Friday, January 25, 2013

Vachana 126: Naanellinda Bande? Where did I come from?


ನಾನೆಲ್ಲಿಂದ ಬಂದೆ?
ಎನಗೆ ಈ ದೇಹ ಬಂದ ಪರಿಯಾವುದು?
ಇನ್ನು ಮುಂದೆ ಎಯ್ದುವ ಗತಿಯಾವುದು?
ಎಂಬ ನಿತ್ಯಾನಿತ್ಯ ವಿಚಾರ ಹುಟ್ಟದವರಿಗೆ ಎಂದೆಂದಿಗೂ ಬಳಲಿಕೆ ಬಿಡದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ,
ನಾನು ಕಂಡು ಮರುಗುತ್ತಿದ್ದೆನು.

TRANSLITERATION

naanelliMda baMde?
enage I dEha baMda pari yaavudu?
innu maMde eyduva gatiyaavudu?
eMba nityaanitya vicaara huTTdavarige eMdeMdigU balalike biDadu.
nijaguru svataMtara siddhaliMgEshvara,
nIvu barisida bhavaaMtaradalli barutiharaagi,
naanu kaMDu maruguttiddenu.                           

CLICK HERE TO READ-ALONG:


TRANSLATION (WORDS)

naanelliMda (from where did) baMde? (I come?)
enage  (to me) I  (this) dEha (body) baMda (come)  pari (means, way) yaavudu ( by what, which)?
innu maMde (here after) eyduva ( will be obtained, attained) gatiyaavudu (which condition)?
eMba (such) nityaanitya (permanent and impermanent, mortal and immortal) vicaara (thought) huTTdavarige(who do not get the) eMdeMdigU (forever) baLalike (tiredness) biDadu (will not leave).
nijaguru svataMtara siddhaliMgEshvara, (Nijaguru Svatantra Siddhalingeshvara)
nIvu (you) barisida (put in to) bhavaaMtaradalli (the cycle of birth and death) barutiharaagi,(because have been coming)
naanu(I) kaMDu (seeing) maruguttiddenu (I am regretting).

TRANSLATION

From where did I come?
By what means did this body come to me?
Which condition will be attained here after?
Those who do not get such mortal and immortal (permanent and impermanent) thoughts, are forever tired!
Oh! Lord Nijaguru SvataMtara SiddhaliMgEshvara!
Being in the cycle of life and death you created,
I am saddened witnessing this!
 

COMMENTARY

Sharana Svatantra Siddalingeswara comments on the state of individuals in whose mind questions such as ‘where did I come from? How did I get this body?’ do not arise, saying that such individuals suffer through the cycle of life and death (happiness and sadness) forever and never come out of it. 

A child with all his innocence and peaceful mind asks innumerable questions of his parents. Where did the tree come from? Where was the seed? Who planted it? Why does it need water? on and on and on. Parents and others answer some of these questions and eventually run out of either their patience or the answers to questions. They tend to discourage the child from asking or divert him to other activities to escape from questions. The child gets conditioned as he grows up and stops asking questions beyond what he can immediately understand. All the other distractions like education, finding the job, earning a living, acquiring wealth, friends, etc. become his prime concern. He is now a full-fledged participant of the mundane cycle of happiness and sadness. He seldom has any time or inclination to question where he came from, where is he going, what will happen, etc.  

The key to keep the questioning alive is to retain the innocence and peace of mind and develop the subtle curiosity and desire to probe beyond what can be just seen or heard. One has to do this on his own. Only peaceful and innocent nature will be able to perceive the divine principle behind each and every aspect and object. Siddalingesvara is sad to see that the humans are so entangled in this mundane cycle of happiness and sorrow, albeit created by the Lord and urges us to get out of it and go back to our innate innocent, peaceful and probing nature that we have lost. Only when such innocence and peace sets in, that we will be able to develop the subtle sight to see the divine in and behind all we have. Only then, we can achieve the equanimity needed to take both happiness and sadness in their stride; neither of them will tip us out of our balance; only then we can be independent of the cycle of life and death. 

Let us regain the peace and innocence we were born with! 

KANNADA COMMENTARY 

ಅರ್ಥ:
ನಾನೆಲ್ಲಿಂದ ಬಂದೆ? (ನಾನು  ಎಲ್ಲಿಂದ ಬಂದೆ?)
ಎನಗೆ ಈ ದೇಹ ಬಂದ ಪರಿಯಾವುದು? (ನನಗೆ ಈ ಶರೀರ ದೊರಕಿದ ಬಗೆಯಾವುದು?)
ಇನ್ನು ಮುಂದೆ ಎಯ್ದುವ ಗತಿಯಾವುದು? (ಇನ್ನು ಮುಂದೆ ನನಗೆ ಯಾವ ಗತಿ ಉಂಟಾಗುತ್ತದೆ?)
ಎಂಬ ನಿತ್ಯಾನಿತ್ಯ ವಿಚಾರ ಹುಟ್ಟದವರಿಗೆ ಎಂದೆಂದಿಗೂ ಬಳಲಿಕೆ ಬಿಡದು,(ಎಂಬಂತಹ ಶಾಶ್ವತ ಮತ್ತು ಅಶಾಶ್ವತ ವಿಷಯಗಳ ಬಗ್ಗೆ ಜಿಜ್ಞಾಸೆ ಇರದವರಿಗೆ ಆಯಾಸ ತಪ್ಪದು)
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ,
ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ, (ನೀವು ಎಂದರೆ  ದೇವರು ಹುಟ್ಟಿಸಿದಂತೆ  ಸಂಸಾರದಲ್ಲಿ ಬರುತ್ತಿರುವುದರಿಂದ)
ನಾನು ಕಂಡು ಮರುಗುತ್ತಿದ್ದೆನು. (ನಾನು ಅದನ್ನು ಕಂಡು ಮರುಗುತ್ತಿದ್ದೇನೆ) 

ತಾತ್ಪರ್ಯ: 

ಯಾರು ಈ ಭವದಲ್ಲಿ ನಿರಂತರವಾಗಿ ಬರುತ್ತಲೇ ಇರುತ್ತಾರೆ ಎಂಬುದನ್ನು ಸಿದ್ಧಲಿಂಗರು ಇಲ್ಲಿ ಹೇಳುತ್ತಿದ್ದಾರೆ. ಯಾರ ಮನದಲ್ಲಿ “ನಾನು ಎಲ್ಲಿಂದ ಬಂದೆ? ನನಗೆ ಈ ದೇಹ ಹೇಗೆ ದೊರಕಿತು?” ಎಂಬಂತಹ ವಿಚಾರಗಳು ಹುಟ್ಟುವುದಿಲ್ಲವೋ ಅವನು ಮತ್ತೆ ಮತ್ತೆ ಹುಟ್ಟುತ್ತ ಸಾಯುತ್ತ ಬಳಲುತ್ತಿರುತ್ತಾನೆ ಎನ್ನುತ್ತಾರೆ ಅವರು. 

ತನ್ನ ಸುತ್ತಮುತ್ತಲಿನ ಪರಿಸರವನ್ನು ಕಂಡಾಗ ಶಾಂತವಾದ ಮನಸ್ಸಿನಲ್ಲಿ ಅನೇಕ ವಿಚಾರಗಳು ಹುಟ್ಟುತ್ತವೆ. ಉದಾಹರಣೆಗೆ; ಮುಗ್ಧ ಮನಸ್ಸಿನ ಮಗು ತಾಯಿಯನ್ನು ಸಾವಿರಾರು ಅರ್ಥಪೂರ್ಣವಾದ,  ಗಹನವಾದ ಪ್ರಶ್ನೆಗಳನ್ನು ಕೇಳುತ್ತದೆ- ಮರ ಹೇಗುಂಟಾಯಿತು? ಬೀಜ ಎಲ್ಲಿಂದ ಬಂದಿತು? ಮೊದಲ ಬೀಜ ಎಲ್ಲಿಂದ ಬಂದಿತು? ಮುಂತಾಗಿ. ಉತ್ತರ ತಿಳಿಯದ ಹಿರಿಯರು ಆ ಪ್ರಶ್ನೆಗಳನ್ನು ತೇಲಿಸಿಬಿಡುತ್ತಾರೆ. ಇನ್ನೂ ಕೆಲವರು ಮಗು ಪ್ರಶ್ನೆ ಕೇಳುವುದನ್ನೇ ನಿಲ್ಲಿಸಿಬಿಡುವಂತೆ ಮಾಡುತ್ತಾರೆ. ಈ ಪರಿಸ್ಥಿತಿ ದೊಡ್ಡವರಿಗೂ ಒದಗುತ್ತದೆ. 

ಇಂತಹ ವಿಚಾರಗಳಲ್ಲಿ ಕೇವಲ ಮುಗ್ಧ ಮತ್ತು ಶಾಂತವಾದ ಮನಸ್ಸು ಮಾತ್ರ ತನ್ನನ್ನು ತೊಡಗಿಸಿಕೊಳ್ಳಬಲ್ಲುದು. ಅಷ್ಟೇ ಅಲ್ಲ  ಇಂತಹ ಮನಸ್ಸು ಮೇಲೆ ಹೇಳಿದಂತಹ ವಿಷಯಗಳಲ್ಲಿ ಜಿಜ್ಞಾಸೆಗೆ  ತೊಡಗುತ್ತದೆ.  ಈ ಪ್ರಶ್ನೆಗಳಿಗೆ ಯಾವ ನಿರ್ದಿಷ್ಟವಾದ ಉತ್ತರವಿಲ್ಲ. ಯಾವ ವ್ಯಕ್ತಿಯೂ ಇವುಗಳಿಗೆ ಉತ್ತರವನ್ನು ಕೊಡಲಾರ. ಆದ್ದರಿಂದ ಇತರರಿಂದ ಇವನ್ನು ಪಡೆಯಲಾಗದು. ಇಂತಹ ವಿಷಯಗಳನ್ನು ತಾನೇ ಸ್ವತಃ ವಿಚಾರಿಸಿ ಅರಿಯಬೇಕು.    ವಿಚಾರಗಳಲ್ಲಿ ತೊಡಗಿಕೊಂಡ ಮನಸ್ಸು ಸೂಕ್ಷ್ಮವಾಗುತ್ತದೆ. ಹೊರಗಣ್ಣಿಗೆ ತೋರುವ ಪ್ರತಿಯೊಂದರ ಹಿಂದೆ ಇರುವ ಆ ಪರವಸ್ತುವಿನ ರೂಪ ಅದಕ್ಕೆ ಕಂಡು ಬರುತ್ತದೆ. ಆದ್ದರಿಂದ ಅಂತಹ ಮನಸ್ಸಿಗೆ, ವ್ಯಕ್ತಿಗೆ ಈ ಸಂಸಾರದಲ್ಲಿಯ ಆಗು ಹೋಗುಗಳು ಬಾಧಿಸುವುದಿಲ್ಲ. ಸಾಂಸಾರಿಕ ಆಗು ಹೋಗುಗಳಿಂದ ಆತನು ಸ್ವತಂತ್ರನಾಗಿರುತ್ತಾನೆ. 

ಆದರೆ,  ನಾನು ಯಾರು? ಎಲ್ಲಿಂದ ಬಂದೆ? ನನಗೆ ಮುಂದೆ ಏನಾಗುತ್ತದೆ? ಎಂದೆಲ್ಲ ವಿಚಾರಿಸದ ವ್ಯಕ್ತಿ ಇಲ್ಲಿ ಕಾಣುವುದಷ್ಟೇ ಸತ್ಯ. ಅದನ್ನುಳಿದು ಬೇರೆ ಇನ್ನೇನಿಲ್ಲ ಎಂದು ಭಾವಿಸಿ ಸಂಸಾರದ ಆಗು ಹೋಗುಗಳಲ್ಲಿ ಸಿಲುಕಿ ಸಾವು ನೋವುಗಳಿಗೆ ಈಡಾಗುತ್ತಾನೆ. ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ.  

ನಾನು ಈಗ ಇರುವ ಸ್ಥಿತಿ ಯಾವುದು? ಸುಖಪೂರ್ಣವೋ ದುಃಖಪೂರ್ಣವೋ?  ಮುಂದೆ ನನ್ನ ಗತಿ ಏನಾಗುತ್ತದೆ? ಎಂದೆಲ್ಲ ಯೋಚಿಸದ ವ್ಯಕ್ತಿ ಯಾವಾಗಲು ಬಳಲುತ್ತಾನೆ ಎನ್ನುತ್ತಾರೆ ಸಿದ್ಧಲಿಂಗರು. ಏಕೆಂದರೆ, ಈ ರೀತಿಯಾಗಿ, ಮನಸ್ಸಿನಲ್ಲಿ ಹುಸಿಯಿಲ್ಲದೆ,ವಿಚಾರಿಸ ಹೋದಾಗ ತನ್ನ ಸುಖ ಸಂತೋಷಗಳು ತನ್ನ ಕೈಯಲ್ಲಿಯೇ ಇವೆ ಎಂಬುದು ಅರಿವಿಗೆ ಬರುತ್ತದೆ.  

ಯಾವುದು ನಿತ್ಯವಾದದ್ದು ಯಾವುದು ಅನಿತ್ಯವಾದದ್ದು ಎಂದು ಯೋಚಿಸದ ವ್ಯಕ್ತಿ  ದುಃಖಕ್ಕೀಡಾಗುತ್ತಾನೆ. ಅನಿತ್ಯವಾದದ್ದನ್ನು, ಅಶಾಶ್ವತವಾದದ್ದನ್ನು  ಶಾಶ್ವತವಾಗಿರಲಿ ಎಂದು ಹಾರೈಸಿ, ಅದು ಹಾಗಾಗದೆ ಇದ್ದಾಗ ಹತಾಶೆ ಅನುಭವಿಸಿ ಪಡಬಾರದ ಪಾಡು ಪಡುತ್ತಾನೆ. ಇದೇ ಸಿದ್ಧಲಿಂಗರು ಹೇಳುವ ಬಳಲಿಕೆ.  

“ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ” ಎಂದು ಹೇಳುತ್ತಾರೆ. ಈ ಮಾತನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. “ದೇವರು ಇಟ್ಟಂತೆ ಇರುವುದು ತಪ್ಪೆ?” ಎನ್ನಬಹುದು. “ದೇವರೆ ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಅದರಲ್ಲಿ ನಾವು ಇದ್ದೇವೆ. ಆತನೇ ಇದನ್ನು ಮಾಡಿರುವುದು.ಇಲ್ಲಿ ಇರುವುದನ್ನೆಲ್ಲ ಅನುಭವಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದುಕೊಳ್ಳುತ್ತಾರೆ ಸಾಮಾನ್ಯರು.  ನಿತ್ಯಾನಿತ್ಯದ ಬಗ್ಗೆ  ವಿಚಾರ ಹುಟ್ಟದವರಿಗೆ ಇದು ಅನಿವಾರ್ಯ.  ಈ ಜಗತ್ತಿನ ಜನರು ಇಂತಹ ಬಳಲಿಕೆಯೊಳಗಾಗಿ ಹುಟ್ಟು ಸಾವಿನ ಚಕ್ರದಲ್ಲಿ ಬರುತ್ತಿದ್ದಾರೆ. ಇಂತಹವರನ್ನು ನೋಡೀ ಸಿದ್ಧಲಿಂಗರು ಮರುಗುತ್ತಿದ್ದಾರೆ. ಅಂದರೆ ಇದರಿಂದ ಮುಕ್ತಿ ಸಾಧ್ಯವಿದೆ ಮತ್ತು ಅದನ್ನು ಪಡೆಯಬೇಕು ಎಂಬುದನ್ನು ಸೂಚಿಸುತ್ತಿದ್ದಾರೆ.

 

.

 

 

 

Saturday, January 19, 2013

Vachana 125: Husiyillada Sishyanu – Ideal Disciple and Teacher


ಹುಸಿಯಿಲ್ಲದ ಶಿಷ್ಯನು ಮರಹಿಲ್ಲದ ಗುರುವಿನ ಪಾದವ ಹಿಡಿದಡೆ,
ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ,
ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು,
ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ ಗುರುವಡಗಿ
ಗುರು ಶಿಷ್ಯನಾಗಿ ಎರಡೂ ಒಂದಾದ  ಪರಿಯನೇನೆಂದುಪಮಿಸುವೆನಯ್ಯ?
ನಿಜಗುರು ಸ್ವತಂತ್ರಸಿಧ್ಹಲಿಂಗೇಶ್ವರಲೊಂದಾದ ಗುರುಶಿಷ್ಯರ?

TRANSLITERATION

husiyillada shiShyanu marahillada guruvina paadava hiDidaDe,
kuruhillada liMgava  koDalikkaagi,
terahilladappaloDane baridaadavu tanumanapraaNaMgaLellavu,
I beDaginaupadEshava paDeda shiShyanalli guruvaDagi
gurushiShyanaagi eraDU oMdaada pariyanEneMdupamisuvaenayya?
nijagauru svataMtrasiddhaliMgEshvaraloMDaada gurushiShyara?

CLICK HERE TO READ-ALONG:

 

TRANSLATION (WORDS)

husiyillada (who doesn’t have anything  that is untrue) shiShyanu (disciple)
marahillada (who is always awake and aware)  guruvina (the teacher) paadava (feet, the path of) hiDidaDe,(if held)
kuruhillada (without symbol) liMgava (Linga, the God)   koDalikkaagi,( when  gives)
terahilladappaloDane (when becomes one with that)  baridaadavu ( became null) tanumanapraaNaMgaLellavu,(all the three- body, mind and  existence, being))
I  (this) beDaginaupadEshava ( marvelous teaching)  paDeda (who received)  shiShyanalli ( in the disciple) guruvaDagi (teacher hidden)
gurushiShyanaagi  (teacher turning in to  disciple) eraDU (the two)  oMdaada (becoming one)
pariyanu (the process) EneMdu (how can I) upamisuvaenayya? (compare with, Sir!)
nijagauru svataMtrasiddhaliMgEshvaraloMDaada gurushiShyara? (teacher and the disciple becoming one with the God siddhalingeshvara)

TRANSLATION

When the disciple with no untruth held the feet of the ever awake and aware Guru (teacher),
The non-symbolic Linga (God) was granted,
And he becomes one with it and the trifold being (body, mind and soul) became null.
The teacher hid in the disciple who received this marvelous lesson!
What can I compare this act of the teacher turning into disciple and the two becoming one, Sir!
And the teacher and the disciple becoming one with Lord SvataMtrasiddhaliMgEshvara!

COMMENTARY

We have said that our ultimate goal in the spiritual path is to become one with God. This is self-realization, achieving Moksha, or achieving the Null. We have said that the Guru (teacher) and Linga (the icon) or the aids for achieving this state in the spiritual journey. In the previous posting we said that the Guru is the living form of the Lord and Linga is the symbolic form. Guru initiates the spiritual consciousness in the disciple and guides him. The disciple starts with the iconic Linga, realizes that which is beyond the icon, traverses the ocean of senses and realizes the true self.  

In this Vachana, Sharana Svatantra Siddalingesvara provides the true attributes of the Guru and the disciple to make the spiritual journey possible and a success. We have said that there must be an intense desire on the part of disciple. The Guru then supplements this desire with the appropriate knowledge. To be able to do this, the Guru must be one who is ever awake and aware. The disciple must be the one with no untruth (no "lies" within him). That is, it is not enough that the disciple does not ‘lie’; the concept of lying is completely foreign to him, in the sense that he has completely internalized the concept of the Self and knows nothing else. He does not need any aid to go beyond the realm of his senses and their influence on him. The ever awake guru leads such a disciple to realize that which is beyond the icon. The Guru and the disciple become one and the same; the Guru merges with the disciple and the two merge with the  Lord.  

Millions of thoughts enter our mind constantly. We become victims of these thoughts. We tend to justify our actions. The true disciple is the one who is beyond this thought cycle and has won the influence of senses. The thought of justifying his actions does not even enter his mind. This is the true state of the disciple with untruth!  

The lesson then is that one should have an intense desire to achieve something, acquire the knowledge pertinent to it, go beyond the icons and internalize the truth. The truth in the context of this Vachana is Him dwelling in the Self.
 

Let us become knowledgeable and go beyond the icons!

KANNADA COMMENTARY 

ಅರ್ಥ:

ಹುಸಿಯಿಲ್ಲದ ಶಿಷ್ಯನು, (ಸುಳ್ಳುನ್ನೇ ಅರಿಯದ ಶಿಷ್ಯ)
ಮರಹಿಲ್ಲದ (ಮರವೆಯಿಲ್ಲದ, ಸದಾ ಎಚ್ಚರದಲ್ಲಿರುವವ್) ಗುರುವಿನ ಪಾದವ ಹಿಡಿದಡೆ, (ಗುರುವು ತೋರಿದ ಮಾರಗವನ್ನು ಹಿಡಿದರೆ)
ಕರುಹಿಲ್ಲದ ( ಗುರುತು, ಚಿನ್ಹೆ ಇಲ್ಲದ) ಲಿಂಗವ ಕೊಡಲಿಕ್ಕಾಗಿ,(ಲಿಂಗವನ್ನು ಕೊಡಲು)
ತೆರಹಿಲ್ಲದಪ್ಪಲೊಡನೆ (ಸಂದಿಲ್ಲದೆ ಅಪ್ಪಿಕೊಂಡಾಗ)  ಬರಿದಾದವು (ಇಲ್ಲವಾದವು)  ತನುಮನಪ್ರಾಣಂಗಳೆಲ್ಲವು, (ದೇಹ, ಮನಸ್ಸು ಮತ್ತು ಪ್ರಾಣಗಳು)
ಈ ಬೆಡಗಿನುಪದೇಶವ ( ಈ ಸೋಜಿಗದ ಉಪದೇಶವನ್ನು)  ಪಡೆದ ಶಿಷ್ಯನಲ್ಲಿ ಗುರುವಡಗಿ (ಪಡೆದ ಶಿಷ್ಯನಲ್ಲಿ ಗುರುವು ಅಡಗಿ ಹೋಗುತ್ತಾನೆ)
ಗುರು ಶಿಷ್ಯನಾಗಿ (ಗುರುವು ಶಿಷ್ಯನಾಗಿ)  ಎರಡೂ ಒಂದಾದ (ಇಬ್ಬರೂ )
ಪರಿಯನೇನೆಂದುಪಮಿಸುವೆನಯ್ಯ? (ರೀತಿಯನ್ನು ಯಾವುದಕ್ಕೆ ಹೋಲಿಸಿ ಹೇಳಲಿ? ಅದನ್ನು ವಿವರಿಸುವಂತಹ ರೀತಿಯೇ ಇಲ್ಲ)
ನಿಜಗುರು ಸ್ವತಂತ್ರಸಿಧ್ಹಲಿಂಗೇಶ್ವರಲೊಂದಾದ ಗುರುಶಿಷ್ಯರ? (ಸಿದ್ಧಲಿಂಗೇಶ್ವರನಲ್ಲಿ ಒಂದಾಗಿ ಹೋದ ಗುರುಶಿಷ್ಯರ ರೀತಿಯನ್ನು) 

ತಾತ್ಪರ್ಯ: 

ಗುರು ಮತ್ತು ಶಿಷ್ಯ ಹೇಗಿರುತ್ತಾರೆ? ಅವರಿಬ್ಬರ ಅಸ್ತಿತ್ವ ಹೇಗಿರುತ್ತದೆ? ಎಂಬುದನ್ನು ಹೇಳುತ್ತಿದ್ದಾರೆ ಸಿದ್ಧಲಿಂಗರು. “ಹುಸಿಯಿಲ್ಲದ ಶಿಷ್ಯನು” ಎನ್ನುತ್ತಾರೆ. ಎಂದರೆ ತನ್ನಲ್ಲಿ ಅಸತ್ಯ ಅಥವಾ ಸುಳ್ಳು ಇರದವನು ಎಂದರ್ಥವಾಗುತ್ತದೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಬಲು ಮುಖ್ಯ. “ಹುಸಿಯಿಲ್ಲದ” ಮತ್ತು “ಹುಸಿಯಾಡದ” ಎನ್ನುವುದರಲ್ಲಿ ಬಹಳ ಅಂತರವಿದೆ. ಹುಸಿಯಾಡದವರು ಸಿಗಬಹುದು ಆದರೆ ಹುಸಿಯಿಲ್ಲದವರು ಸಿಗುವುದು ಬಹು ವಿರಳ.  

ಸುಳ್ಳು ಮಾತಾಡದವರು  ಅಲ್ಲಲ್ಲಿ ಕಂಡುಬರಬಹುದು. ಅಂದರೆ ತನ್ನ ಮಾತುಗಳಲ್ಲಿ ಅಸತ್ಯವನ್ನು ತರದವನು.  ಆತನು ಸದಾ ಸತ್ಯವನ್ನೇ ನುಡಿಯುತ್ತಾನೆ. ಆದರೆ ಅದು ಹೆಚ್ಚಿನದಲ್ಲ. “ಹುಸಿ”ಯಿಲ್ಲದಿರಬೇಕು. ಏನು ಹಾಗೆಂದರೆ? ನಮ್ಮೆಲ್ಲರ ಮನದಲ್ಲಿ ಅನೇಕ ಭಾವನೆಗಳು ಮೂಡುತ್ತವೆ, ಮತ್ತು ನಾವು ಅವುಗಳಿಗೆ ದಾಸರಾಗುತ್ತೇವೆ, ಆದರೆ ಆತ್ಮೋನ್ನತಿಯ ಕಡೆಗೆ ಹೋಗುವವನು  ಈ ಭಾವನೆಗಳನ್ನು, ತನ್ನ ಮನಸ್ಸಿನ ರೀತಿಯನ್ನು ಗಮನಿಸುವ ಹುಸಿಯನ್ನು ಬಿಡಬೇಕಾಗುತ್ತದೆ. ಏಕೆಂದರೆ ತನುಗುಣಗಳಿಂದ ಮುಕ್ತಿ ಪಡೆಯಲು ತನ್ನ ಮನಸ್ಸು ಹೇಗೆ ವರ್ತಿಸುತ್ತದೆ  ಮತ್ತು ಏಕೆ ಹಾಗೆ ವರ್ತಿಸುತ್ತದೆ ಎನ್ನುವ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ. ಅದಕ್ಕೆ ಮನಸ್ಸನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು. ತನ್ನ ಮನದಲ್ಲಿ ಹುಟ್ಟುವ ಕಾಮ, ಕ್ರೋಧ, ಮದ, ಮೋಹ, ಲೋಭ, ಮತ್ಸರ ಮುಂತಾದವುಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಗಮನಿಸಬೇಕು, ಗುರುತಿಸಬೇಕು.  ಇಂತಹ ಸ್ಥಿತಿಯನ್ನು ಹುಸಿಯಿಲ್ಲದ್ದು ಎನ್ನಬಹುದು.

ಇಂತಹ ಹುಸಿಯಿಲ್ಲದ  ಶಿಷ್ಯನು “ಮರಹಿಲ್ಲದ ಗುರು” ವಿನ ಪಾದವ ಹಿಡಿದರೆ ಏನಾಗಬಹುದು?  ಅರಿವು ಎಲ್ಲಕ್ಕಿಂತ ದೊಡ್ಡದು. ಮರೆವು ಅಜ್ಞಾನ. ಮರಹಿಲ್ಲದ ಗುರು ಎಂದರೆ ಸದಾ ಎಚ್ಚರದಲ್ಲಿರುವವನು. ಮರೆವನ್ನು ಮೀರಿದವನು.  ಸ್ವತಃ ಸದಾ ಎಚ್ಚರದಲ್ಲಿರುವವನು ಶಿಷ್ಯನನ್ನು ಎಚ್ಚರದೆಡೆಗೆ ಕರೆದೊಯ್ಯಬಹುದು. ಮರೆವೆಯಲ್ಲಿ ಇರುವವನು ಗುರು ಹೇಗಾದಾನು?
ಮೇಲೆ ಹೇಳಿದ ಹುಸಿಯಿಲ್ಲದ ಶಿಷ್ಯನು ಇಂತಹ ಮರಹಿಲ್ಲದ  ಗುರುವನ್ನು ಕಂಡಾಗ ಏನಾಗುತ್ತದೆ ಎನ್ನುವುದನ್ನು ಹೇಳುತ್ತಾರೆ ಸಿದ್ಧಲಿಂಗರು. 

ಜಾಗ್ರತ ಚೇತನದ ಗುರುವಿಗೆ ಮನಸ್ಸಿನಲ್ಲಿ ಹುಸಿತುಂಬಿದ ಶಿಷ್ಯನಿಂದ ಯಾವ ಪ್ರಯೋಜನವೂ ಇಲ್ಲ. ಆತ ಆತ್ಮೋನ್ನತಿಯ ಕಡೆಗೆ ಆತನನ್ನು ಕೊಂಡೊಯ್ಯಲಾರ. ಆದರೆ ಹುಸಿಯಿಲ್ಲದ ಶಿಷ್ಯ ದೊರೆತಾಗ ಆತ ಆ ಶಿಷ್ಯನಿಗೆ ಕುರುಹಿಲ್ಲದ ಲಿಂಗ ಕೊಡಲು ಸಾಧ್ಯವಾಗುತ್ತದೆ. ಅಂದರೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುವ ಶಿಷ್ಯನ ಮನಸ್ಸು ಕುರುಹಿಲ್ಲದ ಲಿಂಗವನ್ನು ನೋಡಲು ಸಿದ್ಧವಾಗಿರುತ್ತದೆ. ಅದನ್ನು  ಗುರುತಿಸಿ ಮರಹಿಲ್ಲದ ಗುರುವು ಆತನಿಗೆ ಕುರುಹಿಲ್ಲದ ಲಿಂಗವನ್ನೀಯುತ್ತಾನೆ. ಅಂದರೆ ಕುರುಹನ್ನು ಮೀರಿ ಆ ಪರವಸ್ತುವನ್ನು ಕಾಣುವುದಕ್ಕೆಡಮಾಡಿಕೊಡುತ್ತಾನೆ. ಇಂತಹ ಗುರುವಿಲ್ಲದಿದ್ದರೆ ಆ ಹುಸಿಯಿಲ್ಲದ ಶಿಷ್ಯ ಆತ್ಮೊನ್ನತಿಯಲ್ಲಿ ಮುಂದುವರೆಯಲು ದಾರಿ ತೋಚದವನಾಗಿ ಉಳಿಯುತ್ತಾನೆ. ಆದರೆ ಮರಹಿಲ್ಲದ ಗುರುವು ತೋರಿಸಿಕೊಟ್ಟ ಕುರುಹಿಲ್ಲದ ಲಿಂಗವನ್ನು ಕೂಡಲೆ ತೆರಹಿಲ್ಲದೆ ಅಪ್ಪಿ ಗ್ರಹಿಸುತ್ತಾನೆ. ಅಂದರೆ ಅಲ್ಲಿ ಯಾವ ಅರೆಕೊರೆಗಳಿರುವುದಿಲ್ಲ, ಸಂದುಗಳರುವುದಿಲ್ಲ. ಪೂರ್ತಿಯಾಗಿ ಅದರಲ್ಲಿ ಒಂದಾಗಿಹೋಗುತ್ತಾನೆ. ಆತನು ಸದಾ ಎಚ್ಚರವುಳ್ಳವನಾಗುತ್ತಾನೆ. ಹೀಗಾಗಿ ಆತನ ತನು, ಮನ, ಪ್ರಾಣಗಳು ಇಲ್ಲವಾಗುತ್ತವೆ.  

ಇಂತಹ ಬೆಡಗಿನ ಉಪದೇಶವನ್ನು ಪಡೆದ ಶಿಷ್ಯನಲ್ಲಿ ಗುರು ಅಡಗಿ ಹೋಗುತ್ತಾನೆ. ಉರುಹಿಲ್ಲದ ಲಿಂಗವನ್ನು ತೋರುವುದೇ ಬೆಡಗಿನ ಉಪದೇಶ. ಆಗ ಗುರು ಶಿಷ್ಯರು ಒಂದಾಗಿ ಹೋಗುತ್ತಾರೆ.  ಇಂತಹುದನ್ನು ವಿವರಿಸುವುದು ಬಹು ಕಷ್ಟ ಎನ್ನುತ್ತಾರೆ ಸಿದ್ಧಲಿಂಗರು.

Friday, January 11, 2013

Vachana 124: Jagadagala Maayajaalava Hididu – Overcoming Illusion

VACHANA IN KANNADA
 
ಜಗದಗಲ ಮಾಯಾಜಾಲವ ಹಿಡಿದು,
ಕಾಲನೆಂಬ ಜಾಲಗಾರ ಮಾಯಾಜಾಲವ ಬೀಸಿದ ನೋಡಯ್ಯ,
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ,
ಬಲ್ಲ ಬಲ್ಲಿದವರೆಂಬವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ,
ಆ ಕಾಲದ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು.

TRANSLITERATION

jagadagala maayaajaalava hiDidu,
kaalaneMba jaalagaara maayaajaalava bIsida nODayya,
aa jaalakke horagaadavaranobbaranU kaaNe,
balla ballidareMbuvarellara baleya kalliyoLage tuMbida kaala,
aa kaalada baleyoLage sikki bILuvegoLutide jagavella,
nijaguru svataMtra siddhaliMgEshvaranu tannavarige taa mElaaraikeyaagihanu. 

CLICK HERE TO READ-ALONG: 



TRANSLATION (WORDS)

jagadagala  (as wide as the Universe) maayaajaalava ( the net of illusion) hiDidu, (holding)
kaalaneMba (called  the death)  jaalagaara ( the fisherman) maayaajaalava (net of illusion) bIsida (has spread) nODayya,(you see)
aa ( to that) jaalakke (net) horagaadavaranoobbaranU ( a single person who is out of it) kaaNe,(I cannot see)
balla (those who Know)  ballidareMbuvarllara (those who are called knowledgeable) baleya ( the net) kalliyoLage (in the bag of) tuMbida kaala,(the death has filled)
aa (that)  kaalada baleyoLage  (in the bag of death)  sikki (trapped) bILuvegoLutide (is dying) jagavella,(the whole universe)
nijaguru svataMtra siddhaliMgEshvaranu (Nijaguru Svatantra Siddhalingeshavara) tannavarige (the people who are aware of him) taa (he) mElaaraikeyaagihanu.( protects) 

VACHANA IN ENGLISH 

Holding the net of illusion as wide as the Universe,
The fisherman called death has spread the net of illusion, you see Sir!
I cannot see a single person who is out of that net.
The death has filled those who know and those who are called knowledgeable in the bag of this net.
Being trapped in that bag of net, the whole Universe is dying.
Lord Nijaguru Svatantra Siddhalingeshavara protects those who are aware of Him!
 

COMMENTARY

In this Vachana Sharana Svatantra Siddhalingeshavara comments on the concepts of death and illusion. He calls the death a "fisherman" who has cast his net of illusion (Maya) wide enough to capture everyone in the whole Universe. Both those who are knowledgeable and those who are known to be knowledgeable are trapped in the bag made of the net of illusion. All of them are dying having stuck in this net. The salvation from this net is only to those who are aware of the Lord!

Death is inevitable; but life has to go on. We are fully alive and are going through the ups and downs of life. The ups make us feel happy and proud, although beneath we are worried that the factors bringing us the ups (health, wealth, friendships, etc.) may go away. We are saddened by the downs; we never console ourselves that the downs could be temporary also. The emotional tides we go through are because of our ignorance of the temporariness of   the happiness and the sadness. This is the net of illusion we are trapped in. The solution is to attain the equanimity of mind wherein we stay unperturbed by the ups and downs of life and take them as they come. This state is called ‘stitha prajnatha’’, the state of steady wisdom. Sthitha Prajna is the concept of a free being that lives in this world and appears to be like anybody else. He is one whose mind has become absolutely still, quietened, and tranquil. When all desires of the heart have rested and the heart finds joyous satisfaction in itself because it has found that all joy exists within, independent of external factors, then one is spoken of as a person of steady wisdom, a Sthitha Prajna. A Sthitha Prajna, does what is necessary for the betterment of humanity with a completely tranquil mind, unperturbed. A person whose mind is tranquil will not react to situation in a way that causes harm to others because he sees everybody as his own self. This is the individual who is aware of Him that the Lord protects!
 

Let us pierce the net of illusion!
 

KANNADA COMMENTARY 

ಅರ್ಥ:

ಜಗದಗಲ (ಜಗತ್ತಿನ ಅಗಲದ)  ಮಾಯಾಜಾಲವ ಹಿಡಿದು, (ಮಾಯೆ ಎಂಬ ಜಾಲವನ್ನು ಹಿಡಿದು)  
ಕಾಲನೆಂಬ (ಮೃತ್ಯುವೆಂಬ)  ಜಾಲಗಾರ (ಜಾಲ ಬೀಸುವವನು) ಮಾಯಾಜಾಲವ (ಮಾಯೆ ಎಂಬ ಜಾಲವ) ಬೀಸಿದ ನೋಡಯ್ಯ,(ಬೀಸಿದ್ದಾನೆ ನೋಡು)
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ, (ಆ ಜಾಲದಲ್ಲಿ ಬೀಳದೆ ಇರುವ ಒಬ್ಬನೂ ಕಾಣುವುದಿಲ್ಲ)
ಬಲ್ಲ (ತಿಳಿದವ)  ಬಲ್ಲಿದವರೆಂಬುವರೆಲ್ಲರ  (ತಿಳಿದವರು ಎಂಬುವವರೆಲ್ಲರನು)  ಬಲೆಯ ಕಲ್ಲಿಯೊಳಗೆ (ಬಲೆಯ ಚೀಲದೊಳಗೆ) ತುಂಬಿದ ಕಾಲ, (ಕಾಲವು ತುಂಬಿದೆ)
ಆ ಕಾಲದ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ  ಜಗವೆಲ್ಲ,( ಆ ಕಾಲದ ಬಲೆಯೊಳಗೆ ಸಿಕ್ಕಿಕೊಂಡು ಜಗತ್ತು ಸಾಯುತ್ತಿದೆ)
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು.(ಆದರೆ ಸಿದ್ಧಲಿಂಗೇಶ್ವರನು ತನ್ನನ್ನು ಅರಿದವರಿಗೆ ರಕ್ಷೆಯಾಗಿರುವನು)

ತಾತ್ಪರ್ಯ:

ತೋಂಟದ ಸಿದ್ಧಲಿಂಗ ಸ್ವಾಮಿಗಳ ಶಿಷ್ಯರಾದ ಸ್ವತಂತ್ರ ಸಿದ್ಧಲಿಂಗರು ಈ ವಚನದಲ್ಲಿ ಈ ಜಗತ್ತಿನ ಜನರು ಹೇಗೆ ಸಾವಿಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಹೇಳುತ್ತಿರುವರು. 

ಮೃತ್ಯುವೆಂಬ ಜಾಲಗಾರನು ಜಗತ್ತಿನ ಅಗಲದ ಮಾಯೆ ಎಂಬ ಜಾಲವನ್ನು ಬೀಸಿದ್ದಾನೆ. ಆ ಜಾಲ ಇಡೀ ಜಗತ್ತಿನಷ್ಟು ಅಗಲವಾಗಿರುವುದರಿಂದ ಅದಕ್ಕೆ ಒಳಗಾಗದವರು ಯಾರೂ ಇಲ್ಲ. ಎಲ್ಲರೂ ಅದರೊಳಗೆ ಸಿಕ್ಕಿಕೊಂಡಿದ್ದಾರೆ. ತಿಳಿದುಕೊಂಡವರು ತಿಳಿದುಕೊಂಡಿದ್ದೇವೆ ಎನ್ನುವವರು ಎಲ್ಲರನ್ನೂ ಆ ಮೃತ್ಯು ಎಂಬ ಜಾಲಗಾರನು ತನ್ನ ಮಾಯೆ ಎಂಬ  ಬಲೆಯ ಚೀಲದೊಳಗೆ ತುಂಬಿಕೊಂಡಿದ್ದಾನೆ. ಆ ಮೃತ್ಯುವಿನ ಬಲೆಯೊಳಗೆ ಸಿಕ್ಕು ಜಗತ್ತು ಸಾಯುತ್ತಿದೆ. ಎಲ್ಲರೂ ಸಾಯುತ್ತಿದ್ದಾರೆ. ಆದರೆ ಸಿದ್ಧಲಿಂಗೇಶ್ವರನು ತನ್ನನ್ನು ಅರಿತವರಿಗೆ ರಕ್ಷೆಯಾಗಿರುವನು ಎಂದು ಹೇಳುತ್ತಾರೆ  ಸ್ವತಂತ್ರ ಸಿದ್ಧಲಿಂಗರು. 

ಈ ಲೋಕದಲ್ಲಿ ಕಾಣುವುದಷ್ಟೇ ನಿತ್ಯ ಸತ್ಯವಲ್ಲ. ಅದರಾಚೆಗೂ ನಿತ್ಯವಾದ ಸತ್ಯವಿದೆ.  ಅಜ್ಞಾನದ ಕತ್ತಲೆಯಲ್ಲಿರುವವರಿಗೆ ಇಲ್ಲಿ ತೋರುವುದು ಮಾತ್ರ ನಿಜವೆಂದು ತೋರುತ್ತದೆ. ಬದುಕಿನಲ್ಲಿ ಬರುವ ಸುಖ ದುಃಖಗಳು, ಸಂತೋಷ ನೋವುಗಳು ಕ್ಷಣಿಕವಾದವುಗಳು. ಅವು ಮೇಲ್ನೋಟಕ್ಕೆ ನಿಜವೆಂದು ತೋರಿದರೂ ಅವುಗಳನ್ನು ಆಳವಾಗಿ ನೋಡಿದಾಗ  ಅವುಗಳ ಅಸ್ತಿತ್ವ ಅಜ್ಞಾನದಿಂದ ಉಂಟಾದುದೆಂದು ತೋರಿಬರುತ್ತದೆ. ಆದರೆ ಅದೇ ನಿಜವೆಂದು ಗ್ರಹಿಸಿ ಜೀವ ಸುಖ ದುಃಖಗಳ ಸಾಗರದಲ್ಲಿ ಮುಳುಗೇಳುತ್ತದೆ.  ಇದೇ ಮಾಯೆ. ಈ ಮಾಯೆಗೆ ಎಲ್ಲರೂ ಒಳಗಾಗಿದ್ದಾರೆ.   

ಜೀವಕ್ಕೆ ಸುಖವೂ ನಿಜವಾದ ಸುಖ ಕೊಡುವುದಿಲ್ಲ. ಏಕೆಂದರೆ ಆ ಸುಖದ ಹಿಂದೆ ಸದಾ “ಅದು ಎಲ್ಲಿ ಮಾಯವಾಗುವುದೋ” ಎಂಬ ಭಯವಿದ್ದೇ ಇರುತ್ತದೆ. ಆ ಭಯ ಸುಖವನ್ನು ಪೂರ್ತಿಯಾಗಿ ಅನುಭವಿಸಲು ಅನುವು ಮಾಡಿಕೊಡುವುದಿಲ್ಲ. ಇನ್ನು ದುಃಖವಂತೂ ಜೀವನನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ರೀತಿಯಾಗಿ ಸುಖ ದುಃಖಗಳೆಂಬ ಮಾಯಾಜಾಲದಲ್ಲಿ ಸಿಲುಕಿ ಜೀವನು ಪ್ರತಿನಿತ್ಯ ಸಾಯುತ್ತಲೇ ಇರುತ್ತಾನೆ. ತಿಳಿದುಕೊಂಡವನು ಅಥವಾ ತಿಳಿದುಕೊಂಡವನೆಂದೆನಿಸಿಕೊಂಡವನು ಇಬ್ಬರೂ ಕೂಡ ಇಂತಹ ಸಾವಿಗೀಡಾಗುತ್ತಾರೆ. ಈ ಜಾಲದಲ್ಲಿ ಬಲ್ಲವರು, ಎಂದರೆ ಓದಿಯೋ ಇಲ್ಲವೆ ಕೇಳಿಯೋ ತಿಳಿದುಕೊಂಡಿರುವವರು, ಮತ್ತು  ನಾವು ತಿಳಿದುಕೊಂಡಿರುವವರು ಎನ್ನುವ ಭ್ರಮೆಯೊಳಗಿರುವವರು ಎಲ್ಲರೂ ಯಾವ ತಾರತಮ್ಯವೂ ಇಲ್ಲದೆ ಸಿಕ್ಕಿಕೊಳ್ಳುತ್ತಾರೆ. ಎಂದರೆ ಜ್ಞಾನಿಗಳೆಂದು ಅನಿಸಿಕೊಂಡವರೆಲ್ಲರೂ ಇದರಲ್ಲಿ ಬಿದ್ದುಹೋಗುತ್ತಾರೆ.  ಅಂದರೆ ಇನ್ನೊಬ್ಬರಿಂದ ಅಥವಾ ಇನ್ನೆಲ್ಲಿಂದಲೋ ಪಡೆದ ಜ್ಞಾನ ನಿಜವಾದ ಜ್ಞಾನವಲ್ಲ. ತನ್ನನ್ನು ತಾನರಿಯುವುದೇ ನಿಜವಾದ ಜ್ಞಾನ. ಅಂತಹ ಜ್ಞಾನವನ್ನು ಪಡೆದವನನ್ನು ಸಿದ್ಧಲಿಂಗೇಶ್ವರನು ಕಾಪಾಡುತ್ತಾನೆ ಎನ್ನುತ್ತಾರೆ ಸ್ವತಂತ್ರ ಸಿದ್ಧಲಿಂಗರು. 

“ಸಿದ್ಧಲಿಂಗೇಶ್ವರನು ತನ್ನವರಿಗೆ ತಾ ಮೇಲಾರೈಕೆಯಾಗಿಹನು´  ಎನ್ನುತ್ತಾರೆ. ಏನು ಹಾಗೆಂದರೆ? ಅಂದರೆ ತನ್ನವರನ್ನು ಸಿದ್ಧಲಿಂಗೇಶ್ವರರು  ಸಾವಿನಿಂದ ರಕ್ಷಿಸುತ್ತಾನೆಯೆ?  ಅಂದರೆ ಅವರು ಸಾಯುವುದಿಲ್ಲವೆ?

ದೈಹಿಕವಾದ ಸಾವು ಎಲ್ಲರಿಗೂ ಬರುವುದು. ಆದರೆ ತನ್ನತಾನರಿದವನು, ಸುಖದುಃಖಗಳ ನಿಜರೂಪವನ್ನು, ಅವು ಏಕೆ ಉಂಟಾಗುತ್ತವೆ, ಎನ್ನುವುದನ್ನು ಆಳವಾಗಿ ಅರಿಯುವುದರಿಂದ ಅವುಗಳು ಆತನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ. ಅವುಗಳನ್ನು ಸ್ಥಿತಪ್ರಜ್ಞನಾಗಿ ನೋಡುವಂತಹನಾಗುತ್ತಾನೆ ಆತನು. ಆದ್ದರಿಂದ ಆತನು ಸಾವನ್ನು ಗೆದ್ದವನೇ ಆಗುತ್ತಾನೆ.

 

 

Friday, January 4, 2013

Vachana 123: Kanduda Hidiyalollade – Seeing the Unseen



ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಹೆನೆಂದಡೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದನೆ ಕಂಡು ಗುರು ಪಾದವ ಹಿಡಿದಲ್ಲಿ
ಕಾಣದುದ  ಕಾಣಬಹುದು ಗುಹೇಶ್ವರಾ!
TRANSLITERATION
kaMDuda hiDiyalollade kaaNadudanarasi hiDidaheneMdaDe
sikkadeMba baLalike nODaa!
kaMDudane kaMDu gurupaadava hiDidalli
kaaNaduda kaaNabahudu guhEshvaraa!

CLICK HERE TO READ-ALONG:

TRANSLATION (WORDS)
kaMDuda ( that which is visible) hiDiyalollade (without grasping)  kaaNadudanarasi (seeking invisible) hiDidaheneMdaDe (and if one  tries to grasp it)
sikkadeMba (of not finding it) baLalike (tiredness)  nODaa! (you see)
kaMDudane (the visible) kaMDu (seeing)  gurupaadava (the path shown by the Teacher) hiDidalli (if followed)
kaaNaduda (invisible)  kaaNabahudu (can be seen)  guhEshvaraa! (Guheshvara)

TRANSLATION
Without grasping that which is visible, and seeking and trying to grasp the invisible,
results in tiredness (frustration), you see!
Seeing that which is visible and following the path shown by the Guru (teacher),
the invisible can be seen, Lord Guhesvara! 

COMMENTARY
We can always see a visible entity and grasp all its visible characteristics. We can never see an invisible entity. All efforts to see such an entity would be fruitless and result in frustration. We should see the visible and if the invisible is perceivable, we should develop the keen perception to perceive and experience it. Allama Prabhu provides a path for such perception of the invisible, yet omnipresent, omnipotent and omniscient God. He says that the guidance of the Guru (teacher) is the way to develop that perception. Guru is the visible form of the invisible God. Sharanas provided Ishtalinga as the visible icon of the Universal (super) soul. When the individual develops an intense desire to perceive God, he finds a Guru to help him set him in the spiritual path. The individual follows Guru’s guidance and crosses the ocean of senses in the journey of self-realization and finds Him in his own Self (Atman, or soul). One cannot see God; he is beyond the scope of our senses; one has to experience Him.
A popular simile to describe God is that we can see the brightness spread by an electric bulb, but we cannot see the electrical current that made the bulb glow. The current is the God and His effect that we can see is the brightness. Some of us bright ones argue that we can feel the electricity by stripping the cover over the wire and touching it!  We must have received the knowledge that we can strip the wire and touch it to feel the electricity from someone (the Guru).
 The message of this Vachana is that we should learn to distinguish between that which is visible versus that which is only perceivable. We should not tire ourselves in trying to see the invisible. We should cultivate ourselves to perceive the invisible through pertinent knowledge provided by the knowledgeable (Guru).

Let us learn to distinguish between the visible and the invisible!
KANNADA COMMENTARY
ಅರ್ಥ:
ಕಂಡುದ (ಕಾಣುವಬಹುದಾದುದನ್ನು)  ಹಿಡಿಯಲೊಲ್ಲದೆ (ಗ್ರಹಿಸದೆ, ಕಾಣಲು ಇಷ್ಟಪಡದೆ)   ಕಾಣದುದನರಸಿ (ದೃಶ್ಯವಲ್ಲದ್ದನ್ನು ಅರಸಿ, ಹುಡುಕಿ) ಹಿಡಿದಹೆನೆಂದಡೆ (ಹಿಡಿಯುತ್ತೇನೆ ಎಂದರೆ)
ಸಿಕ್ಕದೆಂಬ ಬಳಲಿಕೆಯ ನೋಡಾ! (ಅದು ಸಿಗದೆ ಬಳಲಿಕೆಯಾಗುತ್ತದೆ, ಆಯಾಸವಾಗುತ್ತದೆ)
ಕಂಡುದನೆ (ಕಾಣುವಂತಹ ವಸ್ತುವನ್ನು) ಕಂಡು (ನೋಡಿ. ಗ್ರಹಿಸಿ)  ಗುರು ಪಾದವ ಹಿಡಿದಲ್ಲಿ  (ಗುರುವು ತೋರಿದ ಮಾರ್ಗದಲ್ಲಿ ನಡೆದರೆ)
ಕಾಣದುದ  (ಕಾಣದೆ ಇರುವುದನ್ನು) ಕಾಣಬಹುದು ಗುಹೇಶ್ವರಾ! (ಕಾಣಬಹುದು ಗುಹೇಶ್ವರ)

ತಾತ್ಪರ್ಯ:

ಸಾಧ್ಯವಾದುದನ್ನು ಕಡೆಗಣಿಸಿ ಅಸಾಧ್ಯವಾದುದನ್ನು ಸಾಧಿಸಲು ಹೊರಟರೆ ಆಯಾಸವೆ ಹೊರತು ಸಫಲತೆಯಿಲ್ಲ. ಕಣ್ಣಿಗೆ ಕಾಣಬಹುದಾದನ್ನು ನೋಡಲು ಸಾಧ್ಯ. ಕಣ್ಣಿಗೆ ಕಾಣದೇ ಇರುವುದನ್ನು  ನೋಡುತ್ತೇನೆ ಎಂದು ಪ್ರಯತ್ನಿಸಿದರೆ ಬಳಲಿಕೆಯಾಗುತ್ತದೆ. ಅದು ಎಂದಿಗೂ ಕಾಣುವುದಿಲ್ಲ. ಯಾವುದು ದೃಶ್ಯ ಯಾವುದು ಅದೃಶ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ದೃಶ್ಯವಾದುದನ್ನು ಮಾತ್ರ ಕಣ್ಣಿನಿಂದ ಕಾಣಲು ಸಾಧ್ಯ. ಆದರೆ ಅದೃಶ್ಯವಾದುದನ್ನೂ ನಾನು ಕಣ್ಣಿನಿಂದ ಕಾಣುತ್ತೇನೆ ಎಂದು ಅರಸುತ್ತ ಹೋದರೆ ಅದು ಆಕಾಶ ಕುಸುಮವಾಗುತ್ತದೆ.  
 
ಅನುಭವಕ್ಕೆ ಸಿಕ್ಕುವುದನ್ನು ಗುರುವಿನ ಮುಖಾಂತರ ಅನುಭವಿಸಬೇಕು. ಅದಕ್ಕೆ ದಾರಿ ತೋರುವವನು ಗುರು. ಅನುಭಾವಕ್ಕೆ ಸಿಗುವುದರ ಕುರುಹನ್ನು ಆತನು ನಮಗೆ ತೋರುತ್ತಾನೆ. ಕುರುಹು ಮಾತ್ರ ನಮ್ಮ ಕಣ್ಣಿಗೆ ಕಾಣುವಂತಹುದು. ಅದನ್ನು ಮೀರಿದ,  ಕೇವಲ ಅನುಭವ ವೇದ್ಯವಾದ ಆ ಪರವಸ್ತುವನ್ನು  ಗುರುವು ತೋರುವ ಮಾರ್ಗವನ್ನು ಹಿಡಿದರೆ ಕಾಣಬಹುದು ಎನ್ನುತ್ತಾರೆ ಅಲ್ಲಮಪ್ರಭುಗಳು. ಗುರುವಿನ ಪಾದ ಹಿಡಿಯುವುದು ಎಂದರೆ ಆತನು ತೋರಿದ ಮಾರ್ಗದಲ್ಲಿ ನಡೆಯುವುದು. 

ಪರವಸ್ತುವಿನ ಕುರುಹು ಲಿಂಗ ಮತ್ತು  ಅದರ ಮಾರ್ಗವನ್ನು ತೋರಿಸುವಂತಹ ಗುರು ದೃಶ್ಯಕ್ಕೆ ಸಿಗುವಂತಹವರು. ಲಿಂಗ ಮತ್ತು ಗುರುವನ್ನು ನಾವು ಕಾಣಬಹುದು. ಆದರೆ ಆ ಪರವಸ್ತು ದೃಶ್ಯಕ್ಕೆ ಸಿಗುವಂತಹುದಲ್ಲ. ಆದ್ದರಿಂದ ವ್ಯಕ್ತಿಯ ರೂದಲ್ಲಿ ಬರುವ ಗುರುವಿನ ಮತ್ತು ಕುರುಹಿನ ರೂಪದಲ್ಲಿರುವ ಲಿಂಗದ ಮಿತಿಯನ್ನು ಅರಿತು ಅದನ್ನು ಮೀರಿದ ಪರವಸ್ತುವನ್ನು ಅನುಭವದಿಂದ  ಕಾಣುವುದರೆಡೆಗೆ ಸಾಗಬೇಕು ಎನ್ನುತ್ತಾರೆ ಅಲ್ಲಮಪ್ರಭುಗಳು.