Friday, April 25, 2014

Vachana 191: Abhyasavenna Vartisitayya – I am a Creature of my Habits!

VACHANA IN KANNADA

ಅಭ್ಯಾಸವೆನ್ನ ವರ್ತಿಸಿತ್ತಯ್ಯಾ,
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ
ಆನು ನಿಮ್ಮ ಮನಂಬೊಗುವನ್ನಕ್ಕ
ನೀವೆನ್ನ ಮನಂಬೊಗುವನ್ನಕ್ಕ
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ.   

TRANSLITERATION

abhyaasavenna vartisittayyaa
bhakti saadhyavaagadu, naanEvenayyaa
aanu nimma manaMboguvannakka
nIvenna manaMboguvannakka
kaayaguNaMgaLa kaLedavarige sharaNeMbe kUDalasaMgamadEvaa.


CLICK HERE FOR A RECITATION

http://youtu.be/VpJ8d7-67K8

 
TRANSLATION (WORDS)

abhyaasavenna (habit makes me)  vartisittayyaa (act, Oh sir!)
bhakti (devotion) saadhyavaagadu( is not possible), naanEvenayyaa (I am helpless)
aanu (I) nimma (your)  manaMboguvannakka (until enter your mind)
nIvenna (you, my) manaMboguvannakka (enter my mind)
kaayaguNaMgaLa (worldly interests) kaLedavarige (those who have shed there) sharaNeMbe (I bow to) kUDalasaMgamadEvaa(Kudalasangamadeva)


VACHANA IN ENGLISH

 
Habit makes me act, oh Sir!
Devotion has become impossible, I am helpless, Oh Sir!
Until I enter your mind,
and You enter my mind,
I bow to those who have shed their worldly traits,
Oh, Lord Kudala Sangama!


COMMENTARY
 
In this Vachana, Basavanna is revealing his deep introspection saying that the devotion has not set in him because of his inbuilt habits. He says that he has become helpless and cannot escape from the clutch of his habits. Further, he sees the only way is to surrender to those who have shed their worldly traits until the Lord enters his mind and his mind sets in the Lord!
Indeed, habits make the man. Habits are the result of what we have been exposed repetitiously. They come from exposure to culture, people and practices. They become our integral parts and getting out of the habit is not easy even if one tries. It is easy and less stressful to follow the dictum of our habits. All our actions are dictated by these habits. We routinely respect or despise others because of our habits. Our environment provides us a view of God and believing in that view and corresponding rituals become our habit. We seldom think twice about our action dictated by our habits. But, when we start a deep inspection our habitual actions, we find new and real meaning behind what we are surrounded with. Basavanna is longing for such insight to get deep into devotion. He is surrendering to those who have already gained such insights and have shed the worldly traits (habits) as a way of reaching that state.
While the Vachana is advocating a deep introspection of our habits to become a true devotee, such introspection is a must for us to see the world in a new light and gain the perspective of what we are!

Let us shed our habits and gain the new sight!

KANNADA COMMENTARY
 
ಅರ್ಥ:
 
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ( ನಾನು ಅಭ್ಯಾಸಬಲದಿಂದ ವರ್ತಿಸುತ್ತಿದ್ದೇನೆ)
ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ (ನನಗೆ ಭಕ್ತಿ ಸಾಧ್ಯವಾಗುತ್ತಿಲ್ಲ, ಏನು ಮಾಡಲಿ)
ಆನು ನಿಮ್ಮ ಮನಂಬೊಗುವನ್ನಕ್ಕ ( ನಾನು ನಿಮ್ಮ ಅಂತರಂಗವನ್ನು ಸೇರಿಹೋಗುವವರೆಗೆ)
ನೀವೆನ್ನ ಮನಂಬೊಗುವನ್ನಕ್ಕ (ನೀವು ನನ್ನ ಅಂತರಗವನ್ನು ಸೇರಿಹೋಗುವವರೆಗೆ)
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ (ತನುಗುಣಗಳನ್ನು ಕಳೆದವರಿಗೆ ಶರಣೆನ್ನುವೆನು)

ತಾತ್ಪರ್ಯ:
 
ಇಲ್ಲಿ ಬಸವಣ್ಣನವರು ತನಗೆ ಭಕ್ತಿ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ತಮ್ಮನ್ನು ತಾವು ಆಳವಾಗಿ ಗಮನಿಸಿ ಹೇಳುತ್ತಿದ್ದಾರೆ.
ಅಭ್ಯಾಸವು ನಾನು ಭಕ್ತಿ ಮಾಡದಂತೆ ತಡೆಯುತ್ತಿದೆ ಎನ್ನುತ್ತಾರೆ. ಅಭ್ಯಾಸ ಎಂದರೆ ರೂಢಿಯಿಂದ ಬಂದದ್ದು ಅಥವಾ ಪುನರಾವರ್ತಿಸುವುದು. ನಮ್ಮೆಲ್ಲರ ನಡತೆಗಳು ಅಭ್ಯಾಸದಿಂದಲೇ ಬಂದವುಗಳು. ಅಭ್ಯಾಸಗಳು ಬಹಳ ಆಳವಾಗಿ ಬೇರೂರಿರುವಂತಹವು. ಹುಟ್ಟಿನಿಂದಲೇ ಮೈಗೂಡಿದಂತಹವು. ಸಂಸ್ಕೃತಿಯಿಂದ, ಪರಂಪರೆಯಿಂದ  ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವಂತಹವು. ಅವುಗಳನ್ನು ಕಳೆದುಕೊಳ್ಳುವುದು  ಸುಲಭವಲ್ಲ. ಅಭ್ಯಾಸವು ವ್ಯಕ್ತಿಯನ್ನು, ವಿಷಯವನ್ನು ಅಥವಾ ಯಾವುದನ್ನೇ ಆಗಲಿ ಹೊಸದಾಗಿ ಕಂಡುಕೊಳ್ಳುವುದರಿಂದ ತಡೆಯುತ್ತದೆ. ನಾವು ನಮ್ಮ ನಡತೆಯನ್ನು  ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ತಿಳಿಯುತ್ತದೆ, ನಮ್ಮ ಎಲ್ಲ ಕ್ರಿಯೆಗಳು ಅಭ್ಯಾಸದ ಪರಿಣಾಮವಾಗಿವೆ ಎಂದು. ಅಭ್ಯಾಸ ಬಲದಿಂದಲೇ ನಾವು ಬೇರೊಬ್ಬ ವ್ಯಕ್ತಿಯ ಬಗ್ಗೆ ಗೌರವ ಅಥವಾ ಅನಾದರ ತಾಳುತ್ತೇವೆ.  ಉದಾಹರಣೆಗೆ- ದೇವರ ಬಗ್ಗೆ ನಾವು ತಾಳುವ  ಭಾವನೆಗಳು ಇನ್ನಾರದೋ ಭಾವನೆಗಳನ್ನು ಅಥವಾ ಪರಂಪರಾಗತವಾಗಿ ಯೋಚಿಸುವ ರೀತಿಗಳನ್ನು ಅವಲಂಬಿಸಿರುತ್ತವೆ. ನಾವು ಸ್ವತಃ ಹೊಸದಾಗಿ ದೇವರ ಬಗ್ಗೆ ಎಂದೂ ಯೋಚಿಸುವುದಿಲ್ಲ. ಯಾರನ್ನೋ ನಂಬುವುದು, ಇನ್ನೊಬ್ಬರನ್ನು ಅವಲಂಬಿಸಿ ನಿರ್ಣಯ ಕೈಗೊಳ್ಳುವುದು ಇವೆಲ್ಲ ಅಭ್ಯಾಸದ ಬಲದಿಂದಲೇ ನಡೆಯುತ್ತವೆ. ಏಕೆಂದರೆ ಅದು ಬಹು ಸುಲಭದ ದಾರಿ. ನನ್ನ ಬುದ್ಧಿ ಶಕ್ತಿ  ಕೆಲಸಮಾಡಬೇಕಾಗಿಲ್ಲ.
 
ಬಸವಣ್ಣನವರು, ತಾನೂ ಅಭ್ಯಾಸಕ್ಕೆ ಬಲಿಯಾಗಿದ್ದೇನೆ, ಆದ್ದರಿಂದ ತನಗೆ ಭಕ್ತಿ ಕೈಗೂಡುತ್ತಿಲ್ಲ ಎನ್ನುತಿದ್ದಾರೆ. ಭಕ್ತಿ ಮೂಢನಂಬಿಕೆಯಲ್ಲ. ಅದು  ಪರಂಪರೆಯಲ್ಲ. ಅದು ಸಂಸ್ಕೃತಿಯಲ್ಲ, ಅದು ಅಭ್ಯಾಸವಲ್ಲ.  ಅಭ್ಯಾಸದ ನಡತೆ, ನಿಂತ ನೀರಾದ ಪರಂಪರೆಯಿಂದ, ಸಂಸ್ಕೃತಿಯಿಂದ, ಅರಿವೇ ಇಲ್ಲದ ಜಡ್ಡುಗಟ್ಟಿದ ನಡತೆ. ಅರಿವು ಇಲ್ಲದ ಅಭ್ಯಾಸದ ನಡತೆ ಮೂಢನಂಬಿಕೆಯಾಗುತ್ತದೆ.  ತಾನು ಎಲ್ಲವೂ ಅಭ್ಯಾಸದಿಂದಲೇ ಮಾಡುತ್ತಿದ್ದೇನೆ.  ಭಕ್ತಿ ಮತ್ತು ಇತರ ವಿಷಯಗಳನ್ನು ನೂತನವಾಗಿ ಕಾಣುವ ಶಕ್ತಿ ಎನ್ನಲಿಲ್ಲ, ಏನು ಮಾಡಲಿ ಎಂದು ಹಳಹಳಿಸುತ್ತಿದ್ದಾರೆ ಬಸವಣ್ಣನವರು.
ಎಲ್ಲಿಯವರೆಗೆ  ನನ್ನ ಮನಸ್ಸಿನಲ್ಲಿ ಲಿಂಗವು ಪೂರ್ತಿಯಾಗಿ ಸೇರಿಹೊಗುವುದಿಲ್ಲವೋ ಅಥವಾ ನನ್ನ ಮನಸ್ಸು ಪೂರ್ತಿಯಾಗಿ ಲಿಂಗದಲ್ಲಿ ಸೇರಿಹೋಗುವುದಿಲ್ಲವೋ ಅಲ್ಲಿಯವರೆಗೆ ನಾನು ತನುಗುಣಗಳನ್ನು ಮೀರಿದ ನಿಮ್ಮ ಶರಣರಿಗೆ ಶರಣೆನ್ನುತ್ತೇನೆ. ಎಂದರೆ ಎಲ್ಲಿಯವರೆಗೆ ನಾನು ನನ್ನ ಅಭ್ಯಾಸಗಳಿಂದ ಬಿಡುಗಡೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ತಮ್ಮ ಅಭ್ಯಾಸಗಳಿಂದ ಬಿಡುಗಡೆ ಪಡೆದ, ಎಲ್ಲ ತನುಗುಣಗಳಿಂದ ಮುಕ್ತರಾದ ಶರಣರಿಗೆ ಶರಣೆನ್ನುವೆನು ಎನ್ನುತ್ತಾರೆ ಬಸವಣ್ಣನವರು.





Friday, April 18, 2014

Vachana 190: Manakke Naachada Vachana – Mind and the Speech

VACHANA IN KANNADA
 
ಮನಕ್ಕೆ ನಾಚದ ವಚನ  ವಚನಕ್ಕೆ ನಾಚದ ಮನ
ಕುಂದು- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ

TRANSLITERATION

 
manakke naacada vacana  vacanakke naacada mana
kuMdu- heccu nuDive
oMdu maatina gellakke hiDidu hOruve
kUDala saMgama sharanara ennaaLdareMbe

CLICK HERE FOR A RECITATION
 

TRANSLATION (WORDS)

manakke (to/of the mind) naacada (not ashamed)  vacana (the word)  vacanakke (to/of the word) naacada (not ashamed) mana (the mind)
kuMdu (snag,flaw)- heccu nuDive (I talk too much)
oMdu maatina (one statement) gellakke (to win over) hiDidu hOruve (hold on and fight)
kUDala saMgama sharanara (devotees of Kudalasanagama) ennaaLdareMbe (I say, are my masters)

VACHANA IN ENGLISH

The word not ashamed (shy of) of the mind, the mind not ashamed of the word.
I speak with flaw and in excess.
To win over one statement I hold on and fight.
I say, Kudalasangama’s devotees are my masters!

COMMENTARY

This Vachana reflects the intense inspection on part of Basavanna of the duality of the internal and the external. The characteristic of the mind (internal) is to jump from thought to thought. It keeps this hopping going on and we hardly notice what the mind is up to. It becomes our second nature to let the mind wander without paying any attention to it, especially when we start speaking (external). Only when we start observing our mind and speech, we notice that most often what we speak is not what is on our mind. For instance, we start thinking that we should be extremely courteous to the gentleman approaching us. But, as he approaches us we simply do not offer him the courtesy we deemed he deserves, rather we start speaking to him in ordinary tones. Our mind keeps telling us not to eat the sweets offered to us since they have ill effect on our health. But, we start saying how tasty the sweets are and indulge in consuming them. Basavanna comments on this duality saying that the mind is not paying attention to the speech and the speech is ignoring the mind. He feels that he does not really weigh his words before they are spoken and hence they are flawed. He feels that the spoken words are unnecessarily excessive since speaking has become a routine habit. Further, we make a statement and will even be prepared to fight to justify what we said is right. Basavanna says ‘I say that I am the servant of devotees of the Lord, just to show off rather than being a true devotee’.

This Vachana again illustrates how keen the Sharanas were in maintaining the internal and external purity – the purity in thoughts and the purity in deeds!

Let us speak what we think!

KANNADA COMMENTARY
 
ಅರ್ಥ:
 
ಮನಕ್ಕೆ ನಾಚದ ವಚನ (ಮಾತು) ವಚನಕ್ಕೆ ನಾಚದ ಮನ
ಕುಂದು (ನೂನ್ಯತೆ,ಕೊರತೆ)- ಹೆಚ್ಚು ನುಡಿವೆ
ಒಂದು ಮಾತಿನ ಗೆಲ್ಲಕ್ಕೆ (ಗೆಲ್ಲುವುದಕ್ಕೆ) ಹಿಡಿದು ಹೋರುವೆ (ಚರ್ಚಿಸುವೆ, ವಾದಿಸುವೆ)
ಕೂಡಲಸಂಗಮ ಶರಣರ ಎನ್ನಾಳ್ದರೆಂಬೆ(ಶರಣರು ನನ್ನ ಒಡೆಯರು ಎನ್ನುವೆ)

ತಾತ್ಪರ್ಯ:
 
ತಮ್ಮ ಮನ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಇದು ಬಸವಣ್ಣನವರ ಇನ್ನೊಂದು ವಚನ.
ತಮ್ಮ ಮನವನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುತ್ತಿದ್ದಾರೆ. ಮನಸ್ಸು ಏನೇನೋ ಮಾಡುತ್ತದೆ, ಏನೇನೋ ಯೋಚಿಸುತ್ತದೆ. ಸುಮ್ಮನಿರುವ ಸ್ವಭಾವ ಅದರದಲ್ಲ. ಸದಾ  ಏನಾದರೂ ಯೋಚಿಸುವ ಅಭ್ಯಾಸ ಅದಕ್ಕೆ. ಈ ಅಭ್ಯಾಸ ಎಷ್ಟು ಆಳವಾದದ್ದು ಎಂದರೆ ಅನೇಕ ಸಲ ವ್ಯಕ್ತಿ ಅದನ್ನು ಗುರುತಿಸುವುದೂ ಇಲ್ಲ. ಗುರುತಿಸಿದಾಗ ಅದು ಯೋಚಿಸುವುದೇ ಬೇರೆ, ಮತ್ತು ತಾನು ಮಾತಾಡುವುದೇ ಬೇರೆ ಎಂದು ತಿಳಿದುಬರುತ್ತದೆ. ಮಾತಿಗೂ ಮತ್ತು ಅದರ ಯೋಚನೆಗೂ ಏನೇನೂ ಸಂಬಂಧವಿಲ್ಲ ಎಂಬುದು ಅರಿವಿಗೆ ಬರುತ್ತದೆ. ಮನಸ್ಸು ಮತ್ತು ವಚನದ ಈ ಅಸಂಬಂದ್ಧತೆ ವ್ಯಕ್ತಿತ್ವದಲ್ಲಿಯ ಒಂದು ಕೊರತೆ.
ಉದಾಹರಣೆಗೆ ಮನಸ್ಸು ಹೇಳುತ್ತದೆ: ಆ ಗೌರವಾನ್ವಿತ ವ್ಯಕ್ತಿಯೊಂದಿಗೆ ಪ್ರೀತಿಯಿಂದ ಮಾತಾಡು. ಆತನು ಹೇಳುವುದನ್ನು ಕೇಳು ನಿನಗೆ ಒಳ್ಳೆಯದಾಗುತ್ತದೆ, ಎಂದು. ಆದರೆ ಆತ ಬಂದಾಗ  ನಮ್ಮ ನುಡಿಗಳು ಸೌಜನ್ಯಯುಕ್ತವಾಗಿರುವುದಿಲ್ಲ. ಮಾತುಗಳಲ್ಲಿ ’ನನಗೆ ನೀನು ಬುದ್ಧಿ ಹೇಳುವುದು ಬೇಕಾಗಿಲ್ಲ, ನನಗೆಲ್ಲ ಗೊತ್ತಿದೆ’  ಎಂಬ ಧೋರಣೆ ಇರುತ್ತದೆ.
ಅದನ್ನು ತಿನ್ನ ಬಾರದು. ಅದು ಸಕ್ಕರಯಿಂದ  ಮಾಡಿರುವುದು. ಆರೋಗ್ಯಕ್ಕೆ ಒಳ್ಳೆಯದಲ್ಲ, ಎಂದು ನುಡಿಯುತ್ತೇವೆ.
ಅದೋ ಆ ಸಿಹಿ ತಿಂಡಿ ತುಂಬಾ ರುಚಿಯಾಗಿದ್ದಂತೆ ಕಾಣುತ್ತದೆ, ತಿಂದು ಬಿಡು, ಆರೋಗ್ಯ ಕೆಟ್ಟಾಗ ನೋಡಿಕೊಳ್ಳೋಣ, ಎಂದು ಮನಸ್ಸು ಹೇಳುತ್ತದೆ.
 
ಮನಸ್ಸು ಬೇಡವಾದದ್ದೆನ್ನೆಲ್ಲ ಯೋಚಿಸುತ್ತದೆ. ಆದರೆ, ಬಾಯಿಯಿಂದ ತನ್ನಲ್ಲಿ ಯಾವ ಕೆಟ್ಟ ಗುಣಗಳೂ ಇಲ್ಲವೆಂಬಂತೆ ಮಧುರವಾದ ನುಡಿಗಳು ಹೊರಹೊಮ್ಮುತ್ತವೆ.  ನಮ್ಮ ಮಾತುಗಳನ್ನು ಕೇಳಿದವರು ನಮ್ಮ ಕೆಟ್ಟ ಮನವನ್ನು, ಅದು ಯೋಚಿಸುತ್ತಿರುವ ಕೀಳು ವಿಚಾರಗಳನ್ನು ಊಹಿಸಲೂ ಆರರು. ಅವರು ನಮ್ಮನ್ನು ನಮ್ಮ ಮಾತುಗಳಿಂದ ಒಳ್ಳೆಯವರೆಂದೇ ನಂಬುತ್ತಾರೆ. ಅಂತಹ ಕೆಟ್ಟ ಮನಸ್ಸಿಗೆ  ನುಡಿಯು ನಾಚದು. ಅಯ್ಯೋ ನನ್ನ ಮನಸ್ಸು ಯೋಚಿಸುತ್ತಿರುವುದೇ ಬೇರೆ, ನಾನು ಅದಕ್ಕೆ ತದ್ವಿರುದ್ಧವಾಗಿ ನುಡಿಯುತ್ತಿದ್ದೇನೆ ಎಂದು ಅದು  ನಾಚುವುದಿಲ್ಲ. ಅದೇ ರೀತಿಯಾಗಿ ನುಡಿಗಳಿಗೆ ಮನಸ್ಸು ತಾನು ನಾಚದು. ನುಡಿಗಳಲ್ಲಿ ನಾವು ಹೇಳುವುದೊಂದು ಮನಸ್ಸು ತಾನು ಯೋಚಿಸುವುದು ಇನ್ನೊಂದು. ಮಾತುಗಳು ಕೆಟ್ಟಮಾತಾಡಬೇಡ ಎಂಬ  ಉಪದೇಶ  ಕೊಡುತ್ತವೆ. ಆದರೆ ಮನಸ್ಸು  ಕೆಟ್ಟದ್ದನ್ನೇ ಯೋಚಿಸುತ್ತದೆ. ವಚನಕ್ಕೆ ಮನಸ್ಸು ನಾಚದು. ಅಯ್ಯೋ ನಾನು ಹೇಳಿದಂತೆ ನಡೆಯುತ್ತಲಿಲ್ಲ, ಎಂದು ಮರುಗದು. ತಾನು ಹೇಳುವುದೇ ಬೇರೆ ಮತ್ತು ಮನಸ್ಸಿನಲ್ಲಿ ಯೋಚಿಸುತ್ತಿರುವುದೇ ಬೇರೆ. ಈ ಅಸಂಬದ್ಧತೆ ವ್ಯಕ್ತಿತ್ವದ ಒಂದು ಕೊರತೆ. ಇದರಿಂದ ನಾನು  ಬೇಕಾದುದಕ್ಕಿಂತ ಹೆಚ್ಚು ಮಾತಾಡುತ್ತೇನೆ ಎನ್ನುತ್ತಾರೆ ಬಸವಣ್ಣನವರು. ಮಾತಿನ ಚಟಕ್ಕೆ ಬಿದ್ದು ನಾನು ಅರಿವೇ ಇರದ ಯಾವುದೋ ಒಂದು ಮಾತಿಗಾಗಿ, ನನ್ನ ಮಾತೇ ಸರಿಯೆಂದು ಚರ್ಚೆಯಲ್ಲಿ ಗೆಲ್ಲುವುದಕ್ಕಾಗಿ ವಾದಕ್ಕಿಳಿಯುತ್ತೇನೆ, ಇಷ್ಟೇ ಅಲ್ಲದೆ, ಕೂಡಲಸಂಗಮನ ಶರಣರು ನನ್ನ ಒಡೆಯರು, ಎಂದು ಹೇಳಿಕೊಳ್ಳುತ್ತೇನೆ, ಎನ್ನುತ್ತಾರೆ. ಆ ಒಡೆಯರಂತೆ  ನಡೆಯುವುದಿಲ್ಲ ನಾನು. ಅಂತಹ ಮಹಾ ವ್ಯಕ್ತಿಗಳ ಗುಣಗಳು ನನ್ನಲ್ಲಿ ಎಳ್ಳೆನಿತೂ ಇಲ್ಲ ಎಂದು ತಮ್ಮ ನಡತೆಯ ಬಗ್ಗೆ ಯೋಚಿಸುತ್ತಿದ್ದಾರೆ.




Friday, April 11, 2014

Vachana 189: Attalitta Hogadante - Let me not wander!

VACHANA IN KANNADA

ಅತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ  ಅಂಧಕನ ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ

TRANSLITERATION

attalitta hOgadaMte heLavana maaDayya taMde
sutti suLidu nODadaMte aMdhakana maaDayya taMde
mattoMda kELadaMte kivuDana maaDayya taMde
nimma sharaNara paadavallade anya viShayakkelsadaMte irisu kUDalasamgamadEvaa

CLICK HERE FOR A RECITATION


For a musical rendering click here:


TRANSLATION (WORDS)

attalitta (there and here) hOgadaMte (not wandering)  heLavana (lame)  maaDayya (make ) taMde (oh! father)
sutti suLidu ( roaming)  nODadaMte (not seeing)  aMdhakana (blind) maaDayya (make ) taMde (oh! father)
mattoMda (anything else)  kELadaMte (not hearing) kivuDana (deaf) maaDayya (make ) taMde (oh! father)
nimma (your) sharaNara (of devotees) paadavallade (other than feet)  anya (other) viShayakke (enticements) elsadaMte (not yielding to) irisu (keep) kUDalasamgamadEvaa (Kudalasangamadeva)

VACHANA IN ENGLISH

Oh Father! Make me a crippled man,
so I don’t wander here and there.
Oh Father! Make me a blind man,
so my glances won’t rove astray.
Oh Father! Make me a deaf man,
so I hear nothing but about You.
Oh Lord Kudala Sangama! keep me unyielding to all enticements,
other than to the feet of Your devotees!

COMMENTARY

Wandering is the nature of the mind. The enticements of the material world keep our sense organs at their most active level. They feed the mind and enhance its wandering nature. Mind becomes a monkey on steroids. Falling prey to the wandering of the mind and enticements of the material world takes us away from developing the inner purity needed to realize the self. For an individual indulged in all sorts of worldly pleasures, withdrawal of senses from their respective objects is very difficult. Considerable perseverance and one-pointedness are a must to prevent the mind and the senses to be distracted and run away to the external world. In this popular Vachana, Basavanna shows his intense observation of the mind and his deep feelings about how such a wandering mind comes in the way of inner purity. He portrays his helplessness in conquering the mind and requests the Lord to help him in this regard. He begs Him to make him a crippled so the mind does not wander around. He requests the Lord to make him blind so he does not fall prey to the sights of the material around. He would like to hear only about the Lord and asks Him to make him deaf for all the other sounds. Finally, he requests the Lord to keep him completely concentrated on the feet of the devotees of the Lord and away from all other enticements. If Basavanna felt so helpless in disciplining the mind, it is indeed a herculean task for us ordinary beings. We must strive to accomplish it to succeed in the spiritual path. Sharanas advocated being active in the material world through selfless duty (Kaayaka) and sharing with the community (Daasoha) while not forgetting the journey within to realize Self!

Let everything we hear, see, do and speak be His!


KANNADA COMMENTARY

ಅರ್ಥ:

ಅತಲಿತ್ತ (ಅಲ್ಲಿ ಇಲ್ಲಿ) ಹೋಗದಂತೆ ಹೆಳವನ (ಕಾಲುಗಳಿಲ್ಲಿದವನಂತೆ) ಮಾಡಯ್ಯ ತಂದೆ
ಸುತ್ತಿ ಸುಳಿದು (ಸುತ್ತಿ, ಇತರರಿಗೆ ಗೊತ್ತಾಗದಂತೆ) ನೋಡದಂತೆ  ಅಂಧಕನ (ಕುರುಡನ)  ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ (ಬೇರೆ ವಿಷಯಗಳ ಕಡೆಗೆ ಹೋಗದಂತೆ) ಇರಿಸು ಕೂಡಲಸಂಗಮದೇವಾ

ತಾತ್ಪರ್ಯ:

ಇದು ಭಕ್ತಿ ಭಂಡಾರಿ ಬಸವಣ್ಣನವರ ವಚನ.
ಇಲ್ಲಿ ಬಸವಣ್ಣನವರು ತಮ್ಮ ಮನಸ್ಸು ತಾನು ಹೇಳಿದಂತೆ ಕೇಳುತ್ತಲಿಲ್ಲ, ಅದು ತನಗೆ ಬೇಕಾದ ಕಡೆಗೆ ಓಡುತ್ತದೆ. ಆದ್ದರಿಂದ ಅದನ್ನು ಹೆಳವನನ್ನಾಗಿ ಮಾಡು ಎಂದು ಕೂಡಲ ಸಂಗಮನನ್ನು ಕೇಳುತ್ತಿದ್ದಾರೆ. ಮನಸ್ಸು, ಅಥವಾ ಇಂದ್ರಿಯಗಳು ತಮಗಿಷ್ಟವಾದ ವಿಷಯಗಳ ಕಡೆಗೆ ಹರಿಯುವುದು ಸಾಮಾನ್ಯ. ಅದಕ್ಕೆ ಸಂಸಾರದ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಅದರಿಂದ ಆತ್ಮೋನ್ನತಿಯಲ್ಲಿ ಅನೇಕ ಅಡ್ಡಿಗಳುಂಟಾಗುತ್ತವೆ.  ಇದರಿಂದ ಬೇಸತ್ತು ಬಸವಣ್ಣನವರು ಕೂಡಲಸಂಗಮನ ಮೊರೆಹೋಗುತ್ತಾರೆ.

ಮನಸ್ಸು ತನ್ನನ್ನು ತೃಪ್ತಿಗೊಳಿಸಲು ಅನೇಕ ಉಪಾಯಗಳನ್ನು ಮಾಡುತ್ತದೆ. ಭಕ್ತನಾದ ತಾನು ಆಸೆಗಳಿಗೆ ಈಡಾದರೆ ನಗೆಗೀಡಾಗುತೇನೆ ಎಂದು ಇತರರಿಗೆ ಗೊತ್ತಾಗದಂತೆ ಎಲ್ಲೆಲ್ಲೋ ಸುತ್ತಿ ಬಳಸಿ ಸುಳಿದು ತನಗಿಷ್ಟವಾದದ್ದನ್ನು ನೋಡುವುದರಲ್ಲಿ ತೊಡಗುತ್ತದೆ. ಆದ್ದರಿಂದ ಹಾಗೆ ಮಾಡಲಾಗದಂತೆ  ತನ್ನನ್ನು ಅಂಧಕನ ಮಾಡು ಎಂದು ಕೇಳುತ್ತಾರೆ ಬಸವಣ್ಣನವರು. ಸಂಸಾರದ ವಿಷಯಗಳಲ್ಲಿ ಅನಾಸಕ್ತಿ  ತಾಳುವಂತೆ ಮಾಡು ಎಂಬುದು ಇದರ ಭಾವ.
ಉಪಯೋಗಕ್ಕೆ ಬಾರದ, ವ್ಯರ್ಥವಾದ ಮಾತುಗಳನ್ನು ಕೇಳದಂತೆ ತನ್ನನ್ನು ಕಿವುಡನನ್ನಾಗಿ ಮಾಡು ಎನ್ನುತ್ತಾರೆ. ತನ್ನನ್ನು ತಾನು  ತಿದ್ದಿಕೊಳ್ಳದೆ, ಅಥವಾ ತನ್ನನ್ನು ಶುದ್ಧಿಗೊಳಿಸುವಲ್ಲಿ ತೊಡಗಿಸಿಕೊಳ್ಳದೆ ಇತರರ ಮಾತುಗಳನ್ನು ಕೇಳುವುದರಲ್ಲಿ ಮನಸ್ಸು ಅತಿ ಆಸಕ್ತಿ ತೋರುತ್ತದೆ. ಅದರ ಈ ಆಸಕ್ತಿ ಅದನ್ನು ಆತ್ಮಶುದ್ಧಿಯಿಂದ ದೂರವಿಡುತ್ತದೆ. ಆದ್ದರಿಂದ ಅದನ್ನು ನಿರರ್ಥಕವಾದ ಮಾತುಗಳನ್ನು ಕೇಳದಂತೆ ಕಿವುಡನ ಮಾಡು ಎನ್ನುತ್ತಾರೆ.

ಒಟ್ಟಿನಲ್ಲಿ ಮನಸ್ಸು ಅತಿತ್ತ ಹರಿಯದಂತೆ ಹೆಳವ, ಆಕರ್ಷಣೆಗಳಿಗೆ ಒಳಗಾಗಿ ಅತ್ತಿತ್ತ ನೋಡದಂತೆ ಅಂಧ ಮತ್ತು ಬೇಡದ ಮಾತುಗಳನ್ನು ಕೇಳದಂತೆ ಕಿವುಡನನ್ನಾಗಿ ಮಾಡು ಎಂದು ಕೂಡಲ ಸಂಗಮನನ್ನು ಕೇಳುತ್ತಿದ್ದಾರೆ. ಇಷ್ಟೇ ಅಲ್ಲದೆ ಶರಣರ ಪಾದಗಳಲ್ಲಿ ಮನ ನಿಲ್ಲುವಂತೆ ಮಾಡು ಎನ್ನುತ್ತಾರೆ. ಶರಣರು ದೇವರ ಸ್ವರೂಪರು. ಆದ್ದರಿಂದ ಅಂತಹ ಮಹಾತ್ಮರನ್ನು  ಬಿಟ್ಟು ತನ್ನ ಮನಸ್ಸು ಬೇರೆಡೆಗೆ ಹರಿಯದಂತೆ ಮಾಡು ಎಂದು ಕೂಡಲಸಂಗಮನನ್ನು ಕೇಳಿಕೊಳ್ಳುತ್ತಿದ್ದಾರೆ.

ಈ ವಚನ, ಅವರು ತಮ್ಮಮನಸ್ಸನ್ನು ಎಷ್ಟು ಆಳವಾಗಿ ಗಮನಿಸಿದ್ದರು, ಮತ್ತು ಅಂತರಂಗ ಶುದ್ಧಿಯಲ್ಲಿ ಅಂತಹ ಮನಸ್ಸು ಎಷ್ಟು ಅಡ್ಡಿಯಾಗುತ್ತದೆ, ಅಲ್ಲದೆ ಅದರಿಂದ ಅವರ ಮನಸ್ಸು ಎಷ್ಟು ನೊಂದಿತ್ತು ಎನ್ನುವುದನ್ನು ತೋರಿಸಿಕೊಡುತ್ತದೆ. ಮನಸ್ಸಿನ ಹರಿದಾಟ, ಆಕರ್ಷಣೆಗಳಿಗೆ ತುತ್ತಾಗುವುದರಿಂದ ಮತ್ತು ವ್ಯರ್ಥವಾದ ಮಾತುಗಳನ್ನು ಕೇಳುವುದರಿಂದ ಆತ್ಮ ಬಲ ಕುಂದುತ್ತದೆ, ಅಮೂಲ್ಯವಾದ ಸಮಯ ನಷ್ಟವಾಗುತ್ತದೆ ಮತ್ತು ಆತ್ಮೋನ್ನತಿಯ ದಾರಿಯಲ್ಲಿ ಹಿನ್ನಡೆಯುಂಟಾಗುತ್ತದೆ ಎಂಬುದನ್ನು ಅವರು ಸೂಕ್ಷ್ಮವಾಗಿ ಗಮನಿಸಿ ಅದೆಲ್ಲದರಿಂದ ದೂರವಿರುವಂತೆ  ಮಾಡು ಎಂದು ಮತ್ತು ಶರಣರ ಪಾದಗಳನ್ನು ಬಿಟ್ಟು ಬೇರೆಡೆಗೆ ಮನಸ್ಸು ಹರಿಯದಂತೆ ಮಾಡು ಎಂದು ದೇವರನ್ನು ಕೇಳುತ್ತಿದ್ದಾರೆ.





Friday, April 4, 2014

Vachana 188: keyi beLevalli sadege munivarallade – Weeds in the Paddy Field



VACHANA IN KANNADA

ಕೆಯಿ ಬೆಳೆವಲ್ಲಿ ಸದೆಗೆ  ಮುನಿವರಲ್ಲದೆ, ಬೆಳೆಗೆ ಮುನಿದವರುಂಟೆ ಅಯ್ಯಾ?
ಅರಿದಂಗವ ತಾಳಿದವರಲ್ಲಿ  ಮರೆವೆಗೆ ಮುನಿವರಲ್ಲದೆ, ಅರಿವಿಗೆ ಮುನಿವರುಂಟೆ ಅಯ್ಯಾ?
ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ, ಮೊಲೆಯ ಕಟ್ಟಿದರುಂಟೆ ಅಯ್ಯಾ?
ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ
ಅರಿವಿಂಗೆ ಶರಣು ಮರೆವಿಗೆ ಮಥನವ ಮಾಡಿದಲ್ಲದೆ ಇರೆ.
ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು

TRANSLITERATION

keyi beLevalli  sadege munivarallade, beLege munivaruMTe ayyaa?
aridaMgava taaLidavaralli marevege munivarallade, arivige munidavaruMTe ayyaa?
kolli aaviMge kaala kaTTuvarallade, moleya kaTTidaruMTe ayyaa?
guruvaadaDU aagali, liMgavaadaDU aagali, jamgamavaadaDU aagali
ariviMge sharaNu marevige mathanava maaDidallade ire
idu nIvu koTTa arivina maarana iravu, sadaashivamUrthyliMgada baravu

CLICK HERE FOR A RECITATION


TRANSLATION (WORDS)

keyi (paddy) beLevalli (in the place of growing) sadege (with the weed) munivarallade (people get angry)
beLege (with the crop) munivaruMTe (do people get angry) ayyaa?(sir)
ariidaMgava taaLidavaralli (knowingly taking birth) marevege (with ignorance) munivarallade (people get angry)
arivige (with awareness)  munidavaruMTe ayyaa?(sir!are there people  who get angry)
kolli ( mischievous) aaviMge (cow’s)  kaala (legs)  kaTTuvarallade (are tied, but)
moleya kaTTidaruMTe ayyaa? (is the udder tied)
guruvaadaDU aagali (whether guru)
liMgavaadaDU aagali(whether linga the icon)
jamgamavaadaDU aagali (whether Jangama/devotee)
ariviMge sharaNu (I will bow to awareness) marevige mathanava maaDidallade ire (I cannot be without churning ignorance)
idu nIvu koTTa (this is your gift)  arivina maarana iravu (Arivina Mara’s being)
sadaashivamUrthyliMgada baravu (Sadashivamurthylinga’s arrival)

VACHANA IN ENGLISH

In a field of Paddy, won’t the people be averse of the weeds? would they ever be averse of the crop, Sir?
Would not the people be averse to the ignorance of those taking rebirth knowingly? Would they be averse to the awareness, Sir?
Would we not tie the legs of the rogue cow? Would we ever tie the udder, Sir?
May it be Guru (teacher), May it be Linga (icon), may it be Jangama (devotee),
I will bow to the awareness; I cannot stay away from churning the ignorance!
This is your gift of Arivina Maara’s being,
and Sadashivamurthylinga’s arrival!

COMMENTARY

 In this Vachana, Arivina Marithande highlights the importance of ‘awareness’ and says that the Lord has gifted him the attribute of churning the ignorance away once recognized to develop the awareness. He uses two simple similes to illustrate his thoughts. In the field of paddy, weeds are a nuisance. They do not become part of the crop; rather they come in the way of the growth of Paddy. As such, people dislike weeds in the paddy field. The Vachana asks, would one ever dislike the crop? When a cow is rogue, one would tie her legs to help get the milk out; no one would tie the udder. The Vachana advocates constantly moving towards the awareness and away from the ignorance. One should be averse to the ignorance of those who continue to go through rebirths and keep themselves immersed in the material  world, but not to the awareness of those who have lifted themselves above it. Arivina Marithande says that he bows to those who are aware, may it be teacher, devotee or the icon. He has no appreciation for those who just pretend to be a teacher or a devotee and those who are not really aware of the meaning behind the icon.  Further, he cannot stay away from churning the ignorance away from himself, and this nature of his is a gift from the Lord.

Let churning the ignorance away become our nature!

KANNADA COMMENTARY

ಕೆಯಿ (ಭತ್ತ)  ಬೆಳೆವಲ್ಲಿ ಸದೆಗೆ (ಕಳೆಗೆ)  ಮುನಿವರಲ್ಲದೆ (ಬೇಸರಪಟ್ಟುಕೊಳ್ಳುವರು ಅಲ್ಲದೆ)
ಬೆಳೆಗೆ ಮುನಿದವರುಂಟೆ ಅಯ್ಯಾ?
ಅರಿದಂಗವ ತಾಳಿದವರಲ್ಲಿ (ತಿಳಿದೂ ಮರು ಜನ್ಮವ ಪಡೆದವರಲ್ಲಿರುವ )  ಮರೆವೆಗೆ (ಅಜ್ಞಾನಕ್ಕೆ) ಮುನಿವರಲ್ಲದೆ
ಅರಿವಿಗೆ ಮುನಿವರುಂಟೆ ಅಯ್ಯಾ?
ಕೊಲ್ಲಿ (ತುಂಟ) ಆವಿಂಗೆ (ಆಕಳಿಗೆ, ಹಸುವಿನ ) ಕಾಲ ಕಟ್ಟುವರಲ್ಲದೆ (ಕಾಲುಗಳನ್ನು ಕಟ್ಟುವರು ಅಲ್ಲದೆ)
ಮೊಲೆಯ ಕಟ್ಟಿದರುಂಟೆ ಅಯ್ಯಾ?
ಗುರುವಾದಡೂ ಆಗಲಿ
ಲಿಂಗವಾದಡೂ ಆಗಲಿ
ಜಂಗಮವಾದಡೂ ಆಗಲಿ
ಅರಿವಿಂಗೆ ಶರಣು (ಅರಿವಿಗೆ ತಲೆ ಬಾಗುತ್ತೇನೆ) ಮರೆವಿಗೆ ಮಥನವ ಮಾಡಿದಲ್ಲದೆ ಇರೆ (ಮರೆವನ್ನು ಮಥಿಸದೆ ಇರಲಾರೆನು).
ಇದು ನೀವು ಕೊಟ್ಟ ಅರಿವಿನ ಮಾರನ ಇರವು
ಸದಾಶಿವಮೂರ್ತಿಲಿಂಗದ ಬರವು

ತಾತ್ಪರ್ಯ:

ಇದು ಅರಿವಿನ ಮಾರಿತಂದೆಯವರ ಮತ್ತೊಂದು ವಚನ. ಇಲ್ಲಿ ಅವರು ಸಾಮಾನ್ಯವಾಗಿ ಜನರು  ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತ ತನ್ನ ಸ್ವಭಾವದ ಬಗ್ಗೆ ಹೇಳುತ್ತಿದ್ದಾರೆ. ತನ್ನ ಆ ವಿಶಿಷ್ಟ ಸ್ವಭಾವ ಸದಾಶಿವಮೂರ್ತಿಲಿಂಗದ ಅನುಗ್ರಹ ಎಂದು ಹೇಳುತ್ತಾರೆ.

ಭತ್ತದ ಹೊಲದಲ್ಲಿ ಬೆಳೆಯುವ ಕಳೆಗೆ ಜನರು ಮುನಿಯುವರು. ಅದನ್ನು ಕಿತ್ತುಹಾಕುವರು. ಆದರೆ ಭತ್ತದ ಬೆಳೆಗೆ ಯಾರಾದರು ಮುನಿಯುತ್ತಾರೆಯೆ?  ಇಲ್ಲ. ಏಕೆಂದರೆ ಭತ್ತ ವ್ಯಕ್ತಿಯ ಹೊಟ್ಟೆ ತುಂಬುತ್ತದೆ. ಕಳೆಯಿಂದ ಯಾವ ಪ್ರಯೋಜನವೂ ಇಲ್ಲ. ಅದು ತಿನ್ನಲು ಬರುವುದಿಲ್ಲ. ಪ್ರಾಣಮೂಲವಾದ ಭತ್ತದ ಸೊಂಪಾದ ಬೆಳೆಗೆ ಹಾನಿ ಮಾಡುತ್ತದೆ. ಆದ್ದರಿಂದ ಅದನ್ನು ಯಾರೂ ಇಷ್ಟಪಡುವುದಿಲ್ಲ. ಜಗತ್ತಿನಲ್ಲಿ ಅಜ್ಞಾನದಿಂದ ಹುಟ್ಟು ಸಾವಿನ ಚಕ್ರದಲ್ಲಿ ಸಿಕ್ಕು ಜನ್ಮತಾಳಿದವನ ಅಜ್ಞಾನ ತೆಗಳಿಕೆಗೆ ಗುರಿಯಾಗುತ್ತದೆಯೆ  ಹೊರತು ಅರಿವನ್ನು  ಯಾರೂ ತೆಗಳುವುದಿಲ್ಲ. ಅಜ್ಞಾನದಿಂದ ಹುಟ್ಟು ಸಾವುಗಳು, ಸುಖ ದುಃಖಗಳು  ಬಾಧಿಸುತ್ತವೆ, ಅರಿವುಳ್ಳವನು ಇವುಗಳಿಂದ ಬಾಧೆ ಪಡುವುದಿಲ್ಲ.
ತುಂಟ ಆಕಳ ಕಾಲುಗಳನ್ನು ಕಟ್ಟುತ್ತಾರೆ. ಏಕೆಂದರೆ ಅದು ಹಾಲು ಕರೆಯಲು ಬಿಡುವುದಿಲ್ಲ. ಹಾಲು ಕರೆಯಲು ಅಡ್ಡಿ ಮಾಡುವುದರಿಂದ ಆದರ ಕಾಲುಗಳನ್ನು ಕಟ್ಟಿಹಾಕುತ್ತಾರೆಯೇ ಹೊರತು ಯಾರೂ ಅದರ ಮೊಲೆಗಳನ್ನು ಕಟ್ಟಿಹಾಕುವುದಿಲ್ಲ. ಅವುಗಳಿಂದ ಅಮೃತದಂತಹ ಹಾಲು ದೊರೆಯುತ್ತದೆ.  ಇಲ್ಲಿ ಒಳ್ಳೆಯದನ್ನು ಪಡೆಯುವಲ್ಲಿ ಅಡ್ಡಿಯಾಗುವ ಕಳೆ ಮತ್ತು ತುಂಟ ಕಾಲುಗಳನ್ನು ಉಪಾಯದಿಂದ ತಮ್ಮ ಕೆಲಸದಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಾರೆ ಜನರು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.
ಗುರು ಲಿಂಗ ಜಂಗಮರ ಅರಿವಿಂಗೆ ನಾನು ಶರಣು ಎನ್ನುತ್ತೇನೆ, ಎಂದರೆ ಅರಿವು ಗುರುವಿನಲ್ಲಿರಲಿ, ಲಿಂಗದಲ್ಲಿರಲಿ ಅಥವಾ ಜಂಗಮನಲ್ಲಿರಲಿ ಆ ಅರಿವಿಂಗೆ ನಾನು ಶರಣನೆನ್ನುತ್ತೇನೆ. ಅರಿವು ಇಲ್ಲದ ಗುರು, ಲಿಂಗ ಹಾಗೂ ಜಂಗಮಕ್ಕೆ ನಾನು ಶರಣು ಎನ್ನಲಾರೆ  ಎಂಬ ಭಾವ. ಅರಿವು ಇಲ್ಲದ ಗುರು ಜಂಗಮರು ಕೇವಲ ತೋರಿಕೆಯ ಗುರು ಜಂಗಮರು.ಅಂತಹವರಿಗೆ ಶರಣೆಂದು ಏನು ಫಲ? ಅರಿವು ಉಂಟಾಗದೆ ಇದ್ದಾಗ ಲಿಂಗ ಕೇವಲ ಒಂದು ಕಲ್ಲು, ಅದು ಕುರುಹು ಮಾತ್ರ. ಕುರುಹಿನ ಹಿಂದಿರುವ ಅರಿವು ಮುಖ್ಯ.  ಭತ್ತ ಮತ್ತು ಹಾಲಿನಂತೆ ಅರಿವು ನನಗೆ ಜೀವರಸ. ಈ ವಿಷಯದ ಬಗ್ಗೆ ನನ್ನ ಮನದಲ್ಲಿ ಮರೆವೆಯುಂಟಾದರೆ ನಾನು ಮನೋಮಂಥನಕ್ಕೆ ಮೊದಲು ಮಾಡುತ್ತೇನೆ. ಹಾಗೆ ಮರವೆಯನ್ನು ಮಥಿಸದೆ ನಾನು ಇರಲಾರೆ, ಎಂದು ಹೇಳುತ್ತಾರೆ ಅರಿವಿನ ಮಾರಿ ತಂದೆಯವರು. ಹೇಗೆ ಕಳೆಯನ್ನು ಕಂಡು ಮನವು ಮುನಿಯುತ್ತದೆಯೋ, ಹೇಗೆ ತುಂಟ ಹಸುವಿನ ಕಾಲುಗಳು ಅವುಗಳನ್ನು ಕಟ್ಟುವಂತೆ ಮಾಡುತ್ತವೆಯೋ ಹಾಗೆಯೇ ನನ್ನ ಮರೆವು  ಮಂಥನಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ. ಮರವೆಯನ್ನು ಮಥಿಸಿ ಅರಿವನ್ನು ಪಡೆಯುವುದು  ನನ್ನ ಸ್ವಭಾವ.  ನಾನು ಹಾಗೆ ಮಾಡದೆ ಇರಲಾರೆನು ಎಂದು ಹೇಳುವಲ್ಲಿ ಅವರ ಛಲ ಮತ್ತು ಆತ್ಮವಿಶ್ವಾಸ ಕಂಡು ಬರುತ್ತದೆ. ಸಾಮಾನ್ಯರಾದ ನಾವು ಮರವೆಯಲ್ಲಿ ಮುಳುಗಿರುತ್ತೇವೆ. ಇಡೀ ಬದುಕೇ ಮರವೆಯಲ್ಲಿ ಕಳೆದು ಹೋಗುತ್ತದೆ. ಆದರೆ ಅದನ್ನು ಗುರುತಿಸುವುದು ಸಾಮಾನ್ಯ ಲಕ್ಷಣವಲ್ಲ.  ಗುರುತಿಸಿ ಅದನ್ನು ಮಥಿಸಿ ಅರಿವಿನೆಡೆಗೆ ಹೋಗುವುದು ಶರಣರ ದಾರಿ. ಅದನ್ನು ನಾನು ಮಾಡುತ್ತೇನೆ ಎಂದು ಹೇಳುವಲ್ಲಿ ಅವರ ಆತ್ಮವಿಶ್ವಾಸ  ಎದ್ದು ತೋರುತ್ತದೆ. ಆದರೆ ಅದು ನೀ ಕೊಟ್ಟ ಕೊಡುಗೆ ಎಂದು ಆ ಸದಾಶಿವಮೂರ್ತಿಲಿಂಗವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.  ಎಂದರೆ ಮರವೆಯನ್ನು ಮಥಿಸುತ್ತ ಅರಿವಿನೆಡೆಗೆ ಹೋಗುವಂತಹ ತನ್ನ ಸ್ವಭಾವದ ಅನುಗ್ರಹ ತನಗೆ ಆ ಸದಾಶಿವಮೂರ್ತಿಯಿಂದ ಆದದ್ದು ಎಂದು ಹೇಳುತ್ತಾರೆ. ಇಲ್ಲಿ ಅವರ ವಿನಯ ಎದ್ದು ತೋರುತ್ತದೆ. ವಿನಯ ಅರಿವಿನ ಮುಖ್ಯ ಲಕ್ಷಣ.