Friday, October 29, 2010

Vachana 11: baDatanake uMbuva ciMte - Chasing Happiness



ಬಡತನಕೆ ಉಂಬುವ ಚಿಂತೆ

ಉಣಲಾದರೆ ಉಡುವ ಚಿಂತೆ

ಉಡಲಾದರೆ ಇಡುವ ಚಿಂತೆ

ಇಡಲಾದರೆ ಹೆಂಡಿರ ಚಿಂತೆ

ಹೆಂಡಿರಾದರೆ ಮಕ್ಕಳ ಚಿಂತೆ

ಮಕ್ಕಳಾದರೆ ಬದುಕಿನ ಚಿಂತೆ

ಬದುಕಾದರೆ ಕೇಡಿನ ಚಿಂತೆ

ಕೇಡಾದರೆ ಮರಣದ ಚಿಂತೆ

ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು

ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು.



TRANSLITERATION


baDatanake uMbuva ciMte

 uNalAdare uDuva ciMte

uDalAdare iDuva ciMte

iDalAdare heMDira ciMte

heMDirAdare makkaLa ciMte

makkaLAdare badukina ciMte

badukAdare kEDina ciMte

kEDAdare maraNada ciMte

iMtI halavu ciMteyallippavara kaMDenu

Sivana ciMteyalliddavarobbaranU kANeneMdAta namma aMbigara cauDayya nija SaraNanu.



CLICK TO HEAR IT:

http://www.youtube.com/watch?v=2mpQBa83yDo


TRANSLATION

baDatanake(poverty dictates) uMbuva (food) ciMte (worry, agony, or preoccupation)

uNalAdare(after food) uDuva (clothing) ciMte

uDalAdare(after clothing) iDuva(savings) ciMte

iDalAdare(after savings) heMDira(wife) ciMte

heMDirAdare(after wife) makkaLa(children) ciMte

makkaLAdare(after children) badukina (well being)ciMte

badukAdare(after well being) kEDina (troubles) ciMte

kEDAdare(after troubles) maraNada(death) ciMte

iMtI(thus) halavu(several) ciMteyallippavara(agonized people) kaMDenu(I saw)

Sivana(Lord Shiva) ciMteyalli(in mind) iddavarobbaranU (not even one) kANeneMdAta(I did not see) namma(our) aMbigara cauDayya nija (Humble) SaraNanu(Sharana).



When poor, one agonizes over where the next meal comes from!

When food needs are satisfied, one agonizes over clothing!

When clothing needs are satisfied, one agonizes over savings (wealth)!

When one has enough in savings, there is agony over finding a spouse!

Once the spouse is in, one agonizes over having children!

Having children, leads to the agony of their well being!

When all is well, one agonizes over ill being (health, other problems)!

The ill feelings, lead to the fear of death!

Thus, I see several people with each a variety of worries!

But, I do not see any one agonizing about you (thinking of you), Oh Lord!

Thus spoke the humble sharana, Ambigara Caudayya!



COMMENTARY

This vachana is from Ambigara Caudayya, a contemporary of Basavanna. An ambiga is an 'oarsman' implying that sharana Caudayya belonged to the family of professional oarsman. Identification of the profession is very significant, since Basavanna and his contemporaries believed in 'work is heaven' ('kaayakave Kailasa') philosophy. Dignity of labor was foremost in their lives. They advocated that everyone must perform their normal duties with utmost sincerity, irrespective of the profession they belong to and no profession is inferior to other!

Just as Basavanna used 'Kudala sangama' as the signature for his vachanas, this sharana used his name (Ambigara Caudayya) in the last line of the vachana as his signature.

This vachana further emphasizes the frustrations of our mundane lives depicted in Vachana 10. Ambigara Caudayya provides a strong portrayal of how our daily lives are consumed by mundane activities with no time or inclination left for self realization or reflection of what the life is all about. Satisfying one need immediately sets us in the mode of striving for the next. We are never content with what we have, although we convince ourselves that we would be happy and satisfied when the current goal or need is met. The cycle of wants and needs continues for ever. Caudayya says that he can identify several people who agonize in the cycle of wants and needs, but cannot find even one individual who has conquered the cycle to turn God minded.

Indeed, this vachana of the twelfth's century is pertinent to our society of today that offers lot more choices and attractions leading to never ending list of needs and wants. One has to make extra effort to stay clear of these attractions. Basavanna, in one of his vachanas depicts the cycle of wants and needs as "I am alone and the Five are torching me!" referring to the five sense organs that promise us happiness through the worldly elements. We are so attracted by these; we do not even feel that we are failing in realizing the true meaning of life and the God within.

Let us not ignore our duties! Let us not deprive of our necessities! But, let us not waste our immense capacity for self realization and Godliness!



FOR THOSE OF YOU WHO CAN READ KANNADA


ಒಂದಾದ ಮೇಲೊಂದರಂತೆ ಲೌಕಿಕ ಚಿಂತೆಗಳಿಗೆ ನಾವು ಹೇಗೆ ಪಕ್ಕಾಗುತ್ತೇವೆ ಎಂಬುದನ್ನು ಇಲ್ಲಿ ಬಹಳ ಸೊಗಸಾಗಿ ಹೇಳುತ್ತಾರೆ ಅಂಬಿಗರ ಚೌಡಯ್ಯನವರು,


ಇದು ಎಲ್ಲ ಕಾಲಕ್ಕೂ, ಎಲ್ಲ ಮಾನವರಿಗೂ ಪ್ರಸ್ತುತವಾಗುವ ವಚನ. ಮಾನವನನ್ನು ಕಾಡುವ ಪ್ರಾಥಮಿಕ ಚಿಂತೆಗಳು ಇವು. ಎಂಟು ಶತಮಾನಗಳ ಹಿಂದೆ ಬರೆದ ಈ ವಚನ, ಎಲ್ಲ ಕಾಲದ ಎಲ್ಲ ಮಾನವರ ಸಮಗ್ರ ಚಿಂತೆಗಳ ಮೂಲ ಚಿತ್ರವನ್ನು ಅತ್ಯಂತ ಸಮರ್ಥವಾಗಿ ತೆರೆದಿಡುತ್ತದೆ. ಮಾನವನನ್ನು ಹಿಂಡಿ ಹಿಪ್ಪೆ ಮಾಡುವ ಯಾವುದೇ ಚಿಂತೆಯಾದರೂ ಈ ಮೇಲಿನ ವಚನದ ಚೌಕಟ್ಟಿನಲ್ಲಿಯೇ ಬರುತ್ತದೆ. ಚಿಂತೆ ಮಾನವನನ್ನು ಚಿತೆಯಂತೆ ಸುಡುತ್ತದೆ. ಚಿಂತೆಯಲ್ಲಿ ಬೇಯುತ್ತಿರುವ ಇತರರನ್ನು ನೋಡಿದಾಗ ಇದು ನಮ್ಮ ಗಮನಕ್ಕೆ ಬರುತ್ತದೆ. ಆದರೆ ನಾವು ಸ್ವತಃ ಅದರಲ್ಲಿ ಮುಳುಗಿದಾಗ ಅದು ನಮಗೆ ಸ್ಪಷ್ಟವಾಗುವುದಿಲ್ಲ. ಚಿಂತೆಯ ಮೂಲವಿರುವುದು ಸುಖ ಸಂತೋಷದ ಆಕರ್ಷಣೆಯಲ್ಲಿ. ಇಂದು ಜಾಗತೀಕರಣದಿಂದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಆಯ್ಕೆಗಳು, ಆಕರ್ಷಣೆಗಳು ಅಪಾರವಾಗಿವೆ, ಅಷ್ಟೇ ಅಲ್ಲದೆ ಅವು ದಿನದಿನವೂ ವೃದ್ಧಿಗೊಳ್ಳುತ್ತಿವೆ. ಮಾರುಕಟ್ಟೆಗಳು ಹೊಸಹೊಸ ಸರಕುಗಳಿಂದ ತುಂಬಿ ತುಳುಕುತ್ತಿವೆ. ಅವುಗಳಿಂದ ನಿಜವಾದ ಸುಖ ಸಂತೋಷಗಳು ಕೈಗೂಡುತ್ತವೆ ಎಂಬ ಭರವಸೆ ಹುಟ್ಟಿಸುತ್ತಿವೆ. ಅವುಗಳ ಬಲೆಗೆ ಬೀಳದೆ ಇರುವುದು ಪವಾಡವೇ ಸರಿ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ: ಆನು ಒಬ್ಬನು ಸುಡುವರೈವರು ಎಂದು. ಇಂದ್ರಿಯಗಳ ರೂಪದಲ್ಲಿರುವ ಐವರು ನನ್ನನ್ನು ವಿವಿಧವಾದ ಅನಂತ ಆಕರ್ಷಣೆಗಳೆಡೆಗೆ ಜಗ್ಗಿಕೊಂಡು ಹೋಗಿ ಸುಡುತ್ತಿದ್ದಾರೆ. ಇವರಿಂದ ಬಿಡಿಸಿಕೊಳ್ಳಲು ಸೆಣಸಾಡುತ್ತಿರುವವನು ನಾನು (ಎಚ್ಚರದಿಂದಿರ ಬಯಸುವವ) ಒಬ್ಬನೇ, ಎಂದು ಹೇಳುತ್ತಾರೆ. ಅಂದರೆ ಐದು ಇಂದ್ರಿಯಗಳ ಸೆಳೆತಕ್ಕೆ ಒಳಗಾಗಿ ಅವುಗಳಿಂದ ಬಿಡುಗಡೆ ಬಯಸುತ್ತಿರುವವನು ಒಬ್ಬನು. ನಿನಗೆ ಸುಖವನ್ನೇ ತಂದು ಕೊಡುತ್ತೇವೆ ಎಂಬ ಭ್ರಮೆಯನ್ನು ಹುಟ್ಟಿಸಿ, ಯಾವ ಯಾವಯಾವುವೋ ವಿಷಯಗಳ ಹಿಂದೆ ಓಡುತ್ತ ನಾನಾ ರೂಪದಲ್ಲಿ ಕಾಡುವ ಈ ಐವರ ಎದುರಾಗಿ ಒಬ್ಬನೆ ಹೋರಾಡಬೇಕಾದ ಪರಿಸ್ಥಿತಿಯುಂಟಾಗಿದೆ ಎನ್ನುತ್ತಿದ್ದಾರೆ. ಸಾಮಾನ್ಯರಾದ ನಾವು ಇವುಗಳಲ್ಲಿ ಸಿಲುಕಿಕೊಂಡು ನರಳುವುದು ಸರ್ವ ಸಾಮಾನ್ಯ. ನಮಗೆ, ಇವುಗಳಿಂದ ನಾವು ನರಳುತ್ತಿದ್ದೇವೆ ಎಂದು ಗುರುತಿಸುವುದು ಸಹ ಬಹು ಕಷ್ಟ. ಆ ಆಕರ್ಷಣೆಗಳು ಎಷ್ಟು ಸುಂದರವಾಗಿರುತ್ತವೆ ಎಂದರೆ ಇಲ್ಲಿಯವರೆಗೆ ಅವುಗಳ ಸೆಳವಿಗೆ ಸಿಕ್ಕು ನರಳಿದ್ದು ಮರೆತೇ ಹೋಗುತ್ತದೆ. ಮೃಗ ಜಲದ ಹಿಂದೆ ಹಪಹಪಿಸಿ ಓಡುವ ಪ್ರಾಣಿಗಳಂತೆ ನಾವೂ ಓಡುತ್ತಿರುತ್ತೇವೆ. ನಮ್ಮ ಮನಸ್ಸಿಗೆ ಮಾಡಲು ಏನಾದರೊಂದು ಬೇಕು. ಸುಮ್ಮನೆ ಇರುವುದು ಅದರ ಜಾಯಮಾನವಲ್ಲ. ಅದರ ಈ ಅಭ್ಯಾಸ ತಪ್ಪಿಸುವುದು ಒಂದು ಸವಾಲೇ ಸರಿ. ಆ ಕ್ಷಣದಲ್ಲಿ ಎದುರಿಗೆ ಯಾವುದು ಸುಂದರವಾಗಿ ಕಾಣುತ್ತದೆಯೋ ಅದರಲ್ಲಿಯೇ ಅದು ತನ್ನನ್ನು ತೊಡಗಿಸಿಕೊಳ್ಳುತ್ತದೆ. ಅಲ್ಲಿ ಕಾಣುವ ಸೌಂದರ್ಯ ಭ್ರಮೆ ಎಂದು ಗುರುತಿಸುವುದು ಅದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಗುರುತಿಸಿದರೂ ಅವುಗಳಿಂದ ಬಿಡಿಸಿಕೊಳ್ಳುವುದಕ್ಕೆ ಅಸಾಮಾನ್ಯವಾದ ಶಕ್ತಿ ಬೇಕು. ನಮಗೆ ಬೇಡವಾದ, ಅಂದರೆ, ಆತ್ಮೋನ್ನತಿಗೆ ಸಹಕರಿಸದ ಯಾವುದೇ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸುವುದರಿಂದ ನಮ್ಮ ಅಪಾರ ಶಕ್ತಿ ವ್ಯಯವಾಗುತ್ತದೆ. ಆ ಶಕ್ತಿಯ ಸಂಚಯವೇ ನಮ್ಮ ಗುರಿಯಾಗಬೇಕು ಎಂಬ ಧ್ವನಿಯನ್ನು ಪ್ರಸ್ತುತ ವಚನದಲ್ಲಿ ಗುರುತಿಸುವುದು ನಮಗೆ ಬಿಟ್ಟದ್ದು

Thursday, October 21, 2010

Vachana 10 SamsaaraSagarada - Life and Frustrations

ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ!

ಸಂಸಾರಸಾಗರ ಉರದುದ್ದವೇ ಹೇಳಾ ?

ಸಂಸಾರಸಾಗರ ಕೊರಲುದ್ದವೇ ಹೇಳಾ ?

ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?

ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!

ಕೂಡಲಸಂಗಮದೇವ, ನಾನೇವೆನೇವೆನಯ್ಯ!


TRANSLITERATION

saMsArasAgarada tere kobbi muKada mEle alevuttide nODA!

saMsArasAgara uraduddavE hELA ?

saMsArasAgara koraluddavE hELA ?

saMsArasAgara SiraduddavAda baLika Ena hELuvenayya ?

ayya; ayya, enna huyyala kELayya!

kUDalasaMgamadEva, nAnEvenEvenayya!

CLICK TO HEAR IT:

http://www.youtube.com/watch?v=2__P6T_zOZc

TRANSLATION

saMsAra (Mundane life) sAgarada (ocean) tere (wave) kobbi (risen)

muKada mEle (on the face) alevuttide (forcing) nODA!(See)

saMsArasAgara uraduddavE (upto the chest) hELA ?(tell me)

saMsArasAgara koraluddavE (upto the neck) hELA ?

saMsArasAgara SiraduddavAda (upto the head) baLika (after) Ena (what)

hELuvenayya ?(can I say?)

ayya (Oh! God) ; ayya, enna (my) huyyala (cry, request) kELayya!(please listen)

kUDalasaMgamadEva, nAnEvenEvenayya!(what can I say and do?)



The tidal waves of the ocean of (mundane) life are hitting me on my face Oh! Lord.

I can probably withstand the waves hitting at my chest!

I can probably withstand the waves hitting at my neck!

What can I say when the waves hit at my head and drown me?

Oh! Lord, please heed my cry!

Lord Kudala Sangama! Please guide me as to what can I say or do!


COMMENTARY

Basavanna was known as ‘Karma Yogi’ meaning that he believed in passionate performance of all the activities of the mortal life. He said “kaayakave Kailaasa’ (work is heaven) and believed that no profession is inferior. He further stipulated that all of us have to serve the society by performing our duties with utmost sincerity. He noticed the frustrations, inequalities and unfairness in contemporary society, and strived to eradicate them while completely being part of the society (unlike Buddha, who renounced the worldly involvement to reform the society). Basavanna was also called “Bhakti Bhandari” (Treasurer of Devotion) and advocated an intense devotional life. He believed that everything we own belongs to the Lord and everything we do is an offering to the Lord.

Considering the above Kaayaka and Bhakti aspects of Basavanna’s life, it is interesting that he so eloquently addresses the frustrations of our material (mundane) life in this vachana. All of us are so busy with our day to day activities, that we do not have either the time or the inclination to think of anything else. We will never question as to: what are we doing? Why are we doing it? Is it necessary for us to spend our lives this way? What are the advantages and disadvantages? We are so occupied, that we do not see the need for such questions.

The mindset of an individual on the path of self realization is completely different. He questions: how and why do the problems and frustrations arise? Why are we happy or unhappy? It is obvious that those who are deprived of food and shelter are unhappy; but, why are those whose food and shelter needs are met, also unhappy? How should we lead this life? How should we smoothen our living? What is our ultimate goal in life?

Finding answers to such questions requires an ever calm, collected mind. But, the day to day frustrations and activities work against achieving such calmness of mind. Just as tidal waves of the ocean slapping on our face would make it hard for us to breath, the frustrations caused by the mundane life make us less apt to think and keep a clear mind. We can probably manage staying alive as long as the waves are hitting us at the chest or neck levels. But, when they rise to the level of our head and drown us, the only way left is to cry and scream for help.

Let us strive to achieve a calm and collected mind. Let us put our activities in perspective and move towards self realization!





FOR THOSE OF YOU WHO CAN READ KANNADA:

ಲೌಕಿಕ ಜೀವನದ ಜಂಜಾಟಗಳು ಕಾಡಿದಾಗ ಭಕ್ತನಿಗೆ ಆಗುವ ಅನುಭವ ಇದು. ಸಂಸಾರದಲ್ಲಿಯೇ ಮುಳುಗಿದವರಿಗೆ ಅಂದರೆ, ದಿನನಿತ್ಯದ ಆಗುಹೋಗುಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡವರಿಗೆ ಅದೇ ಬದುಕಾಗುತ್ತದೆ. ಯಾವಾಗಲೂ ಏನನ್ನೋ ಮಾಡುತ್ತಿರುವುದರಿಂದ ಅದನ್ನು ಬಿಟ್ಟು ಬೇರೆ ಬದುಕೇ ಇಲ್ಲವೆನ್ನುವವರಂತೆ ಅವರ ಜೀವನ ಹೇಗೋ ಕಳೆದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ, ನಾನು ಏನು ಮಾಡುತ್ತಿದ್ದೇನೆ? ಏಕೆ ಮಾಡುತ್ತಿದ್ದೇನೆ? ಈ ರೀತಿಯ ಜೀವನ ನಡೆಸುವ ಅವಶ್ಯಕತೆ ಇದೆಯೆ? ಇದರಿಂದ ಆಗುತ್ತಿರುವ ಲಾಭ ಅಥವಾ ಹಾನಿಯೇನು? ಎಂಬಂತಹ ಪ್ರಶ್ನೆಗಳು ಹುಟ್ಟುವುದೂ ಇಲ್ಲ. ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಲು ವ್ಯವಧಾನವೂ ಇರುವುದಿಲ್ಲ. ಆದರೆ ಭಕ್ತನ ( ತನ್ನನ್ನು ತಾನು ಅರಿಯಬೇಕೆನ್ನುವವನ ) ಪರಿಯೇ ಬೇರೆ. ದಿನ ನಿತ್ಯದ ಬದುಕಿನಲ್ಲಿ ಉಂಟಾಗುವ ಗೊಂದಲಗಳು, ಜಂಜಾಟಗಳು ಏಕೆ ಉಂಟಾಗುತ್ತವೆ? ಸುಖ ದುಃಖಗಳು ಏಕೆ ಬಂದು ಹೋಗುತ್ತವೆ? ಉಣ್ಣಲು, ಉಡಲು ಇಲ್ಲದಿದ್ದವರಿಗೆ ದುಃಖವಾಗುವುದು ಸರಿಯೆ, ಆದರೆ ಅದೆಲ್ಲ ಇದ್ದವರೂ ಸಹ ದುಃಖಿತರಾಗುತ್ತಾರಲ್ಲ ಏಕೆ? ಎಷ್ಟೇ ಪ್ರಯತ್ನಪಟ್ಟರೂ ಸುಖ ಏಕೆ ಶಾಶ್ವತವಾಗಿರುವುದಿಲ್ಲ? ಈ ಬದುಕನ್ನು ಹೇಗೆ ಬಾಳಬೇಕು? ಬದುಕನ್ನು ಹಸನು ಮಾಡಿಕೊಳ್ಳುವುದು ಹೇಗೆ? ಎಂಬಂತಹ ನೂರಾರು ಪ್ರಶ್ನೆಗಳು ಅವನನ್ನು ಕಾಡುತ್ತವೆ. ಈ ಎಲ್ಲ ಜಂಜಾಟಗಳಿಗೆ ಅಂಟಿಯೂ ಅಂಟದಂತೆ ಇರುವ ದಾರಿಯನ್ನು ಹುಡುಕಲು ತೊಡಗುತ್ತದೆ ಮನಸ್ಸು. ಅದಕ್ಕೆ ನಿರಂತರವಾದ ಎಚ್ಚರ ಬೇಕು. ಆದರೆ ಲೌಕಿಕ ಜೀವನದ ಜಂಜಾಟಗಳು ಆತನನ್ನು ನಿರಂತರವಾಗಿ ಎಚ್ಚರದಿಂದಿರಲು ಬಿಡುವುದೇ ಇಲ್ಲ. ಅಂದರೆ ಅವುಗಳ ಪ್ರಭಾವದಲ್ಲಿ ಸಿಲುಕಿ ಮನಸ್ಸು ಎಚ್ಚರ ತಪ್ಪುತ್ತದೆ. ಈ ಜಂಜಾಟಗಳು ಸಾಗರದ ಅಲೆಗಳಂತೆ ತೀವ್ರವಾಗಿರುತ್ತವೆ. ಕೊಬ್ಬಿದ ಸಾಗರದ ಅಲೆ ಮುಖದ ಮೇಲೆ ಆವರಿಸುತ್ತಿದ್ದರೆ ಉಸಿರಾಡುವುದು ಹೇಗೆ ದುಸ್ತರವಾಗುತ್ತದೆಯೋ ಅದೇ ರೀತಿ ಸಂಸಾರದಲ್ಲಿ ಉಂಟಾಗುವ ತೊಂದರೆಗಳೂ ಕೂಡ ಎಚ್ಚರ ತಪ್ಪುವಂತೆ ಮಾಡುತ್ತವೆ. ಸಾಗರದ ನೀರು ಎದೆಯವರೆಗಿದ್ದರೆ ಅಥವಾ ಕೊರಳುದ್ದವಿದ್ದರೆ ಹೇಗೋ ಕಾಲೂರಿ ನಿಲ್ಲಬಹುದು, ಕನಿಷ್ಠಪಕ್ಷ ಉಸಿರಾಡಿಸ ಬಹುದು. ಆದರೆ ಆ ನೀರು ತಲೆಯನ್ನೂ ಮುಳುಗಿಸುವಂತಾದಾಗ ಏನು ಮಾಡುವುದು? ಅಂತಹ ಸಂದರ್ಭದಲ್ಲಿ ಅಸಹಾಯಕನಾಗಿ ಚೀರುವುದೋಂದೇ ನನಗೆ ಉಳಿದಿರುವ ದಾರಿ ಎಂದು ಹೇಳುತ್ತಾರೆ ಬಸವಣ್ಣನವರು. ಅವರ ಮನಸ್ಸು ಸಂಸಾರದ ಜಂಜಾಟಗಳನ್ನು ಗುರುತಿಸಿದೆ, ಮತ್ತು ತಾನು ಅದರಿಂದ ಮುಕ್ತನಾಗಬೇಕೆಂಬ ಹಂಬಲ ಉಂಟಾಗಿದೆ.

Friday, October 15, 2010

Vachana 9 - Lokada Donka: Correcting Others

ಲೋಕದ ಡೊಂಕ ನೀವೇಕೆ ತಿದ್ದುವಿರಿ ?


ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.

ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ

ನಮ್ಮ ಕೂಡಲಸಂಗಮದೇವ.

TRANSLITERATION

lOkada DoMka nIvEke tidduviri ?

nimma nimma tanuva saMtaisikoLLi;

nimma nimma manava saMtaisikoLLi.

neremaneya duHKakke aLuvara mecca

namma kUDalasaMgamadEva.

TO HEAR IT:
Click hear for a recitation:
http://www.youtube.com/watch?v=-2qBs4e5P9g

Click on the link below for a musical rendering
http://www.raaga.com/player4/?id=236721&mode=100&rand=0.052598806636278916

TRANSLATION

Why do you try to mend the failings of the world?

Strengthen (Assuage) your bodies first, each one of you!

Strengthen (Assuage) your own minds, each one of you!

Lord Kudala Sangama Deva does not approve (sympathize with) those bemoaning (weeping for) neighbor’s grief!

COMMENTARY
It appears that Basavanna is trying to dissuade us from taking initiative to correct the failings of the world in the first sentence of this vachana. In the last sentence he is saying that sympathizing with the grief of the others is also not appropriate. The middle two sentences are suggesting that we should strengthen our bodies and minds so that they are not affected by the failings of the world and are fit to be of help with the grief of the others.

Indeed, we cannot reduce or eliminate anyone’s grief by sympathizing with them or crying with them. The grief can only be reduced or eliminated by the grieving individual himself. For this, he needs to be strong physically and has a strong (clear) mind to address the situation contributing to grief. Along the same lines, we can provide support to the grieving individual only when we are strong in body and mind. We should be able to evaluate the situation at hand without prejudice. The prejudices we carry come from our ego, which is triggered by our status, knowledge, wealth, position in society, upbringing, education, etc. If we can rise to the level where we can set aside our ego, then we can offer the appropriate support to the grieving individual. Again, it is the individual in grief is the one who can come out of it; the others can only offer support when they are strong and egoless.

That takes us back to the first sentence of the vachana. In light of the above discussion, the first sentence is really a question by Basavanna, asking us as to what is the reason we volunteer to solve world’s problems, rather than a suggestion to stay away from them. The reason again is our ego or ‘I-ness’. When we see a failure or wrong, we immediately feel that we are above it all, and we can set it right with the wealth, power, and knowledge we have, and we are superior to those who did wrong. We typically set aside our better judgment and try to teach a lesson to those who did wrong (in our opinion).

In summary, each individual correcting his own faults first instead of trying to correct others’ is the way to build a harmonious society (world)!

A grieving mother (Gauthami) approaches Buddha with the body of her dead son asking him to bring the boy back to life and relieve her grief. Buddha realizes that he does not have the power to bring the boy back to life. He requests her to go around the village and borrow a cup of mustards from a family with no deaths. After a long trek through all the houses in the village, Gauthami realizes that there is no family that was free from death. That realization enables her to look at her son’s death in proper perspective and move on with her life. Buddha did not correct the wrong (death of the son from Gauthami’s point of view); he did not commiserate with her to reduce her sorrow; his inner strength allowed him to provide the support needed for Gauthami to get strong and relieve of her sorrow on her own.

Let us learn to contain our ego! Let us strive to get strong to bear the consequences of the faults of the world! Let us be judicious to offer support for those who are in grief, so they can relieve of it themselves!


FOR THOSE OF YOU WHO CAN READ KANNDA:


ಈ ವಚನದ ಅರ್ಥ ಮನನ ಮಾಡಲು ಪ್ರಯತ್ನಿಸುತ್ತಿರುವಂತೆ, “ನಾನು” ವಿನ ಮಹಾ ಗುಣಗಳ ದರ್ಶನವಾಗಲು ತೊಡಗುತ್ತದೆ. “ನಾನು” ಎಂದರೆ ಯಾರು? ಇಂತಿಂಥವರ ಸಂತಾನ, ಇಂತಿಂಥ ಪದವಿಗಳನ್ನು ಪಡೆದು ಸಮಾಜದಲ್ಲಿ ಪ್ರತಿಷ್ಠೆ ಪಡೆದವ, ಇಂತಿಂತಹ ಜಾತಿಯವ, ಇಷ್ಟಿಷ್ಟು ಧನ ಸಂಪತ್ತುಳ್ಳವ ಎಂಬಂತಹ ಅನೇಕ ವಿಚಾರಗಳ ರಾಶಿಯಾದ ಒಬ್ಬ ವ್ಯಕ್ತಿ. ಈ ವ್ಯಕ್ತಿ ತನ್ನೆಲ್ಲ ಹಿನ್ನೆಲೆಗಳೊಂದಿಗೆ ಜಗತ್ತನ್ನು ನೋಡುತ್ತಾನೆ. ಆತನಿಗೆ ಜಗತ್ತಿನಲ್ಲಿರುವ ಡೊಂಕುಗಳು ಎಂದರೆ ವಕ್ರತೆ ಅಥವಾ ತಪ್ಪುಗಳು ಕಂಡುಬರುತ್ತವೆ. “ಅಯ್ಯೋ! ಆ ವ್ಯಕ್ತಿ ಎಂತಹ ತಪ್ಪು ಮಾಡಿದ್ದಾನೆ ನೋಡು. ನಾನು ಈಗಲೆ ಹೋಗಿ ಅವನಿಗೆ ಬುದ್ಧಿ ಹೇಳುತ್ತೇನೆ, ಅವನನ್ನು ತಿದ್ದುತ್ತೇನೆ ಮತ್ತು ಆತನ ಕಷ್ಟಗಳನ್ನು ದೂರ ಮಾಡುತ್ತೇನೆ” ಎಂದುಕೊಂಡು “ಪರರ ಬಗ್ಗೆ ಬಹು ಉದಾರಿ” ಯಾದ ಈ “ನಾನು” ತಕ್ಷಣ ಆ ತಪ್ಪುಗಳನ್ನು ದೂರಮಾಡುವ ಕಾರ್ಯದಲ್ಲಿ ತೊಡಗುತ್ತದೆ. ಇಂತಹವರನ್ನು ನೋಡಿ ಬಸವಣ್ಣನವರು “ಲೋಕದ ಡೊಂಕ ನೀವೇಕೆ ತಿದ್ದುವಿರಿ?” ಎಂದು ಕೇಳುತ್ತಾರೆ. ಅವರ ಈ ಮಾತಿನಲ್ಲಿ, “ಪರರ ತಪ್ಪುಗಳನ್ನು ತಿದ್ದುವ, ಆ ಮೂಲಕ ಆ ತಪ್ಪುಗಳಿಂದುಂಟಾದ ಅವರ ದುಃಖವನ್ನು ದೂರಮಾಡುವ ಶಕ್ತಿ ಮತ್ತು ಸಾಮರ್ಥ್ಯ ನಿಮ್ಮಲ್ಲಿದೆಯೇ? ಹಾಗಾದರೆ ಅದಕ್ಕಿಂತ ಮೊದಲು ನಿಮ್ಮ ನಿಮ್ಮ ತನುವಿನ, ಮನಸ್ಸಿನ ವಕ್ರತೆಗಳನ್ನು, ದೋಷಗಳನ್ನು ಸರಿಪಡಿಸಿಕೊಂಡು ನಿಮ್ಮ ದುಃಖವನ್ನು ದೂರಮಾಡಿಕೊಳ್ಳಿರಿ” ಎಂದು ಸವಾಲೆಸೆಯುತ್ತಿರುವಂತೆ ತೋರುತ್ತದೆ. ಈ “ನಾನು” ಮಹಾ ಅಹಂಕಾರದಿಂದ ಇನ್ನೊಬ್ಬರ ದುಃಖ ಪರಿಹಾರಕ್ಕೆ ತೊಡಗುತ್ತದೆ. ಆದರೆ ತನ್ನ ತಪ್ಪುಗಳನ್ನಾಗಲಿ ದುಃಖವನ್ನಾಗಲಿ ದೂರಮಾಡುವುದು ಅದರ ಕೈಲಾಗುವ ಕೆಲಸವಲ್ಲ ಎಂಬುದು ಎಲ್ಲರ ಅನುಭವಕ್ಕೆ ಬರುವ ವಿಷಯ. ಆದರೂ “ನಾನು” ಮಾತ್ರ ತನ್ನನ್ನು ಬಿಟ್ಟು ಇತರರಲ್ಲಿಯೇ ಆಸಕ್ತಿ ತೋರುತ್ತದೆ. ಇದಕ್ಕೆ ಕಾರಣ ಅಹಂಕಾರವಲ್ಲದೆ ಮತ್ತೇನೂ ಅಲ್ಲ. ವಾಸ್ತವದಲ್ಲಿ ಯಾರೂ ಯಾರ ದುಃಖವನ್ನೂ ದೂರ ಮಾಡಲು ಸಾಧ್ಯವಿಲ್ಲ. ದುಖದಲ್ಲಿ ಮುಳುಗಿರುವ ವ್ಯಕ್ತಿಯ ಮನಃ ಪರಿವರ್ತನೆಯಾದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಆದರೆ ಈ “ನಾನು” ನಾನೇ ಆ ಕೆಲಸ ಮಾಡಿರುವುದು ಎಂದು ಇನ್ನೂ ಬೀಗುತ್ತದೆ. ಮತ್ತು ಇತರರ ದೋಷಗಳನ್ನು ತಿದ್ದುವುದೇ ಅಭ್ಯಾಸವಾಗಿ ತನ್ನ ತಾನನ್ನು ಗಮನಿಸಿಕೊಳ್ಳುವುದನ್ನು ಮರೆತೇ ಬಿಡುತ್ತದೆ. ನನ್ನದೇ ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮರ್ಥ್ಯವಾಗಲಿ ಯೋಗ್ಯತೆಯಾಗಲಿ ಇಲ್ಲದಿರುವ ನನಗೆ ಇತರರ ದುಃಖ ದೂರಮಾಡುವ ನೈತಿಕ ಬಲವಿದೆಯೆ?

ಮಹಾತ್ಮನಾದ ಬುದ್ಧನಿಗೂ ಕೂಡ ಕಿಸಾ ಗೌತಮಿಯ ದುಃಖ ದೂರಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ತಪಃ ಶಕ್ತಿಯಿಂದ ಆಕೆಯ ಮಗುವನ್ನು ಬದುಕಿಸಲಿಲ್ಲ, ಆಕೆಯ ದುಃಖವನ್ನು ಒಣ ಮಾತುಗಳಿಂದ ದೂರ ಮಾಡಲಿಲ್ಲ. ಜ್ಞಾನಿಯಾದ ಬುದ್ಧನು ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳಿ ಆಕೆಗೆ ಸಾವಿನ ಬಗ್ಗೆ ಅರಿವನ್ನುಂಟು ಮಾಡಿದ. ಆ ಅರಿವೇ ಅವಳ ದುಃಖವನ್ನು ದೂರಗೊಳಿಸಿತು. ಹೀಗಿರುವಾಗ “ನಾನು” ಯಾರದ್ದಾದರೂ ದುಃಖ ದೂರ ಮಾಡಲು ಸಾದ್ಯವೇ? ಇಲ್ಲದಿದ್ದಲ್ಲಿ ಇತರರ ದುಃಖಕ್ಕೆ ಮೇಲ್ನೋಟದ ಅನುಕಂಪ ತೋರಿಸುವುದರಿಂದ ಯಾವ ಪ್ರಯೋಜನ? ಇಂತಹವರನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲವೆಂದು ಹೇಳುತ್ತಾರೆ ಬಸವಣ್ಣನವರು. ಪ್ರತಿಯೊಬ್ಬರೂ ಇತರರ ದೋಷಗಳನ್ನು ತಿದ್ದುವ ಮೊದಲು ತಮ್ಮ ತಮ್ಮ ದೋಷಗಳನ್ನು ತಿದ್ದಿಕೊಂಡರೆ ತಾನಾಗಿಯೇ ಸಮಾಜದ ಉದ್ಧಾರವಾಗುತ್ತದೆ ಎನ್ನುವುದು ಅವರ ಆಶಯ.

Friday, October 8, 2010

VACHANA 8 - ENAGINTHA KIRIARILLA - HUMILITY

ಎನಗಿಂತ ಕಿರಿಯರಿಲ್ಲ!


ಶಿವಭಕ್ತರಿಗಿಂತ ಹಿರಿಯರಿಲ್ಲ.

ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!

ಕೂಡಲಸಂಗಮದೇವಾ ಎನಗಿದೇ ದಿಬ್ಯ.

TRANSLITERATION
enagiMta kiriyarilla!

SivaBaktarigiMta hiriyarilla.

nimma pAda sAkShi enna mana sAkShi!

kUDalasaMgamadEvA enagidE dibya.

CLICK HERE TO HEAR IT:

http://www.youtube.com/watch?v=Yzh73EbQuI0

TRANSLATION

No one is inferior to me!

No one is superior to the devotees of the Lord Shiva!

I swear on your feet! I swear on my heart (mind)!

O Lord Kudalasangamadeva, this is verily the touch-stone for me!

COMMENTARY

Basavanna preached and practiced love and respect towards all fellow beings. He believed in equality among all, irrespective of gender, caste, social status, position or wealth. He takes the qualities of equality, love and respect one level higher in this vachana depicting the high degree of ‘humility’ Basavanna had cultivated. We should never look down upon any one; we can always find a positive quality in an individual if we take the ‘attitude of no one is inferior to me’. The true devotees of the Lord by their very nature are highly spiritual. Basavanna, an ardent advocate of Bhakti (devotional) culture naturally considers such devotees as the most superior beings. He says that he swears on his heart and mind and bows to the feet of the Lord to help him to be humble forever.
The status of individuals as inferior or superior is generally determined by their wealth, position in society or profession, level of knowledge, caste and age (younger/older). Basavanna was not lacking in any of these aspects (except may be the age) to his contemporaries, yet he says ‘there is no one inferior to me and devotees of the Lord are the most superior’. Apparently, he is referring to the temporariness of the above material characteristics. Those self-realized individuals who have conquered the ego and not affected by the status due to their material possessions are true devotees of the Lord and are superior to everyone.

As we become successful in our profession and gain wealth and status in society, we tend to enhance our ego unless we strive to contain our ignorance, desires and hatred. Developing humility is the process of ego containment. To get in touch with our true self (the God within), we have to kill the ego. 'Ahankara' in Sanskrit, literally translates into The-sound-of-I, or quite simply the sense of the self or ego. When this sound is stilled, we are in touch with our true being. Humility is thus the quality of being modest, reverential, even politely submissive, and never being arrogant, contemptuous or rude.

Humility is considered a virtue in most religious and philosophical traditions, being connected with notions of transcendent unity with the universe or the divine, and of egolessness. In Buddhism, humility is equivalent to a concern of how to be liberated from the sufferings of life and the vexations of the human mind. The ultimate aim is to achieve a state of enlightenment through meditation and other spiritual practices. Humility can also result from achieving the liberation of Nirvana. When one experiences the ultimate Emptiness (Shunyata) and non-self (Anatta), one is free from suffering, vexations, and all illusions of self-deception. Humility, compassion, and wisdom characterize this state of enlightenment. Enlightenment can come only after humility – the wisdom of realizing one's own ignorance, insignificance, and lowliness, without which one cannot see the truth. Guru Granth Sahib, the holy book of Sikhism says “Make contentment your ear-rings, humility your begging bowl, and meditation the ashes you apply to your body”.

Humility is now being studied as a trait that can enhance leadership effectiveness. Recent research suggests that humility is multi-dimensional and includes self-understanding and awareness, openness, and perspective taking.

Mahatma Gandhi said "It is unwise to be too sure of one's own wisdom. It is healthy to be reminded that the strongest might weaken and the wisest might err. Attempting to sustain truth without humility is doomed to cause it to become instead an arrogant caricature of truth".

                                               Let us contain our Ego! Let us be Humble!



FOR THOSE OF YOU WHO CAN READ KANNADA:

ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ

ನಿಮ್ಮ ಪಾದ ಸಾಕ್ಷಿ ಎನ್ನ ಮನಸಾಕ್ಷಿ, ಕೂಡಲ ಸಂಗಮದೇವ ನನಗಿದೇ ದಿಬ್ಯ.

ಈ ವಚನದಲ್ಲಿ ಬಸವಣ್ಣನವರು ತಮ್ಮ ವಿನಯಶೀಲತೆಯನ್ನು ತೋರಿದ್ದಾರೆ. ಇಲ್ಲಿ ಬರುವ ಕಿರಿಯ ಮತ್ತು ಹಿರಿಯವೆಂಬ ಎರಡು ಪದಗಳನ್ನು ಗಮನಿಸಬೇಕು. ಸಾಮಾನ್ಯವಾಗಿ ವಯಸ್ಸಿನಲ್ಲಿ ಕಿರಿಯ ಅಥವಾ ಹಿರಿಯ ಎಂಬ ಅರ್ಥದಲ್ಲಿ ಇವುಗಳ ಬಳಕೆಯಾಗುತ್ತದೆ. ಅದಲ್ಲದೆ ಸಮಾಜದಲ್ಲಿ ವ್ಯಕ್ತಿಗಳಿಗಿರುವ ಪದವಿ, ಪ್ರತಿಷ್ಠೆಗಳ ಆಧಾರದ ಮೇಲೆ, ಅವರಲ್ಲಿರುವ ಧನ ಸಂಪತ್ತುಗಳ ಆಧಾರದ ಮೇಲೆ, ಜಾತಿಗಳ ಆಧಾರದ ಮೇಲೆ, ಜ್ಞಾನದ ಆಧಾರದ ಮೇಲೆ ವ್ಯಕ್ತಿಯನ್ನು ಕಿರಿಯ ಅಥವಾ ಹಿರಿಯ ಎಂದು ಹೇಳುತ್ತಾರೆ. ಆದರೆ ಇಲ್ಲಿ ಬಸವಣ್ಣನವರು ಈ ಮೇಲ್ಕಂಡ ವಿಷಯಗಳ ಬಗ್ಗೆ ಹೇಳುತ್ತಿಲ್ಲ. ಮೇಲೆ ಹೇಳಿದ ಯಾವುದೇ ವಿಷಯದಲ್ಲಿ (ವಯಸ್ಸನ್ನು ಬಿಟ್ಟು) ಅವರು ಸಣ್ಣವರಾಗಿರಲಿಲ್ಲವೆಂದು ತಿಳಿದು ಬರುತ್ತದೆ. ಆದರೂ ಅವರು ತಮ್ಮನ್ನು ಎಲ್ಲರಿಗಿಂತ ಕಿರಿಯವರೆಂದು ಹಾಗೂ ಶಿವಭಕ್ತರನ್ನು ಎಲ್ಲರಗಿಂತ ಹಿರಿಯರೆಂದು ಹೇಳುತ್ತಾರೆ. ಆಳವಾಗಿ ಯೋಚಿಸಿದಾಗ ಇದರ ಮರ್ಮ ತಿಳಿಯುತ್ತದೆ. ವಯಸ್ಸು ನಶ್ವರವಾದ ಶರೀರಕ್ಕೆ ಸಂಬಂಧ ಪಟ್ಟದ್ದು. ಸಮಾಜದಲ್ಲಿರುವ ಪದವಿ ಪ್ರತಿಷ್ಠೆಗಳು ಸಹ ಶಾಶ್ವತವಾದುವುಗಳಲ್ಲ. ತನ್ನ ಭಾವನೆಗಳಿಗನುಗುಣವಾಗಿ ಮಾನವನು ಮಾಡಿಕೊಂಡ ಜಾತಿಗಳು ಈಗ ಹುಟ್ಟಿನಿಂದ ನಿರ್ಧಾರಗೊಳ್ಳುತ್ತಿರುವುದರಿಂದ ಮೂರ್ಖತೆಯ ಕುರುಹುಗಳಾಗಿವೆ. ಈ ಪ್ರಪಂಚದಲ್ಲಿ ಗಳಿಸುವ ಜ್ಞಾನವೂ ಕೂಡ ( ಅದು ಆಯಾ ಕ್ಷೇತ್ರಗಳಲ್ಲಿ ಮಾತ್ರ ಬಳಕೆಗೆ ಬರುವುದರಿಂದ ) ಸೀಮಿತವಾಗಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವವಿರುವುದಿಲ್ಲ. ಹೀಗಾಗಿ ಈ ವಿಷಯಗಳಿಗೆ ಸಂಬಂಧಿಸಿದಂತೆ ಹಿರಿಯ ಕಿರಿಯ ಎಂದು ಹೇಳುವುದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಹಾಗಾದರೆ ಇಲ್ಲಿ ಯಾವುದರಲ್ಲಿ ಬಸವಣ್ಣನವರು ತಮ್ಮನ್ನು ಕಿರಿಯ ಮತ್ತು ಶಿವಭಕ್ತನನ್ನು ಹಿರಿಯ ಎಂದು ಹೇಳುತ್ತಿರುವರು? ಅವರು ತಮ್ಮ ಇತರ ವಚನಗಳಲ್ಲಿ - ಲಿಂಗವ ತೋರಿ ಉದರವ ಹೊರೆವವರು ಭಕ್ತರಲ್ಲ, ಒಳಗೆ ಕುಟಿಲ ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ ಕೂಡಲಸಂಗಮ ಒಲ್ಲನಯ್ಯ, ಶಿವಭಕ್ತರು ಒಳಹೊರಗೊಂದಾಗಿರಬೇಕು, ಅಳಿಯಾಸೆಗಳನ್ನು ಮೀರಿರಬೇಕು, ಅವರ ಇಂದ್ರಿಯ ವ್ಯಾಪಾರಗಳೆಲ್ಲವೂ ವೈಯಕ್ತಿಕ ಸುಖದ ಸೋಂಕೂ ಇಲ್ಲದವಾಗಿರಬೇಕು, ಎಂದು ಹೇಳುತ್ತಾರೆ ಅವರ ಈ ಮಾತುಗಳನ್ನು ನೋಡಿದಾಗ ಯಾರ ಮನಸ್ಸು ಪ್ರಾಪಂಚಿಕ ವಿಷಯಗಳಿಂದ ಬಿಡುಗಡೆ ಹೊಂದಿ ಸದಾ ಜಾಗೃತವಾಗಿರುತ್ತದೋ ಅಂತಹವನನ್ನು ಭಕ್ತನೆನ್ನಬಹುದು ಎನಿಸುತ್ತದೆ. ಈ ಜಾಗೃತ ಮನಸ್ಸಿನ ಭಕ್ತನ ಅರಿವು ಯಾವ ಅಳತೆಗೂ ಸಿಗುವುದಿಲ್ಲ, ಅದು ನಿತ್ಯ ನೂತನವಾಗಿರುತ್ತದೆ, ಅದು ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ “ತಾನು” ಎಂಬ ಭಾವವಿರುವುದಿಲ್ಲ. ಆದ್ದರಿಂದ ಅದು ಅತ್ಯಂತ ಹಿರಿಯದು. ಅದನ್ನು ಹೊಂದಿದವನೇ ಎಲ್ಲರಿಗಿಂತ ಹಿರಿಯನು. ಅಂತಹವರೊಂದಿಗೆ ತಮ್ಮನ್ನು ಹೋಲಿಸಿಕೊಂಡು ತಾನು ಎಲ್ಲರಿಗಿಂತ ಕಿರಿಯನು ಎಂದು ಹೇಳುತ್ತಾರೆ ಬಸವಣ್ಣನವರು. ’ನನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ’ ಎನ್ನುವ ವಚನದಲ್ಲಿ ತನ್ನ ಮನಸ್ಸು ಅತ್ತಿಯ ಹಣ್ಣಿನಂತೆ ಹುಳುಗಳಿಂದ ತುಂಬಿದೆ, ಅದರಲ್ಲಿ ಯಾವ ಹುರುಳೂ ಇಲ್ಲವೆಂದು ಹೇಳುತ್ತಾರೆ. ಸದಾ ಜಾಗೃತವಾದ ಮನಸ್ಸನ್ನು ಹೊಂದಿರುವ ಶಿವಭಕ್ತರನ್ನು ನೋಡಿ ಅವರಿಗೆ ತಮ್ಮ ಕೊರತೆಗಳೆಲ್ಲ ಬಹಳ ದೊಡ್ದವಾಗಿ ಕಾಣುತ್ತಿವೆ. “ನಾನು“ ಎನ್ನುವ ಅಹಂಕಾರವನ್ನು ಬಿಟ್ಟು ನೋಡಿದಾಗ ತಮ್ಮ ತಪ್ಪುಗಳೆಲ್ಲ ಸ್ಪಷ್ಟವಾಗಿ ಕಾಣುತ್ತವೆ. ನಮ್ಮಂತಹ ಸಾಮಾನ್ಯರು ಕೂಡ ನಮ್ಮ ತಪ್ಪುಗಳನ್ನು ಗುರುತಿಸುತ್ತೇವೆ. ಆದರೆ ನಮ್ಮಲ್ಲಿ “ ನಾನು ನನ್ನ ತಪ್ಪುಗಳನ್ನು ಗುರುತಿಸುತ್ತಿದ್ದೇನೆ” ಎನ್ನುವ ಅಹಂಕಾರ ತುಂಬಿರುತ್ತದೆ. ಆದ್ದರಿಂದ ಮೇಲ್ನೋಟಕ್ಕೆ ತಪ್ಪುಗಳನ್ನು ಗುರುತಿಸಿದರೂ ಕೂಡ ಆಳದಲ್ಲಿ ಆ ತಪ್ಪುಗಳು ನ್ಯಾಯಸಮ್ಮತವೇ ಎಂದು ವಾದಿಸುತ್ತದೆ ನಮ್ಮ ಮನಸ್ಸು. ಏಕೆಂದರೆ ನಾವು “ನಮ್ಮತನ” ಕ್ಕೆ ಅಂಟಿಕೊಂಡಿರುತ್ತೇವೆ. ಆದ್ದರಿಂದಲೇ ನಮ್ಮಲ್ಲಿ ಆ ನಿಜವಾದ ವಿನಯ ಕಂಡುಬರುವುದಿಲ್ಲ. ಆದರೆ ಬಸವಣ್ಣನವರ ಮನಸ್ಸು ಜಾಗೃತವಾದದ್ದು, ಅಹಂಕಾರ ರಹಿತವಾದದ್ದು. .. ಆದ್ದರಿಂದಲೇ “ ತಾನು ಎಲ್ಲರಗಿಂತ ಕಿರಿಯನು” ಎಂದು ಹೇಳುವ ವಾಸ್ತವಿಕವಾದ ವಿನಯ ಅವರಲ್ಲಿ ಕಂಡುಬರುತ್ತದೆ.

ಯಾರು ಹಿರಿಯರು ಎಂದು ಹೇಳುವ ಚೆನ್ನಬಸವಣ್ಣನವರ ಸುಂದರವಾದ ವಚನವೊಂದು ಇಲ್ಲಿದೆ:

ಅಜಕಲ್ಪಕೋಟಿ ವರುಷದವರೆಲ್ಲ ಹಿರಿಯರೆ?

ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೆ?

ನಡು ಮುರಿದು ಗುಡುಗೂರಿ ತಲೆನಡುಗಿದವರೆಲ್ಲ ಹಿರಿಯರೆ?

ನರೆ ತೆರೆ ಹೆಚ್ಚಿ ಮತಿಗೆಟ್ಟು ಒಂದನಾಡಹೋಗಿ

ಒಂಬತ್ತನಾಡುವ ಅಜ್ಞಾನಿಗಳೆಲ್ಲ ಹಿರಿಯರೆ?

ಅನುವನರಿದು ಘನವ ಬೆರೆಸಿ ಹಿರಿದು ಕಿರಿದೆಂಬ

ಭೇದವ ಮರೆದು, ಕೂಡಲ ಚೆನ್ನಸಂಗಯ್ಯನಲ್ಲಿ ಬೇರಿಲ್ಲದಿಪ್ಪ ಹಿರಿಯತನ

ನಮ್ಮ ಮಹಾದೇವಿಯಕ್ಕಂಗಾಯಿತು ಕೇಳಾ ಪ್ರಭುವೆ!


” ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚೆನ್ನ ಸಂಗಯ್ಯನಲ್ಲಿ ಬೇರಿಲ್ಲದಿಪ್ಪ ಹಿರಿಯತನ” ಎನ್ನುವುದನ್ನು ಗಮನಿಸಬೇಕು. ನಾವು ನಮ್ಮ ಅಹಮ್ ಅನ್ನು ಬಿಟ್ಟು ನಮ್ಮನ್ನು, ನೋಡಿಕೊಂಡಾಗ ಅಲ್ಲಿ ಕೇವಲ “ನೋಡುವುದು” ಮಾತ್ರವಿರುತ್ತದೆ. ಸರಿ ತಪ್ಪು, ನನ್ನದು ಮತ್ತೊಂದು,ದೊಡ್ಡದು ಚಿಕ್ಕದು ಎನ್ನುವಂತಹ ಯಾವ ಭಾವನೆಗಳೂ ಇರುವುದಿಲ್ಲ. ಅದನ್ನೇ ಚೆನ್ನ ಬಸವಣ್ಣನವರು “ಕೂಡಲ ಚೆನ್ನ ಸಂಗಯ್ಯನಲ್ಲಿ ಬೇರಿಲ್ಲದಿಪ್ಪ” ಎಂದು ಹೇಳಿದ್ದಾರೆ.ಆ ಗುಣವನ್ನೇ ಹಿರಿಯತನ ಎಂದು ಕರೆದಿದ್ದಾರೆ.

Friday, October 1, 2010

Vachana 7: Tanage Munivarige - Anger Management

ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?

ತನಗಾದ ಆಗೇನು ? ಅವರಿಗಾದ ಚೇಗೇನು ?

ತನುವಿನ ಕೋಪ ತನ್ನ ಹಿರಿಯತನದ ಕೇಡು.

ಮನದ ಕೋಪ ತನ್ನ ಅರಿವಿನ ಕೇಡು.

ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ

ನೆರೆಮನೆಯ ಸುಡದು ಕೂಡಲಸಂಗಮದೇವ.

TRANSLITERATION

tanage munivarige tA muniyalEkayya ?

tanagAda AgEnu ? avarigAda cEgEnu ?

tanuvina kOpa tanna hiriyatanada kEDu.

manada kOpa tanna arivina kEDu.

maneyoLagaNa kiccu maneya suTTallade

neremaneya suDadu kUDalasaMgamadEva.
CLICK TO HEAR IT

http://www.youtube.com/watch?v=jUBWEHAngaA

TRANSLATION

Why should you be angry with those who are angry with you?

What do you gain? What do they lose?

Anger exhibited is loss of your dignity (magnanimity)!

Anger (felt) within is loss of your sense (wisdom)!

Fire started in your house, unless burns your house (first),

does not burn your neighbor’s house, Oh! Lord Kudala Sangama Deva.
COMMENTARY

One of the seven commandments from Vachana 1 was ‘Do not be angry”. In this vachana, Basavanna is addressing the most common weakness of all humans, the anger. In fact, several of our great sages and gods and goddesses were also not free from anger. Our first reaction towards someone who is angry with us is to exhibit a much stronger anger with an attempt “to teach them a lesson and show that we are superior to them”. The first two statements of the vachana advocate not confronting anger with anger. Responding with anger to an individual who is angry with you, brings no advantage to either of you. Neither you gain anything, nor does the other party lose anything. Mahatma Gandhi said, an eye for an eye results in both parties becoming blind at the end. There are major consequences of anger as portrayed by the next two sentences of the vachana. Exhibition of anger will only bring your stature down among your fellow beings. In addition, it brings the turmoil within you, causes loss of senses, and creates the everlasting ill feeling of not being able to control your own emotions. Finally, the vachana says, anger is equivalent to the fire started in your own house. It first burns your house down, before spreading to the house next door.

It is said that the fundamental reason for anger is an inferiority complex or insecurity in the individual. Some say, it is genetic and the inherent nature of some, and cannot really be conquered. Some feel that anger is a required attribute to become successful in life, because without anger it is hard to be passionate about your work. Anger management techniques prevalent today (take several breaths before reacting, count to ten forwards and backwards before reacting, practice meditation to help control your senses better, etc.) tend to convert the anger energy into a healing energy to make the individual useful to the society.

The fundamental factors contributing to anger are ‘I’ and ‘Mine’ aspects of our lives. We all value our possessions. We all value our image either as perceived by us or established by the society. We become angry when someone tries to pierce into the image or try to snatch our possessions. The key to anger management technique thus seems to be free from ‘I’ and ‘Mine’ as far as possible. If we can mature to the level of saying all I have belongs to God and not to me, thereby getting rid of the ‘I’ and ‘Mine’ nature, we seem to progress a long way in terms of conquering anger. Remember, the God referred to here is the soul within you, a spark of the Universal soul.

Bhagavad Gita (Chapter 2, verses 62-63) says: Brooding on the object of senses, man develops attachment to them. From attachment comes desire. From desire anger sprouts forth. Anger leads to delusion. Delusion leads to confused memory; from confused memory to the destruction of reason; destruction of the reason perishes the man.

Let us be passionate in whatever we do! Let us not be angry!

FOR THOSE OF YOU WHO CAN READ KANNADA
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ?

ಈ ವಚನದಲ್ಲಿ, ದೇವಾಧಿದೇವತೆಗಳನ್ನು, ಮಹಾ ಮಹಾ ಮುನಿಗಳನ್ನೂ ಬಿಡದೆ ಕಾಡಿದ ಕೋಪದ ಬಗ್ಗೆ ಹೇಳುತ್ತಿದ್ದಾರೆ ಬಸವಣ್ಣನವರು. ಕೋಪವೇಕೆ ಹುಟ್ಟುತ್ತದೆ? “ನಾನು” “ನನ್ನದು” ಎನ್ನುವ ಭಾವ ಪ್ರತಿಯೊಬ್ಬರಲ್ಲಿರುತ್ತದೆ. ಅದು ಭೌತಿಕ ವಸ್ತುವಾಗಿರಬಹುದು ಅಥವಾ ಮನಸ್ಸಿನಲ್ಲಿ ನಮ್ಮ ಬಗ್ಗೆ ನಾವೇ ಮಾಡಿಕೊಂಡ ಇಲ್ಲವೆ ಸಮಾಜ ನಿರ್ಮಿಸಿದ ರೂಪವಿರಬಹುದು. ಈ ಭೌತಿಕ ವಸ್ತುವಿಗೆ ಅಥವಾ ಮಾನಸಿಕ ರೂಪಕ್ಕೆ ಧಕ್ಕೆಯುಂಟಾದಾಗ ನಮ್ಮಲ್ಲಿ ಕೋಪ ಹುಟ್ಟುತ್ತದೆ. ಕೋಪದ ಪರಿಣಾಮ ಅತ್ಯಂತ ವಿನಾಶಕಾರಿ. ತನ್ನದೆನ್ನುವುದು ಏನೂ ಇಲ್ಲ, ಇರುವುದೆಲ್ಲ ಕೂಡಲಸಂಗಮನದ್ದೇ ಎಂದು ಅರಿತಿದ್ದ ಬಸವಣ್ನನವರಿಗೆ ಕೋಪವೇ ಇರಲಿಲ್ಲವೆಂದು ತಿಳಿಯುತ್ತದೆ. ಅಂತಹ ಘಟನೆ ಅವರ ಜೀವನದಲ್ಲಿ ನಡೆದದ್ದು ಎಲ್ಲಿಯೂ ಕಂಡುಬರುವುದಿಲ್ಲ. ಆದರೆ ನಾವು ಸಾಮಾನ್ಯರು. ನಮಗೆ ಮಾತು ಮಾತಿಗೂ ಸಿಟ್ಟು ನೆತ್ತಿಗೇರುತ್ತದೆ. ಎಂದರೆ ನಮ್ಮಲ್ಲಿ ’ನಾನು’ ’ನನ್ನದು’ ಎನ್ನುವ ಭಾವನೆ ಎಷ್ಟು ಆಳವಾಗಿ ಬೇರೂರಿರುತ್ತದೆಯೋ ಅಷ್ಟು ತೀವ್ರವಾದ ಕೋಪ ’ನನಗೆ’ ’ನನ್ನದಕ್ಕೆ’ ಧಕ್ಕೆ ಉಂಟುಮಾಡಿದವರಮೇಲೆ ಉಂಟಾಗುತ್ತದೆ. ಅದರ ಪರಿಣಾಮವಂತೂ ಎಲ್ಲರಿಗೂ ತಿಳಿದದ್ದೆ. ಅನೇಕ ಸಲ ನಾವು ನಮ್ಮೊಂದಿಗೆ ಕೋಪಮಾಡಿಕೊಂಡವರ ಮೇಲೆ ಇನ್ನೂ ಹೆಚ್ಚಿನ ಕೋಪ ತೋರಿಸಿ ಅವರಿಗೆ ತಕ್ಕ ಶಾಸ್ತಿ ಮಾಡಿದೆ ಎಂದುಕೊಂಡು ನೆಮ್ಮದಿ ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತೇವೆ. ಆದರೆ ವಾಸ್ತವದಲ್ಲಿ ಕೊಪಮಾಡಿಕೊಂಡವರ ಇಬ್ಬರ ನೆಮ್ಮದಿಯೂ ಹಾಳಾಗಿಹೋಗುತ್ತದೆ. ಇಂತಹ ವಿನಾಶಕಾರಿ ಕೋಪವನ್ನು ದೂರವಿಡಬೇಕಾದರೆ ಅದರ ಪರಿಣಾಮವನ್ನು ಚನ್ನಾಗಿ ತಿಳಿದುಕೊಳ್ಳಬೇಕು. ಅದನ್ನು ಬಸವಣ್ನನವರು ಯೋಗ್ಯವಾದ ಉದಾಹರಣೆಯಿಂದ ತಿಳಿಸುತ್ತಾರೆ. ಕೋಪವನ್ನು ಕಿಚ್ಚಿಗೆ ಹೋಲಿಸಿದ್ದಾರೆ. ಒಂದು ಮನೆಯಲ್ಲಿರುವ ಕಿಚ್ಚು ನೆರೆಮನೆಯವರನ್ನು ಸುಡುವುದಕ್ಕಿಂತ ಮೊದಲೆ ತನ್ನ ಮನೆಯನ್ನು ಸುಡುತ್ತದೆ. ಅಂದರೆ ಕೋಪವು ಮೊದಲು ಯಾರ ಮನದಲ್ಲಿ ಹುಟ್ಟುತ್ತದೆಯೋ ಅವರನ್ನು ಮೊದಲು ಹಾಳುಮಾಡಿ ಆನಂತರ ಮತ್ತೊಬ್ಬರನ್ನು ಹಾಳುಮಾಡುತ್ತದೆ. ಹಾಗಾಗಿ ನಾವು ಮತ್ತೊಬ್ಬರ ಮೇಲೆ ಕೋಪ ತೋರಿಸಿ “ತಕ್ಕ ಶಾಸ್ತಿ ಮಾಡಿದೆ’ ಎಂದು ಬೀಗುವುದು ಅರ್ಥಹೀನ. ಏಕೆಂದರೆ ಅದರ ಕೆಟ್ಟ ಪರಿಣಾಮ ನಮ್ಮ ಮೇಲೆಯೇ ಮೊದಲುಂಟಾಗುತ್ತದೆ ಎಂದು ಹೇಳುತ್ತಾರೆ ಬಸವಣ್ಣನವರು. ನಾವು ಕೋಪಗೊಂಡು ಇನ್ನೊಬ್ಬರ ಮೇಲೆ ಹರಿಹಾಯ್ದಾಗ ನಮ್ಮ ಮನಸ್ಥಿತಿಯನ್ನು ಸ್ವಲ್ಪ ಗಮನಿಸಿದರೆ ಇದು ಚನ್ನಾಗಿ ಅರ್ಥವಾಗುತ್ತದೆ. ನಮ್ಮ ಮನಸ್ಸು ಹೇಳುತ್ತದೆ: ನಾನು ಆತನಿಗೆ ನಾನೇನೆಂಬುದನ್ನು ಸರಿಯಾಗಿ ತೋರಿಸಿದ್ದೇನೆ. ನಾನೆಂದರೆ ಏನೆಂದು ಕೊಂಡಿದ್ದಾನೆ ಆತ. ಪಾಪ ಹೋಗಲಿ ಎಂದು ಅಷ್ಟಕ್ಕೇ ಬಿಟ್ಟಿದ್ದೇನೆ. ಇಲ್ಲದಿದ್ದರೆ ಅವನ ಹುಟ್ಟೇ ಅಡಗಿಸಿ ಬಿಡುತ್ತಿದ್ದೆ. – ಎಂಬಂತಹ ನಾನಾ ರೀತಿಯ ಮಾತುಗಳನ್ನು ಹೇಳಿಕೊಳ್ಳುತ್ತದೆ. ಈ ರೀತಿಯ ಇಲ್ಲದ ಸಾಂತ್ವನ ಮಾಡಿಕೊಳ್ಳುವುದೇ ಅದರ ನೆಮ್ಮದಿ ತೀರ ಹಾಳಾದುದರ ಸಾಕ್ಷಿ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಬಸವಣ್ಣನವರ ಮಾತಿನಲ್ಲಿರುವ ಸತ್ಯದ ಅರಿವಾಗುತ್ತದೆ. ‘