Friday, October 18, 2013

Vachana 164: Aruhina Jyoti Eddittu – The Awareness Emanated!


 
VACHANA IN KANNADA

ಅರುಹಿನ ಜ್ಯೋತಿ ಎದ್ದಿತ್ತು, ಶರೀರವನ್ನೆಲ್ಲ ತುಂಬಿತ್ತು,
ಮರವೆಯ ತಮ ಹರಿಯಿತ್ತು, ಕರಣಂಗಳ ತುಂಡಿಸಿತ್ತು,
ವಿಷಯಂಗಳ ಶಿರವನು ಹರಿಯಿತ್ತು,ದಶೇಂದ್ರಿಯಗಳ ದಾಳಿಯ ನಿಲಿಸಿತ್ತು,
ಪಂಚಮಹಾಭೂತಗಳ ಪ್ರಪಂಚವ ಪರಿಹರಿಸಿತ್ತು,
ಬ್ರಹ್ಮವೇ ತಾನೆಂಬ ಕುರುಹವ ಮೈಗಾಣಿಸಿತ್ತು, 
ತಾನೆಂಬ ಕುರುಹನಳಿದ ಅವಿರಳ ಸಹಜನು ಭಕ್ತನು ನೋಡಾ ಮಹಾಲಿಂಗಗುರು ಶಿವ ಸಿದ್ಧೇಶ್ವರಪ್ರಭುವೆ.

TRANSLITERATION
aruhina jyOti eddittu, sharIravannella tuMbittu,
maraveya tama hariyittu, karaNaMgaLa  tuMDisittu,
viShayaMgaLa shiravanu hariyittu, dashEMdriyagaLa daaLiya nilisittu,
paMcamahaabhUtagaLa  prapaMcava pariharisittu
brahmavE taaneMba kuruhava maigaaNisittu,
taaneMba kuruhanaLida  aviraLa sahajanu bhaktanu nODaa mahaaliMga guru shiva siddhEshvaraprabhuve.
CLICK HERE FOR A RECITATION

TRANSLATION (WORDS)
aruhina  (of awareness) jyOti  (the light)  eddittu  (emanated) , sharIravannella ( the whole body) tuMbittu (filled),
maraveya (of  ignorance)   tama (darkness)  hariyittu ( got torn,  disappeared), karaNaMgaLa  (the causative factors)  tuMDisittu  ( cut into pieces),
viShayaMgaLa (of worldly pleasure) shiravanu (the head) hariyittu ( torn, disappeared), dashEMdriyagaLa  (all the ten sense organs)  daaLiya ( the attack of) nilisittu (stopped),
paMcamahaabhUtagaLa  (of five gross elements’) prapaMcava (the world)  pariharisittu  (solved)
brahmavE (Brahma himself)  taaneMba (I am) kuruhava  (symbol) maigaaNisittu (was made to understand),
taaneMba ( I ness) kuruhanaLida  (completely disappeared) aviraLa (rare)  sahajanu (individual)  bhaktanu nODaa (devotee you see) mahaaliMga guru shiva siddhEshvaraprabhuve. (Mahalingaguru Shiva siddheshvaraprabhuve)

VACHANA IN ENGLISH
The light of awareness emanated, filled the whole body,
The darkness of ignorance disappeared, the causative factors cut into pieces,
The head of the worldly pleasures torn,
The attack of the ten sense organs stopped,
The world of five gross elements resolved,
The fact that ‘Brahma is myself’  driven home,
The I-ness completely disappeared.
Such rare individual is the true devotee, you see Mahalingaguru Shiva Siddheshvaraprabhu.

COMMENTARY
In this Vachana, Thontada Siddalinga Swamigalu describes what happens when the awareness strikes   to make the individual into a true devotee (self-realized).
The awareness emanated and drenched the whole person, meaning that the awareness is complete and permanent. This removed the darkness of ignorance. Due to this awareness the causative factors of the creation are of no consequence. We have described the two prime causative factors of creation (purusha, the creator and the male form and prakriti, the illusion and the female form) in our earlier posts. The other causative factors are the five sense organs (gyanendriyas - eyes to see, ears to listen, nose to smell, tongue to taste, skin to feel), the five organs of action (karmendriyas - mouth to speak, hands to work, feet to walk, anus to excrete waste and sexual organs to reproduce) and the mind (manas). The first two together are the ten organs termed dashendriya.  When individual’s awareness sets in, the influence of all these organs is of no consequence. He/she will have utilized them appropriately and not over indulged in any. The pleasures and the sorrow of the mundane world do not sway him/her.   The fact that the individual and the creator are one and the same becomes obvious. The individual and the creator are one consciousness (Brahman). Then how does this conscious energy put on the appearance of material solidity.  In order to bridge the gulf between consciousness and apparently durable matter, ancient Indian sages postulated (or “divined”) that all physical things are constituted of five subtle elements  called Pancha-Mahabhutas – earth, fire, water, air, ether.  These are not the elements known in the conventional sense (e.g. “water” does not imply the water, and “earth” does not mean soil) but are actually subtle conditions which together create the perception of forms which can be sensed by the human mind.  The actual names of these five elements are Akasha (ether), Vayu (aeriality), Agni(fire), Apas(liquidity) and Prithvi(compaction). A true devotee realizes the constitution of this consciousness and completely gives up the ‘I-ness’. When one reaches that stage, he/she is the true self-realized, and a true devotee.

The Vachana is urging us to develop the keen awareness needed to realize that we belong to that single consciousness, be neither sense- starved  nor sense-obsessed, remove the duality of you and I, learn to be not swayed by the ups and downs of the world we must be part of and let our ego go away!
Let us be the consciousness!

 KANNADA COMMENTARY
ಅರ್ಥ:
ಅರುಹಿನ ಜ್ಯೋತಿ ಎದ್ದಿತ್ತು, (ಅರಿವಿನ ಬೆಳಕು  ಹುಟ್ಟಿತು) ಶರೀರವನ್ನೆಲ್ಲ ತುಂಬಿತ್ತು, (ದೇಹದಲ್ಲೆಲ್ಲ ತುಂಬಿಕೊಂಡಿತು)
ಮರವೆಯ ತಮ ಹರಿಯಿತ್ತು,( ಮರೆವು ಎಂಬ ಕತ್ತಲೆ ದೂರವಾಯಿತು)  ಕರಣಂಗಳ ತುಂಡಿಸಿತ್ತು,(ಜ್ಞಾನೇಂದ್ರಿಯಗಳನ್ನು ತುಂಡು ಮಾಡಿತ್ತು)
ವಿಷಯಂಗಳ ಶಿರವನು ಹರಿಯಿತ್ತು, (ಬಯಕೆಯ ವಸ್ತುಗಳನ್ನೇ ಹರಿಯಿತು) ದಶೇಂದ್ರಿಯಗಳ ದಾಳಿಯ ನಿಲಿಸಿತ್ತು, (ಹತ್ತು ಇಂದ್ರಿಯಗಳ ಆಕ್ರಮಣವನ್ನು ನಿಲಿಸಿತ್ತು)
ಪಂಚಮಹಾಭೂತಗಳ ಪ್ರಪಂಚವ ಪರಿಹರಿಸಿತ್ತು, (ಪಂಚಮಹಾಭೂತಗಳಿಂದ  ಉಂಟಾದ ಈ ಪ್ರಪಂಚದ  ಅರಿವಾಯಿತು)
ಬ್ರಹ್ಮವೇ ತಾನೆಂಬ ಕುರುಹವ ಮೈಗಾಣಿಸಿತ್ತು,  (ತಾನು ಆ ಬ್ರಹ್ಮನ ಕುರುಹು ಎಂಬುದು ತಿಳಿಯಿತು)
ತಾನೆಂಬ ಕುರುಹನಳಿದ ಅವಿರಳ ಸಹಜನು (ತಾನು ಎಂಬ ಭಾವ ಅಳಿದು ಸಹಜವಾಗಿರುವವನು)  ಭಕ್ತನು ನೋಡಾ (ನಿಜವಾದ ಭಕ್ತನು) ಮಹಾಲಿಂಗಗುರು ಶಿವ ಸಿದ್ಧೇಶ್ವರಪ್ರಭುವೆ.

ತಾತ್ಪರ್ಯ:
ಅರಿವು ಹುಟ್ಟಿದಾಗ ಏನೇನಾಯಿತು ಎಂಬುದರ ವಿವಿರಣೆ ಕೊಡುತ್ತಾರೆ ತೋಂಟದ ಸಿದ್ಧಲಿಂಗ ಸ್ವಾಮಿಗಳು.
ಅರಿವಿನ ಜ್ಯೋತಿ ಹುಟ್ಟಿ ಮೈಯೆಲ್ಲ ಪಸರಿಸಿದಾಗ  ಮರೆವು ಎಂಬ ಕತ್ತಲೆ ಇಲ್ಲವಾಯಿತು. ಆ ಬೆಳಕಿನ ಪ್ರಭಾವದಿಂದ ಮರೆವು ಎಂಬುದು ಹೇಳ ಹೆಸರಿಲ್ಲದೆ ಹೋಯಿತು. ಸಾಮಾನ್ಯವಾಗಿ ಅರಿವು ಮಿಂಚಿನಂತೆ ಹೊಳೆದು ಮಾಯವಾಗುತ್ತದೆ ಮತ್ತು ಮರೆವು ಮತ್ತೆ ಆವರಿಸಿಕೊಂಡು ಬಿಡುತ್ತದೆ, ಆದರೆ ಇಲ್ಲಿ ಅರಿವಿನ ಜ್ಯೋತಿ ಮೈಮನದಲ್ಲಿ ಚೆನಾಗಿ ತುಂಬಿಕೊಂಡದ್ದರಿಂದ ಮರೆವಿಗೆ ಅಲ್ಲಿ ಸ್ಥಾನವೇ ಇಲ್ಲವಾಯಿತು. ಜ್ಞಾನೇಂದ್ರಿಯಗಳು ಮರೆವಿಗೊಳಗಾಗಿ  ಕಾರ್ಯಮಾಡುವ ಶಕ್ತಿ ಕಳೆದುಕೊಂಡು ಬಿಟ್ಟವು.
ಜ್ಞಾನೇಂದ್ರಿಯಗಳು ಎಂದರೆ ಶಬ್ದ, ಸ್ಪರ್ಶ, ರಸ, ರೂಪ, ಗಂಧಗಳ ಜ್ಞಾನವನ್ನುಂಟುಮಾಡುವ ಇಂದ್ರಿಯಗಳು. ಈ ಇಂದ್ರಿಯಗಳು ಕೆಲಸಮಾಡುವುದೇ ತಾವು ಹಿಂದೆ ಗಳಿಸಿದ ಅನುಭವದ ನೆನಪಿನ ಆಧಾರದ ಮೇಲೆ. ತಾನು ಅನುಭವಿಸುವಪ್ರತಿಯೊಂದನ್ನು ತನ್ನ ಹಿಂದಿನ ಅನುಭವಕ್ಕೆ ಹೋಲಿಸಿ ಅದು ಚೆನ್ನ, ಕೆಟ್ಟ ಎಂಬಂತಹ ಹಣೆಪಟ್ಟಿ ಕಟ್ಟುವ  ಆತುರ ಅವಕ್ಕೆ. ಆ ಅನುಭವದ ನೆನಪನ್ನು ಅರಿವು ತುಂಡರಿಸಿಬಿಟ್ಟಿತು. ಅಂದರೆ ಈಗ ಪ್ರತಿ ಅನುಭವವೂ ಹೊಚ್ಚಹೊಸದಾಗಿ,   ಕೆಟ್ಟ, ಚೆನ್ನ ಎಂಬಂತಹ ಭಾವ ತೋರುವುದಿಲ್ಲ.
ಇನ್ನೂಮುಂದೆ ಹೋಗಿ,  ಆ ಅರಿವು, ಅನುಭವ ಉಂಟುಮಾಡುವ ವಸ್ತುಗಳ ಶಿರವನ್ನೇ ಹರಿದು ಬಿಟ್ಟಿತು.ಅಂದರೆ ವಸ್ತುಗಳು ನಮಗೆ  ಸುಖ ಕೊಡುವುದಿಲ್ಲ. ನಾವು ನಮ್ಮ ಅನುಭವ ಮತ್ತು ನೆನಪಿನ ಆಧಾರದ ಮೇಲೆ ವಸ್ತುಗಳಿಂದ ಸುಖ ಅಥವಾ ದುಃಖ ಪಡೆಯುತ್ತೇವೆ. ಅರಿವಿನ ಉದಯದಿಂದ ವಿಷಯ ವಸ್ತುಗಳೇ ಇಲ್ಲದಂತಾಯಿತು. ಇಂದ್ರಿಯಗಳು ಮನಸ್ಸನ್ನು ಆಕ್ರಮಿಸುವುದು ನಿಂತು ಹೋಯಿತು.
ಪಂಚಮಹಾಭೂತಗಳಿಂದ ಉಂಟಾದ ಈ ಪ್ರಪಂಚದ ನಿಜವಾದ ರೂಪ ತಿಳಿಯಿತು. ತಾನು ಬ್ರಹ್ಮನ ಕುರುಹು ಎಂಬುದು ಮನವರಿಕೆಯಾಯಿತು. ಭಕ್ತನಲ್ಲಿ ತಾನು ಬ್ರಹ್ಮನ ಕುರುಹು ಎಂಬ ಭಾವ ಸಂದಿಲ್ಲದೆ ತುಂಬಿಕೊಂಡಿತು.ತಾನು ಬೇರೆ ಎಂಬ ಭಾವ ಇಲ್ಲವಾಯಿತು. ಎಲ್ಲವೂ ಬ್ರಹ್ಮಮಯವಾಯಿತು. ಪ್ರಪಂಚ, ವಿಷಯ ವಸ್ತುಗಳು ಮತ್ತು ಇಂದ್ರಿಯಗಳು ಹೊರಿಸಿದ ಎಲ್ಲ ಭಾವಗಳು ಕೊನೆಗೊಂಡು ತಾನು ಸಹಜವಾಗಿ ಇದ್ದಾನೆ ಭಕ್ತನು.

No comments:

Post a Comment