ ಮೇಲೆಯೂ ಕರೆದುಕೊಂಡು ಹೋಗಬೇಕು, ಆಕಾಶಮಾರ್ಗದಲ್ಲಿಯೂ ಕರೆದುಕೊಂಡುಹೋಗಬೇಕು, ತನ್ನ ಸಂಚಾರದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಸೆಪಟ್ಟರೆ ಆ ಆಸೆ ಪೂರ್ತಿಯಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ.
ಈ ಎಲ್ಲದರ ಅರ್ಥವೇನಾಯಿತು?

ಅಂದರೆ ಕಾರನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುವುದು, ಅದರ ಬಗ್ಗೆ ಪೂರ್ಣವಾದ ಅರಿವು ಪಡೆಯುವುದು ಎಂದಲ್ಲವೆ. ಆ ಅರಿವು ವೈಜ್ಞಾನಿಕವಾದದ್ದು. ಅಂದರೆ ಅದರ ಬಗ್ಗೆ ನಮ್ಮ ತಿಳಿವಳಿಕೆಗೆ ಒಂದು ಗಟ್ಟಿಯಾದ ಆಧಾರವಿರುತ್ತದೆ. ಅದು ಕೇವಲ ಕುರುಡು ನಂಬಿಕೆಯಲ್ಲ. ಅಲ್ಲವೆ?

ಇದೇ ರೀತಿಯಾಗಿ ದೇವರ ಬಗ್ಗೆಯೂ ನಮ್ಮ ಅರಿವು ಗಟ್ಟಿಯಾಗಿರಬೇಕಾಗುತ್ತದೆ. ಅದು ಅರ್ಥವಿಲ್ಲದ ಯಾವುದೋ ಕುರುಡು ನಂಬಿಕೆಯಾಗಿರಬಾರದು. ದೇವರ ಬಗ್ಗೆ ಗಟ್ಟಿಯಾದ ಅರಿವನ್ನು ಹೊಂದಲು ಮನಸ್ಸು ಅತ್ಯಂತ ಸೂಕ್ಷ್ಮವಾಗಬೇಕಾಗುತ್ತದೆ, ಏಕೆಂದರೆ ದೇವರು ಕಣ್ಣಿಗೆ ಕಾಣುವ ಅಥವಾ ಕೈಯಿಂದ ಮುಟ್ಟಬಹುದಾದಂತಹ ವಸ್ತುವಲ್ಲ. ಅವನು ಕೇವಲ ಅನುಭಾವಕ್ಕೆ ಬರುವವನು. ಪ್ರಕೃತಿಯಲ್ಲಿಯ ಪ್ರತಿಯೊಂದರ ಸಂಬಂಧವನ್ನು ಆಳವಾಗಿ ಅವಲೋಕಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ, ಪ್ರಕೃತಿಯಲ್ಲಿ “ಇರುವುದನ್ನು” ಇರುವಂತೆಯೆ, ಅದಕ್ಕೆ ಯಾವುದೇ ಬಣ್ಣವು ಅಂಟಿಸದೆ ಅದರ ನಿಜವಾದ ರೂಪದಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪ್ರಕೃತಿಯಲ್ಲಿ ಇಲ್ಲದೆ ಇರುವುದನ್ನು ಬೇಡುವುದರ ನಿರರ್ಥಕತೆ ಅರಿವಿಗೆ ಬರುತ್ತದೆ. “ಇರುವುದರ” ಬಗ್ಗೆ ಅಲ್ಲಿ ನಿಜವಾದ ನಂಬಿಕೆಯುಂಟಾಗುತ್ತದೆ. ಅಂತಹ ನಿಜವಾದ ನಂಬಿಕೆಗೆ ದೇವರು ಖಂಡಿತವಾಗಿಯೂ ಸ್ಪಂದಿಸುತ್ತಾನೆ ಎನ್ನುತ್ತಾರೆ ಬಸವಣ್ಣನವರು.

ಇದಾವುದನ್ನೂ ಮಾಡದೆ ಬರಿದೆ ದೇವರನ್ನು ನಂಬಿದ್ದೇನೆ ಎಂದುಕೊಂಡು ಆತನನ್ನು ಕರೆಯುವುದು, “ನಾನು ನಂಬಿದ್ದೇನೆ” ಎನ್ನುವ ಅಹಂಭಾವವಾಗುತ್ತದೆ. ಅಂತಹವರನ್ನು ಮೆಟ್ಟಿ ಕೂಗೆನ್ನುತ್ತಾರೆ, ಅವರ ಅಹಂಭಾವವನ್ನು ತುಳಿದು ಕೂಗಿ ಘೋಷಿಸು ಎನ್ನುತ್ತಾರೆ ಬಸವಣ್ಣನವರು.






No comments:

Post a Comment