VACHANA IN KANNADA
ಹೊನ್ನ ಬಿಟ್ಟೆ, ಮಣ್ಣ ಬಿಟ್ಟೆ, ಹೆಣ್ಣ ಬಿಟ್ಟೆ ಎಂದು
ಜಗದ ಕಣ್ಣ ಕಟ್ಟಿ
ಮೆರೆವ ಕಣ್ಣ ಬೇನೆಯ ಅಣ್ಣಗಳು ನೀವು ಕೇಳಿ ಭೋ!
ಮಾತಿನಲ್ಲಿ ಬಿಟ್ಟಿರೋ? ಮನದಲ್ಲಿ ಬಿಟ್ಟಿರೋ?
ಈ ನೀತಿಯ ಹೇಳಿರಿ ಎನಗೊಮ್ಮೆ, ತನು ಮನದ ಮದ್ಯದಲ್ಲಿ
ಇವರ ನೆನೆಹು ಕೆಟ್ಟು
ಲಿಂಗದ ನೆನೆಹಿನ ಆಯತವೇ ಸ್ವಾಯತವಾಗಿ ಇರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ,
ಮಾತಿನಲ್ಲಿ ಬಿಟ್ಟು ಮನದಲ್ಲಿ ಉಳ್ಳರೆ, ಭವದಲ್ಲಿ ತಂದು ಇವ ಕಚ್ಚಿಸಿದಲ್ಲದೆ ಮಾಣವು ಕಾಣಿರಯ್ಯ
ಹಿಡಿದು ಸಂಸಾರಿಗಳಲ್ಲ, ಬಿಟ್ಟು ನಿಸ್ಸಂಸಾರಿಗಳಲ್ಲ, ಎರಡೂ ಅಲ್ಲದ ಎಟುವರನು ಏನೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೆ
TRANSLITERATION
honna biTTe, henna biTTe, manna biTTe
eMdu jagada kaNNa kaTTi
mereva kaNNa bEneya aNNagaLu nIvu kELi bhO!
maatinalli biTTirO? manadalli
biTTirO?
I nItiya hELiri enagomme, tanu manada
madhyadalli ivara nenehu keTTu
liMgada nenehina aayatavE
svaayatavaagi iraballare iva bittavereMdeMbenayya,
maatinalli biTTu, manadalli uLLare
bhavadalli taMdu iva kaccisidallade
maaNavu kaaNirayya.
hiDidu saMsaarigaLalla, biTTu
nissaMsaarigaLallla. eraDU allada
eTuvaranu EneMbenayya
mahaaliMgagauru shivasiddhEshvara
prabhuve.
CLICK HERE FOR A RECITATION
TRANSLATION (WORDS)
honna biTTe, ( I have renounced the attachment to gold) henna biTTe, (I have renounced the attachment
to woman) manna biTTe (I have renounced the attachment to land) eMdu (saying) jagada (of the world) kaNNa kaTTi
(blinding people from truth)
mereva (showing off) aNNagaLu
(oh! brothers) nIvu kELi bhO! (you please listen)
maatinalli biTTirO? (have
you renounced in words?) manadalli biTTirO? (have you renounced in
minds?)
I nItiya (this moral) hELiri
(tell) enagomme (me once) , tanu (body)
manada (mind) madhyadalli (inside) ivara nenehu keTTu (memory of these desires,
ceased)
liMgada (God’s icon) nenehina (memory) aayatavE (icon) svaayatavaagi ( filled the heart) iraballare (if lives on) iva bittavereMdeMbenayya,(then I will say/
convinced that they are truly renounced)
maatinalli biTTu (renounced in words)
, manadalli uLLare (thinking about them
in mind) bhavadalli (in this material
world) taMdu (bring you back) iva (these desires) kaccisidallade maaNavu (they surely will
sting you) kaaNirayya (you see).
hiDidu saMsaarigaLalla (neither have
you embraced the world) , biTTu nissaMsaarigaLallla (nor have you renounced it). eraDU allada eTuvaranu EneMbenayya (what do I
call these senseless people)
mahaaliMgagauru shivasiddhEshvara
prabhuve. (Mahalingaguru Shivasiddheshvaraprabhuve)
VACHANA IN ENGLISH
Oh! Brothers, if you are saying that “I
renounced gold, I renounced Women, I renounced land”, blinding people of this
world from the truth and showing off, please listen!
Have you renounced in speech? Have
you renounced in mind? Please tell me!
If the memory of these desires has
completely ceased in mind and body, and the memory of God’s icon completely
fills the heart and lives on, then I am convinced that you are truly renounced!
Just renouncing in speech and
thinking about them in mind, brings you back into this material world and these
desires will surely sting you, you see Sir!
Neither you have embraced the world, nor
you have renounced it! What do I call such senseless people, Oh! Mahalingaguru Shivasiddheshvaraprabhu?
COMMENTARY
In this
Vachana, Thontada Soddalinga Swamigalu comments on the state of people who have
not completely realized the Divine, but pretend to have by claiming that they
have renounced all the worldly desires and belongings. Gold (indicative of
wealth), women (the other sex – men for women, women for men) and land
(indicative of all other possessions) cover all worldly aspects that we strive
for, collect and make ourselves feel accomplished. Relinquishing the desires
for these is considered appropriate step in the spiritual path of reaching Him.
But, just claiming that these desires have been renounced, yet longing for them
internally, is just showing off to the world and indeed blinding the people
around. True renunciation is when even the smallest trace of these desires
vanishes from the mind and body, and the soul is completely set on the image of
the Divine within. Anything short of that will simply bring one back into this
mundane world and all these desires attack back with their multiplied vigor. Such
individuals are neither here in the mundane world, nor there with the Divine.
The Vachana
stresses the importance of external and internal purity and maturity in thoughts,
speech and action. Just showing off externally
through the speech is not enough, the mind and body should completely be pure
and cultured from within, to be truly being with the Divine. Purity of the soul
and BEING with the Divine is our natural state. This state has been altered by
the worldly desires i.e. by our DOING. It is time to regain our natural state
of permanent bliss.
Let us BE
and not just DO!
KANNADA COMMENTARY
ಹೊನ್ನ
ಬಿಟ್ಟೆ, (ಹೊನ್ನಿನ ಆಸೆಯನ್ನು
ಬಿಟ್ಟಿಬಿಟ್ಟಿದ್ದೇನೆ) ಮಣ್ಣ ಬಿಟ್ಟೆ, (ಮಣ್ಣಿನ
ಆಸೆಯನ್ನು ಬಿಟ್ಟಿದ್ದೇನೆ) ಹೆಣ್ಣ ಬಿಟ್ಟೆ (ಹೆಣ್ಣಿನ ಆಸೆಯನ್ನು ಬಿಟ್ಟಿದ್ದೇನೆ) ಎಂದು ಜಗದ ಕಣ್ಣ
ಕಟ್ಟಿ (ಎಂದು ಹೇಳುತ್ತ ಜಗತ್ತಿಗೆ ಮೋಸ ಮಾಡಿ)
ಮೆರೆವ
ಕಣ್ಣ ಬೇನೆಯ ಅಣ್ಣಗಳು ನೀವು ಕೇಳಿ ಭೋ! (ಜಂಬದಿಂದ ತಿರುಗಾಡುವ ಅಣ್ಣಗಳೇ ನೀವು ಕೇಳಿರಿ)
ಮಾತಿನಲ್ಲಿ
ಬಿಟ್ಟಿರೋ, ಮನದಲ್ಲಿ ಬಿಟ್ಟಿರೋ? (ಇವುಗಳನ್ನೆಲ್ಲ ನೀವು ಕೇವಲ ಮಾತುಗಳಲ್ಲಿ ಬಿಟ್ಟಿರುವಿರೊ?
ಅಥವಾ ಮನದಲ್ಲಿಯೂ ನೆನೆಯದೆ ಬಿಟ್ಟಿರುವಿರೋ?)
ಈ ನೀತಿಯ
ಹೇಳಿರಿ ಎನಗೊಮ್ಮೆ, (ನಿಮ್ಮ ನೀತಿಯಾವುದು ನನಗೆ ಒಮ್ಮೆ ಹೇಳಿರಿ) ತನು ಮನದ ಮದ್ಯದಲ್ಲಿ ಇವರ ನೆನೆಹು ಕೆಟ್ಟು (ದೇಹದಲ್ಲಿ ಮತ್ತು ಮನಸ್ಸಿನಲ್ಲಿ
ಇವುಗಳ ನೆನೆಹು ನಿಂತುಹೋಗಿ)
ಲಿಂಗದ
ನೆನೆಹಿನ ಆಯತವೇ ಸ್ವಾಯತವಾಗಿ ಇರಬಲ್ಲರೆ ಇವ ಬಿಟ್ಟರೆಂದೆಂಬೆನಯ್ಯ, (ಲಿಂಗದ ನೆನಹು ಪೂರ್ತಿಯಾಗಿ
ನಿಮ್ಮಲ್ಲಿ ನೆಲೆಗೊಂಡಿದ್ದರೆ, ಇಷ್ಟ ಲಿಂಗವು ಪ್ರಾಣಲಿಂಗವಾಗಿ ಬಿಟ್ಟರೆ ನೀವು ಎಲ್ಲವನ್ನು ಬಿಟ್ಟಿರುವಿರಿ ಎಂದು ನಾನು ನಂಬುವೆ)
ಮಾತಿನಲ್ಲಿ
ಬಿಟ್ಟು ಮನದಲ್ಲಿ ಉಳ್ಳರೆ,( ಕೇವಲ ಮಾತುಗಳಲ್ಲಿ ಇವನ್ನು ಬಿಟ್ಟು, ಮನದಲ್ಲಿ ಅವುಗಳ ನೆನೆಹು
ಇನ್ನೂ ಇದ್ದ ಪಕ್ಷದಲ್ಲಿ) ಭವದಲ್ಲಿ ತಂದು ಇವ
ಕಚ್ಚಿಸಿದಲ್ಲದೆ ಮಾಣವು ಕಾಣಿರಯ್ಯ (ಈ ಭವದಲ್ಲಿ ಇರುವವರೆಗೂ ಅವು ಬಂದು ನಿಮ್ಮನ್ನು ಕಚ್ಚದೆ
ಬಿಡವು)
ಹಿಡಿದು
ಸಂಸಾರಿಗಳಲ್ಲ, (ಇತ್ತ ಎಲ್ಲವನ್ನೂ ಹಿಡಿದು
ಸಂಸಾರಿಗಳು ಆಗಲಿಲ್ಲ) ಬಿಟ್ಟು
ನಿಸ್ಸಂಸಾರಿಗಳಲ್ಲ, (ಎಲ್ಲವನ್ನೂ ಬಿಟ್ಟು ಸಂಸಾರವನ್ನು ತೊರೆದವರೂ ಅಲ್ಲ) ಎರಡೂ ಅಲ್ಲದ
ಎಟುವರನು ಏನೆಂಬೆನಯ್ಯ? (ಒಂದನ್ನೂ ಸಾಧಿಸದ ಮೂಢನನ್ನು ಎನೆಂದು ಕರೆಯಲಿ)
ಮಹಾಲಿಂಗಗುರು
ಶಿವಸಿದ್ಧೇಶ್ವರ ಪ್ರಭುವೆ
ತಾತ್ಪರ್ಯ:
ಅನೇಕರು ತಾವು ಸಂಸಾರವನ್ನು ಬಿಟ್ಟಿದ್ದೇವೆ ಅಥವಾ ಹೊನ್ನು,
ಹೆಣ್ಣು ಮತ್ತು ಮಣ್ಣಿನ ಮೋಹ ತಮಗೆ ಇಲ್ಲವೆಂದು ಹೇಳುತ್ತ ಮೆರೆಯುತ್ತಾರೆ. ಅಂತಹವರನ್ನು ಕುರಿತು ತೋಂಟದ ಸಿದ್ಧಲಿಂಗರು ಅವರ ಪ್ರಾಮಾಣಿಕತೆಯನ್ನು
ಪ್ರಶ್ನಿಸುತ್ತಿದ್ದಾರೆ.
ಹೊನ್ನು,
ಹೆಣ್ಣು, ಮಣ್ಣುಗಳನ್ನು ಬಿಟ್ಟಿದ್ದೇವೆ ಎಂದು ಹೇಳುವ ನೀವು ಅವುಗಳನ್ನು ಬರಿ ಬಾಯಿ ಮಾತಿನಲ್ಲಿ
ಬಿಟ್ಟಿರುವಿರೋ ಇಲ್ಲವೆ ಅವುಗಳನ್ನು ಮನಸಾ ಕಾಯಾ ಬಿಟ್ಟಿರುವಿರೋ? ನೀವು ಇವುಗಳಲ್ಲಿ ಯಾವ ನೀತಿಯನ್ನು
ಆರಿಸಿಕೊಂಡಿದ್ದೀರಿ? ತನು ಮನದಲ್ಲಿ ಅವನ್ನು
ತ್ಯಜಿಸಿದ್ದರೆ, ನಿಮ್ಮ ಮನದಲ್ಲಿ ಅದು ನೆಲೆಯನ್ನು ಕಳೆದುಕೊಂಡು ಆ ಸ್ಥಳದಲ್ಲಿ ಲಿಂಗವು ತಾನೇ
ತಾನಾಗಿದ್ದರೆ ಆಗ ನಿಮ್ಮ ಮಾತು ನಂಬ ಬಹುದು. ಆದರೆ ಹೊನ್ನು, ಹೆಣ್ಣು, ಮಣ್ಣುಗಳನ್ನು ಮಾತಿನಲ್ಲಿ
ಬಿಟ್ಟು ಮನದಲ್ಲಿ ಇನ್ನೂ ನೆನೆಯುತ್ತಲೇ ಇದ್ದರೆ
ನಿಮ್ಮ ಕಪಟ ಒಂದಿಲ್ಲ ಒಂದು ದಿನ ಹೊರಬರುವುದು. ಆ ಹೊನ್ನು, ಹೆಣ್ಣು, ಮಣ್ಣುಗಳ ಗುಪ್ತ
ಆಸೆ ನಿಮ್ಮನ್ನು ಕಚ್ಚದೆ ಬಿಡದು. ಅಂದರೆ ನೀವು ಅವುಗಳ ಆಕ್ರಮಣಕ್ಕೆ ಒಳಗಾಗುವಿರಿ. ಆಗ ನೀವು
ಅವುಗಳ ಆಸೆಯನ್ನು ಬಿಡದೆ ಸಂಸಾರಿಗಳೂ ಆಗುವುದಿಲ್ಲ, ಅವುಗಳನ್ನು ತೊರೆದು ಭವದಿಂದ‘ ದೂರ ಸರಿದವರೂ
ಆಗುವುದಿಲ್ಲ. ಈ ಎರಡೂ ಅಲ್ಲದ ನಮ್ಮಂತಹ ಮೂಢರನ್ನು ಏನೆಂದು ಕರೆಯಬಹುದು? ಎಂದು ಕೇಳುತ್ತಾರೆ.
ಒಟ್ಟಿನಲ್ಲಿ
ಬಾಯಿಮಾತಿನಲ್ಲಿ ಅವುಗಳನ್ನು ಬಿಟ್ಟೆ ಎಂದು ಹೇಳುವುದು ಬಹು ಸುಲಭ. ಆದರೆ ಮನಸಾ ಕಾಯಾ ಅವನ್ನು
ಬಿಡುವುದು ಮಾತಿನಲ್ಲಿ ಹೇಳುವುದರಷ್ಟು ಸರಳವಲ್ಲ.
ಬದುಕಿನಲ್ಲಿ ತೋರಿಕೆಯ ನಡತೆಗೂ ಮನದಾಳದಲ್ಲಿ ನಡೆಯುವುದಕ್ಕೂ ಬಹು ಅಂತರವಿರುತ್ತದೆ. ಶರಣರ ಬದುಕು
ಒಳಗೂ ಹೊರಗೂ ಒಂದೇ ರೀತಿಯಾಗಿರಬೇಕು. ಮೇಲೊಂದು ಒಳಗೊಂದು ರೀತಿಯಾಗಿ ಬದುಕುವವನು ಶರಣನಾಗಲಾರ.
ಮೇಲೆ ಮಾತ್ರ ಶರಣರ ಲಾಂಛನ ಧರಿಸಿ ತಾನು ಹೊನ್ನು, ಹೆಣ್ಣು, ಮಣ್ಣು ಬಿಟ್ಟಿದ್ದ್ದೇನೆ ಎಂದು
ಮಾತಿನಲ್ಲಿ ಹೇಳುವವನು ಕಪಟಿಯಾಗುತ್ತಾನೆ.
ಮನ ಮತ್ತು
ತನುವಿನಲ್ಲಿ ಈ ಆಸೆಗಳನ್ನು ಬಿಟ್ಟು ಅಥವಾ ಆ ಆಸೆಗಳಿಗೆ ಸ್ಥಾನವೇ ಇಲ್ಲವಾಗಿ ಆ ಸ್ಥಾನವನ್ನು
ಲಿಂಗವೇ ಆವರಿಸಿಕೊಂಡಾಗ ಆತ ಶರಣನಾಗುತ್ತಾನೆ. ಹಾಗಾಗಿದ್ದರೆ ಆತನನ್ನು ಸಿದ್ಧಲಿಂಗರು ಭಕ್ತನೆಂದು
ಒಪ್ಪಿಕೊಳ್ಳುತ್ತಾರೆ. ಹಾಗಲ್ಲದವರು ಇತ್ತ ಸಂಸಾರಿಗಳೂ ಅಲ್ಲ ಅತ್ತ ಸಂಸಾರವನ್ನು ತೊರೆದವರೂ
ಅಲ್ಲದ ಬುದ್ಧಿಗೇಡಿಗಳು ಎಂದು ಹೇಳುತ್ತಾರೆ.
No comments:
Post a Comment