Friday, September 6, 2013

Vachana 158: Adaviyolage Kallaru Kadavasada Swamiyanu – Thieves in the Forest Looking for Him!

VACHANA IN KANNADA

ಅಡವಿಯೊಳಗೆ ಕಳ್ಳರು ಕಡವಸದ ಸ್ವಾಮಿಯನು
ಹುಡುಕಿ ಹುಡುಕಿ ಅರಸುತ್ತೈದಾರೆ, ಸೊಡರು ನಂದಿ ಕಾಣದೆ!
ಅನ್ನ ಪಾನದ ಹಿರಿಯರೆಲ್ಲರೂ  ತಮ್ಮ ತಾವರಿಯದೆ
ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ!
ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮ ವಿಕಾರದ ನೆತ್ತರವ ಕುಡಿದನು, ನೋಡಾ ಗುಹೇಶ್ವರಾ!

 TRANSLITERATION
 
aDaviyoLage kaLLaru kaDavasada swaamiyanu
huDuki huDuki arasuttaidaare, soDaru naMdi kaaNade!
anna paanada hiriyarellarU tamma taavariyade
adharapaanavanuMDu tEgi, suraapaanava bEDuttaiadaare!
arida haaruvanobbanu arida taleya hiDidukoMDu
adhyaatma vikaarada nettara kuDidanu, nODaa guhEshvaraa!

 CLICK HERE FOR A RECITATION:

 TRANSLATION (WORDS)

aDaviyoLage (in the forest) kaLLaru (the thieves)  kaDavasada (pure wealth that is peace) swaamiyanu (owner - the God)
huDuki (search) huDuki (search - continually)  arasuttaidaare (are searching),
soDaru (the light)  naMdi ( has extinguished) kaaNade! (not seeing)
anna (food)  paanada (drinks - in to the worldly pleasure) hiriyarellarU (all the great people) tamma taavariyade (not knowing their own self)
adharapaanavanuMDu   tEgi (burp -  tired of ordinary pleasure)
suraapaanava (intoxicating drinks)  bEDuttaiadaare!(begging for - asking for intoxicating means)
arida (well read)  haaruvanobbanu ( a person, scholar) arida (knowledge) taleya (a head full of) hiDidukoMDu (holding)
adhyaatma  (spiritual) vikaarada (distorted)  nettara ( blood) kuDidanu (drank)
nODaa guhEshvaraa! (you see Guheshvara)
 
VACHANA IN ENGLISH

The thieves are continually searching in the forest for the owner  (God) of the supreme wealth (peace),
Not seeing that the light (awareness) has extinguished!
All the great people of food and drinks (in worldly pleasures), not knowing their own self,
Tired of ordinary pleasures,
are begging for intoxicating drinks (asking for more of the same)!
A well-read scholar, holding the head full of knowledge (holding bookish knowledge),
Drank the distorted spiritual blood (distracted from the true path), you see Guhesvara.

COMMENTARY
 
In this Vachana, Allama Prabhu uses very strong words to paint the picture of the human searching for the eternal bliss in the wrong places and by wrong means!
The forest is this mundane world. The thieves are people pretending as devotees. The supreme wealth is God, the Ultimate bliss. These people are going all around searching continually for the divine. The light has extinguished, meaning the knowledge or the concept that He is within and there is no need to look elsewhere has evaporated. They have not realized that without this light (knowledge) they are lost. They have not offered their body, mind and wealth trio to teacher, God and wandering ascetic (Guru, Linga, Jangama) trio. All these elders (great people) are still in to the worldly pleasures. They are fully intoxicated with the worldly desires and material lust. Yet, they are begging for more of the same. This is the state of the individuals who deem to reach Him, but does not know how, covered by the illusory mundane materials and comforts. Then, there are others who in search of spirituality enter the world of acquiring this knowledge through reading all the great books. They become experts in analyzing and discussing all aspects of spirituality. They get involved in debates and try to impress others with their bookish knowledge. They never adopt what they know to follow the spiritual path and reach the Divine. They are satisfied with their success in portraying themselves as the ones who have attained the true bliss. Allama Prabhu says that these individuals have drunk the distorted spiritual blood!

In summary, one has to go beyond the influences of this material world, conquer the desire for more in this materialistic world and turn inwards to seek Him within. Blindly reading and acquiring the book knowledge is not sufficient. The knowledge must be digested to make one turn inside to seek Him within.

 Let us not search for Him in the wrong places and by the wrong methods!    

 KANNADA COMMENTARY
 
ಆರ್ಥ:
ಅಡವಿಯೊಳಗೆ ಕಳ್ಳರು   (ಅಡವಿಯಲ್ಲಿ  ಕಪಟ ಭಕ್ತರೆಂಬ ಕಳ್ಳರು) ಕಡವಸದ (ಶುದ್ಧ ಸಂಪತ್ತಾದ ಶಾಂತಿ ಎಂಬ) ಸ್ವಾಮಿಯನು (ದೇವರನ್ನು)
ಹುಡುಕಿ ಹುಡುಕಿ ಅರಸುತ್ತೈದಾರೆ (ನಿರಂತರವಾಗಿ ಹುಡುಕುತ್ತಿದ್ದಾರೆ)
ಸೊಡರು ನಂದಿ ಕಾಣದೆ! (ಆದರೆ ವಿವೇಕವೆಂಬ ದೀಪ ಆರಿಹೋದ ಕಾರಣ  ಕಾಣದೆ)
ಅನ್ನ ಪಾನದ ಹಿರಿಯರೆಲ್ಲರೂ (ಈ ಜಗತ್ತಿನ ಭೋಗವನ್ನು ಅನುಭವಿಸುತ್ತಿರುವ ಹಿರಿಯರು) ತಮ್ಮ ತಾವರಿಯದೆ (ತಮ್ಮನ್ನೇ ತಾವು ಅರಿಯದೆ)
ಅಧರಪಾನವನುಂಡು  ತೇಗಿ (ಭೋಗದಲ್ಲಿ ಮುಳುಗಿಹೋಗಿದ್ದಾರೆ)
ಸುರಾಪಾನವ ಬೇಡುತ್ತೈದಾರೆ! (ಇನ್ನೂ ಹೆಚ್ಚಿನ ಭೋಗಸುಖವನ್ನು ಬೇಡುತ್ತಿದ್ದಾರೆ)
ಅರಿದ ಹಾರುವನೊಬ್ಬನು (ಶಾಸ್ತ್ರಗಳನ್ನೆಲ್ಲ ಚೆನ್ನಾಗಿ ಓದಿದವನು) ಅರಿದ ತಲೆಯ ಹಿಡಿದುಕೊಂಡು (ಆ ಶಾಸ್ತ್ರ ಜ್ಞಾನವನ್ನು ಹಿಡಿದುಕೊಂಡು)
ಅಧ್ಯಾತ್ಮ ವಿಕಾರದ ನೆತ್ತರವ ಕುಡಿದನು (ಅದನ್ನೇ ನಿಜವಾದ ಅಧ್ಯಾತ್ಮವೆಂದು ನಂಬಿದನು)
ನೋಡಾ ಗುಹೇಶ್ವರಾ!

ತಾತ್ಪರ್ಯ:

ಇಲ್ಲಿ ಅಲ್ಲಮರು ಈ ಜಗತ್ತಿನಲ್ಲಿ ಶಾಶ್ವತವಾದ ಸುಖವನ್ನು ಪಡೆಯುವ ಸಲುವಾಗಿ ಜನರು ಏನೇನು ಮಾಡುತ್ತಾರೆ ಮತ್ತು ಅವರ ಆ ಪ್ರಯತ್ನ ಏಕೆ  ವ್ಯರ್ಥವಾಗುತ್ತದೆ ಎಂಬುದನ್ನು ಹೇಳುತ್ತಿದ್ದಾರೆ.
ಅಡವಿಯೆಂದರೆ ಈ ಸಂಸಾರವೆಂಬ ಅರಣ್ಯ. ನಿಜವಾದ ಭಕ್ತಿಯಿಲ್ಲದಿದ್ದರೂ ತೋರಿಕೆಯ ಭಕ್ತಿಯಿಂದ ಮೆರೆಯುತ್ತಿರುವ ಜನರು ಕಳ್ಳರು, ಆ ಕಪಟ ಭಕ್ತರು ಶುದ್ಧ ಶಾಂತಿಯನ್ನು ನಿರಂತರವಾಗಿ ಹುಡುಕುತ್ತಿದ್ದಾರೆ. ಶಾಂತಿ ಎಲ್ಲರಿಗೂ ಬೇಕಾದದ್ದು. ಆದರೆ ನಿಜವಾದ ಭಕ್ತರಿಗೆ ಮಾತ್ರ ಅದು ದಕ್ಕುವಂತಹದು. ಭಕ್ತಿಮಾರ್ಗದಲ್ಲಿ  ಕಾಯಾ ವಾಚಾ ಮನಸಾ ಮೂರು ರೀತಿಯಲ್ಲೂ ಕಪಟತೆಯನ್ನೇ  ಮೈಗೂಡಿಸಿಕೊಂಡವರಿಗೆ ಅದು ಹೇಗೆ ದೊರೆಯಲು ಸಾಧ್ಯ? ಆ ಕಳ್ಳ ಭಕ್ತರು ಇದನ್ನು ಅರಿಯದೆ ಇರುವವರು. ಅದಕ್ಕೆಂದೇ ಅಲ್ಲಮರು, “ಸೊಡರು ನಂದಿದೆ” ಎನ್ನುತ್ತಾರೆ. ವಿವೇಕವೆಂಬ ದೀಪ ಆರಿಹೋಗಿರುವುದರಿಂದ ಶಾಂತಿಯ ಮಾರ್ಗ ಕಾಣದಾಗಿದೆ. ಯಾವ ಮಾರ್ಗದಿಂದ ಶಾಂತಿ ಲಭ್ಯವಾಗುತ್ತದೆ ಎಂಬುದನ್ನು ಅವರು ಕಾಣದವರಾಗಿದ್ದಾರೆ. ಈ ಅಜ್ಞಾನವೇ ಅವರನ್ನು ಭೋಗವಿಲಾಸದಲ್ಲಿ ಮುಳುಗುವಂತೆ ಮಾಡಿದೆ. ಅವರು ಇನ್ನೂ ಹೆಚ್ಚಿನ ಭೌತಿಕ ಸುಖವನ್ನು ಬೇಡುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಯಾರೋ ಒಬ್ಬನು ಶಾಸ್ತ್ರಗಳನ್ನು ಅವಲಂಬಿಸುತ್ತಾನೆ. ತಾನು ಈಗ ಅನುಸರಿಸುತ್ತಿರುವ ಮಾರ್ಗ ಫಲಕೊಡದೆ ಹೋದಾಗ ಹಳೆಯ ಮಾರ್ಗವನ್ನು ಅನುಸರಿಸಲುತೊಡಗುತ್ತಾನೆ. ಶಾಸ್ತ್ರಗಳನ್ನು ಓದಿ, ಅದರ ಶುಷ್ಕ ಜ್ಞಾನವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನೇ ಅಧ್ಯಾತ್ಮವೆಂಬ ತಪ್ಪು  ಕಲ್ಪನೆಯಲ್ಲಿ ಮುಳುಗಿದ್ದಾನೆ. ಆ ಶುಷ್ಕ ಜ್ಞಾನವನ್ನು ಅಲ್ಲಮರು “ಅಧ್ಯಾತ್ಮ ವಿಕಾರದ ನೆತ್ತರು” ಎನ್ನುತ್ತಾರೆ.  

ಏಕೆಂದರೆ ಆ ಶುಷ್ಕ ಜ್ಞಾನ  ವ್ಯಕ್ತಿಗೆ ವಿಚಿತ್ರವಾದ ಸಂತೋಷ ಮತ್ತು ಅಹಂಕಾರವನ್ನು ತರುತ್ತದೆ. ಆ ಜ್ಞಾನದ ಅಹಂಕಾರದಲ್ಲಿ ಅವನು ವಾದಕ್ಕೆ ತೊಡಗುತ್ತಾನೆ. ವಾದದಲ್ಲಿ ಇತರರನ್ನು ಸೊಲಿಸುವುದರಲ್ಲಿ ಆತನಿಗೆ ಪಾಶವೀ ಆನಂದ ಸಿಗುತ್ತದೆ. ಅದಕ್ಕಾಗಿ ಮನಸ್ಸು ಮತ್ತೆ ಮತ್ತೆ ಹಾತೊರೆಯುತ್ತದೆ.  ಈ ರಾಕ್ಷಸೀ ಆನಂದವನ್ನೇ ಅಲ್ಲಮರು ಆಧ್ಯಾತ್ಮ ವಿಕಾರದ ನೆತ್ತರು ಎನ್ನುತ್ತಿದ್ದಾರೆ.

ಈ ರಕ್ತದ ರುಚಿ ಹತ್ತಿದವನು ಅದರಿಂದ ಬಿಡಿಸಿಕೊಳ್ಳುವುದು ಬಲು ಕಷ್ಟ.
ಈ ರೀತಿಯಾಗಿ ಜನರು ತಮ್ಮ ಅಜ್ಞಾನದಿಂದ ಶಾಂತಿಯಿಂದ ಇನ್ನೂ ದೂರ ಸರಿಯುತ್ತಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಅಲ್ಲಮರು.

No comments:

Post a Comment