Friday, May 18, 2012

Vachana 90: Tanuva Gelalariyade - Body, Mind and Wealthತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು,
ತನುವ ದಾಸೋಹಕೆ ಸವೆಸಿ, ಮನವ ಲಿಂಗ ಧ್ಯಾನದಲ್ಲಿ ಸವೆಸಿ,
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ
ಸಂಗನ ಬಸವಣ್ಣನಲ್ಲದೆ ಮತ್ತಾರನೂ ಕಾಣೆ ಗುಹೇಶ್ವರಾ-
ನಿಮ್ಮ ಶರನಣ ಸಂಗನ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು

 
TRANSLITERATION

Tanuva gelalariyade, manava gelalariyade
Dhanava gelalariyade, bhramegoMDittu lOkavellavu,
Tanuva daasOhake savesi, manava liMga dhyaanadalli savesi,
Dhanava jaMgamadalli savesi gellaballaDe
saMgana basavaNNanallade mattaaranU kaaNe guhEshvaraa-
nimma sharanaNa saMgana basavaNNaMge namO namO enutirdenu


CLICK HERE TO READ-ALONG:

http://youtu.be/txpl8yP31sY


TRANSLATION (WORDS)

Tanuva (the body) gelalariyade,(not knowing to conquer) manava (the mind) gelalariyade (not knowing to conquer)
Dhanava (the wealth) gelalariyade,( not knowing to conquer) bhramegoMDittu (is illusioned) lOkavellavu,(the whole world)
Tanuva (the body) daasOhake(for daasoha) savesi,(used, engaging in service) manava (mind) liMga (the god) dhyaanadalli (in meditation) savesi, (engaging in)
Dhanava (wealth) jaMgamadalli ( towards jangama) savesi (engaging in service) gellaballaDe (to know to conquer)
saMgana basavaNNanallade (other than sangana Basavanna) mattaaranU(no one else) kaaNe (I don’t see)
guhEshvaraa-(Guheshvara) nimma (your)sharanaNa saMgana basavaNNaMge (to devotee basavanna)
namO namO enutirdenu (I bow to him)


TRANSLATION

Not knowing how to conquer the body, not knowing how to conquer the mind, and not knowing how to conquer the wealth, the whole world is under illusion!
Conquering the body by engaging it in service (Daasoha), Conquering the mind by engaging it in meditation upon the God (Linga), and Conquering the wealth by dedicating it to wandering ascetics (Jangamas), is only accomplished by Basavanna of Sangama – I don’t know anyone else, Oh Guhesvara!
I bow to your devotee Basavanna of Sangama!


COMMENTARY

In this Vachana, Allama Prabhu provides a guide to how best we should utilize the three prime resources we are all endowed with: Body, Mind and Wealth. He says that the world is under illusion by not knowing how to conquer these entities. The body should be engaged in service of the fellow beings around us (Daasoha). The mind must be immersed in meditation to merge with the divine and the wealth should be utilized in supporting the activities of realized souls (Jangamas) dedicated to bringing awareness to the community. Allama prabhu says that Basavanna is the only individual he has come across who has conquered all the three resources. He shows his utmost respect and admiration of Basavanna by saying ‘I bow to your devotee Basavanna, Oh Guhesvara’.

We have said that the body is the temple and it should be kept fit for God to reside in it. We exercise and eat right to keep the body fit and healthy. Indeed, we spend so much time and resources to take care of the body that we become servants of the body rather than the body being at our service. It is not sufficient that the body serves our needs, but it should be dedicated to the service of the community around us.

We have said that the mind is a monkey and its natural state is that of wandering around. We have to control our minds. We have to evaluate our wants and needs and minimize our desires. Meditating upon the divine and constant awareness of the divine within and around us is a must. We should be the masters of our mind and not vice versa.
Honest, unselfish work and devotion to profession is a must to earn an honest living. Indeed, it is a must to take care of the needs of the family. Beyond that, the wealth should be dedicated to support the activities that make the society better.
In summary, Allama Prabhu is advocating us to become masters of our body, mind and wealth and use them appropriately, rather than being their servants.


Let us conquer body, mind and wealth!


KANNADA COMMENTARY

ತನು, ಮನ, ಧನಗಳನ್ನು ಹೇಗೆ ಸವೆಸಬೇಕು ಎನ್ನುವುದಕ್ಕೆ ಈ ವಚನವು ಕೈಪಿಡಿಯಂತಿದೆ. ತನು ಮನವನ್ನು ಗೆಲ್ಲಲ್ಲು ಬರದೆ ಅವುಗಳಿಗೆ ದಾಸರಾಗಿ ಈ ಲೋಕದ ಜನರೆಲ್ಲ ಭ್ರಮೆಗೊಳ್ಳುತ್ತಾರೆ. ದೇಹದ ಬೇಕು ಬೇಡಗಳನ್ನು ಅರಿತುಕೊಂಡು ನಡೆದುಕೊಳ್ಳುವವರು ಅತಿ ವಿರಳ. ತನುವಿನ ಬೇಕು ಬೇಡಗಳನ್ನು ಅರಿತುಕೊಂಡು ನಡೆದರೆ ಅದನ್ನು ಗೆಲ್ಲಬಹುದು. ಎಂದರೆ ಅದು ನಾವು ಹೇಳಿದಂತೆ ಕೇಳುವಂತೆ ಮಾಡಬಹುದು. ಆದರೆ ನಾವೇ ಅದರ ದಾಸರಾಗಿ ಬಿಡುತ್ತೇವೆ. ಅದನ್ನು ಅತಿಯಾದ ಮಮತೆಯಿಂದ ಬೆಳೆಸುತ್ತೇವೆ. ಆಗ ಅದು ನಮ್ಮ ಮಾತು ಕೇಳುವುದಿಲ್ಲ. ಮನಸ್ಸಿನ ಸ್ಥಿತಿಯೂ ಇದೇ ಆಗಿದೆ.


ಮನಸ್ಸನ್ನು ಅದು ಇಷ್ಟ ಪಟ್ಟ ಕಡೆಗೆ ಹೋಗಲು ಬಿಡುತ್ತೇವೆ. ಅದರ ಅವಶ್ಯಕತೆಗಳನ್ನು ಗುರುತಿಸಿ ಅವನ್ನು ಮಾತ್ರ ಪೂರ್ತಿಗೊಳಿಸದೆ, ಅದರ ಆಸೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಮರ್ಶಿಸದೆ ಅದು ಬಯಸಿದುದನೆಲ್ಲ ಒದಗಿಸಿಕೊಟ್ಟು, ಅದನ್ನು ಕೆಡಿಸಿಬಿಡುತ್ತೇವೆ. ಕೊನೆಯಲ್ಲಿ ಅದರ ದಾಸರಾಗುತ್ತೇವೆ. ಧನವು ಕೂಡ ನಮ್ಮನ್ನು ತನ್ನ ದಾಸನಾಗಿ ಮಾಡಿಕೊಂಡಿದೆ. ಏಕೆಂದರೆ ಅದರ ಬಗ್ಗೆ ಅತಿಯಾದ ಮೋಹದಿಂದ ನಾವು ಅದಕ್ಕೆ ಸಲ್ಲಬೇಕಾದ ಸ್ಥಾನವನ್ನು ಕೊಡದೆ ಪರಮೋಚ್ಚ ಸ್ಥಾನವನ್ನು ಕೊಡುತ್ತೇವೆ. ಅದನ್ನು ನೆಚ್ಚಿಕೊಂಡು, ಮೆಚ್ಚಿಕೊಂಡು, ಅದನ್ನೇ ಕಚ್ಚಿಕೊಂಡು ಒದ್ದಾಡುತ್ತೇವೆ. ಆದರೆ ಅದು ನಮ್ಮಿಂದ ನುಣುಚಿಕೊಳ್ಳುತ್ತದೆ ಅಥವಾ ನಮಗಿಂತ ಮೇಲೆ ಕುಳಿತುಕೊಂಡು ನಮ್ಮ ಮೇಲೆ ಅಧಿಕಾರ ನಡೆಸುತ್ತದೆ. ಹೀಗಾಗಿ ತನು, ಮನ, ಧನಗಳನ್ನು ಗೆಲ್ಲುವ ಕಲೆಯಿಂದ ನಾವೆಲ್ಲರೂ ವಂಚಿತರಾಗಿದ್ದೇವೆ. ಇದನ್ನು ಕಂಡು ಅಲ್ಲಮರು “ಲೋಕವೆಲ್ಲ ಭ್ರಮೆಗೊಂಡಿದೆ ಎಂದು ಹೇಳುತ್ತಾರೆ”. ತನುವನ್ನು ದಾಸೋಹದಲ್ಲಿ ಸವೆಸುವುದು, ಮನವನ್ನು ಲಿಂಗದಲ್ಲಿ ನಿಲಿಸುವುದು ಮತ್ತು ಧನವನ್ನು ಜಂಗಮಕ್ಕಾಗಿ ಸವೆಸುವುದು ಬಸವಣ್ಣನವರಿಗೆ ಮಾತ್ರ ಸಾಧ್ಯವೆಂದು ಹೇಳುತ್ತಾರೆ.


ದಾಸೋಹವೆಂದರೆ ತನ್ನಲ್ಲಿದ್ದುದನ್ನು ಭಕ್ತರೊಂದಿಗೆ ಹಂಚಿಕೊಳ್ಳುವುದು. ತನಗೆ ಬೇಕು ಎಂತಲೋ ಅಥವಾ ನಾಳೆಗಿರಲಿ ಎಂದೋ ತನ್ನದನ್ನು ಬೇರೆ ಇಡುವುದಲ್ಲ. ತನ್ನಲ್ಲಿರುವುದನ್ನೆಲ್ಲ, ಅದು ತನ್ನದಲ್ಲ, ಅದು ಸಮಾಜದ್ದು, ಎಂದು ನಿರ್ವಂಚನೆಯಿಂದ ಇತರರೊಂದಿಗೆ ಹಂಚಿಕೊಳ್ಳುವುದು. ಅದಕ್ಕಾಗಿ ದೇಹವನ್ನು ಸವೆಸುವುದು, ದುಡಿಯುವುದು. ಮನಸ್ಸನ್ನು ಲಿಂಗದಲ್ಲಿ ನಿಲ್ಲಿಸುವುದು ಎಂದರೆ ಸದಾ ಆ ಪರಮ ತತ್ವವನ್ನು ನೆನೆಯುವುದು. ಸಂಸಾರದ ತಾಪತ್ರಯಗಳಿಂದ ದೂರವಿದ್ದು ಅದರ ಮಾಯಾ ಮೋಹಗಳಿಗೆ ಅಂಟಿಕೊಳ್ಳದೆ ಮನವನ್ನು ಲಿಂಗದ ಧ್ಯಾನದಲ್ಲಿ ತೊಡಗಿಸುವುದು. ಹೀಗೆ ಮಾಡಲು ಮೊದಲು ವ್ಯಕ್ತಿಗೆ ಈ ಸಂಸಾರವು ಹುರುಳಿಲ್ಲದ್ದು, ಅದರಿಂದ ಯಾವ ಪ್ರಯೋಜನವೂ ಇಲ್ಲ, ಅದಕ್ಕೆ ಅಂಟಿಕೊಳ್ಳುವುದರಿಂದ ದುಃಖಕ್ಕೆ ದಾರಿಯಾಗುತ್ತದೆ ಎಂಬುದು ಆಳವಾಗಿ ಮನವರಿಕೆಯಾಗಬೇಕಾಗುತ್ತದೆ. ಹಾಗಾದಾಗ ಮಾತ್ರ ಸಂಸಾರದಿಂದ ಮನಸ್ಸು ವಿಮುಖಗೊಂಡು ಆ ಪರಮತತ್ವದಲ್ಲಿ ನಿಲ್ಲುತ್ತದೆ. ಈ ರೀತಿ ಸಂಸಾರದಿಂದ ಮನಸ್ಸು ವಿಮುಖಗೊಳ್ಳಬೇಕಾದರೆ ಸಂಸಾರವನ್ನು ಬಹಳ ಆಳವಾಗಿ ಯಾವ ಪೂರ್ವಗ್ರಹವಿಲ್ಲದೆ ವೀಕ್ಷಿಸಬೇಕಾಗುತ್ತದೆ. ಈ ಕಲೆ ಅಳವಟ್ಟಮೇಲೆ ವ್ಯಕ್ತಿ ಸಹಜವಾಗಿಯೇ ಅದರಿಂದ ದೂರಸರಿಯುತ್ತಾನೆ ಮತ್ತು ಎಲ್ಲವನ್ನ್ನೂ ಮೀರಿರುವ ತತ್ವದಲ್ಲಿ ಮನಸ್ಸನ್ನು ನೆಲೆಗೊಳಿಸುತ್ತಾನೆ. ತನು ಮನವಾದ ಮೇಲೆ ಧನವನ್ನೂ ಸಹ ಆತನು ಸಾರ್ಥಕವಾಗಿ ವ್ಯಯಿಸುತ್ತಾನೆ. ಜಂಗಮಕ್ಕಾಗಿ ಅದನ್ನು ಮುಡುಪಿಡುತ್ತಾನೆ. ಜಂಗಮವೆಂದರೆ ಬಯಲು ತತ್ವ, ದೇಹ ಪ್ರಾಣ ಮತ್ತು ಮನಸ್ಸಿನ ತತ್ವಗಳನ್ನು ಮೀರಿದವನು. ಇಂತಹ ತತ್ವವನ್ನು ಹೊಂದಿದವನಿಗಾಗಿ, ತನ್ನ ಧನವನ್ನು ವ್ಯಯಿಸುವುದು.ಆ ತತ್ವಕ್ಕಾಗಿ ಧನವನ್ನು ಸವೆಸುವುದು. ಈ ತತ್ವಕ್ಕಾಗಿಯೇ ಅನುಭವ ಮಂಟಪವನ್ನು ಕಟ್ಟಿದರು. ಹೀಗೆ ಬಸವಣ್ಣನವರು ತಮ್ಮ ತನು ಮನ ಮತ್ತು ಧನವನ್ನು ಉದಾತ್ತ ವಿಚಾರಗಳಿಗೆ ಕೊಟ್ಟು ಶ್ರೇಷ್ಠಮಟ್ಟದ ವ್ಯಕ್ತಿಗಳಾಗಿ ಅಲ್ಲಮಪ್ರಭು ಗಳಿಂದಲೂ ಪೂಜಿತರಾದರು.


No comments:

Post a Comment