Friday, August 26, 2011

Vachana 52: Kaalali Kattida Gumdu - Ocean of Life

ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
TRANSLITERATION
kAlali kaTTida guMDu, koraLali kaTTida beMDu!
tElalIyadu guMDu, muLugalIyadu beMDu!
iMtappa saMsAraSaradhiya dAMTisi
kAlAMtakanE kAyO, kUDalasaMgayya!
CLICK HERE TO HEAR IT:
kAlali (to the leg) kaTTida (tied) guMDu (round rock), koraLali (to the neck) kaTTida(tied) beMDu!(pith - the central spongy tissue of the stem of a  plant; material that floats)
tElalIyadu (doesn’t allow to float) guMDu(round rock), muLugalIyadu(doesn’t allow to drown) beMDu!(pith)
iMtappa (this kind of, such) saMsAraSaradhiya(ocean of life)  dAMTisi (help me to cross)
kAlA(time, death) aMtakanE (one who ends) kAyO(protect me), kUDalasaMgayya!(lord  of the meeting rivers)
With the rock tied to the leg and the pith tied to the neck,
the rock doesn’t allow floating and the pith doesn’t allow drowning !
help me cross this ocean of life and protect me,  Oh!  ender of time (death),  Lord kUDalasaMgayya!

COMMENTARY
Basavanna paints a beautiful picture of  the duality of life in this Vachana. We have been set free to traverse the ocean of life with a rock tied to the leg and a pith tied to the neck. The rock does not allow us to float and the pith does not allow us to drown. Basavanna prays the Lord to give us the strength to withstand the floating and drowning and to successfully cross the ocean of life. Simply put, Basavanna is praying the Lord to give him strength to be equanimous under the ups and downs of life.
It is interesting to probe the meanings of the rock and the pith a bit further.  We strive to be famous and wealthy. We desire to be praised by everyone. We are angry that things are not moving according to our wishes. Our ego says that we can do anything and whatever we say is right. We develop a great attachment to all these worldly affairs and start believing this is the real life. We believe that all this is real and permanent and are thus drowned in this ocean of life.  If we can closely examine the desires, wealth, fame, ego, etc. and realize that everything we have is temporary and could vanish before we know, we gain the knowledge and confidence to stay undisturbed with the ups and downs. That is the equanimity, we should strive for.
Let us not sink in the worldly affairs!

KANNADA COMMENTARY
ಇದು ಬಹು ಸುಂದರವಾದ ವಚನ. ಸಂಸಾರದಲ್ಲಿರುವ ವ್ಯಕ್ತಿಯ ಕರುಣಾಜನಕವಾದ ಸ್ಥಿತಿಯನ್ನು ಅತ್ಯಂತ ಪ್ರಭಾವಪೂರ್ಣವಾಗಿ ವರ್ಣಿಸುತ್ತದೆ. ಒಬ್ಬ ವ್ಯಕ್ತಿಯ ಕಾಲಲ್ಲಿ  ಗುಂಡು ಹಾಗೂ ಕೊರಳಲ್ಲಿ ಬೆಂಡು ಕಟ್ಟಿದೆ. ಗುಂಡಿನ ಭಾರ ಆತನನ್ನು ಶರಧಿಯ ತಳಕ್ಕೆ ಕೊಂಡೊಯ್ಯುತ್ತದೆ,  ಆದರೆ ಬೆಂಡು ಮೇಲಕ್ಕೆ ಕೊಂಡೊಯ್ಯುತ್ತದೆ. ಗುಂಡು ತೇಲಲು ಬಿಡುವುದಿಲ್ಲ ಮತ್ತು ಬೆಂಡು ಮುಳುಗಲು  ಬಿಡುವುದಿಲ್ಲ.  ಸಂಸಾರ ಶರಧಿಯಲ್ಲಿ ಈ ರೀತಿಯಾಗಿ ಸಿಕ್ಕಿಕೊಂಡಿರುವ ತನ್ನನ್ನು ಕಾಪಾಡು ಎಂದು ಬಸವಣ್ಣನವರು ಕೂಡಲಸಂಗಮನನ್ನು ಕೇಳಿಕೊಳ್ಳುತ್ತಾರೆ.

ಇಲ್ಲಿ ಗುಂಡು ಮತ್ತು ಬೆಂಡು ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ನಾನು ಕೀರ್ತಿವಂತನಾಗಬೇಕು, ಧನಿಕನಾಗಬೇಕು, ಎಲ್ಲರೂ ತನ್ನನ್ನು ಹೊಗಳುವಂತಾಗಬೇಕು ಎನ್ನುವಂತಹ ಆಸೆ ಆಕಾಂಕ್ಷೆಗಳು, ನನ್ನಿಷ್ಟದಂತೆ ನಡೆಯಲಿಲ್ಲವೆಂಬ ಕೋಪ ತಾಪಗಳು, ಎಲ್ಲವೂ ನನ್ನಿಷ್ಟದಂತೆ ನಡೆಯುತ್ತದೆ, ನಾನು ಏನೂ ಬೇಕಾದರೂ ಮಾಡಬಲ್ಲೆ, ನನ್ನ ಮಾತೇ ಸರಿ ಎಂಬಂತಹ ಹಮ್ಮು ಬಿಮ್ಮುಗಳು, ಧನ ಸಂಪತ್ತು, ಮಡದಿ ಮಕ್ಕಳು, ನೆಂಟರು ಇಷ್ಟರು, ಮನೆ ಮಾರುಗಳ ಸುಖದಲ್ಲಿ ಮುಳುಗಿ ಅದೇ ನಿಜವಾದದ್ದು ಎಂದು ನಂಬುವಂತೆ ಮಾಡುವ ಮಾಯಾಮೋಹಗಳು, ಅಥವಾ ಇವುಗಳಿಂದ ಉಂಟಾಗುವ ದುಃಖಗಳಿಂದ ತೊಳಲುವಂತೆ ಮಾಡುವ ಜಂಜಾಟಗಳು, ಗೋಳಾಟಗಳು___ಇವೆಲ್ಲವು ವ್ಯಕ್ತಿಯನ್ನು ಸಂಸಾರದಲ್ಲಿ ಮುಳುಗುವಂತೆ ಮಾಡುವುದರಿಂದ  ಅವು  ಭಾರವಾದ ಗುಂಡು.
ಕೋಪ ತಾಪ, ಹಮ್ಮು ಬಿಮ್ಮು, ಧನ ಸಂಪತ್ತು, ಮಡದಿ ಮಕ್ಕಳು, ನೆಂಟರು ಇಷ್ಟರು, ಮನೆ ಮಾರುಗಳ ಮಾಯಾ ಮೋಹ,   ಬದುಕಿನ ಜಂಜಾಟಗಳು, ಗೋಳಾಟಗಳು ಯಾವುವೂ ಶಾಶ್ವತವಲ್ಲ, ಅವುಗಳು ಆಗಾಗ ಬಂದು ಹೋಗುವಂತಹವು, ಅವುಗಳಿಗೆ ಯಾವುದೇ ಗಟ್ಟಿಯಾದ ನೆಲೆ ಇಲ್ಲ, ಅವುಗಳನ್ನು ನಿಜವೆಂದು ನಂಬುವುದು ಮೂರ್ಖತನ, ಅವುಗಳನ್ನು ಮೀರಿದ ಸತ್ಯ ಏನೋ ಇರಲೇಬೇಕು, ಅದು ಯಾವುದು ಎನ್ನುವ ತವಕ ಮತ್ತು ಅರಿವು ಇವುಗಳನ್ನು ಮೀರಿ ನಿಲ್ಲುವಂತೆ ಮಾಡುವುದೇ ಬೆಂಡು. ಆದರೆ ಈ ತಿಳುವಳಿಕೆ ಇನ್ನೂ ಪೂರ್ತಿಯಾಗಿ ನೆಲೆನಿಂತಿಲ್ಲವಾದ್ದರಿಂದ ಆಗಾಗ ಮಾತ್ರ ಹೊಳೆದು ಹೋಗುತ್ತದೆ. ಅದು ಆಗಾಗ ಮಾತ್ರ ಬಂದು ತಾತ್ಕಾಲಿಕವಾಗಿ ತೇಲುವಂತೆ ಮಾಡುತ್ತದೆ. ಅದು ಬೆಂಡು. ಒಮ್ಮೆ ಸಂಸಾರದಲ್ಲಿ ಮುಳುಗುವ ಇನ್ನೊಮ್ಮೆ ಅದರಿಂದ ಮುಕ್ತವಾಗಿ ತೇಲುವ ಸ್ಥಿತಿಯು ಅತ್ಯಂತ ನೋವಿನಿಂದ ಕೂಡಿರುತ್ತದೆ. ಏಕೆಂದರೆ ಸಂಸಾರದಲ್ಲಿ ಮುಳುಗಿದಾಗ ಮನದ ಯಾವುದೋ ಮೂಲೆಯಲ್ಲಿ  ಸೂಕ್ಷ್ಮವಾಗಿ “ಇದು ಶಾಶ್ವತವಾದ ಸುಖವಲ್ಲ” ಎಂಬ ಭಾವನೆ ಇದ್ದು ಸಂಸಾರದ ಸುಖವನ್ನು ಪೂರ್ತಿಯಾಗಿ ಅನುಭವಿಸಲು ಬಿಡುವುದಿಲ್ಲ. ಅದೇ ರೀತಿಯಾಗಿ, ಸಂಸಾರದಿಂದ ದೂರವಾದಾಗ ಮನದ ಮೂಲೆಯಲ್ಲಿ ಅದರ ವ್ಯಾಮೋಹ ಮನೆಮಾಡಿರುತ್ತದೆ. ಅದು ಪೂರ್ತಿಯಾಗಿ ತೇಲಲು ಬಿಡುವುದಿಲ್ಲ. ಈ ರೀತಿಯಾದ ಇಬ್ಬಂದಿಯಲ್ಲಿ ಸಿಕ್ಕಿಕೊಂಡಿರುವುದರಿಂದ ವ್ಯಕ್ತಿಯ ಜೀವ, ದೇಹವನ್ನು, ರುಂಡ ಮುಂಡಗಳನ್ನು, ಎರಡು ವಿರುದ್ಧ ದಿಕ್ಕಿಗೆ ಎಳೆದಾಗ ಅನುಭವಿಸುವ ನೋವನ್ನು ಅನುಭವಿಸುತ್ತದೆ. ಅದಕ್ಕಾಗಿಯೇ ಬಸವಣ್ಣನವರು “ಈ ರೀತಿಯ ಸಂಸಾರ ಶರಧಿಯನ್ನು ದಾಟಿಸಿ ಕಾಯೋ ಕಾಲಾಂತಕನೆ” ಎಂದು ಕೂಡಲಸಂಗಮನಲ್ಲಿ ಕೇಳಿಕೊಳ್ಳುತ್ತಾರೆ.
ಇಲ್ಲಿ ಅವರು ಬಳಸಿದ “ಕಾಲಾಂತಕ”  ಎಂಬ  ಪದ ಬಹಳ ವಿಶಿಷ್ಟವಾದದ್ದು. ಇದರಲ್ಲಿ ಎಲ್ಲರಿಗೂ ಗೊತ್ತಿರುವಂತೆ ಎರಡು ಪದಗಳಿವೆ ಕಾಲ + ಅಂತಕ,  ಎಂದರೆ ಕಾಲವನ್ನು ಅಂತ್ಯಗೊಳಿಸುವವನು ಅಥವಾ ಅಂತಗೊಳಿಸುವಂತಹದು ಎಂದು. ಕಾಲ ಎಂಬ ಪದಕ್ಕೆ ಸಮಯ ಮತ್ತು ಮೃತ್ಯು ಎಂಬ ಅರ್ಥಗಳೂ ಇವೆ.  ಇಲ್ಲಿ ನನಗೆ ಸಮಯ ಮತ್ತು ಮೃತ್ಯು ಒಂದೇ ಎಂದು ಹೆಳುವ ಜಿಡ್ಡು ಕೃಷ್ಣಮೂರ್ತಿಯವರ ಮಾತುಗಳು ನೆನಪಾಗುತ್ತವೆ. ಅವರುಹೇಳುತ್ತಾರೆ ಸಮಯ ಮತ್ತು ಮೃತ್ಯು ಮಾನವನ ವಿಚಾರದಿಂದ ಹುಟ್ಟ್ಟಿದೆ ಎಂದು. ಏಕೆಂದರೆ ವಿಚಾರ ಹೇಳುತ್ತದೆ- ನಾನು ಇಂದು ಹೀಗೆ ಇದ್ದೇನೆ ಆದರೆ ಬೇರೆ ಏನೋ ಆಗಬೇಕು ಎಂದು. ಈ ವಿಚಾರ ಬದುಕಿನಲ್ಲಿ ಒಡಕನ್ನುಂಟುಮಾಡುತ್ತದೆ.   ಈ ವಚನದಲ್ಲಿ ಬಸವಣ್ಣನವರು ಇದನ್ನೇ ಹೇಳುತ್ತಿರುವರು. ಬಾಳನ್ನು ತೇಲುವುದು ಮತ್ತು ಮುಳುಗುವುದರಲ್ಲಿ ವಿಭಜನೆಗೊಂಡಿದೆ. ಇದು ಸಮಯದ ಪ್ರಭಾವ. ವರ್ತಮಾನ ಮತ್ತು ಭವಿಷ್ಯದ ಒಡಕು. ನಾನು ಮುಳುಗುತ್ತಿದ್ದೇನೆ,ತೇಲಬೇಕು ಎನ್ನುವ ಹಾರೈಕೆ. ಹಾರೈಕೆ ವಿಚಾರದ ಪರಿಣಾಮ. ವಿಚಾರವು ಸದಾ ಒಡಕನ್ನುಂಟುಮಾಡುವುದು. ವಿಚಾರವೆಂದರೆ  ಸಮಯ, ಕಾಲ. ಇದರ ಅರಿವುಳ್ಳ ಬಸವಣ್ಣನವರು ಕಾಲಾಂತಕನನ್ನು ನೆನೆಯುತ್ತಾರೆ. ಎಂದರೆ ಬಯಲು. ಮುಳುಗುವುದು ಮತ್ತು ತೇಲುವುದರ ನಡುವಿನ ಸಂದನ್ನು ಮುಚ್ಚುವಿಕೆ, ಎಲ್ಲವನ್ನೂ ಒಂದುಗೂಡಿಸಿ ಬಯಲಾಗುವಿಕೆಯೆ ಕಾಲದ ಅಂತ್ಯ.

Friday, August 19, 2011

Vachana 51: kaḍegīlillada baṁḍi - Swollen with Pride


ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಂಬುದೆ?
ಕಡೆಗೀಲು ಬಂಡಿಗಾಧಾರ-
ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಡ ಶರಣರ ನುಡಿಗಡಣವೇ ಕಡೆಗೀಲು ಕಾಣಾ ರಾಮನಾಥ.


TRANSLITERATION

kaḍegīlillada baṁḍi hoḍegeḍuvudu māṁbude?
kaḍegīlu baṁḍigādhāra-
kaḍudarpavērida oḍaleṁba baṁḍige
mrḍa śaraṇara nuḍigaḍaṇavē kaḍegīlu kāṇā rāmanātha.


CLICK HERE TO HEAR IT:


TRANSLATION

kaḍegīlillada (without the cotter – a wedge which is at the end of the axel to keep the wheel in its place ) baṁḍi (the cart) hoḍegeḍuvudu (over turn) māṁbude (will it not)?
kaḍegīlu(cotter) baṁḍigādhāra(is the support for the cart)-
kaḍudarpavērida (swollen with pride) oḍaleṁba (known as body) baṁḍige(the cart)
mrḍa śaraṇara(Devotees of Shiva) nuḍigaḍaṇavē (sayings) kaḍegīlu(cotter) kāṇā(you see) rāmanātha (Lord rāmanātha).

Wouldn’t a cart without the cotter (holding its wheels in place) turn over?
Cotter is the support for the cart!
For this cart known as body (life) swollen with pride, Shiva’s devotees’ saying is the cotter!
You see! Lord Ramanatha.


COMMENTARY

 

This is a vachana from Sharana Daasimayya, probably the earliest (Tenth century) of the Vachana writers. A weaver by profession (Jedara Daasimayya - weaver Daasimayya) through his intense devotion and practice of kaayaka came to be known as Devara Daasimayya (God’s Daasimayya). Legend has it that he comes from a town with a temple dedicated to Shiva worshipped by Rama (Raamanaatha). Hence his signature ‘Ramanatha’ in all the vachanas he wrote.

 

This probably should have been the first vachana in our blog highlighting the importance and purpose of vachanas. Daasimayya stresses the role vachanas are intended to play in one’s life. He equates vachanas to the cotter that holds the wheels of a cart in place. The cart would overturn if the cotter is broken or lost. A body (or life) swollen with pride and ego is like a cart which has its cotter missing. Daasimayya says that vachanas serve as the cotter to bring the life back in balance. Sharanas depicted their experiences and observations on the contemporary society and its behavior in their vachanas. The purpose of vachanas was to bring the ultimate knowledge needed to make one successful in the spiritual path of realizing the Self, in a language and the mode accessible to commoners.

It is said that we become successful in our career and wealth building, our ego swells unless tempered appropriately. So is our pride as we find ourselves successful in building our families.  Vachanas can be instrumental in tempering of ego-pride clash in one’s life.

Let us make vachanas cotter our cart of life!


KANNADA COMMENTARY

ಇದು ದಾಸಿಮಯ್ಯನವರ ವಚನ. ಇಲ್ಲಿ ಅವರು ಶರಣರ ನುಡಿಯ ಮಹತ್ವವನ್ನು ಉದಾಹರಣೆ ಸಹಿತ ಹೇಳುತ್ತಿದ್ದಾರೆ. ಬಂಡಿಗೆ ಕಡೆಗೀಲು (ಬಂಡಿಯ ಚಕ್ರಗಳನ್ನು ಸಿಕ್ಕಿಸಿರುವ ಮರದ ಭಾಗದ ಕೊನೆಗೆ ಸಿಕ್ಕಿಸುವ ಮೊಳೆ.) ಆಧಾರ. ಕಡೆಗೀಲಿಲ್ಲದಿದ್ದರೆ ಬಂಡಿಯ ಚಕ್ರಗಳು ಉರುಳಿ ಹೋಗಿ ಬಂಡಿ ಮಗುಚಿ ಬೀಳುತ್ತದೆ. ಅದೇ ರೀತಿ ಕಡು ದರ್ಪವೇರಿದ ಒಡಲು, ಎಂದರೆ ಗರ್ವದಿಂದ ಬೀಗುವ ಈ ಜೀವ, ದೇಹವೆಂಬ ಬಂಡಿಗೆ ಶಿವಶರಣರ ನುಡಿಗಳೇ ಕಡೆಗೀಲು ಎನ್ನುತ್ತಾರೆ.

 

ಚಕ್ರಗಳಿಂದಲೇ ಬಂಡಿ ಓಡುತ್ತದೆ. ಈ ಚಕ್ರಗಳು ಕಡೆಗೀಲಿನಿಂದ ತಮ್ಮ ನಿರ್ದಿಷ್ಟ ಸ್ಥಾನದಲ್ಲಿ ನಿಂದು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕಡೆಗೀಲು ಇಲ್ಲದೆ ಹೋದರೆ ಚಕ್ರಗಳು ಕಳಚಿಕೊಂಡು ಬಂಡಿಯು ಬಿದ್ದು ಹೋಗುತ್ತದೆ. ಅದೇ ರೀತಿ ನಮ್ಮ ದೇಹ, ಜೀವನವೆಂಬ ಬಂಡಿಗೆ ಶರಣರ ನುಡಿಗಳು ಕಡೆಗೀಲಿನಂತೆ ಇವೆ. ಅವರ ಅನುಭವದ, ಅನುಭಾವದ ನುಡಿಗಳು ಕಡೆಗೀಲಿನಂತಿದ್ದು, ಬಂಡಿ ಸರಾಗವಾಗಿ ಹೋಗುವಂತೆ ಮಾಡುತ್ತವೆ, ತಮ್ಮ ಗುರಿಯನ್ನು ಮುಟ್ಟುವಂತೆ ಮಾಡುತ್ತವೆ. ಇಲ್ಲದಿದ್ದರೆ ಆಸೆ ಆಕಾಂಕ್ಷೆಗಳ ಮದವೇರಿದ ನಮ್ಮ ಬದುಕು, ಅಡ್ಡಾದಿಡ್ಡಿಯಾಗಿ ಓಡಿ ಬಿದ್ದು ನಾಶಹೊಂದುತ್ತದೆ. ನಮ್ಮನ್ನು ಸರಿದಾರಿಗೆ ಹಚ್ಚಲು ಶರಣರ ನುಡಿಗಳ ಭಂಡಾರವೇ ಇದೆ. ಹೆಜ್ಜೆಹೆಜ್ಜೆಗೂ ಎಚ್ಚರಿಸುವಂತಹ, ಬದುಕಿನ ಪ್ರತಿಯೊಂದು ಆಯಾಮದಲ್ಲಿಯೂ ಶಿಸ್ತನ್ನು ಅಳವಡಿಸಲು ಬರುವಂತಹ ವಚನಗಳನ್ನು ಹೇಳಿದ್ದಾರೆ ಶರಣರು. ಭೌತಿಕತೆಯ ದರ್ಪವೇರಿ ದೇವರನ್ನು, ಅನುಭಾವದ ಸೌಂದರ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ನಮಗೆ ತಮ್ಮ ವಚನಗಳ ಮೂಲಕ ಶರಣರು ನಮ್ಮನ್ನು ಎಚ್ಚರಿಸಿದ್ದಾರೆ.

 

“ಕಡುದರ್ಪವೇರಿದ ಒಡಲೆಂಬ ಬಂಡಿ” ಹೇಗಿರುತ್ತದೆ ಎಂಬುದನ್ನು ನೋಡೋಣ. ಪ್ರತಿಯೊಬ್ಬ ಸಾಮಾನ್ಯನ ಬದುಕಿನಲ್ಲಿ ಒಂದು ವಿಚಿತ್ರವಾದ ಘಟ್ಟವಿರುತ್ತದೆ. ಅದು: ತನಗೆ ಎಲ್ಲ ತಿಳಿದಿದೆ, ತಾನು ತಿಳಿದುದೇ ಸರಿ, ಬೇರೆಯವರೆಲ್ಲ ಮೂರ್ಖರು, ಅವರು ಮಾಡುತ್ತಿರುವುದೆಲ್ಲ ತಪ್ಪು, ತಾನು ಮಾಡುತ್ತಿರುವುದು ಮಾತ್ರ ಉತ್ತಮವಾದದ್ದು, ಎಲ್ಲರೂ ತನ್ನನ್ನೇ ಅನುಸರಿಸಬೇಕು, ತನ್ನ ಆಸೆ ಆಕಾಂಕ್ಷೆಗಳು, ಬಯಕೆಗಳು, ಕೋಪ, ಅಹಂಕಾರಗಳು ನ್ಯಾಯಸಂಗತವಾದವುಗಳು. ತನ್ನ ಆಚರಣೆಯೇ ಶ್ರೇಷ್ಠ, ತನ್ನ ಮಾತುಗಳೇ ಯೋಗ್ಯವಾದವುಗಳು, ಇತರರ ಮಾತುಗಳು ನಿರರ್ಥಕವಾದವುಗಳು, ತಾನು ಯಾರಿಗೂ, ಯಾವುದಕ್ಕೂ ತಲೆಬಗ್ಗಿಸಲೇಬೇಕಾಗಿಲ್ಲ, ಎಂದೆಲ್ಲ ಯೋಚಿಸಿ ಒಣ ಹಮ್ಮಿನಿಂದ ತಲೆಯೆತ್ತಿ ನಡೆಯುವ ಪ್ರ ವೃತ್ತಿ. ಇಂತಹ ಘಟ್ಟದಲ್ಲಿರುವ ವ್ಯಕ್ತಿ ಯಾರ ಮಾತೂ ಕೇಳ. ಸಾಮಾನ್ಯವಾಗಿ ಈತನು ಕೊನೆಯವರೆಗೂ ಹಾಗೇ ಇದ್ದುಬಿಡುತ್ತಾನೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬಂತೆ ಬದುಕಿನ ಸೋಲುಗಳು ಅವನನ್ನು ಘಾಸಿಮಾಡಿದರೂ ಅವನ ಕಡುದರ್ಪ ಅವನು ಅದನ್ನು ಗುರುತಿಸದೆ ತನ್ನದೇ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಅವನ ನಾಶ ಕಟ್ಟಿಟ್ಟದ್ದು. ಅವನ ಬದುಕು ಕಡೆಗೀಲಲಿಲ್ಲದ ಬಂಡಿಯಂತಾಗುತ್ತದೆ.
ಆದರೆ ಕೆಲವರು ತಮ್ಮ ಈ ದರ್ಪವನ್ನು ಗುರುತಿಸುತ್ತಾರೆ. ತಾವು ತುಳಿಯುತ್ತಿರುವ ಮಾರ್ಗ ಸರಿಯಿರಲಿಕ್ಕಿಲ್ಲವೆಂಬ ಭಾವ ಎಲ್ಲೋ ಮನದ ಮೂಲೆಯಲ್ಲಿ ಮನೆ ಮಾಡಿರುತ್ತದೆ. ಅವರಿಗೆ ಶರಣರ ನುಡಿಗಳು ಬೆಳಕಿನಂತೆ ತೋರುತ್ತವೆ. ಆ ನುಡಿಗಳು ಕಿವಿಗೆ ಬೀಳದೆ ಹೋಗಿದ್ದರೆ ಅವರ ಬದುಕು ಸಹ ನಿರರ್ಥಕವಾಗುತ್ತಿತ್ತು. ಆದರೆ ಆ ಸೂಳ್ನುಡಿಗಳು ಅವರ ಬಾಳನ್ನೇ ಪರಿವರ್ತಿಸಿ ಮೇಲೆ ಹೇಳಿದ ಘಟ್ಟದಿಂದ ಅವರು ಹೊರಬರುವಂತೆ ಮಾಡುತ್ತವೆ. ಅವರ ಬದುಕೇ ಬದಲಾಗುತ್ತದೆ. ಅವರಿಗೆ ಶರಣರ ನುಡಿಗಳು ಬಂಡಿಯ ಕಡೆಗೀಲಿನಂತೆ ರಕ್ಷಣೆಯನ್ನೊದಗಿಸುತ್ತವೆ. ಗುರಿಯಿಲ್ಲದೆ ಓಡುತ್ತಿರುವ ಅವರ ಬದುಕಿಗೆ ಬೆಳಕಿನೆಡೆಗೆ ಹೋಗುವ ತವಕ ಉಂಟಾಗುತ್ತದೆ.

 

ಆದ್ದರಿಂದ ಶರಣರ ನುಡಿಗಳಿಗೆ ಅಪಾರ ಮಹತ್ವವಿದೆ.


Friday, August 12, 2011

Post 52: Principles for Pious Living (2 of 2)

This is the final part of the Summary of concepts portrayed in the Vachanas we have posted so far. We hope that you will revisit all the 50 Vachanas. You can access all of them at this blog site.   
Equality
Sharanas preached and practiced ‘equality’ among all irrespective of the profession, gender, caste, status in society, wealth, etc...  Basavanna said “No one is inferior to me; No one is superior to devotees of the Lord”.
Kaayaka (auspicious and unselfish service)
Inaction is not a choice. Everyone must earn their living (Dignity of labor). It is better to be a tax payer, rather than a welfare recipient from the society.  We must put 100% interest/effort/sincerity into whatever we are doing. We must perform our duties as a service to God (Work is worship). Work is Kailaasa, the abode of Shiva. We must create heaven here through our service (Work is heaven). All professions are equally important to the society and no profession is inferior (Equality).
Daasoha (Sharing)
Community and individuals are not separate and we have obligations to ourselves, our family and the community we live in. Minimizing our wants and needs is a must. We must excel in our profession, must meet the needs of the family and must share the rest with the community. Sharing has three aspects (trividha Daasoha):  tanu (body), mana(mind), dhana (wealth). The first corresponds to physical help to community, the second is the sharing of knowledge and the third is the sharing of wealth. The sharing is done through the triad:  Linga (God), Jangama (wandering ascetics) and Guru (teacher). The first implies that the community is ‘God’ and sharing with community is the service to God. Jangamas are individuals devoted to the selfless service of the community, and they must be supported in their work. Teacher helps us in sharing the knowledge.

 ಸಮಾನತೆ, ಕಾಯಕ ಮತ್ತು ದಾಸೋಹ
ಶರಣರು ಜಾತಿ ಭೇದ ಲಿಂಗಭೇದವನ್ನು ಒಪ್ಪಿದವರೇ ಅಲ್ಲ.  ಶಿವ ಭಕ್ತರಾಗಿ  ಆತ್ಮೋನ್ನತಿಯಲ್ಲಿ ತೊಡಗಿದವರೆಲ್ಲ ಒಂದೆ ಜಾತಿ. ಕೆಲಸಗಳು ಸಹ ಮೇಲು ಕೀಳೆಂದು ತಾರತಮ್ಯ ಮಾಡಿದವರಲ್ಲ. ಅಕ್ಕಿ ಆಯುವುದು, ಕಟ್ಟಿಗೆ ಮಾರುವುದು, ಬಟ್ಟೆ ಮಡಿಮಾಡುವುದು, ಚಪ್ಪಲಿ ಹೊಲಿಯುವುದು. ಕಿನ್ನರಿ ನುಡಿಸುವುದು ಅಥವಾ ಮಂತ್ರಿ ಕೆಲಸ ಮಾಡುವುದು ಎಲ್ಲವೂ ಸರಿಸಮಾನವೇ. ಯಾವುದೂ ಮೇಲಲ್ಲ ಯವುದೂ ಕೀಳಲ್ಲ.  ಯಾವುದೇ ಕೆಲಸವಾಗಲಿ  ಅದನ್ನು ಮಾಡುವ ದೃಷ್ಟಿ ಪವಿತ್ರವಾಗಿರಬೇಕು ಎಂದರು ಅವರು.  ಈಶ್ವರನ ಸೇವೆ ಎಂದು ಕೊಂಡು ಮಾಡುವ ಅಥವಾ, ಮಾಡುವವನು ತಾನಲ್ಲ ಎಂಬ ಭಾವನೆಯಿಂದ ಮಾಡುವ ಕೆಲಸ ಉದಾತ್ತವಾಗುತ್ತದೆ. ಅದು ಕೇವಲ ಕೆಲಸವಾಗದೆ  ಕಾಯಕ ವಾಗುತ್ತದೆ.
ನಾವು ಮಾಡುವುದೆಲ್ಲವನ್ನೂ ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ. ಸಂಗ್ರಹ ಬುದ್ಧಿ ಪಾಪಕ್ಕೆ ಹಾದಿ ಮಾಡಿಕೊಡುವುದು. ನಾವು ಸಂಗ್ರಹ ಮಾಡುವುದರಿಂದ ಅಗತ್ಯವಿರುವವನಿಗೆ ಮೋಸವಾಗುತ್ತದೆ. ಪ್ರತಿಯೊಬ್ಬನೂ ತನಗೆ ಅಗತ್ಯವಾಗಿ ಬೇಕಾದುದಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನದಕ್ಕೆ ಆಸೆಪಡುವುದು ಈಶ್ವರನೊಪ್ಪದ ಮಾತು. ಈಶ್ವರನೊಪ್ಪದ ಬದುಕಿನಿಂದೇನು ಫಲ? ಆಸೆಯಿಂದ ಮಾಡುವ ಕೆಲಸ ಕಾಯಕವಾಗುವುದಿಲ್ಲ.  ಇದನ್ನು ಅರಿತು ಚಿತ್ತವನ್ನು ಶುದ್ಧವಾಗಿಟ್ಟುಕೊಂಡವನಿಗೆ ಎಲ್ಲೆಡೆಯೂ ಲಕ್ಷ್ಮಿ ಕಂಡು ಬರುತ್ತಾಳೆ. ಏಕೆಂದರೆ ಆತನು ತನ್ನದಲ್ಲದ ವಸ್ತುವನ್ನು ಬಯಸುವುದಿಲ್ಲ. ತನಗೆ ಅವಶ್ಯಕವಾದುದನ್ನು ತನ್ನ ದುಡಿಮೆಯಿಂದ ತಾನು ಪಡೆದುಕೊಳ್ಳುವುದರಿಂದ ಆತನ ಆತ್ಮ ಸಂಪೂರ್ಣವಾಗಿ ತೃಪ್ತವಾಗಿರುತ್ತದೆ. ಆ ದುಡಿಮೆಯಲ್ಲಿಯೇ ಆತನು ಗುರು, ಲಿಂಗ, ಜಂಗಮರ ಸೇವೆಯೂ ಮಾಡುತ್ತಾನೆ. ಇಂತಹವನಿಗೆ ಯಾವ ಕೊರತೆಯೂ ಇರುವುದಿಲ್ಲ.
 ವಾಸ್ತವಾಗಿ ಬದುಕಿನ ಅವಶ್ಯಕತೆಗಳು ಬಹಳ ಕಡಿಮೆ. ನಾವುಗಳೆಲ್ಲರೂ ನಮಗೆ ಬೇಡದೆ ಇರುವುದನ್ನೆಲ್ಲ, ಮನೆಯಲ್ಲಿ, ಮನದಲ್ಲಿ ತುಂಬಿಸಿಕೊಂಡು, ಅದರ ನಿರ್ವಹಣೆಯಲ್ಲಿಯೇ ತೊಡಗಿ ತೊಳಲಾಡುತ್ತೇವೆ. ಅದೇ ನಮ್ಮ ಜೀವನದ ಬಹು ಮುಖ್ಯ ಉದ್ದೇಶವಾಗುತ್ತದೆ. ನಾನು ಏನೋ ಬಹು ಮಹತ್ತರವಾದ ಕೆಲಸ ಮಾಡುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸುತ್ತದೆ. ಇಂತಹ ಭ್ರಮೆಯಿಂದ ಮದಮತ್ತರಾಗಿರುತ್ತೇವೆ. ಚಿತ್ತ ಶುದ್ಧತೆಯು ನಮ್ಮ ಹತ್ತಿರವೂ ಸುಳಿಯುವುದಿಲ್ಲ.
ಭಕ್ತನಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೋನ್ನತಿ. ಅದರ ಹಂಬಲವನ್ನು ಬಿಟ್ಟು ಆತನಿಗೆ ಇನ್ನಾವದೂ ಬೇಕಾಗಿಲ್ಲ. ಹೀಗಾಗಿ ಆತನು ಮಾಡುವ ಕಾಯಕವು ಉದಾತ್ತತೆಯನ್ನು ಪಡೆದುಕೊಳ್ಳುತ್ತದೆ. ಆ ಕಾಯಕದಿಂದ ಬರುವ ದ್ರವ್ಯವು ಕಾಯಕದ ಸಂಭಾವನೆಯಾಗದೆ ಪ್ರಸಾದವಾಗುತ್ತದೆ. ಅದರಲ್ಲಿ ತನಗೆ ಅಗತ್ಯವಾದಷ್ಟನ್ನು ಮಾತ್ರವಿಟ್ಟು ಕೊಂಡು ಉಳಿದುದನ್ನು ತನ್ನ ಬದುಕಿಗೆ ದಾರಿ ದೀಪವಾದ ಸಮಾಜಕ್ಕೆ ಅರ್ಪಿಸುವುದು ನಿಜವಾದ ಕಾಯಕ. ಹಾಗಾದರೆ ತಮಗೆ ಬಳುವಳಿಯಾಗಿ ಬಂದುದರಲ್ಲಿ ದಾಸೋಹ ಮಾಡುವುದು ಕಾಯಕವಾಗಲಿ ಅಥವಾ ಶುದ್ಧ ದಾಸೋಹವಾಗಲಿ  ಆಗುವುದಿಲ್ಲ. ಅದು ದಾನ ಅನ್ನಿಸಿಕೊಳ್ಳಬಹುದು. ದಾನ ಮಾಡುವುದು ತಪ್ಪಲ್ಲ. ದಾನ ಮತ್ತು ದಾಸೋಹದಲ್ಲಿ ಅಂತರವಿದೆ. ದಾನ ಮಾಡುವಾಗನಾನು ದಾನ ಮಾಡುತ್ತಿದ್ದೇನೆಎನ್ನುವ ಅಹಂ ಭಾವವಿರುತ್ತದೆ. ಆದರೆ ದಾಸೋಹ ಮಾಡುವಲ್ಲಿ  ಕೃತಕೃತ್ಯಭಾವ ವಿರುತ್ತದೆ.  ದಾಸೋಹ ಮಾಡಿ ತಾನು ಉಪಕಾರ ಮಾಡುತ್ತಿಲ್ಲ, ಉಪಕೃತನಾಗುತ್ತಿದ್ದೇನೆ ಎನ್ನುವ ಭಾವವಿರುತ್ತದೆ.

ಕಾಯಕ ಮತ್ತು ದಾಸೋಹದ ವಿಷಯ ಹೇಳುತ್ತ  ಪ್ರೊ. ಟಿ. ಅರ್. ಮಹದೇವಯ್ಯನವರು “....ಕಾಯಕ ಮತ್ತು ದಾಸೋಹ ತತ್ವಗಳು ಬೇರೆ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಒಂದು ಇನ್ನೊಂದಕ್ಕೆ ಪೂರಕ, ಪೋಷಕ. ಒಂದು ಗಳಿಕೆಯ ಮಾರ್ಗವಾದರೆ ಇನ್ನೊಂದು ಬಳಕೆಯ ಮಾರ್ಗ. ಕಾಯಕದಲ್ಲಿ ದುಡಿಮೆಯ ಫಲ ಕಂಡರೆ ದಾಸೋಹದಲ್ಲಿ ಹಂಚಿ ಉಣ್ಣುವ ಕೃತಕೃತ್ಯತೆಯಿದೆ. ಹೀಗೆ ಇವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಸೂತ್ರಗಳು.
ದಾಸಃ ಅಹಂದಾಸೋಹಃ - ನಾನು ದಾಸನಾಗಿದ್ದೇನೆ ಎಂಬ ಮನಸ್ಥಿತಿಯಿಂದ ಜನ ಸೇವೆ ಮಾಡುವುದು. ಇದಕ್ಕೆ  ಶರಣರು ಹೊಸ ಅರ್ಥವನ್ನು ಟಂಕಿಸಿದ್ದಾರೆ. ತನ್ನ ತನು ಮನ ಧನಗಳನ್ನು (ತ್ರಿವಿಧಗಳನ್ನು) ಗುರು ಲಿಂಗ ಜಂಗಮಕ್ಕೆ ( ತ್ರಿವಿಧಕ್ಕೆ) ನಿರಹಂಕಾರ ಬುದ್ಧಿಯಿಂದ , ಸೇವಾ ಮನೋಭಾವದಿಂದ ಅರ್ಪಿಸಿ, ಪ್ರಸಾದವನ್ನು  ತಾನು ಸ್ವೀಕರಿಸುವುದು ಎಂದರ್ಥ. ಅಂದರೆ ಕಾಯಕ ಕೃತಾರ್ಥವಾಗುವುದು ದಾಸೋಹದಲ್ಲಿ  ಎಂದು ಹೇಳುತ್ತಾರೆ.

ದಾಸೋಹದಲ್ಲಿ ನೀಡುವವರು ಮತ್ತು ನೀಡಿಸಿಕೊಳ್ಳುವವರು ಯಾರೂ ಇರುವುದಿಲ್ಲ. ಏಕೆಂದರೆ ನೀಡುವವರಿಗೆ, ಏನೂ ತನ್ನದಲ್ಲ, ಎಲ್ಲವೂ ಆ ಶಿವನಿಗೆ ಸೇರಿದ್ದು, ತಾನು ಏನೂ ಮಾಡುತ್ತಿಲ್ಲ, ಆ ಶಿವನೇ ತನ್ನಿಂದ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಎನ್ನುವ ಭಾವ ಇರುತ್ತದೆ. ಹಾಗೂ ಮಾಡಿಸಿಕೊಳ್ಳುವ ಜಂಗಮನಿಗಂತೂ ಎಲ್ಲವೂ ಕೇವಲ ಶಿವಮಯವಾಗಿ ಕಾಣುತ್ತದೆ. ಶಿವನಲ್ಲದೆ ಇರುವುದು ಬೇರೇನೂ ಕಾಣುವುದೇ ಇಲ್ಲ. ತಾನು ತನ್ನದೆಂಬ ಭಾವ ಸಂಪೂರ್ಣವಾಗಿ ಇಲ್ಲವಾಗಿರುವುದರಿಂದ ಮಾಡಿಸಿಕೊಂಬುವವನು ಕೂಡ ಆ ಶಿವನೇ ಆಗಿರುತ್ತಾನೆ. ಹೀಗಾಗಿ ಕೊಡುವಾತ ಕೊಂಬಾತಆ ಶಿವನೇ ಹೊರತು ತಾನಲ್ಲ. ನಾನುಎಂಬುದನ್ನು ಮರೆತು ಮಾಡುವ ಪ್ರತಿಯೊಂದು ಕೆಲಸವೂ ಕಾಯಕ ಮತ್ತು ದಾಸೋಹವಾಗುತ್ತದೆ.  ಇಂದು ದಾಸೋಹದ ಅರ್ಥ ಸಂಕುಚಿತಗೊಂಡಿದೆ. ದಾಸೋಹವೆಂದರೆ ಕೇವಲ ಊಟಕ್ಕೆ ಹಾಕುವುದು ಎಂಬ ಅರ್ಥ ಉಳಿದುಕೊಂಡಿದೆ. ಪ್ರೊಫೆಸರ್ ಟಿ. ಆರ್. ಮಹದೇವಯ್ಯನವರು ದಾಸೋಹವೆಂದರೆ ಬರಿ ಆಹಾರ ದಾನವಲ್ಲ, ಇದಕ್ಕೆ ವಿಶಾಲವಾದ ಅರ್ಥವಿದೆ. ಉಳ್ಳವರು ಇಲ್ಲದವರಿಗೆ ನೀಡುವುದು, ತಿಳಿದವರು ತಿಳಿಯದವರಿಗೆ ಕಲಿಸುವುದು, ಹತಾಶರಾದವರ ಎದೆಯಲ್ಲಿ ಆಶಾಜ್ಯೋತಿಯನ್ನು ಬೆಳಗಿಸುವುದು. ಬಲ್ಲಿದವರಾದವರು ಅಶಕ್ತರಿಗೆ ನೆರವಾಗಿ ಸಬಲಗೊಳಿಸುವುದು, ಕೀಳರಿಮೆಯಿಂದ ಮೂಲೆಗುಂಪಾದವರಿಗೆ ತಲೆ ಎತ್ತಿ ನಿಲ್ಲುವ ಆತ್ಮ ವಿಶ್ವಾಸ ಮೂಡಿಸುವುದು, ಜಡರಾದವರಿಗೆ, ನವೋತ್ಸಾಹ, ಕ್ರಿಯಾಶೀಲತೆಯನ್ನುಂಟುಮಾಡುವುದು, ಸುಪ್ತ ಪ್ರತಿಭೆಗಳ ಪ್ರಕಾಶನಕ್ಕೆ ಸೂಕ್ತ ಪ್ರೋತ್ಸಾಹ ನೀಡುವುದು, ಇವೆಲ್ಲವೂ ಸೇರುತ್ತವೆ, ಇವುಗಳ ಲಾಭ ಸಮಾಜಕ್ಕೆ, ದೇಶಕ್ಕೆಎಂದು ಹೇಳುತ್ತಾರೆ.

ಶರಣರು ಈ ಲೋಕವನ್ನು, ಈ ಸಮಾಜವನ್ನು, ಈ ಬದುಕನ್ನು ಕಡೆಗಣಿಸಲಿಲ್ಲ. ಅವರು ಅದನ್ನು ಪೂರ್ತಿಯಾಗಿ ಸ್ವೀಕರಿಸಿ ಅದರ ಕಲ್ಯಾಣ ಮತ್ತು ಆತ್ಮೋನ್ನತಿಯಲ್ಲಿ ತೊಡಗಿದರು. ಈ ನಿಟ್ಟಿನಲ್ಲಿ ಅವರು ಕೈಗೊಂಡ ಕಾಯಕ ಮತ್ತು ದಾಸೋಹಗಳು ಅತ್ಯಂತ ಉದಾತ್ತವಾದ ವಿಚಾರಗಳು.
ಈಶ್ವರನು ಒಪ್ಪಬೇಕು ಅದು ಮುಖ್ಯ. ಈಶ್ವರನು, ಸತ್ಯ ಶುದ್ಧ ಕಾಯಕವನ್ನು ಮಾತ್ರ ಒಪ್ಪುತ್ತಾನೆ. ವಂಚನೆ, ದುರಾಸೆಯಿಂದ ಮಾಡುವ ಕೆಲಸ ಕಾಯಕವಲ್ಲ. ಅಂತಹ ಕೆಲಸಮಾಡುವವರಿಂದ ಆತನು ದೂರ ಸರಿಯುತ್ತಾನೆ

Saturday, August 6, 2011

Post 51 – Principles for Pious Living (Part 1 of 2)


 Our intention in starting this Blog was to concentrate on one vachana each week, so that readers can reflect on its message during the week and attempt to internalize it as far as possible.  Hope we have succeeded in meeting that goal over the last 50 weeks. These 50 postings along with the summaries in this and the next posting should serve as a yearlong study and reflection. It is important to note that the source of inspiration for Sharanas in developing these vachanas is their ‘experience and observation (Anubhava)’ of the contemporary society and its behavior. These experiences prompted them to seek the spiritual path and made each Sharana into an ‘Anubhaavi’ (realized or conditioned soul - a rough translation of the word).  As such, the principles portrayed by these vachanas form the basis for the man to succeed in his spiritual journey of self-realization. We will try to highlight the main tenets portrayed by Sharanas in these summary postings. Our sincere hope is that you will revisit the 50 postings as you read these summaries.

This world is Creator’s workshop

This world is real. We are in it. The creator has provided it for our use.  We must make this into heaven by righteous practices. Wrong practices make this into hell. There is no other world – the concept of that other world of immortals (Devas) is imaginary. Even if such a world exists, sharanas say that ‘those who fit in this world also fit in that world’. Sharanas gave utmost importance to morality, truth and righteous behavior, which in turn form the bases for self-realization.  They advocated being fully in this world, and facing the challenges of life with truth, hard work and dedication. They believed in making this into a joyous world, rather than ignoring this world in the pursuit of heaven in afterlife.

Inner and Outer Purity

Our body is the temple where the Lord resides - we should keep it strong and fit. The mind triggers all our activities and behaviors - disciplining the mind is essential.  Sharanas provided us the means of purification of the body -mind complex.  It is through eliminating the seven traits (do not steal, do not kill, do not be angry with anyone, do not feel disgust of anyone, do not indulge in self praise, do not humiliate anyone..), thinking carefully about each word we utter (like a pearl in a necklace,…), greeting and making everyone welcomed (Please come, how are you,…), realizing that we cannot straighten all the ills of society (Lokada Donka…) , eliminating anger, etc.. They said that the righteous behavior invoked by the above characteristics, is the ‘internal’ and ‘external’ purity needed to reach the Lord (i.e achieve self-realization). 

Compassion

Compassion is the root of Dharma (the right principle). We must not hurt anyone and must be compassionate to fellow beings and animals. Being compassionate is usually viewed as just offering money to poor, food to hungry, shelter to homeless, and in general helping the old lady cross the road safely. Sharanas’ definition of compassion goes a bit further. It extends to finding the root cause of the suffering and providing the knowledge to the sufferer to come out of it. 

God/Worship/Rituals

God is within us and within everyone around us. The individual souls are sparks of the super soul – the conglomeration of souls is God. Realizing the God within should be our goal. We have built temples, provided various forms and images to God and engrossed in multitude of rituals. We tend to believe a drying out stream, a stone serpent, a neem tree, a metal statue that heat can melt away, as God. Sharanas advocated knowledge-based contemplation/meditation as the way to worship and realize God. They provided the Istalinga as an icon to aid such meditation and contemplation They emphasized that the body is the temple and the Lord is within us, and we should make it fit for Him through our knowledge and self-realization. Merging with Him is the ultimate goal in life. They called this merger as shoonya sampaadane,  the completeness, and Linga-Anga Saamarasya. 

We will cover kaayaka, daasoha, equality and other concepts in the next posting.

SUMMARY IN KANNADA


ಇಲ್ಲಿಯವರೆಗೆ ನಾವು ೫೦ ವಚನಗಳನ್ನು ಉಲ್ಲೇಖಿಸಿದ್ದೇವೆ. ಅವುಗಳಲ್ಲಿ ಹೇಳಿರುವ ವಿಷಯವನ್ನು ಈ ಕೆಳಕಂಡಂತೆ ಹೇಳಬಹುದು: 

ಮರ್ತ್ಯಲೋಕವು ಕರ್ತಾರನ ಕಮ್ಮಟ

ಶರಣರು ಈ ಜಗತ್ತನ್ನು ಮಿಥ್ಯೆ ಎಂದು ಹೇಳದೆ ಅದನ್ನು ಸತ್ಯವೆಂದು ಪರಿಗಣಿಸಿದರು. ಪಾರಮಾರ್ಥವನ್ನು ಈ ಬದುಕಿನಿಂದ ಬೇರ್ಪಡಿಸಲಿಲ್ಲ. ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕಗಳೆಂಬವು ದೂರದಲ್ಲಿ ಬೇರೆ ಎಲ್ಲಿಯೋ ಇರುವಂತಹವಲ್ಲ. ದೇವಲೋಕ. ಸ್ವರ್ಗ, ನರಕಗಳು ಸತ್ತ ನಂತರ ಮಾತ್ರ ಹೋಗುವಂತಹ ಸ್ಥಳಗಳಲ್ಲ. ಅವು ಇಲ್ಲಿಯೇ ಈಗಲೇ ಉಂಟಾಗುವಂತಹವುಗಳು. ಬದುಕಿನಲ್ಲಿ “ಇರುವುದ”ನ್ನು ಅರಿಯಲು ಒಂಟಾಗುವ ಸೋಮಾರಿತನದಿಂದ ಪಲಾಯನ ಮಾಡುವ ಮಾನವನ ಮನಸ್ಸು ನಿರ್ಮಿಸಿದ ಕಾಲ್ಪನಿಕ ಲೋಕಗಳಿವು.  ಸತ್ಯವ ನುಡಿಯುವುದೇ ದೇವಲೋಕ, ಸುಳ್ಳು ಅಥವಾ ಭ್ರಮಾತ್ಮಕವಾದದ್ದನ್ನು ಹೇಳುವುದೇ ಮರ್ತ್ಯಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕವೆನ್ನುತ್ತಾರೆ ಬಸವಣ್ಣನವರು. ನೈತಿಕತೆ ಮತ್ತು ಸದಾಚಾರಕ್ಕೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ ಶರಣರು. ಆತ್ಮೋನ್ನತಿಗೆ ಮೂಲ ಆಧಾರವೇ ಸತ್ಯ. ಸತ್ಯ ಇರುವಲ್ಲಿ ನೈತಿಕತೆ ಮತ್ತು ಆಚಾರ ತಾನಾಗಿಯೇ ಅರಳುತ್ತದೆ. ಸತ್ಯ, ನೈತಿಕತೆ ಮತ್ತು ಒಳ್ಳೆಯ ಆಚಾರ ಇರುವಲ್ಲಿ  ಭಯ, ನೋವು, ಸಾವಿಗೆ ಸ್ಥಾನವೇ ಇಲ್ಲ. ಆದ್ದರಿಂದ ಅದು ದೇವಲೋಕ ಮತ್ತು ಸ್ವರ್ಗಲೋಕವೇ ಹೌದು. 
ಕರ್ತಾರನ ಈ ಕಾರ್ಯಾಗಾರದಲ್ಲಿ ಚಲಾವಣೆಯಲ್ಲಿ ಇಲ್ಲದ ನಾಣ್ಯ ಬೇರೆ ಕಡೆಯೂ ನಡೆಯುವುದಿಲ್ಲ. ಈ ಲೋಕದವರಿಗೆ ಒಪ್ಪಿಗೆಯಾಗುವಂತೆ ಬಾಳದವನಿಗೆ ಆ ಲೋಕದಲ್ಲಿಯೂ ಸ್ಥಾನವಿರುವುದಿಲ್ಲ. ಆದ್ದರಿಂದ ನಾವೆಲ್ಲರೂ, “ಪರ”ದಲ್ಲಿ ಸಲ್ಲಬೇಕಾದರೆ “ಇಹ”ದಲ್ಲಿ ಸಲ್ಲುವಂತೆ ಬಾಳಬೇಕು. “ಇಹ”ದಲ್ಲಿ ಸಲ್ಲದಂತೆ ಬಾಳುವೆಯನ್ನು ನಡೆಸಿ “ಪರ”ದಲ್ಲಿ ಸ್ಥಾನವನ್ನು ಪಡೆಯುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಅಂದರೆ ಈ ಜಗತ್ತನ್ನು
ಪೂರ್ತಿಯಾಗಿ ನಿರ್ಲಕ್ಷಿಸಿ, ಇಲ್ಲಿಯದೆಲ್ಲವನ್ನು ಕಡೆಗಣಿಸಿ ಕೇವಲ “ಪರ”ವನ್ನು ಸಾಧಿಸುವವರಿಗೆ ಕೊನೆಯಲ್ಲಿ ಇಹವೂ ಪರವೂ ಇಲ್ಲದಂತೆ ಆಗುತ್ತದೆ, ಎನ್ನುತ್ತಾರೆ ಬಸವಣ್ಣನವರು.  ದಿನ ನಿತ್ಯದ ಬದುಕನ್ನು ಬಿಟ್ಟು ಓಡಿ ಹೋಗುವದನ್ನು ಶರಣರು ಒಪ್ಪುವುದಿಲ್ಲ. ಬಂದುದನ್ನು ಧೀರರಂತೆ ಸ್ವೀಕರಿಸುವುದೇ ಉಪಾಯ. ಬದುಕನ್ನು ತನಗೆ ಬೇಕಾದಂತೆ ಮಾರ್ಪಡಿಸಿಕೊಳ್ಳುವ ಛಲ ಮತ್ತು ಆತ್ಮವಿಶ್ವಾಸ ಇದ್ದವರು ಯಶಸ್ವಿಯಾಗುತ್ತಾರೆ. ಅವರಿಗೆ ಭೌತಿಕ ಜೀವನದಲ್ಲಿ ನೆಮ್ಮದಿಯುಂಟಾಗಿ ದೇವರ ಬಗ್ಗೆ ಶ್ರದ್ಧೆ ಹುಟ್ಟುವ ಅವಕಾಶವಿರುತ್ತದೆ. 

ಸದಾಚಾರ

ಆತ್ಮೋನ್ನತಿಗೆ  ಅಂತರಂಗ ಮತ್ತು ಬಹಿರಂಗ ಶುದ್ಧಿಯು ಬಹು ಮುಖ್ಯ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು, ಹಿಂಸೆ ಮಾಡುವುದು, ಇತರರನ್ನು ಹಳಿಯುವುದು, ತನ್ನನ್ನು ಹೊಗಳಿಕೊಳ್ಳುವುದು, ಅನ್ಯರನ್ನು ಕಂಡು ಅಸಹ್ಯ ಪಡುವುದು,ಇವು ಮಾನವನನ್ನು ಅಧಃ ಪತನಕ್ಕೆ ನೂಕುತ್ತವೆ.  ಆದರೆ ಇವುಗಳನ್ನು ತ್ಯಜಿಸುವುದರಿಂದ ಅಂತರಂಗ ಮತ್ತು ಬಹಿರಂಗವು ಶುದ್ಧವಾಗಿದ್ದು ಆತ್ಮೋನ್ನತಿಗೆ ದಾರಿಮಾಡಿಕೊಡುತ್ತವೆ. ಶರಣರು ಸದಾಚಾರಕ್ಕೆ ಬಹು ಪ್ರಾಮುಖ್ಯತೆ ಕೊಟ್ಟಿರುವರು.  ಸಮಾಜದಲ್ಲಿ  ಇತರನ್ನು ನೋಯಿಸದೆ, ತಾನು ಅಹಂಕಾರದಿಂದ ಬೀಗದೆ ಇರುವುದು ಸೂಕ್ತ. ಕೋಪವು ಅನಾಹುತಕಾರಿಯಾದದ್ದು, ಅದು ಮೊದಲು ತನ್ನನ್ನೇ ನಾಶಮಾಡುತ್ತದೆ, ಆದ್ದರಿಂದ ಅದನ್ನು ಬಿಟ್ಟುಬಿಡುವುದು ಮೇಲು. ಇತರರಿಗೆ ಬುದ್ಧಿ ಹೇಳುವುದಕ್ಕಿಂತ  ತಮ್ಮ ತಪ್ಪುಗಳನ್ನು ತಾವು ಗುರುತಿಸಿ ಸರಿಪಡಿಸಿಕೊಳ್ಳುವುದು ಮುಖ್ಯ. 

ದಯವೇ ಧರ್ಮದ ಮೂಲ

ದಯೆ ಎಂದರೆ ದುಃಖದಲ್ಲಿ ಮುಳುಗಿದವರಿಗೆ ಸಹಾಯ ಮಾಡುವುದು ಅಂದರೆ, ಒಬ್ಬ ಮನೆಯಿಲ್ಲದ ಬಡವನಿಗೆ ಮನೆ ಕಟ್ಟಿ ಕೊಡುವುದು, ಹೊಟ್ಟೆಗಿಲ್ಲದವನಿಗೆ ಊಟಹಾಕುವುದು, ಬಂಧುವಿನ ಸಾವಿನಿಂದ ಅಳುವವನಿಗೆ ಸಾಂತ್ವನ ಹೇಳುವುದು ಇತ್ಯಾದಿಗಳು ದಯೆತೋರುವ ವಿಧಾನಗಳು. ಆದರೆ ಇವುಗಳು ಯಾರ ದುಃಖವನ್ನೂ ನಿಜವಾಗಿಯೂ ದೂರಮಾಡುವುದಿಲ್ಲ. ಇವುಗಳೆಲ್ಲವೂ ಮೇಲ್ಮೈಯ ಮತ್ತು ತಾತ್ಕಾಲಿಕವಾದ ಉಪಾಯಗಳು ಮಾತ್ರ. ದುಃಖವನ್ನು ಸಂಪತ್ತಿನಿಂದ, ಕ್ಷಣಿಕವಾದ ಕನಿಕರದಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಬಹು ಆಳವಾದದ್ದು. ಮೇಲ್ನೋಟಕ್ಕೆ ಬಡತನವೇ ದುಃಖಕ್ಕೆ ಕಾರಣವೆಂದು ತೋರಿಬಂದರೂ ಆಳವಾಗಿ ಯೋಚಿಸಿದಾಗ ಅಜ್ಞಾನವೇ ಅದಕ್ಕೆ ಕಾರಣವೆಂಬುದು ತಿಳಿಯುತ್ತದೆ. ದುಃಖದ ನಿಜವಾದ ನಿವಾರಣೆಗೆ ಸತ್ಯದ ಅರಿವು ಬಹು ಮುಖ್ಯ. ಈ ಅರಿವನ್ನು ಪಡೆಯುವುದು ಮತ್ತು ಇತರರು ಪಡೆಯುವಂತೆ ಮಾಡುವುದೇ ನಿಜವಾದ ದಯೆ. ಅದೇ ನಿಜವಾದ ಧರ್ಮ. ಸತ್ಯದ ಅರಿವು ಎಲ್ಲರೂ ಪಡೆಯುವದರಲ್ಲಿ ಸಹಾಯವಾಗುವಂತೆ ಅನುಭವ ಮಂಟಪವನ್ನು ಕಟ್ಟಿದರು ಶರಣರು. ಅಜ್ಞಾನದಲ್ಲಿ ಮುಳುಗಿ ದುಃಖದಲ್ಲಿ ತೊಳಲುವವರನ್ನು ಆತ್ಮೋನ್ನತಿಯಡೆಗೆ ಕರೆದೊಯ್ಯುವುದೇ ನಿಜವಾದ ದಯೆಯ ಲಕ್ಷಣ.

ಸ್ಥಾವರ ಪೂಜೆ

ಜನರು ಮೂರ್ತಿ ಪೂಜೆಯನ್ನೇ , ಅವುಗಳ ಸೌಂದರ್ಯವನ್ನು ಉಪಾಸಿಸುವುದೇ  ಭಕ್ತಿಯೆಂದುಕೊಳ್ಳುತ್ತಾರೆ.  ಇನ್ನು ಕೆಲವರು  ಮದಕೆ ದೈವ, ಮೊರ ದೈವ ಎಂದು ನಾನಾ ವಸ್ತುಗಳನ್ನು  ಪೂಜಿಸುತ್ತಾರೆ, ಇನ್ನು ಕೆಲವರು ಬತ್ತಿ ಹೋಗುವ  ನೀರನ್ನು ಇಲ್ಲವೆ ಒಣಗಿ ಹೋಗುವ ಮರವನ್ನು ದೇವರೆಂದು ಪೂಜಿಸುತ್ತಾರೆ, ಈ ರೀತಿ ಕಾಲದ ಕಟ್ಟೆಳೆಗೆ, ಪ್ರಕೃತಿಯ ನಿಯಮಕ್ಕೆ  ಒಳಪಟ್ಟು ನಾಶವಾಗವ  ವಸ್ತುಗಳನ್ನು ದೇವರು ಎಂದು ನಂಬುವುದು ಮೂರ್ಖತನವೆಂದು ಹೇಳುತ್ತಾರೆ ಶರಣರು. ನಿಜವಾದ ದೇವರು ತನ್ನಲ್ಲಿಯೇ ಸಹಜವಾಗಿ ಐಕ್ಯನಾಗಿರುತ್ತಾನೆ. ಅವನನ್ನು ವಿಗ್ರಹಗಳಲ್ಲಿ ಅಥವಾ ಬೇರೆಲ್ಲಿಯೂ ಹುಡುಕುವ ಅವಶ್ಯಕತೆಯಿಲ್ಲ. ತನ್ನ ಅಂತರಂಗದಲ್ಲಿಯೇ ಇರುವ ಅವನನ್ನು ಕಂಡುಕೊಳ್ಳುವುದೇ ನಿಜವಾದ ಭಕ್ತಿ ಎನ್ನುತ್ತಾರೆ ಬಸವಣ್ಣನವರು.   ದೇವಾಲಯ ಕಟ್ಟುವುದಕ್ಕಿಂತ ನಿಮ್ಮ ದೇಹವನ್ನೇ ದೇವರಿಗಾಗಿ ಅಣಿಗೊಳಿಸಿ, ನಿಮ್ಮ ನಡೆ ನುಡಿಯಿಂದ ಅದನ್ನು ಪವಿತ್ರಗೊಳಿಸಿ, ದೇಹವನ್ನೇ ದೇಗುಲವನ್ನಾಗಿ ಮಾಡಿರಿ, ಎಂದು ಹೇಳುತ್ತಾರೆ ಬಸವಣ್ಣನವರು. 

ಸಮಾನತೆ,  ಕಾಯಕ   ಮತ್ತು  ದಾಸೋಹದ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ.