Friday, June 27, 2014

Vachana 200: Aava Kaayakavaadadu – No Matter What the job is!

VACHANA IN KANNADA

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ
?

TRANSLITERATION

aava kaayakavaadaDU svakaayakava maaDi
guru liMga jaMgamada muMdiTTu,
okkuda haaraisi, mikkuda kaikoMDu
vyaadhi baMdare naraLu, bEne baMdare oralu,
jIva hOdaDe saayi, idakkaa dEvara haMgEke, bhaapu laddeya sOma?

CLICK HERE FOR A RECITATION


TRANSLATION (WORDS)

aava kaayakavaadaDU ( which ever job)  svakaayakava maaDi (doing your job)
guru liMga jaMgamada muMdiTTu,(offering to the teacher, liMga and the jamgama)
okkuda haaraisi,(expect only that is worth)  mikkuda kaikoMDu (take only what is left)
vyaadhi baMdare naraLu (if you have an ailment groan), bEne baMdare oralu (if you are in pain moan),
jIva hOdaDe saayi (if death comes die), idakkaa dEvara haMgEke (why live in the obligation of the God?), bhaapu laddeya sOma? (that is good Laddeya Soma)

VACHANA IN ENGLISH

Just perform your job, no matter which job it is,
Offer to the teacher, God and wandering ascetic,
Expect only that is worth, take only what is left,
Groan if you have an ailment, moan if you are in pain,
Die if death comes.
Why live in the obligation of (blame) the God, for these, Laddeya Soma?

COMMENTARY

This Vachana is from Laddeya Somanna. His signature is ‘Laddeya Soma’. He is from the village of Laada in Raichur District of Karnataka. He has been referenced in Chennabasava Purana and Mahalinga Leele. His statue is in Madhukeswara temple in Banavasi. Only this Vachana from his has been found.

This Vachana stresses the concepts of Kaayaka (unselfish, full minded duty) and Daasoha (Sharing).  No matter what the job is one must perform it with utmost sincerity, giving 100% to it. One should expect only what is right from that work and not become greedy of the fruits of that work. The fruits of this work are to be offered to the teacher (Guru), God (Linga) and the wandering ascetics (Jangama) first and one should consume only what is left. Guru initiates the awareness and knowledge needed to understand Linga (God, The energy/Chaitanya behind this universe). Jangama, once understanding God, spends his life unselfishly spreading that knowledge to community. Offering to these three is simply returning what one got from God, back to Him. Understanding the importance of these three concepts takes an individual away and beyond the mundane world. This awareness along with determination to perform one's duties with utmost sincerity helps one to face  in stride any ailment, pain and even death, without being in the obligation of (blaming) God.

Essentially, this Vachana is asking us to do our duties honestly, share the most with the community, live with the least and do not complain about the ailment and pain, rather face them with the utmost strength without resorting to blaming the God for these.

Let us work, share and not blame!


KANNADA COMMENTARY

ಅರ್ಥ:

ಆವ ಕಾಯಕವಾದಡೂ (ಯಾವುದೇ ಕಾಯಕವಾದರೂ) ಸ್ವಕಾಯಕವ ಮಾಡಿ (ನಿನ್ನ ಪಾಲಿಗೆ ಬಂದ ಕಾಯಕವನ್ನು ಮಾಡಿ)
ಗುರು ಲಿಂಗ ಜಂಗಮದ ಮುಂದಿಟ್ಟು (ಗುರು, ಲಿಂಗ, ಜಂಗಮರಿಗೆ ಅರ್ಪಿಸಿ),
ಒಕ್ಕುದ ಹಾರೈಸಿ (ನ್ಯಾಯವಾದದ್ದನ್ನು ಮಾತ್ರ ಆಶಿಸಿ), ಮಿಕ್ಕುದ ಕೈಕೊಂಡು (ಉಳಿದದ್ದನ್ನು ಗ್ರಹಿಸು)
ವ್ಯಾಧಿ ಬಂದಡೆ ನರಳು(ಕಾಹಿಲೆಯಾದರೆ ನರಳು), ಬೇನೆ ಬಂದಡೆ ಒರಲು (ನೋವಾದರೆ ನೋವಿನಿಂದ ಕಿರುಚು),
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?

ತಾತ್ಪರ್ಯ:   
                            
ಇದು ಲದ್ದೆಯ ಸೋಮಣ್ಣನವರ ವಚನ. “ಲದ್ದೆಯ ಸೋಮ” ಎಂಬುದು ಇವರ ಅಂಕಿತ. ಇವರು ರಾಯಚೂರಿನ ಲಾಧಾ ಗ್ರಾಮದವರು ಎಂಬುದು ತಿಳಿದು ಬರುತ್ತದೆ. ಚೆನ್ನಬಸವ ಪುರಾಣ ಮತ್ತು ಮಹಲಿಂಗಲೀಲೆಯಲ್ಲಿ ಇವರ ಉಲ್ಲೇಖವಿದೆ. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಇವರ ವಿಗ್ರಹವಿದೆ.ಇವರ ಈ ಒಂದೇ ವಚನ ಲಭ್ಯವಾಗಿದೆ. ಈ ವಚನದಲ್ಲಿ ಅವರು ಕಾಯಕದ ಮಹತ್ವವನ್ನು ಹೇಳುತ್ತಿದ್ದಾರೆ.

ತಮ್ಮ ಕಷ್ಟ ಮತ್ತು ತೊಂದರೆಗಳಿಂದ  ಕೊರಗುತ್ತ  ಸುಖಕ್ಕಾಗಿ ದೇವರನ್ನು ಯಾಚಿಸುವ ಜನರನ್ನು ನೋಡಿ ಈ ಮಾತನ್ನು ಹೇಳುತ್ತಿರುವಂತೆ ಕಾಣುತ್ತದೆ. ಈ ರೀತಿಯಾಗಿ ದೇವರ ಹಂಗಿಗಾಗಿ ಕಾಯುವ ಅವಶ್ಯಕತೆಯಿಲ್ಲ.  ನಿನ್ನ ಕೆಲಸ ನೀನು ನಿಷ್ಹೆಯಿಂದ ಮಾಡಿದರೆ ಇನ್ನಾವುದರ ಅವಶ್ಯಕತೆಯೂ ಇರುವುದಿಲ್ಲ ಎನ್ನುತ್ತಾರೆ,
ಯಾವುದೇ ಕಾಯಕವಾದರೂ ಸರಿಯೆ ನಿನ್ನ ಪಾಲಿಗೆ ಬಂದ ಕಾಯಕವನ್ನು ನಿಷ್ಠೆಯಿಂದ ಮಾಡು. ಆ ನಿಷ್ಹೆಯೇ ನಿನಗೆ ಅಪಾರವಾದ ಧೈರ್ಯ ಕೊಡುತ್ತದೆ. ಅದರಿಂದ ಬರುವುದಷ್ಟನ್ನು ಮಾತ್ರ ಹಾರೈಸು. ಅದಕ್ಕಿಂತ ಹೆಚ್ಚಿನದನ್ನು ಆಶಿಸಬೇಡ. ಮತ್ತು ಬಂದದ್ದನ್ನು ಶ್ರದ್ಧೆಯಿಂದ ಗುರು ಲಿಂಗ ಜಂಗಮರಿಗೆ ಅರ್ಪಿಸು ಎನ್ನುತ್ತಾರೆ. 

ಗುರು ಲಿಂಗ ಜಂಗಮರಿಗೆ ಅರ್ಪಿಸುವುದರಿಂದ ಏನಾಗುತ್ತದೆ?  ಎಂಬ ಪ್ರಶ್ನೆ ಹುಟ್ಟಬಹುದು.  ಅಜ್ಞಾನದಲ್ಲಿ ಮುಳುಗಿ ಬದುಕಿನ ತೊಳಲಾಟಗಳಲ್ಲಿ  ಹೊಯ್ದಾಡುತ್ತಿರುವ ವ್ಯಕ್ತಿಗೆ  ಗುರುವು  ಉತ್ತಮ ಜೀವನದ ದಾರಿ ತೋರುವ ಮಹಾನ ಬೆಳಕು, ಲಿಂಗವೆಂದರೆ  ಇಡೀ ವಿಶ್ವದ ಹಿಂದಿರುವ ಮಹಾಚೈತನ್ಯ,(ಮತ್ತು ಅದರ ಅಂಶವಾದ ಈ ಲೋಕದ ಚೈತನ್ಯ) ಮತ್ತು ಜಂಗಮವೆಂದರೆ ವಿರಕ್ತನಾಗಿ ಲೋಕದ ಉದ್ಧಾರವನ್ನು ಕೈಗೊಂಡ ಮಹಾ ಪ್ರಜ್ಞಾವಂತ. ಈ ಮೂರು ಶಕ್ತಿಗಳ ಮಹತ್ವವನ್ನು ಅರಿಯುವುದು ಎಂದರೆ ಸ್ವಾರ್ಥವನ್ನು ಮೀರಿ ಪರದಲ್ಲಿ ಆಸಕ್ತಿ ಇರುವುದೆಂದೇ ಅರ್ಥ. ನಿಷ್ಟೆಯಿಂದ ಕಾಯಕ ಮಾಡಿ ನ್ಯಾಯವಾದದ್ದನ್ನು ಮಾತ್ರ ಹಾರೈಸಿ, ಈ ಮೂರು ಶಕ್ತಿಗಳಿಗೆ ಅರ್ಪಿಸಿ ಉಳಿದದ್ದನ್ನು ತಾನು ಸ್ವೀಕರಿಸುವುದು ಎಂದು ಹೇಳುತ್ತಾರೆ.  ಸ್ವಾರ್ಥವನ್ನು ಮೀರಿ ಈ ಮೂರು ಮಹಾ ಶಕ್ತಿಗಳನ್ನು ಅರಿತು ಅವುಗಳಿಗಾಗಿ ತಾನು ನಿಷ್ಹೆಯಿಂದ ಕಾಯಕ ಮಾಡುವುದು ಬದುಕಿನ ಪರಮ ಉದ್ದೇಶವಾಗಿದ್ದರೆ ಆ ವ್ಯಕ್ತಿಗೆ ಬೇರೆ ಎನೂ ಬಾಧಿಸವು. ಎಂದರೆ ಆತನು ಆ ಬಾಧೆಗಳನ್ನು ಬಾಧೆಗಳೆಂದು ಪರಿಗಣಿಸುವುದಿಲ್ಲ. ಹಾಗೂ ಏನಾದರೂ ಆದರೆ ಏನೂ ಮಾಡಲಾಗದು. ಕಾಯಿಲೆ ಬಂದರೆ  ನರಳಬೇಕು. ನೋವಾದರೆ ಕಿರುಚಬೇಕು, ಸಾವು ಬಂದರೆ ಸಾಯಬೇಕು. ಅಷ್ಟೇ. ಅದಕ್ಕೆ ಹೆದರುವುದು ಏಕೆ?  “ಬರುವುದನ್ನು ನೀನು ತಡೆ” ಎಂದು ದೇವರನ್ನು ಪ್ರಾರ್ಥಿಸುತ್ತ ಕುಳಿತಿರುವುದು ಸಲ್ಲ ಎನ್ನುತ್ತಾರೆ ಲದ್ದೆಯ ಸೋಮಣ್ಣನವರು.

Saturday, June 21, 2014

Vachana 199: Taanillade Taa Maaduva Sahajanu – The one without ‘I’

VACHANA IN KANNADA
ತಾನಿಲ್ಲದೆ ತಾ ಮಾಡುವ ಸಹಜನು
ತಾನಿಲ್ಲದೆ ತಾ ನೀಡುವ ಸಹಜನು
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು
ಏನೊಂದರ ಹಮ್ಮಿಲ್ಲದ ಸುಜ್ಞಾನಿಯನು
ಮಾಟದ ಕೂಟದ ಸ್ಥಳದೊಳು ಕೂಡಿಹ
ಕೂಡಲಸಂಗಮದೇವನನೇನೆಂದುಪಮಿಸುವೆನು?
TRANSLITERATION
taanillade taa maaDuva sahajanu
taanillade taa nIDuva sahajanu
taa bErillade beresiha nijapadadoLu
EnoMdara hammillada suj~jaaniyanu
maaTada kUTada sthaLadoLu kUDiha
kUDalasaMgamadEvananEneMdupamisuvenu?

CLICK HERE FOR A RECITATION


TRANSLATION (WORDS)

taanillade (without the self) taa (one self)  maaDuva  (doing ) sahajanu (natural self)
taanillade (without the self) taa  (one self) nIDuva (giving) sahajanu(natural self)
taa(one self)  bErillade (not seperating)  beresiha (has become one)  nijapadadoLu (with the natural self)
EnoMdara (of anything)  hammillada (not being proud) suj~jaaniyanu (wise?person who is)
maaTada ( of action) kUTada (of unification)  sthaLadoLu kUDiha  (become one in the place of)
kUDalasaMgamadEvananEneMdupamisuvenu? (whom  shall I compare him with.)

VACHANA IN ENGLISH

The one who does without self (‘I’)
The one who gives without self
The one who has become one with the natural self
The wise one who is not proud of anything
Whom shall I compare that one with, who has unified in action with
Lord Kudalasangama!

COMMENTARY

Basavanna gives a concrete description of the individual who has become one with Lord Kudalasangama in this simple Vachana. Such individual’s behavior would be completely different from common men. He will not have even the smallest tinge of ‘I’ (ego, selfishness) in him. He is never selfish in what all he does. Even when he does everything, he never feels that he did anything. He gives, but never feels that he gave. He is not inactive. He participates fully in all aspects of the life. But, he is never attached to anything he does. He has conquered his ego. Such is the individual who has become one with the Divine. He is the Divine.  
We are all animals of our experiences. These experiences, relations and actions change us from our true natural selves. They bring in the I-ness or ego into us. Becoming one with the divine is the state of being completely out of ‘ego’. It is the state of ‘being’ and not ‘doing’.  Basavanna says that such an egoless individual is the Lord and cannot be compared with any one else!

Let us remove the ‘I’ from us!

KANNADA COMMENTARY

ಅರ್ಥ:
ತಾನಿಲ್ಲದೆ ತಾ ಮಾಡುವ ಸಹಜನು (ತಾನು ಇಲ್ಲದೆ ಸಹಜವಾಗಿ ಮಾಡುವವನು)
ತಾನಿಲ್ಲದೆ ತಾ ನೀಡುವ ಸಹಜನು ( ತಾನು ಇಲ್ಲದೆ ಸಹಜವಾಗಿ ನೀಡುವವನು)
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು ( ತನ್ನಲ್ಲಿ ತಾನು ಬೇರೆಯಾಗಿರದೆ)
ಏನೊಂದರ ಹಮ್ಮಿಲ್ಲದ ಸುಜ್ಞಾನಿಯನು (ಯಾವುದರದ್ದೂ ಅಹಂಕಾರವಿಲ್ಲದೆ)
ಮಾಟದ ಕೂಟದ ಸ್ಥಳದೊಳು ಕೂಡಿಹ  (ಮಾಡುವುದರಲ್ಲಿ ಕೂಡಿರುವ ಕಡೆ ಇರುವ)
ಕೂಡಲಸಂಗಮದೇವನನೇನೆಂದುಪಮಿಸುವೆನು? (ಕೂಡಲ ಸಂಗಮನನ್ನು ಯಾವ ರೀತಿಯಾಗಿ ತಿಳಿಸಲಿ?)

ಕೂಡಲಸಂಗಮ ಎಲ್ಲಿರುತ್ತಾನೆ ಮತ್ತು ಹೇಗಿರುತ್ತಾನೆ ಎಂಬುದನ್ನು ಈ ವಚನದಲ್ಲಿ ಸೂಚಿಸುತ್ತಿದ್ದಾರೆ ಬಸವಣ್ಣನವರು.
ಸುಜ್ಞಾನಿಯಾದವನ ನಡತೆ ಸಾಮಾನ್ಯರಿಗಿಂತ ಬೇರೆಯಾಗಿರುತ್ತದೆ. ಆತನು ಮಾಡುವ ಎಲ್ಲದರಲ್ಲಿ ಸ್ವಾರ್ಥ ಇರುವುದಿಲ್ಲ.  “ನಾನು”  “ತಾನು” ಎನ್ನುವ ಭಾವಕ್ಕೆ ಅಲ್ಲಿ ಎಡೆಯಿರುವುದಿಲ್ಲ. ತಾನೇ ಎಲ್ಲವನ್ನು ಮಾಡಿದರೂ  ಆ ಕೆಲಸದಲ್ಲಿ “ತಾನು” ಇರುವುದಿಲ್ಲ. ತಾನೇ ಇತರರಿಗೆ ಏನೇ ಕೊಟ್ಟರೂ “ನಾನು ಕೊಟ್ಟೆ” ಎಂಬ ಭಾವವಿರುವುದಿಲ್ಲ.
ಏನು ಈ “ನಾನು”  “ತಾನು”  ಎನ್ನುವುದು?  “ನಾನು” ಎನ್ನುವುದು ಕೇವಲ ಕಲ್ಪನೆ. ಅದು ಹಳೆಯ ವಿಚಾರ.  ಅದರಲ್ಲಿ ಸತ್ಯವೆಂಬುದೇ ಇಲ್ಲ, ಅದು, ತಾಯಿ ತಂದೆಯರ, ಸಮಾಜದ ಮತ್ತು ತಾನೇ ಕಲ್ಪಿಸಿಕೊಂಡ ವಿಚಾರಗಳಿಂದ ಹುಟ್ಟಿದುದು. ಕೇವಲ ಕಾಲ್ಪನಿಕ ವಿಚಾರಗಳ ಹೊರೆ ಅದು. ಆ ಹಳೆಯ ವಿಚಾರಗಳಿಗೆ  ಕಟ್ಟು ಬಿದ್ದು ನಾವು ನಮ್ಮ ಸಹಜತೆಯನ್ನೇ ಮರೆತು ಬಿಟ್ಟಿದ್ದೇವೆ. ಆ ಹೊರೆಯನ್ನು ಕಳಚಿಕೊಂಡು ಯಾರು ಸಹಜರಾಗಿರುತ್ತಾರೆಯೋ ಅವರೇ ಸುಜ್ಞಾನಿಗಳು. ಅಂತಹವರು ತಾವು ನೀಡುವದರಲ್ಲಿಯೂ “ತಾನು” ಅನ್ನು  ಬೆರೆಸುವುದಿಲ್ಲ. “ತಾ”ನಿಲ್ಲದೆ ಸಹಜವಾಗಿ ನೀಡುತ್ತಾರೆ. ಅವರ”ತಾನು” ಅವರ ನಿಜದಲ್ಲಿ ಬೇರೆಯಾಗದೆ ಬೆರೆತು ಹೋಗಿರುತ್ತದೆ. ಅಂದರೆ ಅಲ್ಲಿ ಅಹಂಕಾರಕ್ಕೆ ಸ್ಥಾನವೇ ಇರುವುದಿಲ್ಲ. ಅವರ ಈ ಕೂಟದಲ್ಲಿಯೇ ಕೂಡಲ ಸಂಗಮನಿರುವನೆಂದು ಬಸವಣ್ಣನವರು ಹೇಳುತ್ತಾರೆ. ಆ ಸ್ಥಿತಿಯನ್ನು ವರ್ಣಿಸುವುದು ಅಸಾಧ್ಯ. ಅದನ್ನು ನಾನು ಹೇಗೆ ತಿಳಿಸಲಿ ಎಂದು ಕೇಳುತ್ತಾರೆ ಬಸವಣ್ಣನವರು.

ನಡೆಯ ಚೆನ್ನ ನುಡಿದು ತೋರಿ
ನುಡಿಯ ಚೆನ್ನ ನಡೆದು ತೋರಿ
ಆ ನಡೆ ನುಡಿ ಎರಡರ ಚೆನ್ನ ಮೃಡ ನಿಮ್ಮೊಳಡಗಿಸಿ
ತಾವೆಡೆಯಿಲ್ಲದೆ ಪರಿಪೂರ್ಣರಾದವರ ಪಡುಗವ ಹೊರುವೆ, ಪಾದರಕ್ಷೆಯ ಹಿಡಿವೆ
ಎನಗಿದೆ ಮಾಟ ಬಯಸುವ ಬೇಟ
ಕೂಡಲಸಂಗಮದೇವಾ
ಇದು ನಿಮ್ಮ ಕೂಡುವ ಕೂಟ



Thursday, June 12, 2014

Vachana 198: Maneya Gandana Manevaarthe – The Behavior of the Household Lord!


VACHANA IN KANNADA

ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವಾ!
ಅಂಗವಿದ್ಯೆಯನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ,
ಕೈಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲದೊಳೆದಲ್ಲದೆ ಹೊಂದಲೀಯ,
ಇಂತೀ ಸರ್ವಾಂಗ ತಲೆದೊಳೆದ ಕಾರಣ,
ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ.

TRANSLITERATION

maneya gaMDana manevaarteyanEna hELuvenavvaa!
aMgavidyeyanolla,
kaMgaLoLgaNa kasava kaLedallade nODalIya,
kaiya toLedallade muTTalIya
kaaladoLedallade hoMdalIya,
iMtI sarvaaMga taledoLeda kaaraNa,
kUDalasaMgamadEvanenna kUDikoMDanavaa.

CLICK HERE FOR A RECITATION

TRANSLATION (WORDS)

maneya gaMDana (of my husband)  manevaarteyanEna (about the behavior)  hELuvenavvaa! (what shall I say mother! )
aMgavidyeyanolla, (does not like all the physical tricks)
kaMgaLoLgaNa (in the eyes) kasava (the dirt)  kaLedallade (unless get rid of) nODalIya (doesn’t allow to see him),
kaiya (hands) toLedallade (unless washed) muTTalIya (does not allow touching)
kaaladoLedallade (without washing feet)  hoMdalIya (he will not accept),
iMtI  (Thus) sarvaaMga (all my senses) taledoLeda (are washed)  kaaraNa (because),
kUDalasaMgamadEvanu (Lord kUDalasaMgama ) enna (me)  kUDikoMDanavaa.( accepted)

VACHANA IN ENGLISH

Mother, what can I say of the behavior of my household lord (husband)!
He does not like the sneaky ways of the body;
Unless I clean the dirt in my eyes, he does not let me see him;
Unless I wash my hand, he does not let me touch him;
Unless I wash my feet, He will not join me!
Now that I washed myself all over,
Lord Kudalasangama has accepted me!


COMMENTARY

In this Vachana, Basavanna stipulates the requirements for the merger of the devotee with divine. The ultimate goal of the spiritual path is the merger of the devotee and the Lord. The mantra ‘OM Namah Shivaaya” is considered as the humble request of the devotee to Lord asking Him “Oh Lord, let me merge with you!” Sharanas considered the relation between the Lord and the devotee a ‘holy matrimony’ in which the Sharana is the wife (Sathi) and the Lord is the husband (Pathi)  - “Sharana Sathi, Linga Pathi”.
Basavanna says that all the contortions of the physical body are not enough to attract the Lord to him. These physical movements are just the rituals that one goes through in the name of worship. The Lord does not let us see Him, unless we wash the dirt off of our eyes. Our eyes have exposed us to the experiences of the world, which have molded  our thinking and behavior. Our hands have touched the worldly materials and have become dirty. Our feet need to be washed off of all the dirt we have accumulated trotting through the materialistic  path. Essentially, our senses have contributed to what we are and how we behave. They have infected our minds with  the six passions (arishadvargas – kama, krodha, lobha, moha, mada, maatsarya). We must wash ourselves of these passions. We must be pure externally (bahiranga shuddhi) and we must be pure internally (antharanga shuddhi). Only then,  that the Lord will allow us to merge with Him.

Let us strive for Internal and External purity!

KANNADA COMMENTARY

ಅರ್ಥ:

ಮನೆಯ ಗಂಡನ ಮನೆವಾರ್ತೆಯನೇನ (ಮನೆಯಲ್ಲಿ ವ್ಯವಹರಿಸುವ ರೀತಿ) ಹೇಳುವೆನವ್ವಾ!
ಅಂಗವಿದ್ಯೆಯನೊಲ್ಲ, (ದೇಹದಿಂದ ಯಾಂತ್ರಿಕವಾಗಿ ಮಾಡುವ ತಂತ್ರಗಳು)
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ,
ಕೈಯ್ಯ ತೊಳೆದಲ್ಲದೆ ಮುಟ್ಟಲೀಯ,
 ಕಾಲದೊಳೆದಲ್ಲದೆ ಹೊಂದಲೀಯ,(ಸ್ವೀಕರಿಸನು, ಕೂಡಿಕೊಳ್ಳನು)
ಇಂತೀ ಸರ್ವಾಂಗ ತಲೆದೊಳೆದ ಕಾರಣ,(ಸರ್ವಾಂಗ ಶುದ್ಧವಾದ ಕಾರಣ)
ಕೂಡಲಸಂಗಮದೇವನೆನ್ನ ಕೂಡಿಕೊಂಡನವ್ವಾ.

ತಾತ್ಪರ್ಯ:

ಕೂಡಲ ಸಂಗಮನನ್ನು ಕೂಡಿಕೊಳ್ಳಲು ಏನೇನು ಮಾಡ ಬೇಕೆಂಬುದನ್ನು ಹೇಳುವಂತಹ ಬಸವಣ್ಣನವರ ವಚನವಿದು.
ಶರಣರೆಲ್ಲ ಆ ಪರತತ್ವವನ್ನು ಪತಿಯೆಂದು ಮತ್ತು ತಮ್ಮನ್ನು ಸತಿ ಭಾವಿಸಿರುವವರು, ಆತನನ್ನು ಕೂಡಿಕೊಳ್ಳಲು ಹಂಬಲಿಸುತ್ತಿವವರು. ಅಂತಹ ಗಂಡನು ತನ್ನೊಂದಿಗೆ ಹೇಗೆ ವ್ಯವಹರಿಸುತ್ತಾನೆ ಎಂಬುದನ್ನು ಬಸವಣ್ಣನವರು ಇಲ್ಲಿ ಹೇಳುತ್ತಿದ್ದಾರೆ.
ಆತನು, ಈ ಅಂಗಕ್ಕೆ ಮಹತ್ವ ಕೊಟ್ಟು   ಮಾಡುವ  ಬಾಹ್ಯ ಪೂಜೆಗಳನ್ನು, ಒಪ್ಪುವವನಲ್ಲ.  ನನ್ನ ಕಣ್ಣುಗಳಲ್ಲಿಯ ಕಸವನ್ನು ತೆಗೆಯದೆ ನಾನು ಆತನನ್ನು ನೋಡಲು ಬಿಡುವುದಿಲ್ಲ. ಕಾಲುಗಳನ್ನು ತೊಳೆದು ಶುದ್ಧವಾಗದ ಮುನ್ನ ನನ್ನನ್ನು ಸ್ವೀಕರಿಸುವುದಿಲ್ಲ.  ನಾನು ಸರ್ವಾಂಗ ಶುದ್ಧನಾದಾಗ ಮಾತ್ರ ಆತನು ನನ್ನನ್ನು ಕೂಡಿಕೊಂಡನು ಎಂದು ಹೇಳುತ್ತಾರೆ.

ಬಾಹ್ಯ ಪೂಜೆಗಳನ್ನು ಆತ ಒಪ್ಪುವವನಲ್ಲ.  ಈ ದೇಹದಿಂದ ಮಾಡುವ ಪೂಜೆಯ ಎಲ್ಲ ಕಾರ್ಯಗಳು ಯಾಂತ್ರಿಕವಾಗುತ್ತವೆ. ಅಂತಹುಗಳಿಗೆ ಆತ ಒಲಿಯುವುದಿಲ್ಲ.  ಕಣ್ಣಿನಲ್ಲಿರುವ ಕಸ ಎಂದರೆ  ಹಳೆಯ ನೆನಪುಗಳು, ನಮ್ಮ ದೃಷ್ಟಿಯನ್ನು ಪ್ರಭಾವಗೊಳಿಸುವ  ಇತರ ವಿಷಯಗಳು. ಅವುಗಳು ನಮ್ಮ ಕಾಣ್ಕೆಗೆ ಕಸವಾಗುತ್ತವೆ. ನಾವು ಯಾವುದರಿಂದ ಪ್ರಭಾವಿತರಾಗಿರುತ್ತೇವೆಯೋ ಅದು ಮಾತ್ರ ನಮಗೆ ಕಾಣುತ್ತದೆ.  ಈ ಕಸವನ್ನು ಕಳೆದುಕೊಂಡಲ್ಲದೆ ನಾವು ಆತನನ್ನು ನೋಡಲು ಸಾಧ್ಯವಿಲ್ಲ.  ಕಾಲುಗಳನ್ನು ತೊಳೆದಲ್ಲದೆ ಆತ ನಮ್ಮನ್ನು  ಸ್ವೀಕರಿಸುವುದಿಲ್ಲ. ಅಂದರೆ ನಮ್ಮ ನಡತೆ ಶುದ್ಧಗೊಂಡಲ್ಲದೆ  ಆತನು ನಮ್ಮನ್ನು ಒಪ್ಪುವುದಿಲ್ಲ. ಸ್ವಾರ್ಥ ಮತ್ತು ಅಹಂಕಾರದ ನಡತೆ ನಮ್ಮನ್ನು ಆತನಿಂದ ದೂರವಿಡುತ್ತದೆ. ಇದೇ ರೀತಿಯಾಗಿ ಸರ್ವಾಂಗವೆಲ್ಲವೂ ಶುದ್ಧಗೊಳ್ಳಬೇಕು. ನಮ್ಮಲ್ಲಿಯ ಅಶುದ್ಧತೆಯನ್ನು ಕಳೆದುಕೊಳ್ಳಬೇಕು. ಆಗಮಾತ್ರ ಕೂಡಲಸಂಗಮನು ನಮ್ಮನ್ನು ಒಪ್ಪಿಕೊಳ್ಳುತ್ತಾನೆ, ಎಂಬ ಭಾವ ಇಲ್ಲಿ ವ್ಯಕ್ತವಾಗುತ್ತದೆ.






Friday, June 6, 2014

Vachana 197: Aaneyanerikondu Hodire Neevu – You went away Strut on an Elephant!



VACHANA IN KANNADA

ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿ ಪೂಸಿಕೊಂಡು ಹೋದಿರೇ ಅಣ್ಣಾ!
ಸತ್ಯದ ನಿಲವನರಿಯದೆ ಹೋದಿರಲ್ಲಾ,
ಸದ್ಗುಣವೆಂಬ ಫಲವ ಬಿತ್ತದೆ  ಬೆಳೆಯದೆ ಹೋದಿರಲ್ಲಾ!
ಅಹಂಕಾರವೆಂಬ ಸದಮದಗಜವನೇರಿ, ವಿಧಿಗೆ ಗುರಿಯಾಗಿ ಹೋದಿರಲ್ಲಾ!
ನಮ್ಮ ಕೂಡಲ ಸಂಗಮದೇವನನರಿಯದೆ, ನರಕಕ್ಕೆ ಭಾಜನರಾದಿರಲ್ಲಾ!

TRANSLITERATION

aaneyanErikoMDu hOdirE nIvu
kudureyanErikoMDu hOdirE nIvu
kuMkuma kastUri  pUsikoMDu hOdirE aNNA!
satyada nilavanariyade hOdirallA,
sadguNaveMba phalava bittade hOdirallaa!
ahaMkaaraveMba  sadamadagajavanEri, vidhige guriyaagi hOdirallaa!
namma kUDalasamgamadEvananariyade, narakakke  bhaajanaraadirallA!

CLICK HERE FOR A RECITATION


TRANSLATION (WORDS)

aaneyanErikoMDu (mounting the elephant) hOdirE (went)  nIvu (you)
kudureyanErikoMDu  (mounting the horse) hOdirE (went)  nIvu (you)
kuMkuma (thing of beauty) kastUri (perfume) hUsikoMDu (smeared) hOdirE (went) aNNA! (Oh! brothers)
satyada  nilavanariyade (not knowing the truth)  hOdirallA, (Alas! went away)
sadguNaveMba (of virtue) phalava bittade (not sowing the seed) hOdirallaa!( Alas! went away)
ahaMkaaraveMba (of ego)  sadamadagajavanEri (mounting the elephanat)
vidhige guriyaagi hOdirallaa!(you became the toy of fate)
namma kUDalasamgamadEvanariyade (noy knowing our Kudalasangama)
narakakke  bhaajanaraadirallA! (you succumbed to the hell)


VACHANA IN ENGLISH

Brothers, you went away strut on an elephant,
you went away mounted on a horse,
you went away smeared with Kumkuma (Red saffron) and perfume.
Alas! you went away ignorant of the Truth!
Alas! as you went away not sowing the seed of Virtue!
Mounted on the intoxicated elephant of your gigantic ego,
you became the toy of the fate!
Not knowing our Lord Kudalasangama, you succumbed to the hell!

COMMENTARY

Basavanna comments on the state of the individual who has drowned in his materialistic world and has forgotten all about truth and virtue. He rides high on an elephant (proud of being at the top position or status), mounted on the horse (being the fastest around), and is smeared with saffron and perfume (wears best outfits and expensive jewelry and perfume). But, he does not even try to gather the meaning of Truth; he is completely ignorant of Truth. His gigantic ego tells him that he is at the top of the world and pushes him to become the toy of the fate. He is so involved in the ups and downs of the day that he never finds time or develops an inclination to move towards an equanimous state. The ups and downs kick him around. Basavanna concludes the Vachana saying that the only solution to prevent succumbing to hell is to know Lord Kudalasangama.  The message then is that no matter how high a position one achieves or how wealthy one gets, containment of ego is a must. Understanding the Truth, sowing and growing the fruit of Virtue and realizing Him (the Self) is the ultimate permanent bliss. Everything else is a road to hell!

Let us go after the truth to reduce our Ego!

KANNADA COMMENTARY

ಅರ್ಥ:

ಆನೆಯನೇರಿಕೊಂಡು ಹೋದಿರೇ ನೀವು (ಅತ್ಯಂತ ಹಿರಿಯ ಸ್ಥಾನ ಗಳಿಸಿದಿರಿ)
ಕುದುರೆಯನೇರಿಕೊಂಡು ಹೋದಿರೇ ನೀವು (ದೊಡ್ಡ ಸ್ಥಾನವನ್ನು ಗಳಿಸಿದಿರಿ)
ಕುಂಕುಮ ಕಸ್ತೂರಿ ಹೂಸಿಕೊಂಡು ಹೋದಿರೇ ಅಣ್ಣಾ! (ಅಲಂಕಾರ ಮಾಡಿಕೊಂಡು ಚೆನ್ನಾಗಿ ಮೆರೆದಿರಿ)
ಸತ್ಯದ ನಿಲವನರಿಯದೆ ಹೋದಿರಲ್ಲಾ,(ಸತ್ಯವನ್ನು ಅರಿಯದೆ ಹೋದಿರಿ)
ಸದ್ಗುಣವೆಂಬ ಫಲವ ಬಿತ್ತದೆ  ಬೆಳೆಯದೆ ಹೋದಿರಲ್ಲಾ! (ಮನದಲ್ಲಿ ಸದ್ಗುಣವನ್ನು ಬೆಳೆಯದೆ ಹೋದಿರಿ)
ಅಹಂಕಾರವೆಂಬ ಸದಮದಗಜವನೇರಿ (ಅಹಂಕಾರದಿಂದ ಮದದ ಗಜವನ್ನು ಏರಿ ಹೋದಿರಿ)
ವಿಧಿಗೆ ಗುರಿಯಾಗಿ ಹೋದಿರಲ್ಲಾ! (ಹಣೆಬರಹದ ಕೈಗೊಂಬೆಯಾದಿರಿ)
ನಮ್ಮ ಕೂಡಲ ಸಂಗಮದೇವನರಿಯದೆ
ನರಕಕ್ಕೆ ಭಾಜನರಾದಿರಲ್ಲಾ! (ಕೂಡಲಸಂಗಮನನ್ನು ಅರಿಯದೆ ನರಕದಲ್ಲುಳಿದಿರಿ)

ತಾತ್ಪರ್ಯ

ರಾಜನಾಗಿ ಆನೆಯನ್ನೇರಿ ಸುತ್ತಾಡಿದರೂ, ಕುದುರೆಯನ್ನೇರಿ ಸುತ್ತಾಡಿದರೂ, ಅಲಂಕಾರವನ್ನು ಮಾಡಿಕೊಂಡು ಚೆನ್ನಾಗಿ ಮೆರೆದರೂ ಸಹ ಸತ್ಯವನ್ನು ಅರಿಯದೆ ಹೋದರೆ ಯಾವ ಉಪಯೋಗವೂ ಇಲ್ಲ ಎಂದು ಹೇಳುತ್ತಾರೆ ಬಸವಣ್ಣನವರು.

ಸಮಾಜದಲ್ಲಿ ಅತ್ಯಂತ ಹಿರಿಯ ಸ್ಥಾನವನ್ನು ಗಳಿಸಿ, ಆನೆಯ ಮೇಲೋ ಕುದುರೆಯ ಮೇಲೋ ಕುಳಿತು ಮೆರೆಯುತ್ತಾರೆ ಜನರು. ಇಂದಿನ ಕಾಲದಲ್ಲಿ ಹೇಳಬಹುದಾದರೆ ಹಿರಿಯ ಅಧಿಕಾರದಲ್ಲಿದ್ದುಕೊಂಡು ಅತ್ಯಂತ ಬೆಲೆಬಾಳುವ, ಪ್ರತಿಷ್ಠಿತ ವಾಹನಗಳಲ್ಲಿ ಓಡಾಡಿ ಸಂತಸದಿಂದ ಬೀಗುತ್ತಾರೆ ಜನರು. ಚೆನ್ನಾಗಿ ಅಲಂಕಾರಗೊಂಡು  ಆಡಂಬರದಿಂದ ಹೆಮ್ಮೆಪಡುತ್ತಾರೆ . ಆದರೆ ಮುಖ್ಯ ವಿಷಯವಾದ ಸತ್ಯವನ್ನೇ ಅರಿಯದೆ ಹೋಗುತ್ತಾರೆ. ತನ್ನ ಪ್ರತಿಷ್ಠೆಗೆ ಅಹಂಕಾರದಿಂದ  ಉಬ್ಬಿ ಬದುಕು ಕಳೆಯುತ್ತಾರೆ.  ತನ್ನಲ್ಲಿ ಸದ್ಗುಣವೆಂಬ ಬೀಜವನ್ನು ಬಿತ್ತದೆ ಅದರ ಫಲವನ್ನು ಅನುಭವಿಸದೆ, ಸತ್ಯದಿಂದ ವಂಚಿತರಾಗುತ್ತಾರೆ.  ಅದರ ಪರಿಣಾಮವಾಗಿ ಹಣೆಯ ಬರಹಕ್ಕೆ ತುತ್ತಾಗುತ್ತಾರೆ. ಅಹಂಕಾರ ಮನೆ ಮಾಡಿದವನಲ್ಲಿ ಸದ್ಗುಣಗಳು ಕಾಣವು. ಅರಿಷಡ್ವರ್ಗಗಳಲ್ಲಿ  ಯಾವುದೂ ಒಂದೇ ಇರುವುದಿಲ್ಲ. ಒಂದರೊಂದಿಗೆ ಉಳಿದ ಎಲ್ಲವೂ ಬರುತ್ತವೆ. ಅಂದರೆ ಅಹಂಕಾರದೊಂದಿಗೆ ಇತರ  ಗುಣಗಳೂ (ಕಾಮ,ಕ್ರೋಧ, ಲೋಭ,  ಮೋಹ, ಮತ್ಸರ)  ಬರುತ್ತವೆ. ಇವುಗಳಿಗೆ ತುತ್ತಾದ ಜೀವ ಸುಖದಿಂದಿರಲು ಸಾಧ್ಯವೆ?  ತನ್ನಲ್ಲಿ ತಾನೇ ಸದ್ಗುಣವೆಂಬ ಬೀಜವನ್ನು ಬಿತ್ತಬೇಕು. ಹಾಗೆ ಮಾಡದಿದ್ದಾಗ  ಅರಿಷಡ್ವರ್ಗಗಳು  ಅಧಿಕಾರ ನಡೆಸುತ್ತವೆ. ಹಾಗಾದಾಗ  ಹಣೆಬರಹದ ರಾಜ್ಯ ನಡೆಯುತ್ತದೆ.  ಎಂದರೆ ತಮ್ಮ ತಮ್ಮ ಕರ್ಮಕ್ಕೆ ಅನುಸಾರವಾಗಿ ಫಲವನ್ನನುಭವಿಸುತ್ತಾರೆ. ಎಂದರೆ ಸುಖ ದುಃಖಗಳ  ವಶದಲ್ಲಿರುತಾನೆ ವ್ಯಕ್ತಿ.  ನರಕಕ್ಕೆ ತುತ್ತಾಗುತ್ತಾನೆ. ಸತ್ಯವನ್ನು ಅರಿಯದೆ ಸುಖ ದುಃಖಗಳ ಪ್ರಭಾವದಿಂದ ಮುಕ್ತನಾಗುವದಿಲ್ಲ,  ಎನ್ನುತ್ತಾರೆ ಬಸವಣ್ಣನವರು.