Friday, October 24, 2014

Vachana 217: Tapavembudu Tagahu – The Penance is an Obstacle


PLEASE NOTE THAT THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANA IS COMPOSED ORIGINALLY) SCROLL TO SECTIONS 5 AND 6.

1.       VACHANA IN KANNADA

ತಪವೆಂಬುದು ತಗಹು, ನೇಮವೆಂಬುದು ಬಂಧನ,
ಶೀಲವೆಂಬುದು ಸೂತಕ,  ಭಾಷೆ ಎಂಬುದು ಪ್ರಾಣಘಾತಕ,
ಇಂತೀ ಚತುರ್ವಿಧದೊಳಗಲ್ಲ
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು.

2.       TRANSLITERATION

tapaveMbudu tagahu,  nEmaveMbudu baMdhana,
sheelaveMbudu sUtaka, bhaaShe eMbudu praaNaghaataka,
iMtI caturvidhadoLgalla
guhEshvaraa, nimma sharaNaru agragaNyaru.

3.       RECITATION


4.       TRANSLATION (WORDS)

tapaveMbudu ( so called penance)tagahu (an obstacle),  nEmaveMbudu (ritualistic regime)baMdhana (is bondage),
sheelaveMbudu (so called virtue) sUtaka (is pollution), bhaaShe eMbudu (so called oath) praaNaghaataka (is life taking),
iMtI caturvidhadoLgalla (is not in these four types)
guhEshvaraa (Guheshavra) , nimma sharaNaru agragaNyaru (your sharaNas are above all).

5.       VACHANA IN ENGLISH

So called penance is an obstacle, ritualistic regime is bondage,
So called virtue is pollution, so called oath is life taking,
Thus, they are not in these four types
Guheshavra, your devotees are above all these!

6.       COMMENTARY

Allama Prabhu is commenting on the multiple modes people employ to reach God. They go through serious penance,  rirtualistic worshipping, living  a virtuos life, and taking oaths and promising  Him various things if the wishes are fulfilled. Allama Prabhu says that none of these methods bring one close to God. The true devotees of  God are above all these.

We have been told that a deep penance where we subject our body to all sorts of descipline and hardships, give up all the worldly luxuries, continue to chant His name repeatedly, and concentrate on Him would make us  reach Him. But, how can you concentrate on the one who cannot be seen, cannot be touched and cannot even be imagined?  The moment we imagine Him in a particular form, we have just realized that form and there is no need for the penance. Penance is thus at best an obstacle and does not allow us to  reach Him!  He can only be experienced!
All the rituals we go through to worship Him are the methods and modes we have created. They make us spend time and resources on the rituals rather than allowing us to experience Him.
Virtuos living is said to be the way to live to reach God.  Allama Prabhu says that it is  just a pollution and gives us the false notion of the path to reach Him.
 It is very common that we promise to offer God one or more of our belongings in return to some favor we ask of Him. Everything we have came from Him.  How can we promise to give Him what He has given us?
A true devotee is above employing these methods. He does not need all these modes!
He/she has realized the Self and has merged with Him.

Let us strive to experience Him!

7.       KANNADA COMMENTARY

ತಪವೆಂಬುದು ತಗಹು (ಅಡ್ಡಿ ತಡೆ), ನೇಮ (ಕಟ್ಟುಪಾಡು, ಕ್ರಮಬದ್ಧ ಆಚರಣೆ)ವೆಂಬುದು ಬಂಧನ
ಶೀಲ (ಒಳ್ಳೆಯ ನಡತೆ,ಸಚ್ಚಾರಿತ್ರ್ಯ)ವೆಂಬುದು ಸೂತಕ (ಮೈಲಿಗೆ),  ಭಾಷೆ (ಪ್ರತಿಜ್ಞೆ, ಆಣೆ)ಎಂಬುದು ಪ್ರಾಣಘಾತಕ (ಪ್ರಾಣಕ್ಕೆ ಮಾರಕ),
ಇಂತೀ ಚತುರ್ವಿಧದೊಳಗಲ್ಲ (ಈ  ನಾಲ್ಕು ವಿಧಗಳಲ್ಲಿಯೂ ಇಲ್ಲ)
ಗುಹೇಶ್ವರಾ, ನಿಮ್ಮ ಶರಣರು ಅಗ್ರಗಣ್ಯರು (ಇದಕ್ಕಿಂತ ಶ್ರೇಷ್ಠರು)

ಸಾಮಾನ್ಯವಾಗಿ ಜನರು ದೇವರನ್ನು ಪಡೆಯಲು ನಾನಾ ಉಪಾಯಗಳನ್ನು ಮಾಡುತ್ತಾರೆ. ತಪಸ್ಸು  ಕೈಗೊಳ್ಳುತ್ತಾರೆ, ವ್ರತ ನಿಯಮಗಳನ್ನು ಮತ್ತು ಸಚ್ಚಾರಿತ್ರ್ಯವನ್ನು ಪಾಲಿಸುತ್ತಾರೆ, ಇಂತಿಂತಹದನ್ನು ಮಾಡುತ್ತೇನೆ ಇಂತಿಂತಹದನ್ನು ಮಾಡುವುದಿಲ್ಲ ಎಂದು ಆಣೆ ಭಾಷೆ ಮಾಡುತ್ತಾರೆ. ಆದರೆ ಅಲ್ಲಮರು ಹೇಳುತ್ತಾರೆ, ದೇವರು ಇವುಗಳಲ್ಲಿ ಇಲ್ಲ. ಶರಣರು ಇವುಗಳನ್ನೆಲ್ಲ ಮೀರಿದವರು ಎಂದು.

ತಪಸ್ಸು ದೇವರನ್ನು, ಪರತತ್ವವನ್ನು  ಕಾಣುವುದರಲ್ಲಿ ಅಡ್ಡಿ ಮಾಡುತ್ತದೆ ಎನ್ನುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಲು ಮೊದಲು ತಪಸ್ಸು ಎಂದರೇನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ತಪಸ್ಸು ಎಂದರೆ, ವ್ರತ, ನಿಯಮಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು,  ಮನಸ್ಸನ್ನು ಒಂದೇ ವಿಷಯದಲ್ಲಿ ಸ್ಥಿರವಾಗಿಡುವುದು, ಮನಸ್ಸಿನ ಏಕಾಗ್ರತೆ ಎಂಬ ಅರ್ಥಗಳಿವೆ. ದೇವರು ಅಥವಾ ಪರತತ್ವ ಎಂದರೆ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದನ್ನು ಅನುಭವಿಸಬೇಕು. ಅದು ನೋಟಕ್ಕೆ, ಸ್ಪರ್ಶಕ್ಕೆ, ಕಲ್ಪನೆಗೆ, ಮಾತಿಗೆ ಸಿಗುವಂತಹದಲ್ಲ. ಅಂತಹದನ್ನು ಕುರಿತು ತಪಸ್ಸು ಮಾಡಲು ಸಾಧ್ಯವೆ?  ಕಲ್ಪನೆಗೆ ನಿಲುಕದ್ದನ್ನು ಕುರಿತು ಹೇಗೆ ಧ್ಯಾನ ಮಾಡುವುದು?  ಯಾವುದರ ಬಗ್ಗೆ ಏಕಾಗ್ರತೆ  ಸಾಧಿಸುವುದು? ಹಾಗಾದರೆ ತಪಸ್ಸು ಮಾಡುವುದರಿಂದ ಏನಾಗುತ್ತದೆ? ಅಂದರೆ ನಾವು ನಮಗೆ ತಿಳಿದ ವಿಷಯದ ಬಗ್ಗೆ ತಪಸ್ಸು ಆಚರಿಸುತ್ತೇವೆ. ಅಂದರೆ ನಮ್ಮ ತಿಳಿವಳಿಕೆ ನಮಗೆ ದೇವರನ್ನು ಕಾಣುವುದರಲ್ಲಿ ಅಡ್ಡಿ ಉಂಟುಮಾಡುತ್ತದೆ. ಇದನ್ನೇ ಅಲ್ಲಮರು ಹೇಳುತ್ತಿರುವುದು.

ಇನ್ನು ನೇಮಗಳಬಗ್ಗೆ ಹೇಳುತ್ತಾರೆ. ನಮಗೆ ನಾವೇ ಕಟ್ಟುಪಾಡು ಮಾಡಿಕೊಳ್ಳುವುದು, ಕ್ರಮಬದ್ಧವಾದ ಆಚರಣೆ ಮಾಡುವುದು. ಇದು ನಮಗೆ ನಾವೇ ಬಂಧನವನ್ನು ಹೇರಿಕೊಂಡಂತೆ. ಯಾವುದು ಮಾಡಬೇಕು ಯಾವುದು ಮಾಡಬಾರದು ಎಂಬುದನ್ನು ಆಯಾ ವಿಷಯದ ತಳಮಟ್ಟದವರೆಗುಹೋಗಿ ಅರ್ಥಮಾಡಿಕೊಂಡಾಗ  ಅಲ್ಲಿ ಕ್ರಿಯೆ ತಾನಾಗಿಯೆ ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಂತಹದನ್ನು ಮಾಡುತ್ತೇನೆ ಇಂತಹದನ್ನು ಮಾಡುವುದಿಲ್ಲ ಎಂಬಂತಹ ವ್ರತ ನೇಮಗಳ ಅವಶ್ಯಕತೆಯಿರುವುದಿಲ್ಲ. ಇವುಗಳು ಬಂಧನವಾಗಿ ಪರತತ್ವದ ಅರಿವುಪಡೆಯುವ ದಾರಿಯಲ್ಲಿ ಅಡ್ಡಿಯಾಗುತ್ತವೆ.

ಶೀಲವೆಂಬುದು ಸೂತಕವೆನ್ನುತ್ತಾರೆ. ಸಚ್ಚಾರಿತ್ರ್ಯ, ಸದಾಚಾರ ಕೂಡ ತನ್ನನ್ನು ತಾನು ಆಳವಾಗಿ ಅರಿತಾಗ  ಸಹಜವಾಗಿ ಅಳವಡುವ ನಡೆವಳಿಕೆ. ಅದನ್ನು ಸಚ್ಚಾರಿತ್ರ್ಯ, ದುರ್ನಡತೆ ಎಂದು ಭೇದಮಾಡಿ ಅಭ್ಯಾಸ ಮಾಡುವ ಅವಶ್ಯಕತೆಯಿರುವುದಿಲ್ಲ. ಶೀಲವೆಂಬುದು ಮೇಲ್ಮೈ ನಡೆವಳಿಕೆ. ಇದು ಅಹಂಕಾರಕ್ಕೆ ಎಡೆಮಾಡಿಕೊಟ್ಟು ಇತರರಿಂದ ದೂರವಿರಿಸುತ್ತದೆ.  ಅದೇ ಒಂದು ಸೂತಕವಾಗುತ್ತದೆ.

ಆಣೆ ಭಾಷೆಗಳು  ಪ್ರಾಣಘಾತಕ ಎನ್ನುತ್ತಾರೆ.  ಆಣೆ ಭಾಷೆಗಳು ನಮಗೆ ನಾವು ಹೇರಿಕೊಂಡ  ನಿರ್ಬಂಧನೆಗಳು. ಈ ನಿರ್ಬಂಧನೆಗಳಿಂದ ಆ ಪರತತ್ವ ಸಾಧಿಸುತ್ತೇನೆ ಎನ್ನುವುದು ಭ್ರಮೆ.  ಉದಾಹರಣೆಗೆ – ಸಂನ್ಯಾಸಿಗಳು ಬ್ರಹ್ಮಚರ್ಯದ, ಒಂದೇ ಸ್ಥಳದಲ್ಲಿ  ಬಹಳಕಾಲ ವಾಸ ಮಾಡದ, ಇಂತಿಂತಹ ಆಹಾರ ಪದಾರ್ಥಗಳನ್ನು ಸ್ವೀಕರಿಸಿದ ನಾನಾ ತರಹದ ಆಣೆ ಭಾಷೆಗಳನ್ನು ಮಾಡಿರುತ್ತಾರೆ. ಇವು ಕೇವಲ ನಿರ್ಬಂಧನೆಗಳು ಇವುಗಳಿಂದ ಯಾವ ಪ್ರಯೋಜನವೂ ಇಲ್ಲ.

ಅಲ್ಲಮರು ಹೇಳುತ್ತಾರೆ- ಶರಣರು ಇವುಗಳ ಆಯಾಮದಲ್ಲಿ ಬರುವುದಿಲ್ಲ. ಅವರು ಇವುಗಳನ್ನ್ನು ಮೀರಿರುವರು, ಇವುಗಳಿಗಿಂತ ಶ್ರೇಷ್ಠರು.  ಇವುಗಳಲ್ಲಿ ಸಿಕ್ಕಿಕೊಂದವರು ಪರತತ್ವವವನ್ನು ಕಾಣುವುದಿಲ್ಲ ಎಂಬ ಧ್ವನಿ ಇಲ್ಲಿದೆ.





Friday, October 17, 2014

Vachana 216: Tatvava Nudiva Hiriyarellaru – The Elders Preaching Righteousness


PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.       VACHANA IN KANNADA

ತತ್ವವ  ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ  ಹೇಳುವ  ಹಿರಿಯರು  ತಮ್ಮ  ಒಡಲ ಕಕ್ಕುಲತೆಗೆ ಹೋಗಿ.
ಭಕ್ತಿಯ ಹೊಲಬನರಿಯದ, ಜಡ ಜೀವಿ  ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?

2.       TRANSLITERATION

tatvava nuDiva hiriyarellaru
tuttnikkuvara baagilalli, accugapaDuttiddaru nODaa!
nityaanityava hELuva hiriyaru tamma oDala kakkulatege hOgi,
bhaktiya holabanariyada jaDa jIvi maanavara icCeya nuDidu,
halabuttipparu nODA!
kattege karpoorava hEridaMte
 avarige innettaNA muktiyO  guhEshvaraa?

3.     RECITATION


4.     TRANSLATION (WORDS)

tatvava  (principles of the dharma) nuDiva (speaking of) hiriyarellaru (all the elders)
tuttnikkuvara (those who provide food) baagilalli (at the door), accugapaDuttiddaru (worried) nODaa (you see)!
nityaanityava (eternal and the ephemeral) hELuva (saying)  hiriyaru (the elders) tamma (of their own) oDala (stomach) kakkulatege hOgi (for the worry of) ,
bhaktiya (of devotion)  holabanariyada (not knowing the path) jaDa jIvi (inert) maanavara (humans) icCeya nuDidu (talking of their interest),
halabuttipparu nODA (feeling sorry you see)!
kattege (the donkey) karpoorava (perfume) hEridaMte (like loading)
 avarige (for those) innettaNA (when)  muktiyO (liberation)   guhEshvaraa?

5.     VACHANA IN ENGLISH

All those elders speaking of Righteousness,
are at the doors of the providers of food, worried, you see!
The elders speaking of the eternal and ephemeral, with the worry of their own stomach, are speaking to the interest of inert humans who are not aware of the path of devotion and are feeling sorry, you see!
It is like loading a donkey with perfumes!
When will they attain liberation, Guhesvara?

6.       COMMENTARY

Allama Prabhu comments on how the individuals, who have gained the knowledge of the principles of righteousness and the awareness of the path of devotion, utilize that knowledge to merely earning their living and filling their stomachs. He says, this is like loading a donkey with perfume. The donkey carries a precious load, but is never aware of how precious what it is carrying. Allama Prabhu questions as to how such individuals ever gain liberation.

All these elders who preach the principals of righteousness are at the doors of those who provide them food. They are worried about filling their stomachs. Then there are elders (experts) who speak of eternal and ephemeral. Their interest again is to fill their stomach. They do not hesitate to speak to inert (ordinary) humans who have never been exposed to the path of devotion, what they would like to hear.

The knowledge and awareness gained by these elders has just become a way of earning a living. They never internalized it. They never thought of following what they preach. They are not interested in the eternal bliss.

We must gain the knowledge needed to be the best in our careers and professions. We must gain the knowledge that makes us devote human beings. The former brings us the worldly happiness and the latter brings us the inner bliss. It will be great if we can preach what we practice!

Let us not just say what others would like to hear!


7.       KANNADA COMMENTARY

ತತ್ವವ (ಧರ್ಮದ ಸಾರ) ನುಡಿವ ಹಿರಿಯರೆಲ್ಲರು
ತುತ್ತನಿಕ್ಕುವರ ಬಾಗಿಲಲ್ಲಿ, ಅಚ್ಚುಗ (ಮರುಕ) ಪಡುತ್ತಿದ್ದರು ನೋಡಾ
ನಿತ್ಯಾನಿತ್ಯವ  ಹೇಳುವ  ಹಿರಿಯರು  ತಮ್ಮ  ಒಡಲ ಕಕ್ಕುಲತೆಗೆ  (ಚಿಂತೆಗೆ)ಹೋಗಿ.
ಭಕ್ತಿಯ ಹೊಲಬನರಿಯದ (ಮಾರ್ಗವನ್ನರಿಯದ), ಜಡ ಜೀವಿ  ಮಾನವರ ಇಚ್ಛೆಯ ನುಡಿದು,
ಹಲಬುತಿಪ್ಪರು (ದುಃಖ ಪಡುತ್ತಿದ್ದಾರೆ) ನೋಡಾ!
ಕತ್ತೆಗೆ ಕರ್ಪೂರವ ಹೇರಿದಂತೆ
ಅವರಿಗೆ ಇನ್ನೆತ್ತಣ ಮುಕ್ತಿಯೋ ಗುಹೇಶ್ವರಾ?


ಜನರು ಹೇಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಧರ್ಮದ ಮಾತುಗಳನ್ನು ಬಳಸುತ್ತಾರೆ ಎಂಬುದನ್ನು ಹೇಳುತ್ತ ಅಂತಹವರಿಗೆ ಮುಕ್ತಿ ಹೇಗೆ ದೊರೆಯಲು ಸಾಧ್ಯ ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಧರ್ಮದ ಸಾರವನ್ನು ಹೇಳುವ ಹಿರಿಯರಿಗೂ ಹೊಟ್ಟೆಯ ಚಿಂತೆಯಿದೆ. ಅವರು ತಮ್ಮ ಹೊಟ್ಟೆಯಪಾಡಿಗಾಗಿ ಉಳ್ಳವರ ಬಾಗಿಲಲ್ಲಿ ನಿಂತು ತಮಗಾಗಿ ಮರುಕಪಡುತ್ತಿದ್ದಾರೆ. ಧರ್ಮದ ಸಾರವನ್ನು ಬೌದ್ಧಿಕವಾಗಿ ತಿಳಿದುಕೊಂಡಿದ್ದರೂ ತಮಗಾಗಿ ಮರುಕ ಪಡುತ್ತಾರೆ. ತಾವು ತಿಳಿದುಕೊಂಡ ಧರ್ಮದ ಸಾರ ಅವರ ಸಹಾಯಕ್ಕೆ ಬರದಾಗಿದೆ.
ಯಾವುದು ನಿತ್ಯ ಯಾವುದು ಅನಿತ್ಯ  ಎಂದು ಹೇಳುವ ದೊಡ್ಡವರು ತಮ್ಮ ಹೊಟ್ಟೆಯ ಚಿಂತೆಗೆ ಬಲಿಯಾಗಿ  ಭಕ್ತಿ ಎಂದರೇನು ಎಂಬುದನ್ನು ತಿಳಿಯದ ಜಡ ಜೀವಿಗಳಿಗೆ  ಅವರು ತಮ್ಮ ಮನದಲ್ಲಿ ಏನನ್ನು ಬಯಸುತ್ತಾರೆಯೋ ಅದನ್ನೇ ಹೇಳಿ ತಾವು ದುಃಖಪಡುತ್ತಿದ್ದಾರೆ ಮತ್ತು ಅವರ ದುಃಖವನ್ನೂ ದೂರಮಾಡುತ್ತಿಲ್ಲ. ನಿತ್ಯ ಅನಿತ್ಯದ ಬಗ್ಗೆ ಹೇಳಿದರೂ ತಮ್ಮ ಅನಿತ್ಯವಾದ ಚಿಂತೆಯಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಭಕ್ತಿಯ ದಾರಿಯನ್ನರಿಯದ ಜಡಜೀವಿಗಳು ಎನ್ನುತ್ತಾರೆ ಸಾಮಾನ್ಯರನ್ನು. ಏಕೆಂದರೆ ಭಕ್ತಿ ಇತರರಿಂದ ಕೇಳಿ ಮಾಡುವಂತಹುದಲ್ಲ. ಅದು ತಾನಾಗಿಯೇ ಸ್ಫುರಿಸಬೇಕು. ಭಕ್ತಿ ಮಾಡುವುದು ಮತ್ತು ಮಾಡುವುದನ್ನು ಹೇಳುವುದು ಎರಡು ಅರ್ಥವಿಲ್ಲದವು. ಆದರೆ ಜನರು ಭಕ್ತಿಯ ವಿಷಯದಲ್ಲಿ ತಾವು ಜಡವಾಗಿದ್ದು, ಹೊಟ್ಟೆಯ ಪಾಡಿಗಾಗಿ ಈ ಮಾರ್ಗವನ್ನು ಹಿಡಿದಿದ್ದಾರೆ. ತತ್ವವನ್ನು ಅರಿದವರಿಗೆ ತನುಗುಣಗಳು ಬಾಧಿಸುವುದಿಲ್ಲ. ಆದರೆ ಇಲ್ಲಿ ಹೊಟ್ಟೆಯ ಚಿಂತೆ ಅವರನ್ನು ಕಾಡುತ್ತಿದೆ.
ಕತ್ತೆಯ ಮೇಲೆ ಕರ್ಪೂರವನ್ನು ಹೇರಿದರೆ ಏನು ಉಪಯೋಗ. ಅದಕ್ಕೆ ಕರ್ಪೂರದ ಬೆಲೆ ಅಥವಾ ಅದರ ಸುವಾಸನೆಯ ಅರಿವು ಇಲ್ಲ. ಅದೇ ರೀತಿಯಾಗಿ ಇಂತಹ ಜನರು ಶಾಸ್ತ್ರಗಳನ್ನು ಓದಿ ತಿಳಿದಿರುತ್ತಾರೆ. ಆದರೆ ಅದರ ನಿಜವಾದ ಬೆಲೆ, ಅರ್ಥ ತಿಳಿದಿರುವುದಿಲ್ಲ. ಅದು  ಅವರ ಜೀವನದ ಆವಿಭಾಜ್ಯ ಅಂಗವಾಗಿರುವುದಿಲ್ಲ. ಅದು ತಿಳಿದುಕೊಳ್ಳಬೇಕಾದ ಮಹತ್ವ ಪೂರ್ಣ ಅಂಶವಾಗಿರುತ್ತದೆ ಅಷ್ಟೆ.  ಯಾವುದೋ ಕಾರಣಕ್ಕಾಗಿ ಅದನ್ನು ತಿಳಿದುಕೊಂಡು ಉಪಯೋಗಿಸಿದರೆ ಅದರಿಂದ ಹೊಟ್ಟೆ ತುಂಬಬಹುದೆ ಹೊರತು ಮುಕ್ತಿ ದೊರೆಯಲಾರದು ಎನ್ನುತ್ತಾರೆ ಅಲ್ಲಮರು.

Saturday, October 11, 2014

Vachana 215: Taleyalattunalollade - Not eating that cooked in the head

PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.       VACHANA IN KANNADA

ತಲೆಯಲಟ್ಟುಣಲೊಲ್ಲದೆ  ಒಲೆಯಲಟ್ಟುಂಬರು
ಒಲೆಯಲುಳ್ಳುದ  ಹೊಟ್ಟೆಯಲುಂಬೈಸಕ್ಕರ
ಹೊಗೆ ಘನವಾಯಿತ್ತು
ಇದು ಕಂಡು ಹೇಸಿ ಬಿಟ್ಟೆನು ಗುಹೇಶ್ವರಾ.

2.       TRANSLITERATION

taleyalaTTuNalollade  oleyalaTTuMbaru
oleyalluLLuda hoTTeyaluMbaisakkara
hoge ghanavaayittu
idu kaMDu hEsibiTenu guhEshvaraa.

3.       RECITATION


4.       TRANSLATION (WORDS)

Taleyali (in the head) aTTu (cooked) uNalollade (not eating)  oleyal (On the stove) aTTu(cooked) uMbaru (they eat)
oleyalluLLuda (from the stove) hoTTeyaluMbaisakkara (as long as one eats the food)
hoge (the smoke) ghanavaayittu (thickens)
idu kaMDu (seeing this) hEsibiTenu guhEshvaraa (I got disgusted Guheshvara).

5.       VACHANA IN ENGLISH

Instead of eating the food cooked in the head, they eat the one cooked on the stove.
As long as one eats the food from the stove, the smoke thickens.
I am disgusted on seeing this, Guhesvara!

6.       COMMENTARY

The ultimate goal of spiritual path is to attain the state of bliss wherein the mind is stable, pure and serene. In this state, the only thing that matters is being one with the divine. Allama Prabhu is lamenting that people are going after the food cooked on the stove (the material) rather than enjoying the food cooked in the head, the knowledge and realization of the divine.

There are five attractions in the material world: the sound, the touch, the sight, the taste and the smell. The five sense organs are always after these five attractions and make us indulge in these as the providers of the ultimate happiness. We believe that acquiring these five is the only way to go and invest all our energies in this pursuit. This is eating the food from the stove. Allama Prabhu says that the smoke thickens, implying that the more we indulge in these, the more we stay in the illusion of this material world. He is disgusted to see this mode of living. He urges us to escape from the bonds of the material world and realize that within us, the bliss. 

    LET US DISCARD THE IMPERMANENT AND GAIN THE PERMANENT!
  
7.       KANNADA COMMENTARY

ತಲೆಯಲಟ್ಟುಣಲೊಲ್ಲದೆ(ಜ್ಞಾನದಲ್ಲಿ ಅಡುಗೆ ಮಾಡಿ ಊಟಮಾಡಲೊಲ್ಲದೆ)  ಒಲೆಯಲಟ್ಟುಂಬರು( ಒಲೆಯಲ್ಲಿ ಬೇಯಿಸಿ ತಿನ್ನುತ್ತಾರೆ)
ಒಲೆಯಲುಳ್ಳುದ  ಹೊಟ್ಟೆಯಲುಂಬೈಸಕ್ಕರ (ಒಲೆಯಲ್ಲಿ ಬೇಯಿಸಿದುದನ್ನು ಉಣ್ಣುವ ತನಕ)
ಹೊಗೆ ಘನವಾಯಿತ್ತು (ದಟ್ಟವಾದ ಹೊಗೆ ಆವರಿಸಿತ್ತು)
ಇದು ಕಂಡು ಹೇಸಿ ಬಿಟ್ಟೆನು ಗುಹೇಶ್ವರಾ.(ಇದನ್ನು ಕಂಡು ಅಲ್ಲಮರು ಹೇಸುತ್ತಾರೆ)

ಲೋಕದ ಅಜ್ಞಾನವನ್ನು ಕಂಡು ಅಲ್ಲಮರು ಹೇಸುತ್ತಿದ್ದಾರೆ. ಅದನ್ನು ಅವರು ಹೀಗೆ ಹೇಳುತ್ತಾರೆ-

ಜನರು  ತಲೆಯಲ್ಲಿ ಬೇಯಿಸಿ ತಿನ್ನುವುದನ್ನು ಬಿಟ್ಟು ಒಲೆಯಲ್ಲಿ ಬೇಯಿಸಿ ತಿನ್ನುತ್ತಿದ್ದಾರೆ. ಯಾವುದೇ ಆದರೂ ಯೋಚಿಸಿದೆ, ಜ್ಞಾನದ ಒರೆಗೆ ಹಚ್ಚದೆ ಸ್ವೀಕರಿಸುವುದು ಸಮಂಜಸವಲ್ಲ ಎನ್ನುವುದನ್ನು ಈ ರೀತಿಯಾಗಿ ಹೇಳುತ್ತಿದ್ದಾರೆ. ತಲೆಯಲ್ಲಿ ಬೇಯಿಸಿ ತಿನ್ನುವುದು ಎಂದರೆ ಜ್ಞಾನದ ಒರೆಗೆ ಹಚ್ಚುವುದು.  ತಾನು ಕಂಡದ್ದನ್ನು, ತನಗೆ ಸಿಕ್ಕದ್ದನ್ನು, ಜ್ಞಾನದ ಕಿಚ್ಚಿನಲ್ಲಿ ಸುಟ್ಟು  ಅಥವಾ ಬೇಯಿಸಿ ಪಾಕ ಮಾಡಿ ಸ್ವೀಕರಿಸುವುದು ಸೂಕ್ತ. ಆಗ ಅದು ಯೋಗ್ಯ ಫಲ ಕೊಡುತ್ತದೆ. ಆದರೆ ಹಾಗೆ ಮಾಡದೆ, ಯಾಂತ್ರಿಕವಾಗಿ ಒಲೆಯಲ್ಲಿ ಬೇಯಿಸಿ ತಿನ್ನುತ್ತಿದ್ದಾರೆ ಜನರು. ಇದರಿಂದ ಅಜ್ಞಾನದ ಹೊಗೆ ದಟ್ಟವಾಗಿ ಸುತ್ತಿಕೊಳ್ಳುತ್ತಿದೆ.

ಹೊಗೆಯಿಂದ ಕಣ್ಣಲ್ಲಿ ನೀರು ಬರುತ್ತದೆ, ಎದುರಿಗಿರುವುದು ಕಾಣುವುದಿಲ್ಲ, ಉಸಿರು ಕಟ್ಟಿ ಕೆಮ್ಮು ಉಂಟಾಗುತ್ತದೆ. ಒಟ್ಟಿನಲ್ಲಿ  ಹೊಗೆ ಬಹಳ ಕಷ್ಟಾದಾಯಕ. ಅದೇ ರೀತಿ ಈ ಸಂಸಾರದಲ್ಲಿ ಜನರು ತಮ್ಮ ಅಜ್ಞಾನದಿಂದ ಬಳಲುತ್ತಿದ್ದಾರೆ. ಈ ಸಂಸಾರದ ತೊಳಲಾಟ ಜನರಿಗೆ ಹೊಗೆಯಂತೆ ಉಸಿರು ಕಟ್ಟುವಂತೆ ಮಾಡುತ್ತದೆ. ಅನೇಕ ಪರಂಪರೆಗಳು, ಆಚಾರಗಳು, ಶಾಸ್ತ್ರಗಳು, ಇನ್ನೂ ಏನೇನೋ ನಂಬಿಕೆಗಳು ಎಲ್ಲವೂ ಯಾವುದೋ ಕಾಲಕ್ಕೆ ಪ್ರಸ್ತುತವಾಗಿದ್ದಿರಬೇಕು. ಆದರೆ ಅವು ಯಾವಗಲೂ ಪ್ರಸ್ತುತವಾಗಿರುತ್ತವೆ, ಎಂದು ಕೊಂಡು  ಸ್ವಲ್ಪವೂ ಯೋಚಿಸದೆ ಅವುಗಳನ್ನು ಆಚರಿಸಿವುದು  ಸರಿಯಲ್ಲ. ಇದಕ್ಕೆಲ್ಲ ಕಾರಣ ಅವರು ತಲೆಯಲ್ಲಿ ಬೇಯಿಸಿ ತಿನ್ನದೆ ಇರುವುದು ಎನ್ನುತ್ತಾರೆ ಅಲ್ಲಮರು. ಅವುಗಳನ್ನು ಜ್ಞಾನದ ಒರೆಗೆ ಹಚ್ಚಿ ಸ್ವೀಕರಿಸಬೇಕು.



Friday, October 3, 2014

Vachana 214: Tanu Battaliddadeno - What if the body is naked?

PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.       VACHANA IN KANNADA

ತನು ಬತ್ತಲಿದ್ದಡೇನೋ ಮನ ಶುಚಿಯಾಗದನ್ನಕ್ಕರ?
ಮಂಡೆ ಬೋಳಾದಡೇನೋ ಭಾವ ಬಯಲಾಗದನ್ನಕ್ಕರ?
ಭಸ್ಮವ ಹೂಸಿದಡೇನೋ ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ?
ಇಂತೀ ಆಶೆಯ ವೇಶದ ಭಾಷೆಗೆ , ಗುಹೇಶ್ವರ ನೀ ಸಾಕ್ಷಿಯಾಗಿ ಛೀ ಎಂಬೆನು

2.       TRANSLITERATION

tanu battaliddaDEnO mana shuciyaagadannakkara
maMDe bOLaadaDEnO bhaava bayalaagadannakkara
bhasmava hUsidaDEnO
karaNaadi guNaMgaLanotti meTTi suDadannakkara
iMtI aaSeya vEshada bhaaSege
guhEshvara nI saakShiyaagi CI eMbenu

3.       RECITATION


4.       TRANSLATION (WORDS)

tanu (the body) battaliddaDEnO (what if, becomes naked)  mana (mind) shuciyaagadannakkara (without mind being  pure)
maMDe (head) bOLaadaDEnO (what if, becomes bald)  bhaava (the feelings) bayalaagadannakkara (do not disappear)
bhasmava (with the ash) hUsidaDEnO (what if smeared on the body)
karaNaadi (the senses) guNaMgaLanotti meTTi suDadannakkara (what if, the sense attributes  are not pushed and burnt)
iMtI aaSeya vEshada bhaaSege (this way for the language of desire)
guhEshvara nI saakShiyaagi CI eMbenu ( keeping Guheshvara as the witness I dislike it)

5.       VACHANA IN ENGLISH

What good is the body becoming naked, without the mind becoming pure?
What good is the head becoming bald, without the feelings not disappearing?
What good is smearing the body with ash, without the sense attributes pushed out and burnt?
Thus, with Guhesvara as the witness, I dislike this pretension of desire containment!

6.       COMMENTARY

Allama Prabhu is advocating the importance of internal and external purity vehemently remarking that he dislikes the exhibition of purity by subjecting the body to various contortions. People wear saffron or white or no clothes to show that they have conquered the desire to decorate their bodies as an indication of achieving the purity of mind. But, if the desires continue to sway them, they have not accomplished anything. Both body and mind must become pure. As the hair grows on the head, the ignorance and ego grow within. Just shaving the head off is not enough, the growth of ignorance and ego need to be cut off making the feelings pure. It is not enough to smear the body with the ash implying that the physical body has lost its importance; the sense attributes must be pushed out and burnt. The natural tendency of sense organs is to push one towards the material world and its ups and downs. The sense s must be turned inside to purify within. External purity is a must, but the internal purity must go with it to succeed in the spiritual path.

Let us turn our senses inward!
  

7.       KANNADA COMMENTARY

ತನು ಬತ್ತಲಿದ್ದಡೇನೋ (ದೇಹ ಬೆತ್ತಲೆಯಾಗಿದ್ದರೇನು)  ಮನ ಶುಚಿಯಾಗದನ್ನಕ್ಕರ (ಮನಸ್ಸು ಶುದ್ಧವಾಗದಿದ್ದರೆ)?
ಮಂಡೆ ಬೋಳಾದಡೇನೋ(ತಲೆಯನ್ನು ಬೋಳಿಸಿದರೇನು) ಭಾವ ಬಯಲಾಗದನ್ನಕ್ಕರ (ಮನಸ್ಸಿನ ಭಾವಗಳು ಬಯಲಾಗದಿದ್ದರೆ)?
ಭಸ್ಮವ ಹೂಸಿದಡೇನೋ(ಭಸ್ಮವನ್ನು ಧರಿಸಿದರೇನು)
ಕರಣಾದಿ ಗುಣಂಗಳನೊತ್ತಿ ಮೆಟ್ಟಿ ಸುಡದನ್ನಕ್ಕರ (ಇಂದ್ರಿಯ ಗುಣಗಳನ್ನು ಸುಟ್ಟು ಭಸ್ಮ ಮಾಡದಿದ್ದರೆ)?
ಇಂತೀ ಆಶೆಯ ವೇಶದ ಭಾಷೆಗೆ (ಈ ರೀತಿಯಾಗಿ ಭಕ್ತಿಯನ್ನು ತೋರಿಸಿಕೊಳ್ಳುವ ಆಸೆಗೆ)
ಗುಹೇಶ್ವರ ನೀ ಸಾಕ್ಷಿಯಾಗಿ ಛೀ ಎಂಬೆನು (ನಿನ್ನ ಸಾಕ್ಷಿಯಾಗಿ ಧಿಕ್ಕರಿಸುತ್ತೇನೆ)

ಹೊರಗಣ ವೇಶಕ್ಕಿಂತ ಒಳಗಣ ಶುಚಿ ಮುಖ್ಯವೆಂಬುದನ್ನು ಇಲ್ಲಿ ಹೇಳುತ್ತಾರೆ ಅಲ್ಲಮರು.
ಕೆಲವರು  ಹೊರಗಡೆ ಅನೇಕ ವೇಶಗಳನ್ನು ಹೊತ್ತು ತಾವು ಭಕ್ತರೆಂದು ತೋರಿಸಿಕೊಳ್ಳುತ್ತಾರೆ. ದಿಗಂಬರರಾಗುತ್ತಾರೆ. ವಸ್ತ್ರಗಳನ್ನು ತ್ಯಜಿಸಿದ್ದೇನೆ ಎಂದು ತೋರಿಸಿಕೊಳ್ಳುತ್ತಾರೆ. ಆದರೆ ಮನಸ್ಸು ಆಸೆ, ಕೋಪ, ಅಸೂಯೆ, ಅಹಂಕಾರ ಇತ್ಯಾದಿಗಳನ್ನು ಬಿಡದಿದ್ದರೆ ವಸ್ತ್ರಗಳನ್ನು ಬಿಡುವುದರಿಂದ ಏನು ಪ್ರಯೋಜನ?

ಕೇವಲ ತಲೆಯನ್ನು ಬೋಳಿಸಿದರೆ ಏನು ಪ್ರಯೋಜನ?  ಮನದಲ್ಲಿಯ ಇತರ ಭಾವಗಳು ನಮ್ಮನ್ನು ಬಿಡದಿದ್ದರೆ? ಇಂದ್ರಿಯಗಳಿಗೆ ಬಲಿಯಾಗಿ ಮನಸ್ಸು ಅತ್ತಿಂದಿತ್ತ ಓಲಾಡುತ್ತಿದ್ದರೆ  ತಲೆಯನ್ನು ಬೋಳಿಸಿದರೆಷ್ಟು ಬಿಟ್ಟರೆಷ್ಟು? ಇಂದ್ರಿಯಗಳನ್ನು ಅರಿತು ಅವುಗಳನ್ನು ಸುಟ್ಟು ಇಲ್ಲವೆನ್ನಿಸುವುದು ಮುಖ್ಯ. ಮನುಷ್ಯನು ಇಂದ್ರಿಯಗಳಿಗೆ ವಶನಾಗಿರುವುದರಿಂದಲೇ ಜಗತ್ತಿನಲ್ಲಿ ಇಷ್ಟೊಂದು ದುಃಖ ಕಾಣುತ್ತದೆ, ಕಾಡುಗಳು ನಾಶವಾಗುತ್ತಿವೆ, ಜನರು ವಿಜ್ಞಾನಪನೆಗಳಿಗೆ ಬಲಿಯಾಗಿ ಹಣ, ಆರೋಗ್ಯ, ಮನಸ್ಸಿನ ನೆಮ್ಮದಿಗಳನ್ನು ಕಳೆದುಕೊಳ್ಳುತ್ತಿದ್ದಾರೆ,

ಮುಖ್ಯವಾಗಿ ಮಾಡಬೇಕಾದುದನ್ನು ಬಿಟ್ಟು ಕೇವಲ ಹೊರಗೆ ಮಾತ್ರ ಭಕ್ತನ ವೇಶ ತೊಟ್ಟರೆ ಏನೂ ಪ್ರಯೋಜನವಿಲ್ಲ. ಅಂತಹವರನ್ನು ನಾನು ಧಿಕ್ಕರಿಸುತ್ತೇನೆ ಎಂದು ಹೇಳುತ್ತಾರೆ ಅಲ್ಲಮರು.

ನಮ್ಮ ಸಭ್ಯವೆಂದು ತೋರುವ ಇಂದಿನ ಸಮಾಜದಲ್ಲಿ ಇಂತಹವರು ಕಡಿಮೆ ಇರುವುದರಿಂದ ಈ ವಚನ  ಅಪ್ರಸ್ತುತವೆನಿಸಬಹುದು. ಅದರೆ ನಿಜವಾಗಿ ನೋಡಿದಲ್ಲಿ ಇದು ಹಾಗೆನಿಸುವುದಿಲ್ಲ. ನಾವು ನಮ್ಮನ್ನೇ  ನೋಡಿಕೊಂಡಾಗ ಇದು ನಮಗೂ ಪ್ರಸ್ತುತವೆನಿಸುತ್ತದೆ. ಹೌದು ನಾವೇನೂ ಸಂನ್ಯಾಸಿಗಳಂತೆ ವೇಶ ಧರಿಸಿ ಎಲ್ಲವನ್ನು ಬಿಟ್ಟಿದ್ದೇವೆ ಎಂದು ತೋರಿಸಿಕೊಳ್ಳುವುದಿಲ್ಲ. ಆದರೆ ನಾವೆಲ್ಲರೂ ಬಹಳ ಸುಸಂಸ್ಕೃತರು. ಸಭ್ಯರು ಎಂದು ತೋರಿಸಿಕೊಳ್ಳುತ್ತೇವೆ. ಸುಸಂಸ್ಕೃತರಾದವರು ಇನ್ನೊಬ್ಬರ ದುಃಖಕ್ಕೆ, ಯಾವುದೆ ರೀತಿಯ ಹಿಂಸೆಗೆ, ಪರಿಸರದ ನಾಶಕ್ಕೆ ಕಾರಣರಾಗಬಾರದು ಅಲ್ಲವೆ?  ಸದಾ ತಮ್ಮ ನಡತೆಯನ್ನು ವಿಮರ್ಶಿಸಿಕೊಳ್ಳಬೇಕಲ್ಲವೆ?
ನಾವು ನಮ್ಮನ್ನು ಸೂಕ್ಷ್ಮವಾಗಿ ನೋಡಿಕೊಂಡಾಗ ನಮ್ಮಲ್ಲಿಯ ಈ ಹಿಂಸೆಯ ಗುಣಗಳು ಕಾಣುವ ಸಾಧ್ಯತೆ ಇದೆ. ನಮ್ಮನ್ನು ನಾವು ಎಂದಾದರೂ ನಿಷ್ಪಕ್ಷಪಾತವಾಗಿ ವಿಮರ್ಶಿಸಿಕೊಳ್ಳುತ್ತೇವೆಯೆ?


ಬಹಳ ಸುಸಂಸ್ಕೃತರೆಂದು ತೋರಿಸಿಕೊಳ್ಳುವ ನಾವು ನಮ್ಮ  ಸುಖಮಯ ಸಂಸಾರದ ನೆಪದಿಂದ ಏನೇನು ನಾಶ ಮಾಡುತ್ತೇವೆ ಎಂಬುದನ್ನು ನೋಡಿಕೊಳ್ಳಲು ಹಚ್ಚುತ್ತ ನಮ್ಮನ್ನು ಎಚ್ಚರಿಸುವಂತೆ ತೋರುತ್ತದೆ ಈ ವಚನ.