Friday, January 27, 2012

Vachana 74: Vedangala Hinde Hariyadiru – Intense Need to Know!

ವೇದಂಗಳ ಹಿಂದೆ ಹರಿಯದಿರು ಹರಿಯದಿರು!
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು!
ಪುರಾಣಗಳ ಹಿಂದೆ ಬಳಸದಿರು ಬಳಸದಿರು!
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು!
ಸೌರಾಷ್ಟ್ರ ಸೋಮೇಶ್ವರನ ಕೈ ಹಿಡಿದು,
ಶಬ್ದ ಜಾಲಂಗಳಿಗೆ ಬಳಲದಿರು ಬಳಲದಿರು!

 
TRANSLITERATION

vEdaMgaLa hiMde hariyadiru hariyadiru!
shaastraMgaLa hiMde suLiyadiru suLiyadiru!
puraaNagaLa hiMde baLasadiru baLasadiru!
aagamaMgaLa hiMde toLaladiru toLaladiru!
souraaShtra sOmEswhvarana kai hiDidu,
shabda jaalaMgaLige baLaladiru baLaladiru!


CLICK HERE TO READ-ALONG:

http://www.youtube.com/watch?v=j7yykY5tO0g&feature=youtu.be


TRANSLATION (WORDS)
vEdaMgaLa (the vEdaas) hiMde (behind) hariyadiru (don’t drift) hariyadiru(don’t drift)
shaastraMgaLa (the rituals) hiMde (behind) suLiyadiru (don’t swirl)suLiyadiru(don’t swirl)
puraaNagaLa(mythology) hiMde(behind) baLasadiru(don’t go around) baLasadiru(don’t go around)
aagamaMgaLa( sacraments)hiMde(behind) toLaladiru(don’t suffer) toLaladiru(don’t suffer)
souraaShtra sOmEswhvarana (Sourashtra someshvara’s) kai (hand) hiDidu (holding)
shabda (words)jaalaMgaLige(in the net of) baLaladiru(don’t tire out, don’t be exhausted) baLaladiru (don’t tire out, don’t be exhausted)

 
TRANSLATION

Don’t drift behind Vedas (Sacred texts), Don’t drift!
Don’t swirl behind the rituals, Don’t swirl!
Don’t run around Mythology, Don’t run around!
Don’t suffer behind Sacraments, Don’t suffer!
Holding the hand of Lord Sourashtra someshvara,
Don’t tire out in the net of words, Don’t tire out!

COMMENTARY
In previous posting Basavanna compared the human mind to a monkey jumping from branch to branch on a tree. Once we realize that controlling the mind is a tough task, we resort to finding ways to assist us in this task. We start exploring wise sayings of our sages, prescriptions in our sacred texts, examples from Mythology, and rituals and methods of worship described in our Sacraments to find ways for mind control and self-realization. In this Vachana Sharana Aadayya says that such efforts are not really fruitful. He advocates escaping from these nets of words holding the hand (with the help) of the Lord. Aadayya is not saying that we should stop perusing the above venues in our efforts to develop the mind control. He is implying that a quick reading of the texts, a routine practice of rituals, etc. would not help.  The only way to gain clear understanding of the truth is to have an intense desire for self enquiry.

As an example, Kenopanishat (a part of Veda) says "Yacchkshusha na pashyati ena chakshomshi pashyati, tadeva Brahma tvam viddhi nedam yadidamupasate" meaning  “Brahma is not what everyone worships as Brahma, it is not what the eyes see, but it is that which sees those eyes!” What is addressed here is the concept of enabling the eyes to see Brahma. This can be understood only when there is honest questioning and intense desire crops up within us to understand the truth. There are several verses of this type in Vedas describing the Brahma. These verses are gifts of our sages to us.  They are important and valid contributions. A mere memorizing of these verses  and chanting them just make us stuck in the net of words. What is needed is an intense desire and corresponding effort to understand the truth.
We memorize 1001 names of the Lord and chant them repeatedly, most of the time not even knowing the meaning or reason for these names, hoping that that would bring our mind under control. We routinely pour 100 gallons of milk and honey on Lord Ganesha’s head without even thinking twice about the significance of this act, because it is a prescribed way of worship from our books and customs. Such routine activity does not take us to Him. According to Aadayya, an intense, burning desire to know, and understand the self is needed to reach the Lord.


Let us not run behind the scriptures blindley!


KANNADA COMMENTARY


ಮನಸ್ಸು ಮಂಗನಂತೆ ಕೊಂಬೆಯಿಂದ ಕೊಂಬೆಗೆ ಹಾರುತ್ತಿರುವಾಗ ಅದನ್ನು ನಿಯಂತ್ರಿಸಲು ನಾನಾ ಉಪಾಯಗಳನ್ನು ಮಾಡುತ್ತಾನೆ ಮಾನವ. ಋಷಿ ಮುನಿಗಳು ಏನು ಹೇಳಿದ್ದಾರೆ, ನಮ್ಮ ವೇದ, ಶಾಸ್ತ್ರ ಗ್ರಂಥಗಳು ಏನು ಹೇಳಿವೆ ಎಂದು ನೋಡುತ್ತಾನೆ. ವೇದ ಆಗಮಗಳನ್ನು ಓದಿದರೆ ಅದನ್ನು ಸಾಧಿಸಬಹುದು ಎಂಬ ನಂಬಿಕೆಯಿಂದ, ಪುರಾಣಗಳ ಉದಾಹರಣೆಗಳನ್ನು ತಿಳಿದುಕೊಂಡರೆ ಸುಲಭವಾಗಬಹುದು ಎಂಬ ಆಸೆಯಿಂದ, ಆಗಮಗಳಲ್ಲಿ ಹೇಳಿದ ಪೂಜಾ ವಿಧಾನಗಳನ್ನು ಅನುಸರಿಸಿದರೆ ಮನಸ್ಸು ಒಂದೆಡೆ ನಿಲ್ಲುವುದೆಂಬ ತಲೆಬುಡವಿಲ್ಲದ ಭರವಸೆಯಿಂದ ಬಹು ಬೇಗ ಅಂತಹ ವಿಧಿಗಳಲ್ಲಿ ತೊಡಗಿಕೊಳ್ಳುತ್ತಾನೆ. ಅಂತಹವರನ್ನು ಕಂಡು ಆದಯ್ಯನವರು ಅವೆಲ್ಲ ಕೇವಲ ಶಬ್ದ ಜಾಲಂಗಳು ಎಂದು ಹೇಳುತ್ತಾರೆ. ಇದು ಸತ್ಯವಾದ ಮತ್ತು ಬಲು ದಿಟ್ಟವಾದ ಮಾತು? ಅದು ಹೇಗೆ ಎಂದು ನೋಡೋಣ.

“ಯಚ್ಚಕ್ಷುಷಾ ನ ಪಶ್ಯತಿ ಎನ ಚಕ್ಷೂಂಷಿ ಪಶ್ಯತಿ, ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೆ”
ಎಂದು ವೇದದ ಭಾಗವಾದ ಕೇನೋಪನಿಷತ್ತು ಹೇಳುತ್ತದೆ. ಎಂದರೆ “ಎಲ್ಲರೂ ಯಾವುದನ್ನು ಬ್ರಹ್ಮವೆಂದು ಉಪಾಸಿಸುತ್ತಾರೋ ಅದು ಬ್ರಹ್ಮವಲ್ಲ, ಯಾವುದನ್ನು ಈ ಕಣ್ಣು ಗಳು ನೋಡುತ್ತವೆಯೋ ಅದು ಬ್ರಹ್ಮವಲ್ಲ, ಯಾವುದರಿಂದ ಕಣ್ಣುಗಳನ್ನು ನೋಡಲ್ಪಡುತ್ತದೆಯೋ ಅದು ಬ್ರಹ್ಮ” ಎಂದರ್ಥ. ಆದರೆ ಇದು ಅರ್ಥವಾಗುವುದು, “ಬ್ರಹ್ಮ” ಎಂದರೆ ಏನು ಎಂಬ ಪ್ರಾಮಾಣಿಕವಾದ ಪ್ರಶ್ನೆ, ಮತ್ತು ಅದನ್ನು ಅರಿಯಬೇಕೆಂಬ ಆಳವಾದ ಹಂಬಲ ನಮ್ಮಲ್ಲಿ ಹುಟ್ಟಿದಾಗ ಮಾತ್ರ ಸಾಧ್ಯ. ಆ ಬ್ರಹ್ಮನ ಬಗ್ಗೆ ಇಂತಹ ಅನೇಕ ಮಂತ್ರಗಳು ವೇದಗಳಲ್ಲಿ ಕಂಡುಬರುತ್ತವೆ. ಆ ಮಂತ್ರಗಳು ಋಷಿಗಳ ಕಾಣ್ಕೆಯ ಫಲ. ಆ ಕಾಣ್ಕೆ ಮುಖ್ಯ. ಆ ಕಾಣ್ಕೆ ಇಲ್ಲದಿದ್ದಲ್ಲಿ ಅವು ಕೇವಲ ಶಬ್ದಗಳಾಗಿ ಉಳಿಯುತ್ತವೆ. ವೇದ ಉಪನಿಷತ್ತುಗಳ ವಾಕ್ಯಗಳನ್ನು ಕೇವಲ ಬಾಯಿಪಾಠಮಾಡಿ ಪುನರುಚ್ಚರಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಆದ್ದರಿಂದಲೇ ಅವುಗಳ ಹಿಂದೆ ಹರಿಯದಿರು ಎನ್ನುತ್ತಾರೆ ಆದಯ್ಯ ಶರಣರು.
ಶಾಸ್ತ್ರಗಳಲ್ಲಿ ಅನೇಕ ಪೂಜಾವಿಧಿಗಳನ್ನು, ಸಿದ್ಧಾಂತಗಳನ್ನು ವಿವರಿಸಿದೆ. ಅವುಗಳು ಪ್ರತೀಕತ್ಮಾಕ (symbolic) ವಾದವುಗಳು. ಅವುಗಳ ಹಿಂದಿರುವ ಅರ್ಥವನ್ನು ಮನನ ಮಾಡಿ ಪ್ರತಿಸಲವೂ ಅವುಗಳನ್ನು ಪಾಲಿಸುವಾಗ ಮಾತ್ರವಲ್ಲದೆ ಸದಾ ಅವುಗಳನ್ನು ಪ್ರಶ್ನಿಸುತ್ತ ಅವುಗಳ ಆಳವಾದ ಅರ್ಥವನ್ನು ಕಂಡುಕೊಳ್ಳಲು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಮನಸ್ಸನ್ನು ಪೂರ್ತಿಯಾಗಿ ಅದರಲ್ಲಿ ತೊಡಗಿಸಿದರೆ ಮಾತ್ರ ಅದರಿಂದ ಲಾಭವಾಗ ಬಹುದು. ಆದರೆ ಅದನ್ನು ಶಾಸ್ತ್ರಾಗಮಗಳಲ್ಲಿ ಹೇಳಿದೆ ಎಂಬ ಕಾರಣಕ್ಕಾಗಿ ಯಾಂತ್ರಿಕವಾಗಿ ಅನುಸರಿಸಿದರೆ ಯಾವ ಉಪಯೋಗವೂ ಇಲ್ಲ. ಆದ್ದರಿಂದ ಅವುಗಳ ಹಿಂದೆ ಸುಳಿಯಬೇಡ ಎನ್ನುತ್ತಾರೆ.
ಪುರಾಣಗಳ ಕಥೆಗಳಲ್ಲಿ ಬರುವ ಪಾತ್ರಗಳ ಉದಾಹರಣೆಗಳು ಬಹಳ ಮನೋಹರವಾಗಿವೆ. ಯಾವ ಯಾವ ರಾಜನು ಎಂತೆಂತಹ ತಪ್ಪುಗಳನ್ನು ಮಾಡಿದನು ಅವನಿಗೆ ಯಾವ ಗತಿ ಪ್ರಾಪ್ತವಾಯಿತು, ಅಥವಾ ಯಾರು ಯೋಗ್ಯರಾಗಿ ನಡೆದುಕೊಂಡರು ಅವರು ಹೇಗೆ ಸತ್ಫಲವನ್ನು ಪಡೆದರು ಎಂಬಂತಹ ಅನೇಕ ಉದಾಹರಣೆಗಳು ಅಲ್ಲಿ ಕಂಡುಬರುತ್ತವೆ. ಅವುಗಳನ್ನು ತಿಳಿದುಕೊಂಡು ಅನುಸರಿಸುವುದು ಸುತ್ತು ಬಳಸಿನ ಮತ್ತು ಫಲವಿಲ್ಲದ ದಾರಿ. ಏಕೆಂದರೆ ನಮ್ಮ ಬದುಕಿನಲ್ಲಿ ಪ್ರತಿಯೊಂದು ಸನ್ನಿವೇಶಕ್ಕೆ ತಕ್ಕಂತಹ ಉದಾಹರಣೆ ಸಿಗದಿರಬಹುದು, ಅಂತಹವುಗಳು ಇದ್ದರೂ ಆ ಕ್ಷಣದಲ್ಲಿ ನೆನಪಿಗೆ ಬರದಿರಬಹುದು, ಬಂದರೂ ಮನಸ್ಸು ಆ ಉದಾಹರಣೆಗಳಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುತ್ತದೆಯೇ ಹೊರತು ಆ ಬ್ರಹ್ಮನನ್ನು ಕಂಡುಕೊಳ್ಳುವುದರಲ್ಲಿ ತೊಡಗುವುದಿಲ್ಲ.
ಈ ರೀತಿಯಾಗಿ ವೇದ ಶಾಸ್ತ್ರ, ಆಗಮ ಪುರಾಣಗಳೆಲ್ಲವೂ ಯಾವ ಕೆಲಸಕ್ಕೂ ಬಾರದವಾಗುತ್ತವೆ. ಏಕೆಂದರೆ ಇದೆಲ್ಲಕ್ಕೂ ಮೂಲವಾದದ್ದು ನಮ್ಮ ಮನಸ್ಸು. ಆ ಮನಸ್ಸಿನ ಗತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಜಿಜ್ಞಾಸೆ ಮತ್ತು ಆಳವಾದ ಹಂಬಲವಿಲ್ಲದಿದ್ದರೆ ಈ ಎಲ್ಲ ಗ್ರಂಥಗಳು ಕೇವಲ ಶಬ್ದಜಾಲಗಳಾಗಿ ಉಳಿಯುತ್ತವೆ. ಅವುಗಳ ಹಿಂದೆ ಹೋಗಿ ಬಳಲಬೇಡ ಎಂದು ಶರಣ ಆದಯ್ಯನವರು ಹೇಳುತ್ತಾರೆ. ಅವರ ಸ್ವಂತ ಕಾಣ್ಕೆಯ ಪರಿಣಾಮವೇ ವೇದಾಗಮಗಳೂ ಕೇವಲ ಶಬ್ದ ಜಾಲಗಳು ಎಂದು ಹೇಳುವ ಅವರ ದಿಟ್ಟತನ.

Friday, January 20, 2012

Vachana 73: Kombeyamelana Markatadante - My Wandering Mind


ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ, ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ

TRANSLITERATION

koMbeya mElaNa markaTadaMte laMghisuvudenna manavu
niMdalli nilalIyadenna manavu
hoMdidalli hoMdalIyadenna manavu
kUDaladaMgamadEvaa, nimma caraNakamaladalli bhramaranaagirisu nimma dharma


CLICK HERE TO READ ALONG:

http://www.youtube.com/watch?v=NuxVXuG9Fgg&feature=youtu.be


TRANSLATION (WORDS)

koMbeya (of the branch) mElaNa ( on top) markaTanaMte(like a monkey) laMghisuvudu (jumps) enna (my) manavu (mind)
niMdalli (in one place) nilalIyadu (won’t stay put) enna (my) manavu(mind)
hoMdidalli (established, structured) hoMdalIyadu (doesn’t stay established, structured) enna( my) manavu(mind)
kUDalasaMgamadEvaa ( Lord Kudalasanagamadeva)
nimma (your) caraNakamaladalli ( in lotus feet) bhramaranaagirisu (make me a bee and keep) nimma dharma (your dharma, something that you have to do)


TRANSLATION

My mind jumps around like a monkey on the branch (of a tree)!
My mind won’t stay put in one place!
My mind does not stay structured where it was structured!
Oh! Lord of Meeting Rivers, make me into a bee and keep me on your lotus feet, it is what you have to do (your Dharma)!


COMMENTARY

In previous Vachanas we addressed the importance of devotion (Bhakti) turning into intense commitment (Nishtey) as the way for self-realization. Our wandering mind comes in the way of developing such commitment. In this Vachana, Basavanna compares the mind to a monkey hopping from branch to branch on a tree. Indeed, our senses provide newer attractions for our mind on a continuous basis. The mind chases them until the novelty of those attractions wear out or a much fancier attraction pops up. We get disappointed when the chased attraction does not yield the pleasure or the wealth expected of it. In general, it becomes hard to keep the mind focused on the ultimate. Basavanna says that his attempts to keep the mind controlled have not been successful and he requests the Lord to convert him into a bee and make him stay put at His lotus feet. Basvanna emphasizes that it is Lord’s dharma to make him stay focused on the Ultimate. Basavanna is expressing complete faith in the Lord. The nature of the Bee is to hop from flower to flower collecting the nectar. It is said that once the Bee tastes the nectar of the Lotus, it does not stray from that flower.

Complete faith in the Lord is considered as the first step in the path of self-realization. Sharanas supported a six fold path for realizing the ultimate, known as Shatstala (Shat = six, Stala = stage). The first stage is known as Bhakta Stala (the stage of faith and intense devotion). The subsequent stages are: Maheswara Stala (strong will and discipline), Prasadi Stala (All Grace), Pranalinga Stala (Presence of the Ultimate in Life breath), Sharana Stala (total surrender), and Aikya Stala (Sublime Union, merging with Him).


Let us conquer the mind monkey!


KANNADA COMMENTARY

ಹಿಂದಿನ ವಚನಗಳಲ್ಲಿ ತನ್ನ ತಾನರಿಯಬೇಕಾದರೆ, ಬಯಲ ಭಾವ ಅಳವಡಬೇಕಾದರೆ, ನಿಷ್ಠೆ ಬಹು ಮುಖ್ಯವಾದದ್ದು ಎಂಬುದನ್ನು ನೋಡಿದೆವು. ಆದರೆ ಈ ನಿಷ್ಠೆಗೆ ಅಡ್ಡಿಯಾಗುವುದು ಎಲ್ಲೆಲ್ಲಿಗೋ ಹಾರುವ ನಮ್ಮ ಮನಸ್ಸು. ಇಲ್ಲಿ ಬಸವಣ್ಣನವರು ಅದರ ಮರ್ಕಟ ಸ್ವಭಾವವನ್ನು ತಿಳಿಸುತ್ತಿರುವರು.

ಮಂಗನನ್ನು ಗಮನಿಸಿದವರೆಲ್ಲರಿಗೂ ತಿಳಿದೇ ಇದೆ ಅದು ಒಂದೆಡೆ ಇರುವುದಿಲ್ಲವೆಂಬುದು. ಅದು ಕೊಂಬೆಯಿಂದ ಕೊಂಬೆಗೆ ಹಾರುತ್ತಲೇ ಇರುತ್ತದೆ, ಹೊಸ ಹೊಸ ಆಕರ್ಷಣೆಗೆ ಒಳಗಾಗುತ್ತಲೇ ಇರುತ್ತದೆ. ಆದರೆ ಆ ಆಕರ್ಷಣೆ ಕೂಡ ತಾತ್ಕಾಲಿಕವಾದದ್ದು. ಅದೇ ರೀತಿಯಾಗಿ ಮನವು ಸಹ ಹೊಸ ಹೊಸ ಆಕರ್ಷಣೆಗೆ ಒಳಗಾಗಿ ಕೆಲ ಹೊತ್ತು ಅವುಗಳ ಬೆನ್ನು ಹತ್ತಿ ಅಲೆದಾಡುತ್ತದೆ. ಬಹು ಬೇಗ ಆ ಆಕರ್ಷಣೆ ಇಲ್ಲವಾಗುತ್ತದೆ. ಮನಸ್ಸು ಅತೃಪ್ತಿಯಿಂದ ಮತ್ತೆ ಹೊಸದರ ಹಿಂದೆ ಓಡುತ್ತದೆ. ಮನಬಂದಂತೆ ಹಾರಾಡಿ ಘಾಸಿಗೊಳ್ಳುತ್ತದೆ. ಹಾಗಾದಾಗ ಕಷ್ಟಪಟ್ಟು ಅದನ್ನು ವ್ಯವಸ್ಥಿತಗೊಳಿಸಿ ಒಂದೆಡೆ ಇರುವಂತೆ ಮಾಡಿದರೂ ಅದು ಅಲ್ಲಿ ಇರುವುದಿಲ್ಲ. ತನ್ನ ಹಾರಾಟದ ಸ್ವಭಾವವನ್ನು ಬಿಡುವುದಿಲ್ಲ. ಇಂದ್ರಿಯಗಳಿಗೆ ಪಕ್ಕಾಗಿ ನಾನಾಕಡೆ ಓಡುತ್ತದೆ. ಅದನ್ನು ಒಂದೆಡೆ ಇರಿಸಲು ಹೆಣಗಾಡಿ ಸೋತು ಕೊನೆಗೆ ಕೂಡಲಸಂಗಮನನ್ನೇ ಮೊರೆ ಹೋಗುತ್ತಾರೆ. ಆತನಿಗೆ ಶರಣಾಗಿ ಆತನ ಚರಣಕಮಲದಲ್ಲಿ ಭ್ರಮರನಾಗಿರಿಸು ಎಂದು ಕೇಳಿಕೊಳ್ಳುತ್ತಾರೆ. ಭ್ರಮರವು ಅನೇಕ ಹೂವುಗಳಿಗೆ ಎರಗುತ್ತದೆ. ಆದರೆ ಅದಕ್ಕೆ ತೃಪ್ತಿ ಸಿಗುವುದಿಲ್ಲ. ಆದರೆ ಅದು ಒಮ್ಮೆ ಕಮಲದ ಮಧುವನ್ನು ರುಚಿ ನೋಡಿದ ಮೇಲೆ ತೃಪ್ತಿಗೊಂಡು ಅಲ್ಲಿಯೇ ಇದ್ದು ಬಿಡುತ್ತದೆ. ಅದೇ ರೀತಿಯಾಗಿ ತನ್ನ ಮನಸ್ಸೆಂಬ ಭ್ರಮರನನ್ನು ದೇವರ ಚರಣಕಮಲದಲ್ಲಿ ನಿಲ್ಲ್ಲುವಂತೆ ಮಾಡೆಂದು ಕೇಳುತ್ತಿದ್ದಾರೆ ಬಸವಣ್ಣನವರು.

ವೀರಶೈವ ಧರ್ಮದಲ್ಲಿ ಷಟ್ಸ್ಥಲ ಎಂಬ ಒಂದು ಸಿದ್ಧಾಂತವಿದೆ. ಷಟ್ಸ್ಥಲವೆಂದರೆ ಆರು ಸೋಪಾನಗಳೆಂದು ಹೇಳಬಹುದು. ಭಕ್ತನು ದೇವರೊಂದಿಗೆ ಒಂದಾಗುವವರೆಗೆ ಕರೆದೊಯ್ಯುವ ಸೋಪಾನಗಳು. ಅವುಗಳಲ್ಲಿ ಮೊದಲನೆಯದು ಭಕ್ತ ಸ್ಥಲ. ವಚನಕಾರರ ವಚನಗಳನ್ನು, ಅವುಗಳಲ್ಲಿ ವ್ಯಕ್ತವಾದ ಭಾವಕ್ಕನುಗುಣವಾಗಿ ಷಟ್ಸ್ಥಲದ ವಚನಗಳಲ್ಲಿ ವಿಭಾಗಿಸಿದ್ದಾರೆ. ಈ ಮೇಲಿನ ವಚನವು ಭಕ್ತಸ್ಥಲದ ವಚನವಾಗಿದೆ. ಇಲ್ಲಿ ದೇವರಲ್ಲಿ ಭಕ್ತಿ ಇದ್ದು ವಿಶ್ವಾಸವಿರುತ್ತದೆ. ಆತನು ತನ್ನನ್ನು ಕಾಪಾಡುತ್ತಾನೆ ಎಂದು ನಂಬಿ ಭಕ್ತನು ಆತನನ್ನು ಪ್ರಾರ್ಥಿಸುತ್ತಾನೆ. ಅದನ್ನೇ ಇಲ್ಲಿ ಕಾಣಬಹುದು. ಅಧ್ಯಾತ್ಮದ ದಾರಿಯಲ್ಲಿ ಇದು ಮೊದಲನೆ ಮೆಟ್ಟಿಲು.






Friday, January 13, 2012

Vachana 72: Olidu Olisikollabeku - Love to be loved


ಒಲಿದು ಒಲಿಸಿಕೊಳ್ಳಬೇಕು, ಒಲಿದಲ್ಲದೆ ಇಲ್ಲ.
ಹಲವು ಕೊಂಬೆಗೆ ಹಾರದಿರು ಮರುಳೇ
ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ,
ಅಟ್ಟಿದಡೆ, ಒತ್ತಿದಡೆ ನಿಷ್ಠೆಯ ಬಿಡದಿರ್ದಡೆ ತನ್ನನೀವ ಮಹಾಲಿಂಗ ಕಲ್ಲೇಶ್ವರ

TRANSLITERATION

Olidu olisikoLLabEku, olidallade illa.
Halavu oMbegaLige haaradiru maruLE.
aTTi nODuva, muTTi nODuva, taTTi nODuva, otti nODuva,
aTTidaDe, ottidaDe niShTheya biDadirdaDe tannanIva mahaliMga kallEshvara


CLICK HERE TO READ ALONG:

http://www.youtube.com/watch?v=V4u9F1UZO8U&list=UUY069_ad4eRWlT26ttaAszQ&index=1&feature=plcp


TRANSLATION (WORDS)

olidu (love) olisikoLLabEku, (to be loved) olidallade (without loving) illa (not)
halavu (many) koMbege (branches) haaradiru (don’t jump) maruLE (you fool)
aTTi (expel) nODuva (he will see) muTTi (touch) nODuva (he will see) taTTi (knock) nODuva (he will see), otti (squeeze, press) nODuva (he will see)
aTTidaDe (if expelled) ottidaDe (if squeezed) niShTheya ( commitment) biDadirdaDe (if not abandoned) tannanIva (will bestow himself) mahaaliMga kallESvara (Lord Mahalinga kalleshvara)


TRANSLATION

Love to be loved, without loving it cannot be.
Do not jump from branch to branch, you fool!
He will expel and see, He will touch and see, He will knock and see, He will squeeze and see.
If commitment is not abandoned when expelled and squeezed, Lord Mahalinga kalleshvara will bestow Himself!


COMMENTARY

This Vachana from Sharana Haavinahaala kallayya stresses the importance of ‘commitment’ (niShThe) to reach the Lord (i.e. realize self). He says one has to love (others) to be loved (by them), without loving it is not possible to receive love from others. We have roughly translated the word ‘Olidu’ as ‘love’. In this Vachana’s context it could be ‘faith, belief, affection, single mindedness’. Essentially, one has to have a deep love for the Lord to receive His love. Kallayya compares the state of our mind to a monkey constantly jumping from one branch to the other and cautions against it, implying focusing single mindedly on the Truth (the Lord). When our commitment is not deep enough, we feel that the Lord tests us by expelling, touching, knocking and squeezing. This is how a non-committed devotee attributes all occurings in life to the Lord. But, if one does not abandon commitment, Kallayya says that the Lord will bestow Himself on the devotee.

Essentially, one has to have a deep love (faith) in the Truth (the Lord). Only through this deep unconditional love without any expectations, and commitment one can realize the Truth. Without the deep commitment, our mind tends to stray towards other branches of desires forgetting the main goal. Even when one tends to return to the main goal, lack of constant commitment will only result in undesired consequences. We even feel that the Lord is posing these problems on us. The key then is to develop an unwavering commitment to seek the Truth. With such commitment, all the so called undesired consequences lose their effect on us and the Lord bestows Himself.


Let us Love to be Loved!


KANNADA COMMENTARY

ನಿಷ್ಠೆಯ ಬಗ್ಗೆ ಇನ್ನೊಂದು ವಚನ ಹಾವಿನಹಾಳ ಕಲ್ಲಯ್ಯನವರದ್ದು. ಇಲ್ಲಿ ಆ ಸತ್ಯಕ್ಕೆ ಒಲಿದು ಒಲಿಸಿಕೊಳ್ಳುವ ನಡುವಿನ ಪ್ರಕ್ರಿಯೆಯ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಮೊದಲು ಆ ಸತ್ಯದ ಬಗ್ಗೆ ನಮ್ಮಲ್ಲಿ ಒಲವು ಇರಬೇಕು. ಆ ಒಲವಿನ ಮೂಲಕವೇ ಅದನ್ನು ಒಲಿಸಿಕೊಳ್ಳಲು ಸಾಧ್ಯವೇ ಹೊರತು ಇಲ್ಲದಿದ್ದರೆ ಅದು ನಮಗೆ ಒಲಿಯುವುದಿಲ್ಲವೆನ್ನುತ್ತಾರೆ ಕಲ್ಲಯ್ಯನವರು. ಆ ಸತ್ಯವನ್ನು ಕಂಡುಕೊಳ್ಳಬೇಕು ಎನ್ನುವ ಬಯಕೆ ಎಲ್ಲರ ಮನದಲ್ಲೂ ಇರಬಹುದು. ಆದರೆ ಅದು ಆಳವಾಗಿರುವುದಿಲ್ಲ. ಆದ್ದರಿಂದ ಬಹು ಬೇಗ ಅದು ಬೇರೆ ಕಡೆಗೆ ತಿರುಗಿಕೊಳ್ಳುತ್ತದೆ. ಮನಸ್ಸು ಬಯಕೆಯ ಇತರ ಕೊಂಬೆಗಳಿಗೆ ಹಾರುತ್ತದೆ, ಮತ್ತು ಮೂಲ ಆಶಯವನ್ನೇ ಮರೆತುಬಿಡುತ್ತದೆ. ಆಗಾಗ ಅದು ಹಿಂತಿರುಗಿ ಮೂಲ ಆಶಯಕ್ಕೆ ಬಂದರೂ ಅಲ್ಲಿ ನಿರಂತರವಾದ ನಿಷ್ಠೆ ಯಿರುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಮಗೆ ನಾನಾ ತೊಂದರೆಗಳು ಬರುತ್ತವೆ. ಅವೆಲ್ಲ ನಮ್ಮ ಮನಸ್ಸಿನ ಅಲೆಯುವಿಕೆಯ ಕಾರಣದಿಂದಲೇ ಉಂಟಾಗುವಂತಹವು. ಆದರೆ, ನಮ್ಮಲ್ಲಿ ಆ ನಿಷ್ಠೆಯಿಲ್ಲದ್ದರಿಂದ ಆ ದೇವರೇ ನಮಗೆ ಕಷ್ಟಕೊಡುತ್ತಿದ್ದಾನೆ ಎನ್ನಿಸುತ್ತದೆ. ಅದನ್ನೇ ಇಲ್ಲಿ ಕಲ್ಲಯ್ಯನವರು “ಅಟ್ಟಿ ನೋಡುವ” ಎಂದು ಹೇಳುತ್ತಿದ್ದಾರೆ. ಆ ಸತ್ಯದಲ್ಲಿ ನಿಷ್ಠೆಯಿಲ್ಲದಿದ್ದಾಗ ಆ ದೇವರ ಮೇಲೆಯೇ ನಮಗೆ ಕೋಪಬರುತ್ತದೆ. ಆತನು ನಮ್ಮನ್ನು ದೂರ ಹೋಗುವಂತೆ ಮಾಡುತ್ತಾನೆ. ಇನ್ನು ಕೆಲವುಸಲ ಮುಟ್ಟಿ ನೋಡುತ್ತಾನೆ. ಎಂದರೆ ಪ್ರೀತಿಯನ್ನು ತೋರುತ್ತಾನೆ. ನಮ್ಮನ್ನು ಮುಟ್ಟಿ ತನ್ನ ಇರುವಿಕೆಯ ಅರಿವುಂಟುಮಾಡುತ್ತಾನೆ. ಆದರೆ ಆ ಸ್ಪರ್ಶ ಬಹು ಸೂಕ್ಷ್ಮವಾಗಿರುತ್ತದೆ. ನಿಷ್ಠೆಯಿಲ್ಲದಿದ್ದರೆ ಅದನ್ನು ಗುರುತಿಸುವುದು ಕಷ್ಠವೇ. ನಮ್ಮನ್ನು ಹೊಡೆದೂ ನೋಡುತ್ತಾನೆ, ಒತ್ತಿಯೂ ನೋಡುತ್ತಾನೆ. ಇವುಗಳು ನಿಷ್ಠೆಯಿಲ್ಲದಿದ್ದರೆ ಅನುಭವಕ್ಕೆ ಬರುವ ಸ್ಥಿತಿಗಳು. ಈ ಎಲ್ಲವುಗಳ ನಡುವೆಯೂ ಸತ್ಯದ ಬಗ್ಗೆ ಒಲವು ನಿರಂತರವಾಗಿ ಕಾಪಾಡಿಕೊಳ್ಳುವುದು ಮುಖ್ಯ.  ಇಲ್ಲಿ ಒಲವು ಎನ್ನುವ ಪದ ಮುಖ್ಯವಾದದ್ದು. ಯಾವುದೇ ಸ್ವಾರ್ಥವಿಲ್ಲದೆ ಇರುವುದೇ ಒಲವು, ಲಾಭದ ಆಸೆಯಿಲ್ಲದಿರುವುದು, ನಿರ್ವ್ಯಾಜ ಪ್ರೇಮ. ದೇವರು ನನಗೆ ಇಂತಿಂತಹುದನ್ನು ದಯಪಾಲಿಸುತ್ತಾನೆ ಎಂದುಕೊಂಡು ಮಾಡುವುದು ನಿಷ್ಠೆಯಲ್ಲ. ಆದ್ದರಿಂದಲೇ ಇಲ್ಲಿ ಕಲ್ಲಯ್ಯನವರು ನಕಾರಾತ್ಮಕವಾದ ವಿಷಯಗಳನ್ನೇ “ ಅಟ್ಟಿ, ತಟ್ಟಿ, ಒತ್ತಿ ನೋಡುವ’” ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲ ನಡೆದ ಮೇಲೂ ಆತನ ಬಗ್ಗೆ ಒಲವು ತೋರಿದರೆ ಆತನು ತನ್ನನ್ನೇ ಭಕ್ತನಿಗೆ ಕೊಟ್ಟುಕೊಳ್ಳುತ್ತಾನೆ ಎನ್ನುತ್ತಾರೆ. ಏಕೆಂದರೆ ನಿಷ್ಠೆಯಿದ್ದಾಗ ’ಆತನು ತನ್ನಿಂದ ಬೇರೆ, ನನ್ನನ್ನು ಅಟ್ಟುತ್ತಿದ್ದಾನೆ, ತಟ್ಟುತ್ತಿದ್ದಾನೆ, ಒತ್ತುತ್ತಿದ್ದಾನೆ ’ ಎನ್ನುವ ಭಾವಗಳಿಗೆ ಅಲ್ಲಿ ಸ್ಥಾನವೇ ಇರುವುದಿಲ್ಲ. ಅಲ್ಲಿ ಅಭಿನ್ನ ಭಾವ ಮನೆಮಾಡಿರುತ್ತದೆ.










Friday, January 6, 2012

Vachana 71: Kurupi Surupiya – Intense devotion



ಕುರೂಪಿ ಸುರೂಪಿಯ ನೆನೆದಡೆ ಸುರೂಪಿಯಪ್ಪನೆ?
ಆ ಸುರೂಪಿ ಕುರೂಪಿಯ ನೆನೆದಡೆ ಕುರೂಪಿಯಪ್ಪನೆ?
ಧನ ಉಳ್ಳವರ ನೆನೆದಡೆ ದರಿದ್ರ ಹೋಹುದೆ?
ಪುರಾತರ ನೆನೆದು ಕೃತಾರ್ಥರಾದೆವೆಂಬರು;
ತಮ್ಮಲ್ಲಿ ಭಕ್ತಿ ನಿಷ್ಠೆಯಿಲ್ಲದವರ ಕಂಡಡೆ ಮೆಚ್ಚನು ನಮ್ಮ ಗುಹೇಶ್ವರನು


TRANSLITERATION

kurUpi surUpiya nenedaDe surUpiyappane?
aa surUopi kurUpiya nenedaDe kurUpiappane?
dhana uLLavara nenedaDe daridra hOhude?
Puraatara nenedu kRutaartharaadeveMbaru;
Tammalli bhakti niShTheyilladavara kaMDaDe meccanu namma guhEshvaranu

CLICK HERE TO HEAR IT:

http://www.youtube.com/watch?v=0P-YlbITpdM&feature=youtu.be

TRANSLATION (WORDS)

kurUpi (an ugly person) surUpiya (a good looking person)nenedaDe (if thinks of) surUpiyappane? (will ugly person become good looking?)
aa surUpi (that good looking person)kurUpiya (an ugly person) nenedaDe (if thinks of) kurUpiyappane?(will become ugly?)
Dhana uLLavara (wealthy people)nenedaDe (by thinking of) daridra (poverty) hOhude? (will disappear?)
Puraatara (earlier/past devotees) nenedu (thinking of, by remembering) kRutaartharaadeveMbaru; (they say they are accomplished;)
Tammalli (in one’s own self) bhakti (devotion) niShThe (being one with, observation, commitment,dedication) illadavara (those without) kaMDaDe (if seen, if comes to know) meccanu (will not approve) namma (our) guhEshvaranu (Lord of Caves)


TRANSLATION

Does an ugly person become good looking by thinking of a good looking person?
Does a good looking person become ugly by thinking of an ugly person?
Will the poverty disappear by thinking of wealthy people?
They say they are accomplished just by thinking of past devotees!
Lord Guheshvara will not approve of those without being one with their own selves!

COMMENTARY

In this Vachana Allama Prabhu uses two important words: bhakti (devotion) and niShThe (commitment/dedication). He stresses that the devotion should eventually take the intense form to make the devotee becoming one with his own self. Bhakti which begins with belief/faith has to turn into commitment & self enquiry. One should examine oneself for the grounds of his devotion, without which devotion will be ignorance.  Just as an ugly person does not become good looking just by thinking about a good looking person and vice versa, and one does not get out of poverty just by thinking of wealthy individuals, a devotee does not become an accomplished one just by thinking of past accomplished devotees. One has to follow the rigorous path that the past devotees followed to accomplish what they did. An individual on the path of self-realization must get away from the mundane want and need pitfalls, must stay strong while facing life’s pains and pleasures, and stay dedicated to the exploration of the self with utmost commitment. Allama prabhu says that the Lord will not approve of those without the firmness and belief in one self. The firmness and belief simply mean the honest observation of one self. Such observation requires the stabilization of mind (i.e. not allowing the mind to wander), perseverance and intense practice. Thus, committed devotion is the path for self-realization.
Although the Vachana speaks of self-realization, the message is equally valid for all the activities we are involved in our daily lives. Success in our activities is only brought about by intense devotion to the activity.


Let us develop the honesty and integrity to commit fully to whatever we do!

KANNADA COMMENTARY

ವಚನ ಸಾಹಿತ್ಯವನ್ನು ಓದುವಾಗ ಈ ನಿಷ್ಠೆಯ ಬಗ್ಗೆ  ಅನೇಕ  ವಚನಕಾರರ ವಚನಗಳು ಸಿಗುತ್ತವೆ. ಅವರೆಲ್ಲರೂ ಭಕ್ತಿಗಿಂತಲೂ ನಿಷ್ಠೆಗೆ ಹೆಚ್ಚು ಮಹತ್ವ ಕೊಟ್ಟದ್ದು ಕಂಡುಬರುತ್ತದೆ. ಇಲ್ಲಿ ನಿಷ್ಠೆಯ ಬಗ್ಗೆ ಅಲ್ಲಮ ಪ್ರಭುಗಳ ಇನ್ನೊಂದು ವಚನವಿದೆ. ಈ ವಚನದಲ್ಲಿ ಅವರು  ಕೆಲವು ಉದಾಹರಣೆಗಳೊಂದಿಗೆ ನಿಷ್ಠೆಯ ಮಹತ್ವವನ್ನು ಹೇಳುತ್ತಾರೆ.  

ಪುರಾತರನ್ನು, ಎಂದರೆ, ಹಿಂದೆ ಆಗಿಹೋದ ಶರಣರನ್ನು ನೆನೆದು ನಾವು ಕೃತಾರ್ಥರಾದೆವು ಎಂದುಕೊಳ್ಳುವವರು ಅನೇಕರಿದ್ದಾರೆ.  ಆದರೆ ಅದು ಹೇಗೆ ಸಾಧ್ಯ? ಕುರೂಪಿಯೊಬ್ಬನು ಸ್ಫುರದ್ರೂಪಿಯನ್ನು ನೆನೆಯುತ್ತಿದ್ದರೆ ಆತನು ಸುರೂಪಿಯಾಗಲು ಸಾಧ್ಯವೆ? ಹಾಗೆಯೇ ಸುರೂಪಿಯೊಬ್ಬನು ಕುರೂಪಿಯನ್ನು ನೆನೆದರೆ ಕುರೂಪಿಯಾಗಲು ಸಾಧ್ಯವೆ? ಧನಿಕರನ್ನು ನೆನೆಯುವ ಮಾತ್ರದಿಂದಲೇ ದಾರಿದ್ರ್ಯ ತೊಲಗುವುದೆ? ತನ್ನಲ್ಲಿಯೇ ನಿಷ್ಠೆಯಿಲ್ಲದವನನ್ನು  ಗುಹೇಶ್ವರನು ಮೆಚ್ಚುವುದಿಲ್ಲ ಎನ್ನುತ್ತಾರೆ ಅಲ್ಲಮಪ್ರಭುಗಳು. ಆದ್ದರಿಂದ ನಿಷ್ಠೆಯು ಭಕ್ತಿಗಿಂತಲೂ ಮುಖ್ಯವಾದದ್ದು. ಇಲ್ಲಿ ಕೊಟ್ಟಿರುವ ಉದಾಹರಣೆಗಳಿಂದಲೇ, ಭಕ್ತಿಯಲ್ಲಿ , ಭಾವನಾತ್ಮಕತೆ ಮತ್ತು ಮೌಢ್ಯವಿದೆ ಎನ್ನುವುದು ತಿಳಿಯುತ್ತದೆ.  ಸುರೂಪಿಯನ್ನು ನೆನೆಯುವುದರಿಂದ ತಾನೂ ಸುರೂಪಿಯಾಗುತ್ತೇನೆ ಎಂದುಕೊಳ್ಳುವುದು ಮೌಢ್ಯ. ಅದು ಸಾಧ್ಯವಿಲ್ಲ. ಕೇವಲ ಹಿಂದಿನ ಭಕ್ತರನ್ನು ನೆನೆದು ತಾನು ಕೃತಾರ್ಥನಾಗುತ್ತೇನೆ ಎನ್ನುವುದು ಸಹ ಹಾಗೆಯೇ. ಅವರನ್ನು ಕೇವಲ ನೆನೆಯದೆ ಅವರು ಬಾಳಿದ ರೀತಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಲ್ಲಮರು ಇಲ್ಲಿ ಭಕ್ತಿನಿಷ್ಠೆ ಎಂಬ ಪದವನ್ನು ಬಳಸಿದ್ದಾರೆ.  ಆರಂಭದಲ್ಲಿ ಭಕ್ತಿಯು ಬೇಕಾಗುತ್ತದೆ. ಅಂದರೆ ಒಳ್ಳೆಯದರಲ್ಲಿ ನಂಬಿಕೆ ಬೇಕಾಗುತ್ತದೆ. ಆದರೆ ಅದು ಮುಂದುವರಿದು ನಿಷ್ಠೆಯಾಗಬೇಕು. ಭಕ್ತಿಯಲ್ಲಿಯೇ ಉಳಿದರೆ ಅದು ನಿಂತ ನೀರಾಗುತ್ತದೆ, ಮೂಢ ನಂಬಿಕೆಯಾಗುತ್ತದೆ. 

ತಮ್ಮಲ್ಲಿಯೇ ತಮಗೆ ನಂಬಿಕೆಯಿಲ್ಲದವರನ್ನು, ತಮ್ಮಲ್ಲಿ ದೃಢತೆಯಿಲ್ಲದವರನ್ನು ಗುಹೇಶ್ವರನು ಮೆಚ್ಚನು ಎನ್ನುತ್ತಾರೆ ಅಲ್ಲಮ ಪ್ರಭುಗಳು. ಸೂಕ್ಷ್ಮವಾಗಿ ಗಮನಿಸಿದಾಗ, ತಮ್ಮಲ್ಲಿ ದೃಢತೆ ಮತ್ತು ನಂಬಿಕೆಯಿಲ್ಲದವರು ಮೌಢ್ಯಕ್ಕೆ ಒಳಗಾಗುತ್ತಾರೆ ಎನ್ನುವುದು ತಿಳಿದುಬರುತ್ತದೆ.  ತಮ್ಮಲ್ಲಿ ದೃಢತೆಯಿರುವುದು ಎಂದರೇನು? ಮನಸ್ಸನ್ನು ಪ್ರಾಮಾಣಿಕವಾಗಿ ಗಮನಿಸುವುದರಲ್ಲಿ ತೊಡಗಿಸುವುದು. ಇದಕ್ಕೆ ಆತ್ಮಬಲ ಬೇಕು. ಮನಸ್ಸು ಬಹು ಬೇಗ ಅತ್ತಿತ್ತ ಹರಿದಾಡುತ್ತದೆ. ಎಲ್ಲೆಲ್ಲಿಯೋ ಜಾರಿ ಹೋಗುತ್ತದೆ. ಇಲ್ಲವೆ ಮೂರ್ತವಾದದ್ದೇನನ್ನೋ ಬಯಸುತ್ತದೆ. ಆದರೆ ಅಮೂರ್ತವಾದ ಆ ಸತ್ಯವನ್ನು ಮೂರ್ತದಲ್ಲಿ ಪಡೆಯುತ್ತೇನೆ ಎನ್ನುವುದು ಕೂಡ ಮೂರ್ಖತನವೆ. ಆ ಅಮೂರ್ತದಲ್ಲಿ ದೃಢತೆಯನ್ನು ಕಾಪಾಡಿಕೊಳ್ಳುವುದು ಕಷ್ಟ. ಆದರೆ ದೃಢತೆಯಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಅಂತಹವನನ್ನು ಗುಹೇಶ್ವರನು ಮೆಚ್ಚುವುದಿಲ್ಲ. ದೃಢತೆಯಿಲ್ಲದವನು ಹರಿದ ಗೋಣಿಯಂತೆ. ಅಲ್ಲಿ ಇದ್ದದ್ದೆಲ್ಲವೂ ಕಳೆದುಹೋಗುತ್ತದೆ.