VACHANA IN
KANNADA
ಉರಿ ಪವನದೋಷದೊಳಗಿರ್ದು
ವಾಯು ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ
TRANSLITERATION
uri pavana doShadoLagirdu
vaayu immmaDisitta kaMDe guhEshvaraa.
uri (fire) pavana (wind) doShadoLagirdu (having badly influenced)
vaayu (air) immmaDisitta ( doubling) kaMDe (I saw) guhEshvaraa (Guheshvara).
The fire, having badly influenced by the wind
I saw the air doubling, Guhesvara!
The second
line refers to jnaana (awareness, knowledge) as the ‘fire’ and says that this
fire got extinguished. This is the influence of maya, the illusion
we have fallen into. The mind, referred to as ‘water’ became thirsty, drank
more water and got further diluted. Wandering is the nature of the mind. The
uncontrolled mind, desirous of more and more, became much more of a wanderer.
In summary,
we have been bestowed with a great and wonderful instrument, our body. It
houses all the spark of life we need and can use. We extinguish this spark with
our wandering mind and uncontrolled desires. With our deep attachments to
mundane world and its ups and downs, we also have become experts in increasing
our sorrow and further enhancing the wandering nature of our mind.
ಭೂತ ಭೂತವ
ಕೂಡಿ ಅದ್ಭುತವಾಯಿತ್ತು.
ಕಿಚ್ಚು
ಕೋಡಿತ್ತು ನೀರು ನೀರಡಿಸಿತ್ತು!ಉರಿ ಪವನದೋಷದೊಳಗಿರ್ದು
ವಾಯು ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ
bhoota
bhootva kooDi adbhutavaayittu.
kiccu
kODittu nIru nIraDisittu!uri pavana doShadoLagirdu
vaayu immmaDisitta kaMDe guhEshvaraa.
CLICK HERE
FOR A RECITATION:
TRANSLATION
(WORDS):
Bhoota (gross
or great element) bhootva ( into gross element)
kooDi (joined together) adbhutavaayittu
(became a wonder - wonderful human body has come into being).
kiccu (fire)
kODittu (got extinguished) nIru (water) nIraDisittu!
(has become thirsty - mind which is like water has become thirsty)uri (fire) pavana (wind) doShadoLagirdu (having badly influenced)
vaayu (air) immmaDisitta ( doubling) kaMDe (I saw) guhEshvaraa (Guheshvara).
VACHANA IN
ENGLISH
The element
joined the elements and became a wonder.
The fire got
extinguished, the water became thirsty!The fire, having badly influenced by the wind
I saw the air doubling, Guhesvara!
COMMENTARY
In this
Vachana, Allama Prabhu comments on how our desires complemented by our
wandering minds create havoc in life.
The first
line of the Vachana says that the five gross elements (air, water, fire, earth
and ether) joined together to create a wonder, the human body. This body is wonderful,
for it is the container of the spark of life. It is the one that allows one to
feel that he/she is what he/she is. It allows one to hold the knowledge
(jnaana) needed and allows growing of that knowledge into keen awareness of
here and beyond. It is indeed a great wonder. With all the technology in the
modern world we have not been able to create anything close to it, let alone
understanding it completely!
The third
line tags the sorrow of life as ‘fire’. This fire got badly influenced by the
wind (the wandering mind).
The result of this combination is doubling of the
wandering of the mind. Allama Prabhu laments “Oh, Guhesvara, the wind called
wandering mind did not quench the fire called sorrow. I saw the fire getting
stronger and the wind doubling. “
Let us contain
our desires and stabilize mind and kindle into true awareness!
KANNADA COMMENTARY
ಅರ್ಥ:
ಭೂತ ಭೂತವ
ಕೂಡಿ (ಪಂಚ ಭೂತಗಳು ಕೂಡಿಕೊಂಡು) ಅದ್ಭುತವಾಯಿತ್ತು(ಆಶ್ಚ್ರರ್ಯಕರವಾಗಿ
ರೂಪುಗೊಂಡವು)
ಕಿಚ್ಚು
(ಜ್ಞಾನವೆಂಬ ಕಿಚ್ಚು) ಕೋಡಿತ್ತು (ಆರಿ ಹೋಯಿತು) ನೀರು ನೀರಡಿಸಿತ್ತು!(ಮನಸ್ಸೆಂಬ ನೀರು ವಿಷಯಗಳ
ಹಿಂದೆ ಹರಿದಾಡಿ ಇನ್ನೂ ನೀರಡಿಸಿತ್ತು)
ಉರಿ
(ಸಾಂಸಾರಿಕ ದುಃಖ) ಪವನ ದೋಷದೊಳಗಿರ್ದು
(ಚಂಚಲವಾದ ಮನಸ್ಸೆಂಬ ಗಾಳಿಯೊಂದಿಗೆ ಕೂಡಿತು)
ವಾಯು
ಇಮ್ಮಡಿಸಿತ್ತ ಕಂಡೆ ಗುಹೇಶ್ವರಾ (ಸಾಂಸಾರಿಕ ದುಃಖದಿಂದ ಚಿತ್ತ ಚಾಂಚಲ್ಯ ಇಮ್ಮಡಿಯಾದುದನ್ನು
ಕಂಡೆ)
ತಾತ್ಪರ್ಯ:
ಇಲ್ಲಿ
ಆಸೆ ಮತ್ತು ಚಾಂಚಲ್ಯ ಎರಡೂ ಒಂದಕ್ಕೊಂದು ಪೂರಕವಾಗಿ ಜೀವ ನ ಸ್ಥಿತಿ ಹೇಗೆ ಹದಗೆಡುತ್ತ
ಹೋಗುತ್ತದೆ ಎನ್ನುವುದನ್ನು ಸೊಗಸಾಗಿ ಹೇಳುತ್ತಾರೆ ಅಲ್ಲಮಪ್ರಭುಗಳು.
ಪಂಚ
ಭೂತಗಳು ಪರಸ್ಪರ ಕೂಡಿಕೊಂಡು ಈ ಮಾನವ ದೇಹದ ರಚನೆಯಾಗುತ್ತದೆ. ಇದು ಒಂದು ಅದ್ಭುತವಾದ ಮತ್ತು
ಸಂಕೀರ್ಣವಾದ ನಿರ್ಮಿತಿ. ಇದನ್ನು ಅದ್ಭುತ ಎನ್ನುತ್ತಾರೆ ಅಲ್ಲಮರು. ಏಕೆ ಇದು ಅದ್ಭುತ? ಏಕೆಂದರೆ ಈ ದೇಹದಲ್ಲಿ ಚೈತನ್ಯವಿದೆ, ಈ ದೇಹವೆ ನಾನೆಂಬ ಭಾವವಿದೆ. ಮತ್ತು ಈ ದೇಹ ನಾನಲ್ಲ ಎಂಬ ಜ್ಞಾನವಾಗಬೇಕಾದರೆ ಈ ದೇಹ
ಬಹು ಮುಖ್ಯ. ಈ ದೇಹದಲ್ಲಿರುವಾಗಲೇ ಅರಿವು ಮೂಡುತ್ತದೆ.
ದೇಹವಿಲ್ಲದಿದ್ದರೆ ಅರಿವೂ ಇಲ್ಲ. ಈ ದೇಹವು ಅರಿವು ಪಡೆಯಲು ಒಂದು ಅನಿವಾರ್ಯ ಸಾಧನ.
ಆದ್ದರಿಂದ ಇದು ಅದ್ಭುತ.
ಇಲ್ಲಿ
ಜ್ಞಾನವೂ ಇದೆ. ಅದೇ ಕಿಚ್ಚು. ಆದರೆ ಮಾಯೆಯ
ಕಾರಣದಿಂದ ಆ ಕಿಚ್ಚು ಆರಿ ಹೋಗಿದೆ. ಮನಸ್ಸು
ಮಾತ್ರ ಅತಿ ಚಟುವಟಿಕೆಯಿಂದ ಕೂಡಿದೆ. ಆ ಮನಸ್ಸು ನೀರಿನಂತೆ ಚಂಚಲವಾದದ್ದು. ಹತ್ತಾರುಕಡೆ
ಹರಿದಾಡುವಂತಹದು. ಮುಖ್ಯವಾಗಿ ವಿಷಯ ಸುಖದ ಹಿಂದೆ ಓಡುವಂತಹುದು. ಅದರ ಹಿಂದೆ ಓಡಿದಷ್ಟೂ ಇನ್ನೂ
ಇನ್ನೂ ಆ ಸುಖ ಪಡೆಯಬೇಕೆಂಬ ಆಸೆ ಹೆಚ್ಚುತ್ತದೆ. ಅದೇ ಬಾಯಾರಿಕೆ. ಅದು ಎಂದಿಗೂ ಹಿಂಗದ ಬಾಯಾರಿಕೆ. ಮನಸ್ಸಿನ ಆಸೆಗಳು ಎಂದೂ ಪೂರ್ತಿಯಾಗಿ ತಣಿಯುವುದೇ
ಇಲ್ಲ. ಹಾಗಾಗಿ ದುಃಖ, ಉರಿ. ಇದಕ್ಕೆ ಚಂಚಲವಾದ ಮನಸ್ಸು ಗಾಳಿಯಂತೆ. ಗಾಳಿ ಹೆಚ್ಚಾದಷ್ಟೂ ಉರಿ
ಹೆಚ್ಚುತ್ತದೆ. ಅಂದರೆ ಚಂಚಲತೆಯಿಂದ ಮನಸ್ಸು ನಾನಾ ವಿಷಯಗಳ ಹಿಂದೆ ಹೋದ ಹಾಗೆಲ್ಲ ದುಃಖ
ಹೆಚ್ಚುತ್ತದೆ. ದುಃಖ ಹೆಚ್ಚಿದಷ್ಟೂ ಮನಸ್ಸು ಅದನ್ನು ಸಂತಸಗೊಳಿಸಲು ಇನ್ನೂ ಇನ್ನೂ ಸುಖಗಳ ಹಿಂದೆ
ಓಡುತ್ತದೆ.ಹೀಗೆ ಚಿತ್ತ ಚಾಂಚಲ್ಯ
ಇಮ್ಮಡಿಯಾಗುವುದನ್ನು ನೋಡಿದೆ ಎನ್ನುತ್ತಾರೆ ಅಲ್ಲಮರು.
ಇದು ಒಂದು
ವಿಷವೃತ್ತ. ಸುಖಕಾಗಿ ಮನಸ್ಸು ವಿಷಯಸುಖಗಳ ಹಿಂದೆ
ಅಲೆಯುವುದು, ಆದರೆ ಅಲ್ಲಿ ಶಾಶ್ವತ ಸುಖವಿಲ್ಲ. ಆದ್ದರಿಂದ ನಿರಾಶೆ ಮತ್ತು ದುಃಖ. ಆ ದುಃಖವನ್ನು
ದೂರಗೊಳಿಸಲು ವಿಷಯಗಳಲ್ಲಿ ಇನ್ನೂ ಹೆಚ್ಚಿನ ಸುಖದ
ಅರಸುವಿಕೆ. ಇದರಿಂದ ಸಾಮಾನ್ಯ ಮಾನವನಿಗೆ ಬಿಡುಗಡೆಯೇ ಇಲ್ಲವೆಂದು ತೋರುತ್ತದೆ. ಆದರೆ ಈ
ಸತ್ಯವನ್ನು ಅಲ್ಲಮರು “ನಾನು ಕಂಡೆ” ಎನ್ನುತ್ತಾರೆ. ಅವರು ಆ ರೀತಿಯಾಗಿ ವಿಷಯ ಸುಖದ ಹಿಂದೆ ಓಡುವುದು ಎಷ್ಟು ನಿರರ್ಥಕ ಎಂಬುದನ್ನು ಮನಗಂಡಿದ್ದಾರೆ.