Friday, May 11, 2012

Vachana 89: Tanuva Tontavamaadi - Nurturing the Body-Mind Garden


ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ;
ಒಡೆದು ಸಂಸಾರದ ಹೆಂಟೆಯ, ಬಗೆದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ;
ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನ ನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು, ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಆವಾಗಲೂ ಈ ತೋಟದಲ್ಲಿ ಜಾಗರವಿದ್ದು, ಸಸಿಯ ಸಲಹಿದೆನುಕಾಣಾ ಗುಹೇಶ್ವರಾ


TRANSLITERATION

Tanuva tOMTava maaDi, manava guddaliya maaDi, Agedu kaLedenayyaa bhraaMtina bEra;
oDedu saMsaarada heMTeya, Bagedu bittidenayyaa brahma bIjava;
aKaMDa maMDalaveMba baavi, pavanavE raaTAALa, suShumna naaLadiMda udakava tiddi,
basavagaLaivaru hasageDisihaveMdu, samate sairaNe eMba bEliyanikki,
aavaagalU I tOTadalli jaagaraviddu, sasiya salahidenu kaaNaa guheshvaraa


CLICK HERE TO READ-ALONG:

http://youtu.be/nN8Qa91ISy4


TRANSLATION (WORDS)

Tanuva (the body) tOMTava (garden) maaDi, ( I made) manava ( the mind) guddaliya (pick axe) maaDi (I made), Agedu ( by digging)` kaLedenayyaa (I got rid of) bhraaMtina (illusion )bEra (the roots of); oDedu (breaking) saMsaarada (worldly) heMTeya ( chunks of mud), Bagedu(after digging,raking) bittidenayyaa ( sowed) brahma bIjava (the seed of Brahma);
aKaMDa (complete, non fragmented) maMDalavu(space, expanse ) eMba (called) baavi (well ), pavanavE (breath alone) raaTAALa ( is pulley), suShumna naaLadiMda ( with the energy channel called sushumna) udakava (water) tiddi ( I irrigated the garden)’
basavagaLaivaru (five bulls) hasageDisihavu (will destroy) eMdu (thinking that), samate (balance, equanimity)sairaNe(tolerance) eMba (called) bEliyanikki,(put the fence of)
aavaagalU (all the time) I (this) tOTadalli (in garden) jaagaraviddu (being awake),
sasiya (of plant) salahidenu (I took care) kaaNaa (you see) guheshvaraa (Guheshvaraa)


TRANSLATION

I made the body a garden and the mind a pick axe,
I dug and got rid of the roots of illusion; I broke the worldly mud chunks and sowed the seeds of Brahma;
From the well of non-fragmented expanse, with breath alone as the pump and from the deoths of sushumna, I irrigated the garden;
Concerned that the five bulls will destroy it, I installed the fence of balance and tolerance;
Being awake all the time, I took care of the sapling, you see Guhesvaraa!


COMMENTARY

In this beautiful Vachana, Allama Prabhu comments on the ingredients needed to implant and enhance the Godliness within us to make the body into a true temple, using the various gardening activities as simile. The body is made into a garden plat (Body is the temple). The mind is made into a pick axe, a tool that helps digging. The characteristic of the mind is to always ‘dig’, dig the past, dig the present and dig (worry about) the future. Allama Prabhu uses this mind pick axe to dig and get rid of the roots of illusion. For a garden to flourish, the soil has to be free of knots. Allama Prabhu compares the worldly activities to the knots (chunks) of mud that need to be broken. Indeed, our worldly activities tie our lives into knots that keep us bound. We need to untie those knots. Into this tended soil, the seed of Brahma (profound knowledge, awareness) is sown. The word ‘bagedu’ has two meanings: digging or raking, and learning. Allama Prabhu is emphasizing that he learnt all about the seed of Brahma (the divine) before planting it; he did not just dig the soil and plant the seed. We need learn to all about the seed and make sure it is the right kind, to get the right crop. Once the seeds are sown, it is time to irrigate them. The source for this irrigation is the well of the whole expanse (Universe). Allama Prabhu uses the channel of Sushumna to fetch the water from the deep well. Sushumna is the channel of energy flow in the (subtle) body that starts at the lowest and ends at the highest Chakra (nerve/ energy bundle) locations. Essentially, Allama Prabhu is invoking the deepest energy source in the body and carries this energy through the body to soak the seeds just sown. This is the concept of awakening the Kundalini Shakti (power/energy). Farmers use a mechanism called ‘Etha’ or ‘raataala’ (in Kannada) to fetch the water from wells. The farmer moves the Eetha down (collecting water from the well) and up (bringing up and releasing the water into the garden). Allama Prabhu uses ‘breath’ as Etha. The up/down motion of Etha is compared to inhale/exhale aspects of breath. As the seeds sprout, Allama Prabhu is concerned that the five bulls (referring to the five senses) might destroy the garden. As such, he builds a fence around the garden with balance (equality) and tolerance as the components. In addition, he is staying awake all the time to make sure that the garden flourishes, meaning that it is a must for us to be aware and awake for the divine knowledge in us to sprout and flourish – just planting it is not sufficient. The Vachana is thus a complete guide to self-realization!


Let us grow the garden of self-realization!

KANNADA COMMENTARY



ಈ ವಚನವನ್ನು ಅಲ್ಲಮರು,  ಬಾಹ್ಯ ತೋಟ ಮಾಡುವ ಕಲೆಯಲ್ಲಿ ನಿಷ್ಣಾತನಾದ ಹಾಗೂ ಅದನ್ನೇ ಸರ್ವ ಶ್ರೇಷ್ಠವೆಂದು ತಿಳಿದು ಅದರಲ್ಲಿಯೇ ಮುಳುಗಿ ಹೋದ ಗೊಗ್ಗಯ್ಯನಿಗೆ, ತಾವು ಮಾಡಿದ ತೋಟದ ಬಗೆಯನ್ನು ವರ್ಣಿಸುವ ಮೂಲಕ, ಅಂತರಂಗದ ಸೂಕ್ಷ್ಮವಾದ ಈ ತೋಟ ಎಲ್ಲದಕ್ಕಿಂತಲೂ ಮುಖ್ಯವಾದದ್ದು ಹಾಗೂ ಶ್ರೇಷ್ಠವಾದದ್ದು  ಎಂದು ಪರೋಕ್ಷವಾಗಿ ಹೇಳುವ ವಚನ.  .  ಅಂತರಂಗದ ತೋಟವನ್ನು ಅವರು ಮಾಡಿದ ರೀತಿ:  ದೇಹವೇ ಒಂದು ತೋಟ, ಆ ತೋಟದ ನೆಲವನ್ನು ಮನವೆಂಬ ಗುದ್ದಲಿಯಿಂದ ಅಗೆದಿದ್ದಾರೆ. ಗುದ್ದಲಿಯಿಲ್ಲದೆ ನೆಲ ಅಗೆಯುವುದು ಬಲು ಕಷ್ಟ. ನೆಲ ಅಗೆಯದೆ ಬಿತ್ತಣಿಗೆ ಮಾಡುವುದು ಸಾಧ್ಯವಿಲ್ಲ. ಅದೇ ರೀತಿ ಮನಸ್ಸೇ ಎಲ್ಲದಕ್ಕೂ ಮೂಲ. ಏನೇ ಮಾಡಿದರೂ ಮನಸ್ಸಿನಿಂದಲೇ ಮಾಡಬೇಕು.ಆದ್ದರಿಂದ ಮನವನ್ನೇ ಗುದ್ದಲಿಯಾಗಿ ಮಾರ್ಪಡಿಸಿದ್ದಾರೆ. ಆ ಮನಸ್ಸೆಂಬ ಗುದ್ದಲಿಯಿಂದ ಮಣ್ಣಿನಲ್ಲಿ ಮನೆಮಾಡಿದ್ದ  ಭ್ರಾಂತಿ ಎಂಬ ಬೇರುಗಳನ್ನು ತೆಗೆದಿದ್ದಾರೆ. ಬೇರೆ ಬೇರುಗಳು ಉಳಿದುಕೊಂಡಿರುವ ಸ್ಥಳದಲ್ಲಿ ಹೊಸ ಸಸಿಗಳು ಬೆಳೆಯುವ ಅವಕಾಶವಿರುವುದಿಲ್ಲ. ಹಾಗೆಯೇ  ನಮ್ಮಲ್ಲಿ ಮನೆಮಾಡಿರುವ ಭ್ರಾಂತಿಯ ಬೇರುಗಳನ್ನು ತೆಗೆಯಬೇಕು. ಭ್ರಾಂತಿಯು ತಪ್ಪು ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ.  ಆ ಪರಮ ಸತ್ಯದ ಸಾಕ್ಷಾತ್ಕಾರಕ್ಕೆ ಅಡ್ಡಿಮಾಡುತ್ತದೆ. ಭ್ರಾಂತಿ ಎಂಬ ಆ ಹಳೆ ಬೇರುಗಳನ್ನು ಕಿತ್ತೆಸೆಯಲೇ ಬೇಕು.  ಆದರೆ ಅಷ್ಟರಿಂದಲೇ ಕೆಲಸ ನಡೆಯುವುದಿಲ್ಲ. ಬೇರುಗಳನ್ನು ತೆಗೆದ ಮೇಲೆ ಅಲ್ಲಿಯ ಮಣ್ಣಿನ ಹೆಂಟೆಗಳನ್ನು ಒಡೆಯ ಬೇಕು. ಮಣ್ಣಿನ ಕಣಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡು  ಹೆಂಟೆಯಾಗಿ,  ಬೆಳೆಗೆ   ಗಾಳಿ ಬೆಳಕು ಸರಿಯಾಗಿ ಪ್ರವೇಶಿಸದಂತೆ ಮಾಡುತ್ತವೆ.  ಆದ್ದರಿಂದ ಅವುಗಳನ್ನು ಒಡೆಯಬೇಕು.  ತನುವೆಂಬ ತೋಟದ ಸಂದರ್ಭದಲ್ಲಿ  ಸಂಸಾರದ ಮೋಹವು ಹೆಂಟೆಯಂತೆ ಅಡ್ಡಿಮಾಡುತ್ತದೆ. ಅದರಿಂದ ಕಳಚಿಕೊಳ್ಳುವುದು ಬಹು ಮುಖ್ಯ.  ಹೀಗೆ ಮಾಡಿದ ಮೇಲೆ  ಮಣ್ಣು ಹದವಾಗುತ್ತದೆ, ಅಂತರಂಗ ಶುದ್ಧವಾಗುತ್ತದೆ, ಬೀಜ ಬಿತ್ತಲು ಯೋಗ್ಯವಾಗುತ್ತದೆ. ಅಲ್ಲಿ ಅಲ್ಲಮರು, ಬ್ರಹ್ಮ ಬೀಜವನ್ನು ಬಿತ್ತುತ್ತಾರೆ. ಇಷ್ಟೆಲ್ಲ ಶ್ರಮ ಪಟ್ಟು ಅಂತಿಂತಹ ಬೀಜ ಬಿತ್ತಿದರೇನು ಫಲ?  ಘನವಾದ ಬೀಜವನ್ನೇ ಬಿತ್ತುತ್ತಾರೆ. ಇನ್ನು ಅದಕ್ಕೆ ನೀರಿನ ಅವಶ್ಯಕತೆಯಿದೆ. ಅವರು ಅದಕ್ಕೆ ನೀರು ಹಾಯಿಸುವ ರೀತಿ ಯೋಗಕ್ಕೆ ಸಂಬಂಧಪಟ್ಟದ್ದು.  ಅಖಂಡ ಮಂಡಲವೆಂಬ ಬಾವಿ, ಎಂದರೆ  ಪರಿಪೂರ್ಣತೆ ಎಂದರ್ಥ. ಬ್ರಹ್ಮ ಬೀಜವು ಪರಿಪೂರ್ಣವಾದದ್ದು. ಅದಕ್ಕೆ ಬೇಕಾದ ಉದಕವು ಪರಿಪೂರ್ಣದಿಂದಲೇ ಬರಬೇಕು. ಆ ಪರಿಪೂರ್ಣದಿಂದಲೇ ಅದಕ್ಕೆ ಪೋಷಕ ತತ್ವ ಬೇಕು. ಪರಿಪೂರ್ಣತೆ ಎಂಬ ಬಾವಿಯಿಂದ ಅಲ್ಲಮರು ಪ್ರಾಣವಾಯುವೆಂಬ ರಾಟಾಳದ ಮೂಲಕ  ನೀರನ್ನು ಹರಿಸುತ್ತಾರೆ.  ಯೋಗ ಶಾಸ್ತ್ರದ ಪ್ರಕಾರ  ಇಡಾ, ಪಿಂಗಳ ಮತ್ತು  ಸುಷುಮ್ನ ಎಂಬ ಮೂರು ಮುಖ್ಯ ನಾಡಿಗಳಿವೆ. ಪ್ರತಿಯೊಬ್ಬ ವ್ಯಕ್ತಿಯು  ಇಡಾ ಮತ್ತು ಪಿಂಗಳ ನಾಡಿಗಳಿಂದ ಉಸಿರಾಡುತ್ತಾನೆ. ಕೆಲವರಲ್ಲಿ ಇಡಾ ನಾಡಿಯೂ , ಇನ್ನು ಕೆಲವರಲ್ಲಿ ಪಿಂಗಳ ನಾಡಿಯು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ.  ಇವೆರಡು ಸಮಾನವಾಗಿ ಕೆಲಸ ಮಾಡಿದಾಗ, ಈ ಎರಡರ ಸಂತುಲನೆಯನ್ನು ಸಾಧಿಸಿದಾಗ, ಈ ಎರಡು ನಾಡಿಗಳ  ಮಧ್ಯೆ ಇರುವ ಸುಷುಮ್ನ ನಾಡಿಯ ಮೂಲಕ ಪ್ರಾಣವಾಯು ಹರಿಯುತ್ತದೆ ಮತ್ತು ವ್ಯಕ್ತಿಯಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯು ಎಚ್ಚರಗೊಳ್ಳುತ್ತದೆ. ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಿದಾಗ ವ್ಯಕ್ತಿಯು ಅನಂದ ಸಾಗರದಲ್ಲಿ ಓಲಾಡುತ್ತಾನೆ.  ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಬೇಕು.  ತನುವೆಂಬ ತೋಟದಲ್ಲಿ ಬಿತ್ತಿದ್ದ  ಬ್ರಹ್ಮ ವೆಂಬ  ಬೀಜಕ್ಕೆ ಸಮತೆಯಿಂದ ಸಾಧಿಸಿದ ವಿಶೇಷ ವಾದ ಜಲದ ಅವಶ್ಯಕತೆಯಿದೆ. ಅದನ್ನು ಅಲ್ಲಮರು  ಪ್ರಾಣವಾಯುವಿನ ಸಾಧನೆಯ ಮೂಲಕ ಒದಗಿಸುತ್ತಾರೆ. ಅಲ್ಲಿಗೆ ಮುಗಿಯಿತು ಕೆಲಸವೆಂದು ಸುಮ್ಮನಿರುವ್ದುದು ಸಲ್ಲ. ಏಕೆಂದರೆ ಐದು ಬಸವಗಳು ತೋಟದಲ್ಲಿ ಬೆಳೆದ ಸಸಿಯನ್ನು ತಿನ್ನಲು ಕಾಯುತ್ತಿರುತ್ತವೆ.  ಎಂದರೆ ಐದು ಇಂದ್ರಿಯಗಳು  ಬ್ರಹ್ಮ ಬೀಜವನ್ನು ಬೆಳೆಯಲು ಅಡ್ಡಿಮಾಡುತ್ತವೆ ಎಂದು ಅರ್ಥ.  ಸಮತೆ ಮತ್ತು ಸೈರಣೆ ಎಂಬ ಬೇಲಿಯನ್ನು ಕಟ್ಟಿ, ಆ ಎತ್ತುಗಳು ತೋಟವನ್ನು ಹಾಳುಮಾಡದಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ಸಮತೆ ಮತ್ತು ಸೈರಣೆ  ಎಂಬ ಪದಗಳು, ಇಂದ್ರಿಯಗಳೊಂದಿಗೆ ಅವರು ನಡೆದುಕೊಳ್ಳುವ ಬಗೆಯನ್ನು ತಿಳಿಸುತ್ತವೆ. ಇಂದ್ರಿಯಗಳನ್ನು ಶಿಕ್ಷಿಸುವುದಾಗಲಿ ಅಥವಾ ತುಳಿದಿಡುವುದಾಗಲಿ ಅವರು ಒಪ್ಪುವುದಿಲ್ಲ. ಸಮತೆ ಮತ್ತು ಸೈರಣೆ, ಎಂದರೆ ಅವುಗಳೊಂದಿಗೆ ಯುಕ್ತವಾಗಿ, ಸಂಯಮದಿಂದ ನಡೆದುಕೊಳ್ಳುವುದು, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು  ವ್ಯವಹರಿಸುವುದು. ಹಾಗಾದಾಗ ಮಾತ್ರ ಅವುಗಳು ತಮ್ಮ ಸ್ಥಳದಲ್ಲಿ ತಾವಿರುತ್ತವೆ. ಅವುಗಳಿಂದ ತೊಂದರೆಯುಂಟಾಗುವುದಿಲ್ಲ.  ಬ್ರಹ್ಮ ಬೀಜವು ನಿರಾಳತೆಯಿಂದ ಬೆಳೆಯುತ್ತದೆ. ಈ ರೀತಿಯಾದ ಕಾಳಜಿ ವಹಿಸಿ ಅವರು ಸಸಿಯನ್ನು ಬೆಳೆಸಿ ತೋಟವನ್ನು ಮಾಡುತ್ತಾರೆ.

1 comment:

  1. ತನುವ ತೋಂಟವ ಮಾಡಿ.... The body is the land......., ಮನವ ಗುದ್ದಲಿಯ ಮಾಡಿ..... The sharpend mind is the instrument, ಅಗೆದು ಕಳೆದೆನಯ್ಯಾ.........using such an instrument......i dug into ಭ್ರಾಂತಿನ ಬೇರ; the very root of illusion
    ಒಡೆದು ಸಂಸಾರದ ಹೆಂಟೆಯ.......The material world was broken and seperated, ಬಗೆದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ; within the separated material world i sowed the seed....The Bhahman is the seed... For this I drew water....
    ಅಖಂಡ ಮಂಡಲವೆಂಬ ಬಾವಿ........The Cosmos was the well , ಪವನವೇ ರಾಟಾಳ.....And Breath- PRana was made to go up and down , ಸುಷುಮ್ನ ನಾಳದಿಂದ ಉದಕವ ತಿದ್ದಿ,.....This softened lust/desire / passion .yet .. the task was not over as i worried about the powerfull five
    ಬಸವಗಳೈವರು ಹಸಗೆಡಿಸಿಹವೆಂದು, ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ, so i covered it with Eqanimity, perseverance/tenacity /patience/tolerance
    ಆವಾಗಲೂ ಈ ತೋಟದಲ್ಲಿ ಜಾಗರವಿದ್ದು..........and i never slept as sleep has gone , ಸಸಿಯ ಸಲಹಿದೆನು......thus the sapling that emanated from the Brahma beeja , the seed called the Brahman has been nurtured ಕಾಣಾ.....please see this ಗುಹೇಶ್ವರಾ..o my beloved Ishwara .. the lord of the cave.

    ReplyDelete