Friday, December 28, 2012

Vachana 122: Kallolagana Kicchu – Being of the God

 
ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ?
ತೋರಲಿಲ್ಲಾಗಿ ಬೀರಲಿಲ್ಲಾರಿಗೆಯೂ!
ಗುಹೇಶ್ವರ ನಿಂದ ನಿಲವ ಅನುಭಾವ ಸುಖಿ ಬಲ್ಲ!

TRANSLITERATION

kalloLagaNa kiccu uryaballude?
bIjadoLagaNa vRukSha uliyaballude?
tOralillaagi bIralillaarigeyU!
guhEshvara niMda nilava anubhaava sukhi balla!

CLICK HERE TO READ-ALONG:


TRANSLATION (WORDS)

kalloLagaNa  (in the stone) kiccu (the fire )  uryaballude? ( can it burn?)
bIjadoLagaNa (in the seed)  vRukSha (the tree) uliyaballude? ( can it make sounds)
tOralillaagi (since it is not seen, since it is invisible)  bIralillaarigeyU! ( does not flash to anybody)
guhEshvara (the God)  niMda nilava ( the being of) anubhaava sukhi (the one who dwells in)  balla! ( knows)

TRANSLATION
The fire in the stone, can it burn?
The tree in the seed, can it make sounds?
He is not seen, He does not flash (shine) to anybody!
The one who dwells within knows the being of the God Guhesvara!

COMMENTARY
In this Vachana, Allama Prabhu describes how the God is present (hidden) in every element of the nature and what is needed to see Him. The fire is hidden in the stone. It does not burn as long as it is left alone. It sparks only when the stone rubs against another. The friction is needed to get the fire out; it is not obvious or visible. A tiny seed hides the whole tree. When inside the seed, the tree does not make any sounds it would make otherwise as a grown up tree swayed by the wind. The God is thus not visible, He is not easily seen and he does not shine (flash) to anybody. Allama Prabhu says that only that individual who dwells within (himself) would know the being of God in everything. The subtleness to see within and enjoy the self is a must to see Him.
Being immersed in our daily lives, we do not pay attention to subtle aspects of nature and the entities around us. We can see the stone, but never pay attention to the fire in it. Even when we create fire by rubbing a stone with another, we assume that it is obvious that the friction created the fire. We might even be proud that we can create the fire. Our observation in general is not subtle enough to see the fire in the stone or think of the one who might have created it!
We sow the seed, grow the tree, harvest the fruits and enjoy them. We relish the shade on sunny days and enjoy the cool breeze and the music created by the tree. We never think about the tree hidden in the seed; neither we question how and who might have packed the tree in the seed.
To be able to see the God in all aspects of the nature, we need to develop the capability to see and perceive the subtleness in them. This is only possible for those individuals who have matured themselves out of the worldly aspects and enjoy the self. Only those can see the God!
In our previous postings we have said that it is important to develop God mindedness as early in our lives as possible. We have said that we should see the God within us and within all those around us. This requires us to develop the subtle nature of seeing the good in all and ignoring the faults of others. Mahatma Gandhi said ‘how can I find faults in others when I am not faultless?’ This is only possible when we first mature to the level of seeing within and enjoying the self.   

Let us travel within and become subtle observers! 

KANNADA COMMENTARY

ಅರ್ಥ:

ಕಲ್ಲೊಳಗಣ (ಕಲ್ಲಿನಲ್ಲಿರುವ)  ಕಿಚ್ಚು (ಬೆಂಕಿ)  ಉರಿಯಬಲ್ಲುದೆ? (ಉರಿಯಬಹುದೆ?)
ಬೀಜದೊಳಗಣ (ಬೀಜದೊಳಗೆ ಇರುವ)  ವೃಕ್ಷ  (ಮರವು) ಉಲಿಯಬಲ್ಲುದೆ? (ಸದ್ದು ಮಾಡಬಹುದೆ?)
ತೋರಲಿಲ್ಲಾಗಿ (ಕಾಣಲಿಲ್ಲ ಆದ್ದರಿಂದ)  ಬೀರಲಿಲ್ಲಾರಿಗೆಯೂ! ( ಯಾರಿಗೂ ಹೊಳೆಯಲಿಲ್ಲ)
ಗುಹೇಶ್ವರ (ಅತ್ಯಂತ ಸೂಕ್ಷ್ಮನಾದ) ನಿಂದ ನಿಲವ (ದೇವರ ಇರವು) ಅನುಭಾವ ಸುಖಿ ಬಲ್ಲ! ( ತನ್ನ ತಾನರಿತ ಸುಖಿ ಮಾತ್ರ ತಿಳಿದಿರುತ್ತಾನೆ)
 
ತಾತ್ಪರ್ಯ:
ದೇವರು ಪ್ರಕೃತಿಯಲ್ಲಿ ಹೇಗೆ ಅಡಗಿದ್ದಾನೆ ಎಂಬುದನ್ನು ವಿವರಿಸುತ್ತ  ಆತನು ಯಾರಿಗೆ ಕಾಣುತ್ತಾನೆ ಎಂಬುದನ್ನು ಹೇಳುತ್ತಿದ್ದಾರೆ ಅಲ್ಲಮ ಪ್ರಭುಗಳು.
ಕಲ್ಲಿನಲ್ಲಿ ಬೆಂಕಿ ಇದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ಆ ಬೆಂಕಿ ಉರಿಯುವುದಿಲ್ಲ. ಅದು ಕಣ್ಣಿಗೆ ಕಾಣುವುದೂ ಇಲ್ಲ.  ಕಲ್ಲಿನಲ್ಲಿರುವ ಬೆಂಕಿಯನ್ನು ಕಾಣುವಂತೆ ಮಾಡಲು ಅನುಸರಿಸಬೇಕಾದ ದಾರಿ ಬೇರೆಯೇ ಆಗಿದೆ. ಮೇಲ್ನೋಟಕ್ಕೆ ಕಾಣದೆ ಇದ್ದರೂ ಕಲ್ಲಿನಲ್ಲಿ ಬೆಂಕಿ ಇದ್ದೇ ಇದೆ. ಅದೇ ರೀತಿ ದೇವರು ಪ್ರಕೃತಿಯಲ್ಲಿ ಎಲ್ಲೆಲ್ಲಿಯೂ ಇದ್ದಾನೆ. ಆದರೆ ಕಣ್ಣಿಗೆ ಕಾಣುವುದಿಲ್ಲ.
ಬೀಜದಲ್ಲಿ ವೃಕ್ಷವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗಾಳಿಗೆ ತೂಗಾಡಿ ವೃಕ್ಷ ಸದ್ದು ಮಾಡುವಂತೆ ಬೀಜದಲ್ಲಿರುವ ವೃಕ್ಷ ಸದ್ದು ಮಾಡುತ್ತದೆಯೆ? ಅದು ಸದ್ದು ಮಾಡುವುದಿಲ್ಲ. ಆದರೆ ಬೀಜದಲ್ಲಿ ಮರವಿಲ್ಲವೆಂದು ಹೇಳಲಾಗದು. ಅದೇ ರೀತಿ ದೇವರು ಎಲ್ಲದರಲ್ಲಿಯೂ ಇದ್ದಾನೆ. “ಆದರೆ ನಾನು ಇದ್ದೇನೆ” ಎಂದು ಹೇಳುವುದಿಲ್ಲ.
ಆತನು ಕಣ್ಣಿಗೆ ಕಾಣುವುದಿಲ್ಲ, ಹೊಳೆಯುವುದಿಲ್ಲ. ಆದ್ದರಿಂದ  ಆತ  ಇದ್ದಾನೆ ಎಂದು ಯಾರಿಗೂ ಹೊಳೆಯುವುದಿಲ್ಲ. ಒಂದು ಸಣ್ಣ ಬೀಜದಲ್ಲಿ ಇಡೀ ದೊಡ್ಡ ವೃಕ್ಷ ಅಡಗಿದೆ ಎಂಬುದನ್ನು ತಿಳಿಯಲು ಬೇಕಾದ ದೃಷ್ಟಿ ಬೇರೆ.  ಈ ಜಗತ್ತಿನ ಆಕರ್ಷಣೆಗಳಲ್ಲಿ ಮುಳುಗಿ ಹೋದವನಿಗೆ ಆತನು ಕಾಣುವುದಿಲ್ಲ. ಏಕೆಂದರೆ ಇಂತಹ ವಿಷಯಗಳಲ್ಲಿ ಮುಳುಗಿದವನು ಸೂಕ್ಷ್ಮವನ್ನು ಕಾಣುವಂತಹ ಸೂಕ್ಷ್ಮತೆಯನ್ನು ಹೊಂದಿರುವುದಿಲ್ಲ. ಕೇವಲ ಬಾಹ್ಯ ಕಣ್ಣಿಗೆ ಕಾಣುವುದನ್ನು ಮಾತ್ರ ಆತ ನಂಬುತ್ತಾನೆ. ಅದರ ಹೊರತು ಅತನಿಗೆ ಬೇರೇನೂ ಕಾಣದು. ದೇವರ ಸೂಕ್ಷ್ಮ ರೂಪವನ್ನು ನೋಡಲು ಮಾನವನ ಮನಸ್ಸು ಬಲು ಸೂಕ್ಷ್ಮವಾಗಬೇಕು. ಪ್ರಕೃತಿಯ ಹಿಂದೆ ಇರುವ ಪರವಸ್ತುವನ್ನು ಗಮನಿಸಲು ಮನಸ್ಸು ತನ್ನನ್ನು ತಾನು ಅರಿಯುವುದರಲ್ಲಿ ತೊಡಗಬೇಕು. ಅಂದರೆ ಇಲ್ಲಿ ನಮಗೆ ಕಂಡುಬರುವ ಎಲ್ಲವೂ ಮಾಯೆಯ ಜಾಲ ಎಂಬುದನ್ನು ಅರಿಯುವ ಶಕ್ತಿಯಿರಬೇಕು. ಆತನ ಸೂಕ್ಷ್ಮ ರೂಪ ತನ್ನನ್ನು ತಾನು ಅರಿತ ಅನುಭಾವಿಗೆ ಮಾತ್ರ ಕಾಣುತ್ತದೆ.

 

 

Friday, December 21, 2012

Vachana 121: Aatadali Kela Hottugaledu – Think of Him Soon!


ಆಟದಲಿ ಕೆಲ ಹೊತ್ತುಗಳೆದು
ಕೂಟದಲಿ ಕೆಲ ಹೊತ್ತುಗಳೆದು
ನೋಟದಲಿ ಕೆಲ ಹೊತ್ತುಗಳೆದು
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ
ಊಟ ಮಾಟ ಕೂಟದಲಿ ಕೋಟಲೆಗೊಳುತ್ತಿದ್ದೆನೆಂಬವನೊಬ್ಬ ಪೋಟ
ಇವರಿಬ್ಬರ ಬೇಟಕ್ಕೆ ಸಿಕ್ಕದೆ ದಾಂಟಿ ಹೋದನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ 

TRANSLITERATION

aaTadali kelahottugaLedu
kUTadali kela hottugaLedu
nOTadali kelahottugaLedu
UTadahottige liMgava kUDiheneMbuvanobba
UTa maaTa kUTadali kOTalegoLuttiddeneMbuvanobba pOTa
ivaribbara bETakke sikkade daaMTi hOdanu namma basavapriya kUDalacennabasavaNNa

CLICK HERE TO READ-ALONG:

TRANSLATION (WORDS)

aaTadali  (in playing) kelahottugaLedu (spent some time)
kUTadali (in mingling with friends,socialize) kela hottugaLedu (spent some time)
nOTadali (indulging in looking,seeing) kelahottugaLedu (spent some time)
UTadahottige ( by eating time) liMgava ( the God) kUDiheneMbuvanobba (one says, I want to be one with)
UTa ( in eating food) maaTa (in doings)  kUTadali  (in mingling) kOTalegoLuttiddeneMbuvanobba ( I am suffering says another) pOTa (coward)
ivaribbara (of these two)  bETakke ( fancy ,wish)  sikkade (not being available)  daaMTi (beyond) hOdanu (went) namma (our) basavapriya kUDalacennabasavaNNa (Basavapriya KuDala Chennabasvanna)

TRANSLATION

Having spent some time playing,
Having spent some time mingling,
Having spent some time indulging in sights,
One says I want to be one with the God, by dinner time!
The other coward says I am suffering eating, working and mingling!
Our Basavapriya KuDala Chennabasvanna went away without heeding to the wishes of these two! 

COMMENTARY

In this Vachana Sharana Hadapada Appanna comments on how commoners spend all their lives in mundane activities, eventually get dissatisfied with them and try to reach God at the last stages of life. He says that the God will not be available for them.
We spend lot of time playing the games we like and get unlimited fun out of it. We seldom think of anything else, we seldom like anything else. We are immersed in these games.
We spend all our resources in acquiring friends and enjoying their company. Nothing else occurs to us. Our minds would not entertain any other thought!
We enjoy going places and seeing sights. We never consider it a waste of time. Nothing else makes sense to us. We are on top of the world with our mundane lives!
Eventually, all these mundane activities seem boring to us. Appanna equates this boredom to the ‘dinner time’ when we are hungry and long for becoming one with God. Some even start complaining that they are actually suffering all these activities of playing, socializing and working. Appanna calls them cowards and says that they will not be able to reach God with these last minute wishes! 
Appanna is advocating introducing Godliness to our lives early and stay with it through the life with all the respect and attention it deserves. We must make Him an important part of our life journey, and not just the eventual destination! 
It is very easy to say and very apt to feel that ‘I did it all’, ‘it is all mine’ when success comes to us. It is very easy to be immersed in our own games, social circles, sights and sounds. It takes lot of discipline to recognize that there is a super power which guides it all. The faster we get such realization in life, the easier it is to reach Him.  
  

Let us make God our companion in life’s journey!

KANNADA COMMENTARY

ಅರ್ಥ:

ಆಟದಲಿ ಕೆಲ ಹೊತ್ತುಗಳೆದು (ಆಟವಾಡುತ್ತ, ನಿಶ್ಚಿಂತೆಯಿಂದ ವಿನೋದದಲ್ಲಿ, ಸಮಯವನ್ನು ಕಳೆದು)
ಕೂಟದಲಿ (ಬೆರೆಯುತ್ತ) ಕೆಲ ಹೊತ್ತುಗಳೆದು (ಗೆಳೆಯರೊಂದಿಗೆ, ಒಡನಾಡಿಗಳೊಂದಿಗೆ ಬೆರೆಯುವದರಲ್ಲಿ ಕೆಲ ಸಮಯ ಕಳೆದು)
ನೋಟದಲಿ ಕೆಲ ಹೊತ್ತುಗಳೆದು (ಕಣ್ಣಿಗೆ ಪ್ರಿಯವಾದುದನ್ನು ನೋಡುವುದರಲ್ಲಿ ಕೆಲ ಸಮಯ ಕಳೆದು)
ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ (ಊಟದ ಹೊತ್ತಿಗೆ ಎಂದರೆ  ಆಟ ಕೂಟ ಮತ್ತು ನೋಟ ಗಳೆಲ್ಲ ಸಾಕಾಗಿ ಊಟದ ನೆನಪಾಗುವಂತೆ ಲಿಂಗವನ್ನು ಕೂಡುತ್ತೇನೆ ಎನ್ನುವ ಒಬ್ಬ)
ಊಟ ಮಾಟ ಕೂಟದಲಿ ಕೋಟಲೆಗೊಳುತ್ತಿದ್ದೆನೆಂಬವನೊಬ್ಬ (ಊಟಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ, ಮತ್ತು ಬೆರೆಯುವುದರಲ್ಲಿ ತೊಂದರೆಪಡುತ್ತಿದ್ದೇನೆ ಎನ್ನುವವನು ಒಬ್ಬ) ಪೋಟ (ಭೀರು, ಹೇಡಿ)
ವರಿಬ್ಬರ ಬೇಟಕ್ಕೆ (ಇವರಿಬ್ಬರ ಇಷ್ಟಕ್ಕೆ) ಸಿಕ್ಕದೆ ದಾಂಟಿ  (ಸಿಗದೆ ದೂರ) ಹೋದನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ (ಹೋದನು ಬಸವಪ್ರಿಯ ಕೂಡಲಚೆನ್ನಬಸವಣ್ಣ) 

ತಾತ್ಪರ್ಯ:

ಇಲ್ಲಿ ಹಡಪದ ಅಪ್ಪಣ್ಣನವರು, ಸಾಮಾನ್ಯವಾಗಿ ವ್ಯಕ್ತಿಯು ತನ್ನ ಬದುಕಿನ ಸಮಯವನ್ನು ಹೇಗೆ ಕಳೆಯುತ್ತಾನೆ, ಮತ್ತು ವ್ಯರ್ಥವಾಗಿ ಸಮಯ ಕಳೆದ ರೀತಿಯಿಂದ  ಬೇಸರಗೊಂಡು ಬಾಳಿನ ಕೊನೆ ಸಮಯದಲ್ಲಿ ದೇವರನ್ನು ನೆನೆಯುತ್ತಾನೆ ಎಂಬುದನ್ನು ಹೇಳುತ್ತ ಅಂತಹವರಿಗೆ ದೇವರು ದೊರೆಯುವುದಿಲ್ಲ ಎಂದು ಹೇಳುತ್ತಾರೆ.  


ವ್ಯಕ್ತಿಯು ಬದುಕಿನ ಕೆಲ ಸಮಯ ನಿಶ್ಚಿಂತೆಯಿಂದ ಆಟ ಆಡುತ್ತ, ವಿನೋದದಲ್ಲಿ ಕಳೆಯುತ್ತಾನೆ. ಆಗ ಆತನಿಗೆ ಆಟವನ್ನುಳಿದು ಬೇರೇನೂ ತೋಚುವುದೂ ಇಲ್ಲ, ಬೇರೇನೂ ಇಷ್ಟವಾಗುವುದೂ ಇಲ್ಲ.


ಆಮೇಲೆ ಕೆಲ ಸಮಯ ತನ್ನ ಒಡನಾಡಿಗಳೊಡನೆ, ಪ್ರಿಯರೊಂದಿಗೆ ಕಳೆಯುತ್ತಾನೆ. ಆ ಸಮಯದಲ್ಲಿ ಆತನ ಒಡನಾಡಿಗಳೇ ಆತನ ಸರ್ವಸ್ವವಾಗಿರುತ್ತಾರೆ. ಮನಸ್ಸಿಗೆ ಬೇರೇನೂ ಬೇಕಾಗುವುದಿಲ್ಲ. ಬೇರೆ ಏನೂ ನೆನಪಿಗೆ ಬರುವುದೂ ಇಲ್ಲ. ಇನ್ನು ಕೆಲ ಸಮಯ ಕಣ್ಣಿಗೆ ಪ್ರಿಯವಾದುದನ್ನು ನೋಡುತ್ತ ಕಳೆದುಬಿಡುತ್ತಾನೆ. 


ಇಷ್ಟೆಲ್ಲ ಆದ ಮೇಲೆ ಊಟದ ಹೊತ್ತಿಗೆ ಆತನಿಗೆ ದೇವರ ನೆನಪಾಗುತ್ತದೆ. ಹಸಿವೆ ದೇಹದ  ಸಹಜ ಸ್ವಭಾವ. ಬೇರೆ ಏನೇ ಮಾಡಿದರೂ ಊಟವನ್ನು ತಪ್ಪಿಸುವಂತಿಲ್ಲ. ಕೊನೆಗೆ ಊಟ ಮಾಡಲೇ ಬೇಕು. ಅದೇ ರೀತಿ ಬೇರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿದ್ದರೂ ಕೊನೆಗೆ ಮನಸ್ಸು ಸತ್ಯವಾದ ನಿತ್ಯ ಸುಖವನ್ನು ಬಯಸುತ್ತದೆ.  ಕೆಲವರಿಗೆ ಬದುಕಿನ ಕೊನೆಗಳಿಗೆಯಲ್ಲಿ ಆ ಪರವಸ್ತುವಿನ ಕೊರತೆಯ ಅರಿವಾಗುತ್ತದೆ.


ಇನ್ನು ಕೆಲವರು ಊಟ, ಮಾಟ (ಏನೇನೋ ಮಾಡುವುದು) ಮತ್ತು ಕೂಟದಲ್ಲಿ (ಬೇಕೆನಿಸಿದವರೊಡನೆ ಬೆರೆಯುವುದು)  ಮುಳುಗಿಹೋಗಿ ಅದರಿಂದ ಕಷ್ಟಕ್ಕೊಳಗಾಗಿದ್ದೇನೆ ಎನ್ನುತ್ತಾರೆಯೆ ಹೊರತು ಅದರಿಂದ ಹೊರಬರುವುದಿಲ್ಲ. ನಾಲಿಗೆಗೆ ಇಷ್ಟವಾದುದನ್ನು ತಿನ್ನುವುದು, ಅದು ತನ್ನ ಮನಸ್ಸಿಗೆ , ತನ್ನ ದೇಹಕ್ಕೆ ಏನು ಮಾಡುತ್ತದೆ ಎನ್ನುವುದನ್ನು ವಿವೇಚಿಸದೆ ಇರುವುದು. ಏನೇನೋ ಕೆಲಸಗಳನ್ನು ಮಾಡುವುದು. ತನ್ನ ಕೆಲಸಗಳಿಂದ ತನಗಾಗಲಿ ಅಥವಾ ಸಮಾಜಕ್ಕಾಗಲಿ ಏನು ಲಾಭವಾಗುತ್ತಿದೆ. ಅಥವಾ ಏನು ಹಾನಿಯಾಗುತ್ತಿದೆ ಎಂದು ಯೋಚಿಸುವುದಿಲ್ಲ. ಕೂಟದಲ್ಲಿಯೂ ಅದೇ ದೃಷ್ಟಿ. ಮನಸ್ಸಿನ ಯಾವುದೋ ಒಂದು ಭಾಗಕ್ಕೆ ತಾತ್ಕಾಲಿಕ ಸುಖ ಸಿಗುತ್ತದೆ ಎಂದು ಅದರಲ್ಲಿಯೇ ಮುಳುಗುವುದು. ಮತ್ತು ಇವುಗಳಿಂದ ನಿಜವಾಗಿಯೂ ಸುಖವಿಲ್ಲವೆಂಬುದು ಅರಿವಿಗೆ ಬರುವುದು. ಆದರೆ ಈ ಎಲ್ಲ ಆಕರ್ಷಣೆಗಳಿಂದ ಬಿಡಿಸಿಕೊಳ್ಳಲು ಆತ್ಮ ಬಲ ಸಾಲದೆ ಒದ್ದಾಡುವುದು. ಇಂತಹವರನ್ನು ಹೇಡಿಗಳೆನ್ನುತ್ತಾರೆ ಹಡಪದ ಅಪ್ಪಣ್ಣನವರು.


ಇವರಿಬ್ಬರ ಇಷ್ಟಕ್ಕೆ ಆ ಪರವಸ್ತು ಸಿಗುವುದಿಲ್ಲ. ಇವರ ಮತಿಗಳನ್ನು ಮೀರಿದುದು ಅದು. ಇಂತಹವರಿಂದ  ಕೂಡಲಚೆನ್ನಬಸವಣ್ಣ ಬಲುದೂರವಿರುತ್ತಾನೆ ಎನ್ನುತ್ತಾರೆ ಅಪ್ಪಣ್ಣನವರು.

Friday, December 14, 2012

Vachana 120: Obbarobbara Samga – The company we keep


ಒಬ್ಬರೊಬ್ಬರ ಸಂಗ ಬಯಸುತಿರ್ಪವರು ನೀವು ಕೇಳಿರೋ!
ಮನಕ್ಕೆ ಮನ ತಾರ್ಕಣ್ಯವಾಗದವರ ಸಂಗವದೇತರ ಸಂಗ?
ಬುದ್ಧಿ ಬುದ್ಧಿ ಕೂಟಸ್ಥವಾಗದವರ ಸಂಗವದೇತರ ಸಂಗ?
ಶೀಲ ಶೀಲ ಒಂದಾಗದವರ ಸಂಗವದೇತರ ಸಂಗ?
ಭಾವ ಭಾವ ಏಕಾರ್ಥವಾಗದವರ ಸಂಗವದೇತರ ಸಂಗ ದುಸ್ಸಂಗವಲ್ಲದೆ?
ಇಂತಪ್ಪ ದುಸ್ಸಂಗಿಗಳ ಸಂಗ ದೋಷಕ್ಕೆ ಈಡು,
ಮುಕ್ತಿಯ ಕೇಡು ಕಂಡೆಯಾ ಅಖಂಡೇಶ್ವರಾ

TRANSLITERATION
obbarobbara saMga bayasutirpavaru nIvu kELirO!
manakke mana taarkaNyavaagadavara saMgavadEtara saMga?
buddhi buddhi kUTasthavagadavara saMgavadEtara saMga?
shIla shIla oMdaagadavara saMgavadEtara samga?
bhaava bhaava Ekaarthavaagadavara saMgavadEtara saMga dussaMgavallade?
iMtappa dussaMgigaLa saMga dOShakke IDu
muktiya kEDu kaMDeyaa akhaMDEshavaraa. 

CLICK HERE TO READ-ALONG:
TRANSLATION (WORDS)
obbarobbara (each other’s) saMga  (companionship) bayasutirpavaru (longing for)  nIvu kELirO! ( Oh! you listen)
manakke (to the other mind)  mana (one mind)  taarkaNyavaagadavara (if doesn’t help in seeing one self, if doesn’t become a mirror) saMgavadEtara saMga?(what kind of companionship it is?)
buddhi buddhi (ones’ perception, knowledge with  another’s) kUTasthavagadavara  (if doesn’t blend, intermingle) saMgavadEtara saMga? ( what kind of companionship it is ?)
shIla (one’s nature) shIla ( with the other’s nature) oMdaagadavara (if  doesn’t become one with) saMgavadEtara samga? ( what kind of companionship it is ?)
bhaava (one’s feelings, views) bhaava (with another’s feelings , views) Ekaarthavaagadavara (if don’t become one with) saMgavadEtara saMga (what kind of companionship it is ?) dussaMgavallade? (is it not bad companionship? )
iMtappa (this kind of ) dussaMgigaLa  saMga  (bad companionship) dOShakke (to error, blindness) IDu (makes way)
muktiya (of  salvation) kEDu (risk)  kaMDeyaa akhaMDEshavaraa. (you see Akhandeshvara)

TRANSLATION
Oh! You, longing for each other’s companionship, listen!
What kind of companionship is it, if one’s mind does not become a mirror to the other’s?
What kind of companionship is it, if one’s perception (knowledge) does not blend with other’s?What kind of companionship is it, if one’s nature does not become one with other’s?
What kind of companionship is it, if one’s feelings (views) do not become one with others’, Is it not bad companionship?
This kind of bad companionship leads to blindness (error) and risks the salvation, You see, Akhandeshvara!
COMMENTARY
In this Vachana Sharana Shanmukaswamy addresses the attributes of true ‘SaMga’ the companionship or company. Man is a social being. He strives and longs for the company of others. We say that the birds of the same feather flock together, implying that there must be something in common for a companionship to develop. The question then is ‘what should be the quality or attribute of this common entity?’ since we are branded by the company we keep. We are told that to sore like an Eagle, we must be in the company of Eagles.
Shanmukaswamy says that a true companionship is one in which the mind of one acts as a mirror and reflects the mind of the other. The companionship thus facilitates the view of your own mind. It enables you to introspect, analyze and shape your own mind. In a true companionship, the perceptions of all the individuals involved would be the same. They all think alike.  Their knowledge blends together. Their understanding has a common basis. In a true companionship, the natures, feelings and views of all involved merge and evolve together. Thus, a true companionship is the one that leads towards salvation and self-realization. A bad companionship on the other hand leads to blindness and downfall and takes one away from salvation.
Companionship is a must. Companionships form automatically as we work for the same company, as we travel by the same bus or subway to work daily, as we see each other in common gatherings, as we belong to the same professional society, etc. It is then up to us to develop the companionship into a fruitful one for all the individuals involved. It should be an equal partnership taking us to the common goal in the spiritual or professional path. We must examine our relationships, cultivate the common traits that aid us in the positive directions and curb the negativity. 

Let us reflect on our company we keep! 

KANNADA COMMENTARY
ಅರ್ಥ:
ಒಬ್ಬರೊಬ್ಬರ (ಒಬ್ಬರು ಇನ್ನೊಬ್ಬರ) ಸಂಗ (ಜೊತೆ) ಬಯಸುತಿರ್ಪವರು (ಬಯಸುತ್ತಿರುವ) ನೀವು ಕೇಳಿರೋ! (ನೀವು ಕೇಳಿರಿ)
ಮನಕ್ಕೆ ಮನ (ಒಂದು ಮನಕ್ಕೆ ಇನ್ನೊಂದು ಮನ) ತಾರ್ಕಣ್ಯವಾಗದವರ (ಸ್ವಯಂ ಪರಿಶೀಲನೆಗೆ ಅವಕಾಶವಾಗದಿದ್ದರೆ) ಸಂಗವದೇತರ ಸಂಗ? (ಅಂದೆಂತಹ ಸಂಗ)
ಬುದ್ಧಿ ಬುದ್ಧಿ (ಒಬ್ಬರ ಬುದ್ಧಿ ಇನ್ನೊಬ್ಬರ ಬುದ್ಧಿಯೊಂದಿಗೆ)  (ಕೂಡದಿದ್ದರೆ, ಬೆರೆಯದಿದ್ದರೆ)  ಸಂಗವದೇತರ ಸಂಗ? (ಅದೆಂತಹ ಸಂಗ ?)
ಶೀಲ ಶೀಲ (ಒಬ್ಬರ ಸ್ವಭಾವ ಇನ್ನೊಬ್ಬರ ಸ್ವಭಾವದೊಂದಿಗೆ) ಒಂದಾಗದವರ  (ಒಂದಾಗದಿದ್ದರೆ) ಸಂಗವದೇತರ ಸಂಗ?(ಅದೆಂತಹ ಸಂಗ ?)
ಭಾವ ಭಾವ  (ಭಾವನೆ, ಅಭಿಪ್ರಾಯಗಳು) ಏಕಾರ್ಥವಾಗದವರ (ಒಂದಾಗದವರ)  ಸಂಗವದೇತರ ಸಂಗ ದುಸ್ಸಂಗವಲ್ಲದೆ? (ಸಂಗವು ದುಸ್ಸಂಗವೇ ಅಲ್ಲವೆ?)
ಇಂತಪ್ಪ (ಹೀಗಿರುವ)  ದುಸ್ಸಂಗಿಗಳ (ಕೆಟ್ಟಸಂಗಿಗಳ)  ಸಂಗ ದೋಷಕ್ಕೆ ಈಡು, (ಜತೆಗಾರಿಕೆ ದೋಷಕ್ಕೆ ದಾರಿಮಾಡಿಕೊಡುತ್ತದೆ)ಮುಕ್ತಿಯ  (ಮುಕ್ತಿಗೆ ಅಡ್ಡಿಯಾಗುತ್ತದೆ) ಕಂಡೆಯಾ (ನೋಡು) ಅಖಂಡೇಶ್ವರಾ 

ತಾತ್ಪರ್ಯ:
ಈ ವಚನದಲ್ಲಿ ಷಣ್ಮುಖಸ್ವಾಮಿಗಳು ಎಂತಹವರ ಸಂಗ ಒಳ್ಳೆಯದು, ಎಂತಹವರ ಸಂಗ ಕೆಟ್ಟದ್ದು ಮತ್ತು ಏಕೆ ಎಂಬುದನ್ನು ಹೇಳುತ್ತಾರೆ. ಯಾರ ಸಂಗದಲ್ಲಿ ನಾವಿರುತ್ತೇವೆಯೋ ಅವರ ಪ್ರಭಾವ ನಮ್ಮ ವ್ಯಕ್ತಿತ್ವದ ಮೇಲೆ ಆಗಿಯೇ ಆಗುತ್ತದೆ. ಅದ್ದರಿಂದ ನಾವು ಎಂತಹವರ ಸಂಗ ಮಾಡಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯ. ಆತ್ಮೊನ್ನತಿಯಲ್ಲಿ ಆಸಕ್ತಿಯುಳ್ಳ ವ್ಯಕ್ತಿ ಎಂತಹವರ ಸಂಗ ಬಯಸಬೇಕು ಎಂಬುದನ್ನು ಇಲ್ಲಿ ಹೇಳುತ್ತಿದ್ದಾರೆ.
ಇತರರ ಸಂಗ ಬಯಸುವುದು ಮಾನವನ ಸಹಜ ಸ್ವಭಾವ.  ಆದರೆ ಈ ಸಂಗ ನಮ್ಮನ್ನೇನು ಮಾಡುತ್ತದೆ ಎನ್ನುವುದರ ಕಡೆ ಗಮನ ಹರಿಸುವುದು ಮುಖ್ಯ. ಇನ್ನೊಬ್ಬರ ಸಂಗ ನಮ್ಮ ಮನವನ್ನು ನಾವು ಪರಿಶೀಲಿಸಿಕೊಳ್ಳುವಂತಾಗಬೇಕು. ಎಂದರೆ ಅವರ ನಡತೆ, ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವಂತೆ ಮಾಡಬೇಕು. ಹಾಗಾದರೆ ಮಾತ್ರ ಆತ್ಮೊನ್ನತಿಯ ದಾರಿಯಲ್ಲಿ ಮುಂದುವರೆಯಲು ಅವಕಾಶವಾಗುತ್ತದೆ. ಇಲ್ಲದಿದ್ದರೆ ಅದೆಂತಹ ಸಂಗ ಎಂದು ಕೇಳುತ್ತಾರೆ ಷಣ್ಮುಖ ಸ್ವಾಮಿಗಳು. ಈ ಮಾತು ಶರಣ ದಾರಿಯಲ್ಲಿರುವವರ ಬಗ್ಗೆ ಇದೆ ಎಂಬುದು ಸ್ಪಷ್ಟವಾಗಿಯೇ ಇದೆ. ಏಕೆಂದರೆ ಇತರರು,  ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಯೋಚಿಸದೆ, ತಮಗೆ ಸುಖಕೊಡುವವರ, ತಮಗಿಷ್ಟವಾದವರ ಸಂಗ ಮಾಡುತ್ತಾರೆ. ಆದರೆ ಆತ್ಮೋನ್ನತಿಯ ಹಾದಿಯಲ್ಲಿರುವವನಿಗೆ ಉನ್ನತಿಯ ಮಾರ್ಗವೇ ಮುಖ್ಯ ಹೊರತು ತನ್ನ  ಕ್ಷಣಿಕ  ಸುಖವಲ್ಲ.
ತಮ್ಮ ಬುದ್ಧಿ ತಮ್ಮ ಸಂಗದಲ್ಲಿರುವವರ ಬುದ್ಧಿಯೊಂದಿಗೆ ಬೆರೆಯದಿದ್ದರೆ ಏನು ಪ್ರಯೋಜನ. ಯಾವುದೇ ವಿಷಯದ ಬಗ್ಗೆ  ಆಗಲಿ ಸಂಗದಲ್ಲಿರುವವರ ಗ್ರಹಿಕೆ ಒಂದಾಗಿರಬೇಕು. ಈ ಒಂದಾಗಿರುವಿಕೆ ಅವರನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಅವರುಗಳ ಬುದ್ಧಿಯು ಬೆರೆಯದಿದ್ದಲ್ಲಿ ಆ ಸಂಗದಿಂದ ಏನೂ ಲಾಭವಿಲ್ಲ ಎನ್ನುತ್ತಾರೆ. ಅಂದರೆ ಒಬ್ಬರ ಸಂಗ, ಇನ್ನೊಬ್ಬರು ತಮ್ಮನ್ನು ತಾವು ಪರಿಶೀಲಿಸಿಕೊಳ್ಳುವಂತೆ ಮಾಡಬೇಕು. ಹಾಗಿದ್ದಲ್ಲಿ ಅವರು ತಮ್ಮ ಬುದ್ಧಿಯನ್ನು ಸದಾ ಪರಶೀಲಿಸುತ್ತಿರುತ್ತಾರೆ ಎಂದಾಯಿತು. ಹಾಗೆ ಮಾಡಿದಾಗ ಸಂಗದಲ್ಲಿರುವವರ ಬುದ್ಧಿಯು ಒಂದಾಗುತ್ತದೆ, ಬೆರೆಯುತ್ತದೆ.
ಶೀಲಗಳೂ  ಎಂದರೆ ಸ್ವಭಾವಗಳೂ ಒಂದಾಗಬೇಕು ಎನ್ನುತ್ತಾರೆ. ಇದು ಅತಿ ಮುಖ್ಯ. ಏಕೆಂದರೆ, ಒಬ್ಬ ವಂಚನೆಯ ಸ್ವಭಾವದವನು ಮತ್ತು ಇನ್ನೊಬ್ಬನು ಪ್ರಾಮಾಣಿಕ ಸ್ವಭಾವದವನಾದರೆ ಅವರಿಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ. ಹೀಗೆ ಬೇರೆ ಬೇರೆ ಸ್ವಭಾವದವರು ಜತೆಗೂಡಿದರೆ ಲಾಭಕ್ಕಿಂತ ಹೆಚ್ಚಾಗಿ ಹಾನಿಯೇ ಆಗುತ್ತದೆ.
ಇಬ್ಬರ ಅಭಿಪ್ರಾಯಗಳು ಒಂದಾಗಿರಬೇಕು. ಸಂಗದಲ್ಲಿರುವವರ ಅಭಿಪ್ರಾಯಗಳು ಭಿನ್ನ ಭಿನ್ನವಾಗಿದ್ದರೆ ಅಲ್ಲಿ ಸಾಮರಸ್ಯವಿರುವುದಿಲ್ಲ. ಅಂತಹ ಸಂಗದಿಂದ ಏನು ಲಾಭ. ಅಲ್ಲಿ ಗೊಂದಲ, ಕಲಹ, ಘರ್ಷಣೆಯುಂಟಾಗುತ್ತದೆ. ಹಾಗಾಗಿ ಅದು ದುಸ್ಸಂಗವಾಗುತ್ತದೆಯೇ ಹೊರತು ಸತ್ಸಂಗವಾಗುವುದಿಲ್ಲ. ಆತ್ಮೊನ್ನತಿಯಲ್ಲಿ ಅಡ್ಡಿಯಾಗುತ್ತದೆ. ಇಂತಹ ದುಸ್ಸಂಗ, ವ್ಯಕ್ತಿಯನ್ನು ದೋಷಕ್ಕೆ ಗುರಿಮಾಡುತ್ತದೆ, ಮತ್ತು ಮುಕ್ತಿ ಅಸಾಧ್ಯವಾಗುತ್ತದೆ.
ಆದ್ದರಿಂದ ಜೀವನದಲ್ಲಿ ಮುಕ್ತಿಯನ್ನು ಪಡೆಯಬೇಕೆನ್ನುವವನು  ತಾನು ಯಾರ ಸಂಗ ಮಾಡುತ್ತಿದ್ದೇನೆ? ಎಂಬುದರ ಕಡೆ ಗಮನ  ಹರಿಸಬೇಕು. ಇದು ಈ ವಚನದ ತಾತ್ಪರ್ಯ.

Friday, December 7, 2012

Vachana 119: Manassu Toledu – Minding the Mind


ಮನಸ್ಸು ತೊಳೆದು ನಿರ್ಮಲವ ಮಾಡಿಪ್ಪೆನೆಂಬ ಯೋಗವೆಂತುಟೊ?
ಮನವ ಹಿಡಿದು ತಡೆದಿಹೆನೆಂಬವರ
ಮರುಳುಮಾಡಿ ಕಾಡಿತ್ತು ನೋಡಾ ಮನವು!
ಮನ ವಿಕಲ್ಪ ಜ್ಞಾನದಿಂದರಿದು,
ಅದ ಶುದ್ಧ ಮಾಡಿಹೆನೆಂಬುದು ತಾನೆ  ಮನ ನೋಡಾ,
ನಮ್ಮ ಗುಹೇಶ್ವರ ಲಿಂಗದ ಅನುವನರಿದಿಹೆನೆಂಬುವರು
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.
TRANSLITERATION
manassu  toLedu nirmalava maaDippeneMba  yOgaveMtiTo?
manava hiDidu tadediheneMbavara
maruLu maaDi kaaDittu nODaa manavu!
mana vikalpa j~jaanadiMdaridu,
ada shuddha maaDiheneMbudu taane mana nODaa,
namma guhEshvara liMgada anuvanaridiheneMbavaru
manavilladirabEku nODaa  siddharaamayyaa.
CLICK HERE TO READ-ALONG:

TRANSLATION (WORDS)
manassu  ( the mind) toLedu  ( by washing) nirmalava maaDippe ( I have cleansed) neMba  (so called)  yOgaveMtiTo (what method is it?)
manava (the mind) hiDidu ( by control,)  tadediheneMbavara (those who say I have stopped it from wandering )
maruLumaaDi (by fooling)  kaaDittu (harasses , troubles)  nODaa (you see) manavu (the mind)!mana vikalpa  j~jaanadiMdaridu,(understanding by the doubtful mind)
ada (that) shuddha maaDihe (I have celansed) neMbudu  (saying) taane (that itself  is also) mana nODaa,(is the same mind you see)
namma guhEshvara liMgada (of our Lord Guheshavara)  anuvanaridiheneMbavaru (those who say we know the beauty)
manavilladirabEku (should be of without mind) nODaa  (you see) siddharaamayyaa (Siddharaamaa)
TRANSLATION 

How can I say that I have washed and cleansed my mind?
The mind fools and harasses even those who say they have controlled it and stopped it from wandering!
Understanding through the doubtful mind,
that which says I have cleansed it is that same mind, you see!
Those who say we know the beauty of our Lord Guhesvara, should be without the mind, you see Siddharaamayya! 

COMMENTARY

In this Vachana addressed to Sharana Siddharaamayya, Allama Prabhu comments on the ways of the mind. He stresses on the importance of cleansing the mind to see the Lord, while saying that the process of cleansing the mind does not come easy.

We have said that the inherent nature of the mind is to wander. Mind is a monkey on steroid in general.  It is a must to control the mind although controlling it is not easy and requires appropriate knowledge, constant awareness and effort.  

Allama Prabhu wonders how one can say he/she has washed and cleansed the mind. The mind is so dynamic that it fools and harasses even those who say they have controlled it. Indeed, in our daily lives we are subjected to all the six passions of mind (kama – desire, kroda – anger, lobha – greed, moha- delusory emotional attachment, madha – pride, maatsarya – jealousy) on a constant basis. We notice that we are being subjected to one or more of these and make every effort to get out of their influence. This freedom from passions lasts a little while and the mind reverts to the same as soon as we start feeling that we have conquered the passion and controlled or cleansed the mind. 

In general, we use the polluted mind through which we try to come up with mechanisms to cleanse the mind. How can a polluted mind cleanse itself? 

Allama Prabhu declares those who say that they know the beauty of the Lord, should have to be without a mind! He is not implying that these individuals are mindless. He is stressing that to see the Lord one must have a pure and unpolluted mind, meaning that they should have conquered all the passions of the mind. Indeed, seeing the beauty of the Lord and becoming one with the Lord are synonymous to one being the Lord. When one sheds the six passions, he/she achieves the cleanse mind and becomes the Lord. He sees the Lord in everyone and everything around him/her.
 

Let us Mind the Mind!

KANNADA COMMENTARY
 
ಅರ್ಥ:
ಮನಸ್ಸು ತೊಳೆದು (ಮನಸ್ಸನ್ನು ಚೊಕ್ಕಟಗೊಳಿಸಿ) ನಿರ್ಮಲವ (ಶುದ್ಧ) ಮಾಡಿಪ್ಪೆನೆಂಬ ( ಮಾಡಿರುವೆನು ಎಂಬ) ಯೋಗವೆಂತುಟೊ? (ರೀತಿ ಎಂತಹದು)
ಮನವ ಹಿಡಿದು (ಮನಸ್ಸನ್ನು ಕಟ್ಟಿಹಾಕಿ, ಅಧೀನದಲ್ಲಿಟ್ಟು) ತಡೆದಿಹೆನೆಂಬವರ ( ನಿಲ್ಲಿಸಿದ್ದೇನೆ ಎನ್ನುವವರನ್ನು)
ಮರುಳುಮಾಡಿ (ಭ್ರಮೆ ಹುಟ್ಟಿಸಿ) ಕಾಡಿತ್ತು ನೋಡಾ ಮನವು!(ಕಾಡಿಸಿದೆ ಮನಸ್ಸು)
ಮನ ವಿಕಲ್ಪ ಜ್ಞಾನದಿಂದರಿದು, (ಮನಸ್ಸು ಸಂದೇಹಪೂರಿತ, ದೋಷಪೂರಿತ  ಜ್ಞಾನದಿಂದ ತಿಳಿದುಕೊಂಡು)
ಅದ ಶುದ್ಧ ಮಾಡಿಹೆನೆಂಬುದು (ಅದನ್ನು ಶುದ್ಧ ಮಾಡಿರುವೆನು ಎಂದು ಹೇಳುವುದು)  ತಾನೆ  ಮನ ನೋಡಾ,(ಕೂಡ ಮನಸ್ಸೇ ನೋಡು)
ನಮ್ಮ ಗುಹೇಶ್ವರ ಲಿಂಗದ ಅನುವನರಿದಿಹೆನೆಂಬುವರು (ಗುಹೇಶ್ವರ ಲಿಂಗದ ರೀತಿಯನ್ನು, ಸೌಂದರ್ಯವನ್ನು ಅರಿತಿರುವೆನು ಎನ್ನುವವರು)
ಮನವಿಲ್ಲದಿರಬೇಕು ನೋಡಾ ಸಿದ್ಧರಾಮಯ್ಯಾ.(ಮನಸ್ಸು ಇಲ್ಲದವರಾಗಿರಬೇಕು ನೋಡು ಸಿದ್ಧರಾಮ) 
 
ತಾತ್ಪರ್ಯ:

ಈ ವಚನ ಸಿದ್ಧರಾಮಯ್ಯನವರನ್ನು ಕುರಿತು ಹೇಳಿದುದಾಗಿದೆ.  ಆದರೂ ಇದು ಎಲ್ಲರಿಗೂ ಅನ್ವಯಿಸುವಂತಹದು.  ಇಲ್ಲಿ ಮನಸ್ಸಿನ ರೀತಿಯನ್ನು ಹೇಳುತ್ತಿದ್ದಾರೆ ಅಲ್ಲಮಪ್ರಭುಗಳು.
ಮನಸ್ಸನ್ನು ತೊಳೆದು ನಿರ್ಮಲ ಮಾಡುತ್ತೇನೆ ಎಂಬುವವರನ್ನು ಕುರಿತು ಅದನ್ನು ಹೇಗೆ ಮಾಡುತ್ತೀರಿ ಎಂದು ಕೇಳುತ್ತಲೇ ಅದನ್ನು ಶುದ್ಧಗೊಳಿಸುವಾಗ ಏನೇನು ನಡೆಯುತ್ತದೆ ಎನ್ನುವುದನ್ನು ಹೇಳುತ್ತಾರೆ.
ನಮ್ಮ ಮನಸ್ಸು ಶುದ್ಧವಾಗಿಲ್ಲ ಎಂಬುದು ಅದನ್ನು ಸ್ವಲ್ಪ ಗಮನಿಸಿದರೂ ನಮಗೆ ತಿಳಿಯುತ್ತದೆ. ಅದನ್ನು ತೊಳೆದು ಸ್ವಚ್ಛಗೊಳಿಸುತ್ತೇನೆ ಎಂದುಕೊಳ್ಳುತ್ತೇವೆ. ಅಂದರೆ ನಮ್ಮ ಮನದಲ್ಲಿ ಆಸೆ, ಸಿಟ್ಟು, ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಮನೆ ಮಾಡಿವೆ ಎಂಬುದು ತಿಳಿದು ಬರುತ್ತದೆ.  ಅವುಗಳಿಂದ ಕಷ್ಟಪಡುತ್ತಿರುವಾಗ ಅವುಗಳಿಂದ ಬಿಡುಗಡೆ ಪಡೆಯಬೇಕೆಂಬುದು ತಿಳಿಯುತ್ತದೆ. ಆದರೆ ಬಿಡುಗಡೆ ಪಡೆಯುವುದು ಹೇಗೆ?
“ನಾನು ಇನ್ನು ಮೇಲೆ ಸಿಟ್ಟು ಮಾಡಿಕೊಳ್ಳುವುದಿಲ್ಲ, ಮನದಲ್ಲಿ ಆಸೆ, ಸಿಟ್ಟು, ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಮೂಡದಂತೆ ನನ್ನ ಮನಸ್ಸನ್ನು ತಡೆಯುತ್ತೇನೆ” ಎಂದು ಮನಸ್ಸು ನಿರ್ಧರಿಸುತ್ತದೆ. ನೋವು ಉಂಟುಮಾಡುವ ಈ ಭಾವಗಳು ಮೂಡಿದಾಗ ಅವುಗಳನ್ನು ಅದುಮಿಡುತ್ತದೆ ಮನಸ್ಸು. ಮತ್ತು ಸಂತಸಗೊಳ್ಳುತ್ತದೆ. ಮನಸ್ಸನ್ನು ಶುದ್ಧಮಾಡುವುದು ಎಷ್ಟು ಸುಲಭವಾಯಿತು ಎಂದು ಬೀಗುತ್ತದೆ, ಮರುಳುಗೊಳ್ಳುತ್ತದೆ. ಆದರೆ ಹಾಗೆ ಅದುಮಿಟ್ಟಾಗ ಆ ಕ್ಷಣಕ್ಕೆ ಸುಖವಾದರೂ ಆಮೇಲೆ, ಮನದಲ್ಲಿ ಆಸೆ, ಸಿಟ್ಟು, ಅಹಂಕಾರ, ಮೋಹ, ಹೊಟ್ಟೆಕಿಚ್ಚು ಮುಂತಾದ ಭಾವಗಳು ಇನ್ನೂ ಹೆಚ್ಚು ಪ್ರಬಲವಾಗುತ್ತವೆ. ಹೀಗೆ ಮೊದಲು ಮನಸ್ಸು ಅವು ವಶದಲ್ಲಿವೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ, ಆಮೇಲೆ ಅವುಗಳ ಪ್ರಾಬಲ್ಯಕ್ಕೆ ಒಳಗಾಗಿ ವ್ಯಕ್ತಿಯನ್ನು ಕಾಡುತ್ತದೆ.
ಮನಸ್ಸನ್ನು ನೋಡುವ ನಮ್ಮ ಜ್ಞಾನವೇ ಮೊದಲು ವಿಕಲ್ಪಕ್ಕೊಳಗಾಗಿದೆ. ನಮ್ಮ ಮನದಲ್ಲಿಯೇ ಸ್ಪಷ್ಟತೆ ಇಲ್ಲ. ಶುದ್ಧವಿಲ್ಲದ ಮನಸ್ಸನ್ನು ನೋಡುವವರು ಯಾರು. ಅದು ಕೂಡ ಮನಸ್ಸೇ ಅಲ್ಲವೆ? ಸ್ವತಃ ಅಸ್ಪಷ್ಟವಾಗಿರುವ ಮನಸ್ಸು ಏನನ್ನು ತಾನೆ ಸ್ಪಷ್ಟವಾಗಿ ಕಾಣಲು ಸಾಧ್ಯ? ಯಾವುದು ಶುದ್ಧ ಯಾವುದು ಅಶುದ್ಧ ಎಂಬುದು ಅದಕ್ಕೆ ಹೇಗೆ ತಿಳಿಯುತ್ತದೆ?
ಮನಸ್ಸು ಸಂದಿಗ್ಧದಲ್ಲಿದೆ. ಯಾವುದು ಸರಿ ಯಾವುದು ತಪ್ಪು ಮತ್ತು ಏಕೆ ಎಂಬುದು ಅದಕ್ಕೆ ತಿಳಿದಿಲ್ಲ. ಅಥವಾ ಅ ತಿಳುವಳಿಕೆ ಯಾವುದೋ ವಿಷಯದಿಂದ ಪ್ರಭಾವಿತಗೊಂಡಿದೆ.  ಯಾವುದೋ ಪ್ರಭಾವಕ್ಕೆ ಒಳಗಾಗಿರುವ ಮನಸ್ಸನ್ನು ಶುದ್ಧಿಗೊಳಿಸುವುದು ಯಾವುದು? ಅದು ಕೂಡ ಮನಸ್ಸೇ ಅಲ್ಲವೆ. ಮತ್ತು ಅದು ಕೂಡ ಯಾವುದೋ ಪ್ರಭಾವಕ್ಕೆ ಒಳಗಾಗಿರುತ್ತದೆ ಅಲ್ಲವೆ? ಅಂದ ಮೇಲೆ ಅದರಿಂದ ಏನು ಉಪಯೋಗ. ಅದರಿಂದ ಶುದ್ಧಿ ಸಾಧ್ಯವಿಲ್ಲ ಎಂದಂತಾಯಿತು. ಅದಕ್ಕೇ ಅಲ್ಲಮಪ್ರಭುಗಳು ಹೇಳುತ್ತಾರೆ  ಗುಹೇಶ್ವರನ ಸೌಂದರ್ಯವನ್ನು ಅರಿಯಲು ಮನಸ್ಸು ಇಲ್ಲದವರಾಗಿರಬೇಕು ಎಂದು.
ಏಕೆಂದರೆ ಮನಸ್ಸು ಅನೇಕ ವಿಚಾರಗಳಿಂದ ಉಂಟಾಗಿರುವಂತಹುದು. ಈ ವಿಚಾರಗಳು ಒಂದಲ್ಲ ಒಂದು ಪ್ರಭಾವಕ್ಕೆ ಒಳಗಾಗಿರುತ್ತವೆ. ಮನಸ್ಸಿಲ್ಲದಿರುವಿಕೆ ಎಂದರೆ ಯಾವುದೇ ರೀತಿಯ ಪ್ರಭಾವ ಇಲ್ಲದಿರುವಿಕೆ. ಅಂದರೆ ಅದು ಶುದ್ಧವಾದದ್ದು. ಶುದ್ಧವಾದ ಮನಸ್ಸಿದ್ದಲ್ಲಿ ಗುಹೇಶ್ವರನು ಕಂಡುಬರುತ್ತಾನೆ ಎನ್ನುತ್ತಾರೆ ಅಲ್ಲಮರು.