Friday, August 29, 2014

Vachana 209: Kaadugiccheddade – If there is a Fire

PLEASE NOTE:  THIS POST HAS 7 SECTIONS. IF YOU ARE NOT FAMILIAR WITH KANNADA (THE LANGUAGE IN WHICH VACHANAS WERE COMPOSED ORIGINALLY), SCROLL DOWN TO SECTIONS 5 AND 6.

1.     VACHANA IN KANNADA

ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ
ನೀರುಗಿಚ್ಚೆದ್ದಡೆ ಸಮುದ್ರವೇ ಗುರಿ
ಒಡಲುಗಿಚ್ಚೆದ್ದಡೆ ತನುವೆ ಗುರಿ
ಕಾಲಾಗ್ನಿಯೆದ್ದೆಡೆ ಲೋಕಂಗಳೆ ಗುರಿ
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ  ನಾನು ಗುರಿಯಲ್ಲ ಕೇಳಾ.

2.     TRANSLITEARTION

kaaDugicceddaDe  aDaviye guri
nIrugicceddaDe samudrave guri
oDalugicceddaDe tanuve guri
kaalaagniyeddDe lOkaMgaLe guri
shivasharaNa  manadalli kOpaagniyeddDe niMdakare guri
guhEshvaraa nimma maayada hoDegicciMge  naanu guriyalla kaaNaa.

3.     CLICK HERE FOR A RECITATION


4.     TRANSLATION (WORDS)

kaaDugicceddaDe (if there is forest fire)  aDaviye guri (the forest is the target)
nIrugicceddaDe ( if there is fire at the bottom of the sea) samudrave guri (sea will be the target)
oDalugicceddaDe (if there is fire in the stomach)  tanuve guri (body is the target)
kaalaagniyeddDe (if there is  fire of death)  lOkaMgaLe guri (worlds are the targets)
shivasharaNa manadalli kOpaagniyeddDe (if there is fire in the mind of shiva’s devotees)   niMdakare guri (reproachers  are the targets)
guhEshvaraa nimma (guheshvara your)  maayada (of illusion)  hoDegicciMge (fierce fire)
naanu guriyalla kaaNaa (I am not the target you see).

5.     VACHANA IN ENGLISH

If there is forest fire, the forest is the target.
If there is fire at the bottom of the sea, the sea will be the targett.
If there is fire in the stomach, body is the target.
If there is the fire of death, worlds are the targets.
If there is fire in the mind of Shiva’s devotees, reproachers are the targets.
Guheshvara, I am not the target of your fierce fire of illusion (maya), you see!

6.     COMMENTARY

In this Vachana, Allama Prabhu uses several similes to drive home the effect of maya (illusion) and says “Lord Guhesvara, I am not (I do not want to be) the target of the fierce fire of illusion.”

The forest fire gulps the whole forest. The fire under the sea dries up the whole sea. The fire in the stomach (hunger) eats up the whole body. The fierce fire of the death, consumes all the worlds. Devotees of Shiva are immensely tolerant. But, they can never tolerate the reproach of the Divine and the realized souls. Allama Prabhu equates the forest fire, sea fire, fire of hunger, etc. to 'Maya' implying that the Maya engulfs us. He says, he has realized what maya is and this awareness will keep him immune to the fierce fire of illusion!
‘Maya’ is roughly translated as ‘illusion’. It portrays untruth as truth. As the popular example goes, it is the rope in the dark that appears as a snake. Once the darkness is removed, the truth emerges. It is the mirage in the sunny desert that draws the thirsty animal to it for water. Once the ignorance goes away, the truth emerges.
We get attached to things and people. The ego keeps on blinding us as to continue to being attached to our meterial world. This is the human condition.  We need to keep active and do our duties. But, we need to realize the impermanence of this real world and gain the permanent bliss, the Truth!



Let us distinguish between the transient and the permanent!
  

7.     KANNADA COMMENTARY

ಅರ್ಥ:

ಕಾಡುಗಿಚ್ಚೆದ್ದಡೆ ಅಡವಿಯೆ ಗುರಿ  (ಕಾಳ್ಗಿಚ್ಚಿನಿಂದ ಅಡವಿಯೆ ಸುಟ್ಟು ಹೋಗುತ್ತದೆ)
ನೀರುಗಿಚ್ಚೆದ್ದಡೆ ಸಮುದ್ರವೇ ಗುರಿ (ಬಡಬಾಗ್ನಿಗೆ ಸಮುದ್ರದ ನೀರು ಸುಟ್ಟು ಹೋಗುತ್ತದೆ)
ಒಡಲುಗಿಚ್ಚೆದ್ದಡೆ ತನುವೆ ಗುರಿ (ಒಡಲಿನ ಹಸಿವಿನ ಕಿಚ್ಚಿಗೆ ಶರೀರವೆ ಹಾಳಾಗುತ್ತದೆ)
ಕಾಲಾಗ್ನಿಯೆದ್ದೆಡೆ ಲೋಕಂಗಳೆ ಗುರಿ (ಕಾಲನ ಅಗ್ನಿಗೆ ಲೋಕಗಳೆ ಆಹುತಿಯಾಗುತ್ತವೆ)
ಶಿವಶರಣರ ಮನದಲ್ಲಿ ಕೋಪಾಗ್ನಿಯೆದ್ದಡೆ ನಿಂದಕರೆ ಗುರಿ (ಶಿವ ಶರಣರ ಕೋಪಕ್ಕೆ ನಿಂದಕರು ಗುರಿಯಾಗುತ್ತಾರೆ)
ಗುಹೇಶ್ವರಾ ನಿಮ್ಮ ಮಾಯದ ಹೊಡೆಗಿಚ್ಚಿಂಗೆ
ನಾನು ಗುರಿಯಲ್ಲ ಕೇಳಾ. (ಹೊಡೆಯುವ, ಆವರಿಸಿಕೊಳ್ಳುವ ನಿಮ್ಮ ಮಾಯದ ಕಿಚ್ಚಿಗೆ ನಾನು ಗುರಿಯಾಗುವುದಿಲ್ಲ)

ತಾತ್ಪರ್ಯ:

ಸಾಮಾನ್ಯವಾಗಿ ಎಲ್ಲರೂ ಮಾಯೆಯ ಪ್ರಭಾವಕ್ಕೆ ಒಳಗಾಗುತ್ತಾರೆ. ಅದರಿಂದ ತಪ್ಪಿಸಿಕೊಳ್ಳುವವರು ಯಾರೂ ಇಲ್ಲ. ಅದು ಸಹಜಆದರೆ ಇಲ್ಲಿ ಅಲ್ಲಮರು ತಾನು ಅದಕ್ಕೆ ತುತ್ತಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಕಾಳ್ಗಿಚ್ಚು ಬಹಳ ಅಪಾಯಕಾರಿ. ಇಡೀ ಅಡವಿಯೆ ಅದಕ್ಕೆ ತುತ್ತಾಗುತ್ತದೆ. ಅದನ್ನು ತಪ್ಪಿಸುವುದು  ಅಸಾಧ್ಯವೆಂಬಷ್ಟೇ ಕಷ್ಟಕರಏಕೆಂದರೆ ಅದು ಪಕ್ಕ ಪಕ್ಕದಲ್ಲಿಯೆ ಇರುವ ಮರಗಳಿಗೆ ಹಬ್ಬಿ ಕಾಡನ್ನು ಪೂರ್ತಿಯಾಗಿ ಸುಡುತ್ತದೆ. ಅದೇ ರೀತಿಯಾಗಿ ಬಡಬಾಗ್ನಿಯೂ  ಸಹ ಸಮುದ್ರದ ನೀರನ್ನೇ ಸುಟ್ಟುಬಿಡುತ್ತದೆ. ನೀರನಲ್ಲಿಯೇ ಇದ್ದರು ಅದು ನೀರನ್ನೇ ಸುಡುತ್ತದೆ. ಇನ್ನು ಹಸಿವೆ ಎಂಬ ಅಗ್ನಿ ದೇಹದಲ್ಲಿ ಕಾಣಿಸಿಕೊಂಡಾಗ ಅದು ಇಡೀ ದೇಹವನ್ನೇ ಹಾಳು ಮಾಡುತ್ತದೆಕಾಲ ಎಂದರೆ ಮೃತ್ಯು ಅಥವಾ ಪ್ರಳಯ. ಇವುಗಳಿಗೆ ಎಲ್ಲ ಲೋಕಗಳು ಗ್ರಾಸವಾಗುತ್ತವೆ. ಇವುಗಳಿಂದ ತಪ್ಪಿಸಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಅಲ್ಲಮರು ಹೇಳುತ್ತಾರೆ ಶಿವಶರಣರ ಕೋಪವೂ ಕೂಡ ಬಹಳ ಅಪಾಯಕಾರಿ ಶಿವ ಶರಣರಿಗೆ ಕೋಪ ಬಂದರೆ ನಿಂದಕರು ಅದಕ್ಕೆ ಗುರಿಯಾಗುತ್ತಾರೆ ಎಂದು.  ಶರಣರು ಸಾಮಾನ್ಯವಾಗಿ ಕೋಪಗೊಳ್ಳುವವರಲ್ಲ. ಆದರೆ ಅವರಿಂದ ಜಂಗಮರ  ಅಥವಾ ಶಿವನ ನಿಂದೆ ಕೇಳಲಾಗುವುದಿಲ್ಲ. ಬೇರೆ ಏನೆನ್ನೇ ಸಹಿಸಿದರೂ ಶಿವ ಶರಣರು ನಿಂದಕರನ್ನು ಸಹಿಸುವುದಿಲ್ಲ. ನಿಂದೆ ಮಾಡಿದವರು ಅವರ ಕೋಪಕ್ಕೆ ಭಾಜನರಾಗಬೇಕಾಗುತ್ತದೆ.

ಕಾಳ್ಗಿಚ್ಚು, ಬಡಬಾಗ್ನಿ, ಕಾಲಾಗ್ನಿ, ಶಿವಶರಣ ಕೋಪ ಇವುಗಳು ಮಹಾ ವಿಪತ್ಕಾರಿಗಳು. ಮತ್ತು ಮಾಯೆಯೂ ಅದೇ ರೀತಿಯದು. ಅದರಿಂದಲೂ ಯಾರೂ ತಪ್ಪಿಸಿಕೊಳ್ಳಲಾರರು. ಆದರೆ ನಾನು ಅಂತಹ ಮಾಯೆಯನ್ನು  ಗೆದ್ದಿದ್ದೇನೆ. ಅದರ ಕಿಚ್ಚು ನನ್ನನ್ನು ಏನೂ ಮಾಡಲಾರದು ಎನ್ನುತ್ತಾರೆ ಅಲ್ಲಮಪ್ರಭುಗಳು.

ಮಾಯೆ ಎಂದರೆ ಯಾವುದು ಸತ್ಯವೋ ಅದನ್ನು ಮರೆಮಾಡಿ ಅಸತ್ಯವಾದುದನ್ನೇ ಸತ್ಯವೆಂದು ತೋರುವ ಭ್ರಮೆ.  ಬೇಸಿಗೆಯಲ್ಲಿ ಕಾಣುವ ಮೃಗಜಲವು ಇದಕ್ಕೊಂದು ಉದಾಹರಣೆ. ದೂರದಲ್ಲಿ ನೀರಿದೆಯೆಂದು ಕಾಣುತ್ತದೆ ಬಿಸಿಲಿನ ಬೇಗೆಯಲ್ಲಿ. ಅದನ್ನು ಹುಡುಕಿಕೊಂಡು  ಮುಂದೆ ಮುಂದೆ ಹೋದಂತೆ ಅದು ದೂರವಾಗುತ್ತಲೇ ಹೋಗುತ್ತದೆ. ನೀರಿರುವುದು ನಿಜವೆಂದೇ ತೋರುತ್ತದೆ. ಆದ್ದರಿಂದ ಅಜ್ಞನಾದ ಜೀವವು ಅದರ ಬೆಂಬತ್ತಿ ಬಳಲಿ ಬಸವಳಿದು ಹೋಗುತ್ತದೆ. ಅಜ್ಞಾನದ ಕಾರಣ ಮೃಗಜಲವನ್ನು ಸತ್ಯವೆಂದೇ ನಂಬಿ ಸೋತುಬೀಳುತ್ತದೆ. ಇದು  ಸಾಮಾನ್ಯವಾಗಿ ಎಲ್ಲರೂ ಅನುಭವಿಸುವಂತಹದು. ಬದುಕಿನಲ್ಲಿ ನಮಗೆ ಸುಖ ಕೊಡುತ್ತವೆ ಎಂದು ಅನೇಕ ಸಾಧನಗಳನ್ನು. ಉಪಾಯಗಳನ್ನು. ತಂತ್ರಗಳನ್ನು, ರೀತಿನೀತಿಗಳನ್ನು ನಂಬಿ ಮೋಸ ಹೋಗುತ್ತದೆ ಜೀವ. ಮರೆವೆಗೆ ಒಳಗಾದ ಜೀವದ ನಿರಂತರ ಪರಿಸ್ಥಿತಿ ಇದು. ಆದರೆ ಅದು  ಕೇವಲ ಭ್ರಮೆ ಎಂಬ ಅರಿವನ್ನು ಪಡೆದವನು ಎಂದಿಗೂ ಮೃಗಜಲದ ಹಿಂದೆ ಓಡುವುದಿಲ್ಲ. ಇದು ಅರಿವನ್ನು ಹೊಂದಿದ ಅಲ್ಲಮರ ಸ್ಥಿತಿ. ಅವರು ಯಾವುದು ಮಾಯೆ ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಅವರು ಮಾಯೆಯ ಹೊಡೆಗಿಚ್ಚಿಗೆ ಗುರಿಯಾಗುವುದಿಲ್ಲ.


Friday, August 22, 2014

Vachana 208: Ote Iddante Kaaya Meddavarunte? - Would you eat a Mango along with its Pit?



PLEASE NOTE: THIS POST HAS SEVEN SECTIONS. IF YOU ARE NOT FAMILIAR WITH KANNADA (THE LANGUAGE IN WHICH THE VACHANAS WERE ORGINALLY COMPOSED) PLEASE SCROLL TO SECTIONS 5 AND 6.

1.VACHANA IN KANNADA

ಓಟೆ ಇದ್ದಂತೆ ಕಾಯ ಮೆದ್ದವರುಂಟೆ?
ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ?
ಜೋಡು ಹರಿದಲ್ಲದೆ ಕಾಯವನಿರಿಯಲರಿಯದು ಕೈದು
ಭಾವ ತಿಳಿದಲ್ಲದೆ  ನಮ್ಮ ಗುಹೇಶ್ವರನರಿಯ ಬಾರದು
ಕಾಣಾ ಎಲೆ ಅಂಬಿಗರ ಚೌಡಯ್ಯಾ.

2. TRANSLITERATION

OTe iddaMte kaaya meddavaruMTe?
kaayada guNaviddaMte liMgavanaridavaruMTe?
jODu  haridallade kaayavaniriyalariyadu kaidu.
aa bhaava tiLidallade namma guhEshvaranariyabaaradu
kaaNaa ele aMbigara chouDayyaa.

3. CLICK HERE FOR A RECITATION


4. TRANSLATION (WORDS)

OTe (mango  pit)  iddaMte (with) kaaya (fruit ) meddavaruMTe (has anybody eaten)?
kaayada (of the body)  guNaviddaMte (being with the tendencies) liMgavanaridavaruMTe (has anybody been aware of the Linga)?
jODu (the armor)   haridallade (unless is torn) kaayavaniriyalariyadu (the body cannot be pierced)  kaidu (the weapon).
aa bhaava tiLidallade (unless this is understood)  namma guhEshvaranariyabaaradu (our Guheshvara cannot be understood)
kaaNaa ele aMbigara chouDayyaa. (you see Ambigara Choudayyaa)

5. VACHANA IN ENGLISH

Has anybody eaten a mango fruit along with its pit?
Has anybody been aware of the Divine (Linga) being with the tendencies of the body?
Unless the armor is torn, the weapon cannot pierce the body.
Our Guhesvara cannot be realized unless this is understood,
you see, Ambigaa Choudayya!

6. COMMENTARY

In this fairly simple Vachana, Allama Prabhu is impressing on Ambigara Choudayya, that the prerequisite to realize the Divine (Guhesvara) is getting rid of the tedndencies of the body!  he uses two similis to drive the point home. No one eats the Mango fruit along with its pit. The pit must be separated from the fruit before eating  the fruit. As long as the body is covered by the armor, a weapon cannot pierce it. The armor must be torn to allow weapon to pierce the body. Along the same lines, one must get rid of the tendencies of the body, the attachment to the material, the influence of sense organs and the passions of the mind.These tendencies make the individual drown in the sea of life and push him/her in away from the divine. The senses come in the way of realizing the divine. The prerequisite to realize the self (divine) then is to identify the bodily tendencies and become independent of them.

Let us discard the pit and enjoy the fruit !

7. KANNADA COMMENTARY

ಓಟೆ ಇದ್ದಂತೆ ಕಾಯ ಮೆದ್ದವರುಂಟೆ
ಕಾಯದ ಗುಣವಿದ್ದಂತೆ ಲಿಂಗವನರಿದವರುಂಟೆ?
ಜೋಡು (ಕವಚ) ಹರಿದಲ್ಲದೆ ಕಾಯವನಿರಿಯಲರಿಯದು (ದೇಹವನ್ನು ಇರಿಯಲು ಸಾಧ್ಯವಿಲ್ಲ) ಕೈದು (ಆಯುಧ)
ಭಾವ ತಿಳಿದಲ್ಲದೆ  ನಮ್ಮ ಗುಹೇಶ್ವರನರಿಯ ಬಾರದು
ಕಾಣಾ ಎಲೆ ಅಂಬಿಗರ ಚೌಡಯ್ಯಾ.

ಎಲ್ಲಿಯವರೆಗೂ ಕಾಯದ ಗುಣಗಳು ದೂರವಾಗುವುದಿಲ್ಲವೋ ಅಲ್ಲಿಯವರೆಗೆ  ಲಿಂಗದ ಅರಿವು ಉಂಟಾಗುವುದಿಲ್ಲ ಎನ್ನುತ್ತಾರೆ ಅಲ್ಲಮ ಪ್ರಭುಗಳು.

ಮಾವಿನ ಹಣ್ಣನ್ನು ಓಟೆಯ ಸಹಿತ ತಿನ್ನಲಾಗುವುದೆ? ಯಾರೂ ಅದನ್ನು ಓಟೆ ಸಹಿತ ತಿನ್ನುವುದಿಲ್ಲ. ಓಟೆಯನ್ನು ಬೇರ್ಪಡಿಸಿ ತಿರುಳನ್ನು ಸವಿಯುತ್ತಾರೆ.

ಅದೇ ರೀತಿಯಾಗಿ ದೇಹದ ಗುಣಗಳು ಇನ್ನೂ ಬಿಟ್ಟು ಹೋಗದ ಮುಂಚೆ ಲಿಂಗವನ್ನು ಅರಿಯಲಾಗುವುದಿಲ್ಲ. ದೇಹದ ಗುಣಗಳು ಜೀವನನ್ನು ಸಂಸಾರದಲ್ಲಿ ಮುಳುಗುವಂತೆ ಮಾಡುತ್ತವೆ. ಇಂದ್ರಿಯಗಳಿಗೆ ಆತನು ತುತ್ತಾಗುತ್ತಾನೆ. ಇಂದ್ರಿಯಗಳು ಆತನನ್ನು ಬೇರೆ ಬೇರೆ ದಿಶೆಗಳೆಡೆಗೆ ಎಳೆಯುತ್ತವೆ. ಆತನ  ಮನಸ್ಸು ಲಿಂಗದ ಕಡೆಗೆ ಹೋಗುವುದಿಲ್ಲ. ಲಿಂಗವನ್ನು ಅರಿಯುವ ದಾರಿಯಲ್ಲಿ ಇಂದ್ರಿಯಗಳು ಅಡ್ಡಿಯನ್ನುಂಟು ಮಾಡುತ್ತವೆಮೊದಲು ದೇಹದ ಗುಣಗಳನ್ನು ಗುರುತಿಸಿ ಅವುಗಳಿಂದ ಬಿಡುಗಡೆ ಪಡೆಯ ಬೇಕು. ಅಂದರೆ ಓಟೆಯನ್ನು  ಬೇರ್ಪಡಿಸಿ ಹಣ್ಣನ್ನು ಸವಿಯುವಂತೆ ಲಿಂಗದ ಜ್ಞಾನ ಸಾಧ್ಯವಾಗುತ್ತದೆ.


ಇದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತಾರೆ. ಶಸ್ತ್ರ ಯೋಧನನ್ನು ಇರಿಯಬೇಕಾದರೆ ಅದು ಮೊದಲು ಆತ ತೊಟ್ಟ ಕವಚವನ್ನು ಹರಿಯಬೇಕಾಗುತ್ತದೆ. ಕವಚವನ್ನು ಹರಿಯದೆ ಶಸ್ತ್ರ ದೇಹವನ್ನು ಇರಿಯಲು ಸಾಧ್ಯವಿಲ್ಲ. ಅದೇ ರೀತಿ  ಲಿಂಗಾನುಭವಕ್ಕೆ ಅಡ್ಡಿಯಾಗಿರುವ ತನುಗುಣಗಳನ್ನು ಮೊದಲು ಗುರುತಿಸಿ ಇಲ್ಲವಾಗಿಸಬೇಕು ಆನಂತರವೇ  ಲಿಂಗದ ಭಾವ ಅಳವಡುತ್ತದೆ ಎಂದು ಅಲ್ಲಮರು ಅಂಬಿಗರ ಚೌಡಯ್ಯನವರಿಗೆ ತಿಳಿಸುತ್ತಿದ್ದಾರೆ.