VACHANA IN KANNADA
ಏನ
ಕಂಡಡೇನಯ್ಯಾ ತನ್ನ ಕಾಣದಾತ ಕುರುಡ
ಏನ
ಕೇಳಿದಡೇನಯ್ಯಾ ತನ್ನ ತಾ ಕೇಳದಾತ ಕಿವುಡ
ಏನ
ಮಾತಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ
ದಿಟದಿಂದ
ತನ್ನ ತಾ ಕಾಣಬೇಕು
ದಿಟದಿಂದ
ತನ್ನ ತಾ ಕೇಳಬೇಕು
ದಿಟದಿಂದ
ತನ್ನ ತಾ ಮಾತಾಡಬೇಕು
ಇದೇ ತನ್ನ
ನೆಲೆ, ಸ್ವಭೂಮಿ, ಸ್ವರೂಪು ಕಾಣಾ ಗುಹೇಶ್ವರಾ
TRANSLITERATION
Ena
kaMDaDEnayya tanna taa kaaNadaata kuruDa
Ena
kELidaDEnayyaa tanna taa kELadaata kivuDa
Ena
maaTaaDidaDenayyaa tanna maataaDadaata
mUka
diTadiMda tanna taa kaaNabEku
diTadiMda
tanna taa kELabEku
diTadiMda
tanna taa maataaDabEku
idE tanna
nele, svabhUmi, svarUpu kaaNaa guhEshvaraa
Ena
kaMDaDEnayya (whatever one sees sir!)
tanna taa kaaNadaata kuruDa (if one doesn’t see oneself one is blind)
Ena
kELidaDEnayyaa (whatever one hears sir!)
tanna taa kELadaata kivuDa (if one doesn’t hear oneself one is deaf)
Ena
maaTaaDidaDenayyaa (whatever one talks sir!) tanna maataaDadaata mUka (if one doesn’t talk
of one’s true self one is dumb)
diTadiMda tanna taa kaaNabEku (truly you should see
yourself)
diTadiMda
tanna taa kELabEku (truly you should
listen to your self)
diTadiMda
tanna taa maataaDabEku (truly you should
talk yourself)
idE tanna
nele, svabhUmi, svarUpu kaaNaa guhEshvaraa
(this is one’s dwelling,
one’s own land, one’s own form you see Guheshvara)
Whatever one
sees Sir! If one doesn’t see oneself one is blind.
Whatever one
hears Sir! If one doesn’t hear oneself one is deaf.
Whatever one
talks Sir! If one doesn’t talk of one’s true self one is dumb.
Truly, one
should see oneself!
Truly, one
should hear oneself!
Truly, one
should talk about oneself!
This is
one’s dwelling, own land, and own form, you see Guhesvara!
COMMENTARY
We put our eyes to good use. We make every effort to see beautiful places, people and things. We enjoy them and talk about how beautiful they are and sometime even add color to our expression of what we saw. Allama Prabhu says that all this is great, but the most important sight is within us. Have we made any effort to see our self? If we have not, according to Allama Prabhu, we are blind!
We put our ears to good use. We make every effort to hear musicians perform. We enjoy listening to good speakers. But, have we made an effort to hear ourselves? If not, we are deaf according to Allama Prabhu.
We are fond of talking about all the things we know and don’t know. We often are more interested in impressing the listener than paying attention to how deeply we have understood what we talk about. Allama Prabhu says that when we talk, we should talk about our true self. Our talk should reflect what we truly are. If not, we are dumb.
What is seeing our self, hearing our self and speaking of our true self? It is essentially returning to our dwelling, to our own land and to our own form; returning to our true innate self. It is said that the soul is inherently pure. Our experiences and exposure to the ways of the world hide this purity and bliss that is within us. Seeing, hearing and speaking of our self is the process of rediscovering that purity and innocence. It is returning to the child we once were. It is the spiritual journey to find Him within us. It is returning to our pure nature un-wavered by the influences of the mundane world.
ಅರ್ಥ:
ಏನ
ಕಂಡಡೇನಯ್ಯಾ (ಏನೇನು ನೋಡಿದರೇನು) ತನ್ನ ತಾ
ಕಾಣದಾತ ಕುರುಡ (ತನ್ನನ್ನು ಕಾಣದಾತ ಕುರುಡನು)
ಏನ
ಕೇಳಿದಡೇನಯ್ಯಾ (ಏನೇನು ಆಲಿಸಿದರೇನು) ತನ್ನ ತಾ
ಕೇಳದಾತ ಕಿವುಡ (ತನ್ನನ್ನೇ ಆಲಿಸದಾತ ಕಿವುಡ)
ಏನ
ಮಾತಾಡಿದಡೇನಯ್ಯಾ (ಏನೇನು ಮಾತಾಡಿದರೇನು) ತನ್ನ
ಮಾತಾಡದಾತ ಮೂಕ (ತನ್ನ ನಿಜದ ನೆಲೆಯಿಂದ ಮಾತಾಡದಾತ ಮೂಕ)
ದಿಟದಿಂದ
ತನ್ನ ತಾ ಕಾಣಬೇಕು (ಸತ್ಯವಾಗಿಯೂ ತನ್ನನ್ನು ತಾನು ಕಾಣಬೇಕು)
ದಿಟದಿಂದ
ತನ್ನ ತಾ ಕೇಳಬೇಕು (ಸತ್ಯವಾಗಿಯೂ ತನ್ನನ್ನು ತಾನು ಆಲಿಸಬೇಕು)
ದಿಟದಿಂದ
ತನ್ನ ತಾ ಮಾತಾಡಬೇಕು (ಸತ್ಯವಾಗಿಯೂ ತನ್ನ ಮಾತು ತಾ ಮಾತಾಡಬೇಕು)
ಇದೇ ತನ್ನ
ನೆಲೆ, ಸ್ವಭೂಮಿ, ಸ್ವರೂಪು ಕಾಣಾ ಗುಹೇಶ್ವರಾ (ಇದೇ ತನ್ನ ನಿಜವಾದ ನೆಲೆ, ತನ್ನ ಭೂಮಿ, ತನ್ನ
ರೂಪು ಗುಹೇಶ್ವರ)
ತಾತ್ಪರ್ಯ:
ಈ
ವಚನದಲ್ಲಿ ಅಲ್ಲಮರು ಭಕ್ತನು ತನ್ನ ನಿಜವಾದ ನೆಲೆಯನ್ನು ಕಂಡುಕೊಳ್ಳಬೇಕು ಎಂಬುದನ್ನು
ಹೇಳುತ್ತಿರುವರು.
ನಮ್ಮಲ್ಲಿ
ಕೆಲವರು ನಾನು ಅದನ್ನು ನೋಡಿದೆ, ಇದನ್ನು ನೋಡಿದೆ, ಎಂದು ಏನೇನೋ ಹೇಳುತ್ತಾರೆ. ಕೆಲವರು
ಪ್ರಪಂಚವನ್ನು ಸುತ್ತಿದರೆ ಇನ್ನು ಕೆಲವರು ಹತ್ತಿರದಲ್ಲಿಯೇ ಇರುವ ಬೇರೆ ರೀತಿಯ ಸ್ಥಳಗಳನ್ನು,
ಜನರನ್ನು ಮತ್ತು ಇನ್ನೂ ಏನೇನೋ ನೋಡಿರುತ್ತಾರೆ. ಮತ್ತು ಅದನ್ನು ಬಲು ಜಂಬದಿಂದ
ಹೇಳಿಕೊಳ್ಳುತ್ತಾರೆ. ಆದರೆ ಅಲ್ಲಮರು ಹೇಳುತ್ತಾರೆ. ಏನೇ ನೋಡಿದರೂ ತನ್ನನ್ನು ತಾನು ನೋಡದವನು
ಕುರುಡ ಎಂದು.
“ನಾನು
ಅದನ್ನು ಕೇಳಿದೆ ಇದನ್ನು ಕೇಳಿದೆ. ಆ ಸಂಗೀತವನ್ನು ಕೇಳಿದೆ, ಈ ಭಾಷೆಯನ್ನು ಕೇಳಿದೆ, ಆ
ಆಧ್ಯಾತ್ಮಿಕ ಗುರುವಿನ ಮಾತನ್ನು ಕೇಳಿದೆ. ಈ
ರಾಜಕಾರಣಿಯ ಮಾತು ಕೇಳಿದೆ.” ಎಂದು ಏನೇನೋ ಹೇಳುತ್ತೇವೆ. ಯಾರಯಾರದೋ ಮಾತುಗಳನ್ನು ಕೇಳಿ ನಾವೇ
ಮಹಾ ಉಪಯೋಗ ಪಡೆದಿದ್ದೇವೆ ಎಂದು ಕುಣಿದಾಡುತ್ತೇವೆ, ಅಥವಾ ಯಾವುದರಲ್ಲಿಯೂ ಹುರುಳಿಲ್ಲ ಎಂದು
ಹೇಳುತ್ತೇವೆ. ನಾನು ಎಲ್ಲವನ್ನೂ ಕೇಳಿದ್ದೇನೆ ಎಂದು ಗರ್ವದಿಂದ ಯಾರಿಗೂ ಬಾಗುವುದೇ ಇಲ್ಲ. ಆದರೆ
ಏನು ಕೇಳಿದರೇನು ತನ್ನನ್ನು ತಾನು ಕೇಳದೆ ಇದ್ದ ಮೇಲೆ ಅದೆಲ್ಲದರ ಉಪಯೋಗವಿಲ್ಲ. ಅಂತಹವನು ಕಿವುಡ
ಎಂದು ಹೇಳುತ್ತಾರೆ ಅಲ್ಲಮರು.
“ನಾನು
ಇಷ್ಟೊಂದು ಭಾಷೆ ಮಾತಾಡಬಲ್ಲೆ. ತಾನು ಇಷ್ಟೊಂದು ವಿಷಯ ತಿಳಿದು ಮಾತಾಡಬಲ್ಲೆ, ಯಾವುದೇ ವಿಷಯ
ಕೊಟ್ಟರೂ ನಾನು ಮಾತಾಡಬಲ್ಲ್ಲೆ” ಎಂದು ಹೇಳುತ್ತಾರೆ ಕೆಲವರು. ಇಷ್ಟೆಲ್ಲ ಗೊತ್ತಿದ್ದವರೂ ತನ್ನ
ಬಗ್ಗೆ ಹೇಳು ಎಂದರೆ ಏನೇನೋ ಹೇಳುತ್ತಾರೆ. ತಾನು ಯಾರು ಎಂದು ಅವರಿಗೆ ತಿಳಿದಿರುವುದೇ ಇಲ್ಲ. ಅಂತಹವನು
ಎಷ್ಟೇ ಮಾತಾಡಿದರೂ ಮೂಕನೇ ಎಂದು ಹೇಳುತ್ತಾರೆ ಅಲ್ಲಮರು.
“ತನ್ನನ್ನು
ತಾನು ನೋಡುವುದು, ತನ್ನ ಮಾತನ್ನು ಕೇಳುವುದು,ತನ್ನ
ಮಾತಾಡುವುದು” ಎಂದರೇನು?
ಇದನ್ನು
ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಪ್ರತಿಯೊಂದು ಮಾತು, ಪ್ರತಿಯೊಂದು ನಡೆ, ನಮ್ಮ ಪ್ರತಿಯೊಂದು ಕಾರ್ಯ, ನಮ್ಮ
ಪ್ರತಿಯೊಂದು ನೋಟದ ಅರ್ಥ ಎಲ್ಲವೂ ಯಾವುದಾದರಿಂದಲೋ ಪ್ರಭಾವಗೊಂಡಿರುತ್ತದೆ. ಇನ್ನೊಬ್ಬರು ಹೇಳಿದ
ಮಾತೋ, ಸಂಸ್ಕೃತಿಯೋ, ಹಿಂದೆ ನಡೆದ ಘಟನೆಯೋ, ಅಥವಾ ಮುಂದೆ ಆಗಬಹುದಾದ್ದೇನೋ, ಹೀಗೆ ಅದು ಯಾವುದರಿಂದಲೋ ಪ್ರೇರಿತವಾಗಿರುತ್ತದೆ.
ಯಾವುದರ ಪ್ರಭಾವಕ್ಕೂ ಒಳಗಾಗದೆ ಇರುವುದು ಮುಖ್ಯ ಮತ್ತು ಬಲು ಕಷ್ಟ. ಯಾವುದರ ಪ್ರಭಾವದಿಂದ ನಾನು ಹೀಗೆ ಇದ್ದೇನೆ ಎನ್ನುವುದು ಅರ್ಥಮಾಡಿಕೊಳ್ಳುವುದು
ಮುಖ್ಯ. ಅದೇ ನಿಜವಾದ ತನ್ನ ನೆಲೆಯನ್ನು, ಸ್ವರೂಪವನ್ನು, ಸ್ವಭೂಮಿಯನ್ನು ಕಂಡುಕೊಳ್ಳುವ ರೀತಿ.
No comments:
Post a Comment