ಒಲಿದು ಒಲಿಸಿಕೊಳ್ಳಬೇಕು, ಒಲಿದಲ್ಲದೆ ಇಲ್ಲ.
ಹಲವು ಕೊಂಬೆಗೆ ಹಾರದಿರು ಮರುಳೇ
ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ,
ಅಟ್ಟಿದಡೆ, ಒತ್ತಿದಡೆ ನಿಷ್ಠೆಯ ಬಿಡದಿರ್ದಡೆ ತನ್ನನೀವ ಮಹಾಲಿಂಗ ಕಲ್ಲೇಶ್ವರ
TRANSLITERATION
Olidu olisikoLLabEku, olidallade illa.
Halavu oMbegaLige haaradiru maruLE.
aTTi nODuva, muTTi nODuva, taTTi nODuva, otti nODuva,
aTTidaDe, ottidaDe niShTheya biDadirdaDe tannanIva mahaliMga kallEshvara
CLICK HERE TO READ ALONG:
http://www.youtube.com/watch?v=V4u9F1UZO8U&list=UUY069_ad4eRWlT26ttaAszQ&index=1&feature=plcp
TRANSLATION (WORDS)
olidu (love) olisikoLLabEku, (to be loved) olidallade (without loving) illa (not)
halavu (many) koMbege (branches) haaradiru (don’t jump) maruLE (you fool)
aTTi (expel) nODuva (he will see) muTTi (touch) nODuva (he will see) taTTi (knock) nODuva (he will see), otti (squeeze, press) nODuva (he will see)
aTTidaDe (if expelled) ottidaDe (if squeezed) niShTheya ( commitment) biDadirdaDe (if not abandoned) tannanIva (will bestow himself) mahaaliMga kallESvara (Lord Mahalinga kalleshvara)
TRANSLATION
Love to be loved, without loving it cannot be.
Do not jump from branch to branch, you fool!
He will expel and see, He will touch and see, He will knock and see, He will squeeze and see.
If commitment is not abandoned when expelled and squeezed, Lord Mahalinga kalleshvara will bestow Himself!
COMMENTARY
This Vachana from Sharana Haavinahaala kallayya stresses the importance of ‘commitment’ (niShThe) to reach the Lord (i.e. realize self). He says one has to love (others) to be loved (by them), without loving it is not possible to receive love from others. We have roughly translated the word ‘Olidu’ as ‘love’. In this Vachana’s context it could be ‘faith, belief, affection, single mindedness’. Essentially, one has to have a deep love for the Lord to receive His love. Kallayya compares the state of our mind to a monkey constantly jumping from one branch to the other and cautions against it, implying focusing single mindedly on the Truth (the Lord). When our commitment is not deep enough, we feel that the Lord tests us by expelling, touching, knocking and squeezing. This is how a non-committed devotee attributes all occurings in life to the Lord. But, if one does not abandon commitment, Kallayya says that the Lord will bestow Himself on the devotee.
Essentially, one has to have a deep love (faith) in the Truth (the Lord). Only through this deep unconditional love without any expectations, and commitment one can realize the Truth. Without the deep commitment, our mind tends to stray towards other branches of desires forgetting the main goal. Even when one tends to return to the main goal, lack of constant commitment will only result in undesired consequences. We even feel that the Lord is posing these problems on us. The key then is to develop an unwavering commitment to seek the Truth. With such commitment, all the so called undesired consequences lose their effect on us and the Lord bestows Himself.
Let us Love to be Loved!
KANNADA COMMENTARY
ನಿಷ್ಠೆಯ ಬಗ್ಗೆ ಇನ್ನೊಂದು ವಚನ ಹಾವಿನಹಾಳ ಕಲ್ಲಯ್ಯನವರದ್ದು. ಇಲ್ಲಿ ಆ ಸತ್ಯಕ್ಕೆ ಒಲಿದು ಒಲಿಸಿಕೊಳ್ಳುವ ನಡುವಿನ ಪ್ರಕ್ರಿಯೆಯ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಮೊದಲು ಆ ಸತ್ಯದ ಬಗ್ಗೆ ನಮ್ಮಲ್ಲಿ ಒಲವು ಇರಬೇಕು. ಆ ಒಲವಿನ ಮೂಲಕವೇ ಅದನ್ನು ಒಲಿಸಿಕೊಳ್ಳಲು ಸಾಧ್ಯವೇ ಹೊರತು ಇಲ್ಲದಿದ್ದರೆ ಅದು ನಮಗೆ ಒಲಿಯುವುದಿಲ್ಲವೆನ್ನುತ್ತಾರೆ ಕಲ್ಲಯ್ಯನವರು. ಆ ಸತ್ಯವನ್ನು ಕಂಡುಕೊಳ್ಳಬೇಕು ಎನ್ನುವ ಬಯಕೆ ಎಲ್ಲರ ಮನದಲ್ಲೂ ಇರಬಹುದು. ಆದರೆ ಅದು ಆಳವಾಗಿರುವುದಿಲ್ಲ. ಆದ್ದರಿಂದ ಬಹು ಬೇಗ ಅದು ಬೇರೆ ಕಡೆಗೆ ತಿರುಗಿಕೊಳ್ಳುತ್ತದೆ. ಮನಸ್ಸು ಬಯಕೆಯ ಇತರ ಕೊಂಬೆಗಳಿಗೆ ಹಾರುತ್ತದೆ, ಮತ್ತು ಮೂಲ ಆಶಯವನ್ನೇ ಮರೆತುಬಿಡುತ್ತದೆ. ಆಗಾಗ ಅದು ಹಿಂತಿರುಗಿ ಮೂಲ ಆಶಯಕ್ಕೆ ಬಂದರೂ ಅಲ್ಲಿ ನಿರಂತರವಾದ ನಿಷ್ಠೆ ಯಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಮಗೆ ನಾನಾ ತೊಂದರೆಗಳು ಬರುತ್ತವೆ. ಅವೆಲ್ಲ ನಮ್ಮ ಮನಸ್ಸಿನ ಅಲೆಯುವಿಕೆಯ ಕಾರಣದಿಂದಲೇ ಉಂಟಾಗುವಂತಹವು. ಆದರೆ, ನಮ್ಮಲ್ಲಿ ಆ ನಿಷ್ಠೆಯಿಲ್ಲದ್ದರಿಂದ ಆ ದೇವರೇ ನಮಗೆ ಕಷ್ಟಕೊಡುತ್ತಿದ್ದಾನೆ ಎನ್ನಿಸುತ್ತದೆ. ಅದನ್ನೇ ಇಲ್ಲಿ ಕಲ್ಲಯ್ಯನವರು “ಅಟ್ಟಿ ನೋಡುವ” ಎಂದು ಹೇಳುತ್ತಿದ್ದಾರೆ. ಆ ಸತ್ಯದಲ್ಲಿ ನಿಷ್ಠೆಯಿಲ್ಲದಿದ್ದಾಗ ಆ ದೇವರ ಮೇಲೆಯೇ ನಮಗೆ ಕೋಪಬರುತ್ತದೆ. ಆತನು ನಮ್ಮನ್ನು ದೂರ ಹೋಗುವಂತೆ ಮಾಡುತ್ತಾನೆ. ಇನ್ನು ಕೆಲವುಸಲ ಮುಟ್ಟಿ ನೋಡುತ್ತಾನೆ. ಎಂದರೆ ಪ್ರೀತಿಯನ್ನು ತೋರುತ್ತಾನೆ. ನಮ್ಮನ್ನು ಮುಟ್ಟಿ ತನ್ನ ಇರುವಿಕೆಯ ಅರಿವುಂಟುಮಾಡುತ್ತಾನೆ. ಆದರೆ ಆ ಸ್ಪರ್ಶ ಬಹು ಸೂಕ್ಷ್ಮವಾಗಿರುತ್ತದೆ. ನಿಷ್ಠೆಯಿಲ್ಲದಿದ್ದರೆ ಅದನ್ನು ಗುರುತಿಸುವುದು ಕಷ್ಠವೇ. ನಮ್ಮನ್ನು ಹೊಡೆದೂ ನೋಡುತ್ತಾನೆ, ಒತ್ತಿಯೂ ನೋಡುತ್ತಾನೆ. ಇವುಗಳು ನಿಷ್ಠೆಯಿಲ್ಲದಿದ್ದರೆ ಅನುಭವಕ್ಕೆ ಬರುವ ಸ್ಥಿತಿಗಳು. ಈ ಎಲ್ಲವುಗಳ ನಡುವೆಯೂ ಸತ್ಯದ ಬಗ್ಗೆ ಒಲವು ನಿರಂತರವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಇಲ್ಲಿ ಒಲವು ಎನ್ನುವ ಪದ ಮುಖ್ಯವಾದದ್ದು. ಯಾವುದೇ ಸ್ವಾರ್ಥವಿಲ್ಲದೆ ಇರುವುದೇ ಒಲವು, ಲಾಭದ ಆಸೆಯಿಲ್ಲದಿರುವುದು, ನಿರ್ವ್ಯಾಜ ಪ್ರೇಮ. ದೇವರು ನನಗೆ ಇಂತಿಂತಹುದನ್ನು ದಯಪಾಲಿಸುತ್ತಾನೆ ಎಂದುಕೊಂಡು ಮಾಡುವುದು ನಿಷ್ಠೆಯಲ್ಲ. ಆದ್ದರಿಂದಲೇ ಇಲ್ಲಿ ಕಲ್ಲಯ್ಯನವರು ನಕಾರಾತ್ಮಕವಾದ ವಿಷಯಗಳನ್ನೇ “ ಅಟ್ಟಿ, ತಟ್ಟಿ, ಒತ್ತಿ ನೋಡುವ’” ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲ ನಡೆದ ಮೇಲೂ ಆತನ ಬಗ್ಗೆ ಒಲವು ತೋರಿದರೆ ಆತನು ತನ್ನನ್ನೇ ಭಕ್ತನಿಗೆ ಕೊಟ್ಟುಕೊಳ್ಳುತ್ತಾನೆ ಎನ್ನುತ್ತಾರೆ. ಏಕೆಂದರೆ ನಿಷ್ಠೆಯಿದ್ದಾಗ ’ಆತನು ತನ್ನಿಂದ ಬೇರೆ, ನನ್ನನ್ನು ಅಟ್ಟುತ್ತಿದ್ದಾನೆ, ತಟ್ಟುತ್ತಿದ್ದಾನೆ, ಒತ್ತುತ್ತಿದ್ದಾನೆ ’ ಎನ್ನುವ ಭಾವಗಳಿಗೆ ಅಲ್ಲಿ ಸ್ಥಾನವೇ ಇರುವುದಿಲ್ಲ. ಅಲ್ಲಿ ಅಭಿನ್ನ ಭಾವ ಮನೆಮಾಡಿರುತ್ತದೆ.
No comments:
Post a Comment