ಬಂದ ಬಟ್ಟೆಯ ನಿಂದು ನೋಡದೆ, ಬಂದ ಬಟ್ಟೆಯ ನೋಡಿ ಸುಖಿಯಾದೆ
ನಿಂದ ನಿಲವ ಮುಂದುಗೆಡಿಸಿ ನಿಂದ ನಿಲವ ಮುಂದುಗೊಂಡಿತ್ತು
ತಂದೆ ಮಕ್ಕಳ ಗುಣ ಒಂದೇ ಭಾವದಲಡಗಿ, ಸಂದಿಲ್ಲದ ಕಾಲೊಳಗೆ ಕೈಮೂಡಿತ್ತು
ಒಂದನೆ ಹಿಡಿದು ಒಂದನೆ ಬಿಟ್ಟಡೆ ಇಂದು ನಮ್ಮ ಗುಹೇಶ್ವರನ ಸದ್ಭಕ್ತಿಯಾಯಿತ್ತೈ ಸಂಗನ ಬಸವಣ್ಣಾ!
TRANSLITERATION
baMda baTTeya niMdu nODade, baMda baTTeya nODi sukhiyaade,
niMda nilava muMdugeDIsi niMda nilava muMdugoMDittu
taMde makkaLa guNa oMdE bhaavadalaDagi, saMdillada kaaloLage kai mUDittu.
oMdane hiDidu oMdane biTTaDE iMdu namma guhEshvarana sadbhaktiyaayittai saMgana basavaNNaa!
CLICK HERE TO READ-ALONG
http://youtu.be/freT_cE1FGE
TRANSLATION (WORDS)
baMda (journey that has been taken, that I have travelled) baTTeya( the path,way) niMdu(being at) nODade,(not seeing, not accepting) baMda(that which has come) baTTeya (my way) nODi (accepting) sukhiyaade,(have become happy)
niMda nilava(my attitude, stand) muMdugeDIsi (destroyed, erased) niMda nilava( a new attitude, stand) muMdugoMDittu (started flowering)
taMde(father) makkaLa(issue’s, son’s) guNa (nature) oMdE(one) bhaavadalaDagi(hidden in one expression,view) saMdillada(without any gap) kaaloLage (in the leg) kai (hand) mUDittu(appeared),
oMdane (the one) hiDidu (holding) oMdane(the one) biTTaDE(if renounced) iMdu (today)namma(our) guhEshvarana(of Guheshvara) sadbhaktiyaayittai(it will be true bhakti you see) saMgana basavaNNaa(Sangana Basavanna)!
TRANSLATION
Not accepting the path I have travelled, I have become happy by accepting that which came my way!
My inbuilt attitude (stand) got erased and the new attitude started flowering
The natures of the father and the son merged into one, and a hand sprouted amidst the gapless legs
Holding on to one and renouncing the one (other), is the true devotion to Guhesvara today, you see, Sangana Basavanna!
COMMENTARY
This is one of Allama Prabhu’s ‘complex’ Vachanas. I am using the word complex as a rough translation for the Kannada word ‘bedagina’. The root of ‘bedagina’ is ‘bedagu’ meaning beautiful, breathtaking. A word close to bedagu is ‘beragu’ meaning surprising, shocking. Thus these complex vachanas are not only beautiful and breathtaking, but also meant to shock the reader into wondering what they mean. The realized souls like Allama Prabhu have used this medium to portray their experiences and realization in most exciting ways, almost as riddles. They have tried to express what cannot be expressed in words. The purpose seems to be to motivate the reader to think and interpret these words on his/her own.
The following depicts the ‘bhava’ (meaning and context) of this Vachana. I would like to suggest reflecting on the lines in the Vachana after carefully reading the following.
For ages unknown everyone has walked through the path of mundane life. This path is full of sorrow, dependency, ignorance, and death and such. This path takes one through innumerable difficulties and experiences. An awakened individual will never look back at this path. His journey is now completely in the new path shown to him by the conceptual Guru. The new path is the path of realizing Shiva, the Self. This new path is full of brightness, wisdom, independence, pure love and presence of the divine. As such, the individual forgets the old path, sheds all the old attitudes and attainments and embraces the new path. The Guru guides him. The Guru/disciple relation of the two manifests into a single nature of father and son. Their mutual respect and love results in internal and external purity of both and the emphasis changes to pure, impassionate merger with divine. Their actions are so alike that there is no gap between them and their common hand sprouts into performing the best for the fellow beings leading them towards godliness. Both the Guru and the disciple have discarded the mundane and have embraced the divine. This is the true devotion. In guru, this devotion is his merger with the divine; in disciple this devotion is his intense following of the divine path.
Let us Shed the Old and Embrace the New Path!
KANNADA COMMENTARY
ಇದು ಅಲ್ಲಮಪ್ರಭುಗಳ ಬೆಡಗಿನ ವಚನ. ಅನುಭಾವವನ್ನು ಸಾಂಕೇತಿಕವಾದ ಭಾಷೆಯಲ್ಲಿ ಮತ್ತು ವಿರೋಧೋಕ್ತಿಗಳಲ್ಲಿ ಹೇಳುವುದು ಬೆಡಗಿನ ವಚನವಗಳೆನ್ನಿಸಿಕೊಳ್ಳುತ್ತವೆ. ಇವು ಓದಿದಾಗ ಅರ್ಥವಾಗುವುದು ಕಷ್ಟ. ಅನುಭಾವದಿಂದುಂಟಾದ ಆನಂದವನ್ನು ವ್ಯಕ್ತಪಡಿಸಲು ಶರಣರು ಈ ಕೌತುಕಮಯ ಮಾಧ್ಯಮವನ್ನು ಬಳಸಿದ್ದಾರೆ. ಅನುಭಾವವನ್ನು ವಿವರಿಸುವುದು ಅಸಾಧ್ಯ. ಅದು ಇಂದ್ರಿಯಾತೀತವಾದದ್ದು. ಮಾತಿಗೆ ಮೀರಿದ ಅದರ ಬಗ್ಗೆ ಜಿಜ್ಞಾಸೆ ಮೂಡಲಿ ಎಂಬ ಉದ್ದೇಶದಿಂದ ಚಾಮತ್ಕಾರಿಕವಾದ ರೀತಿಯಲ್ಲಿ ಕೌತುಕ ಹುಟ್ಟುವಂತೆ ಹೇಳಿದ್ದಾರೆ. ಇದು ಭಾರತಿಯ ಪ್ರಾಚೀನ ಪರಂಪರೆಯಾಗಿದೆ. ವೇದಗಳಲ್ಲಿ ಅಲ್ಲಲ್ಲಿ ಇದು ಕಂಡು ಬರುತ್ತದೆ. ಉತ್ತರ ಭಾರತದ ಕಬೀರದಾಸರ ಬಹಳಷ್ಟು ಪದಗಳು ಬೆಡಗಿನ ಪದಗಳಾಗಿವೆ. ಅನೇಕ ಶರಣರ ಮತ್ತು ಇತ್ತೀಚಿಗಿನ ಸಂತ ಶಿಶುನಾಳರ ರಚನೆಗಳಲ್ಲಿಯೂ ಈ ಲಕ್ಷಣಗಳನ್ನು ಕಾಣಬಹುದು. ಆದರೆ ಅಲ್ಲಮ ಪ್ರಭುಗಳ ಬೆಡಗಿನ ವಚನಗಳು ಸಂಖ್ಯೆಯಲ್ಲಿ ಅಧಿಕವಾಗಿದ್ದು ಓದುಗರ ಜಿಜ್ಞಾಸೆಯನ್ನು ಹೆಚ್ಚಿಸುತ್ತವೆ. ಇವು ಕಲಾತ್ಮಕವಾದ ಕಾವ್ಯಮಯ ಸೃಷ್ಟಿಯಾಗಿವೆ.
“ಬಂದ ಬಟ್ಟೆಯ ನಿಂದು ನೋಡದೆ” ಎಂದರೆ, ಜೀವಾತ್ಮನು ಇಲ್ಲಿಯವರೆಗೆ ನಡೆದು ಬಂದ ಸಂಸಾರದ ಅಥವಾ ಭವದ ಹಾದಿಯಲ್ಲಿ ನಿಲ್ಲದೆ, ಎಂದರೆ ಸಂಸಾರದಲ್ಲಿ ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳಲ್ಲಿಯೇ ಇದ್ದು ಬಿಡದೆ ಅವುಗಳನ್ನು ತ್ಯಜಿಸಿ, “ನೋಡದೆ” ಎಂದರೆ ಅವುಗಳನ್ನು ಕಡೆಗಣಿಸಿ, ಈಗ ಜ್ಞಾನದಿಂದುಂಟಾದ ಆನಂದದಿಂದ ಸುಖಿಯಾಗುತ್ತಾನೆ. ಸಂಸಾರದ ದುಃಖ, ಕಷ್ಟ ಕೋಟಲೆಗಳಲ್ಲಿಯೇ ಮುಳುಗದೆ, ಗುರುವಿನ ಕರುಣೆಯಿಂದ (ಗುರು ಎಂದರೆ ತತ್ವವೆಂಬುದನ್ನು ನೆನಪಿಡಬೇಕಾದ ಅಂಶ) ಇಲ್ಲಿಯವರೆಗೆ ನಡೆದು ಬಂದ ದಾರಿಯ ನಿರರ್ಥಕತೆ ತಿಳಿದು ಬಂದಿದೆ. ಆದ್ದರಿಂದ ಬಂದ ಬಟ್ಟೆ (ದಾರಿ) ಯನ್ನು ಬಿಟ್ಟು ಇಂದು ಗುರುವಿನ ಕರುಣೆಯಿಂದುಂಟಾದ ಜ್ಞಾನದಿಂದ ಸುಖಿಯಾಗಿದ್ದೇನೆ, ಎನ್ನುತ್ತಾರೆ. ಆ ಜ್ಞಾನವು ಇಲ್ಲಿಯವರೆಗೆ ಬಂದ ದಾರಿಯನ್ನು ಬಿಟ್ಟುಬಿಡುವಂತೆ ಮಾಡಿದೆ. ಹೀಗಾಗಿ ಹಳೆಯ ನಿಲವು, ಎಂದರೆ ಹಿಂದಿನ ಬದುಕಿನ ರೀತಿ, ನಾಶಗೊಂಡು ಈಗ ಇರುವ ನಿಲವು ಇಷ್ಟವಾಗಿದೆ. ಅಂದರೆ ಗುರವು ತೋರಿದ ಶಿವಪಥವು ಮಾತ್ರ ಮುಂದಿದೆ.
“ತಂದೆ ಮತ್ತು ಮಕ್ಕಳ ಗುಣ” ಎಂದರೆ ಗುರು ಮತ್ತು ಶಿಷ್ಯರ ಶುಚಿತ್ವ. ಎಂದರೆ ಅವರಿಬ್ಬರ ಪರಿಶುದ್ಧತೆಯಲ್ಲಿ ಲಿಂಗಭಾವ ಇದೆ. ಅವರಿಬ್ಬರ ಲಿಂಗಭಾವದಲ್ಲಿ ಎಲ್ಲಿಯೂ ಸಂದಿಲ್ಲ, ಅದು ಒಂದೇ ಆಗಿದೆ, ಅಲ್ಲಿ ನಿರಂತರತೆ ಇದೆ. ಅವರಿಬ್ಬರ ಗುಣ ಭಾವಗಳು ಒಂದೇ ಆಗಿವೆ. ಆದ್ದರಿಂದ ಅವರ (ಕಾಲೊಳಗೆ) ಆಚರಣೆಗಳಲ್ಲಿ ಎಲ್ಲಿಯೂ ಸಂದು ಇಲ್ಲ. ಆ ಆಚರಣೆಗಳಿಗೆ ತಕ್ಕವಾದ ಕ್ರಿಯೆಗಳು ಕಂಡು ಬರುತ್ತವೆ. ಅವರು ಮಾಡುವ ಪ್ರತಿಯೊಂದು ಕೆಲಸವೂ ಸದಾಚಾರದಿಂದ ಕೂಡಿರುತ್ತದೆ. “ಒಂದನ್ನು ಹಿಡಿದು ಒಂದನ್ನು ಬಿಟ್ಟಡೆ” ಎಂದರೆ ಗುರುವು ತೋರಿದ ಶಿವಪಥವನ್ನು ಹಿಡಿದು, ತನ್ನದಾಗಿಸಿಕೊಂಡು, ಸಂಸಾರದ ಜಂಜಾಟವನ್ನು ತ್ಯಜಿಸಿದರೆ, ಅದು ಗುಹೇಶ್ವರನ ನಿಜವಾದ ಭಕ್ತಿಯಾಗುತ್ತದೆ ಎನ್ನುತ್ತಾರೆ.
ಒಟ್ಟಿನಲ್ಲಿ, ಗುರುವಿನ ಕರುಣೆಯಾಗುವ ಮೊದಲು ಸಂಸಾರದ ಕೋಟಲೆಗಳಲ್ಲಿ ಬೇಯುತ್ತಿದ್ದೆ. ಗುರುವಿನ ಕರುಣೆಯಿಂದ ಜ್ಞಾನ ಉಂಟಾಯಿತು. ಆದ್ದರಿಂದ ಮತ್ತೆ ಹಿಂದಿನ ಬದುಕಿನೆಡೆಗೆ ತಿರುಗಿಯೂ ನೋಡಲಿಲ್ಲ. ಆ ಬದುಕು ಅಳಿಸಿಹೋಯಿತು. ಈಗ ಶಿವಪಥದಲ್ಲಿ ಮನಸ್ಸು ನಿಂತಿದೆ. ಗುರು ಮತ್ತು ಶಿಷ್ಯರ ಗುಣಗಳು ಒಂದೇ ಆಗಿವೆ. ಅವರಿಬ್ಬರ ಆಚರಣೆಯಲ್ಲಿ ಯಾವ ಸಂದೂ ಇಲ್ಲ. ಅವರು ಭವವನ್ನು ಬಿಟ್ಟು ಶಿವಪಥವನ್ನು ಹಿಡಿದಿದ್ದಾರೆ. ಅವರಿಬ್ಬರೂ ಯಾವಾಗಲೂ ಸದಾಚಾರದಿಂದ ಸತ್ಕ್ರಿಯೆಗಳಲ್ಲಿ ತೊಡಗಿದ್ದಾರೆ. ಇಂತಹವರ ಭಕ್ತಿಗೆ ಗುಹೇಶ್ವರನು ಒಲಿಯುತ್ತಾನೆ.
ತನುವ ಗೆಲಲರಿಯದೆ, ಮನವ ಗೆಲಲರಿಯದೆ
ಧನವ ಗೆಲಲರಿಯದೆ, ಭ್ರಮೆಗೊಂಡಿತ್ತು ಲೋಕವೆಲ್ಲವು,
ತನುವ ದಾಸೋಹಕೆ ಸವೆಸಿ, ಮನವ ಲಿಂಗ ಧ್ಯಾನದಲ್ಲಿ ಸವೆಸಿ,
ಧನವ ಜಂಗಮದಲ್ಲಿ ಸವೆಸಿ ಗೆಲ್ಲಬಲ್ಲಡೆ
ಸಂಗನ ಬಸವಣ್ಣನಲ್ಲದೆ ಮತ್ತಾರನೂ ಕಾಣೆ ಗುಹೇಶ್ವರಾ-
ನಿಮ್ಮ ಶರನಣ ಸಂಗನ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು
TRANSLITERATION
Tanuva gelalariyade, manava gelalariyade
Dhanava gelalariyade, bhramegoMDittu lOkavellavu,
Tanuva daasOhake savesi, manava liMga dhyaanadalli savesi,
Dhanava jaMgamadalli savesi gellaballaDe
saMgana basavaNNanallade mattaaranU kaaNe guhEshvaraa-
nimma sharanaNa saMgana basavaNNaMge namO namO enutirdenu
CLICK HERE TO READ-ALONG:
http://youtu.be/txpl8yP31sY
TRANSLATION (WORDS)
Tanuva (the body) gelalariyade,(not knowing to conquer) manava (the mind) gelalariyade (not knowing to conquer)
Dhanava (the wealth) gelalariyade,( not knowing to conquer) bhramegoMDittu (is illusioned) lOkavellavu,(the whole world)
Tanuva (the body) daasOhake(for daasoha) savesi,(used, engaging in service) manava (mind) liMga (the god) dhyaanadalli (in meditation) savesi, (engaging in)
Dhanava (wealth) jaMgamadalli ( towards jangama) savesi (engaging in service) gellaballaDe (to know to conquer)
saMgana basavaNNanallade (other than sangana Basavanna) mattaaranU(no one else) kaaNe (I don’t see)
guhEshvaraa-(Guheshvara) nimma (your)sharanaNa saMgana basavaNNaMge (to devotee basavanna)
namO namO enutirdenu (I bow to him)
TRANSLATION
Not knowing how to conquer the body, not knowing how to conquer the mind, and not knowing how to conquer the wealth, the whole world is under illusion!
Conquering the body by engaging it in service (Daasoha), Conquering the mind by engaging it in meditation upon the God (Linga), and Conquering the wealth by dedicating it to wandering ascetics (Jangamas), is only accomplished by Basavanna of Sangama – I don’t know anyone else, Oh Guhesvara!
I bow to your devotee Basavanna of Sangama!
COMMENTARY
In this Vachana, Allama Prabhu provides a guide to how best we should utilize the three prime resources we are all endowed with: Body, Mind and Wealth. He says that the world is under illusion by not knowing how to conquer these entities. The body should be engaged in service of the fellow beings around us (Daasoha). The mind must be immersed in meditation to merge with the divine and the wealth should be utilized in supporting the activities of realized souls (Jangamas) dedicated to bringing awareness to the community. Allama prabhu says that Basavanna is the only individual he has come across who has conquered all the three resources. He shows his utmost respect and admiration of Basavanna by saying ‘I bow to your devotee Basavanna, Oh Guhesvara’.
We have said that the body is the temple and it should be kept fit for God to reside in it. We exercise and eat right to keep the body fit and healthy. Indeed, we spend so much time and resources to take care of the body that we become servants of the body rather than the body being at our service. It is not sufficient that the body serves our needs, but it should be dedicated to the service of the community around us.
We have said that the mind is a monkey and its natural state is that of wandering around. We have to control our minds. We have to evaluate our wants and needs and minimize our desires. Meditating upon the divine and constant awareness of the divine within and around us is a must. We should be the masters of our mind and not vice versa.
Honest, unselfish work and devotion to profession is a must to earn an honest living. Indeed, it is a must to take care of the needs of the family. Beyond that, the wealth should be dedicated to support the activities that make the society better.
In summary, Allama Prabhu is advocating us to become masters of our body, mind and wealth and use them appropriately, rather than being their servants.
Let us conquer body, mind and wealth!
KANNADA COMMENTARY
ತನು, ಮನ, ಧನಗಳನ್ನು ಹೇಗೆ ಸವೆಸಬೇಕು ಎನ್ನುವುದಕ್ಕೆ ಈ ವಚನವು ಕೈಪಿಡಿಯಂತಿದೆ. ತನು ಮನವನ್ನು ಗೆಲ್ಲಲ್ಲು ಬರದೆ ಅವುಗಳಿಗೆ ದಾಸರಾಗಿ ಈ ಲೋಕದ ಜನರೆಲ್ಲ ಭ್ರಮೆಗೊಳ್ಳುತ್ತಾರೆ. ದೇಹದ ಬೇಕು ಬೇಡಗಳನ್ನು ಅರಿತುಕೊಂಡು ನಡೆದುಕೊಳ್ಳುವವರು ಅತಿ ವಿರಳ. ತನುವಿನ ಬೇಕು ಬೇಡಗಳನ್ನು ಅರಿತುಕೊಂಡು ನಡೆದರೆ ಅದನ್ನು ಗೆಲ್ಲಬಹುದು. ಎಂದರೆ ಅದು ನಾವು ಹೇಳಿದಂತೆ ಕೇಳುವಂತೆ ಮಾಡಬಹುದು. ಆದರೆ ನಾವೇ ಅದರ ದಾಸರಾಗಿ ಬಿಡುತ್ತೇವೆ. ಅದನ್ನು ಅತಿಯಾದ ಮಮತೆಯಿಂದ ಬೆಳೆಸುತ್ತೇವೆ. ಆಗ ಅದು ನಮ್ಮ ಮಾತು ಕೇಳುವುದಿಲ್ಲ. ಮನಸ್ಸಿನ ಸ್ಥಿತಿಯೂ ಇದೇ ಆಗಿದೆ.
ಮನಸ್ಸನ್ನು ಅದು ಇಷ್ಟ ಪಟ್ಟ ಕಡೆಗೆ ಹೋಗಲು ಬಿಡುತ್ತೇವೆ. ಅದರ ಅವಶ್ಯಕತೆಗಳನ್ನು ಗುರುತಿಸಿ ಅವನ್ನು ಮಾತ್ರ ಪೂರ್ತಿಗೊಳಿಸದೆ, ಅದರ ಆಸೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಮರ್ಶಿಸದೆ ಅದು ಬಯಸಿದುದನೆಲ್ಲ ಒದಗಿಸಿಕೊಟ್ಟು, ಅದನ್ನು ಕೆಡಿಸಿಬಿಡುತ್ತೇವೆ. ಕೊನೆಯಲ್ಲಿ ಅದರ ದಾಸರಾಗುತ್ತೇವೆ. ಧನವು ಕೂಡ ನಮ್ಮನ್ನು ತನ್ನ ದಾಸನಾಗಿ ಮಾಡಿಕೊಂಡಿದೆ. ಏಕೆಂದರೆ ಅದರ ಬಗ್ಗೆ ಅತಿಯಾದ ಮೋಹದಿಂದ ನಾವು ಅದಕ್ಕೆ ಸಲ್ಲಬೇಕಾದ ಸ್ಥಾನವನ್ನು ಕೊಡದೆ ಪರಮೋಚ್ಚ ಸ್ಥಾನವನ್ನು ಕೊಡುತ್ತೇವೆ. ಅದನ್ನು ನೆಚ್ಚಿಕೊಂಡು, ಮೆಚ್ಚಿಕೊಂಡು, ಅದನ್ನೇ ಕಚ್ಚಿಕೊಂಡು ಒದ್ದಾಡುತ್ತೇವೆ. ಆದರೆ ಅದು ನಮ್ಮಿಂದ ನುಣುಚಿಕೊಳ್ಳುತ್ತದೆ ಅಥವಾ ನಮಗಿಂತ ಮೇಲೆ ಕುಳಿತುಕೊಂಡು ನಮ್ಮ ಮೇಲೆ ಅಧಿಕಾರ ನಡೆಸುತ್ತದೆ. ಹೀಗಾಗಿ ತನು, ಮನ, ಧನಗಳನ್ನು ಗೆಲ್ಲುವ ಕಲೆಯಿಂದ ನಾವೆಲ್ಲರೂ ವಂಚಿತರಾಗಿದ್ದೇವೆ. ಇದನ್ನು ಕಂಡು ಅಲ್ಲಮರು “ಲೋಕವೆಲ್ಲ ಭ್ರಮೆಗೊಂಡಿದೆ ಎಂದು ಹೇಳುತ್ತಾರೆ”. ತನುವನ್ನು ದಾಸೋಹದಲ್ಲಿ ಸವೆಸುವುದು, ಮನವನ್ನು ಲಿಂಗದಲ್ಲಿ ನಿಲಿಸುವುದು ಮತ್ತು ಧನವನ್ನು ಜಂಗಮಕ್ಕಾಗಿ ಸವೆಸುವುದು ಬಸವಣ್ಣನವರಿಗೆ ಮಾತ್ರ ಸಾಧ್ಯವೆಂದು ಹೇಳುತ್ತಾರೆ.
ದಾಸೋಹವೆಂದರೆ ತನ್ನಲ್ಲಿದ್ದುದನ್ನು ಭಕ್ತರೊಂದಿಗೆ ಹಂಚಿಕೊಳ್ಳುವುದು. ತನಗೆ ಬೇಕು ಎಂತಲೋ ಅಥವಾ ನಾಳೆಗಿರಲಿ ಎಂದೋ ತನ್ನದನ್ನು ಬೇರೆ ಇಡುವುದಲ್ಲ. ತನ್ನಲ್ಲಿರುವುದನ್ನೆಲ್ಲ, ಅದು ತನ್ನದಲ್ಲ, ಅದು ಸಮಾಜದ್ದು, ಎಂದು ನಿರ್ವಂಚನೆಯಿಂದ ಇತರರೊಂದಿಗೆ ಹಂಚಿಕೊಳ್ಳುವುದು. ಅದಕ್ಕಾಗಿ ದೇಹವನ್ನು ಸವೆಸುವುದು, ದುಡಿಯುವುದು. ಮನಸ್ಸನ್ನು ಲಿಂಗದಲ್ಲಿ ನಿಲ್ಲಿಸುವುದು ಎಂದರೆ ಸದಾ ಆ ಪರಮ ತತ್ವವನ್ನು ನೆನೆಯುವುದು. ಸಂಸಾರದ ತಾಪತ್ರಯಗಳಿಂದ ದೂರವಿದ್ದು ಅದರ ಮಾಯಾ ಮೋಹಗಳಿಗೆ ಅಂಟಿಕೊಳ್ಳದೆ ಮನವನ್ನು ಲಿಂಗದ ಧ್ಯಾನದಲ್ಲಿ ತೊಡಗಿಸುವುದು. ಹೀಗೆ ಮಾಡಲು ಮೊದಲು ವ್ಯಕ್ತಿಗೆ ಈ ಸಂಸಾರವು ಹುರುಳಿಲ್ಲದ್ದು, ಅದರಿಂದ ಯಾವ ಪ್ರಯೋಜನವೂ ಇಲ್ಲ, ಅದಕ್ಕೆ ಅಂಟಿಕೊಳ್ಳುವುದರಿಂದ ದುಃಖಕ್ಕೆ ದಾರಿಯಾಗುತ್ತದೆ ಎಂಬುದು ಆಳವಾಗಿ ಮನವರಿಕೆಯಾಗಬೇಕಾಗುತ್ತದೆ. ಹಾಗಾದಾಗ ಮಾತ್ರ ಸಂಸಾರದಿಂದ ಮನಸ್ಸು ವಿಮುಖಗೊಂಡು ಆ ಪರಮತತ್ವದಲ್ಲಿ ನಿಲ್ಲುತ್ತದೆ. ಈ ರೀತಿ ಸಂಸಾರದಿಂದ ಮನಸ್ಸು ವಿಮುಖಗೊಳ್ಳಬೇಕಾದರೆ ಸಂಸಾರವನ್ನು ಬಹಳ ಆಳವಾಗಿ ಯಾವ ಪೂರ್ವಗ್ರಹವಿಲ್ಲದೆ ವೀಕ್ಷಿಸಬೇಕಾಗುತ್ತದೆ. ಈ ಕಲೆ ಅಳವಟ್ಟಮೇಲೆ ವ್ಯಕ್ತಿ ಸಹಜವಾಗಿಯೇ ಅದರಿಂದ ದೂರಸರಿಯುತ್ತಾನೆ ಮತ್ತು ಎಲ್ಲವನ್ನ್ನೂ ಮೀರಿರುವ ತತ್ವದಲ್ಲಿ ಮನಸ್ಸನ್ನು ನೆಲೆಗೊಳಿಸುತ್ತಾನೆ. ತನು ಮನವಾದ ಮೇಲೆ ಧನವನ್ನೂ ಸಹ ಆತನು ಸಾರ್ಥಕವಾಗಿ ವ್ಯಯಿಸುತ್ತಾನೆ. ಜಂಗಮಕ್ಕಾಗಿ ಅದನ್ನು ಮುಡುಪಿಡುತ್ತಾನೆ. ಜಂಗಮವೆಂದರೆ ಬಯಲು ತತ್ವ, ದೇಹ ಪ್ರಾಣ ಮತ್ತು ಮನಸ್ಸಿನ ತತ್ವಗಳನ್ನು ಮೀರಿದವನು. ಇಂತಹ ತತ್ವವನ್ನು ಹೊಂದಿದವನಿಗಾಗಿ, ತನ್ನ ಧನವನ್ನು ವ್ಯಯಿಸುವುದು.ಆ ತತ್ವಕ್ಕಾಗಿ ಧನವನ್ನು ಸವೆಸುವುದು. ಈ ತತ್ವಕ್ಕಾಗಿಯೇ ಅನುಭವ ಮಂಟಪವನ್ನು ಕಟ್ಟಿದರು. ಹೀಗೆ ಬಸವಣ್ಣನವರು ತಮ್ಮ ತನು ಮನ ಮತ್ತು ಧನವನ್ನು ಉದಾತ್ತ ವಿಚಾರಗಳಿಗೆ ಕೊಟ್ಟು ಶ್ರೇಷ್ಠಮಟ್ಟದ ವ್ಯಕ್ತಿಗಳಾಗಿ ಅಲ್ಲಮಪ್ರಭು ಗಳಿಂದಲೂ ಪೂಜಿತರಾದರು.
ತನುವ ತೋಂಟವ ಮಾಡಿ, ಮನವ ಗುದ್ದಲಿಯ ಮಾಡಿ, ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ;
ಒಡೆದು ಸಂಸಾರದ ಹೆಂಟೆಯ, ಬಗೆದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ;
ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಾಳ, ಸುಷುಮ್ನ ನಾಳದಿಂದ ಉದಕವ ತಿದ್ದಿ,
ಬಸವಗಳೈವರು ಹಸಗೆಡಿಸಿಹವೆಂದು, ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ,
ಆವಾಗಲೂ ಈ ತೋಟದಲ್ಲಿ ಜಾಗರವಿದ್ದು, ಸಸಿಯ ಸಲಹಿದೆನುಕಾಣಾ ಗುಹೇಶ್ವರಾ
TRANSLITERATION
Tanuva tOMTava maaDi, manava guddaliya maaDi, Agedu kaLedenayyaa bhraaMtina bEra;
oDedu saMsaarada heMTeya, Bagedu bittidenayyaa brahma bIjava;
aKaMDa maMDalaveMba baavi, pavanavE raaTAALa, suShumna naaLadiMda udakava tiddi,
basavagaLaivaru hasageDisihaveMdu, samate sairaNe eMba bEliyanikki,
aavaagalU I tOTadalli jaagaraviddu, sasiya salahidenu kaaNaa guheshvaraa
CLICK HERE TO READ-ALONG:
http://youtu.be/nN8Qa91ISy4
TRANSLATION (WORDS)
Tanuva (the body) tOMTava (garden) maaDi, ( I made) manava ( the mind) guddaliya (pick axe) maaDi (I made), Agedu ( by digging)` kaLedenayyaa (I got rid of) bhraaMtina (illusion )bEra (the roots of); oDedu (breaking) saMsaarada (worldly) heMTeya ( chunks of mud), Bagedu(after digging,raking) bittidenayyaa ( sowed) brahma bIjava (the seed of Brahma);
aKaMDa (complete, non fragmented) maMDalavu(space, expanse ) eMba (called) baavi (well ), pavanavE (breath alone) raaTAALa ( is pulley), suShumna naaLadiMda ( with the energy channel called sushumna) udakava (water) tiddi ( I irrigated the garden)’
basavagaLaivaru (five bulls) hasageDisihavu (will destroy) eMdu (thinking that), samate (balance, equanimity)sairaNe(tolerance) eMba (called) bEliyanikki,(put the fence of)
aavaagalU (all the time) I (this) tOTadalli (in garden) jaagaraviddu (being awake),
sasiya (of plant) salahidenu (I took care) kaaNaa (you see) guheshvaraa (Guheshvaraa)
TRANSLATION
I made the body a garden and the mind a pick axe,
I dug and got rid of the roots of illusion; I broke the worldly mud chunks and sowed the seeds of Brahma;
From the well of non-fragmented expanse, with breath alone as the pump and from the deoths of sushumna, I irrigated the garden;
Concerned that the five bulls will destroy it, I installed the fence of balance and tolerance;
Being awake all the time, I took care of the sapling, you see Guhesvaraa!
COMMENTARY
In this beautiful Vachana, Allama Prabhu comments on the ingredients needed to implant and enhance the Godliness within us to make the body into a true temple, using the various gardening activities as simile. The body is made into a garden plat (Body is the temple). The mind is made into a pick axe, a tool that helps digging. The characteristic of the mind is to always ‘dig’, dig the past, dig the present and dig (worry about) the future. Allama Prabhu uses this mind pick axe to dig and get rid of the roots of illusion. For a garden to flourish, the soil has to be free of knots. Allama Prabhu compares the worldly activities to the knots (chunks) of mud that need to be broken. Indeed, our worldly activities tie our lives into knots that keep us bound. We need to untie those knots. Into this tended soil, the seed of Brahma (profound knowledge, awareness) is sown. The word ‘bagedu’ has two meanings: digging or raking, and learning. Allama Prabhu is emphasizing that he learnt all about the seed of Brahma (the divine) before planting it; he did not just dig the soil and plant the seed. We need learn to all about the seed and make sure it is the right kind, to get the right crop. Once the seeds are sown, it is time to irrigate them. The source for this irrigation is the well of the whole expanse (Universe). Allama Prabhu uses the channel of Sushumna to fetch the water from the deep well. Sushumna is the channel of energy flow in the (subtle) body that starts at the lowest and ends at the highest Chakra (nerve/ energy bundle) locations. Essentially, Allama Prabhu is invoking the deepest energy source in the body and carries this energy through the body to soak the seeds just sown. This is the concept of awakening the Kundalini Shakti (power/energy). Farmers use a mechanism called ‘Etha’ or ‘raataala’ (in Kannada) to fetch the water from wells. The farmer moves the Eetha down (collecting water from the well) and up (bringing up and releasing the water into the garden). Allama Prabhu uses ‘breath’ as Etha. The up/down motion of Etha is compared to inhale/exhale aspects of breath. As the seeds sprout, Allama Prabhu is concerned that the five bulls (referring to the five senses) might destroy the garden. As such, he builds a fence around the garden with balance (equality) and tolerance as the components. In addition, he is staying awake all the time to make sure that the garden flourishes, meaning that it is a must for us to be aware and awake for the divine knowledge in us to sprout and flourish – just planting it is not sufficient. The Vachana is thus a complete guide to self-realization!
Let us grow the garden of self-realization!
KANNADA COMMENTARY
ಈ ವಚನವನ್ನು ಅಲ್ಲಮರು, ಬಾಹ್ಯ ತೋಟ ಮಾಡುವ ಕಲೆಯಲ್ಲಿ ನಿಷ್ಣಾತನಾದ ಹಾಗೂ ಅದನ್ನೇ ಸರ್ವ ಶ್ರೇಷ್ಠವೆಂದು ತಿಳಿದು ಅದರಲ್ಲಿಯೇ ಮುಳುಗಿ ಹೋದ ಗೊಗ್ಗಯ್ಯನಿಗೆ, ತಾವು ಮಾಡಿದ ತೋಟದ ಬಗೆಯನ್ನು ವರ್ಣಿಸುವ ಮೂಲಕ, ಅಂತರಂಗದ ಸೂಕ್ಷ್ಮವಾದ ಈ ತೋಟ ಎಲ್ಲದಕ್ಕಿಂತಲೂ ಮುಖ್ಯವಾದದ್ದು ಹಾಗೂ ಶ್ರೇಷ್ಠವಾದದ್ದು ಎಂದು ಪರೋಕ್ಷವಾಗಿ ಹೇಳುವ ವಚನ. . ಅಂತರಂಗದ ತೋಟವನ್ನು ಅವರು ಮಾಡಿದ ರೀತಿ: ದೇಹವೇ ಒಂದು ತೋಟ, ಆ ತೋಟದ ನೆಲವನ್ನು ಮನವೆಂಬ ಗುದ್ದಲಿಯಿಂದ ಅಗೆದಿದ್ದಾರೆ. ಗುದ್ದಲಿಯಿಲ್ಲದೆ ನೆಲ ಅಗೆಯುವುದು ಬಲು ಕಷ್ಟ. ನೆಲ ಅಗೆಯದೆ ಬಿತ್ತಣಿಗೆ ಮಾಡುವುದು ಸಾಧ್ಯವಿಲ್ಲ. ಅದೇ ರೀತಿ ಮನಸ್ಸೇ ಎಲ್ಲದಕ್ಕೂ ಮೂಲ. ಏನೇ ಮಾಡಿದರೂ ಮನಸ್ಸಿನಿಂದಲೇ ಮಾಡಬೇಕು.ಆದ್ದರಿಂದ ಮನವನ್ನೇ ಗುದ್ದಲಿಯಾಗಿ ಮಾರ್ಪಡಿಸಿದ್ದಾರೆ. ಆ ಮನಸ್ಸೆಂಬ ಗುದ್ದಲಿಯಿಂದ ಮಣ್ಣಿನಲ್ಲಿ ಮನೆಮಾಡಿದ್ದ ಭ್ರಾಂತಿ ಎಂಬ ಬೇರುಗಳನ್ನು ತೆಗೆದಿದ್ದಾರೆ. ಬೇರೆ ಬೇರುಗಳು ಉಳಿದುಕೊಂಡಿರುವ ಸ್ಥಳದಲ್ಲಿ ಹೊಸ ಸಸಿಗಳು ಬೆಳೆಯುವ ಅವಕಾಶವಿರುವುದಿಲ್ಲ. ಹಾಗೆಯೇ ನಮ್ಮಲ್ಲಿ ಮನೆಮಾಡಿರುವ ಭ್ರಾಂತಿಯ ಬೇರುಗಳನ್ನು ತೆಗೆಯಬೇಕು. ಭ್ರಾಂತಿಯು ತಪ್ಪು ತಿಳಿವಳಿಕೆಗೆ ದಾರಿ ಮಾಡಿಕೊಡುತ್ತದೆ. ಆ ಪರಮ ಸತ್ಯದ ಸಾಕ್ಷಾತ್ಕಾರಕ್ಕೆ ಅಡ್ಡಿಮಾಡುತ್ತದೆ. ಭ್ರಾಂತಿ ಎಂಬ ಆ ಹಳೆ ಬೇರುಗಳನ್ನು ಕಿತ್ತೆಸೆಯಲೇ ಬೇಕು. ಆದರೆ ಅಷ್ಟರಿಂದಲೇ ಕೆಲಸ ನಡೆಯುವುದಿಲ್ಲ. ಬೇರುಗಳನ್ನು ತೆಗೆದ ಮೇಲೆ ಅಲ್ಲಿಯ ಮಣ್ಣಿನ ಹೆಂಟೆಗಳನ್ನು ಒಡೆಯ ಬೇಕು. ಮಣ್ಣಿನ ಕಣಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡು ಹೆಂಟೆಯಾಗಿ, ಬೆಳೆಗೆ ಗಾಳಿ ಬೆಳಕು ಸರಿಯಾಗಿ ಪ್ರವೇಶಿಸದಂತೆ ಮಾಡುತ್ತವೆ. ಆದ್ದರಿಂದ ಅವುಗಳನ್ನು ಒಡೆಯಬೇಕು. ತನುವೆಂಬ ತೋಟದ ಸಂದರ್ಭದಲ್ಲಿ ಸಂಸಾರದ ಮೋಹವು ಹೆಂಟೆಯಂತೆ ಅಡ್ಡಿಮಾಡುತ್ತದೆ. ಅದರಿಂದ ಕಳಚಿಕೊಳ್ಳುವುದು ಬಹು ಮುಖ್ಯ. ಹೀಗೆ ಮಾಡಿದ ಮೇಲೆ ಮಣ್ಣು ಹದವಾಗುತ್ತದೆ, ಅಂತರಂಗ ಶುದ್ಧವಾಗುತ್ತದೆ, ಬೀಜ ಬಿತ್ತಲು ಯೋಗ್ಯವಾಗುತ್ತದೆ. ಅಲ್ಲಿ ಅಲ್ಲಮರು, ಬ್ರಹ್ಮ ಬೀಜವನ್ನು ಬಿತ್ತುತ್ತಾರೆ. ಇಷ್ಟೆಲ್ಲ ಶ್ರಮ ಪಟ್ಟು ಅಂತಿಂತಹ ಬೀಜ ಬಿತ್ತಿದರೇನು ಫಲ? ಘನವಾದ ಬೀಜವನ್ನೇ ಬಿತ್ತುತ್ತಾರೆ. ಇನ್ನು ಅದಕ್ಕೆ ನೀರಿನ ಅವಶ್ಯಕತೆಯಿದೆ. ಅವರು ಅದಕ್ಕೆ ನೀರು ಹಾಯಿಸುವ ರೀತಿ ಯೋಗಕ್ಕೆ ಸಂಬಂಧಪಟ್ಟದ್ದು. ಅಖಂಡ ಮಂಡಲವೆಂಬ ಬಾವಿ, ಎಂದರೆ ಪರಿಪೂರ್ಣತೆ ಎಂದರ್ಥ. ಬ್ರಹ್ಮ ಬೀಜವು ಪರಿಪೂರ್ಣವಾದದ್ದು. ಅದಕ್ಕೆ ಬೇಕಾದ ಉದಕವು ಪರಿಪೂರ್ಣದಿಂದಲೇ ಬರಬೇಕು. ಆ ಪರಿಪೂರ್ಣದಿಂದಲೇ ಅದಕ್ಕೆ ಪೋಷಕ ತತ್ವ ಬೇಕು. ಪರಿಪೂರ್ಣತೆ ಎಂಬ ಬಾವಿಯಿಂದ ಅಲ್ಲಮರು ಪ್ರಾಣವಾಯುವೆಂಬ ರಾಟಾಳದ ಮೂಲಕ ನೀರನ್ನು ಹರಿಸುತ್ತಾರೆ. ಯೋಗ ಶಾಸ್ತ್ರದ ಪ್ರಕಾರ ಇಡಾ, ಪಿಂಗಳ ಮತ್ತು ಸುಷುಮ್ನ ಎಂಬ ಮೂರು ಮುಖ್ಯ ನಾಡಿಗಳಿವೆ. ಪ್ರತಿಯೊಬ್ಬ ವ್ಯಕ್ತಿಯು ಇಡಾ ಮತ್ತು ಪಿಂಗಳ ನಾಡಿಗಳಿಂದ ಉಸಿರಾಡುತ್ತಾನೆ. ಕೆಲವರಲ್ಲಿ ಇಡಾ ನಾಡಿಯೂ , ಇನ್ನು ಕೆಲವರಲ್ಲಿ ಪಿಂಗಳ ನಾಡಿಯು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಇವೆರಡು ಸಮಾನವಾಗಿ ಕೆಲಸ ಮಾಡಿದಾಗ, ಈ ಎರಡರ ಸಂತುಲನೆಯನ್ನು ಸಾಧಿಸಿದಾಗ, ಈ ಎರಡು ನಾಡಿಗಳ ಮಧ್ಯೆ ಇರುವ ಸುಷುಮ್ನ ನಾಡಿಯ ಮೂಲಕ ಪ್ರಾಣವಾಯು ಹರಿಯುತ್ತದೆ ಮತ್ತು ವ್ಯಕ್ತಿಯಲ್ಲಿ ಸುಪ್ತವಾಗಿದ್ದ ಕುಂಡಲಿನೀ ಶಕ್ತಿಯು ಎಚ್ಚರಗೊಳ್ಳುತ್ತದೆ. ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಿದಾಗ ವ್ಯಕ್ತಿಯು ಅನಂದ ಸಾಗರದಲ್ಲಿ ಓಲಾಡುತ್ತಾನೆ. ಕುಂಡಲಿನಿ ಶಕ್ತಿಯು ಬ್ರಹ್ಮ ರಂಧ್ರಕ್ಕೇರಬೇಕು. ತನುವೆಂಬ ತೋಟದಲ್ಲಿ ಬಿತ್ತಿದ್ದ ಬ್ರಹ್ಮ ವೆಂಬ ಬೀಜಕ್ಕೆ ಸಮತೆಯಿಂದ ಸಾಧಿಸಿದ ವಿಶೇಷ ವಾದ ಜಲದ ಅವಶ್ಯಕತೆಯಿದೆ. ಅದನ್ನು ಅಲ್ಲಮರು ಪ್ರಾಣವಾಯುವಿನ ಸಾಧನೆಯ ಮೂಲಕ ಒದಗಿಸುತ್ತಾರೆ. ಅಲ್ಲಿಗೆ ಮುಗಿಯಿತು ಕೆಲಸವೆಂದು ಸುಮ್ಮನಿರುವ್ದುದು ಸಲ್ಲ. ಏಕೆಂದರೆ ಐದು ಬಸವಗಳು ತೋಟದಲ್ಲಿ ಬೆಳೆದ ಸಸಿಯನ್ನು ತಿನ್ನಲು ಕಾಯುತ್ತಿರುತ್ತವೆ. ಎಂದರೆ ಐದು ಇಂದ್ರಿಯಗಳು ಬ್ರಹ್ಮ ಬೀಜವನ್ನು ಬೆಳೆಯಲು ಅಡ್ಡಿಮಾಡುತ್ತವೆ ಎಂದು ಅರ್ಥ. ಸಮತೆ ಮತ್ತು ಸೈರಣೆ ಎಂಬ ಬೇಲಿಯನ್ನು ಕಟ್ಟಿ, ಆ ಎತ್ತುಗಳು ತೋಟವನ್ನು ಹಾಳುಮಾಡದಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ಸಮತೆ ಮತ್ತು ಸೈರಣೆ ಎಂಬ ಪದಗಳು, ಇಂದ್ರಿಯಗಳೊಂದಿಗೆ ಅವರು ನಡೆದುಕೊಳ್ಳುವ ಬಗೆಯನ್ನು ತಿಳಿಸುತ್ತವೆ. ಇಂದ್ರಿಯಗಳನ್ನು ಶಿಕ್ಷಿಸುವುದಾಗಲಿ ಅಥವಾ ತುಳಿದಿಡುವುದಾಗಲಿ ಅವರು ಒಪ್ಪುವುದಿಲ್ಲ. ಸಮತೆ ಮತ್ತು ಸೈರಣೆ, ಎಂದರೆ ಅವುಗಳೊಂದಿಗೆ ಯುಕ್ತವಾಗಿ, ಸಂಯಮದಿಂದ ನಡೆದುಕೊಳ್ಳುವುದು, ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ವ್ಯವಹರಿಸುವುದು. ಹಾಗಾದಾಗ ಮಾತ್ರ ಅವುಗಳು ತಮ್ಮ ಸ್ಥಳದಲ್ಲಿ ತಾವಿರುತ್ತವೆ. ಅವುಗಳಿಂದ ತೊಂದರೆಯುಂಟಾಗುವುದಿಲ್ಲ. ಬ್ರಹ್ಮ ಬೀಜವು ನಿರಾಳತೆಯಿಂದ ಬೆಳೆಯುತ್ತದೆ. ಈ ರೀತಿಯಾದ ಕಾಳಜಿ ವಹಿಸಿ ಅವರು ಸಸಿಯನ್ನು ಬೆಳೆಸಿ ತೋಟವನ್ನು ಮಾಡುತ್ತಾರೆ.
ಏರಿಯ ಕಟ್ಟಬಹುದಲ್ಲದೆ, ನೀರ ತುಂಬಬಹುದೆ?
ಕೈದು ಕೊಡಬಹುಲ್ಲದೆ, ಕಲಿತನವ ಕೊಡಬಹುದೆ?
ವಿವಾಹ ಮಾಡಬಹುದಲ್ಲದೆ, ಪುರುಷತನವನರಸಬಹುದೆ?
ಘನವ ತೋರಬಹುದಲ್ಲದೆ, ನೆನೆಹ ನಿಲಿಸಬಹುದೆ?
’ಓದೊಕ್ಕಾಲು ಬುದ್ಧಿ ಮುಕ್ಕಾಲು’ ಎಂಬ ಲೋಕದ ಮಾತಿನಂತೆ
ಸದ್ಗುರು ಕಾರುಣ್ಯವಾದರೂ ಸಾಧಿಸಿದವನಿಲ್ಲ ಸಕಳೇಶ್ವರಾ
TRANSLITERATION
Eriya kaTTabahudallade nIra tuMbabahude?
Kaidu koDabahudallade kalitanava koDabahude?
Vivaaha maaDabahudallade, puruShatanavanarasabahude?
Ghanava tOrabahudallade, neneha nilisabahude?
‘Odokkaalu buddhi mukkaalu’ eMba lOkada maatinaMte
Sadguru kaaruNyavaadarU saadhisidavanilla sakalEshavaraa
CLICK HERE TO READ-ALONG:
http://youtu.be/QmFi7ltCpSk
TRANSLATION (WORDS)
Eriya ( the raised bank) kaTTabahudallade (can be built) nIra (water) tuMbabahude? ( but can one fill it with?)
Kaidu (weapon) koDabahudallade(can be given) kalitanava (bravery) koDabahude?(but can one give?)
Vivaaha (marriage) maaDabahudallade,(can be conducted) puruShatanavanarasabahude?( but can one seek virility)
Ghanava (the profound) tOrabahudallade,(can be shown) neneha (attention) nilisabahude? ( but can one set, resolute)
‘Odokkaalu (study, reading is one fourth) buddhi (intelligence) mukkaalu (is three fourth)’ eMba (as) lOkada (world’s) maatinaMte (the saying goes)
Sadguru (the teacher, the guru) kaaruNyavaadarU (even with the blessings of) saadhisidavanilla
(there is no one who has achieved) sakalEshavaraa (Sakaleshvara)
TRANSLATION
The tank bund can be built, but can it be filled with water?
The weapons can be provided, but can bravery be imparted?
The marriage can be conducted, but can one seek virility?
The profound can be shown, but can attention be set (can one be made resolute)?
As the saying goes, ‘Reading is one fourth, intelligence is three fourth,’
Even with the blessings of Guru, no one has achieved It, Oh Sakaleshvara!
COMMENTARY
In previous postings we have addressed the importance of Guru’s blessings and corresponding intense desire and awareness in the disciple for successful transmission of the knowledge. In this Vachana, Sharana Sakalesha Maadarasa says that Guru’s blessing is not the end of it all. It is just the first step and there is something more needed, and it depends on the disciple.
We can build the raised bank (bund) of a tank (lake), but filling it with water requires adequate rainfall. In addition to the rain, the water needs to be channeled to fill the tank. Thus, success in making the tank complete is a combined effort of the man and the divine. We can provide the most powerful weapons to a soldier, but he cannot use them efficiently without inherent bravery. The bravery is a result of his practice and training of the body, and the invisible force that bestows him with the mental strength. Similar combination is needed for the development of virility in married individuals. Along the same lines, the Guru can show the profound, but cannot make the disciple set on the profound. The combination of persistence practice by the disciple and his inherent nature to stabilize the mind on the profound is needed. It is said that ‘reading and studying is only one fourth of the effort, the intelligence is the rest of three-fourth. That means, in addition to the efforts by the individual, we need some abstract power that propels us to find the divine. That power could be our inherent nature. It should be recognized and kindled to achieve the ultimate knowledge. Maadarasa says that not many have achieved such capability.
In summary, Guru’s blessings and lessons give us the initial resource towards achieving the ultimate knowledge. We then try to supplement that initial resource with persistent practice and develop an intense desire to achieve it. In this process, we end up making mental images of what needs to be achieved. This image and the intense desire sway us away from achieving the ultimate. Since the ultimate is beyond the sphere of human mind, it cannot be visualized or desired. We should develop a clear understanding of how the mind works and enhance our inner strength to see the ultimate. This inner strength is the invisible divine power, the three-fourth component.
Let us expand our inner strength to invite the divine power into us!
KANNADA COMMENTARY
ಹಿಂದೆ ನಾವು ಗುರುಕಾರುಣ್ಯವೆಂದರೇನು? ಮತ್ತು ಅದು ಎಷ್ಟು ಮುಖ್ಯವೆಂಬುದನ್ನು ತಿಳಿದುಕೊಂಡೆವು. ಆದರೆ ಈ ವಚನದಲ್ಲಿ ಸಕಲೇಶ ಮಾದರಸರು ಕೇವಲ ಗುರು ಕಾರುಣ್ಯವಾದರೆ ಸಾಲದು, ಅದು ಮೊದಲ ಮೆಟ್ಟಿಲು, ಅದೇ ಕೊನೆಯಲ್ಲ, ಅದಕ್ಕಿಂತ ಹೆಚ್ಚಿನದೇನೋ ಇದೆ. ಅದು ಶಿಷ್ಯನನ್ನು ಅವಲಂಬಿಸಿದೆ ಎಂಬುದನ್ನು ದೃಷ್ಟಾಂತ ಸಹಿತ ಹೇಳುತ್ತಿದ್ದಾರೆ.
ಏರಿಯನ್ನು ಕಟ್ಟಬಹುದು, ಆದರೆ ಆ ಕೆರೆಯಲ್ಲಿ ನೀರನ್ನು ತುಂಬಬಹುದೆ? ಅಲ್ಲಿ ನೀರು ತುಂಬ ಬೇಕಾದರೆ ಮಳೆ ಬರಬೇಕು. ಅಂದರೆ ದೈವ ಅಥವಾ ಪ್ರಕೃತಿ ಒಲಿಯಬೇಕು. ಮತ್ತು ವ್ಯಕ್ತಿಯ ಪ್ರಯತ್ನವೂ ಸೇರಬೇಕು. ಬೇರೆ ಬೇರೆ ಕಡೆ ಹರಿದು ಹೋಗುವ ನೀರನ್ನು ಕೆರೆಗೆ ಹರಿದು ಬರುವಂತೆ ಮಾಡಬೇಕು. ಆಗ ಕೆರೆ ಪೂರ್ತಿಯಾಗಿ ತುಂಬಬಹುದು. ಶಸ್ತ್ರಾಸ್ತ್ರಗಳನ್ನು ಕೊಡಬಹುದು. ಆದರೆ ಕಲಿತನವ ಕೊಡಬಹುದೆ? ಎಂಬುದು ಎರಡನೆಯ ದೃಷ್ಟಾಂತ. ವ್ಯಕ್ತಿಯ ಕೈಯಲ್ಲಿ ಶಸ್ತ್ರಗಳನ್ನು ಕೊಟ್ಟರೂ ಆತನಲ್ಲಿ ಶೌರ್ಯವಿಲ್ಲದಿದ್ದರೆ ಏನು ಪ್ರಯೋಜನ? ಆ ಶೌರ್ಯವು ಅದೃಶ್ಯ ಶಕ್ತಿ ಮತ್ತು ಪುರುಷ ಸಾಧನೆ ಎರಡರ ಮೇಳದ ಪರಿಣಾಮ. ದೈಹಿಕ ವ್ಯಾಯಾಮ, ಒಳ್ಳೆಯ ಆಹಾರ, ನಿರಂತರ ಅಭ್ಯಾಸದಿಂದ ಶಾರೀರಿಕ ಬಲವನ್ನು ಪಡೆಯಬಹುದು ಆದರೆ ಮಾನಸಿಕ ಧೈರ್ಯ ಶೌರ್ಯಗಳು ಬೇರೆ ರೀತಿಯ ಸಾಧನೆಯಿಂದ ಒದಗುತ್ತವೆ. ಇದೇ ಮಾತು ಪುರುಷತನಕ್ಕೂ ಅನ್ವಯಿಸುತ್ತದೆ. ವಿವಾಹವನ್ನು ಮಾಡಿಸಬಹುದು ಆದರೆ ಪುರುಷತನವನ್ನು ಕೊಡಲಾಗುವುದಿಲ್ಲ. ಗುರುವಾದವನು ಘನವನ್ನು ತೋರಿಸಬಹುದು ಆದರೆ ಆ ಘನದಲ್ಲಿ ಮನವನ್ನು ನಿಲ್ಲಿಸುವುದು, ಆ ವ್ಯಕ್ತಿ ತನ್ನಲ್ಲಿ ಸುಪ್ತವಾಗಿರುವ ಶಕ್ತಿಯಿಂದ ಮಾಡಬೇಕು. ಇಲ್ಲಿ ಕೊಟ್ಟಿರುವ ಸಕಲ ದೃಷ್ಟಾಂತಗಳಲ್ಲಿಯೂ ಪುರುಷ ಪ್ರಯತ್ನದ ಜೊತೆಗೆ ಇನ್ನಾವುದೋ ಅದೃಶ್ಯ ಶಕ್ತಿಯೂ ಬೇಕಾಗುತ್ತದೆ ಎಂಬ ಸೂಚನೆ ಇದೆ. ಅದು ನಮ್ಮಲ್ಲಿಯೇ ಸುಪ್ತವಾಗಿರುವ ಶಕ್ತಿಯಾಗಿರಬಹುದು. ಅದನ್ನು ಗುರುತಿಸಿ ಜಾಗೃತಗೊಳಿಸ ಬೇಕು. ”ಓದು ಒಕ್ಕಾಲು ಬುದ್ಧಿ ಮುಕ್ಕಾಲು” ಎಂದು ಕೂಡ ಹೇಳುತ್ತಾರೆ. ಎಷ್ಟೇ ಅದ್ಯಯನ ಮಾಡಿದರೂ ಅದು ನಾಲ್ಕನೇ ಒಂದಂಶ ಮಾತ್ರವಾಗಿರುತ್ತದೆ. ಅದರಲ್ಲಿ ಮುಕ್ಕಾಲು ಬುದ್ಧಿ ಸೇರಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಇದು ಲೋಕೋಕ್ತಿ. ಗುರು ಕಾರುಣ್ಯವು ನಾಲ್ಕನೆ ಒಂದಂಶ. ಅದರಲ್ಲಿ ಶಿಷ್ಯನ ಪ್ರಯತ್ನ, ಅಂದರೆ ಪೂರ್ಣ ಜ್ಞಾನವನ್ನು ಪಡೆಯಲು ಬೇಕಾಗುವ, ತನ್ನಲ್ಲಿ ಇರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವುದು ಆತನ ಸಾಧನೆ. ಅದೇ ಹೆಚ್ಚಿನ ಮಹತ್ವದ್ದು. ಅದನ್ನು ಸಾಧಿಸಿದವರು ಯಾರೂ ಇಲ್ಲ ಎನ್ನುತ್ತಾರೆ ಸಕಲೇಶ ಮಾದರಸರು. ಎಂದರೆ ಅದು ಅತ್ಯಂತ ವಿರಳ. ಎಲ್ಲರೂ ಗುರು ಕಾರುಣ್ಯವಾಯಿತೆಂದು ತೃಪ್ತಿಪಟ್ಟು ಕೊಂಡು ಅಷ್ಟಕ್ಕೇ ಸುಮ್ಮನಿದ್ದು ಬಿಡುತ್ತಾರೆ, ಅಥವಾ ಅಹಂಕಾರದಿಂದ ಮೆರೆಯುತ್ತಾರೆ. ಅಂತಹವರಿಗೆ ಅಲ್ಲಿಗೇ ಎಲ್ಲವೂ ಮುಗಿಯಲಿಲ್ಲ. ಇನ್ನೂ ಸಾಧಿಸಬೇಕಾದುದು ಮುಕ್ಕಾಲು ಪಾಲು ಇದೆ ಎಂಬುದನ್ನು ಈ ವಚನದ ಮೂಲಕ ತಿಳಿಸುತ್ತಿದ್ದಾರೆ.
ಈ ಮುಕ್ಕಾಲು ಪಾಲು ಇರುವುದನ್ನು ಹೇಗೆ ಸಾಧಿಸಬಹುದು? ಎನ್ನುವ ಪ್ರಶ್ನೆ ಹುಟ್ಟುತ್ತದೆ. ಏಕೆಂದರೆ ಅದನ್ನು ಪಡೆಯುವುದು ಮನುಷ್ಯ ಪ್ರಯತ್ನದಿಂದ ಸಾಧ್ಯವಿಲ್ಲ ಎಂದು ವಚನಕಾರರು ಹಿಂದಯೇ ಹೇಳಿರುವರು . ಅಂದರೆ ಪೂಜೆ ಮಾಡುವುದರಿಂದ, ಶಾಸ್ತ್ರಗಳನ್ನು ಓದುವುದರಿಂದ ಅಥವಾ ಯೋಗಾಸನಗಳನ್ನು ಮಾಡುವುದರಿಂದ ಅದು ಲಭ್ಯವಾಗುವುದಿಲ್ಲ. ಹಾಗಾದರೆ ಏನು ಮಾಡುವುದು? ಏನಾದರೂ ಮಾಡಿ ಅದನ್ನು ಪಡೆಯಬೇಕೆನ್ನುವ ಆತುರತೆಯನ್ನು ಮೊದಲು ಕಳೆದುಕೊಳ್ಳಬೇಕು. ಏಕೆಂದರೆ ಹಾಗೆ ಮಾಡಿದಾಗ ಅದರಬಗ್ಗೆ ನಮ್ಮ ಮನಸ್ಸಿನಲ್ಲಿ ನಮಗೆ ತಿಳಿಯದೆಯೆ ಅದರ ಬಗ್ಗೆ ಒಂದು ಚಿತ್ರ ಮೂಡಿರುತ್ತದೆ. ಮತ್ತು ನಾವು ಅದನ್ನು ಅರಸುತ್ತೇವೆ. ಆದರೆ ಆ ಪರತತ್ವ ಮನೋ ವಲಯದಿಂದಾಚೆಗೆ ಇರುವಂತಹುದು ಎಂದು ಹೇಳುತ್ತಾರೆ. ಅದರ ಬಗ್ಗೆ ಯಾವ ನಿರೀಕ್ಷೆಯೂ ಇರದಂತೆ ನೋಡಿಕೊಳ್ಳುವುದೇ ಬಹು ಮುಖ್ಯ. ಅಥವಾ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದು ಮುಖ್ಯ. ಅದು ಸಾಮಾನ್ಯವಾದ ಕೆಲಸವಲ್ಲ. ಅದಕ್ಕೆ ಅಪಾರವಾದ ಆತ್ಮ ಬಲ ಬೇಕು. ಇದನ್ನೇ ಇಲ್ಲಿ ಆ ಮತ್ತೊಂದರ ಕೃಪೆ ಎಂದು ಹೇಳುತ್ತಿರುವುದು.