Friday, December 30, 2011

Vachana 70: Nishteyembudu - Devotion paves the way



ನಿಷ್ಠೆಯೆಂಬುವದು ತನುವಿನ ಪ್ರಕೃತಿಯ ಕೆಡಿಸುವುದು
ನಿಷ್ಠೆಯೆಂಬುವದು ಮನದ ಮಾಯೆಯನಳಿವುದು
ನಿಷ್ಠೆಯೆಂಬುವದು ಜ್ಞಾನದ ಬಟ್ಟೆಯ ತೋರುವುದು
ನಿಷ್ಠೆಯೆಂಬುವದು ಅಖಂಡೇಶ್ವರ ಲಿಂಗವನೊಲಿಸುವುದು


TRANSLITERATION

niShTheyeMbuvadu tanuvina prakRutiya keDisuvudu
niShTheyeMbuvadu manada maayeyanaLivudu
niShTheyeMbuvadu j~jaanada baTTeya tOruvudu
niShTheyeMbuvadu akhaMDEshvaraliMgavanolisuvudu

CLICK HERE TO READ ALONG:

http://www.youtube.com/watch?v=hqUyiKu8dws&feature=youtu.be

TRANSLATION (WORDS)

niShThey (devotion) eMbuvadu (so called) tanuvina (of the body) prakRutiya (nature, characteristics, tendencies) keDisuvudu (destroys)
niShThey (devotion) eMbuvadu (so called) manada (of mind) maayeyanu (illusion)aLivudu (destroys)
niShThey (devotion) eMbuvadu (so called) j~jaanada (of self-knowledge) baTTeya (way ) tOruvudu (shows)
niShThey (devotion) eMbuvadu (so called) akhaMDEshvaraliMgavanu (Lord of the Universe) olisuvudu (persuades, comes up on)


TRANSLATION

Devotion destroys the tendencies of the body!
Devotion destroys the illusion of the mind!
Devotion shows the way for self-knowledge!
Devotion persuades the Lord of the Universe!

COMMENTARY

In this Vachana Sharana Shanmuka Swamy stresses the concepts of devotee and devotion portrayed in the last two postings, saying that devotion destroys the common tendencies of the body, destroys the illusion of the mind, shows the way for self-realization and enables one to reach the Lord.

The word ‘niShThey’ is commonly translated as ‘devotion’. Devotion usually means devotion to God or Bhakti. We are accustomed to providing a form for God and worshipping Him through various rituals and routine beliefs. We assume that being involved in ritualistic practices is true devotion or bhakti. This and the previous two Vachanas take us away from this narrow interpretation of devotion or bhakti. Devotion is the commitment to do whatever we do without attention to gain or loss from it, without the goal of satisfying someone else but ourselves, and with immense honesty to ourselves. When we examine within and perform with such devotion we unearth the subtleties which erase the difference between right and wrong, remove the illusions of mind and take us away from the mundane tendencies of the body. This is self-realization, the way to reach the Lord. This mode of intense devotion removes all our expectations from the Lord or the fellow beings and paves the way for self-realization.

 Let us examine ourselves with immense honesty towards becoming  intense devotees!

KANNADA COMMENTARY


ಇದು ಷಣ್ಮುಖಸ್ವಾಮಿಗಳ ವಚನ. ಅವರೂ ಕೂಡ ದೇವರದಾಸಿಮಯ್ಯನವರ ಭಾವವನ್ನೇ ಒತ್ತಿ ಹೇಳುತ್ತಿದ್ದಾರೆ. ಇಲ್ಲಿ ನಿಷ್ಠೆ ಎಂಬುದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯವಾದದ್ದು. ಅದನ್ನು, ನಾವು ತಿಳಿದುಕೊಂಡಂತೆ ಭಕ್ತಿ ಎಂದು ಅರ್ಥೈಸುವುದು ತಪ್ಪಾಗುತ್ತದೆ. ಏಕೆಂದರೆ, ನಾವು, ಮೂಢನಂಬಿಕೆ ಅಥವಾ ಧರ್ಮಾಚಾರವನ್ನೇ ಭಕ್ತಿಯೆಂದು ತಿಳಿದುಕೊಂಡಿದ್ದೇವೆ. ದೇವರ ಒಂದು ರೂಪವನ್ನು ನಂಬಿ, ಅದಕ್ಕೆ ತಕ್ಕಂ ತೆ ಧಾರ್ಮಿಕ ಅನುಷ್ಠಾನವನ್ನು ಕೈಗೊಳ್ಳುವುದು ಭಕ್ತಿ ಎನಿಸಿದೆ. ಇಂತಹ ಭಕ್ತಿಯಿಂದ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದಲೇ ಇಲ್ಲಿ ಭಕ್ತಿಯ ಬದಲು ನಿಷ್ಠೆಗೆ ಮಹತ್ವವನ್ನು ಕೊಟ್ಟಿದ್ದಾರೆ. ಹಾಗಾದರೆ ನಿಷ್ಠೆ ಎಂದರೇನು? ಅಂದರೆ, ನಾವು ಎನೇ ಮಾಡಿದರೂ ಅದನ್ನು ಯಾವುದೇ ಲಾಭ ನಷ್ಟಗಳ ಚಿಂತೆಯಿಲ್ಲದೆ, ಯಾರನ್ನಾದರೂ ಒಲಿಸುವ ದೃಷ್ಟಿಯಿಂದಲ್ಲದೆ, ಕೇವಲ ಪ್ರಾಮಾಣಿಕತೆಯಿಂದ ಸಂಪೂರ್ಣವಾಗಿ ಗಮನವಿತ್ತು ಮಾಡುವುದು ಎಂದು ಹೇಳಬಹುದು. ಅಖಂಡೇಶ್ವರನ ಒಲಿಸುವ ಸಂದರ್ಭದಲ್ಲಿ, ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ನಮ್ಮನ್ನು ನಾವು ಗಮನಿಸುವುದು. ಅಂದರೆ, ಗಮನಿಸುವುದರಿಂದ ನನಗೆ ಇಂತಿಂತಹದು ಲಭ್ಯವಾಗಬೇಕು, ದೇವರು ಸಿಗಬೇಕು ಎಂದೆಲ್ಲ ಆಶಿಸದೆ ಕೇವಲ ಗಮನಿಸುವುದು. ಈ ರೀತಿಯಾಗಿ ನಿಷ್ಠೆಯಿಂದ ಗಮನಿಸುವುದರಿಂದ ಸಾಮಾನ್ಯವಾಗಿ ಕಂಡುಬರದ ಅನೇಕ ಸೂಕ್ಷ್ಮ ವಿಷಯಗಳು ಗಮನಕ್ಕೆ ಬರುತ್ತವೆ. ಈ ಸ್ಥಿತಿಯಲ್ಲಿ ಗಮನಿಸುವವ ಮತ್ತು ಗಮನಿಸಿದ ವಿಷಯವೆಂಬ ಭೇದವಿರುವುದಿಲ್ಲ. ಆದ್ದರಿಂದ ಇದು ತಪ್ಪು ಅಥವಾ ಇದು ಸರಿ ಎಂಬಂತಹ ಭಾವಗಳು ಇರುವುದಿಲ್ಲ. ಇದ್ದದ್ದು ಇದ್ದಂತೆ ತೋರಿಬರುವುದು. ಇದರಿಂದ ಎಲ್ಲ ರೀತಿಯ ಭೇದ ಭಾವಗಳು, ತನುಗುಣಗಳು ಅಳಿಯುತ್ತವೆ, ಮನದಲ್ಲಿಯ ಭ್ರಾಂತಿಗಳು ಅಳಿಯುತ್ತವೆ, ಆ ನಿಷ್ಠೆಯೇ ಜ್ಞಾನದ ದಾರಿಯನ್ನು ತೋರುವುದರ ಮೂಲಕ ಲಿಂಗವು ಒಲಿಯುವಂತೆ ಮಾಡುತ್ತದೆ ಎನ್ನುತ್ತಾರೆ ಷಣ್ಮುಖ ಸ್ವಾಮಿಗಳು. ಅಂದರೆ, ಯಾವುದು ನಿಜವಾದ ಜ್ಞಾನ ಎಂಬುದರ ಅರಿವಾಗುತ್ತದೆ ಎನ್ನುತ್ತಾರೆ. ಆದ್ದರಿಂದ ನಾವು ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಹರಿದ ಗೋಣಿಯಂತಾಗುತ್ತೇವೆ, ಪಟ್ಟಣದಲ್ಲಿದ್ದೂ ಭಯಕ್ಕೆ ತುತ್ತಾಗುತ್ತೇವೆ.




Friday, December 23, 2011

Vachana 69: Nishteyulla Bhakta - Commitment


ನಿಷ್ಠೆಯುಳ್ಳ  ಭಕ್ತ  ನಟ್ಟಡವಿಯಲ್ಲಿರ್ದಡೇನು?
ಅದು ಪಟ್ಟಣವೆಂದೆನಿಸುವುದು
ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದರೂ
ಅದು  ನಟ್ಟಡವಿ ಕಾಣಾ ರಾಮನಾಥ

TRANSLITERATION

niShTheyuLLa bhakta naTTaDaviyallirdaDEnu
Adu paTTaNaveMd  enisuvudu
niShTheyillada bhakta paTTaNadalliddarU
 adu naTTaDavi  kaaNaa raamanaathaa

CLICK HERE TO READ ALONG:


TRANSLATION (WORDS)

niShTheyuLLa ( with devotion, commitment) bhakta (devotee) naTTaDaviyallirdaDEnu
(even if he lives in the forest, wilderness)
Adu (that) paTTaNaveMdu  (like a town) enisuvudu (appears)
niShTheyillada (without devotion, without commitment) bhakta (devotee) paTTaNadalliddarU (even if he lives in the town) adu (that will be) naTTaDavi  ( a forest) kaaNaa raamanaathaa (you see Ramanatha)

TRANSLATION

A committed devotee, even when he is in the midst of wilderness, feels he is in a town!
An uncommitted devotee, even when he is in the midst of town, feels he is in a forest!
you see, Lord Ramanatha!

COMMENTARY

In previous Vachana Sharana Devara Dasimayya stressed the importance of keeping the ultimate goal of self-realization in mind and not swayed by trivial pursuits. In this Vachana he stresses the commitment needed to become a true devotee. He uses the forest to represent fear and the town to represent security. A forest is the home of wild animals looking for food. It does not provide shelter from rain and Sun. It makes one always be on the lookout for some undesirable threat. The town on the other hand provides the shelter and safety of being around civilized fellow beings. It provides a more conducive environment to concentrate on one’s goals.  Dasimayya says that a committed devotee overcomes the fear of forest and feels at ease and as though he is in the security of being in a town. An uncommitted devotee on the other hand is always afraid of something even when he is in the midst of a town. He is implying that the fear and the secure feeling originate from within the individual. They are not the effects of the surroundings and the environment one is in. When we look into ourselves with complete truthfulness, honesty and sincerity a number of subtle issues open up. When we commit ourselves with the complete knowledge to handle these issues in a positive manner the fear vanishes.  Dasimayya is not saying that we should ignore the wild animals trying to attack us – we certainly have to take action to protect ourselves. But, when the goal is clear and we are committed to the goal, the obstacles go away.

The Vachana is addressing the devotional aspects of the individuals. Devotion is usually interpreted narrowly as ‘bhakti’ or devotion to God. The real interpretation should be devotion to any aspect of our lives. The Vachana is calling for giving our one hundred percent to each endeavor we take on.

Let us be 100% committed in what all we do!

KANNADA COMMENTARY     

ಹಿಂದಿನ ವಚನದಲ್ಲಿ ವ್ಯಕ್ತಿ ಸುಂಕಕ್ಕೆ ಅಂಜುವುದನ್ನು ಹೇಳಿದರು ದಾಸಿಮಯ್ಯನವರು. ಇಲ್ಲಿಯೂ ಅದೇ ಭಾವವನ್ನು ಮುಂದುವರಿಸುತ್ತಿದ್ದಾರೆ.  ಅಂಜಿಕೆಯು ಮನಷ್ಯನನ್ನು ನುಜ್ಜುಗುಜ್ಜಾಗಿಸುತ್ತದೆ.  ಅದು ಅವನನ್ನು ದಿಕ್ಕುಗೆಡಿಸುತ್ತದೆ ಆದರೆ ನಿಷ್ಠೆಯುಳ್ಳವನಿಗೆ ಅದು ಕಾಡುವುದಿಲ್ಲ.

ಈ ವಚನದಲ್ಲಿ ಅಡವಿಯು ಭಯವನ್ನು ಪ್ರತಿನಿಧಿಸುತ್ತದೆ, ಮತ್ತು ಪಟ್ಟಣವು ಭದ್ರತೆಯನ್ನು ಪ್ರತಿನಿಧಿಸುತ್ತದೆ. ಅಡವಿಯಲ್ಲಿ ಕ್ರೂರ ಮೃಗಗಳು ಇರುತ್ತವೆ, ಆಹಾರಕ್ಕಾಗಿ ಹೊಂಚುಹಾಕುತ್ತಿರುತ್ತವೆ, ನೆಲೆಸಲು  ಮನೆಯಿರುವುದಿಲ್ಲ, ಗಾಳಿ ಮಳೆ ಮತ್ತು ಬಿಸಿಲುಗಳಿಂದ ರಕ್ಷಣೆಯಿರುವುದಿಲ್ಲ.  ಹೀಗಾಗಿ ಅರಣ್ಯದಲ್ಲಿ ವಾಸಿಸುವವನು  ಸದಾ ಭಯಕ್ಕೆ ತುತ್ತಾಗುತ್ತಾನೆ.  ಇದಕ್ಕೆ ವಿರುದ್ಧವಾಗಿ ಪಟ್ಟಣದಲ್ಲಿ ವಾಸಿಸುವವನಿಗೆ ಮನೆಯ ಆಶ್ರಯವಿರುತ್ತದೆ, ಕಾಡು ಪ್ರಾಣಿಗಳ ಕಾಟವಿರುವುದಿಲ್ಲ,   ಅಕ್ಕಪಕ್ಕದವರ, ಬಂಧು ಬಾಂಧವರ  ಬೆಂಬಲವಿರುತ್ತದೆ, ಹೀಗಾಗಿ ಅದು ಭದ್ರತೆಯನ್ನು  ಕೊಡುತ್ತದೆ. ಆದರೆ ಭದ್ರತೆಯಾಗಲಿ ಅಥವಾ ಭಯವಾಗಲಿ ಬಾಹ್ಯ ಪರಿಸರದ ಮೇಲೆ ಅವಲಂಬಿಸುವುದಿಲ್ಲ.  ಅವು ಮಾನವನ ಆಂತರಂಗದಲ್ಲಿರುತ್ತವೆ. ನಿಷ್ಠೆ ಮತ್ತು ದೃಢತೆಯಿದ್ದಾಗ ವ್ಯಕ್ತಿ ಯಾವುದೇ ಪರಿಸರದಲ್ಲಿರಲಿ ಆತನ ನೆಮ್ಮದಿಗೆ ಧಕ್ಕೆ ಬರುವುದಿಲ್ಲ. ನಟ್ಟಡವಿಯಲ್ಲಿದ್ದರೂ ಆತ ಭಯಪಡುವುದಿಲ್ಲ. ಅದು ಆತನ ಮಟ್ಟಿಗೆ ಪಟ್ಟಣದಲ್ಲಿರುವಂತೆಯೇ ಇರುತ್ತದೆ. ಮತ್ತು ನಿಷ್ಠೆ ಇಲ್ಲದ ವ್ಯಕ್ತಿ ಪಟ್ಟಣದಲ್ಲಿದ್ದರೂ ನಟ್ಟಡವಿಯಲ್ಲಿರುವವನಂತೆ ಭಯದಲ್ಲಿಮುಳುಗಿರು  ತ್ತಾನೆ ಎನ್ನುತ್ತಾರೆ ದೇವರ ದಾಸಿಮಯ್ಯರು.   

ಇಲ್ಲಿ ನಿಷ್ಠೆ ಎಂದರೇನು ಮತ್ತು ಯಾವುದರ ಬಗ್ಗೆ ನಿಷ್ಠೆ ಎಂಬ ಪ್ರಶ್ನೆ ಹುಟ್ಟುತ್ತದೆ. ನಿಷ್ಠೆ ಎಂದರೆ ದೃಢತೆ, ಸ್ಥಿರತೆ.  ಅದಕ್ಕೆ ಭಕ್ತಿ ಎಂಬ ಅರ್ಥವೂ ಇದೆ. ಆದರೆ ನಾವು ಭಕ್ತಿಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಭಕ್ತಿ ಎಂದರೆ ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಂಡಿರುವುದು ಎಂದುಕೊಳ್ಳುತ್ತೇವೆ. ಆದರೆ ಅದು ನಿಜವಾದ ಭಕ್ತಿಯಲ್ಲ. ಭಕ್ತಿ ಎಂದರೆ ಸತ್ಯಕ್ಕಾಗಿ ನಮ್ಮನ್ನೇ ನಾವು ದೃಢವಾಗಿ  ಮುಡಿಪಾಗಿಡುವುದು. ನಮ್ಮ ಮನಸ್ಸು ವರ್ತಿಸುವ ಬಗೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಿಷ್ಠೆ. ನಮ್ಮೆಲ್ಲ  ಭಯ ಆತಂಕಗಳಿಗೆ ನಮ್ಮ ಮನಸ್ಸು, ವಿಚಾರಗಳೇ ಕಾರಣ. ಅದು ಯೋಚಿಸುವ, ವರ್ತಿಸುವ, ಪ್ರತಿಕ್ರಿಯಿಸುವ ರೀತಿಯೇ ಕಾರಣ. ನನಗೆ ಯಾವ ಭಯವೂ ಇಲ್ಲ ಎಂದು, ನಾವು ಅಂದುಕೊಳ್ಳಬಹುದು. ಆದರೆ ಅದು ಒಂದು ದೊಡ್ಡ ಸುಳ್ಳು. ನನ್ನ ಪದವಿಗೆ ಧಕ್ಕೆ ಬರುತ್ತದೆ ಎಂದೋ, ನನ್ನ ಸುಖ ಕಳೆದು ಹೋಗುತ್ತದೆ ಎಂತಲೋ,  ನನ್ನ ಪ್ರಿಯರಾದವರಿಗೆ ಕಷ್ಟ ಬರುತ್ತದೆಂತಲೋ ಇನ್ನೂ ಏನೇನೋ ಭಯಗಳು ನಮಗೆ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿರುತ್ತವೆ. ಆದರೆ ನಿಷ್ಠೆ ಯಿಂದ ಇವುಗಳನ್ನು ಗಮನಿಸಿದಾಗ, ನಾವು  ಪ್ರಾಮಾಣಿಕತೆಯಿಂದ ನಡೆದುಕೊಂಡಾಗ, ನಾವು ಆಳವಾಗಿ ಅರ್ಥಮಾಡಿಕೊಂಡಾಗ  ಅನೇಕ ಸೂಕ್ಷ್ಮ ವಿಷಯಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ. ನಮ್ಮ ಇರವನ್ನು ಅದಕ್ಕಾಗಿ ಮುಡಿಪಾಗಿ ಇರಿಸಿದಾಗ ನಮ್ಮ ಭಯಗಳು ಇಲ್ಲವಾಗುವ ಸಂಭವ ಉಂಟು. ಆಗ ವ್ಯಕ್ತಿಯ ಮೇಲೆ ಪರಿಸರದ ಪರಿಣಾಮ ವಾಗುವುದಿಲ್ಲ. ಅಂತರಂಗದಲ್ಲಿಯ ಸ್ಪಷ್ಟತೆ ಮತ್ತು ನಿರಾತಂಕತೆಯು, ಬಾಹ್ಯ ಪರಿಸರವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ.

Friday, December 16, 2011

Vachana 68: Harida Goniyalobba - Don’t fret over the small stuff


ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲ ನಡೆದನಾ ಸುಂಕಕ್ಕಂಜಿ
ಕಳವೆಯೆಲ್ಲ ಹೋಗಿ ಬರಿಯ ಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥಾ

TRANSLITERATION

Harida gONiyalobba kaLaveya tuMbida
iruLella naDedanaa suMkakkaMji
kaLaveyella hOgi bariya gONi uLiyittu
aLimanada bhakti iMtaayittu raamaanaathaa

CLICK HERE TO READ ALONG:

http://www.youtube.com/watch?v=kb7nBH5wI9w&list=UUY069_ad4eRWlT26ttaAszQ&index=1&feature=plcp

TRANSLATION (WORDS)

harida (torn) gONiyalu ( in a sack)obba ( a man, fellow)kaLaveya (paddy, rice) tuMbida (filled)
iruLella (whole night) naDedanu (kept walking) aa (that) suMkakkaMji (frightened of unavoidable tax)
kaLaveyella (all the paddy ) hOgi ( was lost, gone) bariya ( only, empty) gONi (sack) uLiyittu (remained)
aLimanadavana (of a weak minded) bhakti (devotion ) iMtaayittu (is like this) raamanaathaa (Lord of Rama)

TRANSLATION

A man filled paddy in a torn sack
And walked all night frightened of (unavoidable) tax
The entire paddy was lost and only the empty sack remained
Thus is the devotion of the weak minded, Oh, Lord of Rama!

COMMENTARY

In previous post Muktaayakka mentioned that the only way for self-realization is to go beyond the practices we are used to, forget all we know, burn the mind and go beyond what was taught by the teacher. In this Vachana, Sharana Devara Daasimayya comments on how we get distracted by trivia and fail to concentrate on developing the intense nature required to achieve the ultimate goal, with a beautiful example. The man fills the sack with grains he intends to transport, but gets fixated on avoiding the toll (tax) he is required to pay. He does not observe that the sack is torn and walks all night long (to avoid being seen by the tax collector). He ends up with an empty (torn) sack. The ultimate and proper goal should have been transporting the sack of grains to the destination. Paying tax was a trivial matter. The ultimate goal was lost, because of the attention paid to the trivial.

Daasimayya says that weak-minded devotion does not take us to the ultimate, the self-realization.

One should develop an intense frame of mind to escape from the influences of the mundane life. With such a frame of mind, one can examine the mundane occurings in their true light, and see the inappropriateness of those, towards achieving a silent and dedicated mind. Such dedication is needed to achieve self-realization.

The Vachana provides a powerful message applicable to our daily lives also – “Don’t fret over the small stuff”!

Let us get away from the pursuit of the trivial and focus on the Ultimate!


KANNADA COMMENTARY

ಇದು ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರ ವಚನ. ಈ ವಚನ ಚಿಕ್ಕದಾದರೂ ಬಹಳ ಮಹತ್ವಪೂರ್ಣವಾದದ್ದು. ಹಿಂದೆ, ಆಚಾರವನ್ನು ಬಿಡದೆ, ತಾನು ಗಳಿಸಿದ ಜ್ಞಾನವನ್ನು ಮರೆಯದೆ, ಮನವನ್ನು ಸುಡದೆ, ಗುರುವನ್ನು ತೊರೆಯದೆ, ತನ್ನ ತಾ ಅರಿಯುವ ದಾರಿಯಿಲ್ಲ ಎಂಬುದನ್ನು ಹೇಳಿದ ಮುಕ್ತಾಯಕ್ಕನ ವಚನವನ್ನು ನೋಡಿದೆವು. ತನ್ನ ತಾನರಿದರೆ ಭಯಕ್ಕೊಳಗಾಗುವುದು, ಗೊಂದಲಗಳಲ್ಲಿ ತೊಳಲುವುದು, ಆಸೆ ಆಕಾಂಕ್ಷೆಗಳಿಂದ ಘಾಸಿಗೊಳ್ಳುವುದು, ರಾಗ ದ್ವೇಷಗಳಿಂದ ನುಜ್ಜುಗುಜ್ಜಾಗುವುದು, ದುಃಖದಲ್ಲಿ ಮುಳುಗುವುದು ಇತ್ಯಾದಿ ತಪ್ಪುತ್ತವೆ. ಆದರೆ ತನ್ನನ್ನು ತಾನು ಅರಿಯಲು ಒಂದು ವಿಶೇಷ ಮನಸ್ಥಿತಿಯ ಅವಶ್ಯಕತೆಯಿರುತ್ತದೆ. ಅದಕ್ಕೆ ಮನಸ್ಸು ಮೌನವಾಗಬೇಕು. ಮನಸ್ಸು ಮೌನವಾಗಲು, ಅದು ಈ ಸಂಸಾರದ ಆಗು ಹೋಗುಗಳನ್ನು, ವಿಚಾರದ ಯಾಂತ್ರಿಕವಾದ ರಚನಾಕ್ರಮವನ್ನು ಆಳವಾಗಿ ಗಮನಿಸಬೇಕಾಗುತ್ತದೆ. ಈ ಆಳವಾದ ಗಮನಿಸುವಿಕೆ ಅವುಗಳ ನಿಸ್ಸಾರತೆಯನ್ನು ಮನಗಾಣಿಸುತ್ತದೆ ಮತ್ತು ತನ್ನ ನಿಜವಾದ ಸ್ವರೂಪದೆಡೆಗೆ ಕರೆದೊಯ್ಯುತ್ತದೆ. ಆದರೆ ಮನಸ್ಸು ಮೌನವಾಗಲು ಬೇಕಾಗುವ ಗಮನಿಸುವಿಕೆಗೆ ನಿರಂತರವಾದ ದೃಢತೆ ಬೇಕಾಗುತ್ತದೆ. ದೃಢವಾದ ಮನಸ್ಸಿಲ್ಲದ ಕಾರಣ ನಾವು ತೊಳಲುವ ರೀತಿಯನ್ನು ಉದಾಹರಣೆಯ ಮೂಲಕ ಇಲ್ಲಿ ಹೇಳುತ್ತಿದ್ದಾರೆ ದಾಸಿಮಯ್ಯನವರು.

ಒಬ್ಬ ವ್ಯಕ್ತಿಯು ಒಂದು ಹರಿದ ಗೋಣಿಚೀಲದಲ್ಲಿ ಭತ್ತವನ್ನು ತುಂಬಿ, ಕೊಡಬೇಕಾದ ಸುಂಕ(tax)ವನ್ನು ತಪ್ಪಿಸಲು ರಾತ್ರಿಯಿಡೀ ನಡೆದು ಹೋಗುತ್ತಾನೆ. ಆದರೆ ಬೆಳಗಾಗುವುದರಲ್ಲಿ ಭತ್ತವೆಲ್ಲ ಸುರಿದುಹೋಗಿ ಕೇವಲ ಗೋಣಿ ಚೀಲ ಉಳಿಯುತ್ತದೆ. ಅನಿವಾರ್ಯವಾದ ಸುಂಕದಿಂದ ತಪ್ಪಿಸಿಕೊಳ್ಳುವುದಕ್ಕೆ ಹೋಗಿ ಮೂಲ ಸರಕನ್ನೇ ಕಳೆದುಕೊಳ್ಳುತ್ತಾನೆ. ಇದು ಮೂರ್ಖತನದ ಪರಮಾವಧಿ. ಆದರೆ ನಾವೆಲ್ಲ ಮಾಡುವುದು ಇದನ್ನೇ ಎಂದು ಪರೋಕ್ಷವಾಗಿ ಹೇಳುತ್ತಾರೆ ದಾಸಿಮಯ್ಯನವರು.

ನಿರಂತರವಾಗಿ ಮನಸ್ಸಿನ ದೃಢತೆಯನ್ನು ಹೊಂದುವುದು ಕಷ್ಟದ ಕೆಲಸವೇ. ಮನಸ್ಸು ಚಂಚಲವಾದದ್ದು. ಅದು ಬಹು ಬೇಗ ಅತ್ತಿತ್ತ ಹರಿದಾಡುತ್ತದೆ. ಅದನ್ನು ಅದು ಹೋದತ್ತ ಹರಿಯ ಬಿಡುವುದು ಬಹು ಸುಲಭ. ಆದರೆ ಅದು ಅತ್ತಿತ್ತ ಏಕೆ ಹರಿಯುತ್ತದೆ, ಅದರ ಹಿಂದೆ ಓಡುವುದರಿಂದ ಏನಾಗುವುದು? ಅದರಿಂದ ಸುಖ ದೊರಕುವುದೇ? ನಿಜವಾದ ಸುಖಯಾವುದು? ಎಂದೆಲ್ಲ ಆಳವಾಗಿ ಗಮನಿಸುವುದು, ಕಷ್ಟದ ಕೆಲಸ. ಆದರೆ ತನ್ನ ತಾನರಿಯುವ ಸಲುವಾಗಿ ಹಾಗೆ ಮಾಡಬೇಕಾದದ್ದು ಅನಿವಾರ್ಯ. ಆ ಪ್ರಯತ್ನಕ್ಕೆ ಅಂಜಿ ಅದರಿಂದ ದೂರ ಸರಿಯುವುದು ಸುಂಕಕ್ಕೆ ಅಂಜಿ ರಾತ್ರಿಯಲ್ಲಿ ನಡೆದು ಹೋಗುವಂತೆ. ಅರಿವನ್ನು ಪಡೆಯುವ ಕಷ್ಟಕ್ಕಿಂತ ಅಜ್ಞಾನದಲ್ಲಿದ್ದು, ಕತ್ತಲೆಯಲ್ಲಿದ್ದು ನಾವು ಇದ್ದುದ್ದನ್ನು ಕಳೆದುಕೊಳ್ಳುತ್ತೇವೆ. ಇದು ಅಳಿಮನ ಅಂದರೆ ಚಂಚಲಮನದವನ ಲಕ್ಷಣ ಎನ್ನುತ್ತಾರೆ ದೇವರ ದಾಸಿಮಯ್ಯನವರು.


Friday, December 9, 2011

Vachana 67: Hididaachaarava bidadannakkara - Path of Self-realization

ಹಿಡಿದಾಚಾರವ ಬಿಡದನ್ನಕ್ಕರ,
ಎನ್ನ ಅರಿವ ಮರೆಯದನ್ನಕ್ಕರ
ಎನ್ನ ಮನವ ಸುಡದನ್ನಕ್ಕರ
ಎನ್ನ ಬೆಡಗಿನ ಗುರುವ ತೊರೆಯದನ್ನಕ್ಕರ
ಸುಸುರವೆಂತಪ್ಪುದೊ ಹೇಳಾ?
ಹೋಹ ಬಟ್ಟೆಯನರಿಯದನ್ನಕ್ಕರ ತಾನಾಗಬಾರದು ಕಾಣಾ ಅಜಗಣ್ಣ ತಂದೆ.

TRANSLITERATION

hiDidaacaarava biDadannakkara
enna ariva mareyadannakkara
enna manava suDadannakkara
enna beDagina guruva tereyadannakkara
susuraveMtappoudo hELaa?
hOha baTTeyanariyadannakkara taanaagabaaradu kaaNaa ajagaNNa taMde.

READ ALONG BY CLICKING HERE:

http://www.youtube.com/user/vachana11?feature=mhee

TRANSLATION (WORDS)

hiDida (cultivated, held) acaarava (custom, practice, tradition) biDadannakkara( without relinquishing)
enna (my) ariva( knowledge) mareyadannakkara( without forgetting)
enna (my)manava (mind) suDadannakkara (without burning)
enna (my) beDagina (astonishing, impressive) guruva( teacher) toreyadannakkara( without leaving)
susura(smooth, easy, unhindered) veMtappudO (how is it possible it to be) hELaa (please tell)?
hOha( going) baTTeyan( the path) ariyadannakkara( if you don’t know, without knowing)
taanaagabaaradu( not possible to know the self, not possible to become one with the self) kaaNaa (you see) ajagaNNa (Ajaganna) taMde (Father)

TRANSLATION

Without relinquishing the practices cultivated,
Without forgetting all I know,
Without burning my mind,
Without leaving my impressive teacher,
How easy it is to be, please tell me?
Without knowing the path to get there,
It is not possible to become one with the self, you see! Father (-like) Ajaganna!

COMMENTARY

This Vachana is from Sharane Muktaayakka, sister of Sharana Ajaganna. Muktaayakka considers her brother as her great teacher and guide and the utmost father-like reverence for him and calls him taMde (father). At the death of Ajaganna, Muktaayakka was devastated and sorrowful at the loss of her great guide and teacher. Allama prabhu arrives to console her. He urges her realize that the body of Ajaganna is not really Ajaganna and the great teacher in him is now within Muktaayakka. This sets her in the path of thinking of true path for self-realization. This Vachana is a summary of her thoughts.

Muktaayakka introspects as to without giving up the practices cultivated, without forgetting everything one knows, without burning the mind, without leaving the teacher, and without the knowledge of the path, how easy  is it to achieve self-realization? These thoughts seem contrary to the widely held beliefs that one should cultivate righteous practices, become knowledgeable, control the mind, and be close to the teacher in order progress in the journey of self-realization.

Our practices are dictated by the norms of the society. They become righteous when we follow the rules of right behavior. Muktaayakka implies that our practices should stretch beyond the limits of the current right practice definitions. The definitions change over time. We should be dynamic in in our practices to accommodate the changing environments we live in. We must internalize our practices and expand the definition of righteous to practices within. Along the same lines, our knowledge cannot be static. We must be knowledgeable beyond the requirements of mundane activities. We must probe within and develop the knowledge of the Lord within. Cultivating the mind to distinguish between the right and wrong and developing a mental attitude of sublimation is a better way than just controlling the mind. A controlled mind goes back to its original form as soon as the control is removed or altered. Guidance of a teacher is essential. It is not enough just to follow the teacher. Going beyond the guidance of the teacher to find and follow the teacher within is more appropriate for the seeker. In summary, finding the right path for self-realization is within us!


Let us be 'out of the box' to realize what is within!


KANNADA COMMENTARY

ಇದು ಗುಪ್ತ ಭಕ್ತ ಶರಣ ಅಜಗಣ್ಣನ ತಂಗಿ ಮುಕ್ತಾಯಕ್ಕನ ವಚನ. ಅಜಗಣ್ಣನು ದೇಹವನ್ನು ಬಿಟ್ಟಾಗ ಮುಕ್ತಾಯಕ್ಕ ಎದೆಯೊಡೆಯುತ್ತಾಳೆ. ತನಗೆ ಇನ್ನಾರು ಗತಿ? ಎಂದು ಅಪಾರವಾಗಿ ದುಃಖಿಸುತ್ತಾಳೆ. ತನ್ನ ಗುರುವೇ ಇಲ್ಲವಾದಾಗ ತನಗಾರು ದಾರಿ ತೋರುವವರು? ಎಂದು ಅಳುತ್ತಾಳೆ. ಆಗ ಅಲ್ಲಮ ಪ್ರಭುಗಳು ಅಲ್ಲಿಗೆ ಬಂದು ಅವಳನ್ನು ಕುರಿತು ಅಜಗಣ್ಣನ ದೇಹವೇ ಅಜಗಣ್ಣನಲ್ಲವೆಂದೂ, ತನ್ನ ಗುರುವು ತನ್ನಲ್ಲಿಯೆ ಇರುವನು, ಭ್ರಾಂತಿಯನ್ನು ತೊರೆಯದೆ ಇದೆಲ್ಲವೂ ತಿಳಿಯುವುದಿಲ್ಲ ಎಂದು ತಿಳಿಸುತ್ತಾನೆ. ಆಗ ಅವಳಿಗೆ ಜ್ಞಾನೋದಯವಾಗುತ್ತದೆ. ಇಲ್ಲಿ ತನ್ನ ತಾ ಅರಿಯಬೇಕಾದರೆ ಏನು ಮಾಡಬೇಕು ಎಂಬುದನ್ನು ಹೇಳುತ್ತಾಳೆ.

ಹಿಡಿದ ಆಚಾರವ ಬಿಡದೆ, ಎನ್ನ ಅರಿವನ್ನು ಮರೆಯದೆ, ನನ್ನ ಮನಸ್ಸನ್ನು ನಾಶಮಾಡದೆ, ನನ್ನ ಗುರುವನ್ನು ತೊರೆಯದೆ, ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವ ಅರಿವು ಇಲ್ಲದೆ, ನನ್ನ ನಾನರಿಯುವ ದಾರಿ ಹೇಗೆ ಸುಗಮವಾಗಬಲ್ಲುದು? ಎಂದು ತನ್ನನ್ನು ತಾನೇ ಕೇಳಿಕೊಳ್ಳುವ ಮೂಲಕ ನಮ್ಮ ಗಮನವನ್ನೂ ಆ ಕಡೆಗೆ ಸೆಳೆಯುತ್ತಿದ್ದಾಳೆ.

ಆಚಾರವನ್ನು ಬಿಡುವುದು, ತನ್ನ ಅರಿವು, ಜ್ಞಾನವನ್ನು ಮರೆಯುವುದು, ಮನಸ್ಸನ್ನು ನಾಶ ಮಾಡುವುದು, ಗುರುವನ್ನು ತೊರೆಯುವುದು, ಎಲ್ಲವೂ ನಕಾರಾತ್ಮಕ ವಿಷಯಗಳೇ ಆಗಿವೆ. ಸಾಧಾರಣವಾಗಿ ಬ್ರಹ್ಮಜ್ಞಾನವನ್ನು ಪಡೆಯಲು ಆಚಾರವಂತರಾಗಿ, ಅಧ್ಯಯನದಿಂದ ಜ್ಞಾನವನ್ನು ವೃದ್ಧಿಗೊಳಿಸಿ, ಮನಸ್ಸನ್ನು ಕಟ್ಟಿ ಹಾಕಿ, ಗುರುವಿನ ದಾಸನಾಗಬೇಕು ಎಂದು ಹೇಳುವುದನ್ನು ಎಲ್ಲರೂ ಬಲ್ಲರು. ಆದರೆ ಮುಕ್ತಾಯಕ್ಕ ಅದಕ್ಕೆ ವಿರುದ್ಧವಾದುದನ್ನು ಹೇಳುತ್ತಿದ್ದಾಳೆ. ಅದೇಕೆ ಎಂದು ನೋಡೋಣ.

ಆಚಾರವೆಂದರೆ, ಒಳ್ಳೆಯ ನಡತೆ, ಸಂಪ್ರದಾಯವನ್ನು ಪಾಲಿಸುವುದು ಎಂದರ್ಥ. ಭಕ್ತನು ಕೇವಲ ಒಳ್ಳೆಯ ನಡತೆಯನ್ನು ಆಚರಿಸಿದರೆ, ಸಂಪ್ರದಾಯವನ್ನು ಪಾಲಿಸಿದರೆ ಸಾಲದು. ಆತನು ಅದನ್ನು ಮೀರಿ ಬೆಳೆಯಬೇಕು. ಸಮಾಜದಲ್ಲಿ, ಯಾರೋ ಹಾಕಿಕೊಟ್ಟ ಸಂಪ್ರದಾಯವನ್ನು ಪಾಲಿಸಿಕೊಂಡು, ಒಳ್ಳೆಯ ವ್ಯಕ್ತಿಯಾಗಿ ಬಾಳುವುದು ಒಂದು ರೀತಿಯಿಂದ ಬಹಳ ಸುಲಭ. ಆದರೆ ಸಂಪ್ರದಾಯಗಳು ಕಾಲಾತೀತವಲ್ಲ. ಕಾಲಕ್ಕೆ ತಕ್ಕಂತೆ ಅವುಗಳಲ್ಲಿ ದೋಷಗಳುಂಟಾಗುತ್ತವೆ. ಆದ್ದರಿಂದ ನಿರಂತರವಾದ ಎಚ್ಚರ ಅಗತ್ಯವಾದದ್ದು. ಆಗ ಸಂಪ್ರದಾಯ, ಆಚಾರ, ಅರಿವು ಎಲ್ಲವೂ ಬಿಡಬೇಕಾಗುವುದು. ತನ್ನ ಅರಿವು, ಎಂದರೆ ತಾನು ಇಲ್ಲಿಯವರೆಗೆ ಗಳಿಸಿದ ಜ್ಞಾನ, ಜ್ಞಾನದಲ್ಲಿ ಎಚ್ಚರವಿಲ್ಲದಿದ್ದರೆ ಅದಕ್ಕೆ ಬೆಲೆಯಿಲ್ಲ. ಆ ಜ್ಞಾನವನ್ನು ತನ್ನದೆಂದು ತಿಳಿಯುವ ಅಹಂಕಾರವನ್ನೂ ಮರೆಯ ಬೇಕು. ಜ್ಞಾನವು ಯಾರೊಬ್ಬರ ಸ್ವತ್ತಲ್ಲ, ಅದು ಕೇವಲ ಜ್ಞಾನ.

ಮನಸ್ಸನ್ನು ಸುಡಬೇಕು ಎನ್ನುತ್ತಾಳೆ ಮುಕ್ತಾಯಕ್ಕ. ಮನಸ್ಸನ್ನು ಕಟ್ಟಿಹಾಕಿದರೆ ಸಾಲದೆ? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಆದರೆ ಕಟ್ಟಿಹಾಕಿದ ಮನಸ್ಸು ಕಟ್ಟುಗಳನ್ನು ಬಿಚ್ಚಿದ ಕೂಡಲೆ ಹುಚ್ಚಾಪಟ್ಟೆ ಓಡುವುದು ಸಹಜ. ಮತ್ತು ಅದನ್ನು ಸದಾ ಕಟ್ಟಿಹಾಕುವುದು ಅಸಾಧ್ಯ ಹಾಗೂ ಅಸಹಜ. ಸುಟ್ಟುಹಾಕುವುದು ಹೇಗೆ? ಮನಸ್ಸಿನ ಬಯಕೆಗಳ ಇಡೀ ಪ್ರಕ್ರಿಯೆಯನ್ನು ಆಳವಾಗಿ ನೋಡಿದಾಗ ಅವುಗಳ ಉದಾತ್ತೀಕರಣವಾಗುವ ಸಾಧ್ಯತೆಯಿರುತ್ತದೆ. ಮನಸ್ಸನ್ನು ಉದಾತ್ತೀಕರಿಸಿದಾಗ ಮತ್ತೆ ಮನದಲ್ಲಿ ಆಸೆಗಳು ಹೊಗೆಯಾಡುವುದಿಲ್ಲ. ಅವು ಬೂದಿಯಾಗುತ್ತವೆ.

ಬೆಡಗಿನ ಗುರುವನ್ನು ತೊರೆಯಬೇಕೆನ್ನುವುದು ಏಕೆ? ಬೆಡಗಿನ ಗುರು ಎಂದರೆ ಯಾರು? ತನ್ನ ಮಾತಿನ ಚಮತ್ಕಾರದಿಂದ ಶಿಷ್ಯರನ್ನು ಮರುಳಾಗಿಸುವವ. ತನ್ನ ದೊಡ್ಡ ದೊಡ್ಡ ಮಾತುಗಳಿಂದ ಶಿಷ್ಯರನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳುವ ಗುರುವಿನಿಂದ ಯಾವ ಪ್ರಯೋಜನವೂ ಇಲ್ಲ. ಆತನ ಮಾತಿನ ಮೋಡಿಯಲ್ಲಿ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವ ಅರಿವು ಇರುವುದಿಲ್ಲ ಶಿಷ್ಯನಿಗೆ. ಆತನು ಒಯ್ದತ್ತ ಹೋಗುವುದು ಪರಮ ಮೌಢ್ಯ. ಅದರಲ್ಲಿ ಸಮಯವೂ ನಷ್ಟವಾಗುತ್ತದೆ, ಆದ್ದರಿಂದ, ತನ್ನ ಮೌಢ್ಯವನ್ನು ಅರಿತುಕೊಳ್ಳಬೇಕು, ಅವನನ್ನು ತೊರೆದು ತಾನೇ ತನ್ನ ಗುರುವಾಗಬೇಕು. ತಾನೇ ತನ್ನದಾರಿಯನ್ನು ಕಂಡುಕೊಳ್ಳಬೇಕು. ಹಾಗಾಗದಿದ್ದರೆ ತನ್ನ ತಾನರಿಯುವ ದಾರಿಯು ಸುಗಮವಾಗದು. ಎನ್ನುತ್ತಾಳೆ ಮುಕ್ತಾಯಕ್ಕ.














Friday, December 2, 2011

Vachana 66: Tannuva husimaadi - The Lord within


ತನ್ನುವ ಹುಸಿ ಮಾಡಿ ಇನ್ನೊಂದ ದಿಟ ಮಾಡುವ ಅಣ್ಣಂಗೆ ನಂಬುಗೆ ಇನ್ನಾವುದೋ?
ತನ್ನೊಳಗಿದ್ದ ಘನವ ತಾ ತಿಳಿಯಲರಿಯದೆ
ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆದೆನೆಂಬ ಅಣ್ಣ ಗಾವಿಲನೆಂದಾತ ಅಂಬಿಗರ ಚೌಡಯ್ಯ

TRANSLITERATION

tannuva husimaaDi innoMda diTa maaDuva aNNaMge naMbuge innaavudO?
tannoLagidda ghanava taa tiLiyalariyade
parabrahmakke taleyanikki tegedeneMba aNNa gaavilaneMdaata aMbigara couDayya


CLICK HERE TO HEAR IT

http://www.youtube.com/watch?v=w5VQi4IWAJ8

TRANSLATION (Words)

tannuva ( one’s own self) husi maaDi (to consider as false) innoMda (the other) dita maaDi ( to consider as true) aNNaMge (for the elder brother) naMbuge (the belief) innaavudO? (which other) (who knows what is the belief ?)
tannoLagidda (which lies within) ghanava ( the profound ) taa (self) tiLiyalariyade ( not knowing how to understand, to be aware of )
parabrahmakke (of the ultimate Brahma) taleyikki (who puts his head at the feet) tegeneneMba (and gets up) aNNa ( the elder brother) gaavila ( is a fool) eMdaata (says) aMbigara couDayya (Ambigara Choudayya)


TRANSLATION

What other belief prompts the (elder) brother to consider self to be false and the other to be true?
Not being aware of the profound which lies within (self),
the (elder) brother who puts his head on the feet of the ultimate Brahma and gets up is a fool, says Ambigara Choudayya


COMMENTARY

Sharana Ambigara Choudayya says that those who do not recognize the Lord within and tries to find Him elsewhere are indeed fools. He questions as to which belief prompts one to falsify what is within and go after the one outside? According to him, not being aware of the Lord within, if one bows his head at the perceived Brahma (the Ultimate) outside, he is indeed a fool. Note the humility of Sharana Choudayya, when he refers to others as ‘elder brother’ (aNNa) even when he is pronouncing their act to be foolish.

We visualize God to be in various forms and create statues, worship them with all sorts of offerings, chant hundreds of names we give them, and immerse in Bhajans and discussions. We believe that we are reaching the Lord through all these activities. We never question the belief that led us to these activities. We never find time to think about what we are doing. We just follow these rituals mechanically. These activities come easy to us. Turning our attention inwards is very difficult. It requires tremendous effort to set our mind on the path of finding the profound within us. In our busy lives of making each minute count, we never strive for the solitude and concentration needed to probe within and find that inner self – the true Lord!

Let us take a U-turn and journey towards the Lord within us!


KANNADA COMMENTARY

ಅಂಬಿಗರ ಚೌಡಯ್ಯನವರು,  ತನ್ನ ಒಳಗೆ ಇರುವ  ದೇವರನ್ನು ಗುರುತಿಸದೆ ಹೊರಗೆ ಅವನನ್ನು ಕಾಣುವ ವ್ಯಕ್ತಿಯನ್ನು ಹೆಡ್ಡ ಎಂದು ಹೇಳುತ್ತಾರೆ. ತನ್ನ ಒಳಗೆ ಇರುವವನನ್ನು ಇಲ್ಲವೆಂದು  ಬಗೆದು, ಬೇರೆಯದನ್ನು ಸತ್ಯವೆಂದು ಬೆಗೆಯುವುದಕ್ಕೆ ಯಾವ ನಂಬುಗೆ ಆತನಿಗೆ ಎಡೆಮಾಡಿಕೊಟ್ಟಿದೆಯೋ? ಯಾವ ಮಾತನ್ನು ನಂಬಿ ಆತನು ತನ್ನ ಒಳಗನ್ನು ಮರೆಯುತ್ತಾನೆಯೋ? ತನ್ನ ಒಳಗನ್ನೇ ತಿಳಿಯಲು ಅರಿಯದವನು  ಹೊರಗೆ ಪರಬ್ರಹ್ಮನಿದ್ದಾನೆ ಎಂದು ಬಲು ಭಕ್ತಿಯಲ್ಲಿ ಆತನಿಗೆ ತಲೆಬಾಗಿಸಿ ಏಳುವವನು ಮಹಾ ಮೂರ್ಖನೇ ಸರಿ ಎನ್ನುತ್ತಾರೆ ಅಂಬಿಗರ ಚೌಡಯ್ಯನವರು.


ನಾವೆಲ್ಲರೂ ಮಾಡುವುದು ಇದನ್ನೇ. ನಮ್ಮ ನಮ್ಮ ಒಳಗನ್ನು ನೋಡಿಕೊಳ್ಳುವ ಇಚ್ಛೆಯಾಗಲಿ,  ಪುರಸೊತ್ತಾಗಲಿ ಇಲ್ಲದೆ, ಬಹಳ ಸುಲಭವಾದ ದಾರಿಯನ್ನು ಹುಡುಕಿಕೊಳ್ಳುತ್ತೇವೆ. ಅದೇ ಅವನನ್ನು ಹೊರಗೆ ಕಾಣುವುದು- ಮಹಾ ಮಹಾ ಗ್ರಂಥಗಳಲ್ಲಿ, ದೇವಸ್ಥಾನಗಳಲ್ಲಿ, ಸತ್ಸಂಗಗಳಲ್ಲಿ, ಭಜನೆಗಳಲ್ಲ್ಲಿ, ಅನುಷ್ಟಾನಗಳಲ್ಲಿ, ವ್ರತಗಳಲ್ಲಿ, ಪೂಜೆಗಳಲ್ಲಿ  ಇಂತಹ ಇನ್ನೂ ಹತ್ತಾರು ವಿಧಗಳಲ್ಲಿ ದೇವರನ್ನು ಹುಡುಕಿ ಹೋಗುತ್ತೇವೆ.  ಅಲ್ಲಿ ದೊರೆಯುವ ಮೇಲು ನೋಟದ ವಿಚಿತ್ರವಾದ ಸುಖವನ್ನು  ಮಹತ್ವದ್ದು ಎಂದುಕೊಳ್ಳುತ್ತೇವೆ. ದೇವರಿಗೆ ಹತ್ತಿರವಾಗಿದ್ದೇವೆ ಎಂದುಕೊಳ್ಳುತ್ತೇವೆ. ಆದರೆ ನಿಜವಾಗಿಯೂ ನಮಗೆ  ಇಂತಹದುರಲ್ಲಿ  ತೊಡಗಿಸುವುದು ಯಾವುದು? ಯಾವ ನಂಬುಗೆ ನಮ್ಮನ್ನು ಹೀಗೆ ಮಾಡಲು ಹಚ್ಚುತ್ತದೆ? ಆ ನಂಬುಗೆಗೆ ಆಧಾರವಾವುದು? ಆ ನಂಬುಗೆಯನ್ನು ನಾವು ಯಾವಗಲಾದರೂ ಪ್ರಶ್ನಿಸುತ್ತೇವೆಯೆ?  ಇಲ್ಲ. ಏಕೆಂದರೆ, ನಾವು ಸೋಮಾರಿಗಳು.  ನಮಗೆ ಸುಲಭವಾದ ದಾರಿ ಬೇಕು. ಇನ್ನೊಬ್ಬರು ಹೇಳಿದುದನ್ನು ನಂಬುವುದು ಬಹು ಸುಲಭ. ನಾವಾಗಿಯೇ ಕಂಡುಕೊಳ್ಳುವುದು ಬಲು ಕಷ್ಟ. ಏಕೆಂದರೆ ಅದಕ್ಕೆ ಪುರಸೊತ್ತು, ಆತ್ಮಬಲ ಮತ್ತು ಮನಸ್ಸಿನ ಪ್ರಶಾಂತತೆ ಬೇಕು.  ಇದನ್ನು ಸಾಧಿಸುವುದು  ಇಂದಿನ  ಬಿಡುವಿರದ, ಅನೇಕ ಒತ್ತಡಗಳುಳ್ಳ ಅತ್ಯಂತ ವ್ಯಸ್ತ
ಬದುಕಿನಲ್ಲಿ ಅಸಂಭವವೇ ಸರಿ. ಹಾಗಾದರೆ ಕೈ ಚೆಲ್ಲಿ ಕುಳಿತುಬಿಡುವುದೇ?  ಅಥವಾ ಅದರಿಂದ ಹೇಗಾದರೂ ಮಾಡಿ ಬಿಡುವು ಮಾಡಿಕೊಳ್ಳುವುದೇ? ಎರಡೂ ನಮಗೆ ಬಿಟ್ಟದ್ದು. ಸದಾ ನಾವು ಸುಲಭದ ಉಪಾಯ ಹುಡುಕುತ್ತೇವೆ.  ನಮ್ಮಲ್ಲೇ ಇರುವ ಆ ಘನವನ್ನು ತಿಳಿಯುವ ಬಗೆಯೇ ನಮಗೆ ಗೊತ್ತಿಲ್ಲ. ಅದಕ್ಕಾಗಿ ಪ್ರಯತ್ನವೂ ಮಾಡುವುದಿಲ್ಲ.  ಅದನ್ನು ತಿಳಿದುಕೊಳ್ಳುವ ಇಚ್ಛೆಯೂ ಇಲ್ಲ.  ಹೊರಗಿರುವ  ಯವ್ಯಾವುದಕ್ಕೋ  ಪರಬ್ರಹ್ಮವೆಂದು ಹೆಸರಿಟ್ಟು ಅತಿ ಭಕ್ತಿಯಿಂದ ಶಿರವಿಟ್ಟು ನಮಿಸುತ್ತೇವೆ, ದೇವರನ್ನು ಪಡೆದೆವೆಂದು ತೃಪ್ತರಾಗುತ್ತೇವೆ. ಇಂತಹವರನ್ನೇ ಚೌಡಯ್ಯನವರು ಗಾವಿಲ, ಎಂದರೆ ಹೆಡ್ಡನೆಂದು ಕರೆದಿರುವರು.  ಹೊರಗೆ ಏನೋ  ಇರುವುದು, ಎಂದರೆ  ಅದಕ್ಕೆ ಪ್ರತಿಯಾಗಿ ಒಳಗೆ ಏನೋ ಇದೆಯೆಂದಾಯಿತಲ್ಲವೇ?  ಅಂದರೆ ಹೊರಗೆ ಮತ್ತು ಒಳಗೆ ಎಂಬ ಭೇದ ಭಾವ ಇದೆಯಂತಾಯಿತಲ್ಲವೆ?  ಈ ಭೇದವನ್ನು, ಈ ಅಂತರದ ಕಂದಕವನ್ನು ಮುಚ್ಚುವುದೇ  ಬಯಲು.  ಈ ಕಂದಕವನ್ನು ಮುಚ್ಚುವ ಬಗೆ ಹೇಗೆ ಎಂದು ಅನ್ವೇಷಿಸುವುದು ಉಚಿತವಲ್ಲವೇ?