VACHANA IN KANNADA
ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ
ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ
ಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
aada piMDava taaneMdeMba
mithyaacaramadEhigaLanEneMbenayya?
nelanallada nIrallada kiccallada gaaLiyallada
bayalallada prakRutiyallada puruShanallada
mElaNa shuddhasvayave taaneMdu tiLidaatanallade
sharaNalla kaaNaa mahaaliMgaguru shivasiddhEshvara prabhuve.
TRANSLATION (WORDS)
mithyaa (false) carama (skin) dEhigaLanu (the one with body) EneMbenayya? (what can I call, Sir?) nelanallada (not the earth) nIrallada (not the water) kiccallada (not the fire) gaaLiyallada (not the air)
bayalallada (not the space) prakRutiyallada (not the nature) puruShanallada ( not the soul)
mElaNa (above , beyond) shuddhasvayave (pure self) taaneMdu (is oneself) tiLidaatanallade (who doesn’t think so)
sharaNalla (is not a sharana/ devotee) kaaNaa mahaaliMgaguru shivasiddhEshvara prabhuve (you see Mahalingaguru Shivasiddheshvara Prabhuve).
The true devotee is only that one who has realized that beyond all these, the pure self! You see Mahalingaguru Shivasiddheshvara Prabhuve
The body merges into the elements it came from when we die. The soul (self) stays on and moves to another body. the self was there before the body came along and it will be there once the current body goes away.
ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ? (ಮಾಯೆಯ ದೇಹದವರನ್ನು ಏನೆಂದು ಹೇಳಲಿ)
ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ (ಭೂಮಿ, ಜಲ, ಅಗ್ನಿ, ಗಾಳಿ ಅಲ್ಲದ)
ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ (ಆಕಾಶವಲ್ಲದ, ಪ್ರಕೃತಿಯೂ ಅಲ್ಲದ, ಪುರುಷನೂ ಅಲ್ಲದ)
ಮೇಲಣ ಶುದ್ಧಸ್ವಯವೆ (ಎಲ್ಲದಕ್ಕಿಂತ ಮೇಲಿನ ನಿರ್ಮಲವಾದ ನಿಜರೂಪವೇ) ತಾನೆಂದು ತಿಳಿದಾತನಲ್ಲದೆ (ತಾನು ಎಂದು ತಿಳಿದಾತನು ಅಲ್ಲದೆ)
ಶರಣನಲ್ಲ ಕಾಣಾ,( ಬೇರೆಯವನು ಶರಣನಲ್ಲ) ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಈ ವಚನದಲ್ಲಿ ತೋಂಟದ ಸಿದ್ಧಲಿಂಗರು ಶರಣನೆಂದರೆ ಯಾರು ಎಂಬುದನ್ನು
ಹೇಳುತ್ತಿದ್ದಾರೆ. ನೆಲ, ನೀರು, ಕಿಚ್ಚು, ಗಾಳಿ
ಮತ್ತು ಬಯಲು ಕೂಡಿ, ಅಂದರೆ ಪಂಚಮಹಾಭೂತಗಳು ಕೂಡಿ, ಈ ಭೌತಿಕ ಶರೀರ ರೂಪುಗೊಂಡಿದೆ. ಆದರೆ
ಇದರಲ್ಲಿ ಅಡಗಿರುವ ಶುದ್ಧಾತ್ಮ ಈ ಶರೀರಕ್ಕೆ
ಸೀಮಿತವಾದುದಲ್ಲ. ಅದು ಮೊದಲೂ ಇತ್ತು ಮತ್ತು ಈ ಶರೀರ ಸತ್ತು ಹೋದಮೇಲೆಯೂ ಇರುತ್ತದೆ. ಅದು ಈ
ದೇಹಕ್ಕೆ ಮಾತ್ರ ಸೀಮಿತವಾಗಿಲ್ಲ. ಆದರೆ ಅದನ್ನು ಅರಿಯದೆ ಈ ಸತ್ತು ಹೋಗುವ ಈ ದೇಹವನ್ನೇ
ನಿಜವಾದದ್ದು ಎಂದು ಭ್ರಮಿಸುವ, ಅದೇ ತಾನು, ಎಂದು
ಮಾಯೆಯಲ್ಲಿ ಮುಳುಗಿದವರನ್ನು ಏನೆಂದು ಕರೆಯಲಿ? ಎಂದು ಕೇಳುತ್ತಾರೆ ಸಿದ್ಧಲಿಂಗರು. ಈ ದೇಹ
ಪಂಚಮಹಾಭೂತಗಳಿಂದ ಉಂಟಾಗಿದೆ. ಜೀವ ಹೋದಮೇಲೆ ಅದು ಮತ್ತೆ ಪಂಚಮಹಾಭೂತಗಳಲ್ಲಿ ಸೇರಿ ಹೋಗುತ್ತದೆ.
ಅಲ್ಲಿಯವರೆಗೆ ಅದು ಈ ದೇಹದ ರೂಪ ಧರಿಸಿರುತ್ತದೆ. ಅಲ್ಲಿಯವರೆವಗೆ ಮಾತ್ರ ಆತ್ಮಕೂಡ ಅದರಲ್ಲಿ
ವಾಸಮಾಡುತ್ತದೆ. ಆಮೇಲೆ ಅದು ಆ ಪರವಸ್ತುವಿನಲ್ಲಿ ಸೇರಿಹೋಗುತ್ತದೆ. ಇದನ್ನು ಅರಿತುಕೊಂಡು ಈ ದೇಹ ತಾನಲ್ಲ ಎಂದು ಅರಿಯಬೇಕು. ಅದರ ಬಗ್ಗೆ
ಅಹಂಕಾರಪಡಬಾರದು. ಅಥವಾ ಅದೇ ತಾನು ಎಂದು ತಿಳಿಯಬಾರದು.
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ
ಆದ ಪಿಂಡವ ತಾನೆಂದೆಂಬ
ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ?
ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ
ಮೇಲಣ ಶುದ್ಧಸ್ವಯವೆ ತಾನೆಂದು ತಿಳಿದಾತನಲ್ಲದೆ
ಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
TRANSLITERATION
nela nIru kiccu, gaaLi bayalu kUDiaada piMDava taaneMdeMba
mithyaacaramadEhigaLanEneMbenayya?
nelanallada nIrallada kiccallada gaaLiyallada
bayalallada prakRutiyallada puruShanallada
mElaNa shuddhasvayave taaneMdu tiLidaatanallade
sharaNalla kaaNaa mahaaliMgaguru shivasiddhEshvara prabhuve.
CLICK HERE FOR A RECITATION
http://youtu.be/4rDAAUAoIm8
nela ( earth) nIru (water)
kiccu (fire), gaaLi (air) bayalu (space) kUDi (together)
aada (have become)
piMDava (the body) taaneMdeMba
(thinking ‘I am’ )mithyaa (false) carama (skin) dEhigaLanu (the one with body) EneMbenayya? (what can I call, Sir?) nelanallada (not the earth) nIrallada (not the water) kiccallada (not the fire) gaaLiyallada (not the air)
bayalallada (not the space) prakRutiyallada (not the nature) puruShanallada ( not the soul)
mElaNa (above , beyond) shuddhasvayave (pure self) taaneMdu (is oneself) tiLidaatanallade (who doesn’t think so)
sharaNalla (is not a sharana/ devotee) kaaNaa mahaaliMgaguru shivasiddhEshvara prabhuve (you see Mahalingaguru Shivasiddheshvara Prabhuve).
VACHANA IN ENGLISH
Sir! What can I call these people with false bodies
covered with skin, thinking “ I am the body constituted by earth, water, fire,
air and space”!
Not earth, not water, not fire, not air, not space,
not the nature, not the soul,The true devotee is only that one who has realized that beyond all these, the pure self! You see Mahalingaguru Shivasiddheshvara Prabhuve
COMMENTARY
The five basic elements (Earth, water,
fire, air, space) constitute our body. The
body is a gift of God. We are fortunate to have received such a precious gift.
It should certainly be cared for and maintained in its best form, because it is the abode of the Divine, the pure self. When we start thinking
that this body is ours, we develop an attachment to it, we tend to use it as we
please, we become proud of it and our ego grows. We forget the spark within
that makes the body serve its purpose.
We must realize that this gift has to be
returned to the giver when the time comes along. When we realize
that this body is not ours and we need
to return it when asked for, we tend to maintain and preserve it. We do not
develop an attachment to it and our ego stays contained. The body merges into the elements it came from when we die. The soul (self) stays on and moves to another body. the self was there before the body came along and it will be there once the current body goes away.
In this Vachana Thontada Siddalinga
Swamigalu highlights that a true devotee is the one who understands that the
pure self is not bounded or limited by this body. It is beyond that and it is
permanent.It was there before the body was formed as its housing and it
continues to be there after the body dissipates into the elements as one dies.
The Vachana laments as to what can we call the individuals who are so attached
to their body and believe that they are just the body?
The message of the Vachana is that one
has to realize that the self is beyond the constraints of this body. One is not
body, but the pure self. The pure self is an integral part of the supreme and
the divine. It is within us and hence ‘I am Him’.
Let us see be Divine in us!
KANNADA COMMENTARY
ಅರ್ಥ:
ನೆಲ ನೀರು ಕಿಚ್ಚು ಗಾಳಿ ಬಯಲು ಕೂಡಿ (ಪೃಥ್ವಿ, ಅಪ್ಪು, ತೇಜುಸ್ಸು, ವಾಯು ಮತ್ತು
ಆಕಾಶಗಳು ಕೂಡಿ)
ಆದ ಪಿಂಡವ ತಾನೆಂದೆಂಬ (ಉಂಟಾದ ಈ
ದೇಹವನ್ನು ’ತಾನು’ ಎಂದು ನಂಬುವ)ಮಿಥ್ಯಾಚರ್ಮದೇಹಿಗಳನೇನೆಂಬೆನಯ್ಯ? (ಮಾಯೆಯ ದೇಹದವರನ್ನು ಏನೆಂದು ಹೇಳಲಿ)
ನೆಲನಲ್ಲದ ನೀರಲ್ಲದ ಕಿಚ್ಚಲ್ಲದ ಗಾಳಿಯಲ್ಲದ (ಭೂಮಿ, ಜಲ, ಅಗ್ನಿ, ಗಾಳಿ ಅಲ್ಲದ)
ಬಯಲಲ್ಲದ ಪ್ರಕೃತಿಯಲ್ಲದ ಪುರುಷನಲ್ಲದ (ಆಕಾಶವಲ್ಲದ, ಪ್ರಕೃತಿಯೂ ಅಲ್ಲದ, ಪುರುಷನೂ ಅಲ್ಲದ)
ಮೇಲಣ ಶುದ್ಧಸ್ವಯವೆ (ಎಲ್ಲದಕ್ಕಿಂತ ಮೇಲಿನ ನಿರ್ಮಲವಾದ ನಿಜರೂಪವೇ) ತಾನೆಂದು ತಿಳಿದಾತನಲ್ಲದೆ (ತಾನು ಎಂದು ತಿಳಿದಾತನು ಅಲ್ಲದೆ)
ಶರಣನಲ್ಲ ಕಾಣಾ,( ಬೇರೆಯವನು ಶರಣನಲ್ಲ) ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಈ ದೇಹ ತಾನಲ್ಲ ಆದರೆ ಇದು ತನಗೆ ದೇವರ ದಯೆಯಿಂದ ಸಿಕ್ಕಿದೆ. ಅದು ಸಿಕ್ಕಿರುವದು
ತನ್ನ ಭಾಗ್ಯ. ಅದನ್ನು ತಾನು ಚೆನ್ನಾಗಿ ನೋಡಿಕೊಳ್ಳಬೇಕು. ಅದರ ಬಗ್ಗೆ ಕಾಳಜಿವಹಿಸಬೇಕು. ಮತ್ತು
ಅದರ ಸಮಯಬಂದಾಗ ಅದನ್ನು ಹಿಂತಿರುಗಿಸಿವುದು ತನ್ನ ಕರ್ತವ್ಯ ಎಂಬ ಭಾವನೆ ಇರುವುದು ಮುಖ್ಯ. ಈ ದೇಹ ತನ್ನದಲ್ಲ, ಎನ್ನುವ ಭಾವ ಅಳವಟ್ಟಾಗ ಅದರ ಬಗ್ಗೆ ಅಹಂಕಾರವಿರುವುದಿಲ್ಲ ಮತ್ತು ಈ ದೇಹ ಹೊರಟು
ಹೋಗುತ್ತದೆ, ಕೊನೆಗೊಳ್ಳುತ್ತದೆ ಎನ್ನುವ ಭಯ, ದುಃಖಗಳು ಇರುವುದಿಲ್ಲ. ಅದಕ್ಕೆ ಬದಲಾಗಿ ಈ ದೇಹವೇ
ತಾನು, ಎನ್ನುವ ಭಾವ ಅಹಂಕಾರಕ್ಕೆ ದಾರಿಮಾಡಿಕೊಟ್ಟು, ಅದನ್ನು ತನ್ನಿಚ್ಛೆಗೆ ಬಂದಂತೆ ಬಳಸಲು
ಎಡೆಮಾಡಿಕೊಡುತ್ತದೆ. ಅನೇಕ ಆಸೆ ಆಕಾಂಕ್ಷೆಗಳು
ಚಿಗುರಿ ಬೆಳೆದು ಹೆಮ್ಮರವಾಗಿ ದೇಹವನ್ನು ತಪ್ಪಾಗಿ ಬಳಸುವಂತೆ ಮಾಡುತ್ತವೆ. ಇದು ಮಹಾ
ಅಜ್ಞಾನ. ಮಾಯೆಯ ಕತ್ತಲೆ. ಇದನ್ನು ಅರಿತು ಅರಿವಿನಿಂದ
ನಡೆಯಬೇಕು.ಎಂಬುದು ಇದರ ತಾತ್ಪರ್ಯ.
ನೆಲ, ನೀರು, ಕಿಚ್ಚು, ಗಾಳಿ ಮತ್ತು ಆಕಾಶ ಇದು ಯಾವುದೂ ಅಲ್ಲದ ಆತ್ಮನ ನಿಜವಾದ
ಸ್ವರೂಪವೇ ತಾನು. ತಾನು ಪ್ರಕೃತಿಯೂ ಅಲ್ಲ
ಪುರುಷನೂ ಅಲ್ಲ. ತಾನು ಈ ಎಲ್ಲವನ್ನೂ ಮೀರಿದ ಪರವಸ್ತುವಿನ ಅಂಶ. ಎಂದು ತಿಳಿದುಕೊಳ್ಳಬೇಕು. ಹಾಗೆ
ತಿಳಿದವನು ಮಾತ್ರ ಶರಣನು, ಬೇರೆಯವರಲ್ಲ ಎಂದು
ಹೇಳುತ್ತಾರೆ ತೋಂಟದ ಸಿದ್ಧಲಿಂಗ ಸ್ವಾಮಿಗಳು.
This is a powerful vachana. If only we can remember that we are not the body, the body is temporary and it has a finite life; and that we are all that part of the supreme divine and see the same in others....
ReplyDeletesuch an amazingly written vachana. This can be said as the gist, crux of Sharana philosophy, Oneness of Poojya (worshipped), Poojaka (worshipper), and Pooje (worship). One is not seperated from each other. Because we are That.... Thanks a ton for for such lucid interpretation
ReplyDelete