Friday, November 8, 2013

Vachana 167: Jyotiyidda Maneyalli Kattaleyunte? – Is there darkness in the house with Light?


 VACHANA IN KANNADA

 ಜ್ಯೋತಿಯಿದ್ದ  ಮನೆಯಲ್ಲಿ ಕತ್ತಲೆಯುಂಟೆ?
ಲಿಂಗವಿದ್ದಲ್ಲಿ ಅಜ್ಞಾನವುಂಟೆ?
ಅಜ್ಞಾನವಿಲ್ಲವಾಗಿ  ಅಂಗವಿಕಾರವಿಲ್ಲ.
ಅಂಗವಿಕಾರವಿಲ್ಲವಾಗಿ
ಹೆಂಗಳಿಗೆ ಸೋಲರು, ಹೊಂಗಳಿಗೆಣಿಸರು
ಮಹಾಲಿಂಗೈಕ್ಯರು ನಿಮ್ಮ ಪ್ರಮಥರು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

 TRANSLITERATION

jyOtiyidda maneyalli kattaleyuMTe?
liMgaviddalli aj~jaanavuMTe?
aj~jaanavillavaagi aMgavikaaravilla.
aMgavikaaravillavaagi
heMgaLige sOlaru, hoMgaLigeNisaru
mahaalimGaikyaru nimma pramatharu,
mahaaliMgaguru shivasiddhEshvara prabhuve.

CLICK HERE FOR RECITATION


TRANSLATION (WORDS)

jyOtiyidda ( where there is light)  maneyalli  (in the house)  kattaleyuMTe (can there be darkness)?
liMgaviddalli  (where there is Linga/ God/ awareness) aj~jaanavuMTe (can there be ignorance)?
aj~jaanavillavaagi (there is no ignorance so) aMgavikaaravilla  (there is no wavering of mind) .
aMgavikaaravillavaagi I there is no wavering of mind)
heMgaLige (for  women)  sOlaru  (will not fall for), hoMgaLigeNisaru (will not fall for money)
mahaalimGaikyaru (being one with the Linga/ god)  nimma (your)  pramatharu (devotees),
mahaaliMgaguru shivasiddhEshvara prabhuve. (Mahalingaguru Shiva siddheshvara Prabhuve)

 VACHANA IN ENGLISH

Can there be a darkness in the house where there is light?
Can there be ignorance where there is Linga (God)?
There is no ignorance and hence there is no wavering of mind.
Your devotees will not fall for women, will not fall for money
being one with the great Linga (God)!
Mahalingaguru Shiva Siddheshvara Prabhuve!

 COMMENTARY

In this Vachana Thontada Siddalingesvara Swamigalu comments on how enlightened and aware the true devotees of the God are. Their awareness makes them one with God and keeps them away from worldly desires for women and wealth. They can distinguish between the impermanent pleasures of the mundane world and the permanent bliss of being one with God. The light of awareness drives away the darkness of ignorance. Just as the light in the house dives away the darkness, there cannot be any ignorance left once one realizes God. The Vachana refers to Linga as God. Linga is an icon of the Divine. Just wearing Linga or being in its presence is not sufficient. One should be completely aware of the Divine within that the Linga stands for. Once such awareness sets in and the ignorance goes away the mind does not waver anymore. The individual then becomes centered in the Self. The Vachana stresses that all true devotees are centered in their Self and be one with Him always.
We are always immersed in our mundane activities in this world. We hardly find time to think about the Divine. We completely forget Him when we succeed in all we do and acquire all the wealth that makes us happy. We fall from this height when things go wrong. Somehow the awareness of Divine sets in when we say “Oh God, why did you do this to me!”  The Vachana asks us to get out of this ignorance and become God minded. That is the way of Great devotees. That is the way to pure bliss!

 Let us realize that pure state of bliss and stay there!

KANNADA COMMENTARY

ಅರ್ಥ:

ಜ್ಯೋತಿಯಿದ್ದ  (ದೀಪ ಬೆಳುಗುವ) ಮನೆಯಲ್ಲಿ ಕತ್ತಲೆಯುಂಟೆ?
ಲಿಂಗವಿದ್ದಲ್ಲಿ ಅಜ್ಞಾನವುಂಟೆ? (ಲಿಂಗವು ಅರಿವಿನ ಕುರುಹು, ಅರಿವಿದ್ದಲ್ಲಿ ಅಜ್ಞಾನವಿರಲು ಸಾಧ್ಯವಿಲ್ಲ)
ಅಜ್ಞಾನವಿಲ್ಲವಾಗಿ  ಅಂಗವಿಕಾರವಿಲ್ಲ. (ಜ್ಞಾನವಿದ್ದಲ್ಲಿ ಚಿತ್ತಚಾಂಚಲ್ಯ ಇಲ್ಲ)
ಅಂಗವಿಕಾರವಿಲ್ಲವಾಗಿ (ಚಿತ್ತ ಚಾಂಚಲ್ಯ ಇಲ್ಲದಾಗ)
ಹೆಂಗಳಿಗೆ ಸೋಲರು, ಹೊಂಗಳಿಗೆಣಿಸರು  (ಹೆಣ್ಣುಗಳಿಗೆ ಸೋಲುವುದಿಲ್ಲ, ಹೊನ್ನುಗಳನ್ನು ಎಣಿಸುವುದಿಲ್ಲ)
ಮಹಾಲಿಂಗೈಕ್ಯರು ನಿಮ್ಮ ಪ್ರಮಥರು, (ಪ್ರಮಥರು ಸದಾ ಲಿಂಗದಲ್ಲಿ ಲೀನರಾಗಿ ಅದರಲ್ಲಿಯೇ ಒಂದಾಗಿರುವರು)
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ.

ತಾತ್ಪರ್ಯ:

ಶಿವನ ಹಿರಿಯ ಭಕ್ತರು ಹೇಗಿರುತ್ತಾರೆ ಎಂಬುದನ್ನು ಇಲ್ಲಿ ಹೇಳುತ್ತಿದ್ದಾರೆ.
ದೀಪ ಬೆಳಗುವ ಮನೆಯಲ್ಲಿ ಕತ್ತಲೆಯಿರುತ್ತದೆಯೆ? ದೀಪವಿದ್ದಾಗ ಕತ್ತಲೆಯಿರುವುದಿಲ್ಲ. ಅದು ಅಸಾಧ್ಯ. ದೀಪ ಕತ್ತಲೆಯನ್ನೆಲ್ಲ ಹೇಳ ಹೆಸರಿಲ್ಲದೆ ನುಂಗಿಬಿಡುತ್ತದೆ. ಮತ್ತು ಎಲ್ಲೆಡೆಯೂ ತಾನೇ ತಾನಾಗಿರುತ್ತದೆ. ತೋಂಟದ ಸಿದ್ಧಲಿಂಗರು ’ಲಿಂಗವಿದ್ದಲ್ಲಿ ಅಜ್ಞಾನವಿರುತ್ತದೆಯೆ?’ ಎಂದು ಕೇಳುತ್ತಾರೆ. ಲಿಂಗವಿದ್ದಲ್ಲಿ ಅಜ್ಞಾನಕ್ಕೆ ಎಡೆಯಿಲ್ಲ. ಎಂದರೆ ಏನು ಅರ್ಥ. ಲಿಂಗಕಟ್ಟಿಕೊಂಡವರೆಲ್ಲ ಜ್ಞಾನಿಗಳೆ? ಅಲ್ಲ. ’ಲಿಂಗವಿದ್ದಲ್ಲಿ’ ಎಂದರೆ  ಲಿಂಗದ ಅರಿವಿದ್ದಲ್ಲಿ ಎಂದರ್ಥ. ಲಿಂಗ ಒಂದು ಕುರುಹು. ಅದು ಅರಿವಿನ ಕುರುಹು. ಆ ಕುರುಹಿನ ಹಿಂದೆ ಇರುವ ಅರ್ಥವನ್ನು ಅರಿಯದೆ ಅದನ್ನು ಧರಿಸಿಕೊಂಡರೆ ಯಾವ ಪ್ರಯೋಜನವೂ ಇಲ್ಲ.  ಲಿಂಗದ ಅರ್ಥವನ್ನು ಅರಿತು ಅದನ್ನು ಧರಿಸಿದವನು ನಿಜವಾದ ಭಕ್ತ. ಲಿಂಗ ಅರಿವಿನ ಪ್ರತೀಕ. ಅರಿವು ಇರುವಲ್ಲಿ ಅಜ್ಞಾನವಿರುವುದಿಲ್ಲ. ಅರಿವು ಮೂಡಿದ ಕ್ಷಣ ಅಜ್ಞಾನ ಮಟಾಮಾಯವಾಗಿಹೋಗುತ್ತದೆ. ನಮಗೆಲ್ಲ ಬೆಂಕಿಯಲ್ಲಿ ಕೈಯಿಟ್ಟರೆ ಸುಡುತ್ತದೆ ಎಂಬ ಸಾಮಾನ್ಯ ಜ್ಞಾನ ಅಥವಾ ಅರಿವು ಇದೆ. ಆದ್ದರಿಂದ ನಾವು ಎಂದೂ ಬೆಂಕಿಯಲ್ಲಿ ಕೈಯಿಡುವುದಿಲ್ಲ. ಬೆಂಕಿಯಲ್ಲಿ ಕೈಯಿಡುವುದು ಅಜ್ಞಾನ. ಅಂತಹ ಅಜ್ಞಾನಕ್ಕೆ ನಾವು ಮುಂದಾಗುವುದಿಲ್ಲ.  ಅಜ್ಞಾನ ಕತ್ತಲೆಯ ಪ್ರತೀಕ. ದೀಪವಿರುವಲ್ಲಿ ಕತ್ತಲೆಇಲ್ಲದಿರುವಂತೆ ಅರಿವಿದ್ದಲ್ಲಿ ಅಜ್ಞಾನವಿರುವುದಿಲ್ಲ.  ಅಜ್ಞಾನ ವಿಲ್ಲದಿದ್ದಲ್ಲಿ  ಅಂಗವಿಕಾರವಿರುವುದಿಲ್ಲ ಎನ್ನುತ್ತಾರೆ ಸಿದ್ಧಲಿಂಗ ಸ್ವಾಮಿಗಳು. ಅಂದರೆ ಜ್ಞಾನಿಯಾದವನು ಚಿತ್ತ ಚಾಂಚಲ್ಯಕ್ಕೆ ಒಳಗಾಗುವುದಿಲ್ಲ. ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ದುಃಖಕ್ಕೆ ದಾರಿಮಾಡಿಕೊಡುವವನು ಅಜ್ಞಾನಿ. ಆತನಿಗ ಚಿತ್ತ ಚಾಂಚಲ್ಯ,  ದುಃಖವನ್ನುಂಟುಮಾಡುತ್ತದೆ ಎಂಬ ವಿಷಯ ಅರಿವಿಗೆ ಬರುವುದಿಲ್ಲ. ಇಂತಿಂತಿಹ ಸುಖ ತನಗೆ ಬೇಕು ಎಂದು ಬಯಸುವವನು, ತನ್ನ ಮನಸ್ಸಿನ ಚಪಲವನ್ನು ಕ್ಷಣಿಕವಾಗಿ ತೀರಿಸಿಕೊಂಡು ಮತ್ತೆ ಮತ್ತೆ ಬರುವ ನಿರಾಶೆಗೆ ಗುರುಯಾಗುವವನು ಜ್ಞಾನಿ ಹೇಗಾದಾನು? ನಿಜವಾದ ಜ್ಞಾನಿ ತನ್ನ ಮನಸ್ಸು ಕ್ಷಣಿಕ ಸುಖಕಾಗಿ ಏನನ್ನು ಬಯಸುತ್ತಿದೆ, ಮತ್ತು ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ತನ್ನ ಅರಿವಿನಿಂದ ತಿಳಿದು ಆ ಬಯಕೆಯನ್ನು ಬೇರುಸಹಿತ ಸುಟ್ಟುಬಿಡುತ್ತಾನೆ. ಆದ್ದರಿಂದ  ಜ್ಞಾನವಿದ್ದಲ್ಲಿ ಅಂಗವಿಕಾರವಿರುವುದಿಲ್ಲ. ಯಾವಾಗ ಅಂಗವಿಕಾರವಿರುವುದಲ್ಲವೋ ಆಗ ಹೆಣ್ಣು ಹೊನ್ನುಗಳಿಗಾಗಿ ಅವರು ಎಂದೂ ಬಲಿಯಾಗುವುದಿಲ್ಲ.  ಹೆಣ್ಣು ಹೊನ್ನುಗಳು ಕೂಡ ಅವರ ಮನಸ್ಸಿನಲ್ಲಿ ಯಾವ ಆಸೆಯನ್ನೂ ಹುಟ್ಟಿಸುವುದಿಲ್ಲ. ಅವುಗಳೂ ವಿಷಯ ಸುಖಗಳ ಪ್ರತೀಕಗಳು. ಒಟ್ಟಿನಲ್ಲಿ ಲಿಂಗವನ್ನು ಧರಿಸಿದವರು ಎಂದರೆ ಅರಿವನ್ನು ಪಡೆದವರು  ಯಾವುದೇ ರೀತಿಯ ಚಂಚಲತೆಗೆ ಒಳಗಾಗುವುದಿಲ್ಲ. ಅರಿವಿನ ಬೆಳಕನ್ನು ಹೊಂದಿ ಸದಾ ಜ್ಞಾನದ ಬೆಳಕಿನಲ್ಲಿ, ಅಜ್ಞಾನದ ನೆರಳು ಕೂಡ ಇಲ್ಲದಂತಹ ಸ್ಥಿತಿಯಲ್ಲಿ ನೆಲೆಸಿರುತ್ತಾರೆ ಎಂಬುದು ಈ ವಚನದ ತಾತ್ಪರ್ಯ.

 

No comments:

Post a Comment