Friday, July 25, 2014

Vachana 204: Annavanikki – Giving food in alms

VACHANA IN KANNADA

ಅನ್ನವನಿಕ್ಕಿ ನನ್ನಿಯ ನುಡಿದು, ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದರೆ,
ಮರಣದಿಂದ ಮೇಲೆ  ಸ್ವರ್ಗ ಉಂಟಲ್ಲದೆ, ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ  ಶರಣಂಗೆ ಆವ ಫಲವು ಇಲ್ಲ.

TRANSLITERATION

annavanikki nanniya nuDidu, aravaTTigeyanikki kereya kaTTisidare,
maraNadiMda mEle  svarga uMTallade, shivana nijavu saadhyavaagadu.
guhEshvarananarida sharaNaMge aava phalavu illa.

CLICK HERE FOR A RECITATION 


TRANSLATION (WORDS)

annavanikki (giving food in alms) nanniya nuDidu (saying truth), aravaTTigeyanikki (providing drinks for travelers)  kereya kaTTisidare ( by building lakes),
maraNadiMda mEle (after death)  svarga uMTallade (there is heaven) , shivana nijavu (finding the truth) saadhyavaagadu (will not be possible).
guhEshvarananarida (who knows Guheshvara) sharaNaMge (to the devotee) aava phalavu illa (will not have any fruit)

VACHANA IN ENGLISH

By giving food in alms, speaking truth and providing water to travelers by building lakes, may lead to heaven after death, but does not help realizing the Truth!
To the devotee who realizes Guheshvara, there is no fruit!

 COMMENTARY

We do good deeds, give out food in alms, speak only truth, build lakes to quench the thirst of travelers, etc. hoping that we will attain heaven after death. We also get lot of satisfaction and peace of mind through these deeds in this life. We always have the fruit of our actions on our mind either in this life or after death. Allama Prabhu says that one might even achieve the goal of heaven by these good deeds, but they do not help one in realizing the Truth (Divine). Further, a devotee who has realized the Divine does not long for any fruit of his deeds.

Performing good deeds, living a life of truth, helping the ones in need are commendable. The satisfaction derived from these and the feeling of being a contributor to the society are certainly worthwhile. Allama Prabhu is asking us to be more than this; he is asking us to gain the awareness of the Divine. Once such awareness sets in, the permanent bliss becomes the way of life and there will not be any need for transient desires for heaven here and after!  

Let us strive for the ultimate bliss while being good citizens here! 


KANNADA COMMENTARY

ಅನ್ನವನಿಕ್ಕಿ (ಅನ್ನ ದಾನವ ಮಾಡಿ) ನನ್ನಿಯ (ಸತ್ಯವನ್ನು ) ನುಡಿದು, ಅರವಟ್ಟಿಗೆಯನಿಕ್ಕಿ (ದಾರಿಹೋಕರಿಗೆ ಪಾನೀಯ ಕೊಡುವುದು) ಕೆರೆಯ ಕಟ್ಟಿಸಿದರೆ,
ಮರಣದಿಂದ ಮೇಲೆ (ಮರಣವಾದ ಮೇಲೆ)  ಸ್ವರ್ಗ ಉಂಟಲ್ಲದೆ, ಶಿವನ ನಿಜವು (ಆ ಪರತತ್ವ) ಸಾಧ್ಯವಾಗದು,.
ಗುಹೇಶ್ವರನನರಿದ  ಶರಣಂಗೆ ಆವ (ಯಾವ) ಫಲವು ಇಲ್ಲ.

ಇದು ಅಲ್ಲಮಪ್ರಭುಗಳ ವಚನ. ಈ ಲೋಕದಲ್ಲಿ ಒಳ್ಳೆಯ ಕೆಲಸ ಮಾಡಬೇಕು, ಜನರಿಗೆ ಹಿತವಾದದ್ದು ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ, ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಂಬುವವರು ಅನೇಕರಿದ್ದಾರೆ. ಆದರೆ ಅಂಥ ಕೆಲಸದಿಂದ ಏನು ಉಪಯೋಗವೆಂದು ಕೇಳುತ್ತಾರೆ ಅಲ್ಲಮಪ್ರಭುಗಳು.

ಅನ್ನವನಿಕ್ಕಿ ಎಂದರೆ ಅನ್ನದಾನವಮಾಡುವುದು, ಅನ್ನದಾನ ಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಸತ್ಯವನ್ನು ನುಡಿಯುವುದು, ಶ್ರೇಷ್ಠ ನಡತೆ, ಅರವಟ್ಟಿಗೆಯನಿಕ್ಕುವುದು ಕೂಡ ಬಹು ದೊಡ್ಡ ಪುಣ್ಯವೆಂದು ಪರಿಗಣಿಸಲಾಗಿದೆ. ಬಾಯಾರಿಬಂದ ಪ್ರಯಾಣಿಕರಿಗೆ ಪಾನೀಯಗಳನ್ನು ಕೊಡುವುದು ಮತ್ತು ಜನರ ಉಪಯೋಗಕ್ಕಾಗಿ ಕೆರೆಗಳನ್ನು ಕಟ್ಟಿಸುವುದು ನಿಜಕ್ಕೂ ಬಹು  ದೊಡ್ಡ ಉಪಕಾರ. ಇದರಿಂದ ಪುಣ್ಯ  ಸಿಗುತ್ತದೆ ಎಂದು ಹೇಳುತ್ತಾರೆ. ಪುಣ್ಯವೆಂದರೆ ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲವೆಂದು ಅರ್ಥೈಸಿಕೊಳ್ಳಬಹುದು.
ಎಂದರೆ ಈ ಲೋಕದಲ್ಲಿ ಜನರಿಗೆ ಸಹಾಯಕವಾಗುವಂತಹ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅದರ ಫಲ ದೊರಕುತ್ತದೆ. ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದಾಗ ಅದರ ಫಲ ಸತ್ತ ಮೇಲೂ ಕೆಲದಿನ ಉಳಿಯುತ್ತದೆ. ಎಂದರೆ ಸತ್ತ ಮೇಲೂ ಅನೇಕ ದಿನಗಳವರೆಗೆ ಆತನನ್ನು ನೆನೆಯುತ್ತಾರೆ ಜನ. ಆದರೂ ಕೊನೆಗೊಂದು ದಿನ ಅದು ಅಂತ್ಯಗೊಳ್ಳುತ್ತದೆ.

ಈ ಎಲ್ಲ ಕೆಲಸಗಳು ಫಲದಾಸೆಯಿಂದ ಮಾಡುವಂತಹವು. ಅಥವಾ ಈ ಎಲ್ಲ ಕೆಲಸಗಳು ಒಂದು ರೀತಿಯ ಒಳ್ಳೆಯ ಆದರೆ ಸೀಮಿತವಾದ ಫಲ ಅಥವಾ  ಮನೋಸುಖ ಕೊಡುತ್ತವೆ. ಒಳ್ಳೆಯ ಕೆಲಸದ ಫಲ ಸಿಕ್ಕೇ ಸಿಗುತ್ತದೆ. ಆ ಫಲ ಸತ್ತ ಮೇಲೂ ಸ್ವರ್ಗದ ಸುಖ ಎನ್ನಬಹುದು. ಆದರೆ ಅದು ಸೀಮಿತ.  ಆ ಸುಖ ಸಿಕ್ಕಮೇಲೆ ತಾನು ಮಾಡುವ ಆ ಕೆಲಸ ಯಾಂತ್ರಿಕವಾಗುತ್ತದೆ. ಅದಾದಮೇಲೆ ಮಾಡಲು ಏನೂ ಇರುವುದಿಲ್ಲ. ಇದರಿಂದ ಏನು ಪ್ರಯೋಜನ ಎನ್ನುವಂತಿದೆ ಅಲ್ಲಮರ ವಚನ.  ಇಷ್ಟಾದರೂ ಶಿವನ  ನಿಜವಾದ ಅರಿವು ಆಗದಿದ್ದರೆ ಏನು ಪ್ರಯೋಜನ?

ಈ ವಿಶ್ವದ ಹಿಂದಿರುವ ತತ್ವವನ್ನು ಅರಿಯುವುದು ನಿಜವಾದ ಜ್ಞಾನ. ಅದನ್ನು ಅರಿತಾಗ  ಒಳ್ಳೆಯದು, ಕೆಟ್ಟದ್ದು, ಉನ್ನತ, ನಿಮ್ನ, ಮೇಲು, ಕೀಳು, ನಾನು, ನೀನು, ಎಂಬಂತಹ ಎಲ್ಲ ರೀತಿಯ  ಪರ ವಿರುದ್ಧ ಭಾವಗಳು ನಿರ್ನಾಮಗೊಂಡು ವಿಶ್ವಚೈತನ್ಯದಲ್ಲಿ ಒಂದಾಗಿ ಬೆರೆತು ಹೋಗುತ್ತವೆ.  ವ್ಯಕ್ತಿಯ ಚೈತನ್ಯ. ಇಂತಹ ಅರಿವಿನೊಂದಿಗೆ ಮಾಡಿದ ಕೆಲಸಕ್ಕೆ ಯಾವ ಫಲವೂ ದೊರೆಯುವುದಿಲ್ಲ ಮತ್ತು ಇಂತಹ ಅರಿವನ್ನು ಹೊಂದಿದ ವ್ಯಕ್ತಿ ಯಾವ ಫಲವನ್ನು ಬಯಸುವುದೂ ಇಲ್ಲ.
                                          



Friday, July 18, 2014

Vachana 203: Maaduva Bhaktana Kaaya – The deeds of a true devotee

VACHANA IN KANNADA
ಮಾಡುವ ಭಕ್ತನ ಕಾಯ ಬಾಳೆಯ ಕಂಭದಂತಿರಬೇಕು
ಮೆಲ್ಲ ಮೆಲ್ಲನೆ ಹೊರೆಯೆತ್ತಿ ನೋಡಿದಡೆ ಒಳಗೆ ಕೆಚ್ಚಿಲ್ಲದಿರಬೇಕು
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ ಕಾಣಾ ಕೂಡಲಸಂಗಮದೇವಾ

TRANSLITERATION
maaDuva bhaktana kaaya baaLeya kaMbhadaMtirabEku
mella mellane horeyetti nODidaDe  oLage keccilladirabEku
mElaada phalava emmavru bIjasahita nuMgidaru.
eanaginnaava bhayavilla kaaNa kUDalasaMgamadEvaa

CLICK HERE FOR A RECITATION

http://youtu.be/iq0axZrnKfE

TRANSLATION (WORDS)
maaDuva (performing, doing) bhaktana (of the devotee) kaaya (body)
baaLeya (Banana) kaMbhadaMte (like Stem of) irabEku (should be)
mella mellane (slowly) horeyetti (peeled) nODidaDe (and seen)
oLage (inside) keccilladirabEku (there should not be hard core)
mElaada (resulting)  phalava (fruits)
emmavru (our people)  bIjasahita (with the seed) nuMgidaru (ate it) 
eanage (I am) innaava(any other) bhayavilla (I am not afraid )
kaaNa (you see) kUDalasaMgamadEvaa  (Kudalasanagamadeva)

VACHANA IN ENGLISH
The body of the devotee (in devotion) should be like the banana stem.
(The work done by the devotee should be like the banana stem)
If peeled slowly, layer by layer, there should not be a hard core.
Our people ate the resulting fruit along with the seeds.
I am not afraid of anything else, you see Kudalasangamadeva!

COMMENTARY
Basavanna describes the characteristics of a true devotee using the simile of a banana plant. The stem of the banana plant is capable of supporting a bunch of bananas (usually 100 to 200 bananas per bunch). While it is hard enough to do so, each layer from which it is composed of is soft. As the layers are peeled, we see softer and softer layers and there is no hard layer or core forming the stem. Along the same lines, each and every action and behavior of a true devotee should be soft (untinged). There is no ‘I-ness’ in him. He does not do what he does to show off to others. He is completely away from ego and has conquered all the six passions of human mind (Arishadvargas).

The banana plant provides the fruit enjoyed by all. In fact, we don’t even notice that there are seeds in the fruit. Thus, people (our people as Basavanna terms them) consume the fruit along with the seeds, making the seeds unavailable to reproduce the plant. Banana plants produce just one bunch of bananas and the stem is cut off. New stems sprout from the bulb and the root system. Each stem thus serves one purpose and it has no rebirth. Along the same lines, a true devotee serves his fellow beings with the best in him. His fellow devotees enjoy the fruits of his actions without any hesitation. He has no fear of life or death. He is beyond the ups and downs of the world. He has completed his cycle of birth and death. Such devotee does not have to fear anything, any time.

Let us get softer and softer and not be tinged by the ways of the world!

KANNADA COMMENTARY  

ಮಾಡುವ ಭಕ್ತನ ಕಾಯ
ಬಾಳೆಯ ಕಂಭದಂತಿರಬೇಕು
ಮೆಲ್ಲ ಮೆಲ್ಲನೆ ಹೊರೆಯೆತ್ತಿ ನೋಡಿದಡೆ
ಒಳಗೆ ಕೆಚ್ಚಿಲ್ಲದಿರಬೇಕು (ಒಳಗೆ ಗಟ್ಟಿಯಾದ ಭಾಗವಿರಕೂಡದು)
ಮೇಲಾದ ಫಲವ
ನಮ್ಮವರು ಬೀಜಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ
ಕಾಣಾ ಕೂಡಲಸಂಗಮದೇವಾ

ಬಸವಣ್ಣನವರು ಭಕ್ತನ ಕ್ರಿಯೆಗಳು ಯಾವ ಭಾವನೆಯಿಂದ ಕೂಡಿರಬೇಕು ಎಂಬುದನ್ನು ಹೇಳುತ್ತಿರುವರು.
ಎಂದರೆ ಹೇಗೆ? “ನಾನು ಭಕ್ತನಾಗಿದ್ದೇನೆ”, “ನನ್ನಲ್ಲಿ ಭಕ್ತಿಯಿದೆ” ಎಂದೆಲ್ಲ ತೋರಿಸಿಕೊಳ್ಳುವುದು, ಆ ಭಕ್ತಿಗೆ ಹೆಮ್ಮೆ ಪಟ್ಟುಕೊಳ್ಳುವುದು ಇತ್ಯಾದಿ ನಿಜವಾದ ಭಕ್ತಿಯಲ್ಲ. ಅದು ತೋರಿಕೆಯ ಭಕ್ತಿ. ಭಕ್ತನು ಬಾಳೆಯ ಕಂಭದಂತಿರಬೇಕು ಎನ್ನುತ್ತಾರೆ.
ಬಾಳೆಯ ದಿಂಡಿನ ಒಂದೊಂದೇ ಪದರನ್ನು ಕಳಚಿದರೆ ಒಳಗೆ ಏನೇನೂ ಇರುವುದಿಲ್ಲ. ಆ ಬಾಳೆಯ ಗಿಡದ  ದಿಂಡಿನಲ್ಲ್ಲಿ ಗಟ್ಟಿಯಾದ ಭಾಗವೇ ಇರುವುದಿಲ್ಲ. ಪದರುಗಳು ಒಂದೊಂದಾಗಿ ಬಿಚ್ಚಿಕೊಂಡು ಬರುತ್ತವೆ. ಅದೇ ರೀತಿಯಾಗಿ ಭಕ್ತನ ಮನದಲ್ಲಿ ತಾನು ಎಂಬುದು ಏನೂ ಇರಬಾರದು. ಅಂದರೆ ಅಂಹಂಕಾರ, ತಾನು ತನ್ನದು ಎನ್ನುವ ಭಾವದಿಂದ ಗಟ್ಟಿಯಾದ ಒಂದು ಬಿಂದುಕೂಡ ಅಲ್ಲಿರಬಾರದು. ಅವನ ಅಂತರಂಗದಲ್ಲಿ ಅಹಮ್ಮಿನ ಲವಲೇಶವೂ ಇಲ್ಲದಿದ್ದಾಗ ಆತನ ವ್ಯಕ್ತಿತ್ವದ ಒಂದೊಂದು ಪದರುಗಳನ್ನು ಕಳಚಿದಾಗಲೂ ಅಲ್ಲಿ “ತಾನು” ಎನ್ನುವುದು ಕಂಡು ಬರುವುದಿಲ್ಲ. ಅಂತಹ ಭಕ್ತನು ಮಾಡುವ , ಕೊಡುವ ಎಲ್ಲವನ್ನೂ ಶರಣರು   ಪ್ರೀತಿಯಿಂದ ಸ್ವೀಕರಿಸುತ್ತಾರೆ, ಬೀಜಸಹಿತ ನುಂಗುತ್ತಾರೆ. ಬೀಜವೇ ಇಲ್ಲದಾಗ ಮತ್ತೆ ಹುಟ್ಟುವುದು ಅಸಂಭವ. ಎಂದರೆ ಆ ಭಕ್ತನಿಗೆ  ಪುನರ್ಜನ್ಮವಿಲ್ಲವಾಗುತ್ತದೆ, ಎಂದರ್ಥ.  ಅಂತಹ ಭಕ್ತನು ಹುಟ್ಟುಸಾವುಗಳನ್ನು ಮೀರುತ್ತಾನೆ. “ತಾನು”  “ತನ್ನದು” ಎಂಬ ಭಾವವಿಲ್ಲದವನಿಗೆ ಸಾವೆಲ್ಲಿಯದು? ಹುಟ್ಟೆಲ್ಲಿಯದು. ಅಲ್ಲಿ ಸಾಯುವುದೇನು? ಹುಟ್ಟುವುದೇನು? “ತಾನು”  “ತನ್ನದು” ಎಂಬ ಭಾವವಿದ್ದಾಗ ಮಾತ್ರ ನೋವುವುಂಟಾಗುವುದು. ಯಾರಾದರೂ ಬೈದರೆ, ಚುಚ್ಚಿ ನುಡಿದರೆ ನೋವುವುಂಟಾಗುತ್ತದೆ, ಹೊಗಳಿದಾಗ ಸಂತೋಷವಾಗುತ್ತದೆ. ಆದರೆ ಅಹಂಕಾರವಿಲ್ಲದಾಗ ಆ ನೋವಿನ ಅಥವಾ ಕ್ಷಣಿಕ ಸುಖದ ಅನುಭವಕ್ಕೆ ಎಡೆಯೇ ಇರುವುದಿಲ್ಲ. ತಾನು ಬೇರೆ, ಎನ್ನುವ ಭಾವವೇ ಸಾವಿಗೆ ಮೂಲ. ಅಹಂಕಾರ ಕೊನೆಗೊಂಡಾಗ ತಾನು ಬೇರೆ ಎಂಬ ಭಾವವಿರುವುದಿಲ್ಲ. ಹಾಗಾಗಿ ಹುಟ್ಟು ಸಾವುಗಳು ಇರುವದಿಲ್ಲ. ಹೀಗಾಗಿ ಆತನಿಗೆ ಇನ್ನಾವ ಭಯವೂ ಇಲ್ಲ.



Friday, July 11, 2014

Vachana 202: Ivanaarava, Ivanaarava – Whose is he? Whose is he?


VACHANA IN KANNADA

ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.

TRANSLITERATION

ivanArava ivanArava ivanArava eMdenisadirayyA
iva nammava, iva nammava, iva nammavaneMdenisayyA,
KUdalasaMgamadEvA nimma maneya maganeMdenisayyA.

CLICK HERE FOR A RECITATION


TRANSLATION (WORDS)

ivanArava (Whose is he) ivanArava (Whose is he) ivanArava(Whose is he) eMdenisadirayyA (do not say, consider)
iva nammava (he is ours), iva nammava(he is ours), iva nammavan(he is ours) eMdenisayyA (please say, consider),
KUdalasaMgamadEvA nimma(your) maneya(home’s) magan (son) eMdenisayyA (consider).

VACHANA IN ENGLISH

Oh Lord, please do not say 'whose is he, whose is he, whose is he?'
Please say 'he is ours, he is ours, he is ours!'
Oh Lord Kudalasangama, consider me a
son of your own house!


COMMENTARY

This popular Vachana by Basavanna perhaps represents the core of principles for living that Basavanna and his contemporary Sharanas preached and practiced.

This Vachana shows the constant effort and vigilance by Basavanna of his own state as a true Sharana (Devotee). He seems to be requesting his contemporary Sharanas to not doubt his steadfast devotion saying ‘whose is he?’ He is longing to remain a member of that group. He wanted to practice Sharana principle in leading his life and he felt his effort was not enough. It is important to understand what sharnas stood for. Some of the characteristics of sharana are "Living in this Mundane world yet not consumed by it, understanding the relationship between knowledge and actions and use that awareness to lead their life, ...even after achieving the 'awareness' of the divine not loose touch with life in this world". He is also requesting Lord Kudalasangama to consider him to be a son of His house. Being a son of Lord’s house implies being as close to Him as one could be. That is becoming one with the Lord, the ultimate aim of all Sharanas.

Basavanna was considered a foremost devotee, a storehouse of devotion (Bhakti Bhandari). Yet, he always felt that he can do more in terms of being a devotee. His humility is evidenced by his popular Vachana “no one is inferior to me, no one is superior to Sharanas (Enagintha kiriyarilla, Shivabhaktarigintha hiriyarilla...)…………….

The message of this Vachana is pertinent to our lives today, as it was for the eleventh century. We all long to belong to one elite group or the other. We are always proud that we belong to this elite group. We tend to look at others who might be different from us and do not belong to the group as inferiors. We often compare ourselves with others to say that we are the only deserved ones not the others. This Vachana is asking us to examine ourselves and constrain our ego in terms of how we look at others. We should be careful in tagging others as ‘whose is he/she?’ We should look at everyone with our compassionate eyes. Everyone would be born as a loving child of someone, providing spouse of someone, loving parent of someone, a valuable employee or employer of someone, just like us. Instead of questioning how deficient or different one is, let us keep the perspective of all of us being one and the same soul. Our mannerisms may be different, our behavior may be different, our capabilities may be different; but, we are all the same inherently. Every time we think of questioning as to whom does the other belong to, let us put ourselves in their shoes. Better yet, let us not spend time in judging others!

Let us consider them to be ours!

KANNADA COMMENTARY

ಬಸವಣ್ಣನವರ ಈ ವಚನ ಬಹಳ ಪ್ರಸಿದ್ಧವಾದದ್ದು. ಮೂರು ಸಾಲುಗಳ ಈ ವಚನವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು, ಇಲ್ಲಿ ಬರುವ “ಇವ” “ನಮ್ಮವ” ಎಂಬ ಪದಗಳು ಯಾರನ್ನು ಸೂಚಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಅವರ ನೂರಾರು ವಚನಗಳನ್ನು ಗಮನಿಸುವುದು ಮುಖ್ಯವಾಗುತ್ತದೆ. ಹಾಗೆ ಮಾಡಿದಾಗ ಈ ವಚನದಲ್ಲಿ ಇಡೀ ವೀರಶೈವ ಧರ್ಮದ ಸಾರವೇ ಅಡಕವಾಗಿದೆ ಎಂಬುದು ತಿಳಿಯುತ್ತದೆ.
ಸಮಾಜದಲ್ಲಿ ಒಬ್ಬ ವ್ಯಕ್ತಿಯ ನಡತೆ ಇತರರ ನಡತೆಗಿಂತ ಬೇರೆಯಾಗಿರುವಾಗ ನೋಡುವವರ ಮನಸ್ಸಿನಲ್ಲಿ “ಇವನು ಯಾರವನು, ಯಾರಿಗೆ ಸೇರಿದವನು, ಇವನ ನಡತೆ ಹೀಗೇಕಿದೆ” ಎಂಬ ಪ್ರಶ್ನೆಗಳು ಹುಟ್ಟುವುದು, “ಇವನು ಬೇರೆ, ನಮ್ಮಂತಲ್ಲ” ಎನಿಸುವುದು ಸಹಜ.  ತನ್ನನ್ನು ನೋಡುವವರ ಮನಸ್ಸಿನಲ್ಲಿ ತನ್ನ ಬಗ್ಗೆ ಇಂತಹ ಪ್ರಶ್ನೆಗಳು ಹುಟ್ಟದಿರಲಿ, ಅವರು ನನ್ನ ಬಗ್ಗೆ  ಅಸಹನೆ ಮತ್ತು ಜುಗುಪ್ಸೆಯಿಂದ ಹೀಗೆ ಕೇಳದಿರಲಿ, ನನ್ನನ್ನು ಬೇರೆಯವನು ಎನ್ನದಿರಲಿ ಎನ್ನುತ್ತಾರೆ ಬಸವಣ್ಣನವರು.
ಇಲ್ಲಿ ಭಿನ್ನ ನಡತೆ ಎಂದರೇನು? ಮತ್ತು  ಯಾರ ಮನಸ್ಸಿನಲ್ಲಿ ಈ ಪ್ರಶ್ನೆಗಳು ಹುಟ್ಟುತ್ತವೆ? ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನೋಡುವವರ ಸ್ವಭಾವಕ್ಕೆ ವಿರುದ್ಧವಾದ ನಡೆತೆಯೇ ಭಿನ್ನ ನಡತೆ. ಆದ್ದರಿಂದಲೆ ಆ ಭಿನ್ನ ನಡತೆ ಅವರನ್ನು “ಇವನಾರವ” ಎಂದು ಕೇಳುವಂತೆ ಮಾಡುತ್ತದೆ. ಹಾಗಾದರೆ ನೋಡುವವರು ಯಾರು?  “ಇವ ನಮ್ಮವ” ಎಂದು ಎನ್ನಬೇಕಾದವರಾರು?  
ಇಲ್ಲಿ “ನಮ್ಮವ” ಎಂದರೆ ಯಾರು? ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.  ಬಸವೇಶ್ವರರ  ಅನೇಕ ವಚನಗಳಲ್ಲಿ “ಎಮ್ಮವರು, ನಮ್ಮವರು” ಎಂಬ ಪದಗಳು  ಹಲವಾರು ಸಲ ಪ್ರಯುಕ್ತವಾಗಿವೆ. ಅಲ್ಲಿ ಈ ಶಬ್ದಗಳು “ಶರಣರು” ಎಂಬ  ಅರ್ಥದಲ್ಲಿ ಬಳಸಲಾಗಿರುವುದು ಅತ್ಯಂತ ಸ್ಪಷ್ಟ. ಇಲ್ಲಿಯೂ ಅವರು “ನಮ್ಮವ” ಎಂಬ ಪದ “ಶರಣ” ಎಂಬ ಅರ್ಥದಲ್ಲಿಯೇ ಬಳಸಿದ್ದಾರೆ. ಎಂದರೆ, “ಶರಣರು ನನ್ನನ್ನು ನೋಡಿ ಇವನು ಯಾರವ” ಎನ್ನದೆ “ಇವ ನಮ್ಮವ ಎನ್ನಲಿ” ಎಂಬುದು ಅವರ ಇಷ್ಟ.   
ಎಂದರೆ ತನ್ನ ನಡತೆ ಶರಣರ ನಡತೆಯ ಹಾಗೆ ಇರುವಂತೆ ಮಾಡು ಎಂದರ್ಥ.

ಶರಣರಂತೆ ಆಗುವುದು ಎಂದರೇನು? 
ಶರಣರ ಮುಖ್ಯವಾದ ಗುಣಗಳನ್ನು ಅತ್ಯಂತ ಸಂಕ್ಷಿಪ್ತವಾಗಿ -ಈ ಸಂಸಾರದಲ್ಲಿದ್ದರೂ ಅದರಲ್ಲಿ ಮುಳುದಗದಂತೆ  ಇರುವವನು,.................. ಆ ಪರತತ್ವದೊಂದಿಗೆ ಐಕ್ಯತೆಯನ್ನು ಸಹಜ ಸ್ಥಿತಿಯನ್ನಾಗಿ ಪಡೆದಿದ್ದರೂ ಲೌಕಿಕ  ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳದಿರುವವನು...... ಜ್ಞಾನ ಮತ್ತು ಕ್ರಿಯೆ ಇವುಗಳ ಪರಸ್ಪರ ಸಂಬಂಧವನ್ನು ಮನಗಂಡು ಅವುಗಳನ್ನು ನಿತ್ಯ ಜೀವನದಲ್ಲಿ ಅನುಷ್ಠಾನಕ್ಕೆ ತಂದು ಸಮಾಜ ಜೀವನವನ್ನು ಹಸನುಗೊಳಿಸುವ ಭವರೋಗವೈದ್ಯನು...............” ಎಂದು ಹೇಳಬಹುದು.
ಇದಕ್ಕೆ ಪ್ರತಿಯಾಗಿ ತನ್ನ ಇರವನ್ನು ಗಮನಿಸಿದಾಗ ಬಸವಣ್ಣನವರಿಗೆ ತಮ್ಮಲ್ಲಿ ಅಪಾರ ಕುಂದು ಕೊರತೆಗಳು ಕಂಡು ಬರುತ್ತವೆ  “ಸಂಸಾರ ಸಾಗರ ತೆರೆ ಕೊಬ್ಬಿ”, “ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯಾ” “ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ”, “ಅಂದಣವನೇರಿದ ಸೊಣಗನಂತೆ” ಇತ್ಯಾದಿ ವಚನಗಳಲ್ಲಿ ಅವರು ತಮ್ಮ, ಶರಣರಂತಲ್ಲದ ಮನಸ್ಸು ವರ್ತಿಸುವ ರೀತಿಯನ್ನು ಸಂಗಮನಾಥನಲ್ಲಿ ಕಳಕಳಿಯಿಂದ ನಿವೇದಿಸುತ್ತಾರೆ. ತಾನು ಸಂಸಾರ ಸಾಗರದಲ್ಲಿ ಮುಳುಗುತ್ತಿದ್ದೇನೆ, ನನ್ನ ಮನಸ್ಸು ಹುಳುಕಿನಿಂದ ತುಂಬಿದೆ, ನನ್ನ ನಡತೆಯೊಂದು ರೀತಿಯದಾಗಿದ್ದರೆ ನುಡಿಯೇ ಇನ್ನೊಂದು ರೀತಿಯದು. ಅಲ್ಲಿ ಯಾವ ಹೊಂದಾಣಿಕೆಯೂ ಇಲ್ಲ, ನಾನು ಜನರ ಮುಂದೆ ಒಳ್ಳೆಯವನಾಗಿ ತೋರುತ್ತೇನೆ ಆದರೆ ನನ್ನ ಮುನ್ನಿನ ಕೀಳು ಸ್ವಭಾವಗಳು ನನ್ನನ್ನು ಬಿಡುತ್ತಿಲ್ಲ ಎಂದು ಮುಂತಾಗಿ ಪರಿತಪಿಸುತ್ತಾರೆ.
ತನ್ನಲ್ಲಿ, ಸಜ್ಜನರಾದ ಶರಣರ ಗುಣಗಳು ಅಳವಡಲಿ, ಅದನ್ನು ಅವರು ನೋಡಿ “ಇವನಾರವ” ಎನ್ನದೆ  “ಇವ ನಮ್ಮವ, ಇವ ನಮ್ಮವ, ಇವ ನಮ್ಮವ” ಎನ್ನಲಿ ಎಂದು ಬಯಸುತ್ತಾರೆ. ಈ ಪದಗಳು ಮೂರು ಮೂರುಸಲ ಪ್ರಯುಕ್ತವಾಗಿ ಆ ಭಾವನೆಯ ತೀವ್ರತೆಯನ್ನು ವ್ಯಕ್ತಗೊಳಿಸುತ್ತವೆ.



ಈ ವಚನದಲ್ಲಿ ಇನ್ನೂ ಒಂದು ಅರ್ಥವೂ ಅಡಗಿದೆ- ಈ ಜಗತ್ತಿನಲ್ಲಿರುವುದೆಲ್ಲವೂ ಕೂಡಲಸಂಗಮನ ಅಂಶವೇ. ಆದ್ದರಿಂದ ಮರವೆಯಿಂದ ನಾನು “ಇವನಾರವ” ಎಂದು ಯೋಚಿಸುವಂಎ ಮಾಡದಿರು. ಎಲ್ಲರೂ ನಮ್ಮವರೇ, ಎಲ್ಲರೂ ಕೂಡಲಸಂಗಮನ ಮನೆಯ ಮಕ್ಕಳೇ ಎಂದೆನಿಸು ಎಂದು.

Saturday, July 5, 2014

Vachana 201: Artitinda Maaduva Bhakti – The devotion with Love!

 VACHANA IN KANNADA

ಅರ್ತಿಯಿಂದ ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೊಳಗಾಯಿತ್ತು
ಸತ್ಯದಿಂದ ಮಾಡುವ ಭಕ್ತಿ  ಕರ್ತಾರನ ಕಮ್ಮಟಕ್ಕೆ ಹೊರಗಾಯಿತ್ತು
ಅರ್ತಿ ಲೌಕಿಕಕ್ಕೆ, ಸತ್ಯ ಪಾರಮಾರ್ಥಕ್ಕೆ.
ಉಭಯದ ಗೊತ್ತನರಿದು ಮಾಡುವ ಭಕ್ತಿ
ಈಶಾನ್ಯಮೂರ್ತಿ ಮಲ್ಲಿಕಾರ್ಜುನನಿಗರ್ಪಿತವಾಯಿತ್ತು.

TRANSLITERATION

artiyiMda maaDuva bhakti kartaarana kammaTakkoLagaayittu,
satyadiMd amaaDuva bhakti kartaarana kammaTakke horagaayittu
arti loukikakke, satya paaramaarthakke.
ubhayada gottanaridu maaDuva bhakti
IshaanyamUrti mallikaarjunanigarpitavaayittu.

CLICK HERE FOR A RECITATION


TRANSLATION (WORDS)

artiyiMda (with love) maaDuva bhakti (devotion) kartaarana kammaTakkoLagaayittu (belongs to creatore’s world, is worldly),
satyadiMd amaaDuva bhakti (devotion with truth) kartaarana kammaTakke horagaayittu (doesnot belong to creators world, which is out of this world)
arti loukikakke (love is temporal) , satya paaramaarthakke (truth is non temporal).
ubhayada (of both)  gottanaridu (knowing what are the places) maaDuva bhakti (devotion)
IshaanyamUrti mallikaarjunanigarpitavaayittu. (is accepted by Ishanyamurti Mallikaarjuna)

VACHANA IN ENGLISH

The devotion made with love belongs to the creator’s world (worldly)
The devotion made with truth does not belong to the creator’s world (out of this world)
Love is temporal, Truth is non temporal.
Devotion made knowing the place of both is accepted by
Ishanyamurti Mallikaarjuna.

COMMENTARY

This Vachana is from Shivalenka Manchanna.  He was the teacher of Urilingidevaru and was a great orator.  Ishanyamurti Mallikaarjuna was his signature.
In this Vachana, Manchanna  tries to distinguish between the two prominent forms of devotion and urges that a combination of the two would be a better way!
The first form of devotion is inspired by love of the fruits of devotion. There is an expectation that this devotion brings materialistic fruits and comforts. As such, this form is suitable for temporal aspects. The second form of devotion is based on truth. The devotee is not aspiring for any material aspects. He is completely above it. But, such devotion is not practical from the point of view of living here. What is ideal, is a combination of the two forms or modes. One should be here, but detached from here.  Manchanna is emphasizing the sharana concept of being fully in the mundane world with an appropriate level of detachment.

Let our devotion be based on love and truth!

KANNADA COMMENTARY
ಅರ್ಥ:
ಅರ್ತಿಯಿಂದ (ಪ್ರೀತಿಯಿಂದ) ಮಾಡುವ ಭಕ್ತಿ ಕರ್ತಾರನ(ಬ್ರಹ್ಮನ, ಸೃಷ್ಟಿ ಕರ್ತನ)  ಕಮ್ಮಟಕ್ಕೊಳಗಾಯಿತ್ತು (ಕಾರ್ಯಾಗಾರಕ್ಕೆ ಒಳಗಾಯಿತು.)
ಸತ್ಯದಿಂದ (ನಿಜವಾಗಿ) ಮಾಡುವ ಭಕ್ತಿ  ಕರ್ತಾರನ ಕಮ್ಮಟಕ್ಕೆ ಹೊರಗಾಯಿತ್ತು
ಅರ್ತಿ ಲೌಕಿಕಕ್ಕೆ, ಸತ್ಯ ಪಾರಮಾರ್ಥಕ್ಕೆ.
ಉಭಯದ ಗೊತ್ತನರಿದು (ಎರಡರ ಸ್ಥಾನಗಳನ್ನು ಅರಿತು) ಮಾಡುವ ಭಕ್ತಿ
ಈಶಾನ್ಯಮೂರ್ತಿ ಮಲ್ಲಿಕಾರ್ಜುನನಿಗರ್ಪಿತವಾಯಿತ್ತು.


ತಾತ್ಪರ್ಯ:

ಶಿವಲೆಂಕ ಮಂಚಣ್ಣ
ಶಿವಲೆಂಕ ಮಂಚಣ್ಣ ಉರಿಲಿಂಗಿದೇವರ ಗುರುಗಳಾಗಿದ್ದರು. ಇವರು ಪಂಡಿತ ವಂಶದವರು. ಶಿವನ ಗುಣಗಳನ್ನು ಸಾರುತ್ತ ವಾದದಲ್ಲಿ ಇತರರನ್ನು ಸೋಲಿಸುತ್ತ ಸಂಚರಿಸುತ್ತಿದ್ದರು.  ಅನೇಕ ವೀರಶೈವ ಪುರಾಣಗಳಲ್ಲಿ ಇವರ ಉಲ್ಲೇಖ ಬರುತ್ತದೆ.  ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದು ಇವರ ವಚನಾಂಕಿತ.

ಇದು ಶಿವಲೆಂಕಮಂಚಣ್ಣನವರ ವಚನ, ಇಲ್ಲಿ ಅವರು ಎಂತಹ ಭಕ್ತಿ  ಮಲ್ಲಿಕಾರ್ಜುನನಿಗೆ ಪ್ರಿಯವಾಗುತ್ತದೆ ಎಂಬುದನ್ನು ಹೇಳುತಿದ್ದಾರೆ.
ಪ್ರೀತಿಯಿಂದ ಮಾಡುವ ಭಕ್ತಿ ಕರ್ತಾರನ ಕಮ್ಮಟಕ್ಕೆ ಒಳಗು ಎಂದು. ಅಂದರೆ ಅದು ಈ ಲೋಕಕ್ಕೆ ಸಲ್ಲುತ್ತದೆ. ಎಂದರೆ ಭಕ್ತಿ ಮಾಡಬೇಕು ಎಂದುಕೊಂಡು ಮಾಡುವ  ಭಕ್ತಿ, ಕೃತಕವಾಗಿರುತ್ತದೆ. ಭಕ್ತಿಯ ಬಗ್ಗೆ ಪ್ರೀತಿ ಎಂಬುದು ಕೃತಕ. ನಿಜವಾದ ಭಕ್ತಿಯನ್ನು ಅರಿಯದೆ, ಅದರ ಫಲಗಳನ್ನು ಮಾತ್ರ ಊಹಿಸಿ ಭಕ್ತಿಯ ಬಗ್ಗೆ ಪ್ರೀತಿಹೊಂದುವುದು ನಿಜವಾದ ಭಕ್ತಿಯಲ್ಲ. ಅಂತಹ ಭಕ್ತಿ ಈ ಲೋಕದ  ಸ್ವಭಾವಕ್ಕೆ ಸರಿಯಾದದ್ದು.
ಸತ್ಯದಿಂದ ಮಾಡುವ ಭಕ್ತಿ ಬೇರೆ. ಅದು ಈ ಲೋಕಕ್ಕೆ ಸೇರಿರುವುದಿಲ್ಲ. ಅಂದರೆ ಅದು ಈ ಲೋಕದಿಂದ ಬೇರೆಯಾಗಿ ಪಾರಮಾರ್ಥಕ್ಕೆ ಸೇರಿದುದು. ಈ  ಲೋಕವು ಸತ್ಯವಲ್ಲ, ಅದು ಕೇವಲ ಮಾಯೆ ಎಂದು ಅದನ್ನು ತಿರಸ್ಕರಿಸಿ  ಅದರಿಂದ ದೂರವಾಗಿರುವಂತಹದ್ದು. ಈ ಎರಡೂ ರೀತಿಯ ಭಕ್ತಿಗಳು ಮಲ್ಲಿಕಾರ್ಜುನನಿಗೆ ಪ್ರಿಯವಲ್ಲ.

ಎಂದರೆ ಈ ವಚನದ ಮೂಲಕ  ಲೆಂಕಣ್ಣನವರು ಈ ಲೋಕಕ್ಕೇ  ಅಂಟಿಕೊಂಡು ಇರುವುದೂ, ಅಥವಾ ಕೇವಲ ಪಾರಮಾರ್ಥದ ಬಗ್ಗೆ ಆಸ್ಥೆ ಹೊಂದಿರುವುದೂ ಎರಡು ಸರಿಯಲ್ಲ ಎಂಬ ಭಾವ ವ್ಯಕ್ತಗೊಳಿಸುತ್ತಿದ್ದಾರೆ.
.
ಪ್ರೀತಿ ಈ ಲೋಕಕ್ಕೆ ಸರಿಹೊಂದುವಂತಹದ್ದು. ಇಲ್ಲಿ ಎಲ್ಲವೂ ಲೆಕ್ಕಾಚಾರದ ನಡತೆ,  ಫಲದ ಆಸೆಯಿಂದ ಪ್ರೇರಿತವಾದದ್ದು.
ಆದ್ದರಿಂದ  ಅದು ಲೌಕಿಕ. ಮತ್ತು ಸತ್ಯದಿಂದ ಮಾಡುವ ಭಕ್ತಿಯಲ್ಲಿ ಈ ಲೋಕಕ್ಕೆ ಬೆಲೆಯಿಲ್ಲ. ಅದು ಪಾರಮಾರ್ಥಕ್ಕೆ ಅಡ್ಡಿಯಾಗುತ್ತದೆ ಎಂದು ಅದನ್ನು ದೂರಮಾಡಿ ಕೇವಲ ಪಾರಮಾರ್ಥದ  ಆಸೆಯಲ್ಲಿ ಬದುಕುವುದು ಕೂಡ ಸರಿಯಲ್ಲ. ಏಕೆಂದರೆ ಅದು ಈ ಲೋಕದಿಂದ ದೂರವಾದದ್ದು.
 ಈ ಎರಡೂ ರೀತಿಗಳನ್ನುಳಿದು ಇನ್ನೂ ಒಂದು ರೀತಿಯಿದೆ. ಅದೇ  ಎರಡಕ್ಕೂ ಅದರದರ ಸ್ಥಾನ ಕೊಡುವುದು.

ಈ ಲೋಕ ಮತ್ತು ಪಾರಮಾರ್ಥದ ನಿಜವಾದ ಸ್ಥಾನಗಳನ್ನು ಅರಿತು ಅವುಗಳನ್ನು ಆಯಾ ಸ್ಥಾನದಲ್ಲಿರಿಸಿ ಮಾಡುವ ಸಹಜ ಭಕ್ತಿಯು ಮಲ್ಲಿಕಾರ್ಜುನನಿಗೆ ಪ್ರಿಯವಾಗುತ್ತದೆ ಎನ್ನುತ್ತಾರೆ ಲೆಂಕಣ್ಣನವರು.