Friday, May 4, 2012

Vachana 88: Eriya Kattabahudallade - Disciple’s Responsibility


ಏರಿಯ ಕಟ್ಟಬಹುದಲ್ಲದೆ, ನೀರ ತುಂಬಬಹುದೆ?
ಕೈದು ಕೊಡಬಹುಲ್ಲದೆ, ಕಲಿತನವ ಕೊಡಬಹುದೆ?
ವಿವಾಹ ಮಾಡಬಹುದಲ್ಲದೆ, ಪುರುಷತನವನರಸಬಹುದೆ?
ಘನವ ತೋರಬಹುದಲ್ಲದೆ, ನೆನೆಹ ನಿಲಿಸಬಹುದೆ?
’ಓದೊಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಲೋಕದ ಮಾತಿನಂತೆ
ಸದ್ಗುರು ಕಾರುಣ್ಯವಾದರೂ ಸಾಧಿಸಿದವನಿಲ್ಲ ಸಕಳೇಶ್ವರಾ

TRANSLITERATION

Eriya kaTTabahudallade nIra tuMbabahude?
Kaidu koDabahudallade kalitanava koDabahude?
Vivaaha maaDabahudallade, puruShatanavanarasabahude?
Ghanava tOrabahudallade, neneha nilisabahude?
‘Odokkaalu buddhi mukkaalu’ eMba lOkada maatinaMte
Sadguru kaaruNyavaadarU saadhisidavanilla sakalEshavaraa


CLICK HERE TO READ-ALONG:

http://youtu.be/QmFi7ltCpSk

TRANSLATION (WORDS)

Eriya ( the raised bank) kaTTabahudallade (can be built) nIra (water) tuMbabahude? ( but can one fill it with?)
Kaidu (weapon) koDabahudallade(can be given) kalitanava (bravery) koDabahude?(but can one give?)
Vivaaha (marriage) maaDabahudallade,(can be conducted) puruShatanavanarasabahude?( but can one seek virility)
Ghanava (the profound) tOrabahudallade,(can be shown) neneha (attention) nilisabahude? ( but can one set, resolute)
‘Odokkaalu (study, reading is one fourth) buddhi (intelligence) mukkaalu (is three fourth)’ eMba (as) lOkada (world’s) maatinaMte (the saying goes)
Sadguru (the teacher, the guru) kaaruNyavaadarU (even with the blessings of) saadhisidavanilla
(there is no one who has achieved) sakalEshavaraa (Sakaleshvara)


TRANSLATION

The tank bund can be built, but can it be filled with water?
The weapons can be provided, but can bravery be imparted?
The marriage can be conducted, but can one seek virility?
The profound can be shown, but can attention be set (can one be made resolute)?
As the saying goes, ‘Reading is one fourth, intelligence is three fourth,’
Even with the blessings of Guru, no one has achieved It, Oh Sakaleshvara!


COMMENTARY


In previous postings we have addressed the importance of Guru’s blessings and corresponding intense desire and awareness in the disciple for successful transmission of the knowledge. In this Vachana, Sharana Sakalesha Maadarasa says that Guru’s blessing is not the end of it all. It is just the first step and there is something more needed, and it depends on the disciple.
We can build the raised bank (bund) of a tank (lake), but filling it with water requires adequate rainfall. In addition to the rain, the water needs to be channeled to fill the tank. Thus, success in making the tank complete is a combined effort of the man and the divine. We can provide the most powerful weapons to a soldier, but he cannot use them efficiently without inherent bravery. The bravery is a result of his practice and training of the body, and the invisible force that bestows him with the mental strength. Similar combination is needed for the development of virility in married individuals. Along the same lines, the Guru can show the profound, but cannot make the disciple set on the profound. The combination of persistence practice by the disciple and his inherent nature to stabilize the mind on the profound is needed. It is said that ‘reading and studying is only one fourth of the effort, the intelligence is the rest of three-fourth. That means, in addition to the efforts by the individual, we need some abstract power that propels us to find the divine. That power could be our inherent nature. It should be recognized and kindled to achieve the ultimate knowledge. Maadarasa says that not many have achieved such capability.

In summary, Guru’s blessings and lessons give us the initial resource towards achieving the ultimate knowledge. We then try to supplement that initial resource with persistent practice and develop an intense desire to achieve it. In this process, we end up making mental images of what needs to be achieved. This image and the intense desire sway us away from achieving the ultimate. Since the ultimate is beyond the sphere of human mind, it cannot be visualized or desired. We should develop a clear understanding of how the mind works and enhance our inner strength to see the ultimate. This inner strength is the invisible divine power, the three-fourth component.


Let us expand our inner strength to invite the divine power into us!


KANNADA COMMENTARY

ಹಿಂದೆ ನಾವು ಗುರುಕಾರುಣ್ಯವೆಂದರೇನು? ಮತ್ತು ಅದು ಎಷ್ಟು ಮುಖ್ಯವೆಂಬುದನ್ನು ತಿಳಿದುಕೊಂಡೆವು. ಆದರೆ ಈ ವಚನದಲ್ಲಿ ಸಕಲೇಶ ಮಾದರಸರು ಕೇವಲ ಗುರು ಕಾರುಣ್ಯವಾದರೆ ಸಾಲದು, ಅದು ಮೊದಲ ಮೆಟ್ಟಿಲು, ಅದೇ ಕೊನೆಯಲ್ಲ, ಅದಕ್ಕಿಂತ ಹೆಚ್ಚಿನದೇನೋ ಇದೆ. ಅದು ಶಿಷ್ಯನನ್ನು ಅವಲಂಬಿಸಿದೆ ಎಂಬುದನ್ನು ದೃಷ್ಟಾಂತ ಸಹಿತ ಹೇಳುತ್ತಿದ್ದಾರೆ.
ಏರಿಯನ್ನು ಕಟ್ಟಬಹುದು, ಆದರೆ ಆ ಕೆರೆಯಲ್ಲಿ ನೀರನ್ನು ತುಂಬಬಹುದೆ? ಅಲ್ಲಿ ನೀರು ತುಂಬ ಬೇಕಾದರೆ ಮಳೆ ಬರಬೇಕು. ಅಂದರೆ ದೈವ ಅಥವಾ ಪ್ರಕೃತಿ ಒಲಿಯಬೇಕು. ಮತ್ತು ವ್ಯಕ್ತಿಯ ಪ್ರಯತ್ನವೂ ಸೇರಬೇಕು. ಬೇರೆ ಬೇರೆ ಕಡೆ ಹರಿದು ಹೋಗುವ ನೀರನ್ನು ಕೆರೆಗೆ ಹರಿದು ಬರುವಂತೆ ಮಾಡಬೇಕು. ಆಗ ಕೆರೆ ಪೂರ್ತಿಯಾಗಿ ತುಂಬಬಹುದು. ಶಸ್ತ್ರಾಸ್ತ್ರಗಳನ್ನು ಕೊಡಬಹುದು. ಆದರೆ ಕಲಿತನವ ಕೊಡಬಹುದೆ? ಎಂಬುದು ಎರಡನೆಯ ದೃಷ್ಟಾಂತ. ವ್ಯಕ್ತಿಯ ಕೈಯಲ್ಲಿ ಶಸ್ತ್ರಗಳನ್ನು ಕೊಟ್ಟರೂ ಆತನಲ್ಲಿ ಶೌರ್ಯವಿಲ್ಲದಿದ್ದರೆ ಏನು ಪ್ರಯೋಜನ? ಆ ಶೌರ್ಯವು ಅದೃಶ್ಯ ಶಕ್ತಿ ಮತ್ತು ಪುರುಷ ಸಾಧನೆ ಎರಡರ ಮೇಳದ ಪರಿಣಾಮ. ದೈಹಿಕ ವ್ಯಾಯಾಮ, ಒಳ್ಳೆಯ ಆಹಾರ, ನಿರಂತರ ಅಭ್ಯಾಸದಿಂದ ಶಾರೀರಿಕ ಬಲವನ್ನು ಪಡೆಯಬಹುದು ಆದರೆ ಮಾನಸಿಕ ಧೈರ್ಯ ಶೌರ್ಯಗಳು ಬೇರೆ ರೀತಿಯ ಸಾಧನೆಯಿಂದ ಒದಗುತ್ತವೆ. ಇದೇ ಮಾತು ಪುರುಷತನಕ್ಕೂ ಅನ್ವಯಿಸುತ್ತದೆ. ವಿವಾಹವನ್ನು ಮಾಡಿಸಬಹುದು ಆದರೆ ಪುರುಷತನವನ್ನು ಕೊಡಲಾಗುವುದಿಲ್ಲ. ಗುರುವಾದವನು ಘನವನ್ನು ತೋರಿಸಬಹುದು ಆದರೆ ಆ ಘನದಲ್ಲಿ ಮನವನ್ನು ನಿಲ್ಲಿಸುವುದು, ಆ ವ್ಯಕ್ತಿ ತನ್ನಲ್ಲಿ ಸುಪ್ತವಾಗಿರುವ ಶಕ್ತಿಯಿಂದ ಮಾಡಬೇಕು. ಇಲ್ಲಿ ಕೊಟ್ಟಿರುವ ಸಕಲ ದೃಷ್ಟಾಂತಗಳಲ್ಲಿಯೂ ಪುರುಷ ಪ್ರಯತ್ನದ ಜೊತೆಗೆ ಇನ್ನಾವುದೋ ಅದೃಶ್ಯ ಶಕ್ತಿಯೂ ಬೇಕಾಗುತ್ತದೆ ಎಂಬ ಸೂಚನೆ ಇದೆ. ಅದು ನಮ್ಮಲ್ಲಿಯೇ ಸುಪ್ತವಾಗಿರುವ ಶಕ್ತಿಯಾಗಿರಬಹುದು. ಅದನ್ನು ಗುರುತಿಸಿ ಜಾಗೃತಗೊಳಿಸ ಬೇಕು. ”ಓದು ಒಕ್ಕಾಲು ಬುದ್ಧಿ ಮುಕ್ಕಾಲು” ಎಂದು ಕೂಡ ಹೇಳುತ್ತಾರೆ. ಎಷ್ಟೇ ಅದ್ಯಯನ ಮಾಡಿದರೂ ಅದು ನಾಲ್ಕನೇ ಒಂದಂಶ ಮಾತ್ರವಾಗಿರುತ್ತದೆ. ಅದರಲ್ಲಿ ಮುಕ್ಕಾಲು ಬುದ್ಧಿ ಸೇರಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಇದು ಲೋಕೋಕ್ತಿ. ಗುರು ಕಾರುಣ್ಯವು ನಾಲ್ಕನೆ ಒಂದಂಶ. ಅದರಲ್ಲಿ ಶಿಷ್ಯನ ಪ್ರಯತ್ನ, ಅಂದರೆ ಪೂರ್ಣ ಜ್ಞಾನವನ್ನು ಪಡೆಯಲು ಬೇಕಾಗುವ, ತನ್ನಲ್ಲಿ ಇರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದು ಆತನ ಸಾಧನೆ. ಅದೇ ಹೆಚ್ಚಿನ ಮಹತ್ವದ್ದು. ಅದನ್ನು ಸಾಧಿಸಿದವರು ಯಾರೂ ಇಲ್ಲ ಎನ್ನುತ್ತಾರೆ ಸಕಲೇಶ ಮಾದರಸರು. ಎಂದರೆ ಅದು ಅತ್ಯಂತ ವಿರಳ. ಎಲ್ಲರೂ ಗುರು ಕಾರುಣ್ಯವಾಯಿತೆಂದು ತೃಪ್ತಿಪಟ್ಟು ಕೊಂಡು ಅಷ್ಟಕ್ಕೇ ಸುಮ್ಮನಿದ್ದು ಬಿಡುತ್ತಾರೆ, ಅಥವಾ ಅಹಂಕಾರದಿಂದ ಮೆರೆಯುತ್ತಾರೆ. ಅಂತಹವರಿಗೆ ಅಲ್ಲಿಗೇ ಎಲ್ಲವೂ ಮುಗಿಯಲಿಲ್ಲ. ಇನ್ನೂ ಸಾಧಿಸಬೇಕಾದುದು ಮುಕ್ಕಾಲು ಪಾಲು ಇದೆ ಎಂಬುದನ್ನು ಈ ವಚನದ ಮೂಲಕ ತಿಳಿಸುತ್ತಿದ್ದಾರೆ.

ಈ ಮುಕ್ಕಾಲು ಪಾಲು ಇರುವುದನ್ನು ಹೇಗೆ ಸಾಧಿಸಬಹುದು? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಅದನ್ನು ಪಡೆಯುವುದು ಮನುಷ್ಯ ಪ್ರಯತ್ನದಿಂದ ಸಾಧ್ಯವಿಲ್ಲ ಎಂದು ವಚನಕಾರರು ಹಿಂದಯೇ ಹೇಳಿರುವರು . ಅಂದರೆ ಪೂಜೆ ಮಾಡುವುದರಿಂದ, ಶಾಸ್ತ್ರಗಳನ್ನು ಓದುವುದರಿಂದ ಅಥವಾ ಯೋಗಾಸನಗಳನ್ನು ಮಾಡುವುದರಿಂದ ಅದು ಲಭ್ಯವಾಗುವುದಿಲ್ಲ. ಹಾಗಾದರೆ ಏನು ಮಾಡುವುದು? ಏನಾದರೂ ಮಾಡಿ ಅದನ್ನು ಪಡೆಯಬೇಕೆನ್ನುವ ಆತುರತೆಯನ್ನು ಮೊದಲು ಕಳೆದುಕೊಳ್ಳಬೇಕು. ಏಕೆಂದರೆ ಹಾಗೆ ಮಾಡಿದಾಗ ಅದರಬಗ್ಗೆ ನಮ್ಮ ಮನಸ್ಸಿನಲ್ಲಿ ನಮಗೆ ತಿಳಿಯದೆಯೆ ಅದರ ಬಗ್ಗೆ ಒಂದು ಚಿತ್ರ ಮೂಡಿರುತ್ತದೆ. ಮತ್ತು ನಾವು ಅದನ್ನು ಅರಸುತ್ತೇವೆ. ಆದರೆ ಆ ಪರತತ್ವ ಮನೋ ವಲಯದಿಂದಾಚೆಗೆ ಇರುವಂತಹುದು ಎಂದು ಹೇಳುತ್ತಾರೆ. ಅದರ ಬಗ್ಗೆ ಯಾವ ನಿರೀಕ್ಷೆಯೂ ಇರದಂತೆ ನೋಡಿಕೊಳ್ಳುವುದೇ ಬಹು ಮುಖ್ಯ. ಅಥವಾ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ. ಅದು ಸಾಮಾನ್ಯವಾದ ಕೆಲಸವಲ್ಲ. ಅದಕ್ಕೆ ಅಪಾರವಾದ ಆತ್ಮ ಬಲ ಬೇಕು. ಇದನ್ನೇ ಇಲ್ಲಿ ಆ ಮತ್ತೊಂದರ ಕೃಪೆ ಎಂದು ಹೇಳುತ್ತಿರುವುದು.


No comments:

Post a Comment