Friday, March 9, 2012

Vachana 80: Ettana Maamara - How are we related?


ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ?
ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ?
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ?

TRANSLITERATION

ettaNa maamara ettaNa kOgile ettaNiMdetta saMbaaMdhavayyaa?
beTTada nellikaayi samudradoLagaNa uppu ettaNiMdetta saMbaMdhavayyaa?
guhEshvara liMgakkeyU enageyU ettaNiMdetta saMbaMdhavayyaa?

CLICK HERE TO READ-ALONG:

http://www.youtube.com/watch?v=6YTu7gqeucA&feature=youtu.be

TRANSLATION (WORDS)

ettaNa ( from where ) maamara(mango tree) ettaNa (from where) kOgile (Nightingale,  koel bird) ettaNiMdetta (how are they) saMbaaMdhavayyaa?(connected, What is the relationship)
beTTada(of the hill) nellikaayi(goose berry) samudradoLagaNa( in the sea) uppu (salt) ettaNiMdetta(how are they ) saMbaMdhavayyaa?(connected? ,How are they related?)
guhEshvara liMgakkeyU( Guheshvara Linga and) enageyU ( me) ettaNiMdetta (how are they) saMbaMdhavayyaa?( connected? What is the relationship?)


TRANSLATION

The Mango tree and the Nightingale bird, how are they related?
The mountain Goose berry and the salt from the sea, how are they related?
Lord Guheshvara Linga and and me, how are we related?


COMMENTARY


In this very popular Vachana from Allama Prabhu, he wonders about the relation between two sets of disparate entities to drive home the catalyst needed to accomplish the merger (Saamarasya) of the individual (Jeevatma, Anga) with the Lord (Paramaatma, Linga). Through his wondering style, Allama Prabhu succeeds in raising the curiosity of the listener as to what the Vachana is about to address.

A Mango tree with its ever full foliage is hardly noticed by anyone during most of the year. As the Spring arrives, it starts putting out golden pink leaves, followed by fragrant flowers and delicious fruits. The Nightingale bird mute hitherto gets attracted by this transformed tree and starts making its melodies. The tree and the bird were totally unrelated until the arrival of  Spring. The Spring season is the catalyst to bring the two together and cultivate the best in both.

The Goose berry grown on trees somewhere in the forest is very astringent in taste. It is certainly far away from the sea. But when  a chemist separates salt from the sea, and the gooseberry is eaten with the salt, the combination of astringent and salt tastes very good. The chemist is the catalyst for this transformation.
Allama prabhu wonders as to what is the relation between the omnipotent, omniscient, omnipresent Lord (who is pure, beyond the influence of Maya or worldly lures, who is beyond time and causes and effects, so on) and an individual (who is immersed in Maya and materialistic pursuits, lives in past and future, consumed by ego, so on). The catalyst needed to forge the relation between the two entities here, is the awakening of the awareness in the individual of the Lord within. We have said that when the intense desire to seek the spiritual path sprouts in the individual, a teacher (Guru) appears to guide him towards the merger with the Lord (i.e. Linga-Anga Saamarsya, or reaching the Bayalu, realizing the Self, achieving the Null!).

The nature has disparate entities seemingly and usually unrelated at the first sight. When we develop the inclination to see the finer details and develop the awareness to fuse them, we see the world in its finest glory.


Let us seek the fineness in everything around us!


KANNADA COMMENTARY


“ಎತ್ತಣ ಮಾಮರ ಎತ್ತಣ ಕೋಗಿಲೆ” ಎಂಬ ಅಲ್ಲಮ ಪ್ರಭುಗಳ ಈ ವಚನ ಕಿವಿಗೆ ಎಷ್ಟು ಆಪ್ಯಾಮಾನವೋ ಮತ್ತು ಎಷ್ಟು ಪ್ರಸಿದ್ಧವೋ ಅಷ್ಟೇ ಅದರ ಭಾವ ಕೂಡ ಸುಂದರವಾಗಿದೆ. ಅನುಭಾವಿಗಳಾದ ಅಲ್ಲಮರೇ ಕೌತುಕಗೊಳ್ಳುವಂತೆ ಮಾಡಿದ ವಿಷಯವನ್ನು ಎಲ್ಲರಲ್ಲಿ ಇನ್ನೂ ಹೆಚ್ಚಿನ ಕೌತುಕ ಹುಟ್ಟುವಂತೆ ಹೇಳಿದ್ದಾರೆ ಈ ವಚನದಲ್ಲಿ.

ಇಲ್ಲಿ ಮಾಮರ ಮತ್ತು ಕೋಗಿಲೆಯ, ಬೆಟ್ಟದ ನೆಲ್ಲಿಕಾಯಿ ಮತ್ತು ಉಪ್ಪಿನ. ಪರಮಾತ್ಮ ಮತ್ತು ಜೀವಾತ್ಮನ ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ. ಮಾಮರ ಮತ್ತು ಕೋಗಿಲೆಗಳು ಇಡೀ ವರ್ಷವೆಲ್ಲ ಯಾರ ಗಮನಕ್ಕೂ ಬಾರದೆ, ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಇರುತ್ತವೆ. ಆದರೆ ವಸಂತ ಋತು ಬಂತೆಂದರೆ ಸಾಕು ಮಾಮರ ಅಗಾಧ ಸೌಂದರ್ಯದ ಗಣಿಯಾಗುತ್ತದೆ. ತಾಮ್ರವರ್ಣದ ಚಿಗುರುಗಳು ಕೆಲ ಸಮಯದಲ್ಲಿಯೇ ಪಚ್ಚೆಬಣ್ಣ ತಾಳುತ್ತವೆ, ಇಡೀ ಮರವು ಹೊಸ ಕಾಂತಿಯಿಂದ ನಳನಳಿಸುತ್ತದೆ. ನವಿರಾದ ಸುಗಂಧ ಬೀರುವ ಹೂವಿನ ಗೊಂಚಲುಗಳು ಮರವೆಲ್ಲ ಆವರಿಸಿಬಿಡುತ್ತವೆ. ಎಲ್ಲಿಯೋ ಮೂಕವಾಗಿದ್ದ ಕೋಗಿಲೆ ಇದ್ದಕ್ಕಿದ್ದಂತೆ ಕಂಠಸಿರಿಯಿಂದ ಅವತರಿಸುತ್ತದೆ. ಮಾಮರಕ್ಕೆ ಬಂದು ಪಂಚಮ ಸ್ವರದಲ್ಲಿ ಉತ್ಕಟತೆಯನ್ನು ತೋರುತ್ತ ಮಧುರ ಗಾನದಲ್ಲಿ ತೊಡಗುತ್ತದೆ. ಇದು ಎಂತಹ ಸಂಬಂಧವೆಂದು ಅಲ್ಲಮರು ಅಚ್ಚರಿಗೊಳ್ಳುತ್ತಾರೆ. ಅದೇ ರೀತಿ ಬೆಟ್ಟದ ನೆಲ್ಲಿಕಾಯಿಯು ಎಲ್ಲೋ ದೂರದ ಕಾಡಿನಲ್ಲಿ ಬೆಳೆಯುತ್ತದೆ. ಉಪ್ಪು, ಸಮುದ್ರದ ನೀರಿನಲ್ಲಿ ಅಡಗಿರುತ್ತದೆ. ರಸಜ್ಞನೊಬ್ಬನು ಅ ಸಮುದ್ರದ ನೀರಿನಲ್ಲಿಯ ಉಪ್ಪನ್ನು ಬೇರ್ಪಡಿಸಿದಾಗ, ಅದನ್ನು ನೆಲ್ಲಿಯಕಾಯಿಯ ಜೊತೆಗೆ ತಿಂದಾಗ ಬೆಟ್ಟದ ನೆಲ್ಲಿಕಾಯಿಯ ಒಗರು ರುಚಿ ಉಪ್ಪಿನ ರುಚಿಯ ಜೊತೆ ಸೇರಿ. ತಿನ್ನಲು ಇನ್ನೂ ಹಿತವಾಗಿರುತ್ತದೆ. ಅದರ ಸ್ವಾದವನ್ನು ತಿಂದೇ ಅನುಭವಿಸಬೇಕು. ಇಂತಹ ಆಪ್ಯಾಯಮಾನವಾದ ರುಚಿಯನ್ನು ಕೊಡುವ ಈ ಎರಡರ ಸಂಬಂಧವೆಂತಹುದು? ಎಂದು ಅಚ್ಚರಿಪಡುತ್ತಾರೆ ಅಲ್ಲಮರು. ಪ್ರಕೃತಿಯಲ್ಲಿನ ಈ ಎರಡು ಉದಾಹರಣೆಗಳ ನಂತರ ಈಗ ಅಲ್ಲಮರು ಈಶ್ವರ ಮತ್ತು ಜೀವರ ಸಂಬಂಧದ ಬಗ್ಗೆ ಹೇಳುತ್ತಾರೆ. ಗುಹೆಶ್ವರ ಲಿಂಗಕ್ಕೂ ಮತ್ತು ತನಗೂ ಎಂಲ್ಲಿಂದೆಲ್ಲಿಯ ಸಂಬಂಧವೆನ್ನುತ್ತಾರೆ. ಎಲ್ಲ ಗುಣಗಳನ್ನು ಮೀರಿದವನು, ನಿಷ್ಕಳಂಕನು, ಶಬ್ದಾತೀತನು, ಮಾಯಾತೀತನು, ಸಂಸಾರದ ಆಗುಹೋಗುಗಳಿಗೆ ಸಿಲುಕದವನು, ಕಾಲಾತೀತನು ಆದ ಗುಹೇಶ್ವರನಿಗೂ ಮತ್ತು ಕಾಮಾದಿಗಳಲ್ಲಿ ಮುಳುಗಿ ನರಳುವ, ಸಂಸಾರ ಸಾಗರದಲ್ಲಿ ತೊಳಲುವ, ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಉಯ್ಯಾಲೆಯಾಡುವ, ಅಹಂಕಾರದಿಂದ ಮೆರೆದಾಡುವ ಈ ಜೀವನಿಗೂ ಎಲ್ಲಿಂದೆಲ್ಲಿಯ ಸಂಬಂಧವೆಂದು ಅಚ್ಚರಿ ಪಡುತ್ತಾರೆ ಅಲ್ಲಮರು. ಎಲ್ಲವನ್ನೂ ಮೀರಿ ಅನಂತ ಎತ್ತರದಲ್ಲಿರುವ ಆ ಗುಹೇಶ್ವರನಿಗೂ ಈ ಸಂಸಾರದ ಕೆಸರಿನಲ್ಲಿ ತೊಳಲುತ್ತಿರುವ ಜೀವನಿಗೂ ಸಂಬಂಧವೇ ಇಲ್ಲದಂತೆ ತೋರುತ್ತದೆ. ಆದರೆ ಸಮಯ ಕೂಡಿದಾಗ, ಗುರುವಿನ ಕರುಣೆಯಾದಾಗ, ಆ ಪರಮಾತ್ಮನ ಒಲವು ಜೀವನ ಮೇಲೆ ಹರಿದಾಗ ಈ ಎರಡೂ ಒಂದಾಗುತ್ತವೆ. ಪರಮಾತ್ಮ ಮತ್ತು ಜೀವಾತ್ಮನ ಈ ಸಂಬಂಧವು ಅತ್ಯಂತ ಆಶ್ಚರ್ಯಕರವಾದದ್ದು ಎಂಬುದನ್ನು ಕೇವಲ ಉದ್ಗಾರಗಳ ಮೂಲಕ ಈ ವಚನದಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ. ಮಾಮರ ಮತ್ತು ಕೋಗಿಲೆಯ ಸಂಬಂಧದಲ್ಲಿ ವಸಂತ ಋತು ಅವುಗಳನ್ನು ಕೂಡಿಸುವ ನೆಪವಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಮತ್ತು ಉಪ್ಪಿನ ಸಂಬಂಧವನ್ನು ಹೊಸೆಯಲು ರಸಜ್ಞನು ನೆಪವಾಗುತ್ತಾನೆ, ಮತ್ತು ಈಶ್ವರ ಮತ್ತು ಜೀವನ ಸಂಬಂಧ ಹೊಸೆಯಲು ಗುರುವು ಕಾರಣನಾಗುತ್ತಾನೆ. ಈ ಪ್ರಕೃತಿಯಲ್ಲಿ ಎಲ್ಲವೂ ಎಲ್ಲೆಲ್ಲೋ ದೂರದೂರದಲ್ಲಿ ಇರಬಹುದು. ಆದರೆ ಎಲ್ಲವೂ ಒಂದಕ್ಕೊಂದು ಕಣ್ಣಿಗೆ ಕಾಣಲಾರದ, ಶಬ್ದಗಳಲ್ಲಿ ವ್ಯಕ್ತಪಡಿಸಲಾರದ ಸಂಬಂಧ ಹೊಂದಿರುತ್ತವೆ. ಸುಪ್ತವಾದ ಅಂತಹ ಸಂಬಂಧವನ್ನು ನಾವು ಕಂಡುಕೊಳ್ಳುವುದು ಅಥವಾ ಆ ಸಂಬಂಧಕ್ಕೆ ಸಂವೇದನಶೀಲರಾಗಿರುವುದು ಮುಖ್ಯವಾದದ್ದು, ಆ ಸಂವೇದನಾಶೀಲತೆಯು ನಮ್ಮನ್ನು ಪರಮಾತ್ಮನ ಜೊತೆಗೂಡಿಸತ್ತದೆ ಎಂಬ ಧ್ವನಿ ಈ ವಚನದ್ದು.


2 comments:

  1. Hello,

    I got your email from the Vachana -a-Week site. I just wanted to thank you for posting all of the Vachanas with English translation and commentary. It is not easy to find such a great resource as this. They have given me a view into the Universal Truth that Basavanna and the Sharanas lived by. Your work is greatly appreciated.

    Sincerely,

    Lee Oakley

    ReplyDelete