Friday, October 21, 2011

Vachana 60: Indriya Nigrahava Maadidade - Sense Control


ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವುವು ಪಂಚೇಂದ್ರಿಯಂಗಳು
ಸತಿಪತಿ ರತಿಸುಖವ ಬಿಟ್ಟರೆ ಸಿರಿಯಾಳ ಚಂಗಳೆಯರು?
ಸತಿಪತಿ ರತಿ ಭೋಗೋಪವಿಳಾಸವ ಬಿಟ್ಟನೆ ಸಿಂಧುಬಲ್ಲಾಳನು?
ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳೆಸಿದಡೆ,
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ


TRANSLITERATION

iMdriya nigrahava mADidaDe hoMduvavu dOShaMgaLu,
muMde baMdu kADuvuvu paMcEMdriyaMgaLu
satipati ratisuKava biTTare siriyALa caMgaLeyaru?
satipati rati BOgOpaviLAsava biTTane siMdhuballALanu?
nimma muTTi paradhana-parasatiyarigeLesidaDe,
nimma caraNakke dUra kUDalasaMgamadEva


CLICK HERE TO HEAR IT:

http://www.youtube.com/watch?v=7lesVi0hILU

TRANSLATION

iMdriya(sense organ) nigrahava (control) mADidaDe(if done) hoMduvavu(will become) dOShaMgaLu (faultier, defective),
muMde baMdu(come forth) kADuvuvu(trouble) paMcEMdriyaMgaLu(five senses)
satipati(husband and wife) ratisuKava(sensual pleasure) biTTare(give up) siriyALa caMgaLeyaru (siriyala and chengale)?
Satipati(husband and wife) rati BOgOpaviLAsava(sensual pleasure) biTTane(give up) siMdhuballALanu(Sinduballala)?
Nimma(with You) muTTi(in touch, in contact) paradhana (other’s wealth) –parasatiyarige (other’s wife) eLesidaDe(if longed for),
Nimma(Your) caraNakke(feet) dUra(far away) kUDalasaMgamadEva(Lord KudalaSangamaDeva)


Sense organs if controlled become faultier (defective),
And come forth to trouble the five senses.
Did Siriyala and Changale give up the sensual pleasure of husband and wife?
Did Sinduballala give up the sensual pleasure of husband and wife?
After touching You, if I long for other’s wealth and wife,
I will get far away from your feet, Oh! Lord Kudalasangamadeva!


COMMENTARY

In Vachana 59, Sharana Shanmuka Swamy wondered as to what would be the fate of the man with five sense organs, if an animal with one organ can get destroyed by it. The implication is that the way to avoid destruction is to control sense organs. In this Vachana, Basavanna says that controlling the sense organs is not the way, because if they are controlled, all the five senses become faultier. He uses two couples as examples to say that they continued to enjoy the normal lives of husband and wife yet became ardent devotees of the Lord and self-realized individuals. Basavanna ends this Vachana with the statement that if we aspire for what does not belong to us, we get away from the Lord we already have realized.

When we examine the concept of controlling the sense organs further, we see that we have created a separation between the organs which are to be controlled and the individual who is controlling them. The controller is full of ‘desire’ to control the organs. This desire leads to the illusion (maye) making the sense organs faultier. A better approach would be to utilize the sense organs for the activity they are designed for in an appropriate way (i.e. ‘sublimate’ rather than ‘control’). This is illustrated by the example of two couples in this Vachana. They were well within the realm of daily living utilizing the sense organs appropriately while concentrating on the spiritual path. The last sentence of the Vachana illustrates the ‘appropriateness’. Other’s wealth and other’s wife are symbolic of materials that are beyond one’s needs. Anything above what is absolutely needed belongs to others. Aspiring for the material belonging to others is pushing the sense organs to the undesired limits, which leads us away from the godliness we might have already achieved. The message then is, neither ‘control’ the sense organs, nor become their ‘slave’, but sublimate them with the right (appropriate) usage.


Let us develop the awareness of the appropriate sense!


KANNADA COMMENTARY


ಇಂದ್ರಿಯ ನಿಗ್ರಹಮಾಡುವುದು ಅಪಾಯಕಾರಿ ಎನ್ನುತ್ತಾರೆ ಬಸವಣ್ಣನವರು. ನಿಗ್ರಹಿಸಿದರೆ ಇಂದ್ರಿಯಗಳು ದೋಷಯುಕ್ತವಾಗುತ್ತವೆ. ಅಂದರೆ ಅವುಗಳನ್ನು ತುಳಿದಿಟ್ಟರೆ ಅವು ಹೆಚ್ಚು ಪ್ರಬಲಗೊಂಡು ಹೆಡೆ ಎತ್ತುತ್ತವೆ. ಅವು ತಮ್ಮ ಸಹಜತೆಯನ್ನು ಕಳೆದುಕೊಂಡು ಹೆಚ್ಚು ಆವೇಶಗೊಳ್ಳುತ್ತವೆ. ಅವುಗಳನ್ನು ಶಮನಗೊಳಿಸುವುದು ಇನ್ನೂ ಕಷ್ಟವಾಗುತ್ತದೆ. ಮನದಲ್ಲಿ ಇಂದ್ರಿಯಗಳ ಆಸೆಗಳನ್ನು ಮುಚ್ಚಿಟ್ಟು ಮೇಲೆ ಏನೂ ಇಲ್ಲವೆಂಬಂತೆ ಆಚರಿಸುವುದು ವ್ಯಕ್ತಿಯನ್ನು ಅಡ್ಡದಾರಿಗೆ ಹಚ್ಚುತ್ತದೆ. ಆ ಆಸೆಗಳು ಭೂತಾಕಾರವಾಗಿ ಕಾಡುತ್ತವೆ. ಅಲ್ಲಿ ಮೋಸ ಕಪಟಗಳು ಮನೆಮಾಡುತ್ತವೆ. ವ್ಯಕ್ತಿಯು ಮಾನಸಿಕವಾಗಿ ಬಳಲುತ್ತಾನೆ.


ಇಲ್ಲಿ ನಾವು “ನಿಗ್ರಹ”ಎಂದರೇನು ಮತ್ತು ಏಕೆ ನಿಗ್ರಹಿಸಬಾರದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಹಿಂದೆ ನಾವು “ಮನದ ಮುಂದಣ ಆಸೆಯೇ ಮಾಯೆ” ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ. ಈಗ ನಿಗ್ರಹಕ್ಕೆ ಬರೋಣ. “ಇಂದ್ರಿಯ ನಿಗ್ರಹ ಮಾಡುವುದು” ಎಂಬಲ್ಲಿ ಇಂದ್ರಿಯಗಳು ಬೇರೆ ಮತ್ತು ನಿಗ್ರಹ ಮಾಡುವವನು ಬೇರೆ ಎಂದು ತಿಳಿಯುತ್ತದೆ. ಎಂದರೆ ಅಲ್ಲಿ ವಿಭಜನೆಯಿದೆ, ಐಕ್ಯತೆ ಇಲ್ಲ, ಎಂದು ಅರ್ಥವಾಗುತ್ತದೆ. ನಿಗ್ರಹ ಮಾಡುವವರು ಯಾರು? ಎಂದು ಕೇಳುತ್ತಾರೆ ಜಿಡ್ಡು ಕೃಷ್ಣಮೂರ್ತಿಯವರು. ನಿಗ್ರಹ ಮಾಡುವವ ನಿಗ್ರಹ ಮಾಡಬೇಕೆಂದು “ಆಸೆ” ಪಡುತ್ತಾನೆ ಎಂದಾಯಿತು. ಅಂದರೆ ನಿಗ್ರಹ ಕೂಡ ಆಸೆಯ ಮತ್ತೊಂದು ರೂಪವೇ. ಅಂದರೆ “ ನಾನು ನನ್ನ ಇಂದ್ರಿಯಗಳನ್ನು ನಿಗ್ರಹಿಸಬೇಕು” ಎನ್ನುವ ಮೂಲಕ ನಾವು ಮತ್ತೆ ಆಸೆಗೆ ಅಂದರೆ ಮಾಯೆಗೆ ಒಳಗಾಗುತ್ತಿದ್ದೇವೆ ಎಂದಾಯಿತು ಅಲ್ಲವೆ? ಇದೇ ಮಹಾ ದೋಷ. ಇದನ್ನೇ ಬಸವಣ್ಣನವರು ಹೇಳುತ್ತಿದ್ದಾರೆ. ಆಸೆಗೆ ಪಕ್ಕಾದ ಇಂದ್ರಿಯಗಳು ದೋಷಕ್ಕೆ ಒಳಗಾಗುತ್ತವೆ.


ಆದ್ದರಿಂದ ಅವುಗಳನ್ನು ತುಳಿದಿಕ್ಕದೆ ಅವುಗಳಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡುವುದೇ ಮೇಲು. ಯಾವುದನ್ನೂ ಅತಿಮಾಡುವುದು ಒಳ್ಳೆಯದಲ್ಲ. ಇಂದ್ರಿಯಗಳನ್ನು ತುಳಿದಿಡದೆ ಅವುಗಳನ್ನು ಅರ್ಥಮಾಡಿಕೊಂಡು ಉದಾತ್ತೀಕರಿಸುವುದು (sublimate) ಸರಿ. ಈ ಸಂದರ್ಭದಲ್ಲಿ ಬಸವಣ್ಣನವರು ಇಬ್ಬರು ಶಿವಭಕ್ತರ ಉದಾಹರಣೆಗಳನ್ನು ಕೊಡುತ್ತಾರೆ. ಸಿರಿಯಾಳ ಚಂಗಳೆಯರು ಮತ್ತು ಸಿಂಧುಬಲ್ಲಾಳ ದಂಪತಿಗಳು ಸತಿಪತಿಯರು ಭೋಗಿಸುವ ರತಿಸುಖವನ್ನು ಬಿಡಲಿಲ್ಲ. ಸತಿಪತಿಗಳಾಗಿ ಪುತ್ರರನ್ನು ಪಡೆದು ಶಿವ ಭಕ್ತಿಯನ್ನೂ ಸಾಧಿಸಿದರು. ಈ ಉದಾಹರಣೆಯ ಮೂಲಕ ಬಸವಣ್ಣನವರು ಇಂದ್ರಿಯಗಳ ಆಸೆಗಳಿಗೆ ಸಲ್ಲಬೇಕಾದ ಸ್ಥಾನವನ್ನು ನೀಡಿ ಅವುಗಳನ್ನು ಉದಾತ್ತೀಕರಿಸುವುದು(sublimate) ಉತ್ತಮವೆಂದು ಹೇಳುತ್ತಿದ್ದಾರೆ.


ನಿಮ್ಮ ಮುಟ್ಟಿ ಪರಧನ-ಪರಸತಿಯರಿಗೆಳೆಸಿದಡೆ ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ” ಎಂದು ಹೇಳುತ್ತಾರೆ ಬಸವಣ್ಣನವರು. ಅಂದರೆ ವ್ಯಕ್ತಿಯು ಪ್ರಾಮಾಣಿಕವಾಗಿ ಕೂಡಲಸಂಗಮನನ್ನು ಹಂಬಲಿಸಿ, ಆತನ ಹೊಳಹನ್ನು(flash)ಕಂಡ ಮೇಲೆಯೂ, ಆತನ ಸಂಪರ್ಕದಲ್ಲಿ ಬಂದಮೇಲೆಯೂ ಇಂದ್ರಿಯಗಳಿಗೆ ವಶನಾಗಿ ನೀತಿಗೆಟ್ಟ ಬದುಕನ್ನು ಬದುಕಿದರೆ, ಆತನು ಆ ದೇವನ ಚರಣಗಳಿಂದ ದೂರಾಗುತ್ತಾನೆ ಎನ್ನುತ್ತಾರೆ. ಇಂದ್ರಿಯಗಳನ್ನು ತುಳಿದಿಡದೆ ಹಾಗೂ ಅವುಗಳಿಗೆ ವಶವಾಗದೆ ಇರುವುದು ಹೇಗೆಂಬುದನ್ನು ಮುಂದಿನ ವಚನದಲ್ಲಿ ನೋಡೋಣ.






4 comments:

  1. My Dear Leela Akka,
    Thanks for your selection of the sequence of the vachanas. As your promised, you and Shiva have selected and interpreted the vachana in the proper sequence to explain "dealing/proper handling of your desires", so you don't become a slave to them. I look forward to the next one.

    ReplyDelete
  2. ನನ್ನ ಪ್ರೀತಿಯ ತಂಗೆವ್ವ ಭಾರತಿ,
    ಆರಿಸುವುದಕ್ಕೆ ಮತ್ತು ವ್ಯಾಖ್ಯಾನಿಸುವುದಕ್ಕೆ ಬೆಲೆ ಬರುವುದು ಓದುಗರು ಅದೇ ಮಟ್ಟದಲ್ಲಿ ಸ್ಪಂದಿಸಿದಾಗ ಮಾತ್ರ. ನಾನು ಸ್ವತಃ ವಚನಗಳನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯಯನ್ನು ಈ ಬ್ಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಅದು ನಿನ್ನ ಹೃದಯ ಮುಟ್ಟುತ್ತಿರುವುದು ಬಹಳ ಸಂತಸದ ವಿಷಯ.

    ReplyDelete
  3. //nimma muTTi paradhana-parasatiyarigeLesidaDe,
    nimma caraNakke dUra kUDalasaMgamadEva //

    Mahabharata/Ramayana's essence in the first line...simple!

    -MCE

    ReplyDelete
  4. Sublimation is the keyword here.

    Thanks.

    Meera

    ReplyDelete