Friday, April 6, 2012

Vachana 84: Ayyaa nararoLu huTTi - From Ignorance to Awareness


ಅಯ್ಯಾ ನರರೊಳು ಹುಟ್ಟಿ, ಮರಹಿನೊಳಗೆ ಬಿದ್ದವಳ ತಂದು
ಮಹಾಶರಣರು ಎನಗೆ ಕುರುಹ ತೋರಿದರು.
ಗುರುವೆಂಬುದನರುಹಿದರು, ಜಂಗಮವೆ ಜಗದ ಕರ್ತುವೆಂದರುಹಿದರು.
ಅವರ ನೆಲೆವಿಡಿದು ಮನವ ನಿಲಿಸಿದೆ, ಕಾಯ ಜೀವವೆಂಬುದನರಿದೆ,
ಭವ ಬಂಧನವ ಹರಿದೆ, ಮನವ ನಿರ್ಮಲ ಮಾಡಿದೆ.
ಬೆಳಗಿದ ದರ್ಪಣದಂತೆ  ಚಿತ್ತ ಶುದ್ಧವಾದಲ್ಲಿ,
ನೀವು ಅಚ್ಚೊತ್ತಿದ್ದ ಕಾರಣದಿಂದ ನಿಮ್ಮ ಪಾದವಿಡಿದು
ನಾನು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ

TRANSLITERATION


Ayyaa nararoLu huTTi, marahinoLage biddavaLa taMdu
mahaasharaNaru enage kuruha tOridaru
guruveMbudanaruhidaru, jaMgamave jagada kartuveMdaruhidaru.
Avara  neleviDidu manava niliside, kaaya jIvaveMbudanaride.
Bhava baMdhanava haride, manava nirmala maaDide.
beLagida darpqaNadaMte citta shuddhavaadalli,
nIvu accottidda kaaraNadiMda nimma paadaviDidu
naanu nijamuktaLaadenayyaa appaNNapriya cennabasavaNNa

CLICK HERE TO READ-ALONG:

http://www.youtube.com/watch?v=sJoQ7CAh_zM

TRANSLATION (WORDS)

Ayyaa (sir) nararoLu (among humans)  huTTi (born), marahinoLage (in ignorance) biddavaLa (lying) taMdu (brought)
mahaasharaNaru (great sharaNaas) enage (to me) kuruha ( the symbol of god) tOridaru (showed)
guruvu (guru) eMbudanu (what is) aruhidaru,(revealed) jaMgamave (jaMgama alone) jagada (of the world) kartuveMdu (maker) aruhidaru.(revealed)
Avara (their) neleviDidu ( holding  feet) manava (my mind) niliside (established, I put in place) kaaya (body) jIvavu (life) eMbudanu (what is) aride.( I understood)
Bhava(worldly) baMdhanava(ties, bondage) haride,(I tore) manava ( the mind) nirmala (pure) maaDide.( I made)
beLagida(polished) darpaNadaMte(like a mirror)  citta  (mind) shuddhavaadalli,(when it is pure)
nIvu(you) accottidda( were imprinted) kaaraNadiMda(for the reason) nimma (your) paadava (feet) iDidu (holding) 
naanu (I)  nijamuktaLaadenayyaa (became completely free) appaNNapriya cennabasavaNNa (Appanna priya Chennabasavanna)

TRANSLATION

Dear Sirs! Having born among ordinary humans, I had fallen in ignorance!
The great Sharanaas showed me the symbol of (way to) God.
They revealed the concept of guru, they revealed that Jangama alone is the maker of the World  
Holding their feet, I established my mind, I understood the body and the soul,
I tore the bondages of the world and purified my mind.
As the mind became clear as a polished mirror,
with Your abstraction imprinted on it,  I held on to it and  
became completely (truly) free, Oh! Appanna priya Chennabasavanna!

COMMENTARY

In this Vachana, Sharane Hadapada Lingamma traces her path from ignorance to enlightenment. She says that having born among ordinary (common) people, she was drowned in the sea of ignorance. Shranaas revealed her the symbol of enlightenment. They showed the concept of guru and impressed that this world is made by jangama alone. With these concepts understood, Lingamma says that she established her mind in that bliss, understood the meaning and purpose of body and soul, tore up the worldly bondages and purified her mind. With that clear mind on which the God concept was impressed, she held on to it and became truly free.


This Vachana provides the roadmap for self-realization or becoming truly free. Having born among common humans, we are all occupied by our routine worldly activities and seldom find time or  develop an inclination to seek the true freedom. Sharanaas urged us to get away from that ignorant mode through the concepts of Guru and Jangama.  The  word ‘Guru’ stands for the one who erases ignorance.  We immediately associate Guru to an individual preferably with yellow robes, always quoting slokas and mantras. Lingamma takes us away from this thinking saying that sharanaas showed her ‘what is Guru’ i.e. the concept of guru not an individual guru. The keen desire and awareness needed to move from ignorance to enlightenment is the conceptual guru. Along the same lines, Jangama is equated to a wandering ascetic who has given up his worldly possessions and has devoted himself to enhancing God awareness among the common men. Lingamma says that the Sharanaas impressed on her that Jangama alone is the maker of the world. Jangama stands for ‘mobile, dynamic,  non-static’ implying that nothing in this world is static or permanent except the true awareness. With the concepts of guru and jangama in hand, Lingamma could tear up the worldly bondages, could understand the true meaning and purpose of body and soul (Jeevaatma) and achieved the true freedom. With this roadmap we all can reach the heights Lingamma reached starting from her beginnings as an ignorant individual.


Let us invite the conceptual guru and jangama into our lives!

KANNADA COMMENTARY

ಈ ವಚನದಲ್ಲಿ, ತಾನು,  ಮರೆವಿನ ಸ್ಥಿತಿಯಿಂದ ಅರಿವಿನ ಸ್ಥಿತಿಗೆ ಬಂದ ಬಗೆಯನ್ನು ತಿಳಿಸುತ್ತಿದ್ದಾಳೆ ಹಡಪದ ಲಿಂಗಮ್ಮ. ತಾನು ಸಾಮಾನ್ಯ ನರಜನ್ಮ ಪಡೆದು ಮರೆವಿನಲ್ಲಿ ಮುಳುಗಿದ್ದೆ ಎಂದು ಹೇಳುತ್ತಾಳೆ.  ಅಂತಹ ಅಜ್ಞಾನದ ಸ್ಥಿತಿಯಲ್ಲಿದ್ದವಳನ್ನು ಕರೆತಂದು ಶರಣರು ಅರಿವಿನ ಕುರುಹ ( symbol)ನ್ನು ತೋರಿದರು, ಗುರು ಎಂದರೇನು ಎಂಬುದನ್ನು ತಿಳಿಸಿದರು, ಈ ಜಗತ್ತನ್ನು ಮಾಡಿರುವುದೇ ಜಂಗಮದಿಂದ ಎಂಬುದನ್ನು ತಿಳಿಯುವಂತೆ ಮಾಡಿದರು. ಗುರು ಮತ್ತು ಜಂಗಮದ ನೆಲೆಯನ್ನು ಹಿಡಿದು ಅಲ್ಲಿ ಮನವನ್ನು ನಿಲ್ಲಿಸಿದೆ, ಕಾಯವೆಂದರೇನು ಜೀವ ವೆಂದರೇನು ಎಂಬುದನ್ನು ಅರಿತುಕೊಂಡೆ. ಆ ಕಾರಣ ಭವ ಬಂಧನವನ್ನು ಹರಿದೆ, ಮನವನ್ನು ನಿರ್ಮಲಗೊಳಿಸಿದೆ. ಮನಸ್ಸು ಬೆಳಗಿದ ಕನ್ನಡಿಯಂತೆ ಶುದ್ಧವಾದಾಗ ಅಲ್ಲಿ  ಪರತತ್ವ ಅಚ್ಚೊತ್ತಿದಂತೆ  ಇದ್ದ ಕಾರಣ ಅದನ್ನು ಹಿಡಿದು ತಾನು ಮುಕ್ತಳಾದೆ ಎನ್ನುತ್ತಾಳೆ.

ಲಿಂಗಮ್ಮ ಕೆಳಜಾತಿಯಲ್ಲಿ ಹುಟ್ಟಿದವಳು. ಆದರೆ ಅವಳು ಬೆಳೆದ ರೀತಿ ಅದ್ಭುತವಾದದ್ದು, ಅವಳು ಅಧ್ಯಾತ್ಮದಲ್ಲಿ  ಪಡೆದ ಸ್ಥಾನ ಅತ್ಯುನ್ನತ ಮಟ್ಟದ್ದು. ಅದು ನಡೆದದ್ದು ಹೇಗೆ? ಮರವೆ ಆವರಿಸಿ ಸಂಸಾರದಲ್ಲಿ ಮುಳುಗಿರುವ ಸಾಮಾನ್ಯ ಮಾನವಳಾಗಿ ಹುಟ್ಟಿದವಳು ಲಿಂಗಮ್ಮ. ಆದರೆ  ಮಹಾಶರಣರು ಆಕೆಗೆ ಪರತತ್ವದ ಕುರುಹು ತೋರಿದರು. ಕುರುಹನ್ನು ತೋರಿದರೆ ಕೆಲಸ ಮುಗಿಯಲಿಲ್ಲ. ಏಕೆಂದರೆ ಕುರುಹೇ ಅಂತಿಮವಲ್ಲ. ಅಲ್ಲಿಂದ ನಿಜಮುಕ್ತಿಯ ದಾರಿ ಬಹುದೂರ. ಕುರುಹೇ ನಿಜವೆಂದು ಮೌಢ್ಯಕ್ಕೆ ಒಳಗಾಗುವುದು ಸಾಮಾನ್ಯ. ನಾವು ಇಂದು ಅದನ್ನು ಎಲ್ಲೆಲ್ಲೂ ನೋಡುತ್ತೇವೆ. ದೇವರ ಕುರುಹೆಂದು ಸ್ಥಾಪಿಸಿದ ದೇವರ ಮೂರ್ತಿಯನ್ನೇ ನಿಜವಾದ ದೇವರೆಂದು ಪೂಜಿಸುವುದರಲ್ಲಿಯೇ ತಮ್ಮ ಇಡೀ ಬದುಕನ್ನೇ ಕಳೆಯುತ್ತಾರೆ ಜನರು. ಅದು ಸಮಾನ್ಯ ನರರ ರೀತಿ. ಆದರೆ ಶರಣರು ಲಿಂಗಮ್ಮನನ್ನು ಅಲ್ಲಿಗೆ ಬಿಡಲಿಲ್ಲ. ಶರಣರು “ಗುರುವೆಂಬುದನ್ನರುಹಿದರು” ಎನ್ನುತ್ತಾಳೆ ಆಕೆ. ಇಲ್ಲಿ ಆಕೆ ಬಳಸಿದ  “ಗುರುವೆಂಬುದನ್ನು” ಎಂಬ ಪದವನ್ನು ಗಮನಿಸುವುದು ಬಹು ಮುಖ್ಯ.  ಆಕೆ ಬಳಸಿದ ಪದ ವ್ಯಕ್ತಿವಾಚಕವಲ್ಲ. ಆಕೆ ಗುರುವನ್ನು ಎನ್ನಲಿಲ್ಲ. ಏಕೆಂದರೆ ಗುರು ಎಂದ ತಕ್ಷಣ ಎಲ್ಲರ ಮನದಲ್ಲಿ  ಮಠಾಧಿಪತಿಯದೋ, ಕಾವಿಧಾರಿಯದೋ, ಗಡ್ಡಧಾರಿಯದೋ, ಸಂನ್ಯಾಸಿಯದೋ, ಗುಹಾವಾಸಿಯದೋ ಚಿತ್ರ ಮೂಡುತ್ತದೆ.  ಆದ್ದರಂದ ಆಕೆ  “ಗುರುವೆಂಬುದನ್ನು” ಎನ್ನುತ್ತಾಳೆ. ಎಂದರೆ ಗುರು ಎನ್ನುವ ತತ್ವವನ್ನು  ತಿಳಿಸಿದರು ಎಂದರ್ಥ. “ಗುರು” ಎಂದರೆ ಮಹಾನ್ ಎಂದೂ, ಕತ್ತಲೆಯನ್ನು ಕಳೆಯುವವ ಎಂದೂ ಅರ್ಥಗಳಿವೆ. ಕತ್ತಲೆ ಅಥವಾ ಅಜ್ಞಾನದಲ್ಲಿ ಮುಳುಗಿದವನನ್ನು ಬೆಳಕಿನೆಡೆಗೆ ಕರೆದೊಯ್ಯುವ ತತ್ವ ಗುರು. ಮೊದಲು ಆ ತತ್ವ ವ್ಯಕ್ತಿಯ ರೂಪದಲ್ಲಿ ತೋರಬಹುದು, ಆದರೆ ಅದು ಆ ವ್ಯಕ್ತಿಯೇ ಅಲ್ಲ.   ಗುರು ತತ್ವವನ್ನು ಅರಿತುಕೊಳ್ಳಬೇಕೇ ಹೊರತು ಒಬ್ಬ ವ್ಯಕ್ತಿಯನ್ನು ಗುರುವೆಂದು ಪೂಜಿಸುವುದಲ್ಲ. ಹಾಗೆ ವ್ಯಕ್ತಿಯನ್ನು ಗುರುವೆಂದು ಪೂಜಿಸಿ, ನಿಂತ ನೀರಾಗುವುದು ಸಾಮಾನ್ಯ ನರನ ರೀತಿ. ಶರಣರ ಕರುಣೆಯಿಂದ ತಾನು ಸಾಮಾನ್ಯ ನರನ ಸ್ಥಿತಿಯಿಂದ ಮೇಲೆದ್ದೆ ಎನ್ನುತ್ತಾಳೆ ಲಿಂಗಮ್ಮ.ಇಷ್ಟೇ ಅಲ್ಲ ಶರಣರು “ಜಂಗಮವೆ ಜಗದ ಕರ್ತುವೆಂದರುಹಿದರು” ಜಂಗಮವೇ ಜಗತ್ತಿನ ಕರ್ತೃ ಎಂಬುದನ್ನೂ ಅರುಹಿದರು ಎನ್ನುತ್ತಾಳೆ. ಈ ಜಗತ್ತು ಚೈತನ್ಯಯುಕ್ತವಾದದ್ದು. ಸದಾ ಚಲನಶೀಲವಾದದ್ದು, ಇಲ್ಲಿ ಯವುದೂ ಶಾಶ್ವತವಲ್ಲ. ಎಂಬಂತಹ ಅರಿವನ್ನುಂಟುಮಾಡಿದರು ಶರಣರು ಎನ್ನುತ್ತಾಳೆ. ಇಲ್ಲಿಯೂ ಕೂಡ ಜಂಗಮವೆಂದರೆ ಸಾಮನ್ಯರ ಗ್ರಹಿಕೆ ಬಹಳ ಸೀಮಿತವಾದದ್ದು. ವಿಭೂತಿ, ರುದ್ರಾಕ್ಷಿಧಾರಿಗಳನ್ನು ಮಾತ್ರ ಜಂಗಮರೆನ್ನುವ ಪರಿಪಾಠವಿದೆ. ಲಿಂಗಮ್ಮ ಅದನ್ನು ವ್ಯಕ್ತಿಗೆ ಸೀಮಿತಗೊಳಿಸಿಲ್ಲ. ಜಂಗಮ ಒಂದು ತತ್ವ. ಅದು ಚೈತನ್ಯ ತತ್ವ. ಗುರು ಮತ್ತು ಜಂಗಮ ತತ್ವಗಳು ಅಮೂರ್ತ (abstract) ವಾದವುಗಳು. ಮೊದಲು ಕುರುಹನ್ನು ಕೊಟ್ಟು ನಂತರ ಅದರ ಮೂಲಕ ಅಮೂರ್ತ ತತ್ವವನ್ನು ತಿಳಿಸಿದರು ಶರಣರು. ಅವರು ತಿಳಿಸಿದ ತತ್ವವನ್ನು ಹಿಡಿದು, ಆ ತತ್ವಗಳಲ್ಲಿ ಮನವನ್ನು ನಿಲ್ಲಿಸಿ ಕಾಯ ಮತ್ತು ಜೀವಗಳನ್ನು ಅರ್ಥಮಾಡಿಕೊಂಡೆ ಎನ್ನುತ್ತಾಳೆ. ಕಾಯದ ಮತ್ತು ಜೀವದ ಇತಿಮಿತಿಗಳೇನು? ಗುಣಗಳೇನು? ಅವುಗಳ ಸ್ಥಾನವೇನು? ಎಂಬುದಲ್ಲದೆ ಅವುಗಳ ನಶ್ವರತೆಯನ್ನು ಅರಿತುಕೊಂಡಳು. ಇದರಿಂದ ಅಪ್ರಯತ್ನವಾಗಿಯೇ ಅವುಗಳ ಬಗ್ಗೆ ವೈರಾಗ್ಯ ಉಂಟಾಯಿತು. ತನುಗುಣಗಳು ಅಳಿದು ಹೋದವು. ಭವ ಬಂಧನ ಹರಿದು ಹೋಯಿತು. ಮಾಯೆಯೆಲ್ಲ ಅಳಿಸಿಹೋಗಿ ಮನಸ್ಸು ನಿರ್ಮಲವಾಯಿತು. ಅದು ಬೆಳಗಿದ ಕನ್ನಡಿಯಂತೆ ಉಜ್ಜ್ವಲವಾಯಿತು. ಆಗ ಅಲ್ಲಿ ಪರಮಾತ್ಮನ ಸ್ವರೂಪ ಅಚ್ಚೊತ್ತಿದಂತುಳಿಯಿತು ಆ ಒಂದನ್ನುಳಿದು ಬೇರೆಯದೆಲ್ಲ ನಿರ್ನಾಮವಾಯಿತು. ಆ ಪರತತ್ವದ  ಪಾದಗಳನ್ನು ಹಿಡಿದು ತಾನು ಪೂರ್ಣರೂಪದಿಂದ ಮುಕ್ತಳಾದೆ ಎನ್ನುತ್ತಾಳೆ  ಹಡಪದ ಲಿಂಗಮ್ಮ. ಇಲ್ಲಿಯೂ ಕೂಡ ಆಕೆ ದೇವರೆಂಬ ಪದವನ್ನೇ ಬಳಸಿಲ್ಲ. ಆ ಅಮೂರ್ತನನ್ನು  ತಿಳಿದುಕೊಳ್ಳುವುದನ್ನು ನಮಗೇ ಬಿಟ್ಟಿದ್ದಾಳೆ ಲಿಂಗಮ್ಮ. ಇದು ಸಾಮಾನ್ಯಳಾಗಿ ಹುಟ್ಟಿ ಆಕೆ ಮುಟ್ಟಿದ ಎತ್ತರ.

No comments:

Post a Comment